ಈ ನಿರ್ಧಾರ ನ್ಯಾಯಯುತವೇ..?

ಈ ಭಾರತ ದೇಶ ಕಲಾತ್ಮಕ ವಿದ್ವಾಂಸರನ್ನು ಪ್ರೋತ್ಸಾಹಿಸಬೇಕಾಗಿದೆ,ಪ್ರಪಂಚದ ಹಲವು ಭಾಗಗಳಲ್ಲಿ ಭಾರತ ದೇಶದ ಕ್ರೀಡಾಳಲುಗಳು, ಕ ಲಾತ್ಮರು, ಹಾಗೂ ವಿದ್ವಾಂಸರು ಮಿಂಚಬೇಕಾಗಿದೆ. ಈ ಒಕ್ಕೂಟವೇ,ಇಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಲು ಒಬ್ಬಳ ಭವಿಷ್ಯವನ್ನು ಇಲ್ಲದಂತೆ ಮಾಡಿದರೇ,ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಲುಗಳ ಭವಿಷ್ಯದ ಸ್ಥಿತಿ ಏನಾಗಬಹುದು, ಒಂದು ದೇಶದ ಕ್ರೀಡಾಲುಗಳು ಕಲಾತ್ಮಕರು ದೇಶಕ್ಕೆ ಬೇಕಾಗಿ ಹಲವು ಪದಕಗಳನ್ನು ತಂದುಕೊಟ್ಟ ಕುಸ್ತಿಪಟ್ಟುಗಳು ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರೀಡಾಲುಗಳು ನಡೆಸಿದ ಪ್ರತಿಭಟನೆಯನ್ನು ಅನುಸರಿಸಿ ನ್ಯಾಯ ಒದಗಿಸುವ ಬದಲು,ಲೈಂಗಿಕ ಶೋಷಣೆಗೈದ ಆರೋಪ ಹೊತ್ತ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕ್ರೀಡಾಲುಗಳ ಹಿತಾಸಕ್ತಿಗಿಂತ ನಮಗೆ ರಾಜಕೀಯ ಹಿತಾಸಕ್ತಿಯೇ ಮುಖ್ಯ ಎನ್ನುವುದನ್ನು ಕೊನೆಗೂ ಘೋಷಿಸಿದೆ,ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಮತ ಚಲಾಯಿಸಿದವರು ಮೂರ್ಖರೇ ಅಲ್ಲದೆ ಬೇರೆ ಮಾತಿಲ್ಲ.

ಕುಸ್ತಿ ಭಾರತದ ಸಂಪ್ರದಾಯಿಕ ಕ್ರೀಡೆಯಾಗಿದೆ, ಇದು ಪುರುಷ ಪ್ರಧಾನ ಕ್ರೀಡೆಯಾಗಿದೆ, ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದೇ ಕಷ್ಟ ಎನ್ನುವ ನಿಟ್ಟಿನಲ್ಲಿ ಕುಸ್ತಿಯಂತಹ ಪುರುಷ ಪ್ರಧಾನ ಕ್ಷೇತ್ರದಲ್ಲಿ  ಮಹಿಳೆಯರು ಸಾಧನೆ ಮಾಡುವುದು ಸಣ್ಣ ವಿಷಯವೇನಲ್ಲ,ಕುಸ್ತಿ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಸಾಧನೆಗಳನ್ನು ಮೆರೆದ ಮಹಿಳೆಯರು ಭಾರತದ ಎಲ್ಲಾ ಮಹಿಳೆಯರಿಗೆ ಆದರ್ಶವಾಗಿದ್ದಾರೆ.ಆದರೆ! ಇಂದು ಮಹಿಳಾ ಕುಸ್ತಿಪಟ್ಟುಗಳ ಜೊತೆಗೆ ಸರಕಾರದ ವರ್ತನೆ ಯಾವ ರೀತಿಯಲ್ಲೂ ಸೀಮಿತವಲ್ಲಾ, ಬದಲಿಗೆ ಶೋಷಣೆಗಳ ವಿರುದ್ಧ ಪ್ರತಿಭಟಿಸಿದರೆ, ತಮ್ಮ ಹಕ್ಕುಗಳಿಗಾಗಿ ಬೀದಿಗಿಲಿದರೇ,ಲೈಂಗಿಕ ಕಿರುಕುಳ, ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದರೆ, ಮಹಿಳೆಯರ ಸ್ಥಿತಿ ಏನಾಗುತ್ತದೆ ಎನ್ನುವ ಎಚ್ಚರಿಕೆಯನ್ನು ದೇಶದ ಮಹಿಳೆಯರಿಗೆ ಸರಕಾರ ಇಂದು ನೀಡಿತು, ಕ್ರೀಡಾ ಪಟ್ಟುಗಳು,ಕಲಾತ್ಮಕರು ರಾಜಕಾರಣಿಗಳ ಮುಂದೆ ತಲೆ ತಗ್ಗಿ ನಡೆದರೆ ಮಾತ್ರ ಅವಕಾಶ ಎನ್ನುವ ಸಂದೇಶವನ್ನು ಕ್ರೀಡಾಲುಗಲಳಿಗೂ,ಕಲಾತ್ಮಕರಿಗೂ ಇಂದು ರವಾನಿಸಿತು.ಇದು ಕ್ರೀಡಾಲುಗಳಿಗೆ ಮಾತ್ರ ಸೀಮಿತವಲ್ಲ ಸಾಮಾನ್ಯ ಜನರಿಗೂ ಇದೇ ಸ್ಥಿತಿ ಗತಿ.

                                                                                                                                                                                             

                                                                                                                                                                                                         ರಿಝ್ವಾನ್ ಪಡೀಲ್

 

 

Files

Related Posts

Leave A Comment

Voting Poll

Get Newsletter