ಕಾರುಣ್ಯದ ಹತ್ತು ಸುದಿನಗಳು

                 ಪವಿತ್ರ ರಂಜಾನ್ ಸದ್ಗುಣಗಳ ಕಾಲವಾಗಿದೆ. ಅಲ್ಲಾಹನು ಸತ್ಯ ವಿಶ್ವಾಸಿಗಳಿಗೆ ಹಲವಾರು ಅನುಗ್ರಹಗಳನ್ನು ತೆರೆದು ಕೊಡುವ ತಿಂಗಳಾಗಿದೆ. ಇತರ ಹನ್ನೊಂದು ತಿಂಗಳುಗಳಿಗಿಂತ ಭಿನ್ನವಾಗಿ, ರಂಜಾನ್ ತಿಂಗಳಲ್ಲಿ ಒಂದು ಫರ್ಲಿಗೆ 70 ಫರ್ಲಿನ ಪ್ರತಿಫಲವೂ ಮತ್ತು ಸುನ್ನತ್‌ಗೆ ಒಂದು ಫರ್ಲ್ನ ಪ್ರತಿಫಲವು ಲಭಿಸುವುದೊಂದಿಗೆ ಹಲವಾರು ಆಫರ್ ಆಗಿದೆ ರಮದಾನ್ ಸತ್ಯ ವಿಶ್ವಾಸಿಗಳಿಗೆ ಕೊಡುಗೆ ನೀಡಿರುವುದು. 

ರಮದಾನ್ ತಿಂಗಳ ಮೂವತ್ತು ದಿನಗಳನ್ನು ಮೂರು ಹತ್ತರಂತೆ ವಿಂಗಡಿಸಲಾಗಿದೆ. ಇವುಗಳಲ್ಲಿ ಮೊದಲನೆಯದು ರಹ್ಮತ್ತಿನ ಅಥವಾ ಕಾರುಣ್ಯದ ಹತ್ತು, ಎರಡನೆಯದು ಕ್ಷಮೆ (ಮಗ್ಫಿರತ್)ಯ ಹತ್ತು ಹಾಗೂ ಕೊನೆಯದು ನರಕ ಮೋಚನೆಯ ಹತ್ತು ಎಂದು ಪ್ರವಾದಿ (ಸ) ರವರು ಹದೀಸಲ್ಲಿ ತಿಳಿಸಿದ್ದಾರೆ. ಚಂದ್ರ ವರ್ಷದ ಪ್ರಕಾರ, ವರ್ಷದಲ್ಲಿ 355 ದಿನಗಳಿವೆ. ಇದರಲ್ಲಿ ಕೆಲವು ಹತ್ತು ದಿನಗಳಿಗೆ ಹಲವಾರು ವಿಶೇಷತೆಗಳಿವೆ. ವರ್ಷದ 35.5 ಹತ್ತರಲ್ಲಿ ಸವಿಷೇಶತೆಯಿರುವ ಐದು ಹತ್ತಾಗಿದೆ ಇರುವುದು: ರಂಜಾನ್ ತಿಂಗಳ ಮೂರು ಹತ್ತು, ಹಾಗೂ ಮೊಹರಂ ತಿಂಗಳ ಮೊದಲ ಹತ್ತು, ಮತ್ತು ದುಲ್ ಹಿಜ್ಜಾ ತಿಂಗಳ ಮೊದಲ ಹತ್ತು. ಸೂರತ್ ಅಲ್-ಫಜ್ರ್ ಇದರ ಎರಡನೇ ಅಧ್ಯಾಯದಲ್ಲಿ, 'ಹತ್ತು ದಿನಗಳು ಸತ್ಯ' ಎಂಬ ಈ ಅಧ್ಯಾಯಕ್ಕೆ , ಕೆಲವು ಪ್ರಮುಖ ವ್ಯಾಖ್ಯಾನಕಾರರು ಧುಲ್-ಹಿಜ್ಜಾ ತಿಂಗಳ ಮೊದಲ 10 ದಿನಗಳು, ಇತರರು ಮೊಹರಂನ ಮೊದಲ ಹತ್ತು ದಿನಗಳು ಮತ್ತು ಇತರರು ರಮದಾನಿನ ಮೊದಲನೆಯ ಹತ್ತು ದಿನಗಳೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಇಬ್ನ್ ಕತ್ಸೀರ್ ರಿಪೋರ್ಟ್ ಮಾಡಿದ್ದಾರೆ.ಈ ವಿಶೇಷ ಹತ್ತನ್ನು ಇತರ ದಿನಗಳಿಗೆ ಹೋಲಿಸಿದರೆ ಈ ವಿಶೇಷ ಹತ್ತು ದಿನಗಳಿಗೆ ಕೆಲವು ಸ್ಥಾನಮಾನ ಇದೆಯೆಂದು ಇದರಿಂದ ಸ್ಪಷ್ವಾಗುತ್ತದೆ. 

 ರಂಜಾನ್‌ನ ಮೊದಲ ಹತ್ತು ದಿನಗಳ ಪ್ರತ್ಯೇಕತೆ ಅಲ್ಲಾಹನ ಅಪಾರವಾದ ಅನುಗ್ರಹಗಳು ಬೀರುವ ಹತ್ತಾಗಿದೆ. ಈ ಕರುಣೆಯು ಮಿತಿ ನಿಶ್ಚಯಿಸಿದ ಕರುಣೆಯಾಗಿದೆ ಎಂದು ಕರುಣೆಗೆ ಸಂಬಂಧಿಸಿದ ಅನೇಕ ಉಲ್ಲೇಖಗಳಿಂದ ಸ್ಪಷ್ಟವಾಗುತ್ತದೆ.  

ಅಲ್ಲಾಹನು ಲೌಹನ್ನು ಸೃಷ್ಟಿಸಿದ ತಕ್ಷಣ, ಅದರ ಮೇಲೆ ಬರೆಯಲು ಕಲಂ (ಪೆನ್ನು)ಒಂದಿಗೆ ಆದೇಶಿಸುತ್ತಾನೆ.ಆಗ ಪೆನ್ನು ಏನು ಬರೆಯಬೇಕೆಂದು ಕೇಳಿದಾಗ, ಅಲ್ಲಾಹನು ಅವನ ಕರುಣೆಯ ಬಗ್ಗೆ ಬರೆಯಲು ಕೇಳಿಕೊಂಡನು. ಈ ಘಟನೆಯು ಅಲ್ಲಾಹನು ಅವನ ಕರುಣೆಗೆ ನೀಡುವ ಅತ್ಯುನ್ನತ ಸ್ಥಾನವನ್ನು ಸೂಚಿಸುತ್ತದೆ.

ಬಿಸ್ಮಿ ಆಗಿದೆ ಕುರಾನಿನಲ್ಲಿ ಅಧಿಕವಾಗಿ ಇರುವ ಆಯತ್. ಇದು 114 ಸೂರಗಳಲ್ಲಿ 114 ಬಾರಿ ಪುನರಾವರ್ತಿಸಲಾಗಿದೆ. ಇದರಲ್ಲಿ ಅಲ್ಲಾಹನ ಹೆಸರನ್ನು ಒಮ್ಮೆ ಉಲ್ಲೇಖಿಸಿ ಅಲ್ಲಾಹನ ಕರುಣೆಯನ್ನು ಎರಡು ಬಾರಿ ಉಲ್ಲೇಖಿಸಲಾಗಿದೆ. ಇದರಲ್ಲಿ, ರಹಮಾನ್ ಎಂಬ ಪದವು ಎಲ್ಲರಿಗೂ ಕರುಣೆ ಎಂದರ್ಥ. ಎಂದರೆ ಈ ಜಗತ್ತಿನಲ್ಲಿ ವಿಶ್ವಾಸಿ ಅವಿಶ್ವಾಸಿ ಎನ್ನುವ ಎರಡು ವಿಭಾಗಕ್ಕೂ ಒಂದೇ ರೀತಿ ಕರುಣೆ ತೋರಿಸುವುದನ್ನು ಅರ್ಥೈಸುತ್ತದೆ. ಆದರೆ ರಹೀಂ ಎಂಬ ಪದವು ಪರಲೋಕವನ್ನು ನಂಬುವವರಿಗೆ ಇರುವ ಕರುಣೆಯನ್ನು ಸಂಕೇತಿಸುತ್ತದೆ. ಪವಿತ್ರ ಕುರಾನ್ ಮತ್ತು ಹದೀಸ್ ಸ್ಪಷ್ಟವಾಗಿ ಅಲ್ಲಾಹನ ಕರುಣೆಯನ್ನು ತಿಳಿಸುತ್ತವೆ; ಸೂರಾ ಅಲ್-ಅರಾಫ್ನಲ್ಲಿ, ಅಲ್ಲಾಹನು ತನ್ನ ಕರುಣೆಯನ್ನು ಸ್ಪಷ್ಟಪಡಿಸುತ್ತಾನೆ,

 "ನನ್ನ ಶಿಕ್ಷೆ ನಾನು ಉದ್ದೇಶಿಸಿದವರ ಮೇಲೆ ಬೀರುತ್ತದೆ, ಹಾಗೂ ನನ್ನ ಕರುಣೆ ಎಲ್ಲ ವಿಷಯಗಳಿಗೂ ವಿಸ್ತರಿಸುತ್ತದೆ. ಸೂಕ್ಷ್ಮತೆಯಿಂದ ಜೀವಿಸುವ, ಝಕಾತ್ ದಾನವನ್ನು ಪಾವತಿಸುವ ಮತ್ತು ನಮ್ಮ ದೃಷ್ಟಾಂತವನ್ನು ವಿಷ್ವಸಿಸುವವರಿಗಾಗಿ ನಾನು ಅದನ್ನು ನೀಡುತ್ತೇನೆ".

 ಈ ಸೂಕ್ತದ ವಿವರಣೆಯನ್ನು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸ್‌ನಲ್ಲಿ ಕಾಣಬಹುದು, "ಅಲ್ಲಾಹನಿಗೆ 100 ಕರುಣೆಯಾಗಿದೆ ಇರುವುದು, ಅದರಲ್ಲಿ ಅವನು ಕೇವಲ 1 ಕರುಣೆಯನ್ನು ಮಾತ್ರ ಈ ಜಗತ್ತಿಗೆ ಕಳುಹಿಸಿದ್ದಾನೆ, ಅದರ ಮೂಲಕ ಪುರುಷರು, ಜಿನ್‌ಗಳು ಮತ್ತು ಪ್ರಾಣಿಗಳು ಪರಸ್ಪರ ಕರುಣೆ ತೋರಿಸುತ್ತಾರೆ . " ಉಳಿದ 99 ಕರುಣೆಯನ್ನು ಅಲ್ಲಾಹನು ತನ್ನ ವಿಶ್ವಾಸಿಗಳಿಗೆ ಪುನರುತ್ಥಾನ ದಿನದಂದು ಕಾಯ್ದಿರಿಸಿದ್ದಾನೆ". 

 ಅಲ್ಲಾಹನು ಮೊದಲು ಪ್ರವಾದಿ ಮುಹಮ್ಮದ್ (ಸ) ರವರ ಪ್ರಕಾಶವನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದನು.ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಇಡೀ ಪ್ರಪಂಚದ ಮೇಲೆ ಕರುಣೆ ತೋರಿಸಲು ಕಳುಹಿಸಲ್ಪಟ್ಟ ಪ್ರವಾದಿಯೆಂದು ಪರಿಚಯಿಸಿದನು. ಜನರು ಅಲ್ಲಾಹನ ಮಧ್ಯಸ್ಥಿಕೆಗಾಗಿ ಮಹಶರಾದಲ್ಲಿನ ಸರ್ವ ಪ್ರವಾದಿಗಳನ್ನು ಸಂಪರ್ಕಿಸಿದಾಗ, ಅವರ ಅಜಾಗರೂಕತೆಯಿಂದಾಗಿ ಎಲ್ಲರೂ ಕೈಬಿಟ್ಟಾಗ ಅವರ ಮನವಿಯನ್ನು ಪ್ರವಾದಿ ಮುಹಮ್ಮದ್ (ಸ) ರ ಸಮ್ಮುಖದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಅಲ್ಲಾಹನು ಪ್ರವಾದಿ (ಸ) ರನ್ನು ತಲೆ ಎತ್ತುವಂತೆ ಹೇಳಿ ಆವಷ್ಯ ಕೇಳಿ ಮಧ್ಯಸ್ಥಿಕೆ ವಹಿಸುತ್ತಾನೆ. ನಂತರ ಈ ಮಃಶರಾದ ಮುಂದಿನ ಹಂತವನ್ನು ಪ್ರಾರಂಭಿಸುತ್ತಾನೆ. ಈ ಸಂದರ್ಭದಲ್ಲಿ, ಪ್ರವಾದಿ ಮುಹಮ್ಮದ್ (ಸ) ರವರ ಕಾರಣದಿಂದಾಗಿ ಅಲ್ಲಾಹನು ಪ್ರಪಂಚದ ಜನರ ಮೇಲೆ ಕರುಣೆ ತೋರುತ್ತಾನೆ.

ಹಿಂದಿನ ಪ್ರವಾದಿಗಳಿಗೆ ನೀಡಿದ ಶರಿಯತ್ ಗಿಂತ ಪ್ರವಾದಿ ಮುಹಮ್ಮದ್ (ಸ) ಅವರಿಗೆ ನೀಡಲಾದ ಶರಿಯತ್ ಸರಳವಾಗಿದೆ ಎಂಬ ಕಾರ್ಯದಲ್ಲಿ ಅಲ್ಲಾಹನ ಕರುಣೆಯನ್ನು ಕಾಣಲು ಸಾಧ್ಯವಿದೆ. ದೇಹದ ಮೇಲೆ ನಜಸಿದ್ದರೆ(ಮಾಲಿನ್ಯ) ಆ ಭಾಗವನ್ನೇ ಮುರಿದು ಹಾಗಬೇಕು ಎನ್ನುವ ಶರಿಯತ್ ನಿಯಮದಿಂದ ಆ ಭಾಗವನ್ನು ತೊಳೆದರೆ ಸಾಕು. ಪ್ರಾಮಾಣಿಕ ಪಶ್ಚಾತ್ತಾಪಕ್ಕಾಗಿ ಶಿರ್ಕನ್ನು ಮರಣದಂಡನೆಯಿಂದ ಶಿಕ್ಷೆ ಇಲ್ಲಾದಾಗಿಸುವುದು,ಇದರ ಬದಲು ಆತ್ಮಾರ್ಥವಾದ ತೌಬಾ ಮಾಡಿದರೆ ಸಾಕು ಎನ್ನುವ ನಿಯಮವೂ ಕರುಣೆಯ ಭಾಗವನ್ನು ವ್ಯಕ್ತಪಡಿಸುತ್ತದೆ.

 ಒಮ್ಮೆ ಪ್ರವಾದಿ ಮುಹಮ್ಮದ್ (ಸ) ಒಂದು ಪುಟ್ಟ ಹುಡುಗ ಸುತ್ತಾಡುತ್ತಿರುವುದನ್ನು ಗಮನಿಸಿದರು. ಪ್ರವಾದಿ (ಸ) ತಕ್ಷಣ 'ಉಮರ್ ಇಬ್ನ್ ಅಲ್-ಖತ್ತಾಬ್'ಗೆ,' ಆ ಮಗುವನ್ನು ಹಿಡಿದುಕೊಳ್ಳಿ, ಏಕೆಂದರೆ ಅವನು ತನ್ನ ಹೆತ್ತವರನ್ನು ಕಳೆದುಕೊಂಡಿದ್ದಾನೆ. ಉಮರ್ ಮಗುವನ್ನು ಹಿಡಿದಿರುವಾಗ, ಮಹಿಳೆಯೊಬ್ಬರು ಬಂದು ಅದು ಮಗುವಿನ ತಾಯಿ ಎಂದು ಹೇಳಿ ಮಗುವನ್ನು ಹಿಂದಿರುಗಿಸಲು ಕೇಳುತ್ತಾಳೆ. ತಕ್ಷಣ ಉಮರ್ ಮಗುವನ್ನು ಬಿಡುಗಡೆ ಮಾಡಿದರು. ಮಹಿಳೆ ತನ್ನ ಹೆಗಲಲ್ಲಿ ಮಗುವನ್ನು ಹೊತ್ತುಕೊಂಡು ನಡೆದಳು. ಈ ಸನ್ನಿವೇಶದಲ್ಲಿ ಪ್ರವಾದಿ ಮುಹಮ್ಮದ್ (ಸ) ಹೇಳಿದರು, 'ಈ ತಾಯಿ ತನ್ನ ಮಗುವಿಗೆ ಎಷ್ಟು ಕರುಣೆ ತೋರಿಸುತ್ತಾಳೆಯೋ ಅದಕ್ಕಿಂತ ಅಲ್ಲಾಹನು ತನ್ನ ಅಡಿಮಗಳಿಗೆ ಕರುಣೆ ತೋರಿಸುತ್ತಾನೆ.

 ಪರಲೋಕದಲ್ಲಿ, ವಿಚಾರಣೆಯ ನಂತರ, ಅನೇಕ ಜನರು ತಮ್ಮ ತಪ್ಪಿನ ಕಾರಣ ನರಕ ಶಿಕ್ಷೆ ಅನುಭವಿಸುತ್ತಾರೆ, ಆಗ ಅವರೆಲ್ಲರೂ ತಮ್ಮ ದುರದೃಷ್ಟಕ್ಕಾಗಿ ಅಲ್ಲಾಹನೊಂದಿಗೆ ಶೋಕಿಸುತ್ತಾರೆ. ಆಗ ಅಲ್ಲಾಹನು ತನ್ನ ದೂತರೊಂದಿಗೆ ' ಲೌಹಲ್ಲಿ ಬರೆದ ಬರಹವನ್ನು ಹೊರತೆಗೆಯಿರಿ' ಎಂದು ಹೇಳುವನು. ಅದನ್ನು ಹೊರತೆಗೆದಾಗ, ಅದು ಅಲ್ಲಾಹನಿಂದ ಸ್ಪಷ್ಟವಾದ ಕರುಣೆಯಾಗಿರುತ್ತದೆ. ಶೀಘ್ರದಲ್ಲೇ ನರಕ ಶಿಕ್ಷೆ ಅನುಭವಿಸಿದ ಅನೇಕರಿಗೆ ಸ್ವರ್ಗಕ್ಕೆ ಪ್ರವೇಶಿಸಲು ಅವಕಾಶ ಸಿಗುತ್ತದೆ. 

ಪ್ರವಾದಿ (ಸ) ತನ್ನ ಸಭಿಕರಲ್ಲಿರುವ ಸಹಚರರಿಗೆ,

ಒಬ್ಬನ ಒಳ್ಳೆಯ ಕಾರ್ಯಗಳಿಂದಾಗಿ ಯಾರೂ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ' ಎಂದು ಹೇಳಿದರು.  

ಇದು ಕೇಳಿದ ಸಹಚರರು ಅದ್ಭುತದಿಂದ

" ನಿಮಗೂ ಸಾಧ್ಯವಿಲ್ಲವೇ? ರಸೂಲೇ ಎಂದು ಕೇಳಿದಾಗ

 'ಅಲ್ಲಾಹನು ನನ್ನನ್ನು ಕರುಣೆ ಮತ್ತು ಕಾಳಜಿಯಿಂದ ಮುಚ್ಚದೆ ಹೊರತು ನನಗೂ ಪ್ರವೇಶಿಸಲು ಸಾಧ್ಯವಾಗುವುದಿಲ್ಲ' ಎಂದು ಹೇಳಿದರು.

ಒಂದು ಮನುಷ್ಯನ ಮನೋಸ್ಥಿತಿ ಅಲ್ಲಾಹನ ಕರುಣೆಯನ್ನು ಪ್ರತೀಕ್ಷಿಸುವುದು ಮತ್ತು ಅವನ ಭಯಾನಕವಾದ ಶಿಕ್ಷೆಯನ್ನು ಹೆದರುವುದು ಇದರ ಮಧ್ಯೆ ಆಗಿದೆ ಇರುವುದು.

ಇದರ ಮಹತ್ವವನ್ನು ಸೂರಾ ಅಲ್-ಹಿಜ್ರ್ ನಲ್ಲಿ ವಿವರಿಸಲಾಗಿದೆ. 

 “ಓ ಪ್ರವಾದಿಯೇ, ನಾನು ಬಹಳ ಕ್ಷಮಿಸುವವನು, ಕರುಣಾಮಯಿ, ಮತ್ತು ನನ್ನ ಶಿಕ್ಷೆ ಅತ್ಯಂತ ನೋವಿನಿಂದ ಕೂಡಿದೆ ಎಂದು ನನ್ನ ಅಡಿಮರೊಂಡಿಗೆ ತಿಳಿಸಿ” ಎಂದು ಅಲ್ಲಾಹ್ನು ಹೇಳುತ್ತಾನೆ. 

 ಒಂದು ಸತ್ಯವಿಶ್ವಾಸಿ ಅಲ್ಲಾಹನ ಕರುಣೆಯಿಂದ ಎಂದಿಗೂ ನಿರಾಶೆ ಹೊಂದಬಾರದು, 

 ಸೂರಾ ಯೂಸುಫ್‌ನಲ್ಲಿ ಕಳೆದುಹೋದ ಮಕ್ಕಳನ್ನು ಹುಡುಕಲು ಹೊರಡುವಂತೆ ತನ್ನ ಪುತ್ರರನ್ನು ಕೇಳಿದ ನಂತರ ಯಾಕೂಬ್ (ಅ) ಮಕ್ಕಳೊಂದಿಗೆ ಹೇಳುತ್ತಾರೆ, "ಅಲ್ಲಾಹನ ಕರುಣೆಯನ್ನು ನಿರಾಶೆರಾಗಬೇಡಿ, ಅವಿಶ್ವಾಸಿಗಳು ಮಾತ್ರ ಆತನ ಅನುಗ್ರಹದ ಬಗ್ಗೆ ನಿರಾಷೆರಾಗುವುದು".

 'ರಂಜಾನ್‌ನ ಮೊದಲ ಹತ್ತು ದಿನಗಳಲ್ಲಿ ಆತನು ತನ್ನ ಸೃಷ್ಟಿಗಳ ಮೇಲೆ ಕರುಣೆಯನ್ನು ಬೀರಲು ಆರಿಸಿಕೊಂಡನು. ಆದ್ದರಿಂದ, ಒಬ್ಬ ವಿಶ್ವಾಸಿಯು ಅಲ್ಲಾಹನ ಅಪಾರ ಕರುಣೆಗಾಗಿ ಹಗಲು ರಾತ್ರಿ ಪ್ರಾರ್ಥಿಸಬೇಕು. ಅಲ್ಲಾಹಮ್ಮ ಇರ್ಹಮ್ನೀ ಯಾ ಅರ್ಹಮು ರಾಹಿಮೀನ್ (ಓ ಕರುಣಾಮಯಿ, ನನ್ನ ಮೇಲೆ ಕರುಣಿಸು) ಎಂದು ನಿರಂತರವಾಗಿ ಜಪಿಸುವ ಮೂಲಕ ವಿಶ್ವಾಸಿಯು ಆ ಕರುಣೆಗೆ ಅರ್ಹನಾಗಲು ಪ್ರಯತ್ನಿಸಬೇಕು.

Related Posts

Leave A Comment

Voting Poll

Get Newsletter