ತವಸ್ಸುಲ್ ಮತ್ತು ಇಸ್ತಿಗಾಸ

   ಗುಲಾಮನು ಮಾಲಿಕನೊಡನೆ ತನ್ನ ಅವಶ್ಯಕತೆಗಳ ನೆರವೇರಿಕೆಗಾಗಿ ಹೋಗುವಾಗ, ತನ್ನ ಮಾಲಿಕನ ಮುಂದೆ ಮಧ್ಯ ವರ್ತಿಯನ್ನನಾಗಿಸಿ ನಿಯಮಿಸುವ ಕಾರ್ಯವನ್ನು ವಸೀಲ ಎಂದೂ. ಪ್ರವ್ರತ್ತಿಯನ್ನು ತವಸ್ಸುಲ್ ಎಂದು ಕರೆಯುತ್ತಾರೆ. ಬಹುಮಾನ್ಯರಾದ ಇಮಾಂ ಬೈಳಾವಿ (ರ.ಅ) ಹೇಳುತ್ತಾರೆ. 'ಅವಶ್ಯಕತೆಗಳ ನೆರವೇರಿಕೆಗೆ ತಕ್ಷಣ ಮನ್ನಣೆ ಲಭಿಸುವುದು ವಸೀಲದೊಂದಿಗಿರುವ ಕೋರಿಕೆಗಳಿಗಾಗಿದೆ'.

(بيضاوي ٩-1)

ಮೇಲೆ ವಿವರಿಸಿರುವ 'ವಸೀಲತ್' ತಮ್ಮ ಸತ್ಕರ್ಮಗಳಿಂದಲೋ ಅಥವಾ ಇತರೆ ಮಹಾನ್ ವ್ಯಕ್ತಿತ್ವಗಳಿದಂಲೋ ಸಾಧ್ಯವಾಗ ಬಹುದಾಗಿದೆ. ಬುಖಾರಿ, ಮುಸ್ಲಿಂ (ರ.ಅ) ರವರು ವರದಿ ಮಾಡಿದ್ದಾರೆ. ಮೂರು ಮಂದಿಯಡಗಿರುವ ಯಾತ್ರಾ ಸಂಘವು ಗುಹೆಯ ಬಾಗಿಲಿಗೆ ಬಂಡೆಕಲ್ಲುಗಳು ಬಿದ್ದು ಗುಹಾಂತರಂಗದಿ ಸಿಲುಕಿಕೊಳ್ಳುವ ಘಟನೆಯನ್ನು ಈ ಹದೀಸ್ ತವಸ್ಸುಲಿನ ಮೇಲೆ ಬೆಳಕು ಚೆಲ್ಲಿದೆ.

(مشكاة ٤٢٠ باب البر والصلة)

 ತವಸ್ಸುಲ್ ಒಂದು ಸಮ್ಮತಾರ್ಹದವಾದ ಕಾರ್ಯವಾಗಿದೆ ಖರ್‌ಆನ್ ಹೇಳುತ್ತದೆ. "ಅಲ್ಲಾಹನೊಂದಿಗೆ ನೀವು ವಸಿಯ್ಯತ್ ಮೂಲಕ ಪ್ರಾರ್ಥನೆಗೈಯಿರಿ" ಈ ವಿಷಯದ ಬಗ್ಗೆ ಉಲಮಾ ಪಂಡಿತರ ಒಮ್ಮತ ಅಭಿಪ್ರಾಯವಿದೆ.

ತವಸ್ಸುಲ್: ಸತ್ಕರ್ಮಗಳ ಮೂಲಕ 

ಖರ್‌ಆನ್ ಹೇಳುತ್ತದೆ, “ಸಜ್ಜನರು ಹೇಳುವರು, ಓ ನಮ್ಮ ಪಾಲಕನೇ, ನಿನ್ನಲ್ಲಿ ವಿಶ್ವಾಸವರಿಸಿದ್ದೇವೆ. ಆದ ಕಾರಣ ನ್ಮಮ ಪಾಪ, ಅಪರಾಧಗಳನ್ನು ಮನ್ನಿಸು, ನಮ್ಮನ್ನು ನರಕಾಗ್ನಿಯಿಂದ ಪಾರುಮಾಡು, ನಮ್ಮನ್ನು ಸಂರಕ್ಷಿಸು..

(آل عمران)

ಇಲ್ಲಿ, “ನಾವು ನಿನ್ನಲ್ಲಿ ವಿಶ್ವಾಸವಿರಿಸಿದ್ದೇವೆ" ಎಂಬುದು ತವಸ್ಸುಲ್ ಪ್ರಕ್ರಿಯೆಯಾಗಿದೆ. ಅದರ ಮೂಲಕವಾಗಿದೆ ಅವರು ಅಲ್ಲಾಹುವಿನೊಡನೆ ಪಾಪನಿವೇದನೆ ಮಾಡಿಕೊಂಡಿರುವುದು.

ತವಸ್ಸುಲ್ ಅಲ್ಲಾಹವಿನ ನಾಮ ವಿಶೇಷನೆಯ ಮೂಲಕ:

 ಮುಸ್ಲಿಂ (ರ.ಅ) ವರದಿಮಾಡಿರುವ ಹದೀಸಿನಲ್ಲಿ ಹೀಗೆ ಕಾಣಬಹುದು, ಪ್ರವಾದಿ ಮುಹಮ್ಮದುನ್ನೆಬಿ (ಸ.ಅ)ರು ಪ್ರಾರ್ಥಿಸುತ್ತಾರೆ. 'ಅಲ್ಲಾಹುವೇ, ನನ್ನ ಹಿರಿಮೆಯನ್ನು ಮುಂದಿರಿಸಿ, ನಾನು ಕೋರಿಕೊಳ್ಳುತ್ತಿರುವೆನು ನನ್ನನ್ನು ಸನ್ಮಾರ್ಗದಲ್ಲಿ ನಡೆಸು, ತಪ್ಪುದಾರಿಗಳಿಂದ ಕಾಪಾಡು, ನೀನೆಂದೆಂದು ಜೀವಿಸುವವನು ಮರಣವಿಲ್ಲದವನು ಆಗಿರುವೆ. ಮನುಷ್ಯ ಮತ್ತು ಜಿನ್ನ್ ವರ್ಗವು ನಿಶ್ಚಯವಾಗಿಯೂ ಮರಣವನ್ನಪ್ಪಿ ಹೋಗುತ್ತಾರೆ (ಮುಸ್ಲಿಂ) ಇಲ್ಲಿ ಪ್ರವಾದಿಯವರು ಅಲ್ಲಾಹುವಿನ ಹಿರಿಮೆ ಎಂಬ ವಿಶೇಷಣೆಯನ್ನು ಮುಂದಿರಿಸಿಯಾಗಿದೆ ಪ್ರಾರ್ಥನೆ ಗೈದಿರುವುದು.

ಹನ್ಳಲ್ (ರ)ರವರು ಹೇಳುತ್ತಾರೆ. ಒಮ್ಮೆ ಪ್ರವಾದಿಯವರು ಮಸೀದಿ ಪ್ರವೇಶಿಸುವಾಗ ಆರಾಬಿಯೊಬ್ಬರು ತನ್ನ ತಶಹ್ಹುದಿನಲ್ಲಿ ಏಕನೂ, ಆಶ್ರಯದಾತನು, ಜನ್ಮ ನೀಡಿದವನೂ, ಸರಿಸಾಟಿಯಿಲ್ಲದವನೂ ಆಗಿರುವ ಅಲ್ಲಾಹುವೇ, ನನ್ನ ಪಾಪಗಳನ್ನು ಮನ್ನಿಸು" ಎಂದು ಪ್ರಾರ್ಥಿಸುತ್ತಿರುವುದು ಕೇಳುತ್ತದೆ. ಈ ಪ್ರಾರ್ಥನೆಯನ್ನು ಕೇಳಿದ ಪ್ರವಾದಿಯವರು ಹೇಳುತ್ತಾರೆ. ಅಲ್ಲಾಹನು ಅವನಿಗೆ ಆರು ಬಾರಿ ಮನ್ನಿಸಿ ಕೊಟ್ಟಿರುತ್ತಾನೆ. (ನಸಾಈ)

ತವಸ್ಸುಲ್ :ವ್ಯಕ್ತಿಗಳ ಮೂಲಕ

ಸತ್ಕರ್ಮ, ಅಲ್ಲಾಹವಿನ ವಿಶೇಷನಾಮ, ವಿಶೇಷಣೆಗಳು ಮುಂತಾದವುಗಳ ಮುಖಾಂತರ ತವಸ್ಸುಲ್ ಮಾಡುವ ಹಾಗೆ ಮಹಾನ್ ವ್ಯಕ್ತಿತ್ವಗಳ ಮೂಲಕವು ತವಸ್ಸುಲ್ ಮಾಡಬಹುದಾಗಿದೆ. ಖುರ್‌ಆನ್ ಹೇಳುತ್ತದೆ. 'ಆನಂತರ ಆದಂ (ಆ) ತನ್ನ ಪಾಲಕನಿಂದ ಕೆಲವು ವಚನಗಳನ್ನು ಸ್ವೀಕರಿಸಿದರು'. ಆ ವಚನಗಳ ಮೂಲಕ ಪಾಪ ನಿವೇದನೆಯನ್ನು ಮಾಡುತ್ತಾರೆ. ಆದಂ(ಅ) ರಿಗೆ ಅಲ್ಲಾಹನು ಪಾಪ ವಿಮೋಚನೆಯನ್ನು ನೀಡಿದರು.ಅವನು ಪಶ್ಚಾತಾಪಗಳನ್ನು ಸ್ವೀಖರಿಸುವವನೂ ಕರುಣಾ ಮಯಿಯೂ ಆಗಿರತ್ತಾನೆ" (1:37) ಉಮರ್ (ರ)ರಿಂದ ವರದಿ, ನೆಬಿಯವರು ಹೇಳಿದರು, "ಆದಂ(ಅ) ತಮ್ಮಿಂದ ಪ್ರಮಾದವೊಂದು ನಡೆದಾಗ, ತಪ್ಪನ್ನು ಮನ್ನಿಸಬೇಕಾಗಿ ಅಲ್ಲಾಹವಿನೊಡನೆ ಹೀಗೆ ಪ್ರಾರ್ಥಿಸುತ್ತಾರೆ. 'ಓ ಪಾಲಕನೇ, ಮಹಮ್ಮದ್ (ಸ.ಅ) ರವರ ಕಾರಣದಿಂದ ನನ್ನನ್ನು ಕ್ಷಮಿಸು' ಅದನುಸಾರವಾಗಿ ಅಲ್ಲಾಹನು ಹೇಳಿದನು: 'ಮುಹಮ್ಮದ್ ನನ್ನ ಪ್ರೀತಿಯ ದಾಸ ಮುಹಮ್ಮದ್ ಇಲ್ಲದಿರುತ್ತಿದ್ದರೆ ನಿಮ್ಮನ್ನು ನಾನು ಸೃಷ್ಟಿಸುತ್ತಿರಲಿಲ್ಲ. ತಮಗೆ ನಾನು ಕ್ಷಮಾಪಣೆಗಳನ್ನೂ ಕೊಡುತ್ತಿರಲಿಲ್ಲ. ತಮ್ಮನ್ನು ನಾವು ಮನ್ನಿಸಿರುತ್ತೇವೆ"

ಜೀವಿತಾವಧಿಯ ಕಾಲದಲ್ಲಿ ನಡೆಸುವ ತವಸ್ಸುಲ್

ಇಸ್ಲಾಮಿಕ ಚರಿತ್ರೆಯಲ್ಲಿ ಪುಣ್ಯ ಮುಂದಿರಿಸಿ ಅನೇಕ ತವಸ್ಸುಲುಗಳು ನಡೆಸಿರುವುದಾಗಿ ಕಾಣಬಹುದು. ಅಲ್ಲಾಹನು ಹೇಳುತ್ತಾನೆ, "ಅವರು ನಡುವೆ ಅಕ್ರಮವೆಸಗಿರುವಾಗ, ತಮ್ಮ ಬಳಿ ಅವರು ಬರುವರು, ಮತ್ತು ಅಲ್ಲಾಹುವಿನೊಡನೆ ಕ್ಷಮಾಪನೆ ನಡೆಸುದಲ್ಲದೆ,

ಅವರಿಗಾಗಿ ರಸೂಲವು ಕೂಡ ತಮಗಾಗಿ ಪಾಪವಿಮೋಚನೆ ಕೇಳುತ್ತಿದ್ದರೆ, ಅಲ್ಲಾಹನು ತುಂಬಾ ಕ್ಷಮಾಪಣೆಗಳನ್ನು ಸ್ವೀಕರಿಸುವವನೂ ಕರುಣೆಯುಳ್ಳವನೂ ಎಂದೂ ಅವರು ಮನಗಾಣುತ್ತಿದ್ದರು. 

ಈ ವಿಷಯದ ಕುರಿತಾಗಿ ಇಮಾಂ ರಾಝೀ(ರ)ರು ಹೇಳುತ್ತಾರೆ, "ಅಲ್ಲಾಹನು ತಮ್ಮ ದಿವ್ಯ ಸಂದೇಶಗಳಿಂದ ಗೌರವಿಸಿ ಪ್ರವಾದಿತ್ವದಿಂಧ ಪ್ರತ್ಯೇಕಗೊಳಿಸುತ್ತಿರುವ ಅವನ ಸೃಷ್ಟಿ ನಡುವೆ ಸಂದೇಶ ವಾಹಕನಾಗಿ ನಿಯೋಜಿಸಲ್ಪಟ್ಟಿರುವ ದೂತನ ಬಳಿಗೆ ಜನರು ಬರುವರು, ಈ ದೂತನ ಶಿಫಾರಸು ಅಲ್ಲಾಹ ಒಮ್ಮೆಯ ಕಡೆಗಣಿಸುದಿಲ್ಲ" (162/10) ಅನಸ್ (ರ) ರಿಂದ ಬುಖಾರಿ ಇಮಾಮರು ವರದಿಮಾಡುತ್ತಾರೆ. ಕ್ಷಾಮ ಕಾಲದಲ್ಲಿ ಉಮರ್(ರ) ರು ಅಬ್ಬಾಸ್ (ರ) ರನ್ನು ತವಸ್ಸುಲ್ ಮಾಡಿ ಮಳೆಗೋಸ್ಕರ ಹೀಗೆ ಪ್ರಾರ್ಥಿಸುತ್ತಿದ್ದರು. "ಅಲ್ಲಾಹನೇ, ನಾವು ಪ್ರವಾದಿಯವರನ್ನು ತವಸ್ಸುಲ್ ಮಾಡಿ ನಿನ್ನಲ್ಲಿ ಪ್ರಾರ್ಥನೆಗೈದರೆ, ನೀನು ಮಳೆಸುರಿಸುತ್ತಿದ್ದೆ. ಈಗ ನಾವು ಪ್ರವಾದಿಯವರ ಚಿಕ್ಕಪ್ಪರನ್ನು ಮುಂದಿರಿಸಿ ತವಸ್ಸುಲ್ ಮಾಡಿ ನಿನ್ನಲ್ಲಿ ಮಳೆಯನ್ನು ಬೇಡುತ್ತಿರುವೆವು, ಅಲ್ಲಾಹನೇ, ನಮಗೆ ಮಳೆಯನ್ನು ಕರುಣಿಸು", ಅನಸ್ (ರ)ಹೇಳುತ್ತಾರೆ. ಹಾಗೆ ನಮಗೆ ಮಳೆ ಲಭಿಸುತ್ತಿತ್ತು. ಸ್ವಾಭಾವಿಕವಾಗಿ ಇಲ್ಲೊಂದು ಸಂದೇಹವು ತಲೆಯೆತ್ತಿ ನಿಲ್ಲಬಹುದು. ಮೊದಲು ಮುಹಮ್ಮದ್ ನೆಬಿ (ಸ.ಅ) ರನ್ನು ಕೇಂದ್ರೀಕರಿಸಿ ಪ್ರಾರ್ಥಿಸುತ್ತಿದ್ದರೆ ನಂತರ ಹಾಗೆನೇ ಮುಂದುವರೆಸುತ್ತಿದ್ದರೆ ಸಾಕಲ್ಲವೇ? "ಅವರನ್ನು ನೀನು ಮರಣಹೊಂದಿದವರಂತೆ ಭಾವಿಸಬೇಡಿ, ಅವರು ಅಲ್ಲಾಹುವಿನ ಹತ್ತಿರ ಜೀವಿಸುವವರೂ, ಸುಭಿಕ್ಷತೆ ಲಭಿಸಿದವರೂ ಆಗಿರತ್ತಾರೆ" ಎಂದಲ್ಲದೇ ಖುರ್‌ಆನ್ ಇದಕ್ಕಾಧಾರಾವಾಗಿ ಹೇಳಿರುವುದು. ಒಂದು ದಿನ, ಕಣ್ಣುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೆಬಿ (ಸ.ಅ)ರೊಂದಿಗೆ, ಓ ರಸೂಲರೇ ನನ್ನ ಕಣ್ಣು ನೋವಿನ ಶಮನಕ್ಕೋಸ್ಕರ ತಾವು ಅಲ್ಲಾಹುವಿನೊಡನೆ ಪ್ರಾರ್ಥಿಸಿರಿ ಎಂದು ವಿನಂತಿಸಿದರು. "ತಾವು ಉದ್ದೇಶಿಸುದಾದರೆ ನಾನು ದುಆ ಮಾಡುತ್ತೇನೆ, ಇಲ್ಲದೆದ್ದರೆ ತಮಗೆ ತಾಳ್ಮೆ ವಹಿಸಬಹುದಲ್ಲವೇ?" ಎಂದು ಪ್ರವಾದಿಯವವರು ಪ್ರಶ್ನಿಸಿದಾಗ, ಪ್ರಾರ್ಥಿಸಬೇಕು ಎಂದು ಸಂದರ್ಶಕರು ಪುನಃ ವಿನಂತಿಸಿದನು. ಪ್ರವಾದಿಯವರು ಆ ರೋಗಿಯೊಡನೆ ಒಳ್ಳೆಯ ರೀತಿಯಲ್ಲಿ ವುಳೂಳ್ ನಿರ್ವಹಿಸಲು ಸಲಹೆಯಿತ್ತರು, ನಂತರ ಅಲ್ಲಾಹುವೇ, ಕರುಣೆಯ ಪ್ರವಾದಿಯವರಾದ ಮುಹಮ್ಮದ್ (ಸ) ರ

ಮಧ್ಯವರ್ತಿಯನ್ನಾಗಿಸಿ ನನ್ನ ಬೇಡಿಕೆಯ ಪೂರೈಕೆಗಾಗಿ ಪ್ರಾರ್ಥಿಸಲು ಕಲ್ಪಿಸಿದರು. (ತಿರ್ಮುಝಿ, ಇಬ್ಬು ಮಾಜ)

ಇದರಿಂದೆಲ್ಲ ನಮಗೆ ಮನವರಿಕೆಯಾಗುವ ವಿಷಯ ಏನೆಂದರೆ, ತವಸ್ಸುಲ್ ಎಂಬುದು ಪ್ರವಾದಿ ಮುಹಮ್ಮದ್ (ಸ)ರ ಆಶಿರ್ವಾದದೊಡನೆ ಮುಸಲ್ಮಾನರು ನಡೆಸಿ ಬರುತ್ತಿರುವ ಸುನ್ನತ್ತಾದ ಕಾರ್ಯವಾಗಿದೆ. ಇವೆಲ್ಲವನ್ನು ಕೂಡಿಸಿ ನೋಡುವುದಾದರೆ, ಇಸ್ಲಾಮಿಕ ವೀಕ್ಷಣೆಯ ಪ್ರಕಾರ ತವಸ್ಸುಲ್ ಸತ್ಕರ್ಮಗಳಿಂದ ಮಹಾನ್ ವ್ಯಕ್ತಿತ್ವಗಳ ಪ್ರಭೆಯಿಂದ ಅಲ್ಲಾಹುವಿನ ಶ್ರೇಷ್ಟ ನಾಮಗಳಿಂದ, ವಿಶೇಷಣೆ ಪ್ರಕೀರ್ತನೆಯ ಮೂಲಕ ಹಾಗೂ ಮಹಾನ್ ವ್ಯಕ್ತಿತ್ವಗಳ ಜೀವನ ಕಾಲದಲ್ಲಿ ಮರಣದ ನಂತರವೂ ತವಸ್ಸುಲ್ ಮೂಲಕ ಪ್ರಾರ್ಥಿಸಬಹುದಾಗಿದೆ.

ತವಸ್ಸುಲ್: ಮರಣದ ನಂತರ

ಉಸ್ಮಾನ್ ಬಿನ್ ಹನ್ಳಲ್ (ರ) ಹೇಳುತ್ತಾರೆ, ಓರ್ವ ವ್ಯಕ್ತಿ ತನ್ನ ಅಗತ್ಯವೊಂದರ ನಿಮಿತ್ತವಾಗಿ ಖಲೀಫ ಉಸ್ಮಾನ್(ರ) ಬಳಿಗೆ ನಿರಂತರವಾಗಿ ಹೋಗುತ್ತಿರುತ್ತಾರೆ. ನಡುವೆಯೊಮ್ಮೆ ದೂರುಗಾರನು ಉಸ್ಮಾನ್ ಬಿನ್ ಹನ್ಳಲ್ ರ ಬಳಿ ತನ್ನ ಅಹವಾಲನ್ನು ತೋರುತ್ತಾರೆ ಆಗ ಉಸ್ಮಾನ್ ಬಿನ್ ಹುಸೈಫ್ ಆ ವ್ಯಕ್ತಿಯೊಂದಿಗೆ, ತಾವು ವುಳೂಲ್ ನಿರ್ವಹಿಸಿ ಮಸೀದಿಗೆ ತೆರಳಬೇಕು. ಅಲ್ಲಿ ಎರಡು ರಕಅತ್ ನಮಾಜಿನ ನಂತರ ಹೀಗೆ ಪ್ರಾರ್ಥಿಸಬೇಕು.

'ಅಲ್ಲಾಹುವೇ, ಕಾರುಣ್ಯ ದೀಪವಾದ ನಮ್ಮ ಪ್ರವಾದಿ ಮುಹಮ್ಮದ್ (ಸ) ರನ್ನು ಮುಂದಿರಿಸಿ ನಾನು ಕೇಳುತ್ತಿರುವೆನು. ಈ ವಿಚಾರನವನ್ನು ನೆಬಿಯರ ಬಳಿ ಈ ರೀತಿಯಾಗಿ ವಿವರಿಸಿದರು “ಓ ಮುಹಮ್ಮದರೇ ನಾನು ತಮ್ಮನ್ನು ಮುಂದಿರಿಸಿ ಸರ್ವಶಕ್ತನಾದ ಪಾಲಕನೊಡನೆ ನನ್ನ ಅಗತ್ಯತೆಯನ್ನು ಕೋರುತ್ತಿರುವೆನು" ನಂತರ ಆ ವ್ಯಕ್ತಿಯು ಮತ್ತೊಮ್ಮೆ ಖಲೀಫರ ಬಳಿ ಹೋಗುತ್ತಾರೆ. ಆಗ ಕಾವಲುಭಟರು ಅವರನ್ನು ಸ್ವಾಗತಿಸುತ್ತಾರೆ. ಖಲೀಫರು ಅವರ ಅಹವಾಲುಗಳೆನ್ನೆಲ್ಲಾ ಸ್ವೀಕರಿಸಿ ಅಗತ್ಯತೆಗಳನ್ನೆಲ್ಲಾ ಪೂರೈಸಿ ಕೊಡುತ್ತಾರೆ. ಪ್ರವಾದಿ ಮುಹಮ್ಮದ್ (ಸ.ಅ)ರು ತನ್ನ ಬಳಿಗೆ ಕಣ್ಣನೋವಿನ ಮುಕ್ತಿಯೊಂದಿಗೆ ಹೀಗೆ ಹೇಳುವುದಾಗಿ ಉಸ್ಮಾನ್ ಬಿನ್ ಹುಸೈಫ್ ಕೇಳುದಲ್ಲದೆ, ನಂತರ ಆ ವ್ಯಕ್ತಿಯನ್ನು ಪೂರ್ಣ ಗುಣಮುಖನಾಗಿ ನೋಡಿರುವುದರಿಂದ ಹೀಗೆ ಮಾಡಲು ಸೂಚನೆ ನೀಡಿರುವುದು. (المعجم الصغير للطبراني)

ಇಸ್ತಿಗಾಸ:

ಭಾಷಾರ್ಥದಲ್ಲಿ 'ಇಸ್ತಿಗಾಸ್' ಎಂದರೆ ಸಹಾಯಭ್ಯರ್ಥನೆ ನಡೆಸುವುದು ಎಂದಾಗಿದೆ. ಇಸ್ತಿಗಾಸ ಎಂಬುದರಿಂದ ಉದ್ದೇಶಿಸುವುದೇನೆಂದರೆ, ಅಲ್ಲಾಹನು ತನ್ನ ಅಂಬಿಯಾಗಳಿಗೆ ಮತ್ತು ಔಲಿಯಾಗಳಿಗೆ ಕರುಣಿಸಿದ ಆಮಾನುಷಿಕ ಸಾಮರ್ಥ್ಯದ ಮೂಲಕ, ಅವರು ನಮಗೆ ಸಹಾಯ ಮಾಡುತ್ತಾರೆಂಬ ವಿಶ್ವಾಸದೊಂದಿಗೆ ಸಹಾಯಭ್ಯರ್ಥನೆ ನಡೆಸುವುದಾಗಿದೆ. ಒಬ್ಬ ತನ್ನ ಹೆತ್ತವರೊಂದಿಗೆ ತಿನ್ನಲು ಆಹಾರ ಕೊಡಿ ಎಂದು ಕೇಳುವುದಾದರೂ, ಅವನ ವಿಶ್ವಾಸವು ತನ್ನನ್ನ ಉಣಿಸುವವನು, ಹಸಿವು ನೀಗಿಸುವವನು ಅಲ್ಲಾಹನಾಗಿದ್ದಾನೆ ಎಂದಿರಬೇಕೆಂಬ ವಿಷಯದಲ್ಲಿ ಎರಡು ಮಾತಿಲ್ಲ. ಇಲ್ಲಿ ತಾಯಿಯ ತಂದು ಕೊಡುವ ಮನಸ್ಸನ್ನು ಮತ್ತು ಪ್ರವೃತ್ತಿಗಳನ್ನು ಉಂಟು ಮಾಡುವವನು ಅಲ್ಲಾಹನಲ್ಲವೇ?

ಅಭ್ಯರ್ಥಿಸಲ್ಪಡುವ ಬೇಡಿಕೆಗಳು ಮನುಷ್ಯ ಜೀವಿಗಳ ಸಾಮರ್ಥ್ಯಕ್ಕೆ ಮೀರದ ಅಥವಾ ಕಾರ್ಯಗಳಾಗಿರಬಹುದು. ಸಾಮಾನ್ಯ ಜನರಿಗೆ ಸಾಧ್ಯವಲ್ಲದ ಕಾರ್ಯವು ಬೇಡಲ್ಪಟ್ಟು, ಆ ರೀತಿ ಆ ಬೇಡಿಕೆಯನ್ನು ಅಲ್ಲಾಹನು ನೆರವೇರಿಸಿ ಕೊಡುವುದಾದರೆ, ಅದು ಆ ಪ್ರವಾದಿಯ, ವಲಿಯವರ ಮುಲ್‌ಜಿಝತ್ ಮತ್ತು ಕರಾಮತಾಗಿ ಪರಿಗಣಿಸಲ್ಪಡುತ್ತದೆ. ಇಲ್ಲಿ ಪ್ರಾರ್ಥಿಸುವವನು ಎಂದೂ ತನ್ನ ಕೋರಿಕೆಗಳನ್ನು ಪೂರೈಸುವುದು ಆ ಮಹಾನ್ ವ್ಯಕ್ತಿಯೆಂದು ನಂಬುವುದಿಲ್ಲ. ಬದಲಾಗಿ ಅಲ್ಲಾಹನಾಗಿದ್ದಾನೆ ಇದನ್ನು ಈಡೇರಿಸಿ, ನೆರವೇರಿಸಿ ಕೊಡುವುದೆಂಬ ವಿಶ್ವಾಸದೊಡನೆಯಾಗಿದೆ ಕೇಳಿಕೊಳ್ಳುವುದು. ಒಂದು ರೀತಿಯಲ್ಲಿ ನೋಡುವುದಾದರೆ ತವಸ್ಸುಲಿನ ಮತ್ತೊಂದು ತೆರನಾದ ಕಾರ್ಯಪ್ರವೃತ್ತಿಯಾಗಿದೆ ಇಸ್ತಿಗಾಸ್ ಇದನ್ನು ಇಸ್ತಿಶ್ಫಾಲ್ (استشفا) ಎಂದೂ ಹೇಳುತ್ತಾರೆ.

ಖುರ್‌ಆನ್ ಹೇಳುತ್ತದೆ. "ಅಲ್ಲಾಹನು ಅವನ ಸಂದೇಶವಾಹಕರು ರೂಢಿಯಂತೆ ಎಲ್ಲಾ ಸಮಯ ನಮಾಜ್ ನಿರ್ವಹಿಸುವ ಸತ್ಯವಂತರು, ಮತ್ತು ಝಕಾತ್ ನೀಡುವ ಸತ್ಯವಿಶ್ವಾಸಿಗಳಾಗಿದ್ದಾರೆ ನಿಮ್ಮ ಸಹಾಯಕರು. ಯಾರಾದರೂ ಅಲ್ಲಾಹನನ್ನು, ಅಂತ್ಯದೂತರನ್ನು ಮತ್ತು ಸತ್ಯವಿಶ್ವಾಸಿಗಳನ್ನು ತನ್ನ ಸಹಾಯಕರನ್ನಾಗಿಸಿ ಸ್ವೀಕರಿಸಿದರೆ ಅವನು ಅಲ್ಲಾಹುವಿನ ಜೊತೆಗಿರುವವನಾಗಿದ್ದಾರೆ. ನಿಶ್ಚಯವಾಗಿಯೂ ಅಲ್ಲಾಹುವಿನ ಜೊತೆಗಿರುವವರಾಗಿದ್ದಾರೆ ವಿಜಯಶಾಲಿಗಳು" (ಮಾಯಿದಾ 55,56)

ಮೇಲೆ ವಿವರಿಸಿದ ಆಯತ್ ಹೇಳಿರುವ "ವಲಿಯ್" ಎಂಬ ಪದದ ಅರ್ಥವು "ಸಹಾಯ" ಮಾಡುವವನು ಎಂದಾಗಿದೆ ಎಂದು ಇಮಾಂ ರಾಝಿ (ರ) ರವರು ಉಲ್ಲೇಖಿಸಿದ್ದಾರೆ.( مفاتيح الغيب فخر الدين الرازي)

ರಬೀಅತ್ತ್ ಬಿನ್ ಕಅಬ್ ಅಲ್ ಅಸ್ಲಮಿ (ರ) ಹೇಳುತ್ತಾರೆ: ನಾನು ಮುಹಮ್ಮದ್ ನೆಬಿ (ಸ.ಅ) ರೊಂದಿಗೆ ರಾತ್ರಿ ಕಳೆಯುತ್ತಿದ್ದಾಗ ಅವರಿಗೆ ವುಳೂಲ್ ನಿರ್ವಹಿಸುವ ನೀರು ಹಾಗೂ ಇತರೆ ಅವಶ್ಯಕತೆಗಳನ್ನು ಒದಗಿಸಿ ಕೊಡುತ್ತಿದ್ದೆ. ನೆಬಿ (ಸ.ಅ) ರು ನನ್ನೊಂದಿಗೆ ಹೇಳಿದರು, ನಿನಗೆ ಬೇಕಾದದ್ದು ಕೇಳಿಕೋ ನಾನು ಹೇಳಿದೆ, ಸ್ವರ್ಗದಲ್ಲಿ ನಾನು ನಿಮ್ಮೊಂದಿಗೆ ಇರಬೇಕು. ನೆಬಿಯವರು ಕೇಳಿದರು ಇದಲ್ಲದೆ ಬೇರೇನ್ನಾದರೂ? ನಾನು ಮತ್ತೆ ಹೇಳಿದೆ, 'ಇದಾಗಿದೆ ನನಗೆ ಬೇಕಾಗಿರುವುದು ಇದಲ್ಲದೆ ಬೇರೇನು ನನಗೆ ಬೇಕಾಗಿಲ್ಲ'. ಆಗ ಪ್ರವಾದಿ (ಸ.ಅ)ರು ಹೇಳಿದರು, ಅಲ್ಲಾಹನಿಗಾಗಿ ಸೂಜೂದನ್ನು ಅಧಿಕಗೊಳಿಸಿ. ನನ್ನನ್ನು ನಿನ್ನ ಸಹಾಯಕನನ್ನಾಗಿ ಮಾಡಿಕೊಡುವನು (صحيح مسلم) 

ಇಲ್ಲಿ ನಿವೇದಿಸಿರುವ ಇಂತಹದೊಂದು ಪ್ರಶ್ನೆಯನ್ನು ನೆಬಿಯವರು ಮತ್ತೇ ತಳ್ಳಿಹಾಕಲಿಲ್ಲ. ಅದು ಮಾತ್ರವಲ್ಲದೆ, ಅದಕ್ಕೆ ಸಹಾಯವಾಗುವಾಗ ನಿರ್ದೇಶನಗಳನ್ನು ನೀಡಿರುವುದು ಇಲ್ಲಿ ಗಮನಾರ್ಹವಾಗಿದೆ. ಪ್ರವಾದಿ ಮುಹಮ್ಮದ್ (ಸ.ಅ) ರವರು ಹೇಳಿದರು "ನಿರ್ಜನ ಪ್ರದೇಶದಲ್ಲಿ ದಿಕ್ಕು ತಪ್ಪುವುದೋ ಅಥವಾ ಯಾವುದೇ ನೆರವು ಅಗತ್ಯವಾಗಿ ಬಂದರೆ, ಕೂಡಲೆ ಅವನು ಓ ಅಲ್ಲಾಹನ ಪ್ರಿಯದಾಸರೇಸ ನನಗೆ ನೆರವು ನೀಡಿರಿ", ಕಾರಣವೇನೆಂದರೆ ನಿಮ್ಮ ದೃಷ್ಟಿಗೆ ಗೋಚರಿಸದ ಹಲವಾರು ಪ್ರಿಯ ದಾಸರಿದ್ದಾರೆ ಅಲ್ಲಾಹನಿಗೆ. (طبراني الحاكم الفتوحات الربانية للأذكار النووي) ಇಲ್ಲಿ ಪರಾಮರ್ಶಿಸಿರುವ عباد اللهಎಂಬ ಪದದಲ್ಲಿ ಮಲಕುಗಳು, ಸಜ್ಜನರು ಮತ್ತು ಅಬ್ದಾಲುಗಳು (ಸೂಫಿಸಂತರು) ಮುಂತಾವದವರು ಒಳಪಡುತ್ತಾರೆ. (الفتوحات الربانية)

ಇಬ್ ಕಸೀರ್ ಹೀಗೆ ವಿವರಿಸುತ್ತಾರೆ. ಇಮಾಮ್ ಅಹ್ಮದ್ ಬಿನ್ ಹಂಬಲ್ (ರ.ಅ) ಹೇಳುತ್ತಾರೆ. ನಾನು ನನ್ನ ಜೀವನದಲ್ಲಿ ಐದು ಬಾರಿ ಹಜ್ಜ್ ಕರ್ಮವನ್ನು ನಿರ್ವಹಿಸಿರುತ್ತೇನೆ. ಇದರಲ್ಲಿ ಮೂರು ಬಾರಿ ಕಾಲ್ನಡಿಗೆಯಾಗಿತ್ತು ಹಜ್ಜ್ ನಿರ್ವಹಿಸಿರುವುದು. ಹಾಗೆನೇ ಒಂದು ಸಲ ಮೂವತ್ತು ದಿಹರ್ಂಗಳಷ್ಟು ಖರ್ಚಾಗಿತ್ತು. ಮತ್ತೊಂದು ಬಾರಿ ಹಜ್ಜ್ ನಡಿಗೆಯಲ್ಲಿ ನನಗೆ ದಿಕ್ಕು ತಪ್ಪಿತು. ಆಗ ನಾನು ಅಲ್ಲಾಹುವಿನ ಪ್ರಿಯದಾಸರೇ, ನನಗೆ ಸರಿಯಾದ ದಾರಿ ತೋರಿಸಿರಿ, ಎಂದು ಪ್ರಾರ್ಥಿಸತೊಡಗಿದೆ. ಕೂಡಲೇ ನಾನು ಸರಿಯಾದ ದಾರಿ ತಲುಪಿದೆ. (البداية والنهاية)

 ಇಬ್ ಮಸೂದ್ (ರ.ಅ)ರವರ ವರದಿ ಮಾಡುತ್ತಾರೆ, ನೆಬಿ (ಸ.ಅ) ರವರು, ಹೇಳಿದರು "ಮರುಭೂಮಿಯಲ್ಲಿ ಪ್ರಯಾಣಿಸುತ್ತಿರುವಾಗ ನಿಮ್ಮ ಯಾತ್ರೆ ಮಧ್ಯೆ ಮೃಗ ಎಲ್ಲಿಯಾದರೂ ಕೈತಪ್ಪಿ ಹೋದರೆ ನೀವು ಹೀಗೆ ಪ್ರಾರ್ಥಿಸಿರಿ. "ಅಲ್ಲಾಹುವಿನ ಪ್ರಿಯ ದಾಸರೇ, ಅದನ್ನು ತಡೆದು ನಿಲ್ಲಿಸಿರಿ, ನಿಶ್ಚಯವಾಗಿಯೂ ಅಲ್ಲಾಹನಿಗೆ ಈ ಭೂಮಿಯಲ್ಲಿ ಅದನ್ನು ಹಿಡಿದಿಡಲು ಜನರಿದ್ದಾರೆ". ಈ ಹದೀಸಿನ ಬೆಳಕಿನಲ್ಲಿ ಇಮಾಂ ನವವೀ (ರ.ಅ)ರು ಅವರಿಗೆ ಉಂಟಾದ ಅನುಭವವನ್ನು ಹೀಗೆ ವಿವರಿಸುತ್ತಾರೆ. ನಾವು ಸ್ವಲ್ಪ ಮಂದಿ ಇದ್ದೆವು. ನಮ್ಮೊಂದಿಗೆ ಇದ್ದ ಮೃಗವೊಂದು ಕಾಣೆಯಾಯಿತು. ಆ ಸಮಯ ಈ ಪ್ರವಾದಿ ವಚನವು ನನಗೆ ಹೊಳೆಯಿತು ಅಲ್ಲಾಹುವಿನ ಪ್ರಿಯದಾಸರನ್ನು ನಾವು ಸಹಾಯ ಯೋಚಿಸಿದೆವು ಹಾಗೆ ನಮಗೆ ಆ ಮೃಗವು ಮರಳಿ ದೊರಕಿತು (شرح مذهب)   

ಇನ್ನು ಮರಣ ಹೊಂದಿರುವವರೊಂದಿಗೆ ಪ್ರಾರ್ಥಿಸಬಹುದಾ? ಎಂದು ಸಂದೇಹಿಸುವವರಿಗೆ ಖುರ್‌ಅನಿನ ಬಖರಾ ಸೂರತಿನ 154 ನೇ ಸೂಕ್ತದಲ್ಲಿ ಉತ್ತರವಿದೆ. "ಅಲ್ಲಾಹುವಿನ ಮಾರ್ಗದಲ್ಲಿ ವೀರ ಮೃತ್ಯುವಿಗೊಳಗಾದವರ ಕುರಿತು ಅವರು ಮರಣ ಹೊಂದಿದವರೆಂದು ಹೇಳಬೇಡಿ ಅವರು ವಾಸ್ತವದಲ್ಲಿ ಜೀವ ಉಳ್ಳವರಾಗಿದ್ದಾರೆ. ನೀವು ಅದರ ಬಗ್ಗೆ ತಿಳುವಳಿಕೆ ಯುಳ್ಳವರಾಗುತ್ತಿಲ್ಲ" ಎಂದು ಅಲ್ಲಾಹನು ಖುರ್‌ಆನಿನಲ್ಲಿ ಹೇಳಿರುತ್ತಾನೆ.

ಇದರಿಂದ ಅಲ್ಲಾಹುವಿನ ಇಷ್ಟ ದಾಸರ ಸಾಮರ್ಥ್ಯವು ಮರಣದ ನಂತರವೂ ಮುಂದುವರೆಯುತ್ತದೆ ಎಂದು ಸುಲಭವಾಗಿ ಸಾಬೀತಾಗುತ್ತದೆ. ಇಮಾಂ ರಮ್ಲಿ (ರ.ಅ) ರವರೊಂದಿಗೆ ಒಂದು ಪ್ರಶ್ನೆಯನ್ನು ಮುಂದಿಡಲಾಯಿತು ತೊಂದರೆಗೊಳಗಾದ ಜನಮಾನ್ಯರು ತಕ್ಷಣ "ಯಾ ರಸೂಲುಲ್ಲಾಹ್," ಅಥವಾ "ಯಾ ಶೈಖ್", ಎಂಬಿತ್ಯಾದಿ ಸಹಾಯಭ್ಯರ್ಥನೆ ವಚನಗಳನ್ನು ಉಪಯೋಗಿಸಿ ಸಹಾಯ ಯಾಚಿಸುವುದು ಅನುಮತಿಸಲ್ಪಟ್ಟಿರುವುದೇ? ಹಾಗೇ, ಮಹಾತ್ಮರಿಗೆ ಮರಣದ ನಂತರ ತನ್ನನ್ನು ಕರೆದು ಪ್ರಾರ್ಥಿಸುವವರಿಗೆ ನೇರವಾಗಲು ಸಾಧ್ಯವಾಗುವುದೇ? ಇಮಾಮರು ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ, ಅಲ್ಲಾಹುವಿನ ಅಂಬಿಯಾ ಮುರ್ಸಲಿಗಳು, ಔಲಿಯಾಗಳು, ಉಲಮಾ ಪಂಡಿತರು ಹಾಗೂ ಸಜ್ಜನರು ಮುಂತಾದವರು ಸಹಾಯಭ್ಯರ್ಥನೆ (ಇಸ್ತಿಗಾಸ್) ನಡೆಸುವುದು ಅನುಮತಿಸಲ್ಪಟ್ಟ ಕಾರ್ಯವಾಗಿದೆ. ಎಂದು ಮಾತ್ರವಲ್ಲದೇ ಮೇಲೆ ಸೂಚಿಸಲ್ಪಟ್ಟವರಿಗೆ ಮರಣ ನಂತರವೂ ಸಹಾಯ ಮಾಡುವುದು ಸಾಧ್ಯವಾದ ಕಾರ್ಯವಾಗಿದೆ. ನಿಶ್ಚಯವಾಗಿಯೂ, ಅಂಬಿಯಾಗಳು ಮುಅಜಿಝತ್ ಮತ್ತು ಔಲಿಯಾಗಳ ಕರಾಮತ್ತು ಮರಣದಿಂದ ಖಡಿತಗೊಳ್ಳುವುದಿಲ್ಲ (فتاوي الرملي)

ಆಹ್ ಸುನ್ನತಿನ ವಿಶ್ವಾಸದ ಪ್ರಕಾರ ಇಸ್ತಿಗಾಸ್ ಅನುಮತಿ ನೀಡಲ್ಪಟ್ಟ ಹಾಗೂ ಪ್ರವಾದಿ ಮುಹಮ್ಮದ್ (ಸ.ಅ)ರ ಕಾಲದಿಂದಲೇ, ಆಚರಿಸಿ ಬರುತ್ತಿರುವ ಕಾರ್ಯವೆಂದು ಇದರಿಂದ ವ್ಯಕ್ತವಾಗಿದೆ.

ಇಮಾಂ ತಖಿಯುದ್ದೀನ್ ಸುಭ್ಖಿ (ರ.ಅ) ಹೇಳುತ್ತಾರೆ, ಇಸ್ಲಾಮಿಕ್ ಚರಿತ್ರೆಯಲ್ಲಿ ತವಸ್ಸುಲ್ ಮತ್ತು ಇಸ್ತಿಗಾಸವನ್ನು ಮೊದಲನೆಯದಾಗಿ ಇಬ್ ತೈಮಿಯವರಾಗಿದ್ದಾರೆ ವಿರೋದಿಸಿರುವುದು ಇದರ ಮೂಲಕ ಮುಸ್ಲಿಂ ಬಿನ್ನತೆಯು ಮೈದೂರಿತು.

ಅಹ್ ಸುನ್ನತಿನ ಕೃತ್ಯವೂ ಪ್ರಪಂಚದಲ್ಲಿ ವ್ಯಕ್ತವೂ ಆಗಿರುವಂತಹ ವಿಶ್ವಾಸ ಪರವಾದ ರೀತಿ ರಿವಾಜುಗಳನ್ನು ಅರಿತು, ಜನ ಸಾಮಾನ್ಯರೆಲ್ಲರು ಅದರ ಬಗ್ಗೆ ತಿಳುವಳಿಕೆ ಮೂಡಿಸುವುದು ಪ್ರತಿಯೊಬ್ಬ ಪಂಡಿತನ ಧರ್ಮವಾಗಿದೆ.

ಬರಹ: ಅಮೀನ್ ಹುದವಿ ಖಾಝಿಯಾರಗಂ

(ಪ್ರಾಂಶುಪಾಲರು ದಾರುನ್ನೂರ್ ಕಾಶಿಪಟ್ಣ)

Related Posts

Leave A Comment

Voting Poll

Get Newsletter