Dangerous-Snake-1600x2560ಆದು ಕರೆಕ್ಟಾಗಿ ಇಪ್ಪತ್ತನೇ ಶತಮಾನದ ಆರಂಭ ಕಾಲ. ಭಾರತೀಯ ಮುಸ್ಲಿಮರೆಡೆಯಲ್ಲಿ ಎರಡು ಪಂಗಡಗಳು ತಲೆಯೆತ್ತಿ ನಿಂತವು. ಬೇರೆ ಬೇರೆಯಾಗಿ ಹರಿದ ಯೋಚನಾ ಲಹರಿಯೇ ಆ ಪಂಗಡದ ಜನುಮದ ಮರ್ಮ. ಅವುಗಳೆಂದರೆ ದೇವ್‌ಬಂದಿ ಮತ್ತೊಂದು ಬರೇಲ್ವಿ!. ದೆಹಲಿಯಿಂದ ೧೫೩ ಕಿಲೋಮೀಟರ್ ದೂರದಲ್ಲಿರುವ ಒಂದು ಗ್ರಾಮವಾಗಿದೆ ದೇವ್‌ಬಂದ್. ಇಂದಿಗೂ ಹೇಳತಕ್ಕ ಅಭಿವೃದ್ದಿ ಕಾಣದ ಉತ್ತರ ಭಾರತದ ಗ್ರಾಮಗಳ ಪೈಕಿ ಅದೂ ಒಂದಾಗಿದೆ. ಸರಿ ಸುಮಾರು ೧೯೬೭ರ ಆಜುಬಾಜಿನಲ್ಲಿ ಮುಹಮ್ಮದ್ ಖಾಸಿಂ ನಾನೂತ್ವವಿ ಎಂಬವರ ಸಾರಥ್ಯದಲ್ಲಿ ಆರು ಮಂದಿ ಸೇರಿ ದಾರುಲ್ ಉಲೂಂ ಎಂಬ ಹೆಸರಿನಲ್ಲಿ ಆಧುನಿಕ ಶೈಲಿಯ ಧಾರ್ಮಿಕ ವಿದ್ಯಾಸಂಸ್ಥೆಯೊಂದನ್ನು ಹುಟ್ಟು ಹಾಕುತ್ತಾರೆ. ಅದುವೇ ಆ ಪುಟ್ಟ ಗ್ರಾಮ ಪ್ರಸಿದ್ದಿಗೆ ಬರಲು ಕಾರಣವಾದದ್ದು. ಈ ವಿದ್ಯಾಸಂಸ್ಥೆಗೆ ಅಂದು ನಾಯಕತ್ವ ನೀಡಿದವರು ಹಾಗೂ ಸಂಸ್ಥೆಯೊಂದಿಗೆ ಸಂಪರ್ಕವಿಟ್ಟುಕೊಂಡವರೇ ’ದೇವ್‌ಬಂದಿ’ಗಳು ಎಂಬ ಹೆಸರಿನಲ್ಲಿ ಗುರುತಿಸಲ್ಪಡುವುದು. ೧೮೨೪ರಲ್ಲಿ ಹಜ್ ಯಾತ್ರೆ ಕೈಗೊಂಡ ಇಸ್ಮಾಯಿಲ್ ದಹ್‌ಲವೀ ಎಂಬವರು ಅರೇಬಿಯಾದಲ್ಲಿ ಕಾರ್ಯಾಚರಿಸುತ್ತಿದ್ದ ವಹಾಬಿ ಪಂಗಡದ ಸಂಪರ್ಕಕ್ಕೆ ಬಂದು ಅದರಲ್ಲಿ ಪ್ರಭಾವಿತರಾಗಿ ಇಬ್ನು ಅಬ್ದುಲ್ ವಹಾಬಿ (೧೭೦೩-೧೭೮೭)ಯ ಆಶಯಾದರ್ಶವನ್ನು ಭಾರತಕ್ಕೆ ಆಮದು ಮಾಡುವ ಪ್ರಯತ್ನಕ್ಕೆ ಶುರುವಿಟ್ಟರು. ಅದಕ್ಕಾಗಿಯೇ ಅವರು ಬರೆದ ಕೃತಿಯಾಗಿತ್ತು ತಕ್‌ವಿಯತುಲ್ ಈಮಾನ್’ ಎಂಬುವುದು. ಇಷ್ಟರಲ್ಲೇ ಸುನ್ನೀ ವಿಶ್ವಾಸಾಚಾರದಲ್ಲೇ ಇದ್ದ ದೇಯೂಬಂದಿ ವಿದ್ವಾಂಸರಲ್ಲಿ ಕೆಲವರು ಇಸ್ಮಾಯಿಲ್ ದಹ್‌ಲವೀಯ ವಹಾಬಿ ಚಿಂತನೆಗೆ ಪ್ರಭಾವಿತರಾಗಿ ಅವರು ರಚಿಸಿದ್ದ ಕೃತಿಗಳನ್ನು ಬೆಂಬಲಿಸ ತೊಡಗಿದರು. ಇದರ ಗಂಭೀರತೆ ಅರ್ಥಮಾಡಿಕೊಂಡ ಅಹ್‌ಲೇ ಹಝ್ರತ್ ಇಮಾಂ ಅಹ್ಮದ್ ರಸಾಖಾನ್ ಬರೇಲ್ವಿ(೧೮೫೬-೧೯೨೧) ಎಂಬವರು ದೇಯೂಬಂದಿಗಳ ಹೊಸ ವಿಚಾರಧಾರೆಯ ವಿರುದ್ದ ರಂಗ ಪ್ರವೇಶ ಮಾಡಿ ಗಟ್ಟಿಯಾಗಿ ಧ್ವನಿ ಎತ್ತಿ ಪರಂಪರಾಗತ ವಿಚಾರಧಾರೆಯಲ್ಲಿ ವಿಶ್ವಾಸಿಗಳನ್ನು ಸಂಘಟಿಸುವ ಕೆಲಸಕ್ಕೆ ಇಳಿದರು. ಹೀಗೆ ಆಗಿತ್ತು ದೇಯೂಬಂದಿಗಳು ಮತ್ತು ಬರೇಲ್ವಿಗಳು ಎಂಬ ಹೊಸ ಪಂತಗಳು ಹುಟ್ಟಿಕೊಂಡದ್ದು. ಅನ್ವರ್ ಶಾಹ್ ಕಾಶ್ಮೀರಿ, ರಶೀದ್ ಅಹ್ಮದ್ ಗಂಗೋಯಿ, ಶಬೀರ್ ಅಹ್ಮದ್ ಉಸ್ಮಾನಿ, ಖಲೀಲ್ ಅಹ್ಮದ್ ಸಹಾಶನ್ಪೂರಿ, ಮುಹಮ್ಮದ್ ಇಲ್ಯಾಸ್, ಹುಸೈನ್ ಅಹ್ಮದ್ ಮದನಿ, ಮನ್ಸೂರ್ ನುಹ್‌ಮಾನಿ, ಅಬುಲ್ ಹಸನ್ ಅಲಿ ನದ್ವಿ, ಮುಹಮ್ಮದ್ ತಖೀ ಉಸ್ಮಾನಿ ಮೊದಲಾದವರು ದೇಯೂಬಂದಿ ನಾಯಕರಾಗಿ ಗುರುತಿಸಲ್ಪಟ್ಟವರು. ಫಿಕ್ಹ್‌ನಲ್ಲಿ ನಾಲ್ಕರಲ್ಲೊಂದು ಮದ್ಸ್‌ಹಬನ್ನೂ, ಹಕೀದದಲ್ಲಿ ಅಶ್‌ಹರೀ, ಮಾತುರೀದೀ ಪರಂಪರೆಯಲ್ಲೊಂದನ್ನೂ, ತಸವ್ವುಫಿನಲ್ಲಿ ಖಾದಿರಿ, ಜಿಸ್ತೀ, ನಕ್ಷಾಬಂದೀ ಸುಹ್‌ರವರ‍್ದೀ ಎಂಬೀ ತ್ವರೀಖತ್ತುಗಳನ್ನು ಅಂಗೀಕರಿಸುವವರು ತಾವೆಂದು ಕೆಲವೆಡೆ(ಉದಾ: ಅಲ್ ಮುಹನ್ನದ್ ೨೯,೩೦) ದೇಯೂಬಂದಿಗಳು ವಾದಿಸುತ್ತಾರೆ. ಇದು ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತ ಹೊಂದಿದೆ. ವಿನಾಃ ಕೃತಿಯಲ್ಲಿ ಅದನ್ನು ಕೈಬಿಡುತ್ತಾರೆ ಎಂಬುವುದು ಅವರ ಕಾರ‍್ಯ ಚಟುವಟಿಕೆಗಳಿಂದ ಸ್ಪಷ್ಟವಾಗಿ ತಿಳಿದು ಬರುವ ಸತ್ಯ. ಬರೇಲ್ವಿ ಎಂದು ಕರೆಯಲ್ಪಡುವ ಉತ್ತರ ಭಾರತದ ಸುನ್ನೀಗಳೊಂದಿಗೆ ದೇಯೂಬಂದಿಗಳಿಗಿರುವ ಭಿನ್ನತೆಯ ಮರ್ಮವು ಅದುವೇ ಆಗಿದೆ. ಅಹ್ಲ್ ಹದೀಸ್ ಮತ್ತು ಬರೇಲ್ವಿಗಳ ಮದ್ಯೆ ಮಿತವಾದದ ಹಾದಿ ಹಿಡಿಯಲು ಶ್ರಮಿಸಿದವರು ಆರಂಭ ಕಾಲಘಟ್ಟದ ದೇಯೂಬಂದಿಗಳು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ವಿಶ್ವ ವ್ಯಾಪಕವಾಗಿ ಮುಸ್ಲಿಮರನ್ನು ವಹಾಬಿವಾಹಕರಾಗಿ ಮಾಡಲು ನಡೆಸಿದ ನಿಗೂಡ ತಂತ್ರಗಳು ದೇಯೂಬಂದಿ ಸಹಿತ ಹಲವು ವಿದ್ಯಾಸಂಸ್ಥೆಗಳನ್ನೂ ಟಚ್ ಮಾಡದೇ ಇರಲಿಲ್ಲ. ಈಗಂತೂ ಅದು ಪೂರ್ಣವಾಗಿ ವಹಾಬೀ ಹಾದಿಯಲ್ಲೇ ಆಗಿದೆ. ಅಷ್ಟಕ್ಕೂ ದೇಯೂಬಂದಿಯ ಕಾರ‍್ಯಕ್ಷೇತ್ರಗಳನ್ನು ಎರಡಾಗಿ ವಿಭಜಿಸಬಹುದು. ಅದರಲ್ಲೊಂದು ವಿದ್ಯಾ ಕ್ಷೇತ್ರ. ದಾರುಲ್ ಉಲೂಂ ದೇಯೂಬಂದ್, ಮಸಾಹಿರುಲ್ ಉಲೂಂ, ಸಹರಾಂಪೂರ್, ನದ್ವತ್ತುಲ್ ಉಲಮಾ ಲಕ್ನೋ ಮೊದಲಾದ ಸಂಸ್ಥೆಗಳು ಈ ಕಾರ‍್ಯಕ್ಷೇತ್ರದಲ್ಲಿದೆ. ಮತ್ತೊಂದು ಭೋಧನಾ ಕ್ಷೇತ್ರ. ಇದಕ್ಕಿರುವ ವ್ಯವಸ್ಥಿತ ರೂಪವೇ ತಬ್ಲೀಗ್ ಜಮಾಅತ್. ೧೯೧೯ರಲ್ಲಿ ರೂಪುಗೊಂಡ ಜಂಇಯ್ಯತುಲ್ ಉಲಮಾ ಎ ಹಿಂದ್ ದೇವ್‌ಬಂದಿಗಳ ನಿಯಂತ್ರಣದಲ್ಲಿರುವ ಮತ್ತೊಂದು ಸಂಘಟನೆಯಾಗಿದೆ. ೧೯೨೬ರಲ್ಲಿ ಊರೂರು ಸುತ್ತಾಟಕ್ಕಿಳಿದ ತಬ್ಲೀಗ್ ಜಮಾಅತಿನ ಸ್ಥಾಪಕ ಶಾ ಮುಹಮ್ಮದ್ ಇಲ್ಯಾಸ್ ಎಂಬವರಾಗಿದ್ದಾರೆ. ಉತ್ತರ ಪ್ರದೇಶದ ಕಾಂದಲ ಎಂಬಲ್ಲಿ ಜನಿಸಿದ ಇಲ್ಯಾಸ್‌ರವರ ಮುಖ್ಯ ಗುರು ರಶೀದ್ ಅಹ್ಮದ್ ಗಂಗೋಯಿಯಾಗಿದ್ದಾರೆ. ಕೆಲ ವಿಷಯಗಳಲ್ಲಿ ಪಕ್ಕಾ ವಹಾಬಿ ಆದರ್ಶ ಮೈಗೂಡಿಸಿಕೊಂಡಿದ್ದ ಗಂಗೋಯಿಯ ವಿಚಾರಧಾರೆಯು ಕಡು ವಹ್ಹಾಬಿ ಚಿಂತನೆಯಲ್ಲೇ ಮುಳುಗಿತ್ತು ಎಂದು ಅದೇ ಶಿಷ್ಯ ಇಲ್ಯಾಸ್‌ರವರೇ ಬಹಿರಂಗವಾಗಿ ಹೇಳಿದ್ದುಂಟು. ಈ ಇಲ್ಯಾಸ್ ರವರು ಸ್ವಂತದ್ದಾಗಿ ಯಾವುದೇ ಕೃತಿ ರಚಿಸಲಿಲ್ಲ. ಆದರೆ ಅವರ ಕೆಲ ಕೈ ಬರಹಗಳು ’ಮಕಾತೀಬ್’ ಎಂಬ ಹೆಸರಲ್ಲಿ ಅಬುಲಾ ಹಸನ್ ನದ್ವಿಯವರೂ, ಬಾಯಿಮಾತುಗಳು ’ಮಹಫೂಳಾತ್’ ಎಂಬ ಹೆಸರಲ್ಲಿ ಮನ್ಸೂರು ನುಹ್‌ಮಾನಿ ಎಂಬವರು ಸಂಗ್ರಹಿಸಿ ಕೃತಿ ರೂಪಕ್ಕಿಳಿಸಿದ್ದಾರೆ. ತನಗುಂಟಾದ ಕೆಲ ಕನಸುಗಳ ಆಧಾರದಲ್ಲಿ ತಬ್ಲೀಗ್ ಜಮಾಅತನ್ನು ಹುಟ್ಟು ಹಾಕಿದ್ದೆಂದು ಇಲ್ಯಾಸ್ ಹೇಳುತ್ತಾರೆ. (ಮಲ್ಫೂಳಾತ್- ೫೧,೫೨) ದೆಹಲಿಯ ದಕ್ಷಿಣ ಭಾಗದಲ್ಲಿರುವ ಎಲ್ಲೇರ, ಬರತ್‌ಪೂರ್, ಮದುರ ಮೊದಲಾದ ಪ್ರದೇಶಗಳೂ ಸೇರಿದ ಮೇವಾತ್ ಎಂಬಲ್ಲಾಗಿದೆ ತಬ್ಲೀಗ್ ಜಮಾಅತಿನ ಉಗಮ. ಧಾರ್ಮಿಕವಾಗಿಯೂ ಶೈಕ್ಷಣಿಕವಾಗಿಯೂ ತೀರಾ ಹಿಂದುಳಿದಿದ್ದ ಮೇವತ್‌ನ ಜನರನ್ನು ಜಾಗೃತರನ್ನಾಗಿಸಲು ಇಲ್ಯಾಸ್ ತುಂಬಾ ಶ್ರಮಪಟ್ಟರು. ನಿರಂತರ ಪತ್ರಗಳ ಮುಖಾಂತರ ಅವರಿಗೆ ಭೋಧನೆ ನೀಡಿದರು. ಈ ಪ್ರಯತ್ನಗಳೇ ಕಾಲ ಕ್ರಮೇಣ ಕೋತಿಬಾ ಎಂಬ ಹೆಸರಲ್ಲಿ ಸಂಕಲನ ಮಾಡಿದ್ದು. ಮನೆಮನೆಗಳಿಗೆ ಹತ್ತಿ ಇಳಿದು ಬೀದಿ, ಮಸೀದಿಗಳನ್ನು ಕೇಂದ್ರಿಕರಿಸಿ ಜನರಿಗೆ ಖುದ್ದು ಮುಖಾಮುಖಿ ಬೋಧನೆ ನೀಡುವ ಪರಿಣಾಮಕಾರಿ ಶೈಲಿಯನ್ನು ಈ ಪಂಗಡ ನೆಚ್ಚಿಕೊಂಡಿದ್ದು. ವ್ಯಕ್ತಿ ಸಂಪರ್ಕದಲ್ಲಿ ನೇರ ನೇರವಾಗಿ ಬೋಧನೆ ನೀಡುವ ಈ ವಿಧಾನ ಮೇವಾತ್‌ನಲ್ಲೂ ಪರಿಸರ ಪ್ರದೇಶಗಳಲ್ಲೂ ಜನರನ್ನು ಹೆಚ್ಚಾಗಿ ಆಕರ್ಷಿಸಲ್ಪಟ್ಟು ಬಹಳಷ್ಟು ಮಂದಿ ಬದುಕಿನ ಶೈಲಿ ಬದಲಿಸತೊಡಗಿದರು ಎಂಬುವುದು ಎತ್ತಿ ಹೇಳಲೇಬೇಕಾದ ಸತ್ಯವಾಗಿದೆ. ಬಹಿರಂಗ ಸಮ್ಮೇಳನಕ್ಕೆ ಬದಲಾಗಿ ಜನ ಮದ್ಯೆ ಇಳಿದು ತಳಮಟ್ಟದಲ್ಲಿ ಖುದ್ದಾಗಿ ಸಂದೇಶ ತಲುಪಿಸಲು ತಬ್ಲೀಗಿಗಳು ದೈರ‍್ಯ ತೋರಿದರು. ಆದರೆ ಅದರ ಚುಕ್ಕಾಣಿ ಹಿಡಿದವರು ಬಿದ್‌ಅತ್ತಿನ ವಿಷ ಬೀಜವನ್ನು ಮೊದಮೊದಲಿಗೆ ಅಡಗಿಸಿಟ್ಟು ನಂತರ ಸಂದರ್ಭ ಸಿಕ್ಕಾಗ ಅದನ್ನು ವಿಸರ್ಜನೆ ಮಾಡದಿರುತ್ತಿದ್ದರೆ ದೇಶದಲ್ಲೇ ಅತೀ ದೊಡ್ಡ ಮುಸ್ಲಿಂ ಪಂಗಡವಾಗಿ ತಬ್ಲೀಗ್ ಜಮಾಅತ್ ಗುರುತಿಸಲ್ಪಡುತ್ತಿತ್ತು. ವಹಾಬೀ ಚಿಂತನೆಯನ್ನು ಒಳಗೆ ಅಡಗಿಸಿಟ್ಟು ಅಹ್ಲುಸುನ್ನದ ವೇಶ ತೋಡುವವರು ತಬ್ಲಿಗ್‌ಗಳು ಎಂದು ಸುನ್ನೀಗಳು ವಾದಿಸಿದರೆ ಕುರಾಪಿ- ಖುಬೂರಿ ಚಿಂತನೆಯ ವಕ್ತಾರರು ತಬ್ಲೀಗಿಗಳು ಎಂದು ವಹಾಬಿಗಳು ಆರೋಪಿಸುವ ಪಂಗಡವಾಗಿದೆ. ಈ ತಬ್ಲಿಗ್ ಜಮಾಅತ್ ಮತ್ತು ಅದಕ್ಕೆ ನೆರಳಾದ ದೇವ್‌ಬಂದಿ. ಎರಡು ವಿಭಾಗಕ್ಕೂ ಅವರದ್ದೇ ಆದ ನ್ಯಾಯಗಳಿದ್ದರೂ ವಹಾಬಿಸಂನ ಪ್ರತಿಯೊಂದು ಆರೋಪಗಳನ್ನು ಅಂಗೀಕರಿಸುತ್ತಾ ಸ್ವಂತ ಗುರುವರ‍್ಯರನ್ನೇ ನಿಂದಿಸಿ ವಹಾಬಿ ಚಿಂತನೆಯತ್ತ ಸಾಗುತ್ತಿರುವುದು ತಬ್ಲೀಗಿನ ಹೊಸ ಪೀಳಿಗೆಯಲ್ಲಿ ಗಮನಿಸಬಹುದು. ಅದೇ ಕಾರಣಕ್ಕೆ ತಬ್ಲೀಗಿನ ವಕ್ರ ಆಶಯ ಚಿಂತನೆಗಳ ಬಗ್ಗೆ ನಮ್ಮ ಮದ್ಯೆ ಚರ್ಚಿಸಲ್ಪಟ್ಟಿದೆ.

Related Posts

Leave A Comment

Voting Poll

Get Newsletter