ವಿಧವೆಯರೊಂದಿಗೆ ಸಹಾನುಭೂತಿ
ವಿಧವೆಯರನ್ನು ಶಾಪವಾಗಿ ಪರಿಗಣಿಸುವವರೂ ಇದ್ದಾರೆ. ಕೆಲವು ತತ್ತ್ವಚಿಂತನೆಗಳು ಸ್ವತಃ ಧರ್ಮದ ಭಾಗವಾಗಿ ವಿಧವೆಯರನ್ನು ನಿರ್ಲಕ್ಷಿಸುವವರೂ ಇದ್ದಾರೆ. ಹಿಂದೂ ಧರ್ಮದ ಪ್ರಕಾರ,ವಿಧವೆಯರು ಮರುಮದುವೆಯಾಗುವುದನ್ನು ನಿಷೇಧಿಸಲಾಗಿತ್ತು. ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಭಾರತದಲ್ಲಿ ವಿಧವೆ ಮಹಿಳೆಯರ ಸಂಖ್ಯೆ 40 ಮಿಲಿಯನ್ ಎಂದು ಅಂದಾಜಿಸಲಾಗಿದೆ.
1856 ರಲ್ಲಿ ಬ್ರಿಟಿಷ್ ಸರ್ಕಾರವು ಪರಿಚಯಿಸಿದ ಹಿಂದೂ ವಿಧವೆ ಪುನರ್ವಿವಾಹ ಕಾಯ್ದೆಯಿಂದ ನಿಷೇಧಿತ ವಿಧವೆ ವಿವಾಹವನ್ನು ಭಾರತದಲ್ಲಿ ಕಾನೂನುಬದ್ಧಗೊಳಿಸಲಾಯಿತು.ಬಂಗಾಳದ ಸಾಮಾಜಿಕ ಕಾರ್ಯಕರ್ತ ಈಶ್ವರ್ ಪ್ರಸಾದ್ ವಿದ್ಯಾಸಾಗರ್ ಜನರಿಂದ ಸಹಿ ಸಂಗ್ರಹಿಸುವ ಮೂಲಕ ಈ ವಿಚಾರವನ್ನು ಸಮೂಹಿಕ ಜನರ ಮುಂದೆ ವಿಷಯವನ್ನು ಮಂಡಿಸಿದರು.
ಇತರ ಕೆಲವು ಪ್ರಾಚೀನ ವ್ಯವಸ್ಥೆಗಳು ವಿಧವೆಯರನ್ನು ಶಾಪಗ್ರಸ್ತ ಮತ್ತು ಪುನರ್ವಿವಾಹವನ್ನು ನಿರುತ್ಸಾಹವಾಗಿ ಪರಿಗಣಿಸಿದರು.ಯಹೂದಿ ಸಮಾಜದಲ್ಲಿ ವಿಧವೆಯರ ವಿಚಾರ ತುಂಬಾ ಕಷ್ಟಕರವಾಗಿತ್ತು.ಪತಿ ಮರಣ ಹೊಂದಿದ ಮಹಿಳೆ (ವಿಧವೆ) ತನ್ನ ಪತಿಯ ಸಹೋದರನ ಆನುವಂಶಿಕತೆಯಂತೆ.ಅವನಿಗೆ ಮದುವೆಯಾಗಲು ವಯಸ್ಸಾಗಿಲ್ಲದಿದ್ದರೆ,ಅವನು ವಯಸ್ಸಾಗುವವರೆಗೂ ಅವಳನ್ನು ಕಾಯಬೇಕು.ಇನ್ನೊಬ್ಬರನ್ನು ಮದುವೆಯಾಗಲು ಸಾಧ್ಯವಿಲ್ಲ.ಮಾತ್ರವಲ್ಲ,ಅವಳಿಗೆ ಗಂಡನ ಆಸ್ತಿನಲ್ಲಿ ಯಾವುದೇ ಹಕ್ಕಿಲ್ಲ.
ಪ್ರಾಚೀನ ಅರಬ್ ವಂಶದಲ್ಲಿ ಸಹ ಇಂತಹ ಆಚರಣೆಗಳು ಅಸ್ತಿತ್ವದಲ್ಲಿದ್ದವು,ಆದರೆ ತಿರುನೆಬಿ (ಸ) ರ ಆಗಮನವು ಈ ವಿಚಾರದಲ್ಲಿ ವಿಶೇಷವಾದ ಬದಲಾವಣೆನ್ನುಂಟು ಮಾಡಿತು.
ಪ್ರವಾದಿ (ಸ)ರು ವಿಧವೆ ವಿವಾಹವನ್ನು ಪ್ರೋತ್ಸಾಹಿಸುವುದಲ್ಲದೆ,ವಿಧವೆಯರನ್ ನೇ ಮದುವೆಯಾಗಿ ಸಮೂದಾಯಕ್ಕೆ ಮಾದರಿ ತೋರಿಸಿದರು. ಹತ್ತಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾದ ಪ್ರವಾದಿವರ್ಯರು,ಒಬ್ಬ ಕನ್ಯೆಯನ್ನು ಮಾತ್ರ ತಮ್ಮ ಹೆಂಡತಿಯಾಗಿ ಸ್ವೀಕರಿಸಿದರು.ಉಳಿದವರೆಲ್ಲರೂ ವಿಧವೆಯರಾಗಿದ್ದರು.ಅವರೆಲ್ಲರನ್ನೂ ಹೆಂಡತಿಯಾಗಿ ಸ್ವೀಕರಿಸಲು ವಿಶೇಷ ಧಾರ್ಮಿಕ ಮತ್ತು ಸಾಮಾಜಿಕ ಕಾರಣಗಳಿದ್ದವು.ವಿಧವೆಯ ಸಾರ್ವತ್ರಿಕೀಕರಣದ ಹಿಂದಿನ ಉದ್ದೇಶಗಳಲ್ಲಿ ಒಂದಾಗಿ ಕಾಣಬಹುದು.
ವಿಧವೆಯರು ಮದುವೆಯಾಗದಿದ್ದರೂ ಅವರನ್ನು ಸಮಾಧಾನ ಪಡಿಸಬಹುದು.ಪ್ರವಾದಿ (ಸ) ಅದನ್ನು ಶ್ಲಾಘಿಸಿದರು ಮತ್ತು ಪ್ರೋತ್ಸಾಹಿಸಿದರು.ಇಮಾಮ್ ಬುಖಾರಿ ವರದಿ ಮಾಡಿದ ಒಂದು ಹದೀಸ್ ಹೀಗೆ ವರದಿಯಾಗಿದೆ: "ವಿಧವೆಯರಿಗೆ ಮತ್ತು ಬಡವವರಿಗಾಗಿ ಕಷ್ಟಪಡುವವರಿಗೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ನಡೆಸಿದ ಪ್ರತಿಫಲ ನೀಡುವವನು ಅಥವಾ ಇಡೀ ದಿನ ಉಪವಾಸ ಮಾಡಿ ರಾತ್ರಿಯ ಪ್ರಾರ್ಥನೆಯಲ್ಲಿ ತೊಡಗಿದ ಪ್ರತಿಫಲ ನೀಡುವವನು"
ಅಬ್ದುಲ್ಲಾ ಇಬ್ನ್ ಅಬಿ ಅವ್ಫಾ (ರ) ಹೀಗೆ ಹೇಳಿದರು: "ಪ್ರವಾದಿರ್ವರು ಅನೇಕ ದ್ರಿಕ್ರಗಳನ್ನು ಹೇಳುತ್ತಾರೆ.ಅನಗತ್ಯ ಕಾರ್ಯಗಳಿಂತ ದೂರವಿರುತ್ತಾರೆ, (ಜುಮುವಾ) ಪ್ರಾರ್ಥನೆಗಳನ್ನು ವಿಸ್ತರಿಸುತ್ತಾರೆ, ಕುತುಬಾವನ್ನು ಕಡಿಮೆಗೊಳಿಸಲಾಗುತ್ತಾರೆ,ಮತ್ತು ವಿಧವೆಯರು ಮತ್ತು ಬಡವರೊಂದಿಗೆ ಒಡೆನಾಡಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು ನೋಡುತ್ತಾರೆ" ....(ನಾಸಾಯಿ)
ಅ ಕಾಲದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆಯರು ಅನೇಕ ಸಮಸ್ಯೆಗಳನ್ನು ಹೊಂದಬಹುದು.ಅವರಿಗೆ ಸಾಂತ್ವನ ನೀಡಲು ಮತ್ತು ಸಾಮಾನ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವುದು ಉತ್ತಮ ಸಾಮಾಜಿಕ ಸೇವೆಯಾಗಿತ್ತು. ಸದಾ ಅಸಹಾಯಕರ ಆಶ್ರಯಕ್ಕಾಗಿ ಅಸಕ್ತಿ ತೋರುದರೊಂದಿಗೆ ಅಹ್ವಾನ ನೀಡಿದ ತಿರುನೆಬಿ (ಸ) ರ ಜೀವನ ಸಂದೇಶವನ್ನು ನೆನಪಿಟ್ಟುಕೊಳ್ಳಲು ಈ ಪವಿತ್ರ ತಿಂಗಳು ನಮಗೆ ಪ್ರೇರಣೆ ನೀಡಲಿ.
ಕನ್ನಡಕ್ಕೆ : ಅಜ್ಮಲ್ ಉಜಿರೆ