ಹದೀಸ್ :ಕಿರು ವಿವರಣೆ

  ರಿಶುದ್ಧ ಹದೀಸ್ ಇಸ್ಲಾಂ ಧರ್ಮದಲ್ಲಿ ಪ್ರಧಾನವಾದ ಪ್ರಮಾಣವಾಗಿದೆ. ಪ್ರವಾದಿ ಪೈಗಂಬರ ವಚನಗಳು, ಕ್ರಿಯೆಗಳು ಅಂಗೀಕಾರಗಳು ಇವುಗಳನ್ನು ಹದೀಸ್ ಎಂದು ಕರೆಯಲಾಗುತ್ತದೆ. ಹೊರತಾಗಿ ಪರಿಶುದ್ಧ ಶರೀರದ ವಿಶೇಷತೆಗಳು ಹಾಗೂ ಪ್ರವಾದಿತ್ವಕ್ಕೂ ಮೊದಲು ಪವಿತ್ರಜೀವನದಲ್ಲಿ ನಡೆದ ಘಟನೆಗಳನ್ನೂ ಮತ್ತು ಕುರ್ಆನ್ ಅಲ್ಲದ ಅಲ್ಲಾಹನ ವಚನಗಳು(ಹದೀಸ್ ಕುದ್ಸಿಯ್ಯ) ಇದೇ ಹದಿಸ್ ಪಟ್ಟಿಗೆಗೆ ಸೇರುತ್ತದೆ. 

ಪ್ರವಾದಿಯ ಅಂಗೀಕಾರ: ಪ್ರವಾದಿ ಸನ್ನಿಧಿಯಲ್ಲಿ ಯಾರಾದರೂ ಏನಾದರೂ ಹೇಳುವಾಗ ಏನಾದರೂ ಪ್ರವರ್ತಿಸುವಾಗ ಅಥವಾ "ಓರ್ವ ಈ ರೀತಿ ಹೇಳಿದ್ದಾನೆ" ಎಂದು ಪ್ರವಾದಿಗೆ ಬೇರೊಬ್ಬರ ಮುಖಾಂತರ ತಿಳಿಯುವಾಗ ಅದನ್ನು ಪ್ರವಾದಿ ಹಿಯ್ಯಾಳಿಸದೆ, ವಿಮರ್ಶಿಸದೇ ಇದ್ದರೆ ಇದನ್ನು ಪ್ರವಾದಿ ಅಂಗೀಕಾರವೆಂದು ಕರೆಯಬಹುದು. ಕೆಲವೊಮ್ಮೆ ಹದೀಸ್ ಅಲ್ಲದ ಬೇರೆ ಪದಗಳನ್ನು ಇದೇ ಅರ್ಥದಲ್ಲಿ ಬಳಸುತ್ತೇವೆ. ಉದಾಹರಣೆಗೆ ಖಬರ್(خبر) ಸುನ್ನತ್(سنة) ಅಸರ್(أثر) ಮುಂತಾದವು. ಪರಿಶುದ್ಧ ಕುರ್ಆನ್ ಕಳೆದರೆ ಶಕ್ತಿಯುತವಾದ ಪ್ರಮಾಣವಾಗಿದೆ ಹದೀಸ್. ಆದರೆ ಇದನ್ನು ಕಡೆಗಣಿಸಿ ಕೇವಲ ಕುರ್ಆನ್ ವಚನ ವೀಕ್ಷಿಸಿ ಇಸ್ಲಾಂ ಕರ್ಮ ಶಾಸ್ತ್ರವನ್ನು ಆಶ್ಲೇಷಿಸಲು ಅಸಾಧ್ಯ. ಕಾರಣ ಕುರ್ಆನ್ ಎತ್ತಿ ಹೇಳುವ ಆಜ್ಞೆ, ನಿರೋಧನೆಗಳ ವಿವರಣೆಗಳು ಹದೀಸಲ್ಲಿ ಇರುತ್ತವೆ. 

 

ಆದರೆ ಕರ್ಮಶಾಸ್ತ್ರದ ನಿಯಮ ತಿಳಿಯಲು ಬರೀ ಕುರ್ಆನ್ ಸಾಕು ಹದೀಸಿನ ಅವಶ್ಯಕತೆ ಇಲ್ಲ ಎಂದು ವಾದಿಸುವವರು ಇದ್ದಾರೆ. ಅವರು ಹದೀಸಿನ ಪ್ರಮಾಣವನ್ನು ಅಂಗೀಕರಿಸುವವರಲ್ಲ. ಇಂತಹ ವಿಭಾಗಕ್ಕೆ ಆಹ್ಲ್ ಕುರ್ಆನ್ ಎಂದು ಕರೆಯುತ್ತೇವೆ. ಪ್ರವಾದಿ ಮಹಮ್ಮದ್(ಸ್ವ) ವರ್ಷಗಳ ಹಿಂದೆಯೇ ಈ ವಿಭಾಗದ ಆಗಮನದ ಕುರಿತು ಮುನ್ನೆಚ್ಚರಿಕೆ ನೀಡಿದ್ದಾರೆ. ಇವರ ಅಲ್ಪಸಲ್ಪ ಮಾತು ಆಲಿಸಿದರೆ ಸಾಕು, ಇವರು ಮೂಕತನದ ವಿಭಾಗವೆಂದು ತಿಳಿಯಬಹುದು. ಒಂದೊಮ್ಮೆ "ಇಮ್ರಾನ್ ಬಿನ್ ಹುಸೈನ್" ರವರ ಸನ್ನಿಧಿಯಲ್ಲಿ ಶಫಾಅತ್ತಿನ ಕುರಿತು ಚರ್ಚೆ ನಡೆಯುತ್ತಿರುವಾಗ ಓರ್ವರು ನಿಂತುಕೊಂಡು ಹೇಳಿದರು "ನೀವು ಕುರ್ಆನಲ್ಲಿ ಸೂಚಿಸಲಾಗದ ಕಾರ್ಯಗಳನ್ನು ಹೇಳುತ್ತಿದ್ದೀರಿ,ಆದ್ದರಿಂದ ಹದೀಸ್ ಕಡೆಗಣಿಸಿರಿ,ಬದಲು ಕುರ್ಆನಿಗೆ ಬನ್ನಿರಿ" ಎಂದರು.ಇದು ಕೇಳಿದಾಕ್ಷಣ ಕೋಪಕುಲರಾದ ಹುಸೈನ್ ಕೇಳಿದರು "ನೀವು ಕುರಾನ್ ಪಠಿಸಲಿಲ್ಲವೇ? ಅದರಿಂದ ಲುಹುರ್, ಅಸರ್, ಇಶಾ ನಾಲ್ಕು ರಕಅತೆಂದೂ ಮಗ್ರಿಬ್ ಮೂರೆಂದು ನಿಮಗೆ ಸಿಕ್ಕಿತೇ?? ಪ್ರವಾದಿ ಹೇಳಿದ್ದಾರೆ ಎಂದು ನಾವು ಉಲ್ಲೇಖಿಸಿದಾಗಲ್ಲವೇ ರಕಅತಿನ ಸಂಖ್ಯೆಯನ್ನು ತಿಳಿದದ್ದು.. ಒಂಟೆ,ಆಡು ಹಾಗೂ ದಿರ್ಹಮಲ್ಲಿ ಎಷ್ಟು ಝಕಾತ್ ನೀಡಬೇಕೆಂದೂ, ಏಳು ಸುತ್ತು ತ್ವವಾಫ್ ನಿರ್ವಹಿಸಬೇಕೆಂದೂ ಪ್ರವಾದಿ ನುಡಿದಿದ್ದಾರೆ ಎಂದು ನಾವು ತಿಳಿಸಿದಾಗಲ್ಲವೇ ನಿಮಗೆ ತಿಳಿಯುವುದು?!...ಎಂದು ಕೇಳಿದರು.

 

ಹದೀಸ್ ಎರಡು ವಿಭಾಗವಾಗಿ ವಿಂಗಡಿಸಲಾಗುತ್ತದೆ. ಸನದ್ ಮತ್ತು ಮತನ್. ಸನದ್ ಎಂದರೆ ಹದೀಸ್ ಉಲ್ಲೇಖಿಸಿದವರು ಯಾರು? ಅವರಿಗೆ ಯಾರ ಮುಖಾಂತರ? ಅವರಿಗೆ ಯಾರು ಹೇಳಿಕೊಟ್ಟರು?ಎಂಬುದನ್ನು ತಿಳಿಸುವುದಾಗಿದೆ. ಮತನ್ ಎಂದರೆ ಪ್ರವಾದಿ ಈ ರೀತಿ ನುಡಿದಿದ್ದಾರೆ, ಪ್ರವೃತ್ತಿಸಿದ್ದಾರೆ ಅಥವಾ ಅಂಗೀಕರಿಸಿದ್ದಾರೆ ಎಂಬುದನ್ನು ವಿವರಿಸುವುದಾಗಿದೆ. ಉದಾಹರಣೆಗೆ ಇಮಾಮ್ ಬುಖಾರಿಯಿಂದ ಉಲ್ಲೇಖನೆ:ನಮ್ಮೊಂದಿಗೆ ಮುಸದ್ದದ್ ಹೇಳಿದರು:ಇವರಿಗೆ ಯಹ್ಯಾರವರಿಂದ ನಿವೇದನೆ: ಇವರಿಗೆ ಅಬ್ದುಲ್ಲಾ ಇಬ್ನ್ ಹಫ್ಸ್ ಹೇಳಿಕೊಟ್ಟರು: ಇವರು ಹಫ್ಸ್ ಬಿನ್ ಆಸಿಂ ರವರಿಂದ ಕೇಳಿದರು:ಇವರಿಗೆ ಅಬೂ ಹುರೈರಾ ಹೇಳಿದರು: ಪ್ರವಾದಿ ಪೈಗಂಬರಿಂದ ಇವರು ನೇರವಾಗಿ ಈ ಮಾತು ಕೇಳಿದರು "ನನ್ನ ಮನೆ ಮತ್ತು ಮಿಂಬರಿನ ಎಡೆಯಲ್ಲಿರುವ ಸ್ಥಳವು ಸ್ವರ್ಗಲೋಕದ ತೋಟಕ್ಕೆ ಸಮಾನ. ನನ್ನ ಮಿಹ್ರಾಬ್ ಸ್ವರ್ಗದ ಹೌಳಿನ ಮೇಲೆಯಾಗಿದೆ." ಇಲ್ಲಿ ಮುಸದ್ದದ್ ಎಂಬುವುದರಿಂದ ಅಬೂಹುರೈರ ವರೆಗೆ ಇರುವುದು ಸನದ್ ಆಗಿದೆ.ಪ್ರವಾದಿ ವಚನವಾದ "ನನ್ನ ಮನೆ..... ಮೇಲೆಯಾಗಿದೆ" ಎಂಬುವುದು ಮತನ್ ಆಗಿದೆ.

 

ಲಕ್ಷಗಟ್ಟಲೆ ಹದೀಸ್ ಗಳು ಹಾಗೂ ಅದರ ಎಲ್ಲಾ ವಿಧದ ವ್ಯಾಖ್ಯಾನಗಳೂ, ನಿವೇದನೆ ಮಾಡಿದ ವ್ಯಕ್ತಿಗಳ ಕುರಿತು ಇರುವ ರೇಖೆಯೂ ಈ ಜ್ಞಾನಗೋಪುರದ ಭಾಗವಾಗಿದೆ. ಮಹಾನರಾದ ಮುಹಮ್ಮದ್ ಬಿನ್ ಶಿಹಾಬ್ ಸುಹರಿ ರವರು ಪಂಡಿತರಾದ ಉಮರ್ ಬಿನ್ ಅಬ್ದುಲ್ ಅಝೀಝ್ (ರ)ರವರ ಸಮ್ಮತದಿಂದ ಹದೀಸ್ ಕ್ರೋಢೀಕರಿಸಲು ಪ್ರಾರಂಭ ಕೊಟ್ಟರು.ಬಳಿಕ ಅಗ್ರಗಣ್ಯರು,ಹಲವಾರು ಪಂಡಿತರು ಹದೀಸ್ ವ್ಯಾಖ್ಯಾನಿಸಲು ಚಾಲ್ತಿಗೆ ಬಂದರು.ಹದೀಸ್ ರಚನೆಗಳಲ್ಲಿ (ನಮಗೆ ಲಭಿಸಿದವುಗಳಲ್ಲಿ) ಅತ್ಯಂತ ಹಳೆಯ ಕಿತಾಬ್ ಇಮಾಮ್ ಮಾಲಿಕ್ ರಚಿಸಿದ ಕಿತಾಬುಲ್ 'ಮುವತ್ವ' ಆಗಿದೆ.

 

ಹದೀಸಿನ ಕುರಿತು ವಿವರಿಸುವಾಗ ಉಸೂಲುಲ್ ಹದೀಸ್ ವಿವರಿಸಲು ಅನಿವಾರ್ಯವಾಗಿದೆ.ಹದೀಸ್ ನಿವೇದನೆ ಮಾಡಿದ ರಾವಿ(ನಿವೇದಿಸುವವರು)ರವರ ಆತ್ಮಚರಿತ್ರೆಯನ್ನು, ಸ್ವಭಾವವನ್ನು ವಿವರಿಸುವ ಮತ್ತಿನ್ನಿತವು ಒಳಗೊಂಡ ಬೃಹತ್ತಾದ ವಿಜ್ಞಾನ ಶಾಖೆಯಾಗಿದೆ "ಉಸೂಲುಲ್ ಹದೀಸ್". ಇದರ ಕುರಿತು ಹಲವರು ಚರ್ಚೆ ನಡೆಸಿದ್ದರೂ "ಖಾಳಿ ಅಬೂ ಮುಹಮ್ಮದ್ ಅಲ್ ಹಸನ್ ರಾಮಹುರ್ಮುಸಿ" ಈ ವಿಷಯದಲ್ಲಿ ಪ್ರಥಮವಾಗಿ ಪುಸ್ತಕ ರಚಿಸಿದರು. ಈ ಪುಸ್ತಕದ ಹೆಸರು "ಅಲ್ ಮುಹದ್ದಿಸುಲ್ ಫಾಸ್ವಿಲ್ ಬೈನ ರಾಯಿ ವಲ್ ವಾಯಿ" ಎಂದಾಗಿದೆ. ಬಳಿಕ ಹಲವಾರು ರಚನೆಯು ವ್ಯಾಖ್ಯಾನ ರಚನೆಯು ವ್ಯಾಪಕವಾಗಿ ನಡೆದಿದೆ.ಇಮಾಮ್ ನವವಿ, ರಂತಹ ಹಲವಾರು ಗಣ್ಯರು ಇದಕ್ಕೆ ಬ್ರಹತ್ ಕೊಡುಗೆ ನೀಡಿದರು. ನಷ್ಟ ಹೊಂದಲು ಸಾಧ್ಯವಿದ್ದ ಲಕ್ಷಗಟ್ಟಲೆ ಹದೀಸಿನ ಸ್ಥಿರತೆಗೆ ಕಾರಣ ಇಂತಹ ಪಂಡಿತರ ಕಠಿಣ ತ್ಯಾಗದ ಮೂಲವಾಗಿದೆ.

Related Posts

Leave A Comment

1 Comments

Voting Poll

Get Newsletter