ಎಲ್ಲಾ ಕಣ್ಣುಗಳು ರಫಾ ಮೇಲೆ..!

ಹಸಿರಕ್ತದ ಮಡಿಲಲ್ಲಿ ನರಳಾಡಿದ ಪಾಲಸ್ತೀನಿಯರಿಗೆ "ರಫಾ" ಕೊನೆಯ ನಿರೀಕ್ಷೆಯಾಗಿತ್ತು ,ಸಾಲು ಸಾಲು ಸಂಕಷ್ಟಗಳಿಂದ ಬೆಂದ ಮನಸಿಗೊಂದು ಅಭಯ ಕೇಂದ್ರದಂತಿತ್ತು.ಆದರೆ ಪಾಲಸ್ತೀನಿಗರ ಪಾಲಿನ ಆ  ನಿರೀಕ್ಷೆಯೂ ನರಕವಾಗುವ ಹಂತದಲ್ಲಿದೆ ,ಗಾಝಾ ಪಟ್ಟಿಯಿಂದ ಅಟ್ಟಿಸಿ ರಫಾದವರೆಗೂ ಮುಟ್ಟಿಸಿದ ಇಸ್ರೇಲ್ ತನ್ನ ರಾಕ್ಷಸ ಪ್ರವೃತ್ತಿಯನ್ನು ಬಟಾಬಯಲುಗೊಳಿಸಿದೆ.

ಕಳೆದ ಫೆಬ್ರವರಿಯಲ್ಲಿಯೇ ರಫಾದ ಮೇಲೆ ಆಕ್ರಮಣ ನಡೆಸುವ ಕುರಿತಾಗಿ ನೆತನ್ಯಾಹು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ "OFFICE FOR THE  OCCUPIED PALASTINIAN  TERRITORY" ಇದರ ನಿರ್ದೇಶಕರಾಗಿರುವ ರಿಕ್ ಪೀಪರ್ ಕಾರ್ನ್ " ಎಲ್ಲಾ ಕಣ್ಣುಗಳು ಮುಂಬರುವ ರಫಾ ಆಕ್ರಮಣದ ಮೇಲಿದೆ " ಎಂಬ ಹೇಳಿಕೆ ನೀಡಿದ್ದರು. ಆದರೆ ಈ ಘೋಷಣೆಯು ಮೆ.28ರ ದಾಳಿಯ ಬಳಿಕ ಜಾಗತಿಕವಾಗಿ ಸದ್ದು ಮಾಡಿತು. ಕೃತಕ ಬುದ್ಧಿಮತ್ತೆಯ ಸಹಾಯದಿಂದ ನಿರ್ಮಾಣಗೊಂಡ ರಫಾದ ಚಿತ್ರಣಕ್ಕೆ ಈ ಶೀರ್ಷಿಕೆಯನ್ನು ನೀಡಲಾಗಿತ್ತು.

ಯುಧ್ದ ಪ್ರಾರಂಭವಾಗಿ 237ಕ್ಕಿಂತಲೂ ಹೆಚ್ಚಿನ ದಿನ ಕಳೆದು ಹೋಗಿದೆ,ನಿರಾಶೆ ಎಂಬಂತೆ 35000 ಹಚ್ಚಿನ ಜನ ಹತ್ಯೆಗೀಡಾಗಿದ್ದಾರೆ.ಈ ಸಂಧರ್ಭಗಳಲ್ಲಿ ಉಂಟಾದ ಪ್ರತಿಭಟನೆಗಳಿಂತಲೂ ಭಿನ್ನವಾಗಿ 47 ಮಂದಿಯ ಹತ್ಯಗೆ ಯಾಕಾಗಿ ಉಂಟಾಯಿತೆಂಬ ಪ್ರಶ್ನೆ ಉದಿಸಿರಬಹುದು,ಇವೆಲಕ್ಕೂ ರಫಾದ ಹಿನ್ನೆಲೆಯೇ ಉತ್ತರವಾಗಿದೆ.

ರಫಾ ಎಂಬುದು ಈಜಿಪ್ಟ್ ಗಡಿಭಾಗ ಹಾಗೂ ಗಾಝಾದ ದಕ್ಷಿಣ ಭಾಗದಲ್ಲಿರುವ ನಗರವಾಗಿದೆ.ಗಾಝಾದ ನಾಲ್ಕು ಭಾಗಗಳಲ್ಲಿ ಮೂರು ಕಡೆಯೂ ಇಸ್ರೇಲ್ ಹಿಡಿತ ಹೊಂದಿದೆ.ಆದರೆ ರಫಾದ ಮೇಲೆ ಹಿಡಿತ ಹೊಂದಿರಲಿಲ್ಲ.  ರಫಾ ಬೋರ್ಡಿಂಗ್ ಪಾಯಿಂಟ್ ಮುಖಾಂತರವಾಗಿ ವಿದೇಶಿ ಸಹಾಯಗಳು,ಆಹಾರ,ಔಷದಿ ಹಾಗೂ ಮತ್ತಿತರ ಮಾನವೀಯ ಅನುದಾನಗಳು ಪಾಲಸ್ತೀನ್ ಜನತೆಗೆ ತಲುಪುತ್ತಿದ್ದವು,ರಫಾದ ಮೇಲಿನ ದಾಳಿಯೊಂದಿಗೆ ಇವೆಲ್ಲಕ್ಕೂ ಏಟು ಬಿದ್ದಿತು.ಕತ್ತಲ ಕೋನೆಯಲ್ಲಿ ಕಣ್ಣು ಕಿತ್ತ ಅನುಭವ ಉಂಟಾದಿತು.

ರಫಾದ ಮೇಲಿನ ದಾಳಿಯನ್ನು ಜಗತ್ತೇ  ಕಟುವಾಗಿ ಖಂಡಿಸಿದೆ.ಫ್ರಾನ್ಸ್,ಬ್ರಿಟನ್ ಸೇರಿದಂತೆ ಇಸ್ರೇಲಿನ ಮಿತ್ರ ರಾಷ್ಟ್ರಗಳೇ ರಫಾದ ಮೇಲಿನ ದಾಳಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.ಇತ್ತ ಅಮೇರಿಕವು ರಫಾ ಆಕ್ರಮಣ ನಿಲ್ಲಿಸದಿದ್ದಲ್ಲಿ ಆಯುಧ ಸರಬರಾಜು ನಿಲ್ಲಿಸುವುದೆಂದು ಹೇಳಿಕೆ ನೀಡಿತ್ತು.ತರುವಾಯ ಪ್ರತಿಕ್ರಯಿಸಿದ ಅಮೇರಿಕ ರಾಷ್ಟ್ರೀಯ ಭಧ್ರತಾ ನಿರ್ದೇಶಕ ಜಾನ್ ಕಿರ್ಬಿ " ಇಸ್ರೇಲ್ ಪೂರ್ಣ ಮಟ್ಟದ ಭೂದಾಳಿಯೇನು ನಡೆಸಿಲ್ಲ "ಎಂಬ ಸಮಜಾಯಿಷಿ ಹೇಳಿಕೆ ನೀಡಿದ್ದರು.ಒಟ್ಟಿನಲ್ಲಿ ಅಮೇರಿಕಾ ನರಮೇಧಕ್ಕೆ ಪೂರ್ಣ ಬೆನ್ನುಲುಬಾಗಿಯೇ ನಿಂತಿದೆ.

ಯುದ್ಧ ಪ್ರಾರಂಭದಿಂದಲೂ ಇಸ್ರೇಲ್ ತನ್ನ ನಡೆಯನ್ನು ನಿರಾಯಾಸವಾಗಿ ಸಮರ್ಥಿಸುತ್ತಿದೆ. ತನ್ನ ಯುದ್ಧ ಪ್ಯಾಲಸ್ತೀನ್ ಜನತೆಯೊಂದಿಗಲ್ಲ ಬದಲಾಗಿ ಹಮಾಸ್ ಸಂಘಟನೆ ವಿರುದ್ಧವೆಂದು ವಾದಿಸುತ್ತಿದೆ. ಹಮಾಸ್ ಸಂಘಟನೆಯ ನಿರ್ಣಮವೇ ತನ್ನ ಗುರಿ ಎಂದು ಹೇಳಿಕೊಂಡಿದೆ." ನಮ್ಮ ಎಲ್ಲಾ ಒತ್ತೆಯಾಳುಗಳ ವಾಪಸತಿ ಮತ್ತು ಹಮಾಸಿನ ನಿರ್ಮೂಲನೆಯ ಗುರಿ ಸಾಧಿಸುವವರೆಗೆ ಯುದ್ಧ ನಿಲ್ಲುವುದಿಲ್ಲ"ಎಂದು ಬೆಂಜಮಿನ್ ನೆತನ್ಯಾಹು ಹೇಳಿಕೊಂಡಿದ್ದಾರೆ. "ಹಮಾಸ್" ಉಗ್ರಸಂಘಟನೆ ಎಂದು ಇಸ್ರೇಲ್ ಮತ್ತು ಮಿತ್ರ ರಾಷ್ಟ್ರಗಳು ವಾದಿಸಿದ್ದರೂ ವಿಶ್ವಸಂಸ್ಥೆ ಅಧಿಕೃತ ಹೇಳಿಕೆ ನೀಡಿಲ್ಲ.

ಅಕ್ಟೋಬರ್ 7 ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ಗಾಜ ಪಟ್ಟಿಯ ಮೇಲೆ ಮೇಲೆ ವಾಯುದಾಳಿಯ ಮಳೆಹರಿಸಿತ್ತು.ಅಕ್ಟೋಬರ್ ಅಂತ್ಯದ ವೇಳೆ ಇಸ್ರೇಲ್ ಭಧ್ರತಾ ಮಂಡಳಿ ಗಾಜ ಪಟ್ಟಿಯ ಉತ್ತರ ಮತ್ತು ಮಧ್ಯಭಾಗದಲ್ಲಿ ಭೂ ದಾಳಿಯನ್ನು ಆರಂಭಿಸಿತು.ಡಿಸೆಂಬರ್ ವೇಳೆಗೆ ತನ್ನ ಕಾರ್ಯ ವ್ಯಾಪ್ತಿಯನ್ನು ಚುರುಕುಗೊಳಿಸಿ ಹೆಚ್ಚಿನ ಕಡೆಗಳಲ್ಲಿ ಭೂ ದಾಳಿ ನಡೆಸಿತು.ಗಾಝಾ ಮಧ್ಯ ಭಾಗದ ಖಾನ್ ಯೂನಸ್ ಬಳಿಕದ ಸರದಿ ರಫಾ ಎಂದು ಎಲ್ಲರೂ ಭಾವಿಸಿದ್ದರು.ಇಸ್ರೇಲಿಗರ ದಾಳಿಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಉತ್ತರ ಭಾಗದಿಂದ ಅನೇಕರು ಸುರಕ್ಷತೆಗಾಗಿ ದಕ್ಷಿಣದ ರಫಾದೆಡೆ ಪಲಾಯಣ ಕೈಗೊಂಡರು. ಫೆಬ್ರವರಿಯಲ್ಲಿ ಗಾಜಾದ ಜನಸಂಖ್ಯೆಯ ಶೇ.50% ಮಂದಿ ರಫಾದತ್ತ ಪಲಾಯಣ ಮಾಡಿದ್ದರು.2 ಲಕ್ಷದಷ್ಟು ಜನಸಂಖ್ಯೆ ಹೊಂದಿದ್ದ ರಫಾ‌ನಗರದಲ್ಲಿ 1.8ಮಿಲಿಯನ್ ಗಿಂತಲೂ ಹೆಚ್ಚಿನ ಜನಸಂಖ್ಯೆಯಿದೆ.

ಇಸ್ರೇಲ್ ಹಾಗೂ ಹಮಾಸ್ ನಡುವೆ ಯುಧ್ದ ಸ್ಥಗಿತಗೊಳಿಸುವ ಸಲುವಾಗಿ ಹಲವು ಚರ್ಚೆ ನಡೆಯುತ್ತದೆ.ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿತು ಅಂತಯೇ ಯುಧ್ಧ ಸಂಪೂರ್ಣವಾಗಿ ಕೊನೆಗೊಳಿಸಲು ಹಮಾಸ್ ಆಗ್ರಹಿಸಿತು.ಆದರೆ ಇಸ್ರೇಲ್ ಇದನ್ನು ಒಪ್ಪಲಿಲ್ಲ.ಇತ್ಯರ್ಥ ಚರ್ಚೆ ವಿಫಲವಾದ ಹಿನ್ನೆಲೆ ರಫಾದ ಸಾಮಾನ್ಯ ನಾಗರಿಕರನ್ನು "ಅಲ್ ಮವಾಸಿ" ಎಂಬ ಪ್ರದೇಶಕ್ಕೆ ತೆರಳಲು ಇಸ್ರೇಲ್ ಆದೇಶ ನೀಡಿತು.ಹಲವರ ವಿರೋಧದ ನಡುವೆ ಇಸ್ರೇಲ್ ರಫಾದಲ್ಲಿ ಭೂದಾಳಿ ನಡೆಸುತ್ತದೆ.ಹಲವು ಪ್ರಧಾನ ಕೇಂದ್ರಗಳನ್ನು ವಶಪಡಿಸುತ್ತದೆ.ರಫಾ ಕ್ರಾಸಿಂಗ್ ಪಾಯಿಂಟ್ ಸೇರಿದಂತೆ ಹಲವು ಸ್ಥಳಗಳು ಇಸ್ರೇಲ್ ಭಧ್ರತಾ ಮಂಡಳಿಯ ತೆಕ್ಕೆಗೆ ಬರುತ್ತದೆ.

ಪಾಲಸ್ತೀನಿಗರು ಅತಂತ್ರ ಸ್ಥಿತಿಯಲ್ಲಿ ಮೂಕರಾಗಿ ಕುಳಿತಿದ್ದಾರೆ.ಸುರಕ್ಷಿತ ನೆಲೆ ಬಯಸಿ ಬಂದ ಪಾಲಸ್ತೀನಿಯರಿಗೆ ದಿಕ್ಕುತೋಚದಂತಾಗಿದೆ.ಮೇ 26 ರಂದು ಅಂತಾರಾಷ್ಟ್ರೀಯ ನ್ಯಾಯಾಲಯವು ಭೂದಾಳಿಯ ಸ್ಥಗಿತಗೊಳಿಸುವಂತೆ ಆದೇಶ ನೀಡುತ್ತದೆ.ಆದರೆ ಇಸ್ರೇಲ್ ಇವೆಲ್ಲವನ್ನು ಅವಗಣಿಸಿ ತನ್ನ ನೀಚ ನಡೆಯನ್ನು ಮುಂದುವರಿಸಿದೆ.

ಮೇ25ರ ವೇಳೆಗೆ ಹಮಾಸ್ ಇಸ್ರೇಲಿನ "ಟೆಲ್ ಅವಿವ್" ನಗರದ ಮೇಲೆ‌ ಮಿಸೈಲ್ ದಾಳಿಯನ್ನು ನಡೆಸುತ್ತದೆ.ಈ ದಾಳಿಯ ಹೊಣೆಯನ್ನೂ ಹಮಾಸ್ ಹೋರುತ್ತದೆ.ಈ ಆಕ್ರಮನದ ಹಿನ್ನೆಲೆ ರಫಾ ಪ್ರದೇಶದಿಂದ ಉಂಟಾಗಿದೆ ಎಂಬ ಅರೋಪವನ್ನು ಹೊರಿಸುತ್ತದೆ.ಮೇ27ರಂದು ನಿರಾಶ್ರಿತ ಕೇಂದ್ರ ಸಮೀಪಕ್ಕೆ ಬಾಂಬ್ ದಾಳಿಯನ್ನು ನಡೆಸಿದರು.ನಿರಾಶ್ರಿತರಿಂದ ತುಂಬಿ ತುಳುಕುತ್ತಿದ್ದ ರಫಾದ ಮೇಲೆ‌ ಬಾಂಬ್ ದಾಳಿ ನಡೆಸಿದಾಗ ಟೆಂಟ್ಗಳಿಗೆ ಬೆಂಕಿ ಹೊತ್ತಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 47 ಮಂದಿ ಅಸ್ತಂಗತರಾದರು.

ಈ ಫಟನೆಯಿಂದ ಜಗತ್ತೆ ಎಚ್ಚರಗೊಂಡಿತು.ರಫಾದತ್ತ ಜಗತ್ತೆ ದಿಟ್ಟಿಸಿ ನೋಡಿತು.ಇಸ್ರೇಲಿಗರ ಕ್ರೂರ ನರಮೇಧವನ್ನು ಕಂಡೂ ನಿದ್ರಿಸಿದವರಂತೆ ನಟಿಸಿದ ಹಲವೂ ನಟತಾರೆಯರೂ ಸದ್ಯ ಎಚ್ಚರಗೊಂಡಿದ್ದಾರೆ.ಇನ್ನೂ ಎಚ್ಚರಗೊಳ್ಳದ ನಟಿಸುವ ಮನುಜರನ್ನು ಅಂಧರೆನ್ನದೆ ಬೇರೆ ಏನನ್ನಬೇಕು..?.

ಸದ್ಯ ಜಗತ್ತಿನ ಎಲ್ಲಾ ರಾಷ್ಟ್ರಗಳು ಇಸ್ರೇಲಿನ ನಡೆ ಖಂಡಿಸಿ ಹಿಂಜರಿಯುವಂತೆ ಸೂಚಿಸಿದೆ.ಅಂತರಾಷ್ಟ್ರೀಯ ನ್ಯಾಯಾಲಯ ,WHO ಅದರಲ್ಲೂ ವಿಶೇಷವಾಗಿ ಅನೇಕ ಪಾಶ್ಚಾತ್ಯ ರಾಷ್ಟ್ರಗಳೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ‌.

ಹಮಾಸ್ ಮೇಳಿನ ದಾಳಿಯೆಂದು ಪಾಲಸ್ತೀನ್ ಜನತೆಯ ಹತ್ಯಾಕಾಂಡ ನಡೆಸಿದ ಬೆಂಜಮಿನ್ ನೆತನ್ಯಾಹು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲೂ ಮುಳುಗಿದ್ದಾನೆ.ಒಂದು ವೇಳೆ ಕದನ ವಿರಾಮದಿಂದ ಯುಧ್ಧ ಅಂತ್ಯಗೊಂಡರೆ ತನ್ನ ಮಿತ್ರ ಪಕ್ಷಗಳು ಕೈ ಬಿಟ್ಟು ಸರ್ಕಾರ ಪತನಗೊಳ್ಳುವ ಸಾಧ್ಯತೆಗಳು ಇವೆ.ಒಟ್ಟಿನಲ್ಲಿ ರಾಜಕೀಯದ ಅಮಲಿನಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿದೆ.ಪಾಲಸ್ತೀನ್ ಕುಡಿಗಳ ನರಳಾಟವು ಕರುಳನ್ನೇ ಹಿಂಡುತ್ತದೆ.ಆದಷ್ಟು ಬೇಗ ಯುಧ್ದ ಸುಖಾಂತ್ಯಗೊಂಡು ಶಾಂತಿ ನೆಲೆಸಲಿ. ಜೈ ಹಿಂದ್.

                                                                                       - ಅನಸ್ ಕೊಡಿಪ್ಪಾಡಿ [ ಪೂ.ವಿದ್ಯಾರ್ಥಿ SUAC ತೋಡಾರು ]

 

\

Related Posts

Leave A Comment

Voting Poll

Get Newsletter