ಸಮನ್ವಯ ವಿದ್ಯಾಭ್ಯಾಸದ ಪ್ರಾಮುಖ್ಯತೆ ಏನು? 10 ಉತ್ತರಗಳು
ಸಮನ್ವಯ ವಿದ್ಯಾಭ್ಯಾಸದ ಪ್ರಾಮುಖ್ಯತೆ ಏನು?
ಕೇರಳಿಯ ಮುಸ್ಲಿಮರು ವೈಜ್ಞಾನಿಕ ವಿಭಾಗದಲ್ಲಿ ಗಳಿಸಿದ ಅತ್ಯಂತ ಮಹಾನ್ನೋತ ಕ್ರಾಂತಿಯಾಗಿದೆ ಸಮನ್ವಯ ಶಿಕ್ಷಣ. ಸಮನ್ವಯ ಭೌತಿಕ ಮತ್ತು ಧಾರ್ಮಿಕ ಶಿಕ್ಷಣದ ಸಮಿಶ್ರಣವಾದರೂ , ಎರಡನ್ನು ಸಮಾನವಾಗಿ ಅಭ್ಯಸಿಸುವುದು ಕೇರಳಿಯ ತಳಿಯಲ್ಲ. ಸಾಂಪ್ರದಾಯಿಕವಾಗಿ ಕೇರಳಿಯ ಇಸ್ಲಾಮಿಕ್ ಶಿಕ್ಷಣ ವಿಭಾಗಕ್ಕೆ ಬೆಳಕು ಚೆಲ್ಲುತ್ತಿದ್ದ ಪಳ್ಳಿದರ್ಸ್ ಸಂವಿಧಾನದ ಮತ್ತು ಅರೇಬಿಕ್ ಕಾಲೇಜುಗಳ ಕಾಲಾನುಕ್ರಮವಾದ ಬೆಳವಣಿಗೆಯಾಗಿತ್ತು ಸಮನ್ವಯ ವಿದ್ಯಾಭ್ಯಾಸ ಸಂವಿಧಾನದ ಉದ್ಭವ. ವಿವಿಧ ವಿದ್ಯೆಗಳನ್ನು ಧಾರ್ಮಿಕ, ಭೌತಿಕವೆಂದು ಬೇರ್ಪಡಿಸದೆ ಒಂದೇ ಸೂರಿನಡಿ ಸಮನ್ವಯಿಸುವುದಕ್ಕಿಂತ ಮಿಗಿಲಾಗಿ ಧಾರ್ಮಿಕ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ, ವಿದ್ಯಾರ್ಜನೆಗೈಯ್ಯವುದಾಗಿದೆ ಕೇರಳಿಯ ಪರಿಸರ ಪರಿಸರದ ಸಮನ್ವಯ ಶಿಕ್ಷಣದ ಒಳನೋಟ ; ಸಮನ್ವಯದ ಮೂಲಕ ಮತ ವಿದ್ಯಾಭ್ಯಾಸದಡೆಗೆ ಅನಿವಾರ್ಯ ಭೌತಿಕ ವಿಷಯಗಳು ಮತ್ತು ಅಗತ್ಯವಾಗಿ ತಿಳಿದಿರಬೇಕಾದ ಭಾಷೆಗಳು ಒಳಸೇರುತ್ತದೆ.
ಧಾರ್ಮಿಕ ಶಿಕ್ಷಣವನ್ನು ಕಲಿತಿರುವ ಭೌತಿಕ ಪಂಡಿತರಿಗಿಂತ, ಭೌತಿಕ ವಿಷಯಗಳಲ್ಲೂ ಅವಗಾಹನೆಯಿರುವ ಧಾಮಕ ವಿದ್ವಾಂಸರ ಸಮೂಹವನ್ನು ರೂಪಿಸುವುದಾಗಿ ಸಮನ್ವಯ ಸಂವಿಧಾನದ ಆದಿ ಗುರಿ. ಇದರೊಂದಿಗೆ, ತಮ್ಮ ಅಭಿರುಚಿಗನುಸಾರವಾದ ಧರ್ಮೇತರ ವಿಭಾಗವನ್ನು ಆರಿಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸುತ್ತದೆ. ಭೌತಿಕ ಪರವಲ್ಲದೆ ಪ್ರಬೋಧನ ಪ್ರವೃತ್ತಿಗಳಲ್ಲೂ ಕಾರ್ಯನಿರತರಾಗಬೇಕೆಂಬ ಗುರಿಯೊಂದಿಗೆ.
ನೂತನವಾದ ಶಿಕ್ಷಣ ನೀತಿಯಾದ್ದರಿಂದ ಸಮನ್ವಯ ಶಿಕ್ಷಣದ ಗುಣಗಳನ್ನು ಅಧ್ಯಾಯನಕ್ಕೆ ವಿಧೇಯಪಡಿಸುವುದಾಗಿದೆ ಈ ಲೇಖನಿಯ ಉದ್ದೇಶ. ಅಧ್ಯಯನ ವಿಭಾಗವನ್ನು ಸ್ವತಂತ್ರವಾಗಿ ಸಮೀಪಿಸಲು ಶ್ರಮಿಸಿದ್ದರಿಂದ ನಿರೀಕ್ಷಣೆಯಲ್ಲಿ ಬಂದ ಧೋರಣೆ ತಪ್ಪುಗಳೊಂದಿಗೆ ವಿಯೋಜಿಸಲಿರುವ ಪೂರ್ಣ ಸ್ವತಂತ್ರವನ್ನು ವಾಚಕರಿಗೆ ಬಿಟ್ಟುಕೊಡುತ್ತಿದ್ದೇನೆ.
ಸಮನ್ವಯ ಶಿಕ್ಷಣ ನೀತಿಯ ಪ್ರಮುಖ ಭಾಗವೆಂದು ತೋರಿದ 10 ಗುಣ ವಿಶೇಷತೆಗಳನ್ನು ಹೀಗೆ ಸಂಗ್ರಹಿಸುವ:
1 . ಮತ್ತಭೌತಿಕ ವಿಷಯಗಳ ಪಾಂಡಿತ್ಯ. ಧಾರ್ಮಿಕ ವಿಷಯಗಳಲ್ಲಿ ಗಹನವಾಗಿ, ಭೌತಿಕ ವಿಷಯಗಳ ಮೂಲವಿಚಾರದಲ್ಲಿರುವ ಪಾಂಡಿತ್ಯವಾಗಿ ಸಮನ್ವಯ ಶಿಕ್ಷಣ ಮುಂದಿಡುವ ಮುಖ್ಯವಾದ ಗುರಿ. ಸಾಂಪ್ರದಾಯಿಕ ಧಾರ್ಮಿಕ ವಿದ್ವಾಂಸರ ಜ್ಞಾನ ಭಂಡಾರವು ಧಾರ್ಮಿಕ ವಿಷಯಗಳಲ್ಲಿ ಸೀಮಿತವಾಗಿರುವಾಗ, ಇವುಗಳನ್ನು ಸಂಭಾಳಿಸಿಕೊAಡು ಮತೇತರ ವಿಜ್ಞಾನವನ್ನು ಕೂಡ ಸಮನ್ವಯ ಶಿಕ್ಷಣ ವಿದ್ಯಾರ್ಥಿಗೆ ಒದಗಿಸಿ ಕೊಡುತ್ತದೆ.
2. ಪ್ರಬೋಧನೆ ಪ್ರವರ್ತಿಗಳಲ್ಲಿನ ಕಾರ್ಯಕ್ಷಮತೆ. ಸಾಂಪ್ರದಾಯಿಕ ಧಾರ್ಮಿಕ ವಿದ್ವಾಂಸರು “ಇಸ್ಲಾಹಿ” ಚಟುವಟಿಕೆಗೆ ಪ್ರಾಮುಖ್ಯತೆ ನೀಡುತ್ತಿದ್ದದ್ದು . ಅನ್ಯ ಧರ್ಮೀಯರನ್ನು ಇಸ್ಲಾಮಿಗೆ ಆಹ್ವಾನಿಸುವುದು, ಸತ್ಯಧರ್ಮವನ್ನು ಅವರಿಗೆ ಪರಿಚಯಿಸುವುದರಲ್ಲಿ ಕಾರ್ಯನಿರತರಾಗುವ ಸಾಂಪ್ರದಾಯಿಕ ವಿಧ್ವಾಂಸರು ವಿರಳವಾಗಿದ್ದರು. ನೂತನವಾದಿಗಳು , ಸಮುದಾಯದ ಒಳಗಿರುವ ಪ್ರಗತಿಪರ ಚಿಂತಕರಾಗಿದ್ದರು ಪ್ರಮುಖವಾಗಿ ಸಹೋದರ ಸಮುದಾಯದವರೊಂದಿಗಿರುವ ದಅವಾದಲ್ಲಿ ಶ್ರದ್ಧೆ ಕೇಂದ್ರೀಕರಿಸಿದ್ದು. ಆದರೆ, ವಿವಿಧ ಧರ್ಮಗಳ ಕುರಿತು ಅವುಗಳ ಆದರ್ಶಗಳ ಕುರಿತು ಬೇಕಾದಷ್ಟು ತಿಳುವಳಿಕೆಯಿರುವ ಸಮನ್ವಯ ವಿದ್ಯಾರ್ಥಿಗಳು ಕಣಕ್ಕಿಳಿದಾಗ “ಇಸ್ಲಾಹೀ” ಪ್ರವೃರ್ತಿಗಳೊಂದಿಗೆ ದಅವತ್ತಿಗೂ ಪ್ರಾಮುಖ್ಯತೆ ನೀಡಿದರು. ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಸಿದ ಫೀಲ್ಡ್ ವರ್ಕಿನೊಂದಿಗೆ ಇಸ್ಲಾಮನ್ನು ಅನ್ಯ ಧರ್ಮೀಯರಿಗೆ ಪರಿಚಯಿಸುವ “ ಪೋಸ್ಟಲ್ ಕೋರ್ಸ್ “ಗಳು, ಸ್ನಾತಕೋತರ ತರಗತಿಗಳು, ಸಂಶಯ ನಿವಾರಣೆ ವೇದಿಕೆಗಳು ಸಮನ್ವಯ ಸಂಸ್ಥೆಗಳ ಮೂಲಕ ಅಸ್ಥಿತ್ವಕ್ಕೆ ಬಂತು. ಇದರಿಂದಾಗಿ ಹಲವರು ಸತ್ಯಧರ್ಮಕ್ಕೆ ಬರುತ್ತಿದ್ದಾರೆ ಎನ್ನುವುದು ಸ್ಮರಣೀಯ.
3. ಅಭಿರುಚಿಗೆ ನೀಡಿದ ಮಾನ್ಯತೆ. ಪಳ್ಳಿದರ್ಸಿನಲ್ಲಿ ವಿದ್ಯಾರ್ಜನೆಗೈಯುತ್ತಿದ್ದ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗೆ ತಕ್ಕುದಾದ ಭವಿಷ್ಯವನ್ನು ರೂಪಿಸಲಿರುವ ಸ್ವಾತಂತ್ರ ಮತ್ತು ಸೌಕರ್ಯಗಳಿರಲಿಲ್ಲ. ಧಾರ್ಮಿಕ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆದವರು ಖಾಝಿ, ಮುದರ್ರಿಸಾಗಿ ಪ್ರಭಾಷಣ ಕಲೆಯಲ್ಲಿ ನಿಪುಣರಾದವರು, ಅಲ್ಲದವರು ಮದರಸ ಮುಅಲ್ಲಿಂ, ಮಸೀದಿ ಮುಕ್ರಿ, ಯತಿಂ ಖಾನಾ ವಾರ್ಡನ್ ಎಂಬಿತ್ಯಾದಿ ಸೀಮಿತವಾದ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮನಸ್ಥಿತಿ ಪಳ್ಳಿ ದರ್ಸ್ ಸಂವಿಧಾನದಲ್ಲಿ ಕಾಣಬಹುದು . ಇದೇ ವೇಳೆ ಸಮನ್ವಯ ವಿದ್ಯಾಭ್ಯಾಸವು ಇವುಗಳನ್ನೆಲ್ಲ ಕಲ್ಪಿಸುವುದರೊಂದಿಗೆ, ಶಾಲೆ ಕಾಲೇಜು ಆಧ್ಯಾಪನ, ಬಿಸಿನೆಸ್ ಮ್ಯಾನೇಜ್ಮೆಂಟ್, ಪತ್ರಿಕೋದ್ಯಮದಿಂದ ಹಿಡಿದು ಅನೇಕ ಶಾಖೆಗಳಿಗಿರುವ ಬಾಗಿಲನ್ನು ತೆರೆದಿಡುತ್ತದೆ. ಮುದರ್ರಿಸ್ ,ಖತೀಬ್ , ಲೆಕ್ಚರ್,ಮುಅಲ್ಲಿಂ , ಶಾಲಾ ಅಧ್ಯಾಪಕ , ಸೈಕಾಲಜಿಸ್ಟ್ , ಟ್ರೈನರ್ , ತರ್ಜುಮೆದಾರ, ಸಿವಿಲ್ ಸರ್ವಿಸ್ ಹೀಗೆ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸುವವರು ಸಮನ್ವಯ ಸಂಸ್ಥೆಯ ಉತ್ಪಾದನೆಗಳಲ್ಲಿ ಬಹಳವಿದ್ದಾರೆ. ಎಂ.ಬಿ.ಎ ಕೋರ್ಸ್ ಪೂರ್ತಿಗೊಳಿಸಿ ಬಿಸಿನೆಸ್ ನಲ್ಲಿ ಶೋಭಿಸುವವರು, ಬಿ.ಬಿ.ಸಿ, ಅಲ್ ಜಸೀರ, ಆಲ್- ಇಂಡಿಯಾ ರೇಡಿಯೋ ಮುಂತಾದ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಉನ್ನತ ಪದವಿಗಳನ್ನು ಮುಡಿಗೇರಿಸಿದವರನ್ನು ಸಮನ್ವಯ ಸಂಸ್ಥೆಯ ಸಂತತಿಗಳಲ್ಲಿ ಕಾಣಬಹುದು .
4. ಜಾಗತಿಕ ವ್ಯವಹಾರಗಳು , ಮಾನ್ಯತೆಗಳು. ಸಮನ್ವಯ ವಿದ್ಯಾಭ್ಯಾಸಕ್ಕಿರುವ ಕೇರಳಿಯ ಮತಪಠಣ (ಕಲಿಕೆ ) ಪ್ರಕ್ರಿಯೆಯು ಪಶ್ಚಿಮ ಘಟ್ಟದ ಗಡಿಯನ್ನು ಭೇದಿಸಿ ಮುನ್ನೆರಲು ವಿಮುಖತೆ ತೋರಿಸುವುದಾಗಿತ್ತು. ಮಲಯಾಳ ತೀರದ ಧಾರ್ಮಿಕ ಶಿಕ್ಷಣ ಪೀಠಗಳೆಲ್ಲವೂ ಮಲಯಾಳಿಯನ್ನು ಮಾತ್ರ ಸಂವಾದಕ್ಕೆಳೆಯುವುದಾಗಿತ್ತು . ಸಮನ್ವಯ ಸಂಸ್ಥೆಗಳನ್ನು ಸಮುದಾಯವು ಮನಸಾರೆ ಸ್ವೀಕರಿಸಿತು. ಬಹುಭಾಷಾ ಪಾಂಡಿತ್ಯವಿರುವ ಸಮನ್ವಯ ಸಂತತಿಗಳು ಸಮುದಾಯದ ಸೇವೆಗೆ ಬರಲಾರಂಭಿಸಿದಾಗ ಜಾಗತಿಕ ಮಟ್ಟದಲ್ಲಿ ವ್ಯವಹರಿಸಲು ಅವರಿಗೆ ಸಾಧ್ಯವಾಯಿತು. ಅನ್ಯ ದೇಶಗಳಲ್ಲಿ ನಡೆದ ವಿವಿಧ ಅಂತರಾಷ್ಟ್ರೀಯ ಕಾನ್ಫರೆನ್ಸ್ ಗಳಲ್ಲಿ ಪ್ರಬಂಧಗಳನ್ನು ಮಂಡಿಸಲು ಸಾಧ್ಯವಾದದ್ದು ಈ ವಿಭಾಗದಲ್ಲಿ ಗಳಿಸಿದ ಸಾಧನೆಯಾಗಿ ಗುರುತಿಸಲಾಗುತ್ತಿದೆ.
ಸಮನ್ವಯ ಶಿಕ್ಷಣ ಕ್ರಾಂತಿಯ ಕೇಂದ್ರಬಿಂದುವಾದ ಮಲಪ್ಪುರಂ ಜಿಲ್ಲೆಯ ಇಸ್ಲಾಮಿಕ್ ವಿಶ್ವವಿದ್ಯಾಲಯವನ್ನು ಹುಡುಕಿ ತಲುಪಿದ ಅಂತರಾಷ್ಟ್ರೀಯ ಮಾನ್ಯತೆಗಳು, ವಿವಿಧ ಅನ್ಯದೇಶಿಯ ವಿಶ್ವವಿದ್ಯಾಲಯಗಳೊಂದಿಗೆ ನಡೆಸಿದ ಡಿಜಿಟಲೀಕರಣ ಪತ್ರ ವಿನಿಮಯ ಸಮನ್ವಯ ವಿದ್ಯಾಭ್ಯಾಸದ ಮೂಲಕ ಗಳಿಸಲು ಸಾಧ್ಯವಾದ ಗೆಲುವಿನ ಹಾದಿಯನ್ನು ತೋರಿಸುತ್ತದೆ.
5. ವಿಶ್ವದ ನಾನಾಭಾಗದಲ್ಲಿ ನಡೆಸುವ ಪ್ರಬೋಧನೆ ಪ್ರವೃತ್ತಿಗಳು. ಸಮನ್ವಯ ಶಿಕ್ಷಣವನ್ನು ಕಲ್ಪಿಸುವ ಸಂಸ್ಥೆಗಳು ಇಸ್ಲಾಂ ಪ್ರಬೋಧನೆಗೆ ಪ್ರಾಮುಖ್ಯತೆ ನೀಡುತ್ತದೆ. ಈ ಸಂಸ್ಥೆಗಳು ಪ್ರಬೋಧನೆಗೆ ಅವಶ್ಯಕತೆಯಿರುವ ಮೂಲಸೌಕರ್ಯಗಳನ್ನು ಸ್ವಾಭಾವಿಕವಾಗಿ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತದೆ . ಸಮನ್ವಯ ಸಂಸ್ಥೆಗಳು ಉದ್ದೇಶಿಸುವ; ಪ್ರಬೋಧನೆ ನೀಡಬೇಕಾದ ಸಮೂಹದಲ್ಲಿ ಏಳು ಭೂಖಂಡಗಳ ಸರ್ವ ಜನವಿಭಾಗಗಳು ಒಳಪಡುತ್ತದೆ. ಬಹುಭಾಷಾ ಪಾಂಡಿತ್ಯವೆಂಬ ವಜ್ರಾಯುಧವಿರುವುದರಿಂದ ಇದು ವಿದ್ಯಾರ್ಥಿಗಳಿಗೆ ಸುಲಭವಾಗಬಹುದು. ಅರಬ್ ದೇಶಗಳನ್ನು ಹೊರತುಪಡಿಸಿ ಯುರೋಪ್ಯನ್, ಕರೀಬಿಯನ್ ದೇಶಗಳಲ್ಲೂ ಇಂದು ಸಮನ್ವಯ ವಿದ್ಯಾರ್ಥಿಗಳು ಪ್ರಬೋಧನೆ ಪ್ರವೃತ್ತಿಗಳಿಗೆ ನೇತೃತ್ವ ನೀಡುತ್ತಿದ್ದಾರೆ. ಫಿಜಿ, ಸಿಂಗಪೂರ್, ನ್ಯೂಜಿಲ್ಯಾಂಡ್ ಮುಂತಾದ ದೇಶಗಳು ಸಮನ್ವಯ ವಿದ್ಯಾರ್ಥಿಗಳ ಪ್ರಬೋಧನೆ ಪ್ರವೃತ್ತಿಗಳಿಗೆ ಪ್ರತ್ಯಕ್ಷ ಸಾಕ್ಷಿ. ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ್ ಚಾಲನೆಗಳು, ಮುಸ್ಲಿಂ ನೇತಾರರೊಂದಿಗೆ ನಿರಂತರ ಸಂಪರ್ಕವನ್ನು ಸಮನ್ವಯ ವಿದ್ಯಾರ್ಥಿಗಳಿಂದ ಸ್ಥಾಪಿಸಲಾಗುತ್ತಿದೆ.
6. ಆಧುನಿಕ ಉಪಕರಣಗಳ ಉಪಯೋಗ. ಕಂಪ್ಯೂಟರಿನ, ಇಂಟರ್ನೆಟ್ಟಿನ ಅನಂತ ಸಾಧ್ಯತೆಗಳನ್ನು ಮತೀಯ ವಿಭಾಗದಲ್ಲಿ ಉಪಯೋಗಪಡಿಸುವುದರಲ್ಲಿ ಸಮನ್ವಯ ಸಂಸ್ಥೆಗಳು, ಅದರ ವಿದ್ಯಾರ್ಥಿಗಳು ವಹಿಸುವ ಪಾತ್ರ ಸಣ್ಣದೇನಲ್ಲ. ಐದುಸಾವಿರದಷ್ಟು ಅರಬಿ ಗ್ರಂಥಗಳನ್ನು ಒಳಗೊಳ್ಳುವ “ ಮಕ್ತಬ್ ಶಾಮಿಲ “ ಒಳಪಟ್ಟ ಆಧುನಿಕ ಸಂವಿಧಾನಗಳು ಕೇರಳೀಯ ಮತವಿದ್ಯಾಭ್ಯಾಸ ವಿಭಾಗದ ಅನಿವಾರ್ಯ ಭಾಗವಾದುದರಲ್ಲಿ ಕಂಪ್ಯೂಟರ್ ತಿಳುವಳಿಕೆ ಕರಗತ ಮಾಡಿದ ಅಭಿನವ ಪಂಡಿತರ ಪಾತ್ರ ದೊಡ್ಡದಾಗಿತ್ತು. ಸಮನ್ವಯ ಸಂಸ್ಥೆಗಳ ಕೈವಶವಿರುವ ವೆಬ್ ಪೇಸ್ ಇಲ್ಲಿ ಪರಾಮರ್ಶಿಸಬೇಕೆಂದು ತೋಚುತ್ತದೆ. ಇಸ್ಲಾಮನ್ನು ಮಲಯಾಳದಲ್ಲಿ ಪರಿಚಯಿಸುವ ಹಲವಾರು ವೆಬ್ಸೈಟ್ ಗಳು ಇಂದು ಸಮನ್ವಯ ವಿದ್ಯಾರ್ಥಿಗಳಿಗಿದೆ. ಸಮಗ್ರವಾದ ಇಸ್ಲಾಮಿಕ್ ಪೋರ್ಟಲ್ ಈಗ ಸಮನ್ವಯ ಸಂತತಿಗಳದ್ದಾಗಿ ಹೊರಬರಲಿದೆ. ನೂತನವಾದಿಗಳು ತಮ್ಮ ಮುಖ್ಯ ಹಾದಿಯಾಗಿರಿಸಿದ್ದ ವಿಭಾಗದಲ್ಲೂ ಸಮನ್ವಯ ವಿದ್ಯಾರ್ಥಿಗಳ ಈ ಜೈತ್ರಯಾತ್ರೆ ಎನ್ನುವುದು ಕಂಪ್ಯೂಟರಿನ ತಿಳುವಳಿಕೆಯ ಪ್ರಸಕ್ತಿಯನ್ನು ವರ್ಧಿಸುತ್ತದೆ .
7. ಧಾರ್ಮಿಕ ಶಿಕ್ಷಣದ ಶಿಸ್ತುಬದ್ದತೆ. ಅಶಾಸ್ತ್ರಿಯ ರೀತಿಯಲ್ಲಾಗಿತ್ತು ಪಳ್ಳಿದರ್ಸಿನಲ್ಲಿ ಮತಪಠಣ (ಕಲಿಕೆ) ನಡೆಸುತ್ತಿದ್ದದ್ದು.ಪಳ್ಳಿದರ್ಸುಗಳು ಒಂದೊದು ಪ್ರದೇಶದ ಜುಮಾ ಮಸೀದಿಯಲ್ಲಿ ಸಂವಿಧಾನಿಸಿದ ಕಾರಣದಿಂದ ಪ್ರಯೋಗಿಕವಾಗಿ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದದ್ದು ವಾಸ್ತವ . ಮೊಹಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಾಹ, ಮರಣ ಮುಂತಾದವುಗಳಿಗೆ ಪೂರ್ಣವಾಗಿ ಅಥವಾ ಭಾಗಶಃವಾಗಿ ವಿದ್ಯಾರ್ಜನೆ ಮೊಟಕುಗೊಳ್ಳುವುದು ದರ್ಸುಗಳಲ್ಲಿ ಸರ್ವೇಸಾಧಾರಣವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಬದುಕುವುದು, ಪಿರಿಯಡ್ ಸಂವಿಧಾನ, ಅಧ್ಯಾಪಕರ ಸಂಖ್ಯೆ, ಗ್ರಂಥಾಲಯ ಸೌಕರ್ಯ, ಕ್ಯಾಂಪಸ್ ಸಜ್ಜೀಕರಣ, ಭೋಜನ ಕೊಠಡಿ, ಆಟದ ಮೈದಾನ ಮುಂತಾದ ಆಧುನಿಕ ಶಿಕ್ಷಣ ಸಂವಿಧಾನಗಳು ಪ್ರಯೋಗಿಕಪಡಿಸುವುದರಲ್ಲಿ ಸಮನ್ವಯ ಸಂಸ್ಥೆಗಳು ಜಯ ಸಾಧಿಸಿತು. ಇದರ ಫಲವಾಗಿ ಗಹನವಾದ ಅಧ್ಯಯನಕ್ಕೆ ಮತ್ತು ಅನುಬಂಧ ಪ್ರವೃತ್ತಿಗಳಿಗೆ ಸಮನ್ವಯ ಸಂಸ್ಥೆಗಳು ವೇದಿಕೆಯಾದವು .
8.ಸಾಹಿತೀಯ ಮಹಿಮೆ. ಸಾಂಪ್ರದಾಯಿಕ ವಿದ್ವಾಂಸರ ಭಾಷೆಯು ಅವರ ವ್ಯವಹಾರಗಳು ಒಳ್ಳೆಯ ಗುಣಮಟ್ಟದ್ದಾಗಿರಲಿಲ್ಲ . ಪಾರಂಪರಿಕವಾದಿಗಳಾದ ಜನರೊಂದಿಗೆ ಸಂವಾದ ನಡೆಸುವುದರಲ್ಲಿ ಅವು ಪೂರ್ಣ ವಿಜಯ ಸಾಧಿಸಲಿಲ್ಲ. ಇತರ ಇಸ್ಲಾಮಿಕ್ ಸಂಸ್ಥೆಗಳೊಂದಿಗೆ, ಸಾರ್ವಜನಿಕರೊಂದಿಗೆ ಸಂವಾದ ನಡೆಸುವುದರಲ್ಲಿ ಸಾಂಪ್ರದಾಯಿಕ ವಿದ್ವಾಂಸರು ಸೋಲುಂಡರು. ಸಮನ್ವಯ ಶಿಕ್ಷಣ ಪಡೆದ ಯುವವಿದ್ವಾಂಸ ತಲೆಮಾರು ರಂಗ ಪ್ರವೇಶ ಮಾಡಿದಾಗ ಸುನ್ನಿ ಸಾಹಿತ್ಯ ಶಾಖೆಯಲ್ಲಿ ಪ್ರಭಾಷಣ ವೇದಿಕೆಗಳಲ್ಲಿ ಶ್ರದ್ದೇಯವಾದ ಬದಲಾವಣೆ ಕಾಣಲಾರಂಭಿಸಿತು. ಕಳೆದ ದಶಕದ ಮುಂಚಿನ ಸುನ್ನಿ ಸಮಕಾಲಿಕೆಗಳು ಪರಿಶೋಧಿಸಿದರೆ ಈ ಬದಲಾವಣೆಗಳನ್ನು ಸರಿಯಾಗಿ ಕಾಣಬಹುದು. ನೂತನವಾದಿಗಳು ತಮ್ಮ ಮಾಧ್ಯಮವಾಗಿರಿಸಿದ್ದ ಪದಪ್ರಯೋಗಗಳು ಸಮಕಾಲಿಕ ವಿಷಯಗಳು ಸುನ್ನಿ ಸಮೂಹಕ್ಕೆ ಲಭ್ಯವಾಗಿಸುವುದರಲ್ಲಿ ಸಮನ್ವಯ ಸಂಸ್ಥೆಗಳಿಗೂ ಅವುಗಳ ಪ್ರತಿಭಾಶಾಲಿ ವಿದ್ಯಾರ್ಥಿಗಳಿಗಿರುವ ಪಾತ್ರ ಬಹುದೊಡ್ಡದು.
ಮುಖ್ಯಧಾರೆಗಳಲ್ಲಿ ಸಮುದಾಯದ ತಾತ್ಪರ್ಯಗಳನ್ನು ಜಾಗೃತಿಗೊಳಿಸುವುದರಲ್ಲಿ ಫಲ ಕಂಡಿತು. ಕಳೆದ ಕಾಲಗಳಲ್ಲಿ ಸುನ್ನಿ ಸಮುದಾಯಕ್ಕೆ ಕಿಂಚಿತ್ತೂ ಪರಿಚಯವಿರದ ವಿಷಯಗಳಲ್ಲಿ ಅಧಿಕೃತ ರೀತಿಗಳಲ್ಲಿ ವ್ಯವಹರಿಸಿ, ಇಸ್ಲಾಮಿಕ್ ವಿರುದ್ಧ ಪರಾಮರ್ಶೆಗಳಿಗೆ ಕ್ಲಿಪ್ತವಾದ ಉತ್ತರ ನೀಡಲು ಸಾಮರ್ಥ್ಯವಿರುವ ಬರಹಗಾರರು ಇಂದು ಸುನ್ನಿ ಸಮುದಾಯಕ್ಕಿದೆ. ಅವರಲ್ಲಿ ಬಹುಭಾಗ ಸಮನ್ವಯ ಸಂಸ್ಥೆಯ ಸಂತತಿಗಳಾಗಿದ್ದು ಕಾಕತಾಳೀಯವಾಗಲು ಸಾಧ್ಯವಿಲ್ಲ.
9. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮೂಹಕ್ಕೆ ಸಮರ್ಪಿಸಿತು. ಹಲವಾರು ಪ್ರಸಿದ್ಧ ಪಂಡಿತರನ್ನು ರೂಪಿಸಿತು ಎಂಬ ವಾಸ್ತವದೊಂದಿಗೆ ಪಳ್ಳಿದರ್ಸಿನಲ್ಲಿ ಕಲಿಯುತ್ತಿದ್ದ ಬಲು ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲೂ, ಕಾರ್ಯಕ್ಷಮತೆಯಲ್ಲೂ ಹಿಂದುಳಿದವರಾಗಿದ್ದರು ಎಂಬುದು ಅನುಭವಿ ಸತ್ಯ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸುವ ವಿದ್ಯಾರ್ಥಿಗಳನ್ನು ವೈದ್ಯಕೀಯ, ಇಂಜಿನೀಯರಿಂಗಿಗೆ ಕಳುಹಿಸುವುದು, ಕಡಿಮೆ ಅಂಕ ಗಳಿಸಿದವರನ್ನು, ಸೋಲುಂಡವರನ್ನು ಪಳ್ಳಿದರ್ಸಿಗೆ ಕಳುಹಿಸುವ ಹಲವಾರು ಪೋಷಕರನ್ನು ಈಗಲೂ ಕಾಣಬಹುದು. ಪಳ್ಳಿದರ್ಸಿಗಿರುವ ವಿದ್ಯಾರ್ಥಿಗಳ ಕೊರತೆ, ಪ್ರವೇಶಾತಿ ಪರೀಕ್ಷೆಯ ಅಭಾವ ಈ ವಾಸ್ತವಿಕತೆಯನ್ನು ಬಲಪಡಿಸಿತು . ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಪಳ್ಳಿದರ್ಸಿನ ಶಿಕ್ಷಣ ಯೋಗ್ಯತೆ ಕೆಲಮಟ್ಟದಲ್ಲಿರುವುದಾಗಿ ಕಾಣಬಹುದು.
ಆದರೆ, ಸಮನ್ವಯ ಸಂಸ್ಥೆಗಳು ಉನ್ನತ ಶಿಕ್ಷಣದ ಭರವಸೆ ನೀಡಿ, ವ್ಯವಸ್ಥಿತ ಮಾದರಿಯಲ್ಲಿ ಪ್ರವೇಶಾತಿ ಪರೀಕ್ಷೆ ನಡೆಸುವುದರಿಂದ ಕಾರ್ಯಕ್ಷಮತೆ ಇಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ದೊರಕದಾಯಿತು. ಇದಕ್ಕೆ ಬೇರೊಂದು ಮುಖವಿದ್ದರೂ ಕಾರ್ಯಕ್ಷಮತೆಯೂ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಧಾಮಿಕ ಶಿಕ್ಷಣದೆಡೆಗೆ ಆಕರ್ಷಿಸಲು ಸಾಧ್ಯವಾಯಿತೆನ್ನುವುದು ಉಪಯುಕ್ತ ಬದಲಾವಣೆ ಎಂಬುದರಲ್ಲಿ ಎರಡು ಮಾತಿಲ್ಲ.
10. ಧಾರ್ಮಿಕ ಪಂಡಿತರ ಕುರಿತಿದ್ದ ಸಾಮಾನ್ಯ ಧೋರಣೆಯಲ್ಲಿ ಬಂದ ವ್ಯತ್ಯಾಸ. ಪಾರಂಪರಿಕವಾಗಿ ಧಾರ್ಮಿಕ ವಿದ್ವಾಂಸರ ಕುರಿತು ಸಾಮಾನ್ಯ ಜನರಿಗಿದ್ದ ಧೋರಣೆಯಲ್ಲಿ ಗಣನೀಯ ಬದಲಾವಣೆಯನ್ನು ತರಲು ಸಮನ್ವಯ ವಿದ್ಯಾಭ್ಯಾಸಕ್ಕೆ ಸಾಧ್ಯವಾಯಿತು. ಅರಬಿಕ್ ಮತ್ತು ಇಸ್ಲಾಮೀ ವಿಜ್ಞಾನವನ್ನು ಮಾತ್ರ ಕರಗತ ಮಾಡಿದವರು, ಮಲಯಾಳದಲ್ಲೂ ಬೇಕಾದಷ್ಟು ತಿಳುವಳಿಕೆಯಿಲ್ಲದವರು, ಸಾಂಕೇತಿಕ ವಿಜ್ಞಾನ, ಇಂಗ್ಲಿಷ್ ಭಾಷೆಯ ವಿರುದ್ಧ ವಿದ್ವೇಷವಿರಿಸುವವರು ಎಂದಾಗಿತ್ತು ಧಾರ್ಮಿಕ ವಿದ್ವಾಂಸರ ಕುರಿತು ಆ ಕಾಲದಲ್ಲಿದ್ದ ಧೋರಣೆ ಎಂಬುದು ಕಟು ಸತ್ಯ. (ನೂತನ ವಾದಿಗಳ ಕುಪ್ರಚಾರಗಳು ಈ ಧೋರಣೆಯನ್ನು ರೂಪಿಸುವುದರಲ್ಲಿ ಸ್ವಾಧೀನಿಸಿರಬಹುದು. ) ಆದರೆ ಶಾಸ್ತ್ರ- ಸಾಂಕೇತಿಕ ವಿದ್ಯೆಗಳಲ್ಲಿ ಇಂಗ್ಲಿಷ್ ಒಳಗೊಂಡ ಭಾಷೆಗಳಲ್ಲಿ ನೈಪುಣ್ಯತೆ ಪಡೆದ ಸಮನ್ವಯ ಶಿಕ್ಷಣದ ಯುವ ವಿದ್ವಾಂಸರ ತಲೆಮಾರು ಕಣಕ್ಕಿಳಿದ ನಂತರ ಈ ಧೋರಣೆ ಸಂಪೂರ್ಣವಾಗಿ ತಿದ್ದಲಾಯಿತು. ಸಮನ್ವಯ ಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈಯ್ಯುವುದು ಹೆಮ್ಮೆಯ ವಿಷಯವೆಂದು ಚಿಂತಿಸುವ ವಿದ್ಯಾರ್ಥಿಗಳ ಮತ್ತು ಪೋಷಕರ ಗುಂಪು ಬೆಳೆಯಿತು.
ಮಲಬಾರಿನ ಇಸ್ಲಾಮಿಕ್ ವಿದ್ಯಾಭ್ಯಾಸ ಶಾಖೆ ಕೈವರಿಸಿದ ಅತುಲ್ಯ ಕ್ರಾಂತಿಯುತವಾದ ಸಾಧನೆಯಾಗಿದೆ ಧಾರ್ಮಿಕತೆಯಲ್ಲಿ ನೆಲೆನಿಂತಿರುವ ಮತಭೌತಿಕ ಸಮನ್ವಯ ಶಿಕ್ಷಣ. ಸಮನ್ವಯಕ್ಕಿಂತ ಮುಂಚೆ,ನಂತರದ ಎಂಬ ವಿಭಜನೆ ಮಾನದಂಡವನ್ನು ಮುಸ್ಲಿಂ ಕೇವಳ/ಕೇರಳೀಯ ಇಸ್ಲಾಮಿಕ್ ವಿದ್ಯಾಭ್ಯಾಸ ಚರಿತ್ರೆ ಸ್ವೀಕರಿಸುವ ಮಾದರಿಯಲ್ಲಿ ಶಕ್ತವಾದದ್ದು ಪ್ರಶಂಸನೀಯ . ಸರ್ವ ವಿಮರ್ಶನೆಗಳನ್ನು ಮಾಡಿಕೊಂಡು ಸಮುದಾಯ, ಸಮನ್ವಯ ಶಿಕ್ಷಣವನ್ನು ಪೂರ್ಣವಾಗಿ ತನ್ನ ಹೆಗಲಿಗೇರಿಸಿತು ಎಂಬುದರ ಅತ್ಯಂತ ಉಚ್ಛ ಮತ್ತು ಕೊನೆಯ ಸಾಕ್ಷಿಯಾಗಿದೆ ಈ ಶಿಕ್ಷಣ ರೀತಿಯನ್ನು ನಖಶಿಖಾಂತ ವಿರೋಧಿಸಿದವರು ಕೂಡ ಈಗ ಮೆಲ್ಲಮೆಲ್ಲನೆ ಇದೇ ರಿವಾಜನ್ನು ಆಶ್ರಯಿಸಲಾರಂಭಿಸಿದರು ಎನ್ನುವುದು. ಪ್ರಸಿದ್ಧ ಧಾರ್ಮಿಕ ವಿದ್ವಾಂಸರ ಮಕ್ಕಳು ಹಿಂಬಾಲಕರು ಇಂದು ಸಮನ್ವ ವಿದ್ಯಾಭ್ಯಾಸ ಮಾದರಿಯಲ್ಲಾಗಿದೆ ವಿದ್ಯಾರ್ಜನೆಗೈಯುತ್ತಿರುವುದು. ಶಂಸುಲ್ ಉಲಮಾ ಇ.ಕೆ ಅಬೂಬಕ್ಕರ್ ಮುಸ್ಲಿಯಾರ್ ತನ್ನ ಮೊಮ್ಮಗನನ್ನು ಈ ಶಿಕ್ಷಣಕ್ಕೆ ಮುಡಿಪಾಗಿಟ್ಟ ಹಾಗೆ. ಈ ರೀತಿ ರಿವಾಜಿನಲ್ಲಿ ಎಷ್ಟು ಕೊರತೆಗಳನ್ನು ಸೂಚಿಸಿದರು ಅದೆಲ್ಲವನ್ನು ನಿಶ್ಪ್ರಯೋಜಕ ಗೊಳಿಸುವ ರೀತಿಯಲ್ಲಾಗಿದೆ ಸಮನ್ವಯ ವಿದ್ಯಾಭ್ಯಾಸದ ಮಹಿಮೆ ಎನ್ನುವುದಕ್ಕೆ ಸಮರ್ಥನೆಯ ಅವಶ್ಯಕತೆ ಇಲ್ಲ ಎನ್ನುವುದು ಅನುಭವಿ ಸತ್ವ .