ಜಾಗತಿಕ ಯುದ್ಧಗಳು ಮತ್ತು ಪೈಗಂಬರರ ಯುದ್ಧ ನೀತಿಗಳು
ಜಾಗತಿಕ ಯುದ್ಧಗಳು ಮತ್ತು ಪೈಗಂಬರರ ಯುದ್ಧ ನೀತಿಗಳು
ಮಾನವ ಇತಿಹಾಸದಲ್ಲಿ ಯುದ್ಧವು ಸಮಾಜದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಚಲನೆಗಳನ್ನು ಅಕಾರಗೊಳಿಸಿದ ಪ್ರಮುಖ ಅಂಶವಾಗಿದೆ. ಕೆಲವೊಮ್ಮೆ ಸ್ವರಕ್ಷಣೆಗೆ, ಕೆಲವೊಮ್ಮೆ ಆಕ್ರಮಣಶೀಲ ಆನೆಗಳಿಗೆ ಕಾರಣವಾದ ಈ ಯುದ್ಧಗಳು ಅನೇಕ ನಾಗರಿಕತೆಗಳ ಉತ್ತಾನ ಪತನವನ್ನು ನಿರ್ಧರಿಸಿವೆ. ಆದರೆ ಪ್ರವಾದಿ ಮುಹಮ್ಮದ್ (ಸ) ಅವರ ಕಾಲಕ್ಕಿಂತ ಮುಂಚೆ ಅರೇಬಿಯನ್ ಸಮಾಜದಲ್ಲಿ ಯುದ್ಧಗಳು ವ್ಯವಸ್ಥಾಹೀನ, ಪ್ರತೀಕಾರಮಯ ಮತ್ತು ನಿಯಮರಹಿತವಾಗಿದ್ದವು. ರಕ್ತಪಾತವೇ ಧೈರ್ಯವೆಂದು ಭಾವಿಸುವ ವಾತಾವರಣದಲ್ಲಿ ಪ್ರವಾದಿಯವರು ಯುದ್ಧವನ್ನು ನೈತಿಕ ಮಿತಿಗಳೊಳಗೆ ವ್ಯವಸ್ಥಿತಗೊಳಿಸಿದ ಕ್ರಾಂತಿಕಾರಿ ನಾಯಕತ್ವವನ್ನು ತೋರಿದರು. ಇಂದಿನ ಜಗತ್ತು ಎರಡು ಭೀಕರ ವಿಶ್ವಯುದ್ಧಗಳ ನಾಶವನ್ನು ಅನುಭವಿಸಿದೆ ಮನುಷ್ಯನ ಕ್ರೌರ್ಯ ಎಷ್ಟು ಹಾಳುಮಾಡಬಲ್ಲದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಇಲ್ಲ. ಆದರೆ ಪ್ರವಾದಿಯವರ ಯುದ್ಧನೀತಿಗಳು ಅದಕ್ಕೆ ತೀವ್ರ ಪರ್ಯಾಯವನ್ನು ನೀಡುತ್ತವೆ. ಪ್ರವಾದಿಯವರ ಯುದ್ಧವು ಕೇವಲ ಸೈನಿಕ ತಂತ್ರವಲ್ಲ, ಜಗತ್ತಿಗೆ ಶಾಂತಿಯ ದಾರಿದೀಪವಾಗಿದೆ. ನಾವು ಪ್ರವಾದಿಯವರ 1500ನೇ ಜನ್ಮವಾರ್ಷಿಕೋತ್ಸವವನ್ನು ಆಚರಿಸುವ ಈ ಕಾಲದಲ್ಲಿ ಅವರ ಯುದ್ಧಪದ್ಧತಿ ಮಾನವಕುಲಕ್ಕೆ ಇನ್ನೂ ಪಾಠ ಕಲಿಸುತ್ತದೆ. ಖ್ಯಾತ ಇತಿಹಾಸಕಾರ ಕೆ. ಎಸ್. ರಾಮಕೃಷ್ಣ ರಾವ್ ಹೇಳುವಂತೆ, "ಪ್ರವಾದಿ ಯುದ್ಧಭೂಮಿಯಲ್ಲೂ ತಮ್ಮ ಸಹಚರರನ್ನು ಇಬಾದತ್ದಂತೆ ನೈತಿಕತೆಯನ್ನು ಕಾಪಾಡಲು ಉಪದೇಶಿಸಿದರು." ಈ ದಿಟ್ಟ ನಿಲುವು ಯುದ್ಧಕ್ಕೂ ಧರ್ಮಶಾಸ್ತ್ರಕ್ಕೂ ಹೊಸ ದಾರಿ ತೋರಿಸುವ ಶಾಶ್ವತ ಆದರ್ಶವಾಗಿದೆ.
ಜಾಗತಿಕ ಯುದ್ಧಗಳ ನಾಶಕಾರಿ ಪ್ರಭಾವ
ಇಪ್ಪತ್ತನೆಯ ಶತಮಾನದ ಎರಡು ವಿಶ್ವಯುದ್ಧಗಳು ಮಾನವ ಇತಿಹಾಸದ ಅತ್ಯಂತ ಭೀಕರ ಅವಘಡಗಳಾಗಿ ಗುರುತಿಸಿಕೊಂಡಿವೆ. ಮೊದಲ ವಿಶ್ವಯುದ್ಧ (1914-1918)ದಲ್ಲಿ ಯೂರೋಪಿನ ರಾಜಕೀಯ ಸ್ಪರ್ಧೆಗಳು ವಸಾಹತುಶಾಹಿಯ ಹೋರಾಟಗಳು ಮತ್ತು ಆಯುಧ ಸ್ಪರ್ಧೆಗಳು ಸೇರಿ ಮಾನವೀಯ ಸಂಕಟವನ್ನು ಸೃಷ್ಟಿಸಿದವು. ಸುಮಾರು ಎರಡು ಕೋಟಿಗೂ ಅಧಿಕ ಜನರು ಯುದ್ಧ, ಹಸಿವು ಮತ್ತು ರೋಗಗಳಿಂದ ಬಲಿಯಾಗಿದ್ದು, ಅನೇಕ ನಾಗರಿಕ ನಗರಗಳು ಭಸ್ಮವಾಗಿದ್ದವು. ಇದರಿಂದ ಅಂತಾರಾಷ್ಟ್ರೀಯ ಆರ್ಥಿಕತೆಯ ಪತನ, ರಾಜತಾಂತ್ರಿಕ ಜಾಲಗಳ ಕುಸಿತ ಮತ್ತು ಹೊಸ ಶತ್ರುತ್ವಗಳ ಬೀಜವು ಬಿತ್ತಲ್ಪಟ್ಟಿತು. ಆದರೆ ಇವುಗೆ ಹೋಲಿಕೆಯಿಲ್ಲದಂತೆ ಎರಡನೇ ವಿಶ್ವಯುದ್ಧ (1939-1945)ದು ಭಯಾನಕ ದಹನವನ್ನು ತಂದಿತು. ಹಿಟ್ಲರ್ ನೇತೃತ್ವದ ನಾಜಿ ಜರ್ಮನಿಯ ವಿಸ್ತರಣಾ ದುರಾಸೆ, ಇಟಲಿ ಹಾಗೂ ಜಹಾನ್‌ನ ಅಕ್ರಮಣಶೀಲ ನೀತಿಗಳು, ಹಾಗೂ ದ್ವೇಷಪೂರಿತ ಜಾತ್ಯತೀತ ತತ್ತ್ವಗಳು ಸಮಗ್ರ ಮಾನವಕುಲದ ಮೇಲೆ ಭೀಕರ ಪ್ರಹಾರವನ್ನು ಮಾಡಿದವು. ಈ ಯುದ್ಧದಲ್ಲಿ ಅಂದಾಜು ಐದು ಕೋಟಿಗೂ ಹೆಚ್ಚು ಮಂದಿ ಸಾವಿಗೀಡಾದರು: ಹಿರೋಶಿಮಾ ಮತ್ತು ನಾಗಾಸಾಕಿ ಮೇಲಿನ ಅಣುಬಾಂಬ್ ದಾಳಿಗಳು ತಂತ್ರಜ್ಞಾನದ ನವೀನತೆಯನ್ನು ಮಾನವ ನಾಶಕ್ಕೆ ಹೇಗೆ ಬಳಸಬಹುದು ಎಂಬುದಕ್ಕೆ ಶಾಶ್ವತ ಕಳಂಕವಾಗಿ ನಿಲ್ಲಿವೆ. ಲಕ್ಷಾಂತರ ಯಹೂದಿ ಸಮುದಾಯದ ಜನರನ್ನು ನಾಜಿ ಶಿಬಿರಗಳಲ್ಲಿ ಹಿಂಸಾತ್ಮಕವಾಗಿ ಕೊಲ್ಲಲಾಗಿದೆಯೆಂಬ ಹೋಲೋಕಾನ್ಸ್, ಮಾನವತೆಯ ಮೇಲಿನ ಅತ್ಯಂತ ಕತ್ತಲೆಯ ಅಧ್ಯಾಯವಾಗಿದೆ. ಈ ಎರಡು ಯುದ್ಧಗಳು ಕೇವಲ ಸೈನಿಕ ಸಂಘರ್ಷಗಳಾಗಿರದೇ, ಸಮಾಜದ ಆರ್ಥಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಜಾಲವನ್ನೇ ಧ್ವಂಸಗೊಳಿಸಿದವು. ರಾಷ್ಟ್ರಗಳ ಗಡಿ ಬದಲಾಗಿದೆ. ಕೋಟ್ಯಂತರ ಜನ ಅನಾಥರಾಗಿದ್ದಾರೆ, ಮತ್ತು ಮನುಷ್ಯನ ವಿಜ್ಞಾನ-ತಂತ್ರಜ್ಞಾನ ಸಾಧನೆಗಳೇ ಅವನ ನಾಶಕ್ಕೆ ಕಾರಣವಾಗಬಹುದು ಎಂಬ ಭೀತಿಯನ್ನು ಬಿತ್ತಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ, ಜಿನೀವಾ ಒಪ್ಪಂದಗಳಂತಹ ನಿಯಮಾವಳಿಗಳು ನಂತರದಲ್ಲಿ ರೂಪುಗೊಂಡರೂ, ಆ ಯುದ್ಧಗಳ ಅತಿಭೀಕರತೆಯನ್ನು ತಡೆಗಟ್ಟಲು ಆ ಸಮಯದಲ್ಲಿ ಯಾವುದೇ ನೈತಿಕ ಗಡಿಯಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಪ್ರವಾದಿಯವರ ಯುದ್ಧನೀತಿ
ಪ್ರವಾದಿ ಮುಹಮ್ಮದ್ (ಸ) ಅವರ ಕಾಲದ ಯುದ್ಧಗಳು ಜಗತ್ತಿನ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಯುದ್ಧವನ್ನು ನಿಯಂತ್ರಿಸುವ ನೈತಿಕ ಗಡಿಗಳನ್ನು ಅವರು ನಿರ್ಮಿಸಿದರು. "ಮಕ್ಕಳನ್ನು ಕೊಲ್ಲಬೇಡಿ, ಮಹಿಳೆಯರನ್ನು ಹಾನಿ ಮಾಡಬೇಡಿ, ಮರಗಳನ್ನು ಕಡಿದು ಸುಡಬೇಡಿ" ಎಂಬ ಅವರ ಉಪದೇಶಗಳು ಇಸ್ಲಾಂನ ಯುದ್ಧನೀತಿಯ ಮೌಲಿಕ ತತ್ವಗಳನ್ನು ಪ್ರತಿಬಿಂಬಿಸುತ್ತವೆ. ಬದ್, ಉಹುದ್, ಹಂದಕ್ ಮುಂತಾದ ಸಮರಗಳಲ್ಲಿ ಸಹ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಶತ್ರು ಸೇನೆಯ ಮೇಲೆ ವಿಜಯ ಸಾಧಿಸಿದಾಗಲೂ ಸಹ ಶರಣಾದವರ ಜೀವ, ಸಂಪತ್ತು ಹಾಗೂ ಗೌರವವನ್ನು ಕಾಪಾಡುವಂತೆ ಪ್ರವಾದಿಯವರು ತಮ್ಮ ಸಹಚರರಿಗೆ ಆದೇಶಿಸಿದರು. ಇದು ಕೇವಲ ಧಾರ್ಮಿಕ ಆದರ್ಶವಲ್ಲ, ಮಾನವತೆಯ ಸಂರಕ್ಷಣೆಯ ಕಾನೂನು. ಪ್ರಖ್ಯಾತ ರಷ್ಯಾದ ಇತಿಹಾಸಕಾರ "ಅರ್ಲಾನೊ" ಅವರ ಅಧ್ಯಯನ ಪ್ರಕಾರ, ಪ್ರವಾದಿಯವರು ತಮ್ಮ ಜೀವನದಲ್ಲಿ ಒಟ್ಟು 63 ಯುದ್ಧಗಳನ್ನು ನಡೆಸಿದರೂ, ಆ ಎಲ್ಲ ಯುದ್ಧಗಳಲ್ಲಿ ಸತ್ತವರ ಸಂಖ್ಯೆ ಬಹಳ ಕಡಿಮೆ: ಮುಸ್ಲಿಮರಲ್ಲಿ 262 ಮಂದಿ ಮತ್ತು ವಿರೋಧಿ ಶಿಬಿರದಲ್ಲಿ 1022 ಮಂದಿ. ಈ ಸಂಖ್ಯೆಯನ್ನು ಇಪ್ಪತ್ತನೇ ಶತಮಾನದ ವಿಶ್ವಯುದ್ಧಗಳ ಲಕ್ಷಾಂತರ ಸಾವು-ನಾಶಗಳೊಂದಿಗೆ ಹೋಲಿಸಿದಾಗ ಪ್ರವಾದಿಯವರ ಯುದ್ಧಗಳು ಎಷ್ಟು ಮಿತಮಟ್ಟದವು ಹಾಗೂ ನಿಯಂತ್ರಿತವು ಎಂಬುದು ಸ್ಪಷ್ಟವಾಗುತ್ತದೆ.
ಪ್ರವಾದಿಯವರ ಯುದ್ಧಗಳು ಧರ್ಮವಿಸ್ತಾರಕ್ಕಾಗಿ ನಡೆದದ್ದಲ್ಲ: ಸತ್ಯ, ನ್ಯಾಯ, ಮತ್ತು ದೌರ್ಜನ್ಯಕ್ಕೆ ಪ್ರತಿರೋಧ ನೀಡುವುದೇ ಅವುಗಳ ಉದ್ದೇಶ. ಅವರು ಮಕ್ಕಳನ್ನು ಅಥವಾ ಮಹಿಳೆಯರನ್ನು ಕೊಲ್ಲುವಂತೆ ಎಂದಿಗೂ ಆದೇಶಿಸಲಿಲ್ಲ. ಮರಗಳನ್ನು ಕಡಿದು ಪರಿಸರ ಹಾನಿ ಮಾಡುವುದನ್ನೂ ನಿಷೇಧಿಸಿದರು. ಇಂದಿನ ಆಧುನಿಕ ಯುದ್ಧಗಳು ಬಾಂಬ್‌ಗಳು, ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ನಿರ್ದಯ ತಂತ್ರಜ್ಞಾನಗಳಿಂದ ನಿರಪರಾಧಿಗಳನ್ನು ಕೊಲ್ಲುತ್ತವೆ. ಇದು ಪ್ರವಾದಿಯವರ ಯುದ್ಧನೀತಿಗೆ ವಿರುದ್ಧವಾಗಿದೆ.
ಅಲ್ಲದೆ ಪ್ರವಾದಿಯವರು ತಮ್ಮ ಯುದ್ಧಗಳನ್ನು ಶತ್ರು ಧರ್ಮೀಯರ ವಿರುದ್ಧವಲ್ಲ, ದ್ರೋಹಿ ಶಕ್ತಿಗಳ ವಿರುದ್ಧ ಮಾತ್ರ ನಡೆಸಿದರು. ಪ್ರತಿಯೊಂದು ಯುದ್ಧಕ್ಕೂ ಮುನ್ನ ಶಾಂತಿ ಮಾತುಕತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದರು. ಹುದ್ದೆಬಿಯ್ಯ ಒಪ್ಪಂದದಂತಹ ಸಂದರ್ಭಗಳು ಅವರ ಶಾಂತಿ ಪ್ರೀತಿ ಮತ್ತು ರಾಜತಾಂತ್ರಿಕ ಬುದ್ದಿವಂತಿಕೆಗೆ ಸಾಕ್ಷಿಯಾಗಿದೆ. ಯುದ್ಧವೇ ಅನಿವಾರ್ಯವಾಗಿದಾಗ ಅದು ಕೇವಲ ಸತ್ಯವನ್ನು ಕಾಪಾಡುವ ಸಾಧನವಾಗಿತ್ತು, ಪ್ರತೀಕಾರದ ಉದ್ದೇಶವಾಗಿರಲಿಲ್ಲ.
ಇಂದಿನ ವಿಶ್ವವು ಅಣುಶಸ್ತ್ರಸಜ್ಜಿತ ಯುಗದಲ್ಲಿ ನಾಶದ ಭೀತಿಯಲ್ಲಿದ್ದರೂ, ಪ್ರವಾದಿಯವರ ಯುದ್ಧ ಮಾದರಿ ಜಗತ್ತಿಗೆ ನೈತಿಕ ಪಾಠವನ್ನು ನೀಡುತ್ತದೆ. ಅವರ ನಿಯಮಗಳು, ಉದಾಹರಣೆಗೆ ಮಕ್ಕಳ ರಕ್ಷಣೆ, ಸೈನಿಕರ ಕೇವಲ ಶತ್ರು ಸೇನೆಯೊಂದಿಗೆ ಹೋರಾಟ, ಪರಿಸರ ಸಂರಕ್ಷಣೆ-ಇವುಗಳು ಅಧುನಿಕ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳಿಗೂ ದಿಕ್ಕು ತೋರಿದಂತಿವೆ. ಹೀಗಾಗಿ ಪ್ರವಾದಿಯವರ ಯುದ್ಧನೀತಿ ಕೇವಲ ಇಸ್ಲಾಮಿನಲ್ಲಿನ ನೀತಿಯಲ್ಲ, ಸಮಗ್ರ ಮಾನವಕುಲದ ಶಾಂತಿಯ ಆಳವಾದ ಸಂದೇಶವಾಗಿದೆ.
ಪ್ರವಾದಿ ಮುಹಮ್ಮದ್ (ಸ) ಅವರ ಎಲ್ಲಾ ಯುದ್ಧಗಳನ್ನು ಗಮನಿಸಿದರೆ ಅವುಗಳ ಉದ್ದೇಶ ದಾಳಿ ಮಾಡುವುದು ಅಲ್ಲ, ಬದಲಾಗಿ ರಕ್ಷಣಾತ್ಮಕವಾಗಿತ್ತು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮೆಕ್ಕಾದಿಂದ ಮದೀನಾಗೆ ಹಿಜ್ರತ್ ನಂತರ ಮುಸ್ಲಿಮರ ಮೇಲೆ ನಿರಂತರವಾಗಿ ದಾಳಿಗಳು ನಡೆದವು. ಬದ್ ಯುದ್ಧವು ಮುಸ್ಲಿಮರ ಜೀವನ, ಧರ್ಮ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ನಡೆದದ್ದಾಗಿತ್ತು; ಉಹುದ್ ಹಾಗೂ ಖಂದಕ್ ಯುದ್ಧಗಳು ಸಹ ಕೇವಲ ಪ್ರತಿರೋಧಕ್ಕಾಗಿ ನಡೆದವು. ಇವುಗಳಲ್ಲಿ ಪ್ರವಾದಿಯವರು ಸ್ವತಃ ದಾಳಿ ಪ್ರಾರಂಭಿಸಲಿಲ್ಲ ಎಂಬುದೇ ಪ್ರಮುಖ ಸತ್ಯ. ಕೆಲವರು ಬನು ಕುರೈಜಾ ಕುಲದ ಯಹೂದಿಗಳನ್ನು ಕೊಂದ ಘಟನೆಯನ್ನು ಪ್ರವಾದಿಯವರ "ಅಕ್ರಮಣಶೀಲತೆಗೆ ಸಾಕ್ಷಿ ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಅವರ ಇತಿಹಾಸ ವಿವರಿಸುತ್ತದೆ: ಖಂದಕ್ ಯುದ್ಧದ ಸಂದರ್ಭದಲ್ಲಿ ಬನು ಕುರೈಜಾ ಕುಲವು ಮದೀನಾದ ಒಪ್ಪಂದವನ್ನು ಉಲ್ಲಂಘಿಸಿ ದ್ರೋಹ ಮಾಡಿತು. ನಗರದ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ ಕಾರಣ, ನ್ಯಾಯಾಂಗ ತೀರ್ಪಿನಡಿ ಕೇವಲ ಸುಮಾರು ಅರವತ್ತು ಮಂದಿ ಯೋಧರಿಗಷ್ಟೇ ಶಿಕ್ಷೆ ವಿಧಿಸಲಾಯಿತು. ಇದು ಯಾದೃಚ್ಛಿಕ ಹತ್ಯೆಯಾಗಿರದೆ, ಅಂತರರಾಷ್ಟ್ರೀಯ ಕಾನೂನುಗಳಂತೆ ಒಪ್ಪಂದ ಭಂಗಕ್ಕೆ ನೀಡಿದ ಶಿಕ್ಷೆಯಂತಿತ್ತು.
ಸಿರಿಯಾದ ಪಂಡಿತ ಸೈಯದ್ ರಾಮದಾನ್ ಅಲ್-ಬೂಟಿ ತಮ್ಮ ಪ್ರಸಿದ್ದ ಕೃತಿಯಲ್ಲಿ ಪ್ರವಾದಿಯವರ ಯುದ್ಧಗಳ ಮೂರು ಮುಖ್ಯ ಉದ್ದೇಶಗಳನ್ನು ವಿವರಿಸುತ್ತಾರೆ:
1. ದಾಳಿಯಿಂದ ಸ್ವರಕ್ಷಣೆಗೆ (ಉದಾ: ಬದ್).
2. ದೊಡ್ಡ ಪ್ರಮಾಣದ ಶತ್ರು ಸೇನೆಯಿಂದ ರಕ್ಷಿಸಲು (ಉದಾ: ತಬೂಕ್).
3. ಒಪ್ಪಂದ ಉಲ್ಲಂಘನೆ ಮತ್ತು ದ್ರೋಹಕ್ಕೆ ಪ್ರತಿಕ್ರಿಯೆ (ಉದಾ: ಬನು ಕುರೈಜಾ).
ಈ ಮೂರು ಕಾರಣಗಳ ಹೊರತಾಗಿ ಪ್ರವಾದಿಯವರು ಯಾವ ಯುದ್ಧವನ್ನೂ ಪ್ರಾರಂಭಿಸಲಿಲ್ಲ ಎಂದು ಬೂಟಿ ಸ್ಪಷ್ಟಪಡಿಸುತ್ತಾರೆ. ಕೆಲವು ಖುರಾನ್ ಮತ್ತು ಹದೀಸಿನ ವಚನಗಳನ್ನು ತಪ್ಪಾಗಿ ಉಲ್ಲೇಖಿಸಿ 'ಇಸ್ಲಾಂ ಹಿಂಸೆಯನ್ನು ಪ್ರೋತ್ಸಾಹಿಸುತ್ತದೆ" ಎಂಬ ತಪ್ಪು ಕಲ್ಪನೆ ಹರಡಿದೆ. ಉದಾಹರಣೆಗೆ, "ಕನ್ಾಾರ್‌ರನ್ನು ಎಲ್ಲೆಲ್ಲಿ ಕಂಡರೂ ಕೊಲ್ಲಿರಿ" ಎಂಬಂತೆ ಕೆಲವು ಆಯಾತಗಳನ್ನು ಸಂದರ್ಭವಿಚ್ಚೇದನದಿಂದ ಉಲ್ಲೇಖಿಸಲಾಗುತ್ತದೆ. ಆದರೆ ಆ ಆಯಾತ್ ಗಳು ನಿರ್ದಿಷ್ಟ ಯುದ್ಧ ಪರಿಸ್ಥಿತಿಯನ್ನು ಮಾತ್ರ ಸೂಚಿಸುತ್ತವೆ; ನಿರಪರಾಧಿಗಳ ವಿರುದ್ಧ ಹಿಂಸೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ. ಪ್ರವಾದಿಯವರ ಜೀವನವೇ ಇದರ ದೃಢ ಸಾಕ್ಷಿ ಅವರು ಶತ್ರು ಸೇನೆಯ ಹೊರತಾಗಿ ಮಹಿಳೆಯರ, ಮಕ್ಕಳ, ವೃದ್ಧರ, ಸಾಧುಸಂತಗಳ ಮೇಲೆ ದಾಳಿ ಮಾಡುವುದನ್ನು ನಿಷೇಧಿಸಿದರು. ಹೀಗಾಗಿ ಪ್ರವಾದಿಯವರ ಯುದ್ಧನೀತಿಯು ತತ್ತ್ವಶಾಸ್ತ್ರದ ಮಟ್ಟದಲ್ಲಿಯೇ ಜಗತ್ತಿಗೆ ಪಾಠವಾಗಿದೆ. ಅವರ ದೃಷ್ಟಿಯಲ್ಲಿ ಯುದ್ಧವು ದೌರ್ಜನ್ಯ ತಡೆಗಟ್ಟುವ ಕೊನೆಯ ಪರಿಹಾರವಾಗಿತ್ತು; ಜಯಪ್ರದರ್ಶನಕ್ಕೋ ಅಥವಾ ವ್ಯಾಪ್ತಿ ವಿಸ್ತಾರಕ್ಕೋ ಉಪಕರಣವಲ್ಲ. ವಿಶ್ವಯುದ್ಧಗಳಲ್ಲಿನ ನಿರ್ದಯ ಕೊಲೆ ಮತ್ತು ಆಧುನಿಕ ಅಣ್ವಸ್ತ್ರಯುಗದ ಬಲಾತ್ಕಾರ ದಾಳಿಗಳೊಡನೆ ಹೋಲಿಸಿದಾಗ, ಪ್ರವಾದಿಯವರ ರಕ್ಷಣಾತ್ಮಕ ಯುದ್ಧಗಳು ಮಾನವತೆಯ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದ ಅನನ್ಯ ಮಾದರಿಯಾಗಿದೆ.
ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಪ್ರವಾದಿಯವರ ಯುದ್ಧನೀತಿ
ಪ್ರವಾದಿ ಮುಹಮ್ಮದ್ (ಸ) ಅವರ ಯುದ್ಧಪದ್ಧತಿ ಆಧುನಿಕ ಅಂತರರಾಷ್ಟ್ರೀಯ ಮಾನವೀಯ ಕಾನೂನು (International Humanitarian Law IHL)ಯ ಆದರ್ಶಗಳಿಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿದೆ. 1949ರ ಜಿನೀವಾ ಒಪ್ಪಂದಗಳು ಗಾಯಾಳು ಸೈನಿಕರ ರಕ್ಷಣೆ, ನಾಗರಿಕರ ಸಂರಕ್ಷಣೆ, ಯುದ್ಧ ಕೈದಿಗಳ ಮಾನವೀಯ ಚಿಕಿತ್ಸೆ ಮೊದಲಾದ ನಿಯಮಗಳನ್ನು ನಿರ್ದಿಷ್ಟಗೊಳಿಸುತ್ತವೆ. ಆದರೆ ಇವು ರೂಪುಗೊಳ್ಳುವುದಕ್ಕಿಂತ 13 ಶತಮಾನಗಳ ಮುಂಚೆಯೇ ಪ್ರವಾದಿಯವರು ಇದೇ ತತ್ವಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದರು.
ನಾಗರಿಕರ ಮತ್ತು ಯುದ್ಧದಲ್ಲಿ ಭಾಗವಹಿಸದವರ ರಕ್ಷಣೆ:
ಪ್ರವಾದಿಯವರು "ಮಕ್ಕಳನ್ನು ಕೊಲ್ಲಬೇಡಿ, ಮಹಿಳೆಯರ ಮೇಲೆ ದಾಳಿ ಮಾಡಬೇಡಿ, ಸಾಧುಸಂತರು, ದೇವಾಲಯದ ಪೂಜಾರಿಗಳನ್ನು ಕಾದಿರಿಸಿ" ಎಂದು ಸ್ಪಷ್ಟ ನಿರ್ದೇಶ ನೀಡಿದರು. ಇದು ಜಿನೀವಾ ಒಪ್ಪಂದದ ನಾಲ್ಕನೇ ಭಾಗದಲ್ಲಿ ಉಲ್ಲೇಖಿಸಿರುವ ನಾಗರಿಕರ ರಕ್ಷಣೆಯ ತತ್ವಗಳಂತೆಯೇ ಇದೆ.
ಮೃತದೇಹಗಳ ಗೌರವ:
ಯುದ್ಧಭೂಮಿಯಲ್ಲಿ ಸತ್ತವರ ದೇಹವನ್ನು ಮನುಷ್ಯತ್ವದಿಂದ ಸಮಾಧಿ ಮಾಡಲು ಪ್ರವಾದಿಯವರು ಆದೇಶಿಸಿದರು. ಯಲ್ಲಾ ಇಬ್ಬ ಮುರ ಅವರ ಹದೀಸಿನಲ್ಲಿ, "ಪ್ರವಾದಿಯವರು ಶತ್ರು ಅಥವಾ ಸ್ನೇಹಿತ ಎಂದು ವಿಚಾರಿಸದೆ, ಸತ್ತ ಪ್ರತಿಯೊಬ್ಬರಿಗೂ ಗೌರವಪೂರ್ವಕ ಅಂತ್ಯಕ್ರಿಯೆ ಮಾಡಲು ಹೇಳುತ್ತಿದ್ದರು" ಎಂದು ಬರುತ್ತದೆ. ಜಿನೀವಾ ಪ್ರೋಟೋಕಾಲ್ 1. ವಿಧಿ 37 ಸಹ ಈ ಅಂಶವನ್ನು ಒತ್ತಿಹೇಳುತ್ತದೆ.
ಯುದ್ಧ ಕೈದಿಗಳ ಮಾನವೀಯ ಚಿಕಿತ್ಸೆ:
ಬದ್ ಯುದ್ಧದ ಬಳಿಕ ಹಿಡಿದ 70 ಕೈದಿಗಳಿಗೆ ಪ್ರವಾದಿಯವರು "ಅವರನ್ನು ಚೆನ್ನಾಗಿ ನೋಡಿಕೊಳ್ಳಿರಿ" ಎಂದು ಸೂಚಿಸಿದರು. ಅಬೂ ಆಝೀಜ್ ಇಬ್ಬ ಉಮೈರ್ ಹೇಳುತ್ತಾರೆ: "ಅನ್ಸಾರ್ ಸಹೋದ್ಯೋಗಿಗಳು ತಮ್ಮಿಗೆ ಕೇವಲ ಖರ್ಜೂರ ತಿನ್ನುತ್ತಾ ನನಗೆ ರೊಟ್ಟಿ ಕೊಟ್ಟರು" (ತಬರಾನಿ). ಜಿನೀವಾ ಒಪ್ಪಂದದ ತೃತೀಯ ಭಾಗದ ವಿಧಿ 17ಯಲ್ಲಿ ಕೈದಿಗಳ ಮೇಲೆ ಹಿಂಸೆ ನಿಷೇಧಿಸಿರುವುದು ಇದೇ ತತ್ತ್ವವನ್ನು ಪ್ರತಿಬಿಂಬಿಸುತ್ತದೆ.
ಅಮಾನ (ಸುರಕ್ಷಾ ಭರವಸೆ):
ಶತ್ರು ಸೇನೆಯಲ್ಲಿ ಒಬ್ಬನು ಆಶ್ರಯ ಕೋರಿದರೆ ಅವನಿಗೆ ರಕ್ಷಣೆ ನೀಡಬೇಕು ಎಂಬ ಖುರಾನ್ (9:6) ನಿಯಮ, ಹಾಗೂ ಉಮ್ಮು ಹಾನಿ ನೀಡಿದ ರಕ್ಷಣೆಯನ್ನು ಪ್ರವಾದಿಯವರು ಮಾನ್ಯಗೊಳಿಸಿದ ಘಟನೆಯು, ಇಂದಿನ "ಸೇಫ್ ಕೊಂಡಕ್ಸ್" (safe conduct) ನಿಯಮದ ಸಮಾನವಾಗಿದೆ.
ಮುರಿವಿಲ್ಲದ ಆಯುಧ ಮತ್ತು ಕ್ರೂರತೆಯ ನಿಷೇಧ:
ಪ್ರವಾದಿಯವರು ಶತ್ರು ಶರೀರವನ್ನು ವಿಕೃತಗೊಳಿಸುವುದನ್ನು (mutilation) ನಿರ್ಬಂಧಿಸಿದರು. ಮಾನವ ಹಾಗೂ ಪ್ರಾಣಿಗಳ ಮೇಲೆ ಹಿಂಸೆ ನಿಷೇಧಿಸಿದರು. ಇದು ಜಿನೀವಾ ಒಪ್ಪಂದದ ಪೂರಕ ಪ್ರೋಟೋಕಾಲ್ಗಳಲ್ಲಿಯೂ ಪ್ರತಿಫಲಿಸುತ್ತದೆ. ಹೀಗಾಗಿ ಪ್ರವಾದಿಯವರ ಯುದ್ಧನೀತಿ ಕೇವಲ ಧಾರ್ಮಿಕ ಉಪದೇಶವಲ್ಲ ಅದು ಮಾನವೀಯ ಕಾನೂನುಗಳಿಗೆ ಶಾಶ್ವತ ಮಾದರಿಯಾಗಿದೆ. ಆಧುನಿಕ ಅಂತಾರಾಷ್ಟ್ರೀಯ ನಿಯಮಗಳು ಪ್ರವಾದಿಯವರ ಮಾದರಿಯನ್ನು ನೆನಪಿಸುವಂತೆ ರೂಪುಗೊಂಡಿರುವುದು, ಅವರ ಮಾರ್ಗದರ್ಶನದ ವಿಶ್ವಮಟ್ಟದ ಮಹತ್ವವನ್ನು ಬಲಪಡಿಸುತ್ತದೆ.
ಯುದ್ಧನೀತಿಗಳ ತುಲನಾತ್ಮಕ ವಿಶ್ಲೇಷಣೆ
ಪ್ರವಾದಿ ಮುಹಮ್ಮದ್ (ಸ) ಅವರ ಯುದ್ಧಗಳು ಮತ್ತು ಇಪ್ಪತ್ತನೆಯ ಶತಮಾನದ ಜಾಗತಿಕ ಯುದ್ಧಗಳ ನಡುವಿನ ಹೋಲಿಕೆ ಮಾನವ ಇತಿಹಾಸದ ಯುದ್ಧನೀತಿಗಳ ಪರಿಪೂರ್ಣ ಭೇದವನ್ನು ತೋರಿಸುತ್ತದೆ. ಪ್ರವಾದಿಯವರು 63 ಯುದ್ಧಗಳಲ್ಲಿ ಪಾಲ್ಗೊಂಡರೂ, ಆ ಸಂದರ್ಭದಲ್ಲಿ ಸಾವು ನೋವು ನಿರ್ಣಯಾತ್ಮಕವಾಗಿ ನಿಯಂತ್ರಿತವಾಗಿತ್ತು. ರಷ್ಯಾದ ಇತಿಹಾಸಕಾರ ಅರ್ಲಾನೋ ಅವರ ಅಧ್ಯಯನ ಪ್ರಕಾರ, ಪ್ರವಾದಿಯ ಯುದ್ಧಗಳಲ್ಲಿ ಒಟ್ಟು 262 ಮುಸ್ಲಿಂ ಮತ್ತು 1022 ಅ-ಮುಸ್ಲಿಂ ಸೈನಿಕರ ಸಾವಷ್ಟೇ ದಾಖಲಾಗಿವೆ. ಇವರಲ್ಲಿ ನಾಗರಿಕರ ಸಾವು ಅತ್ಯಂತ ಕಡಿಮೆ, ಏಕೆಂದರೆ ಪ್ರವಾದಿಯವರು "ಮಕ್ಕಳನ್ನು ಕೊಲ್ಲಬೇಡಿ, ಮಹಿಳೆಯರನ್ನು ಹಾನಿ ಮಾಡಬೇಡಿ, ಮರಗಳನ್ನು ಸುಡಬೇಡಿ" ಎಂಬ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಪ್ರತಿಯೊಂದು ಯುದ್ಧವೂ ಧರ್ಮವಿಸ್ತಾರಕ್ಕಾಗಿ ಅಲ್ಲ, ಸತ್ಯ, ನ್ಯಾಯ ಮತ್ತು ದ್ರೋಹವಿರೋಧಕ್ಕಾಗಿ ಮಾತ್ರ ನಡೆದವು. ಶತ್ರು ಸೇನೆಯ ಮೇಲಿನ ಶರಣಾಗಳಿಗೆ ಜೀವ ಮತ್ತು ಗೌರವವನ್ನು ಕಾಯ್ದುಕೊಂಡು, ಪರಿಸರ ಸಂರಕ್ಷಣೆಯ ನಿಯಮಗಳನ್ನು ಜಾರಿಗೊಳಿಸಿದರು.
ವಿಶ್ವಯುದ್ಧಗಳಲ್ಲಿ ಸ್ಥಿತಿಯು ಸಂಪೂರ್ಣ ಭಿನ್ನವಾಗಿತ್ತು. ಮೊದಲ ಮತ್ತು ಎರಡನೇ ವಿಶ್ವಯುದ್ಧಗಳಲ್ಲಿ ಅಂದಾಜು 6.5 ಕೋಟಿ ಜನ ಸಾವಿಗೆ ಗುರಿಯಾದರು, ಲಕ್ಷಾಂತರ ನಾಗರಿಕರು ಅನಾಥರು, ನಗರಗಳು ನಾಶಗೊಂಡವು. ನಾಜಿ ಹೋಲೋಕಾಸ್ಟ್, ಹಿರೋಶಿಮಾ-ನಾಗಾಸಾಕಿ ಅಣುಬಾಂಬ್ ದಾಳಿಗಳು ಮಾನವೀಯತೆಯ ವಿರುದ್ಧದ ಕ್ರೂರತೆಯ ಉಲ್ಲೇಖಗಳು. ಯುದ್ಧಪಡೆಗಳ ಮೇಲೆ ಯಾವುದೇ ನೈತಿಕ ನಿಯಮ ಪಾಲನೆಯಿಲ್ಲ, ಬಾಂಬ್, ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ನಿರಪರಾಧಿಗಳಿಗೂ ಕಾವಲು ಇಲ್ಲ. ಹೋಲಿಕೆಯಾದಾಗ, ಪ್ರವಾದಿಯವರ ಯುದ್ಧಗಳು ಸ್ಪಷ್ಟವಾಗಿ ರಕ್ಷಣಾತ್ಮಕ ಮತ್ತು ಸತತ ಪರಿಗಣನೆಯೊಂದಿಗೆ ನಡೆಯಿತು. ಪ್ರವಾದಿಯವರು ಯುದ್ಧವನ್ನು ಆರಂಭಿಸುವ ಮೊದಲು ಶಾಂತಿ ಮಾತುಕತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿದ್ದರು. ಹುದೈಬಿಯ್ಯ ಒಪ್ಪಂದವು ಅವರ ರಾಜತಾಂತ್ರಿಕ ಬುದ್ದಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಬನು ಕುರೈಜಾ ಘಟನೆಯಂತಹ ವಿಶೇಷ ಸಂದರ್ಭಗಳಲ್ಲಿಯೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರವಾದಿಯವರ ಯುದ್ಧದಲ್ಲಿ ಕೈದಿಗಳ ಮಾನವೀಯ ಚಿಕಿತ್ಸೆ, ಮೃತದೇಹಗಳ ಗೌರವ, ನಾಗರಿಕರ ರಕ್ಷಣೆ ಎಲ್ಲಾ IHL ತತ್ಸಗಳಿಗೆ ಹೊಂದಿಕೊಂಡಿವೆ. ಈ ಹೋಲಿಕೆಯು ಸ್ಪಷ್ಟಪಡಿಸುತ್ತದೆ: ಪ್ರವಾದಿಯವರ ಯುದ್ಧನೀತಿ ಮಾನವೀಯ ಮಿತಿಯ ಪರಿಪೂರ್ಣ ಮಾದರಿಯಾಗಿದ್ದು, ಅಕ್ರಮ ಮತ್ತು ನಿರಪರಾಧಿ ನಾಶವಲ್ಲ; ಅದು ಶಾಂತಿ, ನ್ಯಾಯ ಮತ್ತು ಧರ್ಮಸಂರಕ್ಷಣೆಯ ಪರಿಪೂರ್ಣ ಉದಾಹರಣೆ. ವಿಶ್ವಯುದ್ಧಗಳು ಮಾನವ ಕ್ರೌರ್ಯದ ಅತಿಮಟ್ಟದ ಸಂಕೇತವಾಗಿದ್ದರೆ, ಪ್ರವಾದಿಯವರ ಯುದ್ಧಗಳು ಮಾನವತೆಯ ನೈತಿಕ ಮೌಲ್ಯಗಳನ್ನು ಉಳಿಸುತ್ತಾ ಶಕ್ತಿಯ ಸರಿಯಾದ ಬಳಕೆಯ
ಆದರ್ಶವನ್ನು ಸಾರುತ್ತವೆ. ಇಂತಹ ಹೋಲಿಕೆಯು ಇಂದಿನ ಆಧುನಿಕ ಯುದ್ಧ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳಿಗೆ ಪ್ರಸ್ತುತ ಪಾಠವಾಗಿ ಸೇವೆ ಮಾಡುತ್ತದೆ.
ಉಪಸಂಹಾರ
ಇಡೀ ಮಾನವ ಇತಿಹಾಸವು ಯುದ್ಧಗಳ ಕತ್ತಲೆ ಹಾದಿಯಿಂದ ಗುರುತಿಸಿಕೊಂಡಿದೆ. ಇಪ್ಪತ್ತನೇ ಶತಮಾನದ ಎರಡು ವಿಶ್ವಯುದ್ಧಗಳು ಲಕ್ಷಾಂತರ ಜೀವಗಳನ್ನು ಕಸಿದುಕೊಂಡು, ರಾಷ್ಟ್ರಗಳ ಸಾಂಸ್ಕೃತಿಕ-ಆರ್ಥಿಕ ನೆಲೆಗಳನ್ನು ನಾಶಮಾಡಿದವು. ನಿರಪರಾಧಿಗಳ ರಕ್ತಸಿಕ್ತ ನೆನಪುಗಳು ಮತ್ತು ಅಣುಶಸ್ತ್ರಗಳ ಭೀತಿಯು ಇಂದಿಗೂ ಜಗತ್ತನ್ನು ಹಿಂಸಿಸುತ್ತಿವೆ. ಇಂತಹ ಭೀಕರತೆ ಎದುರಿನಲ್ಲೇ ಪ್ರವಾದಿ ಮುಹಮ್ಮದ್ (ಸ) ಅವರ ಯುದ್ಧನೀತಿಯು ಶಾಶ್ವತ ಪಾಠವನ್ನು ನೀಡುತ್ತದೆ. ಪ್ರವಾದಿಯವರು ಯುದ್ಧವನ್ನು ಕೊನೆಯ ಪರಿಹಾರವಾಗಿ ಮಾತ್ರ ಅಳವಡಿಸಿಕೊಂಡರು. ಶತ್ರು ಧರ್ಮೀಯರ ವಿರುದ್ಧವಲ್ಲ, ಅನ್ಯಾಯ ಮತ್ತು ದ್ರೋಹದ ವಿರುದ್ಧವೇ ಅವರು ಹೋರಾಟ ನಡೆಸಿದರು. ಮಕ್ಕಳ, ಮಹಿಳೆಯರ, ವೃದ್ಧರ, ಧಾರ್ಮಿಕ ಸ್ಥಳಗಳ ರಕ್ಷಣೆ; ಮರಗಳು ಮತ್ತು ಪರಿಸರದ ಸಂರಕ್ಷಣೆ: ಕೈದಿಗಳಿಗೆ ಮಾನವೀಯ ಗೌರವ ಈ ಎಲ್ಲಾ ನಿಯಮಗಳು ಅವರು ನೀಡಿದ ಯುದ್ದ ಮಾರ್ಗಸೂಚಿಗಳ ಕೇಂದ್ರಬಿಂದು. ಹೀಗಾಗಿ ಅವರ ಯುದ್ಧಗಳು ಅಕ್ರಮವಲ್ಲ, ಮಾನವತೆಯ ಕಾಪಾಡುವ ಪ್ರಾಮಾಣಿಕ ಹೋರಾಟವಾಗಿತ್ತು. ಇತಿಹಾಸಕಾರ ಕೆ.ಎಸ್. ರಾಮಕೃಷ್ಣ ರಾವ್ ಹೇಳಿದಂತೆ, ಪ್ರವಾದಿಯವರು ಯುದ್ಧಭೂಮಿಯಲ್ಲೂ ಸಹ ಇಬಾದತ್ದಂತೆ ನೈತಿಕತೆಯನ್ನು ಪಾಲಿಸಲು ತಮ್ಮ ಸಹಚರರಿಗೆ ಉಪದೇಶಿಸಿದರು. ರಷ್ಯಾದ ಅರ್ಲಾನೋ ನಡೆಸಿದ ಅಧ್ಯಯನವು ಸಹ ಪ್ರವಾದಿಯವರ ಯುದ್ಧಗಳಲ್ಲಿ ಸಾವು ನೋವು ಎಷ್ಟು ಸೀಮಿತವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ. ಹೋಲಿಕೆಯಾಗಿ, ವಿಶ್ವಯುದ್ಧಗಳಲ್ಲಿ ಉಂಟಾದ ಭಯಾನಕ ನಾಶವು ಮಾನವ ಕ್ರೌರ್ಯದ ಮಿತಿಯಿಲ್ಲದ ಉದಾಹರಣೆಯಾಗಿದೆ.
ಆಧುನಿಕ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳು (IHL) ಜಿನೀವಾ ಒಪ್ಪಂದಗಳ ಮೂಲಕ ನಾಗರಿಕರ ರಕ್ಷಣೆ, ಕೈದಿಗಳ ಗೌರವ, ಮೃತದೇಹಗಳ ಗೌರವಾನ್ವಿತ ಅಂತ್ಯಕ್ರಿಯೆ ಇತ್ಯಾದಿ ನಿಯಮಗಳನ್ನು ಪ್ರಸ್ತಾಪಿಸುತ್ತವೆ. ಆದರೆ ಪ್ರವಾದಿಯವರು ಈ ಮೌಲ್ಯಗಳನ್ನು 1400 ವರ್ಷಗಳ ಹಿಂದೆಲೇ ಕಾರ್ಯರೂಪಕ್ಕೆ ತಂದಿದ್ದರು. ಅವರ ಆದರ್ಶಗಳು ಇಂದಿನ ಜಗತ್ತಿಗೆ ಇನ್ನೂ ಮಾರ್ಗದರ್ಶಕವಾಗಿವೆ. ಹೀಗಾಗಿ, ವಿಶ್ವಯುದ್ಧಗಳ ವಿನಾಶದ ಪಾಠದೊಂದಿಗೆ ಪ್ರವಾದಿಯವರ ಯುದ್ಧನೀತಿ ಮಾನವಕೋಟಿಗೆ ಶಾಂತಿ, ನ್ಯಾಯ ಮತ್ತು ನೈತಿಕತೆಯ ನಿಲುವನ್ನು ಒದಗಿಸುತ್ತದೆ. ಪ್ರವಾದಿಯವರ 1500ನೇ ಜನ್ಮವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವ ಈ ಕಾಲದಲ್ಲಿ, ಜಾಗತಿಕ ಶಾಂತಿಗೆ ಬೇಕಾಗಿರುವ ಸತ್ಯಸಂಧ ಧ್ವನಿಯೇ ಅವರ ಸಂದೇಶ ಎಂಬುದನ್ನು ಜಗತ್ತಿನ ಜನತೆ ಪುನಃ ಅರಿತುಕೊಳ್ಳುವುದು ಅಗತ್ಯ.
ಆಧಾರಗಳು
1. ಆಲ್ ಜಿಹಾದ್ ಫೀ ಅಲ್ ಇಸ್ಲಾಮ್ ಕೈಫ್ ನಥಹಮಮುಹುವ ಕೈತ ನುಮಾರಿಸುಹು ಲಿ ಸಯೀದ್ ರಮಝಾನ್ ಬೂಧಿ