ಪವಿತ್ರ ಪ್ರವಾದಿಯೊಂದಿಗೆ ರಂಜಾನ್ ನಲ್ಲಿ ಒಂದು ದಿನ
ಹಿಜಿರಾ ಎರಡನೇ ವರ್ಷದಲ್ಲಾಗಿದೆ ರಂಜಾನ್ ಉಪವಾಸ ಕಡ್ಡಾಯವಾಗಿದ್ದು, ಅದರಂತೆ ಪ್ರವಾದಿ (ಸ) ಅವರ ಜೀವನದ 9ವರ್ಷಗಳ ಕಾಲ ಉಪವಾಸ ಮಾಡುವ ಅವಕಾಶವಿತ್ತು. ಇತರ ಹನ್ನೊಂದು ತಿಂಗಳಿಗಿಂತ ಭಿನ್ನವಾಗಿ ಪ್ರವಾದಿ (ಸ) ರಂಜಾನ್ ಸಮಯದಲ್ಲಿ ವಿಶೇಷ ಆರಾಧನೆ ಮತ್ತು ಆಚರಣೆಗಳನ್ನು ಮಾಡುತ್ತಿದ್ದರು. ಪ್ರವಾದಿ ಮುಹಮ್ಮದ್ (ಸ.ಅ) ರಂಜಾನ್ ದಿನವನ್ನು ಹೇಗೆ ಕಳೆದರು? ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮತ್ತು ಅವುಗಳನ್ನು ಜೀವನದ ಒಂದು ಭಾಗವನ್ನಾಗಿ ಮಾಡುವುದು ನಮ್ಮ ರಂಜಾನ್ ದಿನಗಳನ್ನು ಜೀವಂತವಾಗಿಡಲು ಸಾಕಷ್ಟು ಸಹಾಯ ಮಾಡುತ್ತದೆ
ಸಹರಿ ಮತ್ತು ಬೆಳಗ್ಗೆ ಸಮಯ
ರಂಜಾನಿನಲ್ಲಿ ಪ್ರವಾದಿ (ಸ) ರವರ ರಂಜಾನ್ ದಿನವೂ ಸಹರಿಯೊಂದಿಗೆಯಾಗಿದೆ ಪ್ರಾರಂಭವಾಗುವುದು, ಪ್ರವಾದಿ (ಸ) ಅವರು ಸುಬಹಿ ಬಾಂಗಿನ ಸ್ವಲ್ಪ ಮುಂಚೆಯಾಗಿತ್ತು ಸಹರಿ ಮಾಡುತ್ತಿದ್ದದ್ದು, ಹದೀಸ್ ಪ್ರಕಾರ, ಪ್ರವಾದಿಯವರ ಸಹರಿ ಮತ್ತು ಸುಬುಹಿ ಬಾಂಗಿನ ನಡುವೆ ಕುರಾನಿನ ಕೇವಲ 50 ಸೂಕ್ತಗಳುಮಾತ್ರ ಇದ್ದವು. ಸಹರಿಯು ರಂಜಾನಿನ ಪ್ರಮುಖ ಸುನ್ನತಿಗಳಲ್ಲಿ ಒಂದಾಗಿದೆ. ಪ್ರವಾದಿ (ಸ) ಹೇಳಿದರು ನೀವು ಸಹರಿಮಾಡಿ ಏಕೆಂದರೆ ಸಹರಿಯಲ್ಲಿ ಬರಕತ್ ಇದೆ.(ಬುಖಾರಿ ಮುಸ್ಲಿಂ), ಪ್ರವಾದಿ (ಸ) ಅವರ ಕುಟುಂಬದೊಂದಿಗೆ ಮತ್ತು ಕೆಲವೊಮ್ಮೆ ಅವರ ಸಹಚರರೊಂದಿಗೆ ಸಹರಿ ಮಾಡುತ್ತಿದ್ದರು. ಇರ್ಭಾದ್ ಇಬ್ನು ಸಾರಿಯ (ರ) ಹೇಳಿದರು: ಪ್ರವಾದಿ ( ಸ) ರಂಜಾನಿನಲ್ಲಿ ಸಹರಿ ಮಾಡಲು ನನ್ನನ್ನು ಆಹ್ವಾನಿಸುತ್ತಿದ್ದರು. ಆಗ ಅವರು ಹೇಳಿದರು: ಬರಕತ್ ಆದ ಈ ಆಹಾರಕ್ಕೆ ಬನ್ನಿ. (ಅಬೂ ದಾವುದ್, ನಸಾಇ)
ಅಬ್ದುಲ್ಲಾ ಹಿಬ್ ಹಾಲಿತ್ ಹೇಳುತ್ತಾರೆ: ಸ್ವಹಾಬಿ ಗಳಲ್ಲಿ ಒಬ್ಬರು ಪ್ರವಾದಿ (ಸ)ರು ಸಹರಿಮಾಡುತ್ತಿರುವ ವೇಳೆ ಅವರು ಒಳಗೆ ಹೋದರು. ಆಗ ಪ್ರವಾದಿ (ಸ) ಹೇಳಿದರು: ಇದು ಅಲ್ಲಾಹನು ನಿಮಗೆ ನೀಡಿದ ಬರಕತ್ ಆಗಿದೆ, ಆದ್ದರಿಂದ ಅದನ್ನು ತ್ಯಜಿಸಬೇಡಿ. (ನಸಾಇ). ಹೆಚ್ಚುವರಿ ಸಹರಿ ಭೋಜನ ಆಹಾರವು ನೀರು ಮತ್ತು ಖರ್ಜೂರ ಆಗಿತ್ತು.
ಸಹರಿಯ ನಂತರ ಪ್ರವಾದಿ (ಸ.ಅ) ಸುಬುಹಿ ಬಾಂಗ್ ನ ತನಕ ಮನೆಯಲ್ಲಿ ಕಾಯುತ್ತಿದ್ದರು. ಬಾಂಗ್ ನ ನಂತರ ಎರಡು ರಕ್ಹತ್ ನಮಾಜನ್ನು ಮನೆಯಲ್ಲಿ ಲಘುವಾಗಿ ನಡೆಸುತ್ತಿದ್ದರು. ಮತ್ತು ಇಕಾ ಮತ್ ನ ಸಮಯದಲ್ಲಿ ಮಸೀದಿಗೆ ಹೋಗಿ ಮಸೀದಿಯಲ್ಲಿರುವ ಜನರಿಗೆ ಇಮಾಮ್ ಆಗಿ ಸುಬುಹಿ ನಮಾಜ್ ನಿರ್ವಹಿಸುತ್ತಿದ್ದರು. ಪ್ರಾರ್ಥನೆಯ ನಂತರ ಸೂರ್ಯೋದಯದ ತನಕ ಅಲ್ಲಾಹನ ذكرನಲ್ಲಿ ಮುಲುಗುತ್ತಿದ್ದರು. ಸೂರ್ಯೋದಯದ 20 ನಿಮಿಷಗಳ ನಂತರ ಲುಹಾ ನಮಾಜ್ ನಡೆಸುತ್ತಿದ್ದರು. ಹೀಗಾಗಿ ಪ್ರವಾದಿ ( ಸ) ರು ಸುಬುಹಿ ನಮಾಜ್ ಮಾಡುವವರು ಮತ್ತು ಸೂರ್ಯೋದಯದ ನಂತರ ذكر ಗಳಲ್ಲಿ ಮುಳುಗುವ ವರು ಹಾಗೂ ನಂತರ ಲುಹಾ ನಮಾಜ್ ಮಾಡುವವರಿಗೆ ಸಂಪೂರ್ಣ ಹಜ್ಜ್ ಅಥವಾ ಉಮ್ರಾ ಅನ್ನು ಮಾಡಿದ ಪ್ರತಿಫಲವನ್ನು ನೀಡಲಾಗುವುದು ಎಂದು ಬೋಧಿಸಿದರು.(ತಿರ್ಮುದಿ)
ಹಗಲು ಸಮಯ ಮತ್ತು ಇಫ್ತಾರ್
ಪ್ರವಾದಿ (ಸ.ಅ) ಅವರ ಮನೆಯಿಂದ ಮಸೀದಿಗೆ ಫರ್ಲ್ ನಮಾಜ್ಗೆ (ಪ್ರಾರ್ಥನೆಗಾಗಿ) ಬಂದು ಜನರಿಗೆ ನೇತೃತ್ವ ವಹಿಸುತ್ತಿದ್ದರು. ಪ್ರವಾದಿ (ಸ.ಅ) ಮನೆಯಲ್ಲಿ ಇದ್ದಾಗೆಲ್ಲ ತಮ್ಮ ಹೆಂಡತಿಯರಿಗೆ ಸಹಾಯ ಮಾಡುತ್ತಿದ್ದರು. ಪ್ರವಾದಿ (ಸ.ಅ) ಅವರ ಮನೆಯಲ್ಲಿನ ಜೀವನ ವಿಧಾನದ ಬಗ್ಗೆ ಆಯಿಷ ಬಿವಿ ಯವರಲ್ಲಿ ಕೇಳಿದಾಗ" ಅವರು ತಮ್ಮ ಕುಟುಂಬಕ್ಕೆ ಸಹಾಯ ಮಾಡುತ್ತಾರೆ ಮತ್ತು ಸಮಯಕ್ಕೆ ಮಸೀದಿಗೆ ಹೋಗುತ್ತಾರೆ" ಎಂದು ಹೇಳಿದರು. ಪ್ರವಾದಿ ( ಸ.ಅ) ಕುರಿಗಳಿಂದ ಹಾಲನ್ನು ತೆಗೆಯುತ್ತಿದ್ದರು ಮತ್ತು ಸ್ವಂತವಾಗಿ ಬಟ್ಟೆಗಳನ್ನು ಒಗೆಯುತ್ತಿದ್ದರು. ಮಗ್ರಿಬ್ನ ಸಮಯದಲ್ಲಿذكرಗಳಲ್ಲಿ ಮುಳುಗುತ್ತಿದ್ದ ರು. ಮತ್ತು ಮಗ್ರಿಬಿನ ಸಮಯವಾದರೆ ಪ್ರೀತಿಯ ಹೆಂಡತಿಯ ಮನೆಯಲ್ಲಿ ಉಪವಾಸವನ್ನು ಮುರಿಯ ಲಾಗುತ್ತದೆ. ಪ್ರವಾದಿ (ಸ.ಅ) ರವರು ಉಪವಾಸ ಮುರಿಯಲು ಖರ್ಜೂರವನ್ನು ಬಳಸಿದರು, ಯಾವುದೇ ಖರ್ಜೂರ ಇಲ್ಲದಿದ್ದರೆ ಸಾಮಾನ್ಯ ನೀರು ಪ್ರವಾದಿಯವರ ಉಪವಾಸ ಆಹಾರವಾಗಿತ್ತು. ಉಪವಾಸ ತೊರೆಯುವ ಸಮಯವಾದರೆ ಸ್ವಲ್ಪವೂ ತಡಮಾಡದೆ ಉಪವಾಸವನ್ನು ಮುರಿಯಬೇಕೆಂದು ಪ್ರವಾದಿ (ಸ.ಅ) ಪ್ರತ್ಯೇಕ ಸಲಹೆಯನ್ನು ನೀಡಿದ್ದಾರೆ.
ನಂತರ ಅವರು ಮಸೀದಿಗೆ ಹೋಗಿ ಮಗರಿಬ್ ಪ್ರಾರ್ಥನೆಯ ನಂತರ ಮನೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ರಂಜಾನಿನಲ್ಲಿ ಪ್ರವಾದಿಯ ರಾತ್ರಿ
ರಂಜಾನಿ ನಲ್ಲಿ ರಾತ್ರಿ ಇಶಾ ಸಮಯವಾದಾಗ ಪ್ರವಾದಿಯು ಮನೆಯಿಂದ ಸುನ್ನತ್ ಪ್ರಾರ್ಥನೆಯನ್ನು ಮಾಡಿ ಮತ್ತೆ ಇಶಾ ಜಮಾಅತ್ ಅನ್ನು ಮುನ್ನಡೆಸಲು ಮಸೀದಿಗೆ ಹೋಗುತ್ತಿದ್ದರು. ಪ್ರವಾದಿ (ಸ) ರವರು ತಮ್ಮ ಸಹಚರರೊಂದಿಗೆ ಮಸ್ಜಿದ್ ಉನ್ ನಬವಿಯಲ್ಲಿ ಕೇವಲ ಮೂರು ದಿನಗಳವರೆಗೆ ತರಾವೀಹ್ ನಮಾಜ್ ಮಾಡುತ್ತಿದ್ದರು. ಜನರ ಸಂಖ್ಯೆ ಹೆಚ್ಚಾದಂತೆ ಅದು ತನ್ನ ಸಮುದಾಯದ ಮೇಲೆ ಫರ್ಲ್ ಆಗಬಹುದೆಂದು ಪ್ರವಾದಿ (ಸ )ರವರು ಭಯಪಟ್ಟರು. ಹಾಗೆ ಸಂಭವಿಸಿದರೆ ಅದು ಅವರಿಗೆ ಕಷ್ಟವಾಗುತ್ತದೆ ಎಂದುಪ್ರವಾದಿ (ಸ) ರವರು ಭಯಪಟ್ಟರು. ಇದನ್ನು ಅನುಸರಿಸಿ ಪ್ರವಾದಿ (ಸ) ಮಸೀದಿಯಲ್ಲಿರುವ ತರಾವೀಹ್ ನಮಾಜನ್ನು ಮನೆಯಲ್ಲಿ ನಿರ್ವಹಿಸಲು ಕಲ್ಪಿಸಿದರು. ಅವರು ಮನೆಯಲ್ಲಿ ದೀರ್ಘಕಾಲ ಪ್ರಾರ್ಥನೆ ಮಾಡುತ್ತಿದ್ದರು ಎಂದು ಹದೀಸ್ ನಲ್ಲಿ ಕಾಣಬಹುದು. ಪ್ರವಾದಿ (ಸ) ಅವರು ವಿತ್ರ್ ನ ಮೊದಲು ಸ್ವಲ್ಪ ನಿದ್ರೆ ಮಾಡುತ್ತಿದ್ದರು ಮತ್ತು ನಂತರ ಎದ್ದು ವಿತಿರ್ ನಮಾಜನ್ನು ಮಾಡುತ್ತಿದ್ದರು. ವಿತ್ ರ್ ಪ್ರಾರ್ಥನೆಯನ್ನು ರಾತ್ರಿಯ ಕೊನೆಯ ಪ್ರಾರ್ಥನೆಯಾಗಿ ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದರು. ಕೆಲವು ದಿನಗಳಲ್ಲಿ ಅವರು ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ನಡೆಸುತ್ತಿದ್ದರು ಮತ್ತು ಮುಂಜಾನೆ ತನಕ ಮಲಗಿ ನಂತರ ಎದ್ದು ಸ್ನಾನ ಮಾಡಿ ಮಸೀದಿಗೆ ಹೋಗುತ್ತಿದ್ದರು.
ಕುರಾನ್ ಮತ್ತು ಸ್ವದಖ
ಪ್ರವಾದಿ ( ಸ) ರವರು ರಮಲಾನ್ ಸಮಯದಲ್ಲಿ ಪವಿತ್ರ ಕುರಾನ್ ಒಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಪ್ರವಾದಿ ( ಸ) ಪವಿತ್ರ ಕುರ್ಆನಿನ ಎಲ್ಲಾ ವಚನಗಳನ್ನು ಜಿಬ್ರೀಲ್ ಅವರೊಂದಿಗೆ ರಂಜಾನ್ ಸಮಯದಲ್ಲಿ ಪಠಿಸುತ್ತಿದ್ದರು. ಪ್ರವಾದಿ ಸ ಮರಣ ಹೊಂದಿದ ವರ್ಷ ಎರಡು ಬಾರಿ ಈ ರೀತಿ ಪಠಿಸುತ್ತಿದ್ದರು ಇದು ಅವರ ಮರಣದ ಸೂಚನೆಯಾಗಿದೆ ಎಂದು ಪ್ರವಾದಿ (ಸ) ತಮ್ಮ ಮಗಳು ಫಾತಿಮಾ ಅವರಲ್ಲಿ ಹೇಳಿದರು.(ಬು ಖಾರಿ ಮುಸ್ಲಿಂ).
ಇಬ್ನು ಅಬ್ಬಾಸ್ ಉಲ್ಲೇಖಿಸಿದ ಇಮಾಮ ಅಹಮದ್ ನಿರೂಪಿಸಿದ ಹದೀಸ್ ಪ್ರಕಾರ ಜಿಬ್ರೇಲ್ (ಅ) ರಂಜಾನ್ ಸಮಯದಲ್ಲಿ ಪ್ರತಿರಾತ್ರಿ ಪ್ರವಾದಿ (ಸ) ರ ಬಳಿಬಂದು ಕುರಾನನ್ನು ಪರಸ್ಪರ ಪಠಿಸುತ್ತಿದ್ದರು. ರಮಲಾನ್ ಸಮಯದಲ್ಲಿ ಜಿಬಿರೀಲ್ ಬಂದಾಗ ಪ್ರವಾದಿ ರವರು ಸಾಮಾನ್ಯವಾಗಿ ಬಹಳ ಉದಾರ ರಾಗಿದ್ದರು ಎಂದು ಈ ಹದೀಸ್ ಸೂಚಿಸುತ್ತದೆ.
ಕೊನೆಯ ಹತ್ತು
ರಂಜಾನ್ ಇನಲ್ಲಿ ಪ್ರವಾದಿಯವರು ಇನ್ನೊಂದು ಪದ್ಧತಿ ಎಂದರೆ ಕೊನೆಯ ಹತ್ತರಲ್ಲಿ ಹೆಚ್ಚು ಇಬಾದತ್ ಗಳಲ್ಲಿ ತೊಡಗುದಾಗಿದೆ. ಈ ದಿನಗಳಲ್ಲಿ ಪೂರ್ಣ اعتقاف ಕೂರುವುದು ಮತ್ತು ಹೆಚ್ಚಿನ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ಪ್ರವಾದಿಯು ಲೈಲತುಲ್ قدر ನ ದಿನಗಳಲ್ಲಿ ವಿಶೇಷذكر ಮತ್ತು ಪ್ರಾರ್ಥನೆ ಗಳೊಂದಿಗೆ ಉತ್ಕೃಷ್ಟ ಗೊಳಿಸುತ್ತಿದ್ದರು. ಪ್ರವಾದಿಯು ಮೊದಲ 20 ದಿನಗಳಲ್ಲಿ ನಿದ್ರೆಗೆ ಸಮಯವನ್ನು ಕಂಡುಕೊಂಡಿದ್ದರೆ ನಂತರದ ಹತ್ತು ದಿನಗಳಲ್ಲಿ ಪ್ರಾರ್ಥನೆಗೆ ಸಂಪೂರ್ಣವಾಗಿ ಗಂಟು ಹಾಕುತ್ತಿದ್ದರು ಎಂದು ಆಯಿಶಾ ಬೀವಿ ಉಲ್ಲೇಖಿಸಿದ್ದಾರೆ. ಈ ದಿನಗಳಲ್ಲಿ ಕುಟುಂಬ ಸದಸ್ಯರನ್ನು ಎಚ್ಚರಗೊಳಿಸುತ್ತಿದ್ದರು ಮತ್ತು ಪ್ರಾರ್ಥನೆ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಕೊನೆಯ ಹತ್ತು ದಿನಗಳಲ್ಲಿ ಪ್ರಾರ್ಥನೆ ಮಾಡಬಹುದಾದ ಎಲ್ಲ ದೊಡ್ಡವರನ್ನು ಮತ್ತು ಚಿಕ್ಕವರನ್ನು ಪ್ರವಾದಿಯವರು ಎಚ್ಚರಗೊಳಿಸುತ್ತಿದ್ದರು ಎಂದು ಅಲಿ (ರ) ವರದಿ ಮಾಡುತ್ತಾರೆ. ಪವಿತ್ರ ಪ್ರವಾದಿ ತನ್ನ ಪ್ರೀತಿಯ ಮಗಳು ಫಾತಿಮಾ ಮತ್ತು ಅವರ ಪತಿ ಅಲಿ (ರ) ರವರನ್ನು ರಾತ್ರಿ ಪ್ರಾರ್ಥನೆಗಾಗಿ ಎಬ್ಬಿಸುವ ಪದ್ಧತಿಯ ಬಗ್ಗೆ ಇಲ್ಲಿ ಸೇರಿಸಿ ಓದಬಹುದು.
ಪ್ರತಿ ರಂಜಾನಿನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ( ಸ) ರವರು ಮಸೀದಿಯಲ್ಲಿ إعتقاف ಕುಳಿತುಕೊಳ್ಳುತ್ತಿದ್ದರು ಮತ್ತು ಅವರ ಮರಣದ ವರ್ಷದಲ್ಲಿ 20 ದಿನಗಳ ಕಾಲإعتقاف ಕುಳಿತುಕೊಂಡಿದ್ದರು (ಬುಖಾರಿ)
ಐತಿಹಾಸಿಕ ಘಟನೆಗಳು
ಪ್ರವಾದಿಯ ರಂಜಾನ್ ಸೋಮಾರಿತನ ಅಥವಾ ಸೋಮಾರಿತನದಿಂದ ಕೂಡಿರಲಿಲ್ಲ. ಇಸ್ಲಾಮಿಕ್ ಇತಿಹಾಸದಲ್ಲಿ ಪ್ರಮುಖ ಮೈಲುಗಲ್ಲದ بدر ವಿಜಯ ಮತ್ತು ಮಕ್ಕ ವಿಜಯವು ನಡೆದದ್ದು ರಂಜಾನ್ ಸಮಯದ ಲಾಗಿತ್ತು. ಹಿಜಿರಾ ದ ಎರಡನೇ ವರ್ಷವಾದ ರಂಜಾನ್ ಸಮಯದಲ್ಲಿ ಉಪವಾಸ ಕಡ್ಡಾಯವಾಗಿ ಇದ್ದಾಗبدر ಕದನ ನಡೆಯಿತು. ಮಕ್ಕವನ್ನು ವಶಪಡಿಸಿಕೊಳ್ಳಲು ಕಾರಣವಾದ ಶಾಂತಿಯುತ ಮಿಲಿಟರಿ ಕಾರ್ಯಾಚರಣೆಯು ಹಿಜರಾ ದ ಎಂಟನೆಯ ವರ್ಷದ ರಂಜಾನ್ ಸಮಯದಲ್ಲಿ ನಡೆಯಿತು. ಇದಲ್ಲದೆ ರಂಜಾನ್ ಸಮಯದಲ್ಲಿ ಪ್ರವಾದಿ ಹಾಜರಾಗದ ಅನೇಕ ಸಣ್ಣ ಘರ್ಷಣೆಗಳು ಮತ್ತು ಗಂಭೀರ ಉಪದೇಶ ಚಟುವಟಿಕೆಗಳು ನಡೆದಿದೆ. ಪ್ರವಾದಿಯವರು ಹಿಜಿರಾದ ಮೂರನೇ ವರ್ಷವಾದ ರಮ್ಜಾನ್ ತಿಂಗಳಲ್ಲಿ (ಜೈನಬ ಬಿಂತ್ ಖುಸೈಮ)ಬೀವಿಯನ್ನು ವಿವಾಹವಾದ ರು. ರಂಜಾನ್ ಸಮಯದಲ್ಲಿ ಅಲಿ(ರ) ಫಾತಿಮಾ ಬೀವಿ ಅವರನ್ನು ವಿವಾಹವಾದರು. ಎಂದು ಇಮಾಮ್ ಕುರ್ತ ಬಿ ದಾಖಲಿಸಿದ್ದಾರೆ.
ಮೂಲ : ಮಲಯಾಳಂ
ಕನ್ನಡಕ್ಕೆ : ಮುಹಮ್ಮದ್ ಶಬೀರ್ ಈಶ್ವರಮಂಗಳ