ರಮಜಾನ್ ಹಾಗೂ ಆಧುನಿಕ ವೈದ್ಯಕೀಯ ಚಿಕಿತ್ಸೆ ವಿಧಾನ
Junaid Santyar

ರಮಜಾನ್ ಹಾಗೂ ಆಧುನಿಕ ವೈದ್ಯಕೀಯ ಚಿಕಿತ್ಸೆ ವಿಧಾನ

ಈ ಒಂದು ಪರಿಶುದ್ಧ ರಮಜಾನಿನಲ್ಲಿ ಉಪವಾಸವನ್ನು ನಿರ್ವಹಿಸುವಾಗ ನಮ್ಮ ಜೀವನದಲ್ಲಿ ತುಂಬಾ ಸಂಶಯಕರವಾದ ಸಂದರ್ಭಗಳು ಬರುತ್ತೆ. ಈ ಒಂದು ಆಧುನಿಕತೆಯ ವೈದ್ಯ ಲೋಕದಲ್ಲಿ ಬೆರಗಿರುವ ನಮಗೆ ಕರ್ಮ ಶಾಸ್ತ್ರ ಸಂಬಂಧಿಸಿ ಸಂಶಯಗಳು ಮೂಡಿಬರುವುದು ಸಾಧರಣವಾಗಿದೆ...ಆದುದರಿಂದ ನಮ್ಮ ದಿನನಿತ್ಯ ಉಪವಾಸದಲ್ಲಿ ಬರುವ ಹಾಗೂ ಆಧುನಿಕತೆಯ ವೈದ್ಯ ಲೋಕದಲ್ಲಿ ಬರುವ ಸಂಶಯಗಳನ್ನು ನಿವಾರಣೆ ಮಾಡುವುದಾಗಿದೆ ಈ ಲೇಖನದ ಉದ್ದೇಶ.

ಮೊದಲನೆಯದಾಗಿ ಉಪವಾಸದಲ್ಲಿ ತಂಬಾಕು  ಹಾಗೂ ಸಿಗರೇಟ್ ಉಪಯೋಗಿಸುವವರ ಉಪವಾಸವು ಅಸಿಂಧುವಾಗುತ್ತದೆ. ಬಿಗ್ಯತುಲ್ ಮುಸ್ತರಿಶಿದೀನ್ (بغية المسترشدين) ಇದರ ಲೇಖಕರು ಹೇಳುತ್ತಾರೆ ತುಂಬಾಕು ಅದೊಂದು ನೀಚವಾದ ಬಿದ್ಅತಾಗಿದೆ (ಪ್ರಾರಂಭ) ಅದರಿಂದ ಉಪವಾಸವು ಅಸಿಂಧುವಾಗುತ್ತದೆ.

ಅದೇ ರೀತಿ ನಮ್ಮಲ್ಲಿ ವಿಕ್ಸ್ ನಂತಹ ಉದ್ವಾಸಕ (ಇನ್ಹೆಲ್ )ಉಪಯೋಗಿಸುವವರಿದ್ದಾರೆ, ಅದರಿಂದ ಕೂಡ ಉಪವಾಸವು ಅಸಿಂಧುವಾಗುತ್ತದೆ. ಡಾ ಶೈಖೆ ನೂಹ್ ರವರು ಹೇಳುತ್ತಾರೆ "ಮೂಗಿನಿಂದ ಹಾಗೂ ಬಾಯಿಂದ ಉದ್ವಾಸಕ ಉಪಯೋಗಿಸಿದವರ ಉಪವಾಸ ಅಸಿಂಧುವಾಗುತ್ತದೆ" ಕಾರಣ ಉದ್ವಾಸದಿಂದ ಔಷಧಿಯು ಅಂತರಾಳಕ್ಕೆ (ಜೌಫ್) ತಲುಪುತ್ತದೆ.

ನಮ್ಮ ಮಧ್ಯದಲ್ಲಿ ತುಂಬಾ ಡಯಾಲಿಸ್ ಹಾಗೂ ಮೂತ್ರನಾಳನಾಲಿಕೆ (ಯುರೈನರ್ ಕಥೇಟರ್) ರೋಗಿಗಳಿದ್ದಾರೆ. ಕರ್ಮ ಶಾಸ್ತ್ರದ ಪ್ರಕಾರ ಅವರ ಟ್ಯುಬ್ ಪ್ರವೇಶಿಸುವ ಹಾಗೂ ಹೊರಗಿಡುವ ದಿವಸದಂದು ಉಪವಾಸವು ಅಸಿಂಧುವಾಗುತ್ತದೆ.ಬಾಕಿ ಇರುವ ದಿವಸಗಳಲ್ಲಿ ಸರಿಯಾಗುತ್ತದೆ.

ನಮ್ಮಲ್ಲಿ ಹೊಟ್ಟೆ ನೋವನ್ನು ಪರಿಶೀಲಿಸುವ ಜಟದ ದರ್ಶಕ (ಗೆಸ್ಟ್ರೂ ಸ್ಕೋಪ್) ಉಪಯೋಗಿಸುವ ರೋಗಿಗಳಿದ್ದಾರೆ .ಅವರು ಉಪವಾಸವು ಕೂಡ ಅಸಿಂಧುವಾಗುತ್ತದೆ. ಏಕೆಂದರೆ ಅಂತರಾಳಕ್ಕೆ (عين) ಒಂದು ವಸ್ತು        ಪ್ರವೇಶಿಸುವುದರಿಂದ ಉಪವಾಸವು ಅಸಿಂಧುವಾಗುತ್ತದೆ .

ಅದೇ ರೀತಿಯಲ್ಲಿ ನಮ್ಮಲ್ಲಿ ರಮಲಾನ್ ತಿಂಗಳಲ್ಲಿ ಕಣ್ಣಿನ ಔಷಧಿ (ಐಡ್ರೋಪ್ )ಹಾಗೂ ಕಿವಿಯ ಔಷಧಿ (ಇಯರ್ ಡ್ರೋಪ್)ಉಪಯೋಗಿಸುವವರಿದ್ದಾರೆ. ಶಾಫಿ ಮಝ್ಹಬಿನ ಸ್ವೀಕಾರ್ಯವಾದ ಅಭಿಪ್ರಾಯ ಪ್ರಕಾರ ಕಣ್ಣಿನ ಔಷಧಿ ಉಪಯೋಗಿಸುವವರ ಉಪವಾಸ ಅಸಿಂಧುವಾಗುವುದಿಲ್ಲ. ಕಾರಣ ಕಣ್ಣನ್ನು ಒಂದು ಅಂತರಾಳವಾ (ಜೌಫ್)ಗಿ  ಪರಿಗಣಿಸುವುದಿಲ್ಲ.ಅದೇ ರೀತಿ ಕಿವಿಯ ಔಷಧಿ ಉಪಯೋಗಿಸುವುದರಲ್ಲಿ ಕರ್ಮ ಶಾಸ್ತ್ರ ಪಂಡಿತರಲ್ಲಿ ಭಿನ್ನಾಭಿಪ್ರಾಯವಿದೆ.  ಸ್ವೀಕಾರ್ಯವಾದ ಅಭಿಪ್ರಾಯ ಪ್ರಕಾರ  ಉಪವಾಸ ಅಸಿಂಧುವಾಗುತ್ತದೆ. ಆದರೆ ಇಮಾಮ್ ಗಝ್ಝಲಿ  ಹಾಗೂ ಶಾತೀರಿ ಇಮಾಮಿನ ಪ್ರಕಾರ ಉಪವಾಸ ಅಸಿಂಧುವಾಗುವುದಿಲ್ಲ.

ಅದೇ ತರಹ ರಮಝಾನ್ ತಿಂಗಳಲ್ಲಿ ಸೂಜಿಗಳನ್ನು ಹಾಗೂ ಇಂಜೆಕ್ಷನ್ ಗಳನ್ನು ತೆಗೆಯುವ ರೋಗಿಗಳು ನಮ್ಮಲ್ಲಿದ್ದಾರೆ .ಅಂತರಾಳ (ಜೌಫ್) ದಲ್ಲಿ ಸೂಜಿ ಹಾಕಿದರೆ ಉಪವಾಸವು ಅಸಿಂಧುವಾಗುತ್ತದೆ. ಬದಲಾಗಿ ಸಾಧಾರಣ ತರಹ ನರಗಳಲ್ಲಿ ಹಾಕಿದರೆ ಅಸಿಂಧುವಾಗುವುದಿಲ್ಲ. ಆದ್ದರಿಂದ ಹೊಟ್ಟೆಯಲ್ಲಿ, ಗಂಟಲಲ್ಲಿ ಹಾಗೂ ಬಾಯಲ್ಲಿ ಸೂಜಿಯನ್ನು ಹಾಕಿದರೆ ಉಪವಾಸ ಅಸಿಂಧುವಾಗುತ್ತದೆ.

ಮೊಹಮ್ಮದ್ ಸಾಲಿಮ್ ಬೈಜಾನಿಯವರು ಹೇಳುತ್ತಾರೆ: ದೇಹದ ಯಾವ ಭಾಗದಲ್ಲಿಯೂ ಸೂಜಿಯನ್ನು ಹಾಕಿದರೆ ಉಪವಾಸವು ಅಸಿಂಧುವಾಗುವುದಿಲ್ಲ, (ಔಷಧಿಯು ದೇಹದ ಎಲ್ಲಾ ಭಾಗಗಳಲ್ಲಿಯೂ ತಲುಪಿದರು ಕೂಡ) 

ಅದೇ ರೂಪದಲ್ಲಿ ರಮಜಾನ್ ತಿಂಗಳಲ್ಲಿ ಚ್ಯೂಯಿಂಗ್ ಗಮ್ಮ್ ಉಪಯೋಗಿಸುವವರಿದ್ದಾರೆ.. ಕರ್ಮ ಶಾಸ್ತ್ರವಾಗಿ ಅದರ ನೀರಿನ ಅಂಶ ಎಂಜಲಿನ ಜೊತೆ ಮಿಶ್ರಣವಾಗಿ  ಅಂತರಾಳ (ಜೌಫ್)ಕ್ಕೆ ಪ್ರವೇಶಿಸಿದರೆ ಅಸಿಂಧುವಾಗುತ್ತದೆ.

 ಅದೇ ರೀತಿ ಉಪವಾಸದಲ್ಲಿ ಈಜುವವರು ನಮ್ಮ ಜೊತೆ ಇದ್ದಾರೆ
 ಅವರ ಅಂತರಾಳ (ಜೌಫ್)ಕ್ಕೆ ನೀರು ತಲುಪದಿದ್ದರೆ ಅವರ ಉಪವಾಸ ಸರಿಯಾಗುತ್ತದೆ. ಅವನ ಕಿವಿಯೊಳಗೆ ಅಥವಾ ಬಾಯಿಯೊಳಗೆ ನೀರು ಪ್ರವೇಶಿಸಿದರೆ ಉಪವಾಸವು ಅಸಿಂಧುವಾಗುತ್ತದೆ.  ಇಮಾಮ್ ರಮ್ಲೀ ಹೇಳುತ್ತಾರೆ : ಒಬ್ಬನ ರೂಢಿಯಲ್ಲಿ ಈಜುವಾಗ ನೀರು ಒಳಗೆ ಪ್ರವೇಶಿಸುವುದಾದರೆ ಅವನಿಗೆ ಈಜುವುದು ಹರಾಮ್ (ನಿಷಿದ್ಧ) ಹಾಗೂ ಖಂಡಿತವಾಗಿಯೂ ಅವನ ಉಪವಾಸವು ಅಸಿಂಧುವಾಗುತ್ತದೆ.
ನಾವು ತಿಂದ ಯಾವುದಾದರು ವಸ್ತು ಹಲ್ಲುಗಳ ಎಡೆಯಲ್ಲಿದ್ದರೆ ಅದನ್ನು ನುಂಗಿದರೆ ಉಪವಾಸವು ಅಸಿಂಧುವಾಗುತ್ತದೆ. ಡಾ ಹಸನ್ ಹೈತೋ ಹೇಳುತ್ತಾರೆ:  ಒಬ್ಬನ ಹಲ್ಲಿನ ಎಡೆಯಲ್ಲಿ ಏನಾದರೂ ಬಾಕಿ ಆದರೆ ಅವನಿಗೆ ಅದನ್ನು ಹೊರ ಪಡಿಸಲು ಕಡ್ಡಾಯವಾಗಿದೆ. ಅವನು ಇಚ್ಚಾ ಪೂರ್ವಕವಾಗಿ ಅದನ್ನು ನುಂಗಿದರೆ ಅವನ ಉಪವಾಸವು ಅಸಿಂಧುವಾಗುತ್ತದೆ. 

 ರಮಜಾನ್ ತಿಂಗಳಲ್ಲಿ ಟೂತ್ ಪೇಸ್ಟನ್ನು ಉಪಯೋಗಿಸುವವರಿದ್ದಾರೆ. ಅದು ಎಂಜಲಿನ ಜೊತೆ ಬೆರಗಿ ಅಂತರಾಳ(ಜೌಫ್)ಕ್ಕೆ ಪ್ರವೇಶಿಸಿದರೆ ಉಪವಾಸವು ಅಸಿಂಧುವಾಗುತ್ತದೆ. ಬದಲಾಗಿ ಅದರ ವಾಸನೆಯೂ ಅಲ್ಲಿ ಬಾಕಿಯಾದರೆ ತೊಂದರೆಯಿಲ್ಲ. ಕಾರಣ ಅದೊಂದು ವಸ್ತುವಲ್ಲ ಬದಲಾಗಿ ಗುರುತು ಮಾತ್ರವಾಗಿದೆ. ಆದ್ದರಿಂದಲೇ ನಮ್ಮ ಬಾಯಿಯೊಳಗೆ  ಹೊಗೆ ಅಥವಾ ಧೂಳು ಪ್ರವೇಶಿಸಿದರೆ ತೊಂದರೆ ಆಗುವುದಿಲ್ಲ ಕಾರಣ ಅದು ಕೂಡಾ ಒಂದು ವಸ್ತುವಲ್ಲ.

ರಮಜಾನ್ ತಿಂಗಳಲ್ಲಿ ನಾವೆಲ್ಲರೂ ಯಾತ್ರೆ ಮಾಡುವವರಾಗಿದ್ದೇವೆ. ಒಬ್ಬರ ಯಾತ್ರೆ 132 ಕಿ.ಲೋ ಮೀಟರ್ ಜಾಸ್ತಿ ಆದರೆ ಯಾತ್ರೆ ಆರಂಭಿಸುವಾಗ  ಉಪವಾಸವನ್ನು ಮುರಿಯಬಹುದು. ನಂತರದ ರಮಜಾನ್ ಪ್ರವೇಶಿಸುವ ಮುಂಚೆ ಅದನ್ನು ಕಳಹ್ ಆಗಿ ನಿರ್ವಹಿಸಬೇಕಾಗಿದೆ.

ಅದೇ ರೀತಿ ಗರ್ಭಿಣಿಯು ತನ್ನ ಮಗುವಿನ ಅಥವಾ ಸ್ವತಃ ಶರೀರದ  ಮೇಲೆ ಹೆದರಿದರೆ ಉಪವಾಸವನ್ನು ಬಿಡಬಹುದು. ಅವಳ ಸ್ವಂತ ಶರೀರದ ಮೇಲೆ ಮಾತ್ರ ಹೆದರಿ ಉಪವಾಸ ಬಿಟ್ಟರೆ ಅದನ್ನು ಕಝಾಆಗಿ ನಿರ್ವಹಿಸಿದರೆ ಸಾಕು. ಬದಲಾಗಿ ಮಗುವಿನ ಮೇಲೆ ಮಾತ್ರ ಹೆದರಿ ಉಪೇಕ್ಷಿಸಿದರೆ ಕಾಝಾಆಗಿ ನಿರ್ವಹಿಸುವುದು ಹಾಗೂ ಫಿದ್ಯವನ್ನು ಕೊಡಬೇಕಾಗಿದೆ. ಫಿದ್ಯ ಎಂದರೆ ಒಂದು ಊರಿನ ಸಾಧಾರಣ ಆಹಾರವಾಗಿರುತ್ತದೆ. ಸಾಧಾರಣವಾಗಿ 800 ಗ್ರಾಮಷ್ಟು ತೂಕವಿರುತ್ತದೆ.ಅದೇ ರೀತಿ ಕಫವನ್ನು ನುಂಗಿದರೆ ಉಪವಾಸವು ಅಸಿಂಧುವಾಗುತ್ತದೆ.

Related Posts

Leave A Comment

Voting Poll

Get Newsletter