ನೆಬಿ ಅನುರಾಗದಲ್ಲಿ ನಿರ್ಜೀವಿಗಳು

    ನಸ್ಸು ಮಹಮ್ಮದ್ (ಸ.ಅ) ಮರ ಸ್ನೇಹನುಡಿ ಹಾಡಿ ಹೊಗಳಿದಷ್ಟು ತೀರದು.ಬರೇ ಪದಗೊಂಚಲುಗಳ ಸಾಲು ಸೇರಿಸಿ ವರ್ಣಿಸಿ ಪೂರ್ಣಗೊಳಿಸುವುದು ಅಸಾದ್ಯ. ಭೂ ಮಂಡಲದ ಸರ್ವ ಜೀವ ರಾಶಿಗಳ ಸೃಷ್ಟಿಗೆ ಮೂಲ ಕಾರಣರಾಗಿದ್ದಾರೆ ನೆಬಿ ಮಹಮ್ಮದ್ (ಸ.ಅ).

ನೆಬಿಯರನ್ನು ಸರ್ವಸ್ವವಾಗಿ ಕಂಡ ಅದೆಷ್ಟೋ ಮಹಾನ್ ಪುರುಷರ ಜೀವನವು ನಮ್ಮ ಮುಂದೆ ಅನಂತ ಉದಾಹರಣೆಗಳಿಂದ ಕೂಡಿರುವಾಗ ನಿರ್ಜೀವಿಗಳ ಪ್ರವಾದಿ ಪ್ರೇಮ ಒಂತರಾ ಅಚ್ಚರಿಯೆನಿಸುತ್ತದೆ.
ಜೀವರಹಿತವಾದ ವಸ್ತುಗಳು ನೆಬಿಯರನ್ನು ಪ್ರೀತಿಸಿದ್ದರೆ ಮನುಷ್ಯರಾದ ನಾವು ಪ್ರವಾದಿ ಪ್ರೇಮದ ರಸ ಹೀರದೀರುವುದು ದುಃಖದ ಸಂಗತಿಯೇ ಸರಿ...

ಕಲ್ಲು -

"ಕಲ್ಲು" ಸಾಮಾನ್ಯವಾಗಿ ಕಠಿಣ ಹೃದಯ ಹೊಂದಿದ ಮನುಷ್ಯರನ್ನು ಉದಾಹರಿಸುವ ವಸ್ತುವಾಗಿದೆ.ಕಲ್ಲಿನ ಕುರಿತು ಉದಾಹರಿಸುತ್ತಾ ಕುರ್ಆನ್ ಹೇಳುತ್ತದೆ "
                      ثُمَّ قَسَتْ قُلُوبُكُم مِّن بَعْدِ ذَٰلِكَ فَهِيَ كَالْحِجَارَةِ
"ಅದರ ಬಳಿಕ ತಮ್ಮ ಹೃದಯಗಳು ಕಲ್ಲಿನಂತೆ ಗಟ್ಟಿಗೊಂಡವು .." ಇಂತಹ ಕಲ್ಲು ಹಬೀಬರನ್ನು ಪ್ರೀತಿಸಿ ಗೌರವ ವ್ಯಕ್ತಪಡಿಸಿದೆ.
ಒಮ್ಮೆ ಪೈಗಂಬರ್ (ಸ.ಅ) ಹೇಳುತ್ತಾರೆ -

    إني لأعرف حجرا بمكة كان يسلم علي قبل أن أبعث إني لأعرفه الآن
" ನಾನು ಮಕ್ಕದ ಪ್ರತಿಯೊಂದು ಕಲ್ಲುಗಳ ಬಲ್ಲವನಾಗಿದ್ದೇನೆ, ನನ್ನ ನಿಯೋಜಿಸುವಿಕೆಯ ಮೊದಲು ಕಲ್ಲುಗಳು ನನ್ನ ಮೇಲೆ ಸಲಾಮ್ ಹೇಳುತ್ತಿದ್ದವು , ಖಂಡಿತವಾಗಿಯೂ ಸದ್ಯ ಅದನ್ನು ಅರಿಯುವವನಾಗಿದ್ದೇನೆ "

ಈ ಹದೀಸ್ ಕಲ್ಲುಗಳಿಗೆ ನೆಬಿಯರ ಮೇಲಿದ್ದ ಸಲುಗೆಯನ್ನು ತಿಳಿಸುತ್ತದೆ. ಹೃದಯರಹಿತವಾದ ಕಲ್ಲಿಗೆ ನೆಬಿಯರ ಮೇಲೆ ಆ ಮಟ್ಟಿನ ಮಮತೆ ಇರಬೇಕಾದರೆ ನಮ್ಮ ಪಾಡೇನು..?
ಕಲ್ಲುಗಳು ನಬಿಯರ ಮೇಲೆ ತೋರಿಸಿದ ಆ ಪ್ರೀತಿ ಅಧ್ಭುತವಾಗಿದೆ.

ಪರ್ವತಗಳು -
ಅಲ್ಲಾಹನ ದೃಷ್ಟಾಂತಗಳಲ್ಲಿ ಎಣಿಸಲ್ಪಡುವ ಪ್ರಮುಖ ವಸ್ತುವಾಗಿದೆ ಪರ್ವತಗಳು. ದೈತ್ಯ ಆಕಾರದಿಂದ ಕೂಡಿ ಬಹು ವಿಶಾಲತೆ ಹೊಂದಿದೆ.ಇಂತಹ ಪರ್ವತಗಳು ಸಹ ಹಬೀಬರೊಂದಿಗೆ ಗೌರವ ಭಾವದಿಂದ ನಡೆದುಕೊಂಡಿದೆ.

ಒಮ್ಮೆ ನೆಬಿ (ಸ.ಅ) ತನ್ನ ಸ್ವಹಾಬಿ ಅನುಚರರಾದ ಅಬೂಬಕ್ಕರೆ ಸಿದ್ದೀಕ್ (ರ.ಅ),ಉಮರ್ (ರ.ಅ),ಹಾಗೂ ಉಸ್ಮಾನ್ ರ.ಅ ರೊಂದಿಗೆ ಉಹ್ದ್ ಪರ್ವತದ ಕಡೆ ಹೆಜ್ಜೆ ಹಾಕುತ್ತಾರೆ.ಮುಂದಕ್ಕೆ ಸಾಗುವ ವೇಳೆ ಪರ್ವತವು ಕಂಪಿಸಲು ಪ್ರಾರಂಭವಾಗುತ್ತದೆ. ಅರೆಕ್ಷಣ ಪ್ರವಾದಿ (ಸ.ಅ) ತಮ್ಮ ಕಾಲುಗಳಿಂದ ಪರ್ವತದ ಮೇಲೆ ಒದೆಯುತ್ತಾ ಹೇಳುತ್ತಾರೆ - "ಸಮದಾನಿಸು"
ಆಗ ಪರ್ವತವು ತನ್ನ ನಲುಗುವಿಕೆ ನಿಲ್ಲಿಸಿ ಶಾಂತವಾಗುತ್ತದೆ. ಆಗ ನೆಬಿಯವರು ಹೇಳುತ್ತಾರೆ -
                           فما عليك إلا نبيٌّ أو صدِّيقٌ أو شهيدان
"ನಿನ್ನ ಮೇಲೆ ನೆಬಿ (ಸ.ಅ) , ಸಿದ್ದೀಕ್ (ರ.ಅ) , ಉಮರ್ (ರ.ಅ) ಹಾಗೂ ಉಸ್ಮಾನ್ (ರ.ಅ) ಆಗಿದ್ದಾರೆ"
ಈ ಘಟನೆ ವಿವರಿಸುತ್ತಾ ಖಾಝಿ ಅಬೂಬಕರ್ ಅಲ್ ಅರಬಿ (ರ.ಅ) ಹೇಳುತ್ತಾರೆ : ಪರ್ವತಗಳ ನಲುಗುವಿಕೆಯು ನೆಬಿಯರೊಂದಿಗೆ ಗೌರವ ಸೂಚಿಸುವ ಸಲುವಾಗಿ ಆಗಿದೆ. ಈ ರೀತಿ ಪರ್ವತಗಳು ಸಹ ಹಬೀಬರನ್ನು ಅಪಾರವಾಗಿ ಪ್ರೀತಿಸಿತ್ತು.


ಮರ -

ಸಾಮಾನ್ಯವಾಗಿ‌ ಮರಗಳು ಇತರೆ ನಿರ್ಜೀವಿಗಳಿಗಿಂತ ವ್ಯತರಿಕ್ತ ರೂಪವನ್ನು ಹೊಂದಿರುವ ವಸ್ತುವಾಗಿದೆ. ಮರದ ಕುರಿತು ಪವಿತ್ರ ಕುರ್ಆನ್ ಹಲವೆಡೆ ಉಲ್ಲೇಖಿಸಿದೆ. ಮರಗಳು ಹಬೀಬರನ್ನು ಇಷ್ಟಪಡುವುದರೊಂದಿಗೆ ಗೌರವವನ್ನೂ ನೀಡಿದೆ.

ಒಮ್ಮೆ ಅಲಿ (ರ.ಅ) ಹೇಳುತ್ತಾರೆ
فمررنا بين الجبال والشجر فلم تمر بشجرة ولا جبل إلا قال السلام عليك يا رسول الله
"ನಾವು ಮರಪರ್ವತಗಳ ದಾಟಿ ಸಾಗಿದೆವು, ಮರಪರ್ವತಗಳು ನೆಬಿಯರಿಗೆ ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್ ಎನ್ನದೆ ಮುಂದೆ ಸಾಗುತ್ತಿರಲಿಲ್ಲ"
ಈ ರೀತಿಯ ಮನಮೋಹಕ ವಾತ್ಸಲ್ಯಗಳು ಮರಗಳಿಂದ ಮೂಡಿ ಬರುತ್ತಿತ್ತು.

ನೆಬಿ (ಸ.ಅ) ಮರು ಮಸ್ಜಿದುನ್ನಬವಿಯಲ್ಲಿ ಖುತುಬಾ ಪಾರಾಯಣವನ್ನು ಖರ್ಜೂರ ಮರದ ತುಂಡಿನ ಮೇಲೆ ನಿಂತು ನಿರ್ವಹಿಸುತ್ತಿದ್ದರು.ಅಂತೆಯೇ ಕೆಲ ಕಾಲದ ಬಳಿಕ ಖುತುಬಾ ನಿರ್ವಹಣೆಗೆ ಹೊಸ ಮಿಂಬರಿನ ಸೌಕರ್ಯ ಏರ್ಪಡಿಸಲಾಯಿತು‌. ಪರಿಣಾಮವಾಗಿ ಖರ್ಜೂರದ ಮರದ ಹಲಗೆಯನ್ನು ಮಸೀದಿಯ ಪಕ್ಕದಲ್ಲಿ ಇಡಲಾಯಿತು.ಹೀಗೆ ಒಂದಿನ ಆ ಮರದ ತುಂಡು ದುಃಖದಿಂದ ಅಳುತ್ತಿತ್ತು.ಅಳು ಬಹಳ ತೀವ್ರವಾಗಿತ್ತು.ಅಂತೆಯೇ ಮರದ ರೋದನೆಯನ್ನು ಗಮನಿಸಿದ ನೆಬಿಯು ಆ ಮರದ ತುಂಡಿನ ಮೇಲೆ ಕೈ ಇಡುತ್ತಾರೆ . ತಕ್ಷಣ ಮರದ ತುಂಡು ತನ್ನ ಅಳುವನ್ನು ನಿಲ್ಲಿಸಿ ಶಾಂತವಾಗುತ್ತದೆ. ಮುಂದಕ್ಕೆ ನೆಬಿ ಹೇಳುತ್ತಾರೆ ನಿನಗೆ 2 ಆಯ್ಕೆಗಳನ್ನು ನೀಡುತ್ತೇನೆ ..ಒಂದಾದರೆ ಸ್ವರ್ಗಲೋಕದಲ್ಲಿ ಸಂತೋಷದ ನೆಲೆ ಪಡೆಯಬಹುದು ಅಥವಾ ನಿನ್ನ ಮೂಲವಾದ ಖರ್ಜೂರ ಮರವಾಗಿ ಮತ್ತೆ ಜೀವಿಸಬಹುದು. ಆಗ ಮರದ ತುಂಡು ಸ್ವರ್ಗವನ್ನು ಆಯ್ದುಕೊಳ್ಳುತ್ತದೆ.ಈ ಘಟನೆಯನ್ನು ಇಮಾಮ್ ಮುಸ್ಲಿಮ್ ಹಾಗೂ ಇಮಾಮ್ ಬೈಹಕಿ ವರದಿ ಮಾಡಿದ್ದಾರೆ. ಇದು ಹಬೀಬರೊಂದಿಗಿನ ಪ್ರಣಯರೋಚಕತೆಯನ್ನು ಚಿತ್ರೀಕರಿಸುತ್ತದೆ.

ಹಸಿ ಮಾಂಸ -
ಮಾಂಸವು ಮಾನವ ಭೋಜನದ ರುಚಿಕರ ವಸ್ತು. ಯಾವುದೇ ಜೀವಸತ್ವದ ಅಂಶಗಳು ಹೊಂದಿರದ ಮಾಂಸವು ಸಹ ಹಬೀಬರೊಂದಿಗೆ ಮಾತುಕತೆ ನಡೆಸಿದೆ.
ಖೈಬರ್ ನಿಂದ ಹಿಂದಿರುಗುವ ಸಂಧರ್ಭ ಯಹೂದಿಯಾದ ವನಿತೆಯು ರಸೂಲರಿಗೆ ವಿಷಪ್ರಾಷಿಸಿದ ಹಸಿ‌ ಮಾಂಸ ಸೇವಿಸಲು ಕೊಡುತ್ತಾರೆ. ಆ ವಿಷಬೆರಕೆಯ ಕುರಿತು ಅರಿತ ಪ್ರವಾದಿಯು ತಿನ್ನುವಿಕೆಯನ್ನು ಕೈ ಬಿಡುತ್ತಾರೆ .
ನಂತರ ಸ್ವಹಾಬಾಗಳು ಇದರ ಕಾರಣ ಕೇಳಿದಾಗ ನೆಬಿ ಹೇಳುತ್ತಾರೆ : ಆ ಮಾಂಸವು ವಿಷಬೆರಕೆಯಿಂದ ಕೂಡಿದಾಗಿದೆ ಹಾಗೂ ಆಡು ಕೂಡ ವಿಷಬೆರಕೆಯಿಂದ ಕೂಡಿದಾಗಿದೆಯೆಂದು ಮಾಂಸವು ನನಗೆ ತಿಳಿಸಿತು" ಸುಬ್ಹಾನಲ್ಲಾಹ್.
ನೆಬಿಯರ ಸ್ಥಾನವನ್ನು ವರ್ಣಿಸಲು ಪದಗಳಿಗೂ ಸಾದ್ಯವಾಗುತ್ತಿಲ್ಲ.ಅಷ್ಟಕ್ಕೂ ಮಹಾ ಪವಾಡಗಳಿಂದ ನೆಬಿ ಜೀವನ ಜನಜನಿತವಾಗಿದೆ.

ಈ ರೀತಿಯಾಗಿ ಸರ್ವರೂ ಪ್ರೀತಿಸುವ ಮಹಾ ಭಾಗ್ಯವನ್ನು ನೆಬಿಯರಿಗೆ ಮಾತ್ರ ಕರುಣಿಸಲಾಗಿದೆ.ನೆಬಿಯರ ಪ್ರಕಾಶ (ನೂರ್) ವೇ ಲೋಕಸೃಷ್ಟಿಗೆ ಮೂಲಕಾರಣವಾಗಿರುವಾಗ ಈ ಭುವಿಯ ಸರ್ವ ಜೀವರಾಶಿಗಳು ನೆಬಿಯರ ಪ್ರೀತಿಸೂದು ಅವಶ್ಯವಾಗಿದೆ.

ಬರಹ: ಉಸ್ತಾದ್ ಮುಫ್ತಿ ರಫೀಕ್ ಅಹ್ಮದ್ ಹುದವಿ ಕೋಲಾರಿ

(ರಾಜ್ಯಧ್ಯಾಕ್ಷರು, SKSSF ಕರ್ನಾಟಕ ರಾಜ್ಯ)

Related Posts

Leave A Comment

Voting Poll

Get Newsletter