ಮಗದೊಮ್ಮೆ ರಂಜಾನ್ ಆಗಮನವಾಗಿದೆ

ಅಸ್ಸಲಮು ಅಲೈಕುಮ್ ವರಹ್ಮತುಲ್ಲಾ ..

ಮೊದಲನೆಯದಾಗಿ ಎಲ್ಲರಿಗೂ ಆತ್ಮೀಯ ಸಮೃದ್ಧವಾದ ರಂಜಾನ್ ಶುಭಾಶಯಗಳು

ನಾವು ನಮ್ಮ ಜೀವನದಲ್ಲಿ ಅದೆಷ್ಟೋ ರಂಜಾನ್ ತಿಂಗಳನ್ನು ಹಾದು ಹೋಗಿರಬಹುದು. ಇನ್ನೂ ಒಂದಷ್ಟು ರಂಜಾನ್ ಪರ ಸಾಕ್ಷ್ಯನುಡಿಯುವ ರೀತಿಯಲ್ಲಿ ನಮಗೆ ಸಿಗಲು ತೌಫೀಕ್ ನೀಡಲಿ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ಹದೀಸ್ ನೆನಪಿನಂಗಳಕ್ಕೆ ಇಳಿದು ಬರುತ್ತಿದೆ. ಇಮಾಂ ಅಹ್ಮದ್ (ರ) ರು ವರದಿ ಮಾಡುವ ಹದೀಸಿನಲ್ಲಿ ಹೀಗೆ ಕಾಣಬಹುದು, ಯಮನ್ ನಿವಾಸಿಗಳಾದ ಎರಡು ಜನರು ತ್ವಲ್ಹಾ (ರ) ರವರ ಮನೆಯಲ್ಲಿ  

ತಂಗಿದರು. ಅವರ ಪೈಕಿ ಓರ್ವ ಪ್ರವಾದಿ (ಸ) ರೊಂದಿಗಿನ ಯುದ್ಧದಲ್ಲಿ ಪಾಲ್ಗೊಂಡು ಶಹೀದಾದರು. ಇನ್ನೋರ್ವ ಸ್ವಹಾಬಿ ಒಂದು ವರ್ಷದ ನಂತರ ಹಾಸಿಗೆಯಲ್ಲೇ ಮರಣಹೊಂದಿದರು. ಎರಡನೇ ವ್ಯಕ್ತಿ ಮೊದಲು ಸರ್ಗಕ್ಕೆ ಪ್ರವೇಶಿಸಿದ್ದಾಗಿ ತ್ವಲ್ಹಾ (ರ) ರಿಗೆ ಕನಸಿನಲ್ಲಿ ಕಾಣಲು ಸಾಧ್ಯವಾಯಿತು, ಆಶ್ಚರ್ಯದೊಂದಿಗೆ ಅವರು ಪ್ರವಾದಿಯರೊಂದಿಗೆ ವಿಷಯ ತಿಳಿಸಿದರು. ಪ್ರವಾದಿ (ಸ)ರು ಕೇಳಿದರು, ಮೊದಲನೆಯವರ ಮರಣದ ನಂತರ ಇವರು ಎಷ್ಟು ಕಾಲ ಬದುಕಿದ್ದಾರೆ ಎಂದು? ಒಂದು ವರ್ಷ ಎಂದು ತ್ವಲ್ಹಾ (ರ) ರು ಉತ್ತರಿಸಿದರು. ಪ್ರವಾದಿ (ಸ) ಹೇಳಿದರು, ಆ ಅವಧಿಯಲ್ಲಿ ಅವರು 1800 ರಕಾತ್ ನಮಾಜುಗಳನ್ನು ನಿರ್ವಹಿಸಿಲ್ಲವೇ.....!? ಮತ್ತು ಒಂದು ರಂಜಾನ್ ಪೂರ್ತಿ ವೃತ್ತಾನುಷ್ಠಾನ ಮಾಡಿಲ್ಲವೇ.....!

ಪವಿತ್ರ ರಂಜಾನ್ ಮಾಸದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಘಟನೆ ನಮಗೆ ಧಾರಾಳವಾಗಿದೆ. ನಮಗೆ ಲಭ್ಯವಾಗಿರುವ ಈ ಅವಕಾಶವನ್ನು ಹೆಚ್ಚು ಬಳಸಿಕೊಳ್ಳಬೇಕು. ಇಲ್ಲದಿದ್ದರೆ, ಪಡೆದ ರಂಜಾನಿನ ಗುಣಕ್ಕಿಂತ ಹೆಚ್ಚು ಹಾನಿಕಾರಕವಾಗಬಹುದು, ಮಆದನಲ್ಹ್ಲಾ

  ರಂಜಾನ್ ನಮ್ಮನ್ನು ತಿದ್ದಿ ತೀಳುವ ಪಾಠಶಾಲೆಯಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಇದು ವಿಶ್ವಾಸಿ ಯಾದ ಒಬ್ಬಾತನ ಜೀವನ ಹೇಗಿರಬೇಕು ಎಂಬುದರ ಪ್ರಾಯೋಗಿಕ ಬೋಧನೆಯಾಗಿದೆ. ಒಂದು ತಿಂಗಳ ಕಾಲದ ದೀರ್ಘಾವಧಿಯ ತರಬೇತಿ ಕೋರ್ಸ್ ಎಂದೇ ಪರಿಚಯಿಸಬಹುದು. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ರಂಜಾನ್ ಒಂದು ಗುರಿ ಮಾತ್ರವಲ್ಲ, ಅದಕ್ಕಿಂತಲೂ ಮಿಗಿಲಾಗಿ ಒಂದು ಒಳಿತಿನ ಹಾದಿ ಎಂದೇ ಹೇಳಬಹುದು. ಇನ್ನುಳಿದ ಜೀವನ ಕಾಲವದಿ ಹೇಗಿರಬೇಕೆಂದು ರಂಜಾನ್ ಈ ಮೂಲಕ ನಮಗೆ ತಿಳಿಸಿ ಕೊಡುತ್ತಿದೆ . ಒಂದು ತಿಂಗಳಿನಿಂದ ನಾವು ಸಂಪಾದಿಸಿರುವ ಈ ತರಬೇತಿಯು ನಂತರದ ಜೀವನದಲ್ಲಿ ಪ್ರಕಟವಾಗುವಾಗ ಮಾತ್ರವಾಗಿದೆ ರಂಜಾನ್ ನಮ್ಮಿಂದ ಧನ್ಯವಾಗಿದೆ ಎಂದು ತಿಳಿಯುವುದು. ಇಲ್ಲದಿದ್ದರೆ, ನಮ್ಮ ಆರಾಧನಾ ಕಾರ್ಯಗಳ ಕಟ್ಟುನಿಟ್ಟು ಜೀವನ ಅವಧಿಯಲ್ಲಿ ನಾವು ನಿಯಂತ್ರಿಸುವ ನಿಯಂತ್ರಣ ಗಳೆಲ್ಲವೂ ಕೇವಲ ಒಂದು ರಂಜಾನ್ ಹಬ್ಬ ಆಚರಣೆಯಾಗಿ ಪರಿಣಮಿಸ ಬಹುದು. ಅಥವಾ , ನಾವು ನಿರ್ವಹಿಸಿದ ಕರ್ಮಗಳೆಲ್ಲವೂ ಅಲ್ಲಾಹನಿಗೆ ಮಾಡಿದ್ದಲ್ಲಾಗಿರ ಬಹುದು. ಅಲ್ಲದಿದ್ದರೆ ರಂಜಾನ ಮಾತ್ರವಾಗಿ ಮಾಡಿದ್ದಾಗಿರಬೇಕು.

ರಂಜಾನಿಗಳಾಗದೆ, ರಬ್ಬಾನಿಯಗಳಾಗಲು ಶ್ರಮಿಸೋಣ

ಅದಾಗಲಿ ಈ ವರ್ಷದ ರಂಜಾನಿನ ಧ್ಯೇಯ.

 

 ಕನ್ನಡಕ್ಕೆ : ಮಹಮ್ಮದ್ ಶಮಿ ಉಪ್ಪಿನಂಗಡಿ

ಮೂಲ ಮಲಯಾಳಂ

Related Posts

Leave A Comment

Voting Poll

Get Newsletter