ಭಾರತ: ವಿವಿಧತೆಯಲ್ಲಿ ಏಕತೆ

  ಭಾರತ ದೇಶ ಸಾಂಸ್ಕೃತಿಕ ವೈವಿಧ್ಯತೆ ಹೊಂದಿರುವ ದೇಶವೆಂದು ಉಲ್ಲೇಖಿಸುವಾಗ ಪ್ರಾಥಮಿಕವಾಗಿ ವಿವಿಧ ಜನಾಂಗ, ಧರ್ಮ, ಪಂಥ, ಜಾತಿ ಮತ್ತು ಸಂಸ್ಕೃತಿಗಳ ಲಕ್ಷಣಗಳ ಮೂಲಕ ಗುರುತಿಸಿಲ್ಪಡುತ್ತದೆ. 

ಧರ್ಮಗಳ ವೈವಿದ್ಯತೆ 

ಭಾರತ ದೇಶವು ಹಲವು ಧರ್ಮಗಳಿಂದ ನೆಲೆಸಿದ್ದರೂ ಅವುಗಳಲ್ಲಿ ಹಿಂದೂ ಧರ್ಮವು ಬಹುಪಾಲು 82.41 ಶೇಖಡ ಪಡೆದರೆ, ಮುಸ್ಲಿಂ 11.6% , ಕ್ರೈಸ್ತರು 2.3% ಹಾಗು ಸಿಖ್ಖ್ 1.99%, ಬುದ್ಧ0.7% ಜೈನ 0.4% ಶೇಕಡ ಪಡೆದಿದೆ. ಇವುಗಳಲ್ಲಿ ಹಿಂದೂ ಧರ್ಮವು ಶೈವ, ವೈಷ್ಣವ, ಶಕ್ತವಿಭಾಗಗಳಾಗಿ ಹಾಗೂ ಮುಸ್ಲಿಂ ಧರ್ಮವು ಶಿಯಾ, ಸುನ್ನಿ, ಮುರಾಜಿಆ, ಖವಾರಿಝ್ ವಿಭಾಗಗಳಾಗಿ ವಿಂಗಡಿಸಲಾಗಿದೆ. 

ಆರನೆ ಶತಮಾನದಲ್ಲಿ ಬುದ್ದ ಹಾಗೂ ಜೈನ ಧರ್ಮಗಳ ಪ್ರಭಾವ ಹೆಚ್ಚಾಗಿ ಹೊಂದಿಕೊಳ್ಳುತ್ತದೆ ಬಳಿಕ ಮಧ್ಯಕಾಲದ ಯುಗದಲ್ಲಿ ಸಿಖ್ ಧರ್ಮ ಉಗಮವಾಗುತ್ತದೆ. ಕ್ರಮೇಣವಾಗಿ ಪಾರ್ಸಿಕ, ಝರೋ ಸ್ಟೇಜ್, ಇಸ್ಲಾಂ ಹಾಗೂ ಕ್ರೈಸ್ತ ಧರ್ಮ ಹಲವು ಪ್ರದೇಶಗಳಲ್ಲಿ ಪಸರಿಸಲು ಪ್ರಾರಂಭವಾಯಿತು. 

ಭಾಷೆ ವೈವಿದ್ಯತೆ 

ಭಾರತ ದೇಶದಲ್ಲಿ ಹಲವು ಭಾಷೆಗಳನ್ನು ಭಾರತೀಯರು ಮಾತನಾಡಬಹುದು. ದ್ರಾವಿಡ್ ಭಾಷೆಯನ್ನು 20% ಮಾತನಾಡುವಾಗ ಇಂಡೋ ಆರ್ಯನ್ ಭಾಷೆಯನ್ನು 75% ಮಾತನಾಡುವರು. ಜಗತ್ತಿನಲ್ಲೇ ನಮ್ಮ ಭಾರತ ದೇಶವು ಭಾಷೆಯ ಪೈಕಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಭಾರತದಲ್ಲಿ ವಿವಿಧ ಜನಾಂಗದ ಜನರು ತನ್ನದೇ ಆದ ಭಾಷೆಗಳಲ್ಲಿ ಮಾತನಾಡುವರು. ಅದಲ್ಲದೇ, ಅವರಿಗೆ ತನ್ನದೇ ಆದ ಸಾಹಿತ್ಯವು ಲಭ್ಯ. ಸಂಸ್ಕೃತಿ, ಹಿಂದಿ, ಬೆಂಗಾಲಿ, ಅಸ್ಸಾಮಿ, ಗುಜರಾತಿ, ಮರಾಠಿ, ಉರ್ದು, ಪಂಜಾಬಿ, ತಮಿಳ್, ತೆಲುಗು, ಒರಿಯಾ, ಸಿಂಧಿ, ಮಲಯಾಳಂ, ಕಾಶ್ಮೀರಿ, ಕನ್ನಡ ಈ ಎಲ್ಲಾ ಭಾಷೆಗಳನ್ನು ಭಾರತೀಯರು ಪರಸ್ಪರ ಜನಗಳೆಡೆ ವ್ಯವಹರಿಸುವ ಪ್ರಮುಖ ಭಾಷೆಗಳಾಗಿದೆ. ದಕ್ಷಿಣ ಭಾಗದ ವ್ಯಕ್ತಿಗಳು ದ್ರಾವಿಡ ಭಾಷೆಗಳಾದ ತೆಲುಗು, ತಮಿಲ್, ಮಲಯಾಳಂ, ಕನ್ನಡ ಭಾಷೆಗಳೊಂದಿಗೆ ಪರಸ್ಪರ ಜನಗಳೆಡೆ ವ್ಯವಹರಿಸುತ್ತಾರೆ.     ಹೀಗೆಯೇ ಭಾರತದ ಮುಕ್ಕು ಮೂಲೆಯಲ್ಲೂ ಭಾಷೆಯ ವ್ಯತ್ಯಾಸ ಸರ್ವ ಸಾಧಾರಣ ಆದರಿಂದಲೇ ಭಾಷೆಗೆ ಒಂದು ಗಾಧೆ ಮಾತಿದೆ, ನೀರಿನ ರುಚಿ ಪ್ರತಿ ಮೈಲಿ ಬದಲಾಗುವಂತೆ ಭಾರತದಲ್ಲಿಪ್ರತಿ ನಾಲ್ಕು ಮೈಲಿಗೆ ಭಾಷೆಯೂ ಬದಲಾಗುತ್ತಿದೆ. ಇವು ಭಾರತದ ದೇಶದಲ್ಲಿ ವ್ಯಾಪಕವಾಗಿ ಕಂಡು ಬರಲು ಸಾಧ್ಯ. 

ಸಂಸ್ಕೃತಿಕ ವೈವಿಧ್ಯತೆ

ಭಾರತದಲ್ಲಿ ಹಲವು ಭಾಷೆಗಳು ಧರ್ಮಗಳು ಉಗಮಗೊಂಡಂತೆ ಹಲವು ಸಂಸ್ಕೃತಿಗಳು ಸಮಾಜದಲ್ಲಿಕಾಣಲು ಸಾಧ್ಯ. ಕೆಲವು ಸಂಸ್ಕೃತಿಗಳನ್ನು ಎಲ್ಲಾ ಜನತೆಯೂ ಒಗ್ಗೂಡಿ ಅಚರಿಸಲ್ಪಡುವರು. ಹಬ್ಬಗಳಲ್ಲಿ ದೀಪವಾಲಿ, ದಸರಾ, ರಕ್ಷಬಂದನ, ಹೋಲಿ, ಬಕ್ರೀದ್ ಇವೆಲ್ಲವನ್ನು ದೇಶದ ಎಲ್ಲಾಜನತೆಯೂ ಆಚರಿಸುತ್ತಾರೆ. ಆದರೆ, ಆಯಾ ಧರ್ಮಕ್ಕನುಸಾರವಾಗಿ ಕೆಲವು ಹಬ್ಬ ಹಾಗೂ ವಸ್ತ್ರ ಉಡುಪುಗಳಲ್ಲಿ ವ್ಯತ್ಯಾಸಗಳನ್ನು ಕಾಣಲು ಸಾಧ್ಯವಾಗಬಹುದು. 

ಪ್ರಕೃತಿ ವೈವಿದ್ಯತೆ 

ಭಾರತದಲ್ಲಿ ಪ್ರಕೃತಿಯೂ ಕಾಲಕ್ರಮೇಣ ಬದಲಾವಣೆಗೊಳ್ಳುವುದು ಸಹಜ. ಭಾರತದಲ್ಲಿ ನದಿಗಳು, ಮರುಭೂಮಿಗಳು, ಫಲವತ್ತಾದ ಮಣ್ಣುಗಳು, ನದಿತೀರ ಪ್ರದೇಶಗಳು ಪ್ರಕೃತಿ ವೈವಿಧ್ಯತೆಗಳಲ್ಲಿ ಒಳಗೊಂಡಿದೆ. ಜಗತ್ತಿನಲ್ಲೇ ಅಸ್ಸಾಮಿನ ಪ್ರದೇಶವಾದ ಚಿರ್ರಾಪುಂಜಿ ಅಧಿಕವಾಗಿ ಮಳೆಬೀಳುವ ಪ್ರದೇಶ ಇನ್ನೂ ರಾಜಸ್ಥಾನದಲ್ಲಿ ಮಳೆಯ ಆರ್ಭಟ ಅತೀ ವಿರಳ ಹಾಗೂ ಭಾರತದ  ಹಿಮಾಲಯ ಪ್ರದೇಶವಾದ ಕಾಶ್ಮೀರ ಚಳಿಯ ನಾಡು ಎಂದು ಪ್ರಸಿದ್ಧಿ ಪಡೆದಿದೆ ಒಟ್ಟಾರೆ ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧವಾದ ಪ್ರಕೃತಿ ಬದಲಾವಣೆಯನ್ನು ಕಾಣಬಹುದು. 

ಸಾಮಾಜಿಕ ವೈವಿಧ್ಯತೆ

ಭಾರತ ನಿರ್ದಿಷ್ಟಜಾತಿ ಧರ್ಮಗಳನ್ನೊಳಗೊಂಡ ದೇಶ. ಹೀಗಿರುವಾಗ ಎಲ್ಲಾ ಜನಾಂಗದ ಸಾಮಾಜಿಕ ನೆಲವುಗಳು ವ್ಯತ್ಯಾಸವಾಗಿರುತ್ತದೆ. ಭಾಷೆ, ಆಹಾರ ಪದ್ದತಿ, ಉಡುಪು, ಹಬ್ಬ ಇವೆಲ್ಲವೂ ಸಾಮಾಜಿಕವಾಗಿ ವ್ಯತ್ಯಾಸವಾಗಿ ರೂಪುಗೊಳ್ಳುತ್ತದೆ. ಭಾರತದಲ್ಲಿ ವಿವಿಧ ಧರ್ಮ ನಂಬಿಕೆ ಸಂಸ್ಕೃತಿ ಒಳಗೊಳ್ಳುವಾಗ ವಿವಿಧ ರೀತಿಯ ವ್ಯತ್ಯಾಸಗಳನ್ನು ಸಾಮಾಜಿಕ ನಿಲುವುಗಳಲ್ಲಿ ಕಾಣುವುದು ಅಚ್ಚರಿಯಲ್ಲ. 

ಭೌಗೋಳಿಕ ವೈವಿಧ್ಯತೆ

 ಭಾರತ ಶ್ರೀಮಂತ ದೇಶ. ಈ ನಾಡಿನಲ್ಲಿಅಚ್ಚಹಸಿರಾದ ಗುಡ್ಡಗಳು, ಮರುಭೂಮಿಗಳು, ಕಡಿದಾದ ಪರ್ವತಗಳು, ಹರಿಯುವ ಜಲಪಾತಗಳು, ನದಿಗಳು, ಫಲವತ್ತಾದ ಮಣ್ಣುಗಳು, ಈ ಭಾರತದ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. 

ಭೌಗೋಳಿಕವಾಗಿ ಭಾರತ ಕೆಲವು ವಿಭಾಗಗಳನ್ನು ವಿಂಗಡಿಸಲಾಗಿದೆ. 

  1. ಹಿಮಾಲಯ ಪ್ರದೇಶದಲ್ಲಿ ಕಾಶ್ಮೀರ, ಕಂಗ್ರ, ನೇಪಾಲ, ಬೂತಾನ್, ಸಿಕ್ಕೀಂ, 
  2. ಫಲತ್ತಾದ ಪ್ರದೇಶ, ನೀರಿನಲ್ಲಿ ಭರಿತವಾದ ಪ್ರದೇಶ ಗಂಗಾ, ಬ್ರಹ್ಮಪುತ್ರ ಇಂದೂಸ್, 

ಪುರಾತನದ ಪಾರ್ಸಿಕರು ಇಂದೂಸ್ ನದಿಯನ್ನು ಹಿಂದು ಎಂದು ಕರೆಯಲ್ಪಟ್ಟರು. ಹಾಗೂ ಗ್ರೀಕ್ ರವರು ಸಿಂದು ಎಂದು ನಾಮಕರಣ ಮಾಡಿದರು. ಬಳಿಕ ಅವರು ಈ ದೇಶಕ್ಕೆ ಇಂಡಿಯಾ ಎಂಬ ನಾಮವನ್ನು ನೀಡಿದಲ್ಲದೆ ಇಲ್ಲಿ ಜೀವಿಸುವ ಜನತೆಗೆ ಇಂಡಿಯನ್ಸ್ ಭಾರತೀಯರೆಂದು ಪ್ರಖ್ಯಾಪಿಸಿದರು. ಮಧ್ಯಯುಗದ ಬರಹಗಾರರು ಹಿಂದೂಸ್ಥಾನ್ ಎಂಬ ಹೆಸರನ್ನು ಬಳಕೆ ಮಾಡಲು ಪ್ರಾರಂಭಿಸಿದರು.

  1. ಪಶ್ಚಿಮ ಹಾಗೂ ಪೂರ್ವ ಘಟ್ಟಗಳಲ್ಲಿರುವ ಪ್ರದೇಶ 
  2. ಬಾರತ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜೀವಿಸುವ ಇಂಡೋ ಆರ್ಯನ್ ಜನರು 

ಭಾರತದಲ್ಲಿ ಪಂಜಾಬ್ ರಾಜ್ಯವು ರೈತರ ನಾಡು ಎಂದು ಖ್ಯಾತಿ ಪಡೆದಿದೆ ಕಾರಣ ಆ ರಾಜ್ಯದಲ್ಲಿ ಅಧಿಕವಾಗಿ ಕೃಷಿ ಉತ್ಪಾದಿಸಲಾಗುತ್ತದೆ ಹಾಗೂ ಮಲೆನಾಡು ಎಂದು ಹೆಸರು ವಾಸಿಯಾದ ಘಟ್ಟ ಪ್ರದೇಶಗಳಲ್ಲಿ ಕಾಫಿಯನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಹೀಗೆಯೇ ಹಲವು ರಾಜ್ಯಗಳಲ್ಲಿ ವೈವಿಧ್ಯವಾದ ಕೃಷಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ.

ಭಾರತದಲ್ಲಿಹಲವು ಧರ್ಮ, ಸಂಸ್ಕೃತಿ, ಭಾಷೆ, ನಂಬಿಕೆ, ಹಬ್ಬ, ಹೀಗೆಯೇ ವಿಧ ವಿದವಾದ ವೈವಿಧ್ಯತೆಗಳು ತುಂಬಿದ್ದವು, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತವೆ. ಪರಸ್ಪರ ಜನರು ಪ್ರೀತಿ, ವಾತ್ಸಲ್, ಮಮತೆಯಿಂದ ಜೀವಿಸುತ್ತಾಮುಂದೆ ಸಾಗುತ್ತಿದ್ದಾರೆ. ಇತ್ತೀಚಿನ ಕಾಲದಲ್ಲಿ ಜನಸಮೂಹದೆಡೆಯಲ್ಲಿ ಅಕ್ರಮ, ಅನಾಚಾರ, ಮತ್ಸರ, ಗಲಭೆ, ತಾಂಡವಾಡಿ ಪರಸ್ಪರ ಶತ್ರುತ್ವ ರೀತಿಯಲ್ಲಿ ಬೆರೆಯುತ್ತಾ ಮನುಷ್ಯತ್ವವನ್ನೇ ಮರೆತುಬಿಟ್ಟಿದ್ದಾರೆ. ಇವೆಲ್ಲವನ್ನೂ ತ್ಯಜಿಸಿ ನಾವೆಲ್ಲರೂ ಭಾರತೀಯರೆಂದು ಪಡೆದು ಮನಸ್ಸಿನ ಅಂತರಾಳದಲ್ಲಿರುವ ಶತ್ರುತ್ವವನ್ನು ಬೇರ್ಪಡಿಸಿ ಮನಸ್ಸಿನ ಗುಡಿಯಲ್ಲಿ ಸಹೋದರ್ಯತೆ, ಸಹಾನುಭೂತಿ, ಸಾಮರಸ್ಯವನ್ನು ಬೆಳೆಸಿ ಪರರನ್ನು ಗೌರವಿಸಿ ನಾವೆಲ್ಲರೂ ಭಾರತೀಯರೆಂದು ಭಾವಿಸಿ ಒಗ್ಗಟ್ಟಾಗಿ ಜೀವಿಸೋಣ.

ಬರಹ: ತನ್ಸೀಫ್ ಅಣಜೂರು


 

Related Posts

Leave A Comment

Voting Poll

Get Newsletter