ರಂಜಾನ್ ತಿಂಗಳನ್ನು ಸ್ವೀಕರಿಸಲು ಹತ್ತು ನಿರ್ದೇಶನಗಳು
ರಂಜಾನ್ ಸಜ್ಜನರ ಕಾಲವಾಗಿದೆ. ಇಂದು ವಿಶ್ವಾಸಿಯು ಹೃದಯ ನಂಬಿಕೆಯ ಮನೋಭಾವದಿಂದ ತುಂಬಿರುವ ಸಮಯ, ದೋಷದಿಂದ ದೂರವಿರಲು ಮತ್ತು ಆರಾದನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪರಸ್ಪರ ಸ್ಪರ್ಧಿಸುತ್ತಿರುವ ಸಮಯ. ಪ್ರವಾದಿ (ಸ) ಹೇಳುತ್ತಾರೆ: ರಂಜಾನ್ ನಲ್ಲಿ ಸ್ವರ್ಗದ ಬಾಗಿಲು ತೆರೆಯಲಾಗುವುದು, ನರಕದ ದ್ವಾರಗಳು ಮುಚ್ಚಲ್ಪಡುತ್ತವೆ ಮತ್ತು ರಂಜಾನ್ ಪ್ರಾರಂಭವಾದಾಗ ಪಿಶಾಚಿಗಳನ್ನು ಬಂಧಿಸಲಾಗುತ್ತದೆ. ವಿಶ್ವಾಸಿಗಳು ರಂಜಾನ್ ತಿಂಗಳನ್ನು ಸ್ವೀಕರಿಸಲು ತಿಂಗಳುಗಳ ಮುಂಚಿತವಾಗಿ ತಯಾರಾಗುತ್ತಾರೆ.ರಜಬ್ ತಿಂಗಳಿನಿಂದ, ವಿಶ್ವಾಸಿಗಳು" ಅಲ್ಲಾಹನೆ ನಮಗೆ ರಜಬ್ ಮತ್ತು ಶಅಬಾನ್ ತಿಂಗಳಲ್ಲಿ ಬರಕತ್ ವರ್ಶಿಸು ಮತ್ತು ರಂಜಾನ್ ನಮಗೆ ತಲುಪಿಸು"ಎಂಬ ಪ್ರಾರ್ಥನೆಯೊಂದಿಗೆ ಸ್ವಾಗತಿಸಲು ಸಿದ್ಧರಾಗುತ್ತಾರೆ. ಕರೋನಾ ಸಾಂಕ್ರಾಮಿಕ ರೋಗದ ಈ ದಿನಗಳಲ್ಲಿ ಆಧ್ಯಾತ್ಮಿಕತೆಯ ಕಾರ್ಯಗಳಲ್ಲಿ ತೊಡಗಲು ಸಾಧ್ಯವಾಗಬಹುದು.
ಕುತೂಹಲದಿಂದ ಕಾಯುತ್ತಿದ್ದ ರಂಜಾನ್‌ಗೆ ತಯಾರಿ ನಡೆಸಲು ನಾವು ಏನು ಮಾಡಬೇಕು?
1. ಶುದ್ಧ ಮನಸ್ಸಿನಿಂದ ರಂಜಾನ್ ತಿಂಗಳನ್ನು ಸ್ವೀಕರಿಸಿ.
ಮಾನಸಿಕ ಶುದ್ಧತೆಯು ಯಾವುದೇ ಚಟುವಟಿಕೆಯ ಆಧಾರವಾಗಿದೆ.ಅದನ್ನು ಪಾಪಗಳಿಂದ ಮುಕ್ತಗೊಳಿಸಬೇಕು. ಪ್ರಾಮಾಣಿಕ ಪಶ್ಚಾತ್ತಾಪದ ಮೂಲಕ ಪಾಪಗಳಿಂದ ದೂರವಿರಿ. ಐದು ಸಮಯದ ನಮಾಜ್ ಜಮಾಅತ್ ಆಗಿ ನಿರ್ವಹಿಸಲು ಪ್ರಯತ್ನಿಸಿ ಮತ್ತು ರಾವತಿಬ್ ಸುನ್ನತ್ ನಮಾಜ್ ನಲ್ಲಿ ವಿಶೇಷ ಗಮನ ಹರಿಸಿ .
2. ಕುಟುಂಬ ಸಂಬಂಧಗಳು ಮುರಿಯದರಿ.
ಪ್ರತಿ ಶುಕ್ರವಾರ ಬೆಳಿಗ್ಗೆ ಮನುಷ್ಯನ ಸತ್ಕರ್ಮಗಳು ಅಲ್ಲಾಹನ ಕಡೆ ತಲುಪಿಸುವಾಗ ಕುಟುಂಬ ಬಂಧವನ್ನು ಮುರಿಯುವವನ ಕಾರ್ಯಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರವಾದಿವರ್ಯರ ನುಡಿ ನೆನಪಿಡಿ.ಮಾತಾಪಿತರಲ್ಲಿ ಪ್ರತ್ಯೇಕ ನಡೆ ಇರಲಿ ಮತ್ತು ಅವರ ಜೊತೆಗಿನ ಸಂಬಂಧಗಳಿಗೆ ವಿಶೇಷ ಒತ್ತು ನೀಡಿರಿ.
3. ಸಂಘರ್ಷಣೆಗಳನ್ನು ಕೊನೆಗೊಳಿಸಿ.
ಸ್ನೇಹಿತರು, ನೆರೆಹೊರೆಯವರು ಮತ್ತು ಸಹೋದ್ಯೋಗಿಗಳಂತಹ ನಾವು ಸಂವಹನ ನಡೆಸುವ ಜನರೊಂದಿಗೆ ಸಂಘರ್ಷಣೆಗಳು ಇದ್ದಲ್ಲಿ, ಅದನ್ನು ಇತ್ಯರ್ಥಗೊಳಿಸಲು ಉಪಕ್ರಮವನ್ನು ತೆಗೆದುಕೊಳ್ಳಿ. ಮುಸ್ಲಿಂ ತನ್ನ ಸಹೋದರನೊಂದಿಗೆ ಮೂರು ದಿನಗಳಿಗಿಂತ ಹೆಚ್ಚು ಕಾಲ ಕೋಪಿಸಬಾರದು ಎಂಬ ಪ್ರವಾದಿ (ಸ) ರವರ ಎಚ್ಚರಿಕೆಯನ್ನು ನಾವು ಮರೆಯಬಾರದು. ಮನಸ್ಸಿನಲ್ಲಿ ದ್ವೇಷ ಅಥವಾ ಅಸೂಯೆ ಇಲ್ಲದೆ ಸತ್ಯವನ್ನು ಮಾತ್ರ ಹೇಳುವವನು ಅತ್ಯುತ್ತಮ ಮನುಷ್ಯ ಎಂದು ಪ್ರವಾದಿ (ಸ)ಹೇಳುತ್ತಾರೆ. ಆದ್ದರಿಂದ ಅಂತಹ ದ್ವೇಷ ಅಥವಾ ಅಸೂಯೆಯನ್ನು ಹೃದಯದಿಂದ ಕಿತ್ತೆಸೆಗೆಯಿರಿ.
4. ಸಮಯ ಕ್ರಮಿಕರಣೆ.
ರಂಜಾನ್ ಕ್ಕಾಗಿ ಈಗಲೇ ವೇಳಾಪಟ್ಟಿ ಪ್ರಾರಂಭಿಸಿ.ಚಾಟ್ ರೂಮ್‌ಗಳಲ್ಲಿ,ಟಿವಿ ಮತ್ತು ಮೊಬೈಲ್ ಆಟಗಳ ಮುಂದೆ ಅನಗತ್ಯವಾಗಿ ಸಮಯ ಕಳೆಯಬೇಡಿ.ಇಂಟರ್ನೆಟ್ ಬಳಕೆಯನ್ನು ಅಗತ್ಯವಾದದ್ದಕ್ಕೆ ಮಿತಿಗೊಳಿಸಿ (ಉದಾ. ಇಸ್ಲಾಮಿಕ್ ಸೈಟ್‌ಗಳು) ರಂಜಾನ್‌ಗೆ ಸಂಬಂಧಿಸಿದ ಉಪನ್ಯಾಸಗಳು / ಲೇಖನಗಳನ್ನು ಕೇಳಲು ಸಮಯವನ್ನು ಕ್ರಮೀಕರಿಸಿ.
5. ಉಪವಾಸವನ್ನು ಕಳಾಅ ನಿರ್ವಹಿಸುವವರು ಅದನ್ನು ತಕ್ಷಣ ಪೂರ್ಣಗೊಳಿಸಿ(ವಿಶೇಷವಾಗಿ ಮಹಿಳೆಯರು). ಆದಲ್ಲದವರು ಸುನ್ನತ್ ಆಗಿ ಉಪವಾಸ ಮಾಡಬೇಕು.
ಸೋಮವಾರ ಮತ್ತು ಗುರುವಾರ ಉಪವಾಸ, ಬರಾತ್ ರಾತ್ರಿ ಸೇರಿದಂತೆ ಶಾಬಾನ್ ನ 13, 14 ಮತ್ತು 15 ರಂದು ಉಪವಾಸ ಅನುಷ್ಠಾನಗೊಳಿಸಿ.ರಂಜಾನ್ ತಿಂಗಳ ನಂತರ ಪ್ರವಾದಿ (ಸ) ರವರು ಶಾಬಾನಿನಲ್ಲಿ ಹೆಚ್ಚು ಉಪವಾಸ ಮಾಡುತ್ತಿದ್ದರು.ಸುನ್ನಾತ್ತಾದ ಉಪವಾಸ ರೂಡಿ ಇಲ್ಲದವನಿಗೆ ಶಅಬಾನಿನ ಹದಿನೈದನೆಯ ನಂತರವೇ ಸುನ್ನತ್ ಉಪವಾಸ ಮಾತ್ರ ಮಾಡುವುದನ್ನು ನಿಷೇಧಿಸಲಾಗಿದೆ.ಕಡ್ಡಾಯವಾದ ಉಪವಾಸ ಕಳಾಅ ನಿರ್ವಹಿಸಲು ಹಾಗೂ ರೂಢಿ ಇರುವ ಸುನ್ನತ್ ಉಪವಾಸ ಹದಿನೈದನೆಯ ನಂತರ ನಿಷೇಧಿಸಲಾಗುವುದಿಲ್ಲ. ಅದೇ ರೀತಿ ಶಅಬಾನಿನ ಹದಿನೈದನೇ ತಾರೀಖಿನಂದು ಉಪವಾಸ ಮಾಡಿದರೆ ಶಬಾನಿನ ಅಂತ್ಯದವರೆಗೆ ಉಳಿದ ದಿನಗಳಲ್ಲಿ ಸುನ್ನತ್ ಉಪವಾಸ ಮಾಡಬಹುದು.
6. ರಂಜಾನ್ ಶಾಪಿಂಗ್.
ರಂಜಾನ್ ರಾತ್ರಿಗಳಲ್ಲಿ ಶಾಪಿಂಗ್ ಮಾಲ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಸಮಯ ಕಳೆಯುವುದನ್ನು ತಪ್ಪಿಸಿ. ಸಾಧ್ಯವಾದರೆ ಅಗತ್ಯವಾದ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿ. ಅದೇ ಸಮಯದಲ್ಲಿ,ನಿಮ್ಮ ಖರೀದಿಗಳಲ್ಲಿ ವಿತವಾಗಿಸಿ ಮತ್ತು ರಂಜಾನ್ ರಾತ್ರಿಗಳು ಆಹಾರ ಹಬ್ಬದ ರಾತ್ರಿಗಳಾಗಿ ಬದಲಾಗುವುದನ್ನು ತಡೆಯಲು ಅನಗತ್ಯ ಶಾಪಿಂಗ್ ಅನ್ನು ತಪ್ಪಿಸಿ. ಅನೇಕರಿಗೆ,ರಂಜಾನ್ ತಿಂಗಳು ವರ್ಷದ ಅತ್ಯಂತ ಹೆಚ್ಚು ಖರ್ಚಾಗುವ ತಿಂಗಳು.
7. ರಂಜಾನ್ ಬಜೆಟ್ :
ರಂಜಾನ್ ಬಜೆಟ್ ನಲ್ಲಿ ದಾನವನ್ನು ಪ್ರಮುಖ ಭಾಗವಾಗಿ ವಿಂಗಡಿಸಬೇಕು. ಅನಗತ್ಯ ಅಥವಾ ಅವಶ್ಯಕ ಖರ್ಚುಗಳನ್ನು ಕಡಿತಗೊಳಿಸಿ ದಾನಕ್ಕಾಗಿ ಉತ್ತಮ ಸಂಖ್ಯೆಯನ್ನು ಬೇರ್ಪಡಿಸಿ ಇಡಿ.ಅರ್ಹ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ದಾನ ನೀಡುವುದನ್ನು ವಿಶೇಷ ಗಮನ ಕೊಡಿ. ರಂಜಾನ್ ಸಮಯದಲ್ಲಿ ನಿಯಮಿತವಾಗಿ ಝಕಾತ್ ನೀಡುವವರು ಅದನ್ನು ನಿಖರವಾಗಿ ಲೆಕ್ಕಹಾಕಿ ಅರ್ಹರಿಗೆ ನೀಡಿ.
8. ಉಮ್ರಾ:
ರಂಜಾನ್‌ನಲ್ಲಿ ಉಮ್ರಾ ಬಹಳ ಪವಿತ್ರ. ಅದನ್ನು ಬಯಸುವವರು ಮುಂಚಿತವಾಗಿ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸುಬಹಿ ನಮಾಜ್ ಜಮಾಅತ್ ಆಗಿ ನಿರ್ವಹಿಸಿ ಸೂರ್ಯೋದಯದ ತನಕ ಅಲ್ಲಾಹನನ್ನು ಸ್ಮರಿಸಿ ದ್ಸಿಕ್ರ್ ನಲ್ಲಿ ಮುಳುಗಿದ ನಂತರ ಳುಹಾದ ಎರಡು ರಕಅತಗಳನ್ನು ನಿರ್ವಹಿಸಿದರೆ ಅವನಿಗೆ ಸಂಪೂರ್ಣ ಹಜ್ಜ್ ಮತ್ತು ಉಮ್ರಾ ನಿರ್ವಹಿಸಿದ ಪ್ರತಿಫಲ ನೀಡಲಾಗುತ್ತದೆ.
9. ರಂಜಾನ್ ಹಬ್ಬಕ್ಕೆ ಕುಟುಂಬ ಸದಸ್ಯರನ್ನು ಬರಮಾಡಿ.
ಅವರೊಂದಿಗೆ ರಂಜಾನ್ ಹಬ್ಬವನ್ನು ಸ್ವಾಗತಿಸಲು ಇತರ ಕುಟುಂಬ ಸದಸ್ಯರನ್ನು ಪ್ರೋತ್ಸಾಹಿಸಿ.ಕುಟುಂಬ ಮುಖ್ಯಸ್ಥರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಮಕ್ಕಳಿಗೆ ರಂಜಾನ್ ಮಹತ್ವವನ್ನು ವಿವರಿಸಿ ಮತ್ತು ಉಪವಾಸವನ್ನು ಪ್ರೋತ್ಸಾಹಿಸಿ.ರಂಜಾನ್ ಸಮಯದಲ್ಲಿ ಮನೆಕೆಲಸಗಳನ್ನು ಹೆಂಡತಿಯರಿಗೆ ಸಹಾಯ ಮಾಡುವ ರೀತಿಯಲ್ಲಿ ಮನೆಕೆಲಸಗಳನ್ನು ಆಯೋಜಿಸಿ. ಮನೆಯವರಿಗೆ ರಂಜಾನ್ ಬಗ್ಗೆ ತಿಳಿಯಲು ಸಹಾಯಕರವಾದ ಪುಸ್ತಕಗಳು / ಸಿಡಿಗಳನ್ನು ಒದಗಿಸಿ ಮತ್ತು ವೆಬ್‌ಸೈಟ್‌ಗಳನ್ನು ಪರಿಚಯಿಸಿರಿ.
10. ಕುರಾನ್ ಪಠಣ / ಅಧ್ಯಯನ:
ಕುರಾನ್ ಮತ್ತು ರಂಜಾನ್ ನಡುವಿನ ಸಂಪರ್ಕವು ಬೇರ್ಪಡಿಸಲಾಗದು ಎಂದು ಹೇಳಬೇಕಾಗಿಲ್ಲ.ಆದ್ದರಿಂದ,ಕುರಾನ್ ಪಠಣ ಮತ್ತು ಅಧ್ಯಯನಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಿ. ನಿಮ್ಮ ಸಮಯ ಮತ್ತು ಸಂದರ್ಭಗಳನ್ನು ಹೆಚ್ಚು ಉಪಯೋಗಿಸಿ ಖತ್ಂ ಮುಗಿಸಲು ಪ್ರಯತ್ನಿಸಿ. ರಂಜಾನ್‌ನಲ್ಲಿ, ಒಂದು ನಮಾಜ್ ನ ನಂತರ ಒಂದು ಜುಝಅ ಮುಗಿಸಲು ಸಾಧ್ಯವಾದರೆ ಐದು ಖತ್‌ಗಳು ಓದಿ ಮುಗಿಸಬಹುದು.ಮೂರು ಸಮಯದ ನಮಾಜಿನ ನಂತರ ಒಂದು ಜುಝಅ ಮುಗಿಸಲು ಸಾಧ್ಯವಾದರೆ ಮೂರು ಖತ್‌ಗಳು ಓದಿ ಮುಗಿಸಬಹುದು.ಪ್ರತಿ ನಮಾಜಿನ ನಂತರ ಕುರಾನ್‌ನ ನಾಲ್ಕು ಪುಟಗಳನ್ನು ಓದಿದರೆ ದಿನಕ್ಕೆ ಒಂದು ಜುಝಅವನ್ನು ಪೂರ್ಣಗೊಳಿಸಬಹುದು (5 * 4 = 20). ಇಷ್ಟೊಂದು ಓದಿ ಮುಗಿಸಲು ಐದು ನಿಮಿಷಗಳು ಸಾಕು. ಅಂತಹ ಸಂದರ್ಭದಲ್ಲಿ, ಕನಿಷ್ಠ ಒಂದು ಖತ್ಂ ರಂಜಾನ್‌ನಲ್ಲಿ ಓದಿ ಮುಗಿಸಲು ಸಾಧ್ಯವಾಗಬೇಕು.ಕುರಾನ್ ಪಠಿಸಲು ತಿಳಿಯದವರು ಅದನ್ನು ಕಲಿಯಲು ಪ್ರಯತ್ನಿಸಬೇಕು. ಅಂತಹ ಕೋರ್ಸ್‌ಗಳನ್ನು ನೀಡುವ ಅನೇಕ ಸಂಸ್ಥೆಗಳು ಲಭಿಸಬಹುದು.ಇಲ್ಲದಿದ್ದರೆ,ನಿಮಗೆ ತಿಳಿದಿರುವ ಯಾವುದೇ ಅಧ್ಯಾಪಕನನ್ನು ಹುಡುಕಿ.ಕುರ್‌ಆನ್‌ನ ವ್ಯಾಖ್ಯಾನವನ್ನು ಅಧ್ಯಯನ ಮಾಡಲು ಸಮಯವನ್ನು ಹುಡುಕಿ. ಅಲ್ಲಾಹನೇ! ಉತ್ತಮವಾದ ಸತ್ಕರ್ಮವನ್ನು ಮಾಡಲು ಭಾಗ್ಯ ನೀಡು. ಆಮೀನ್.
ಮೂಲ:ಫೈಝಲ್ ನಿಯಾಝ್ ಹುದವಿ
ಕನ್ನಡಕ್ಕೆ: ಮುಹಮ್ಮದ್ ಅಜ್ಮಲ್ ಉಜಿರೆ