ಇಸ್ತಿಗಾಸ

Muslims Praying Pics New 2013 (1)ಇಸ್ತಿಗಾಸ ಮೇಲಾಗಿದೆ ಸುನ್ನಿಗಳ ಮೇಲೆ ಮುಶ್ರಿಕ್ ಎಂಬ ವಾದವನ್ನು ಗೂಬೆ ಕೂರಿಸಲು ಕೆಲವರು ನಡೆಸುವ ಕ್ರಮ. ಇಸ್ತಿಗಾಸವನ್ನು ನಾಲ್ಕು ವಿಧಗಳಾಗಿ ವಿಂಗಡಿಸಬಹುದು. ಜೀವನಿರುವರು ಜೀವವಿರುವವರೊಡನೆ ತೀರಿ ಹೋದವರು ತೀರಿಹೋದವರೊಡನೆ ಜೀವವಿರುವವರು ತೀರಿಹೋದವರೊಡನೆ ತೀರಿಹೋದವರು ಜೀವವಿರುವವರೊಡನೆ ಈ ನಾಲ್ಕು ತರ ಇಸ್ತಿಗಾಸದಲ್ಲಿ ಯಾವುದರಲ್ಲೂ ಯಾರಿಗೂ ಯಾರನ್ನು ಸಹಾಯ ಮಾಡಲು ಸ್ವಂತವಾದ ಶಕ್ತಿ ಇಲ್ಲವೆಂದೂ, ಯಾರು ಯಾರಿಗೆ ನೆರವಾಗಬೇಕಾದರೂ ಅಲ್ಲಾಹನ ಸಹಾಯ ಅತ್ಯಂತಾಪೇಕ್ಷಿಕ ಎಂಬುದೂ ಆಗಿದೆ ನೈಜ ಇಸ್ಲಾಮಿನ ಆಶಯ(ವಿಶ್ವಾಸ). ಇಲ್ಲಿ ನೂತನವಾದಿಗಳ ವಾದ ತೀರಿಕೊಂಡವರಲ್ಲಿ ಜೀವವಿರುವವರು ಯಾಚಿಸುವ ಸಹಾಯವಾಗಿದೆ ನಿಷಿದ್ಧ. ವಿವರ ದೋಷವೇ ವಾದಕ್ಕೆ ಮುಖ್ಯ ಕಾರಣ ಎಂಬುದು ಸತ್ಯ. ಆದರೆ ಮಳೆಗೆ ಅವಶ್ಯವಾದ ಸಂದರ್ಭದಲ್ಲಿ ಪ್ರವಾದಿ(ಸ.ಅ)ರೊಡನೆ  ಸಹಾಯ ಬೇಡಿದ ಸಂಭವ ಅನಿಷ್ಯೇದವಾಗಿದೆ. ಇಮಾಂ ಬೈಹಕಿ(ರ) ಉಲ್ಲೇಖಿಸುವ ಹದೀಸ್ ಉಮರ್(ರ)ರ ಕಾಲದಲ್ಲಿ ದೊಡ್ಡ ಕ್ಷಾಮವೊಂದು ಏರ್ಪಟ್ಟಿತು. ಆ ಕಾಲಘಟ್ಟದಲ್ಲಿ ಒಬ್ಬರು ಪ್ರವಾದಿ(ಸ.ಅ) ರ ರೌಳಾ ಶರಿಫಿನ ಬಳಿ ಬಂದರು ಮತ್ತು ಅವರು ಹೇಳಿದರು ಅಲ್ಲಾಹನ ಧೂತರೇ, ತಾವು ಅಲ್ಲಾಹುವಿನಲ್ಲಿ ತಮ್ಮ ಸಮುದಾಯಕ್ಕೆ ಮಳೆಯನ್ನು ಕೇಳಿರಿ, ಅವರು ಮಳೆಯಿಲ್ಲದೆ ನಾಶವಾಗುತ್ತಿದ್ದಾರೆ. ಮತ್ತೆ ಆ ವ್ಯಕ್ತಿ ಪ್ರವಾದಿಯವರನ್ನು (ಸ.ಅ)ರ ಕನಸಿನಲ್ಲಿ ಕಂಡರು. ಕನಸಿನಲ್ಲಿ ನಿರ್ದೇಶಿಸುತ್ತಾರೆ. ನೀನು ಉಮರ್(ರ) ಬಳಿ ಹೋಗಬೇಕು. ನನ್ನ ಸಲಾಂ ಅವರಿಗೆ ಹೇಳಬೇಕು. ಅಧಿಕ ಸಮಯ ಕಾಯುವುದು ಬೇಡ. ಈ ಕೆಲವು ಕ್ಷಣಗಳ ಬಳಿಕ ಮಳೆಯಾಗುತ್ತದೆ ಎಂದೂ ಹೇಳು. ಮತ್ತೆ ಅಧಿಕಾರದಲ್ಲಿ ಸಮಾಧಾನ ನೆಲೆ ನಿಲ್ಲಿಸಲು ಪ್ರತ್ಯೇಕ ಹೇಳಬೇಕು. ಇದೇ ಪ್ರಕಾರ ಆ ವ್ಯಕ್ತಿ ಪ್ರಸ್ತುತ ವಿವರಗಳನ್ನು ಉಮರ್(ರ)ರಿಗೆ ತಿಳಿಸಿದರು. ಆಗ ಉಮರ್ (ರ) ಹೇಳಿದರು. ನನ್ನ ನಾಥ ನನಗೆ ಸಾಧ್ಯವಾಗದ ಕಾರ್ಯಗಳಲ್ಲದೆ ನಾನು ನ್ಯೂನತೆ ಬರಿಸಲಿಲ್ಲ. (ಇಮಾಂ ಬೈಹಕಿ(ರ) ಈ ಹದೀಸ್ ಪಾರಂಪರ‍್ಯ) ಸಹೀಹಾಗಿದೆಯೆಂದೂ ಇಬ್‌ನು ಕಸೀರ್(ರ) ಹೇಳಿದ್ದಾರೆ (ಬಿದಾಯ ೧-೯೧) ಇಬ್‌ನು ಅಬೀಶೈಬ(ರ) ಸ್ವಹೀಹಾದ ಇಸ್ನಾದ್ ಮೂಲಕ ಪ್ರಸ್ತುತ ಘಟನೆಯನ್ನು ಅಬೂಸ್ವಾಲಿಹುಸ್ಯಮ್ಮಾನ್ ಮೂಲಕ ಮಾಲಿಕುದ್ದಾರ್(ರ)ರಿಂದ ರಿಪೋರ್ಟ್ ಮಾಡಿದ್ದಾರೆ. ಈ ಮಾಲಿಕುದ್ದಾರ್(ರ) ಉಮರ್(ರ)ರ ಖಜಾಣೆಯ ಕೋಶಾಧಿಕಾರಿಯಾಗಿದ್ದರು ಎಂದು ಆ ರಿಪೋರ್ಟಿನಲ್ಲಿದೆ. ಸೈಫ್ ಎಂಬವರು ಪುತೂಹ್ ಎಂಬ ಗ್ರಂಥದಲ್ಲಿ ಈ ರೀತಿ ವಿವರಿಸಿದ್ದಾರೆ. ಕನಸಿನಲ್ಲಿ ಪ್ರವಾದಿ(ಸ.ಅ) ಕಂಡ ವ್ಯಕ್ತಿ ಬಿಲಾಲುಬಿನುಲ್ ಹಾರಿ ಸುಲ್‌ಮುಸ್‌ನಿ(ರ) ಎಂಬ ಸ್ವಹಾಬಿಯಾಗಿದ್ದರು. ಹಾಫಿಲ್ ಇಬ್‌ನ್ ಹಜರ್(ರ) ಹೇಳುತ್ತಾರೆ. ಇದರ ಸನದ್ ಸ್ವಹೀಹಾಗಿದೆ(ಫತ್‌ಹುಲ್ ಬಾರಿ-೪೫). ಈ ಸಂಭವದ ಮೂಲಕ ತೀರಿದವರಲ್ಲಿ ಇಸ್ತಿಗಾಸ್ ಮಾಡಬಹುದು ಎಂಬುವುದು ಸ್ಪಷ್ಟವಾಯಿತು. ಆಲಮುಲ್ ಬರ್ಝಖಿ ಎಂಬ ಲೋಕ(ಖಬರ್)ದಲ್ಲಿರುವ ಪ್ರವಾಧಿ(ಸ.ಅ) ರಲ್ಲಿ ಒಂದು ಕಾರ‍್ಯ ಅವಶ್ಯಪಟ್ಟರೆ ಅಲ್ಲಾಹು ಅದನ್ನು ಸಾಕ್ಷಾತ್ಕಾರಗೊಳಿಸಲಾರನು ಎಂಬುದಕ್ಕೆ ನೂತನವಾದಿಗಳಿಗಿರುವ ಆಧಾರವಾದರೂ ಏನು? ಔಲಿಯಾಗಳಿಗೆ ನೆರವಾಗಲು ಸಾಧ್ಯವಿದೆ ಎಂದು ಕೆ.ಎಂ.ಮೌಲವಿ ಹೇಳದ್ದನ್ನಾದರೂ ಅಂಗೀಕರಿಸಬಾರದೆ?

Related Posts

Leave A Comment

Voting Poll

Get Newsletter