ಹಮಾಸ್ ಪ್ರತಿರೋಧದ ಭದ್ರಕೋಟೆ

“ನನ್ನ ಚಿಂತನೆಗಳು ಹಾಗೂ ಭಾವನೆಗಳು ಬರೆದಿಡುವುದು ನನ್ನ ನೋವುಗಳಿಗೊಂದು ಪರಿಹಾರ. ಅದೂ ಅಸಾಧ್ಯವಾದರೆ ನಾನು ಉಸಿರುಗಟ್ಟಿ ಸಾಯುತ್ತಿದ್ದೆ”. ಇದು ಹಿಟ್ಲರಿನ ಹೋಲೋಕಾಸ್ಟ್ ಹತ್ಯಾಕಾಂಡದ ವೇಳೆ ಜರ್ಮನ್ ಕಾರಾಗೃಹದಲ್ಲಿ ಬಂಧಿಯಾಗಿದ್ದ ಯಹೂದಿ ಬಾಲೆ ಅನ್ನಫ್ರ್ಯಾಂಕ್ ತನ್ನ ಡಯರಿಯಲ್ಲಿ ಬರೆದಿಟ್ಟ ಸಾಲುಗಳು. ತಮ್ಮ ದುರಂತ ಸಾಲುಗಳನ್ನು ಬರೆದಿಡಲು ಒಂದು ಕಾಗದದ ತುಂಡು ಸಿಗದೆ, ಬರೆದಿಟ್ಟರೂ ಅದು ಸುಟ್ಟು ಕರಕಲಾಗುತ್ತದೆ ಎಂಬ ಖಚಿತತೆಯೊಂದಿಗೆ ದಿನ ಕಳೆಯುತ್ತಿರುವ ಫೆಲೆಸ್ತೀನ್ ಮಕ್ಕಳು ಜಗತ್ತಿನ ಕಣ್ಣೀರಾಗುತ್ತಿದ್ದಾರೆ. ಅಕ್ಟೋಬರ್ 9 ರಂದು ಇಸ್ರೇಲಿನ ವಿರುದ್ಧ ನಡೆದ ದಾಳಿಯ ಪ್ರತ್ಯುತ್ತರವಾಗಿ ಇಸ್ರೇಲ್ ವಿರಾಮವಿಲ್ಲದ ಕದನಕ್ಕೆ ಕಾಲು ಕಿತ್ತು ನಿಂತಿದೆ. ಈ ವಿಷಯಗಳ ನಡುವೆ ಪೆಲೆಸ್ತೀನ್ ದೇಶದ ಪ್ರತಿರೋಧವಾಗಿ ಹಮಾಸ್ ಸಂಘಟನೆಯ ಹೆಸರು ಕೇಳಿಬರುತ್ತಿದೆ. ಇಸ್ರೇಲಿನ ಮೇಲೆ ದಾಳಿ ನಡೆಸಿ, ಫೆಲಸ್ತೀನ್ ದೇಶದ ಪ್ರತಿರೋಧವಾಗಿ ನಿಂತಿರುವ ಹಮಾಸ್ ನನ್ನು ಭಯೋತ್ಪದಕ ಸಂಘಟನೆ ಎಂದು ವಿಶ್ವವ್ಯಾಪಿ ಮಾಧ್ಯಮಗಳು ಬಣ್ಣಿಸುತ್ತಿದೆ. ಈ ಲೇಖನದ ಮೂಲಕ ಹಮಾಸ್ ಸಂಘಟನೆಯ ನೈಜ ಹಿನ್ನಲೆಯನ್ನು ಬೆಳಿಕಿಗೆ ತರಲಾಗುತ್ತಿದೆ. ಹಮಾಸ್ ಉತ್ಸಾಹ ಎಂಬ ಅರ್ಥ ಬರುವ ಅರಬಿ ಪದ ಇಂದು ಫೆಲಸ್ತೀನ್ ದೇಶದ ಬೆನ್ನೆಲುಬಾಗಿ ನಿಂತಿದೆ. ಅಲ್ ಹರಕತ್ತುಲ್ ಮುಖಾವಮಾ ಅಲ್-ಇಸ್ಲಾಮಿಯ್ಯ ಪ್ರಸ್ತುತ ಫೆಲಸ್ತೀನ್ ಜನತೆಯ ಉಪಶಮನವಾಗಿ ಬೆಳೆದು ನಿಂತಿದೆ. ರೋಮನ್ ಚಕ್ರವರ್ತಿ ಟೈಟನ್ ಸೀಸರ್ ಪಶ್ಚಿಮ ಏಶ್ಯ ಪ್ರದೇಶಗಳು ಅಧೀನಗೊಳಿಸಿದಾಗ ಈ ಪ್ರದೇಶಗಳಲ್ಲಿ ತಂಗಿದ್ದ ಯಹೂದಿಗಳು ಊರು ತೊರೆದರು. ಬಳಿಕ 1517 ರಲ್ಲಿ ಒಟ್ಟಮಾನ್ ಎಂಪಯರ್ ಜಗತ್ತಿನ ಹಲವು ಭಾಗಗಳನ್ನು ಅಧೀನಗೊಳಿಸಿದಾಗ ಪಶ್ಚಿಮ ಏಷ್ಯ ಪ್ರಾಂತ್ಯವು ಅದರ ಭಾಗವಾಗಿತ್ತು. 1918 ರಲ್ಲಿ ಒಂದನೇ ಮಹಾಯುದ್ಧ ಕೊನೆಗೊಳ್ಳುವಾಗ ಈ ಪ್ರಾಂತ್ಯದಲ್ಲಿ ಶೇಕಡ 10 ರಷ್ಟು ಯಹೂದಿ ಜನಸಂಖ್ಯೆಯಿತ್ತು ಎಂಬುವುದು ದಾಖಲೆಗಳ ಮೂಲಕ ಸಾಬಿತಾಗಿದೆ. 1921 ರ ಅಂತ್ಯವಾಗುವಾಗ ಒಟ್ಟೋಮಾನ್ ಸಂಪೂರ್ಣವಾಗಿ ಪತನಗೊಂಡು ಪೆಲೆಸ್ತೀನ್ ಪ್ರಾಂತ್ಯ ಬ್ರಿಟೀಷ್ ಅಧೀನ ದೇಶದ ಭಾಗವಾಗುತ್ತದೆ. ಕ್ರಮೇಣ ಈ ಪ್ರಾಂತ್ಯಗಳಲ್ಲಿ ಯಹೂದಿ ಜನಸಂಖ್ಯೆ ಅಭಿವೃದ್ಧಿಹೊಂದ ತೊಡಗಿತು. ಯುರೋಪ್ ಖಂಡದ ವಿವಿಧ ದೇಶಗಳಿಂದ ಯಹೂದಿಗಳು ಪ್ರಸ್ತುತ ಪ್ರದೇಶ ವಲಸೆ ಬರತೊಡಗಿದರು. 1941 ರಿಂದ 1944 ವರೆಗೂ ಜರ್ಮನ್ ನಲ್ಲಿ ಹಿಟ್ಲರ್ ನಡೆಸಿದ ಹೋಲೋಕಾಸ್ಟ್ ನರಮೇಧದ ಭಾಗವಾಗಿ ಯಹೂದಿ ಜನಸಾಗರ ಹರಿದು 1946 ಇಸವಿ ಕೊನೆಯಾಗುವಾಗ ಪ್ರಸ್ತುತ ಪ್ರಾಂತ್ಯದ ಯಹೂದಿ ಜನಸಂಖ್ಯೆ 40% ಕ್ಕೇರಿತು. ಎರಡನೇ ಮಹಾಯುದ್ಧ ಕಾಲದಲ್ಲಿ ಯಹೂದಿಗಳಿಗೆ ಬ್ರಿಟನ್ ನೀಡಿದ್ದ ಮಾತಿನ ಪ್ರಕಾರ ಅವರಿಗೊಂದು ಶಾಶ್ವತ ನೆಲೆ ಕಲ್ಪಿಸಿ ಕೊಡಬೇಕು ಎಂಬುವುದು ಬ್ರಿಟನಿನ ಮೇಲೆ ಒಂದು ಹೊಣೆಯಾಗಿ ಬಾಕಿಯಾಗಿತ್ತು. 1940 ರ ಪ್ರಾರಂಭದಿಂದಲೇ ಯಹೂದಿಗಳು ಪೆಲೆಸ್ತೀನ್ ಹಾಗೂ ಮೂರು ಧರ್ಮಗಳು ವಿಶುದ್ಧ ನಗರವಾಗ ಜೆರುಸಲಾಂನ ಮೇಲೆ ನಮಗೆ ಹಕ್ಕಿದೆ ಎಂದು ವಾದಿಸಲು ಪ್ರಾರಂಭಿಸಿದ್ದರು. 1947 ರಲ್ಲಿ ಬ್ರಿಟೀಷರು ತಮ್ಮ ಅಧೀನದಲ್ಲಿದ್ದ ಪೆಲೆಸ್ತೀನ್ ಪ್ರದೇಶವನ್ನು ಇಸ್ರೇಲಿಗಾಗಿ ತೊರೆದು ಮರಳುತ್ತಾರೆ. 1947 ನವೆಂಬರ್ ತಿಂಗಳು ವಿಶ್ವಸಂಸ್ಥೆ ಇಸ್ರೇಲ್ ನನ್ನು ಅಂಗೀಕೃತ ದೇಶವಾಗಿ ಘೋಷಿಸುತ್ತದೆ. 

ಹಮಾಸ್ ಉಗಮ ಮತ್ತು ಬೆಳವಣಿಗೆ

1920 ಗಳಲ್ಲಿ ಈಜಿಪ್ಟ್ ಅಸ್ಥಾನವಾಗಿ ಬೆಳೆದು ನಿಂತ ಇಖ್ವಾನುಲ್ ಮುಸ್ಲಿಮೀನ್ ಸಂಘಟನೆಯ ಆಶಯ ಆದರ್ಶಗಳನ್ನೊಳಗೊಂಡ ಹಮಾಸ್ ಅಧಿಕೃತವಾಗಿ ರೂಪೀಕೃತಗೊಂಡಿತ್ತು 1987 ರಲ್ಲಾಗಿತ್ತು. 1967 ರ ನವೆಂಬರ್ ತಿಂಗಳ ಬಳಿಕ ಇಸ್ರೇಲ್ ಯಹೂದಿ  ಸಂತ್ರಸ್ತರಿಗೆ ತಾವು ಅಧೀನಗೊಳಿಸಿದ ಗಾಝಾದ ಮಣ್ಣಿನಲ್ಲಿ ಜಾಗ ನೀಡುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದೆ, ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಗಾಝಾ ಸಂತ್ರಸ್ತ ಕ್ಯಾಂಪುಗಳಲ್ಲಿ ಸಯನಿಸ್ಟ್ ಪ್ರಜೆಗಳು ತಂಗಲು ಪ್ರಾರಂಭಿಸಿದರು. ಸಾವಿರಾರು ವಲಸೆಗಾರರಾದ ಯಹೂದಿಗಳ ಆಗಮನ ಇವರ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. 1967 ರಲ್ಲಿ ಈಜಿಪ್ಟಿನ ಅಧೀನದಲ್ಲಿದ್ದ ಗಾಝಾ ಪ್ರದೇಶ ಇಸ್ರೇಲ್ ವಶಪಡಿಸಿಕೊಂಡಿತು. ವಶಪಡಿಸಿದ ಬಳಿಕ ಒಂದು ವರ್ಷಕಾಲ ಫೆಲಸ್ತೀನ್ ಪ್ರಜೆಗಳಿಗೆ ಇಸ್ರೇಲಿಗೆ ತೆರಳಿ ನೌಕರಿ ಮಾಡಲು ಅವಕಾಶವಿತ್ತು. ಅದರಂತೆ ವೆಸ್ಟ್ ಬ್ಯಾಂಕ್ ಹಾಗೂ ಗಾಝಾ ಪ್ರದೇಶದ ಜನರಿಗೆ ಸ್ವಾತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿತ್ತು. ಒಂದು ರೀತಿಯಲ್ಲಿ ಜಮಾಲ್ ಅಬ್ದುಲ್ ನಾಸರ್ ಇವರ ಕ್ರೂರ ಆಡಳಿತದಿಂದ ಅವರಿಗೆ ದೊರಕಿದ ವಿಮೋಚನೆಯಾಗಿತ್ತು ಇದು. ಇಸ್ಲಾಮಿಕ್  ಬ್ರದರ್ಹುಡ್ ಇದರ ಕಾರ್ಯಕರ್ತರಿಗೆ ಅಬ್ದುಲ್ ನಾಸಿರ ರ ಆಡಳಿತ ಕಾಲದಲ್ಲಿ ಹಲವು ಪೀಡನೆಗಳು ಎದುರಿಸಬೇಕಾಗಿಬಂತು. ಅದರಂತೆ ಹಮಾಸ್ ಸಂಘಟನೆಯ ಸ್ಥಾಪಕ ನಾಯಕನಾದ ಶೈಖ್ ಅಹ್ಮದ್ ಯಾಸೀನ್ ಹಲವು ತೊಂದರೆ ಗಳಿಗೆ ಸಿಲುಕಿಕೊಂಡಿದ್ದರು. 1965 ಡಿಸೆಂಬರ್ 18 ನೇ ತಾರೀಖು ಅವರನ್ನು ಬಂಧಿಸಿ ಕಾರಾಗೃಹದಲ್ಲಿ ಇರಿಸಿದರು. ಕೈರೋ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಸಾಹಿತ್ಯ ಬಿರುದು ವಿದ್ಯಾರ್ಥಿಯಾಗಿದ್ದ ಯಾಸೀನರಿಗೆ ಈಜಿಪ್ಟ್ ಪ್ರದೇಶ ನಿಷೇಧಿಸಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯಾವಾಗಲಿಲ್ಲ.

1977 ರ ಬಳಿಕ ಗಾಝಾ ಪ್ರಾಂತ್ಯದ ಅವಸ್ಥೆ ದಾರುಣವಾಗಿತ್ತು. ಪ್ರಸ್ತುತ ವರ್ಷ ಜೂನ್ ತಿಂಗಳು ಇಸ್ರೇಲ್ ನಲ್ಲಿ ತೀವ್ರ ಬಲಿಪಂಧೀಯ ಲಿಕೂಡ್ ಪಕ್ಷ ಅಧಿಕಾರಕ್ಕೇರಿತು. ಅದೇ ವರ್ಷ ನವೆಂಬರ್ ತಿಂಗಳು ಪೆಲಸ್ತೀನ್ ಪ್ರಜೆಗಳನ್ನು ನಿಬ್ಬೆರಗಾಗಿಸುವಂತೆ ಈಜಿಪ್ಟ್ ರಾಷ್ಟ್ರಪತಿ ಅನ್ವರ್ ಸಾದಾತ್ ಜೆರುಸೆಲಾಂ ಸಂದರ್ಶಿಸಿ ಇಸ್ರೇಲ್ ಜೊತೆ ಕೈ ಜೋಡಿಸಿದರು. ಇಸ್ರೇಲ್ ಅಧಿನಿವೇಶದಲ್ಲಿ ಸಿಲುಕಿಕೊಂಡಿದ್ದ ತಮಗಾಗಿ ಈಜಿಪ್ಟ್ ಅನುಕೂಲ ನಿಲುವು ಕೈಗೊಳ್ಳುತ್ತದೆ  ಎಂದುಕೊಂಡಿದ್ದ ಪೆಲಸ್ತೀನ್ ನಿರಾಶರಾಗುತ್ತಾರೆ. ಸಾದಾತಿನ ಪೂರ್ವ ರಾಷ್ಟ್ರಪತಿ ಜಮಾಲ್ ನಾಸಾರ್ ಅವರಿಗೆ ಇಂತಹಾ ವಾಗ್ದಾನ ನೀಡಿದ್ದರು, ಅಮೇರಿಕದ ನೇತೃತ್ವದಲ್ಲಿ ನಡೆದ ಕ್ಯಾಂಪ್ ಡೇವಿಡ್ ಒಪ್ಪಂದದಲ್ಲಿ ಸಹಿ ಹಾಕಿದ ಕಾರಣದಿಂದಾಗಿ 1967 ರಲ್ಲಿ ಯುದ್ಧದಲ್ಲಿ ಇಸ್ರೇಲ್ ಪಶಪಡಿಸಿಕೊಂಡ ಸಿನಾಯಿ ಉಪದ್ವೀಪ ಈಜಿಪ್ಟಿಗೆ ಮರಳಿ ದೊರಕಿತು. ಇದರ ಬಳಿಕ ಪೆಲಸ್ತೀನ್ ಪ್ರಜೆಗಳೊಂದಿಗಿರುವ ಈಜಿಪ್ಟಿನ ಪ್ರೀತಿ ಕೊನೆಗೊಂಡಿತು.1947 ರ ಬಳಿಕ ಪೆಲಸ್ತೀನ್ ಹಲವು ದುರಂತ ಘಟನೆಗಳಿಗೆ ಸಾಕ್ಷಿಯಾಯಿತು.

ನಿರಾಯುಧರಾದ ಪೆಲಸ್ತೀನ್ ಜನತೆಯ ಮೇಲೆ ಆಯುಧ ಪ್ರಯೋಗ ನಡೆಸುತ್ತಿರುವ ಇಸ್ರೇಲ್ ಸೈನಿಕರ ದೃಶ್ಯಗಳು ಟೆಲಿವಿಷನ್ ಚಾನೆಲ್ ಗಳು ಪ್ರಸಾರ ಮಾಡಿದವು. ಈ ಹತ್ಯಕಾಂಡವನ್ನು ಪ್ರತಿರೋಧಿಸಲು ಬೇಕಾಗಿ ಒಂದು ಶಸ್ತ್ರಾಸ್ತ್ರ ಪಡೆಯ ಅಗತ್ಯವಿತ್ತು. ಇದರ ಭಾಗವಾಗಿ 1920 ಕಾಲದಲ್ಲಿ ಈಜಿಪ್ಟ್ ಆಸ್ಥಾನವಾಗಿ ಬೆಳೆದು ನಿಂತ ಇಸ್ಲಾಮಿಕ ಬ್ರದರ್ ಹುಡ್ ಸಂಘಟನೆಯಲ್ಲಿ ಅನುಭವಿ ಕಾರ್ಯಕರ್ತರಾದ ಶೈಖ್ ಅಹ್ಮದ್ ಯಾಸೀನ್. ಡಾ, ಅಬ್ದುಲ್ ಅಸೀಸ್ ರನ್ತೀಸ್, ಸ್ವಲಾಹ್ ಶಹಾದ್, ಅಬ್ದುಲ್ ಫತ್ತಾಹ್ ದುಖಾನ್, ಸಮಾಹ್, ಇಬ್ರಾಹೀಂ ಅಲ್ ಯಸೂರಿ ಮುಂತಾದ ನಾಯಕರು 1987 ನವೆಂಬರ್ ತಿಂಗಳು ಮಧ್ಯ ರಾತ್ರಿ ಸೇರಿದ ರಹಸ್ಯಸಭೆಯಲ್ಲಿ ಭಾಗಿಯಾಗುತ್ತಾರೆ. ಪೆಲಸ್ತೀನ್ ದೇಶದ ಇಖ್ವಾನ್ ಸಂಘಟನೆಯನ್ನು ಇಸ್ರೇಲ್ ಪ್ರತಿರೋಧ ಸಂಘಟನೆಯಾಗಿ ರೂಪಾಂತರಗೊಳಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಸಭೆಯಲ್ಲಿ ಹರ್ಕತ್ತುಲ್ ಮುಖಾವಮ ಅಲ್ ಇಸ್ಲಾಮಿಯ್ಯಾ ಎಂದು ನಾಮಕರಣ ಮಾಡಲು ತೀರ್ಮಾನವಾಗುತ್ತದೆ. ಸಂಘಟನೆಯ ಪೂರ್ಣ ಅರಬಿ ನಾಮದ ಮೊದಲ ಆಂಗ್ಲೇಯ ಅಕ್ಷರಗಳಾದ ಎಚ್.ಎಂ.ಎಸ್ ಎಂಬ ಲಘುನಾಮ ಸ್ವೀಕರಿಸಲು ಸಭೆಯಲ್ಲಿ ಚರ್ಚೆಯಾಗುತ್ತದೆ. ಕೊನೆಗೆ ಕೂಗಲು ಸುಲಭವಾಗುವಂತಹ ಲಘುನಾಮವಾಗಿ ಉತ್ಸಾಹ ಎಂದು ಅರ್ಥವಿರುವ ಹಮಾಸ್ ಎಂಬ ಪದ ಆಯ್ಕೆಯಾಗುತ್ತದೆ. ಇಖ್ವಾನುಲ್ ಮುಸ್ಲಿಮೀನ್ ಇದರ ಹಕ್ಕು, ಸಮರ, ಸ್ವಾತಂತ್ಯ್ರ ಎಂಬ ಘೋಷಣೆ ಹಮಾಸಿನ ಭಾಗವಾಗುತ್ತದೆ.

ನವೆಂಬರ್ 9 ರಂದು ರೂಪಿಕೃತವಾದ ಹಮಾಸಿನ ಕರಪತ್ರಗಳು ಖಾಲಿದ್ ಅಲ್ ಹಿಂದಿ ಇವರ ಮನೆಯಲ್ಲಿ ತಯ್ಯಾರಿಸಿ ಸುತ್ತಮುತ್ತಲಿನ ಮಸೀದಿಗಳಿಗೆ ರವಾನಿಸಲಾಗುತ್ತಿದೆ. ತಿಂಗಳಿಗೆ ಒಂದು ಬಾರಿ ಸೇರಲಾಗುತ್ತಿದ್ದ ಸಭೆಯಲ್ಲಿ ಪ್ರಸ್ತುತ ಸಂಘಟನೆಯ ಆಸ್ಥಾನ ಯಾವುದಾದರು ಸುರಕ್ಷಿತ ಇಸ್ಲಾಂ ರಾಷ್ಟ್ರದಲ್ಲಿ ನಿರ್ಮಿಸಬೇಕು ಎಂದು ಚರ್ಚೆಯಾಗುತ್ತಿದೆ. ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಅಂಗೀಕರಿಸುವ ಅದಕ್ಕಾಗಿ ಸಹಾಯಕ ನಿಲುವು ಘೋಷಿಸುವ ಒಂದು ಆಡಳಿತ ಸಹಕಾರ ಮೊದಲ ಅನಿವಾರ್ಯತೆಯಾಗಿತ್ತು. ಆದರೆ ವಸಾಹತುಶಾಹಿ ಶಕ್ತಿಯಾದ ಸಯನಿಸ್ಟ್ ಇಸ್ರೇಲ್ ನೊಂದಿಗೆ ಸಂಧಾನ ಒಪ್ಪಂದಕ್ಕೆ ಸಹಿಹಾಕಿದ ಈಜಿಪ್ಟ್. 1970 ಸೆಪ್ಟಂಬರ್ ತಿಂಗಳು ಪಿ.ಎಲ್.ಓ ದೊಂದಿಗೆ ಕಾದಾಟ ನಡೆಸಿ ನಿಲುವಿನ ಪ್ರಶ್ನೆಯ ಮುಂದಿರುವ ಜೋರ್ಡಾನ್, ವಿಶ್ವಸಂಸ್ಥೆಯ ಸಮಾಧಾನ ಸೇನೆಯ ಸಾನಿಧ್ಯದಲ್ಲಿ ಇಸ್ರೇಲ್ ನೊಂದಿಗೆ ಸಮಾಧಾನ ಗೊತ್ತುಪಡಿಸಿದ ಸಿರಿಯ. 1982 ರಲ್ಲಿ ದೇಶದ ಪೂರ್ವ ಭಾಗದಲ್ಲಿ ಇಸ್ರೇಲ್ ನಡೆಸಿದ ಅಕ್ರಮಣಗಳಿಂದ ಚೇತರಿಸಿಕೊಳ್ಳುತ್ತಿರುವ ಜೋರ್ಡಾನ್ ಸಮಸ್ಯೆಗಳ ಸುಳಿಯಲ್ಲಿತ್ತು. ಆದುದರಿಂದ ಜನ್ಮ ಭೂಮಿಯಾದ ಪೆಲಸ್ತೀನ್ ಸಂಘಟನೆಯ ಆಸ್ಥಾನವಾಗಿ ಯಾಸೀನ್ ಘೋಷಿಸುತ್ತಾರೆ.

ಗಾಝಾದಲ್ಲಿ ಚಟುವಟಿಕೆಗಳು ಪ್ರಾರಂಭವಾದ ಕೆಲವೇ ದಿನಗೊಳಗೆ ಇತರ ಸನಿಹದ  ಪ್ರದೇಶದ ವೆಸ್ಟ್ ಬ್ಯಾಂಕ್ ಗೂ ವ್ಯಾಪಿಸುತ್ತದೆ. ದಿನದಿಂದ ದಿನಕ್ಕೆ ಇಸ್ರೇಲಿ ವಸಾಹತುಶಾಹಿ ವಿರುದ್ಧ ಹಮಾಸಿನ ಸ್ವರ ಬಾನೆತ್ತರಕ್ಕೇರುತ್ತದೆ. ಇದರ ಯುವ ಸಂಘವಾಗಿ ಅಲ್ ಅಹ್ದಾಸ್ ಎಂಬ ಗುಂಪು ರೂಪುಗೊಳ್ಳುತ್ತದೆ. ಕರಪತ್ರ ವಿತರಣೆ, ಗೋಡೆಬರಹ ಈ ಕಿರು ಸಂಘಟನೆಯ ಕರ್ತವ್ಯಗೊಳಗಾಗುತ್ತದೆ. ಇದು ಮಾತ್ರವಲ್ಲದೇ ಇಸ್ರೇಲಿನೊಂದಿಗಿನ ಕದನದಲ್ಲಿ ಹುತಾತ್ಮರಾದ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡುವುದು, ಅವರಿಗ ಶ್ರದ್ದಾಂಜಲಿ ಅರ್ಪಿಸುವುದು ಕುಟುಂಬಗಳ ರಕ್ಷಣಕ್ಕೆ ಫಂಡ್ ಶೇಖರಣೆ ನೆಡೆಸುವುದು ಹೀಗೆ ಅವರ ಕರ್ತವ್ಯಗಳ ಪಟ್ಟಿ ಮುಂದುವರೆಯುತ್ತದೆ. ಕಳೆದ 36 ವರ್ಷಗಳಿಂದ ಹಮಾಸ್ ಫೆಲಸ್ತೀನ್ ಮಣ್ಣಿನ ಅಸ್ಮಿತೆಯನ್ನು ಇಸ್ರೇಲ್ ವಸಾಹತುಶಾಹಿಯಿಂದ  ಸಂರಕ್ಷಿಸುತ್ತಾ ಬರುತ್ತಿದೆ. ಅದರಂತೆ ಇಸ್ರೇಲ್ ವಶಪಡಿಸಿಕೊಂಡ ಕಳೆದುಕೊಂಡ ತಮ್ಮ ಭೂಮಿ ಮರಳಿ ಪಡೆಯಲು ಸರ್ವ ಯತ್ನಗಳು ನಡೆಸುತ್ತಿದೆ. ಇದರ ಭಾಗವಾಗಿ ಅಕ್ಟೋಬರ್ 9 ರಂದು ಹಮಾಸ್ ಇಸ್ರೇಲಿನ ಮೇಲೆ ದಾಳಿ ನಡೆಸಿತು. ಈ ದಾಳಿಯ ಬಳಿಕ ಹಲವು ರಾಷ್ಟ್ರಗಳು ಹಮಾಸನ್ನು ಭಯೋತ್ಪಾದಕ ಸಂಘಟನೆ ಎಂದು ಬಣ್ಣಿಸಿತು. ಇಸ್ರೇಲ್, ಅಮೇರಿಕ, ಯುರೋಪ್ಯನ್ ಯೂನಿಯನ್, ಕೆನಡ, ಈಜಿಪ್ಟ್, ಜಪಾನ್ ಹಮಾಸ್ ನನ್ನು ಭಯೋತ್ಪಾದಕ ಸಂಘಟನೆಗಳ ಕಪ್ಪು ಪಟ್ಟಿಯಲ್ಲಿ ಸೇರಿಸಿದೆ. ಸ್ವಂತ ಮಣ್ಣಿಗಾಗಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿರುವ ಜನತೆ ಭಯೋತ್ಪದರಾಗುವಾಗ, ಶತಮಾನಗಳ ಕಾಲ ವಸಾಹತುಶಾಹಿ ಆಡಳಿತವನ್ನು ನಡೆಸಿದ ಬ್ರಿಟೀಷ್, ಅನ್ಯರ ಮಣ್ಣಿನಲ್ಲಿ ಬೇರೂರಿದ ಇಸ್ರೇಲ್, ಇಂತಹಾ ದೇಶಗಳಿಗೆ ಸಹಾಯ ಮಾಡುತ್ತಿರುವ ಅಮೇರಿಕ ಇಂದು ಪರಿಶುದ್ದರಾಗಿ ಬಾಳುತ್ತಿದ್ದಾರೆ.

ಬರಹ: ಇಮ್ತಿಯಾಝ್ ಕಡಬ

(ವಿದ್ಯಾರ್ಥಿ ದಾರುನ್ನೂರ್ ಏಜುಕೇಷನ್ ಸೆಂಟರ್, ಕಾಶಿಪಟ್ನ)

Related Posts

Leave A Comment

Voting Poll

Get Newsletter