ಹೆಣ್ಣು ಮಗು ಶಾಪ ಅಥವಾ ಸೌಭಾಗ್ಯವೇ?
ಪ್ರಶ್ನೆ ಕೇಳಿದಾಗ ಅನೇಕರಿಗೆ ಆಶ್ಚರ್ಯವಾಗಬಹುದು. ಆದರೆ ಸತ್ಯವನ್ನು ತಿಳಿದುಕೊಂಡರೆ ನಿಮ್ಮ ಆಶ್ಚರ್ಯ ನೀಗಬಹುದು.ಹೆಣ್ಣು ಜನನ ಶಾಪ ಮತ್ತು ಪಾಪವೆಂದು ಪರಿಗಣಿಸಿದ ದಿನಗಳು ಕಳೆದು ಹೋಗಿದೆ. ಪ್ರಾಚೀನ ಧರ್ಮಗ್ರಂಥಗಳು, ಪ್ರಥಮ ತಂದೆ ಆದಮ್ ನೆಬಿ (ಸ) ರೊಂದಿಗೆ ಅವ್ವ ಬೀವಿ ಸ್ವರ್ಗದಲ್ಲಿದ್ದಾಗ, ಪಿಶಾಚಿ ಕುತಂತ್ರದಿಂದ ಆದಮ್ ನೆಬಿ ಹಾಗೂ ಅವ್ವ ಬೀವಿ ಮೋಸ ಹೋದರು,ಈ ಕುತಂತ್ರದಲ್ಲಿ ಅವ್ವ ಬೀವಿ ಪ್ರೇರಣಿದಿಂದಾಗಿ ಇಬ್ಬರೂ ನಿಷೇಧಿತ ಹಣ್ಣನ್ನು ತಿನ್ನುತ್ತಿದ್ದರು.ಇದರಲ್ಲಿ ಅವ್ವ (ಬೀವಿ)ಮೊದಲು ಪಾಪ ಮಾಡಿದನೆಂದು ಮತ್ತು ಜಗತ್ತಿನಲ್ಲಿ ಜನಿಸಿದ ಎಲ್ಲ ಮಹಿಳೆಯರು ಆ ಪಾಪದ ಭಾಗಿಯಾಗಿದ್ದಾರೆ ಎಂದು ಬೈಬಲ್ ಸ್ಪಷ್ಟಪಡಿಸುತ್ತದೆ.
ಇದಲ್ಲದೆ, ಜಗತ್ತಿನಲ್ಲಿ ಮಹಿಳೆಯರು ಅನುಭವಿಸುವ ಮುಟ್ಟಿನ ಅವಧಿ, ಗರ್ಭಧಾರಣೆಯ ನೋವು ಮತ್ತು ಹೆರಿಗೆ ನೋವುಗಳೆಲ್ಲವನ್ನೂ ಅಂದಿನ ಆ ಪಾಪದ ಭಾಗ ಎಂದು ವಿವರಿಸಲಾಗಿದೆ.ಅದರ ಹೆಸರಿನಲ್ಲಿ ಮಹಿಳೆಯರನ್ನು ನಂಬಬಾರದು ಮತ್ತು ಅಂತ್ಯ ದಿನದವರೆಗೂ ಜನಿಸಿದ ಮಹಿಳೆಯರಲ್ಲಿ ಪಾಪ ಸಂಪ್ರದಾಯವು ಅಂತರ್ಗತವಾಗಿರುತ್ತದೆ ಎಂದು ನಂಬಲಾಗುತ್ತದೆ.
ಹೆಣ್ಣು ಮಕ್ಕಳು ಕುಟುಂಬದ ಮೇಲೆ ಆರ್ಥಿಕ ಹೊರೆ ಸೃಷ್ಟಿಸುತ್ತಿದ್ದಾರೆ, ಅವರನ್ನು ಬೆಳೆಸಲು ಮತ್ತು ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುವುದರ ಜೊತೆಗೆ, ಅವರನ್ನು ಮದುವೆ ಮಾಡಿ ಕೊಡುವುದರ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ನಂತರ, ಅವಳ ಶಿಕ್ಷಣ ಮತ್ತು ಕೆಲಸದ ಖರ್ಚು,ಪತಿ ಮತ್ತು ಅವನ ಕುಟುಂಬವು ನೋಡಬೇಕಾಗುತ್ತದೆ. ಅದರ ಹೆಸರಿನಲ್ಲಿ ಅವಳನ್ನು ತಿರಸ್ಕರಿಸುವ ಮತ್ತು ನಿರ್ಲಕ್ಷಿಸುವ ಅಭ್ಯಾಸವು ಜೂಡೋ-ಕ್ರಿಶ್ಚಿಯನ್ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಅಧ್ಯಯನಗಳು ತೋರಿಸುತ್ತವೆ.ಇತ್ತೀಚೆಗೆ, ಅದು ಗಮನಾರ್ಹವಾಗಿ ಬದಲಾಗಿದೆ.
ಹೆಣ್ಣುಮಕ್ಕಳನ್ನು ಜೀವಂತವಾಗಿ ಹೂಳಲಾಯಿತು ಮತ್ತು ಉಸಿರುಗಟ್ಟಿ, ನೀರಿನಲ್ಲಿ ಮುಳುಗಿಸಿ ನೈಸರ್ಗಿಕ ವಿಪತ್ತುಗಳಿಂದ ಕೊಲ್ಲಲ್ಪಡುವ ದಿನಗಳು ಕಳೆದು ಹೋಗಿದೆ.ಅರೇಬಿಯಾದಲ್ಲಿ ಹುಡುಗಿಯರ ಸಮಾಧಿ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗಿದೆ.ಆದರೆ ಚೀನಾ ಮತ್ತು ಭಾರತ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸ್ತ್ರೀ ನರಹತ್ಯೆಗಳು ನಡೆದಿವೆ ಎಂದು ಐತಿಹಾಸಿಕ ಅಧ್ಯಯನಗಳು ತೋರಿಸುತ್ತವೆ.ಚೀನಾದ ನಾರಿ ಮೇಧಾ ಕನಿಷ್ಠ 2000 ವರ್ಷ ಹಳೆಯದು ಎಂದು ಹೇಳಲಾಗುತ್ತದೆ.
ಸಮಾಧಿ ಅರೇಬಿಯಾ ಮತ್ತು ಇತರ ಕಡೆಗಳಲ್ಲಿ ನರಮೇಧದ ಹೆಸರಿನಲ್ಲಿ ನಡೆದರೆ, ಚೀನಾದಲ್ಲಿ ಮತ್ತು ಬಡತನದ ಹೆಸರಿನಲ್ಲಿ ಬೇರೆಡೆ ವ್ಯಾಪಕವಾಗಿ ಹರಡಿತ್ತು. ತನಗೆ ಹೆಣ್ಣು ಮಗು ಜನನದ ಬಗ್ಗೆ ತಿಳಿದಾಗ ಅವರ ಮುಖಗಳು ಮಸುಕಾಗಿ ಮತ್ತು ಅವಮಾನದ ಭಾರವನ್ನು ಹೊರಲು ಸಾಧ್ಯವಾಗದ ಕಾರಣ ಜನರಿಂದ ಮರೆಯಾದವರನ್ನು ಕುರಾನ್ ಉಲ್ಲೇಖಿಸುತ್ತದೆ. (ಆನ್-ನಹ್ಲ್: 58) ಆದರೆ ಇತ್ತೀಚಿನವರೆಗೂ ಚೀನಾ ಮತ್ತು ಭಾರತದಲ್ಲಿ ಇಂತಹ ಹತ್ಯೆಗಳು ವ್ಯಾಪಕವಾಗಿ ಹರಡಿವೆ.
ಅದರಂತೆ, ಈ ಕೊಲೆ ನಾಗರಿಕ ಯುಗದಲ್ಲಿ ಮತ್ತೊಂದು ರೂಪವನ್ನು ಪಡೆದುಕೊಂಡಿರುವುದನ್ನು ಕಾಣಬಹುದು.ಈ ಹಿಂದೆ ಓಡಿ,ಆಡುವ ಸಮಯದಲ್ಲಿ ಕೊಲೆ ನಡೆಸುತ್ತಿದ್ದರು ಆದರೆ ಈಗ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳು ಅವರಿಗೆ ಸುರಕ್ಷಿತ ಮಾರ್ಗಗಳನ್ನು ನೀಡಿವೆ.ಹೆಣ್ಣು ಭ್ರೂಣ ಹತ್ಯೆ! ಹೆಣ್ಣು ಎಂದು ಕಂಡುಬಂದಲ್ಲಿ ಗರ್ಭದಲ್ಲಿರುವ ಮಗುವನ್ನು ಗರ್ಭಪಾತದಲ್ಲಿಯೇ ಅಲಿಸುವ ರೀತಿ!ಇದು ಅನೇಕ ದೇಶಗಳಲ್ಲಿ ವ್ಯಾಪಕವಾಗಿದೆ ಎಂದು ಅಧ್ಯಯನಗಳು ವಿವರಿಸುತ್ತದೆ
ಪ್ರಾಚೀನ ಸಮಾಜ ಮಾತ್ರವಲ್ಲದೆ, ಶ್ರೇಷ್ಠ ಸಮಾಜವಾದಿಗಳಂತೆ ನಟಿಸುವ ಆಧುನಿಕ ಸಮಾಜವೂ ಹೇಗಾದರೂ ಹುಡುಗಿಯರನ್ನು ಹುಡುಗರಂತೆ ಉಪಚರಿಸಲು ಸಿದ್ಧವಾಗಿಲ್ಲ ಎಂಬುವುದು ಸತ್ಯ. ವೈಜ್ಞಾನಿಕ ಪರೀಕ್ಷೆಯ ಮೂಲಕ ಮಗು ಹೆಣ್ಣು ಎಂದು ತಿಳಿದರೆ ಅವರು ಗರ್ಭಚಿತ್ರ ಮಾಡುತ್ತಾರೆ.ಇದನ್ನು ಕಾನೂನು ಪ್ರಕಾರ ದೊಡ್ಡ ಅಪರಾಧವೆಂದು ಪರಿಗಣಿಸಲಾಗಿದ್ದರೂ, ಅಂತಹ ಕೃತ್ಯಗಳು ರಹಸ್ಯವಾಗಿ ಮತ್ತು ಪರಸ್ಪರ ಒಪ್ಪಿಗೆಯಿಂದ ವ್ಯಾಪಕವಾಗಿ ಹರಡುತ್ತಿದೆ. ಮಗುವಿನ ತಾಯಿ ಇದನ್ನು ಹೆಚ್ಚಾಗಿ ತಿಳಿಯಲು ಸಾಧ್ಯಾವಿಲ್ಲ ಕಾರಣ ಸಂಬಂಧಿಕರು ಮತ್ತು ವೈದ್ಯಕೀಯ ತಜ್ಞರ ನಡುವಿನ ಗೌಪ್ಯತೆಯಾಗಿದೆ.
ಪರಿಣಾಮವಾಗಿ,ಅನೇಕ ದೇಶಗಳಲ್ಲಿನ ಮಕ್ಕಳ ಲಿಂಗ ಅನುಪಾತವು ಆತಂಕಕಾರಿಯಾಗಿ ಬದಲಾಗುತ್ತಿದೆ. ಸ್ತ್ರೀ ಭ್ರೂಣ ಹತ್ಯೆ ಭಾರತೀಯ ಸಮಾಜದಲ್ಲಿ ಮಹಿಳೆಯರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಇದು ಭವಿಷ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕ್ಕೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಯುಎನ್‌ಒ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿದಿನ 2,000 ಭ್ರೂಣ ಹತ್ಯೆ ನಡೆಯುತ್ತಿವೆ.
2011 ರ ಜನಗಣತಿಯ ಪ್ರಕಾರ, ಕೇರಳದಲ್ಲಿ ಲಿಂಗ ಅನುಪಾತವು 1000 ಪುರುಷರಿಗೆ 1084 ಮಹಿಳೆಯರು.ಆದರೆ ಆರು ವರ್ಷದ ಬಾಲಕರ ಪುರುಷ-ಸ್ತ್ರೀ ಅನುಪಾತ 1000 ಹುಡುಗರಿಗೆ 964 ಹುಡುಗಿಯರು ಎಂಬುವುದಾಗಿದೆ.
ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ತಿಂಗಳಲ್ಲಿ ಒಂದೇ ಒಂದು ಹೆಣ್ಣು ಮಗು ಜನಿಸಿರಲಿಲ್ಲ ಎಂಬ ಆಘಾತಕಾರಿ ಸತ್ಯವನ್ನು 2019 ರಲ್ಲಿ ಪತ್ರಿಕೆಗಳು ವರದಿ ಮಾಡಿವೆ. ಮೂರು ತಿಂಗಳಲ್ಲಿ 132 ಶಿಶುಗಳು ಜನಿಸಿದಾಗ,ಒಂದೇ ಒಂದು ಹೆಣ್ಣು ಮಗು ಜನಿಸಲಿಲ್ಲ.ಗುಜರಾತ್‌ನ ನಗರ ಪ್ರದೇಶಗಳಲ್ಲಿ ಜನಿಸಿದ ಮಕ್ಕಳ ಲಿಂಗ ಅನುಪಾತ ಕಡಿಮೆಯಾಗುತ್ತಿದೆ.0-6 ವರ್ಷ ವಯಸ್ಸಿನ ಮಕ್ಕಳ ಸಂಖ್ಯೆ 2011 ರಲ್ಲಿ 1000 ಬಾಲಕರಿಗೆ 890 ಬಾಲಕಿಯರಿಂದ ಸ್ಥಾನದಲ್ಲಿ,ಹೊಸ ಸಮೀಕ್ಷೆಯ ಪ್ರಕಾರ 848 ಆಗಿದೆ.ಇದರ ಹಿಂದೆ ಸ್ತ್ರೀ ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬಡತನ ಮತ್ತು ದುರುದ್ದೇಶದ ಭಯದ ಹೆಸರಿನಲ್ಲಿ ಹುಡುಗಿಯರನ್ನು ಕೊಲ್ಲುದರೊಂದಿಗೆ ಅವರ ಆಗಮನವನ್ನು ತಡೆಯುವ ಪ್ರವೃತ್ತಿ ಪ್ರಾಚೀನ ಮತ್ತು ಸುಸಂಸ್ಕೃತ ಯುಗಗಳಲ್ಲಿ ಬದಲಾಗದೆ ಉಳಿದಿದೆ.
ಕೊನೆಗೆ ಪ್ರವಾದಿ (ಸ) ರವರು ಹೆಣ್ಮಕ್ಕಳ ವಿರುದ್ಧ ಮಾನವೀಯ ಮತ್ತು ಕ್ರಾಂತಿಕಾರಿ ಮಧ್ಯಸ್ಥಿಕೆಗಳು ಪ್ರಬ್ರಾರವಾಗಿ ಕಾಣುತ್ತದೆ. ಹೆಣ್ಣು ಮಗು ಮನೆಯಲ್ಲಿ ಐಶ್ವರ್ಯರು ಮತ್ತು ಅಲಂಕಾರಿಕರು ಮಾತ್ರವಲ್ಲದೆ, ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ,ಪರಲೋಕದ ವಿಜಯವನ್ನು ನಾವು ಖಚಿತಪಡಿಸಿಕೊಳ್ಳಬಹುದು ಎಂದು ನೆಬಿ (ಸ) ಹೇಳಿಕೊಡುತ್ತಾರೆ.ಅಬ್ದುಲ್ಲಾ ಇಬ್ನ್ ಅಬ್ಬಾಸ್ ನಿರೂಪಿಸಿದ ಹದೀಸ್ ನಲ್ಲಿ,ಒಬ್ಬ ಮನುಷ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ,ಮಗುವನ್ನು ಜೀವಂತವಾಗಿ ಹೂಳದೆ,ನಿರ್ಲಕ್ಷಿಸದೆ ಮತ್ತು ಗಂಡು ಮಕ್ಕಳಲ್ಲಿ ಆಕೆಗೆ ತಾರತಮ್ಯ ಮಾಡದಿದ್ದರೆ,ಆಗ ಆ ಮಗು ಅವನನ್ನು ಸ್ವರ್ಗದ ಉತ್ತರಾಧಿಕಾರಿಯನ್ನಾಗಿ ಮಾಡುತ್ತದೆ (ಇಮಾಮ್ ಅಹ್ಮದ್, ಹಕೀಮ್)
ಪ್ರವಾದಿಯ ಪತ್ನಿ ಆಯಿಷಾ (ರ) ವಿವರಿಸುತ್ತಾರೆ: 'ಒಮ್ಮೆ ಒಬ್ಬ ಮಹಿಳೆ ಭಿಕ್ಷಾಟನೆಯೊಂದಿಗೆ ಅವರ ಮನೆಗೆ ಬರುತ್ತಾರೆ.ಅವಳಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಆಗ ಆಯಿಷಾ (ರ) ರಲ್ಲಿ ಇದ್ದ ಒಂದು ಖರ್ಜುರವನ್ನು ಆ ಬಿಕ್ಷುಕ ಮಹಿಳೆಗೆ ನೀಡಿದರು. ಆಗ ಅದನ್ನು ಎರಡು ತುಂಡಾಗಿಸಿ ಅವಳ ಎರಡು ಹೆಣ್ಮಕ್ಕಳಿಗೆ ನೀಡಿದಳು. ಆದರೆ ಅವಳು ಏನನ್ನೂ ತಿನ್ನಲಿಲ್ಲ.ಅವರು ಹೊರಗೆ ಬಂದಾಗ, ತಿರುನೆಬಿ (ಸ) ರು ಅಲ್ಲಿಗೆ ಆಗಮಿಸಿದರು. ಆಯಿಷಾ ಈ ವಿಷಯವನ್ನು ಪ್ರವಾದಿಗೆ ವಿವರಿಸಿದರು. ನಂತರ ಪ್ರವಾದಿ " ಈ ಹೆಣ್ಮಕ್ಕಳನ್ನು ಯಾರಿಗಾದರು ನೀಡಿ ಪರಿಕ್ಷಿಸಿದರೆ,ಅವರು ತಮ್ಮ ಹೆತ್ತವರಿಗೆ ನರಕದಿಂದ ರಕ್ಷಕರಾಗುತ್ತಾರೆ" ಎಂದು ಹೇಳಿದರು.
ಇದೇ ರೀತಿಯ ಇತರ ಹದೀಸ್ ನಲ್ಲಿ ಉಲ್ಲೇಖಿಸಲಾಗಿದೆ. "ನಾಥನು ಒಬ್ಬರಿಗೆ ಮೂರು ಹೆಣ್ಣು ಮಕ್ಕಳನ್ನು ನೀಡಿದನು. ಅವರಿಗೆ ಉತ್ತಮ ನಡವಳಿಕೆಯನ್ನು ಕಲಿಸಿದರೆ ಮತ್ತು ದಯೆಯಿಂದ ಚಿಕಿತ್ಸೆ ನೀಡಿದರೆ ಸ್ವರ್ಗವು ಅವರಿಗೆ ಖಾತರಿಪಡಿಸುತ್ತದೆ.ಆಗ ಇಬ್ಬರು ಹುಡುಗಿಯರು ಇದ್ದರೆ? ಎಂದು ಕೇಳಿದಾಗ, ಇಬ್ಬರು ಇದ್ದರು ಕೂಡ ಅದೇ ನಿಯಮ".(ಇಮಾಮ್ ಅಹ್ಮದ್).
ಪ್ರವಾದಿ (ಸ)ರಿಗೆ ಹೆಚ್ಚಿನವರು ಹೆಣ್ಣುಮಕ್ಕಳಾಗಿದ್ದರು. ತಂದೆ ಅವರನ್ನು ನಡೆಸಿಕೊಂಡ ರೀತಿ ಇತಿಹಾಸ ದಾಖಲಿಸುತ್ತದೆ.ತುಂಬಾ ಕರುಣಾಳು ಮತ್ತು ಅನುಕರಣೀಯ ವರ್ತನೆ.ನಿರ್ದಿಷ್ಟವಾಗಿ ಹೇಳುವುದಾದರೆ, ಮಗಳು ಫಾತಿಮಾ ಮತ್ತು ಅವಳ ತಂದೆಯ ನಡುವಿನ ನಿಕಟತೆ, ಪ್ರೀತಿ ಮತ್ತು ತಂದೆ-ಮಗಳ ಸ್ನೇಹ ಸಂಬಂಧದಲ್ಲಿ ಅಧ್ಯಾಯವಾಗಿ ಹೊಳೆಯುತ್ತದೆ.
ಹೆಣ್ಣುಮಕ್ಕಳನ್ನು ಪ್ರೀತಿಸಬೇಕು.ಮಕ್ಕಳ ನಡುವೆ ಯಾವುದೇ ತಾರತಮ್ಯ ಇರಬಾರದು.ವಿಶೇಷವಾಗಿ, ಲಿಂಗದ ಹೆಸರಿನಲ್ಲಿ. ಅವರಿಗೆ ಯೋಗ್ಯ ಜೀವನ ಮತ್ತು ಶಿಕ್ಷಣ ನೀಡಬೇಕು.ಸಮಯವಾದಾಗ,ಆದರ್ಶ ವರನನ್ನು ಮದುವೆಯಾಗಬೇಕು. ಅದಕ್ಕೆ ಮೊದಲು ಅವಳ ಒಪ್ಪಿಗೆಯನ್ನು ಪಡೆಯಬೇಕು.ತನ್ನ ಮಗಳನ್ನು ತಾನು ಇಷ್ಟಪಡುವ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸಲು ತಂದೆಗೆ ಸಹ ಹಕ್ಕಿಲ್ಲ. ಹದಿನಾಲ್ಕು ಶತಮಾನಗಳ ಹಿಂದೆ ತಿರುನೆಬಿ ನೀಡಿದ ಕೆಲವು ಬೋಧನೆಗಳಾಗಿವೆ ಇವು.