ಕುರ್ ಆನ್ ಆ್ಯಪ್: ಒಂದು ಕರ್ಮಶಾಸ್ತ್ರೀಯ ವಿಶ್ಲೇಷಣೆ
ಈ ಒಂದು ಆಧುನಿಕ ಲೋಕದಲ್ಲಿ ಮೊಬೈಲ್ ಫೋನ್ ಗಳು ಮನುಷ್ಯ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ. ಜೀವನದ ಎಲ್ಲಾ ಅವಶ್ಯಕತೆಯನ್ನು ಅದರ ಮುಖಾಂತರ ಪಡೆಯಬಹುದು. ನಮ್ಮ ದಿನನಿತ್ಯ ಜೀವನದಲ್ಲಿ ಯಾವ ಅವಶ್ಯಕತೆ ಬಂದಾಗಲೂ ಅದನ್ನೇ ಆಶ್ರಯಿಸುತ್ತೇವೆ. ನಾವು ಯಾತ್ರೆಯಲ್ಲಿ ಅಥವಾ ಕುರ್ ಆನ್ (ರಸ್ಮುಲ್ ಉಸ್ಮಾನಿ) ನಮ್ಮಲ್ಲಿ ಅಲಭ್ಯವಾದ ಸಮಯದಲ್ಲಿ ನಾವು ಮೊಬೈಲನ್ನು ಆಶ್ರಯಿಸುತ್ತೇವೆ. ಮೊಬೈಲ್ ಮುಖಾಂತರ ಎಲ್ಲಾ ರೀತಿಯಲ್ಲಿರುವ ಕುರ್ ಆನ್ ಆ್ಯಪ್ ಗಳನ್ನು ಪಡೆಯಲು ಸಾಧ್ಯವಾಗಿದೆ. ನಾವು ಮೊಬೈಲಲ್ಲಿ ಓದುವಾಗ ಕುರ್ ಆನ್ (ರಸ್ಮುಲ್ ಉಸ್ಮಾನಿ) ತರಹ ವುಝೂ ಕಡ್ಡಾಯವಾಗಿದೆಯಾ? ಅದನ್ನು ನೋಡಿ ಓದಿದರೆ ಕುರ್ ಆನ್ (ರಸ್ಮುಲ್ ಉಸ್ಮಾನಿ) ಓದಿದ ಹಾಗೂ ನೋಡಿದ ಪ್ರತಿಫಲ ಸಿಗಬಹುದೇ? ಮೊಬೈಲಲ್ಲಿ ಕುರ್ ಆನ್ ಓದುವಾಗ ಇಂತಹ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಅದನ್ನು ನೆರವೇರಿಸುವುದಾಗಿದೆ ಈ ಕಿರು ಲೇಖನದ ಉದ್ದೇಶ.
ಈ ಚರ್ಚೆಗೆ ಪ್ರವೇಶಿಸುವ ಮುನ್ನ ನಾವು ತಿಳಿಯಬೇಕಾದದ್ದು ಮೊಬೈಲ್ನಲ್ಲಿರುವ ಕುರ್ ಆನ್ (ರಸ್ಮುಲ್ ಉಸ್ಮಾನಿ) ಕುರ್ ಆನ್ ಕರ್ಮಶಾಸ್ತ್ರವು ಪರಿಗಣಿಸುತ್ತಿದೆಯೇ?
ಅಲ್ಲಿ ಎರಡು ಉಲಮಾ ಪಕ್ಷಗಳಿವೆ. ಮೊದಲನೆಯದ್ದು: ನೀರಿನಲ್ಲಿ ಪ್ರತಿಬಿಂಬವಾಗಿ ತೋರುವ ಕುರ್ ಆನ್ ಮುಟ್ಟಲು ವುಝೂವಿನ ಅವಶ್ಯಕತೆ ಇಲ್ಲ. ಇದನ್ನು ಕುರ್ ಆನ್ ಆ್ಯಪ್ ಗಳಿಗೆ ಸಮನ್ವಯಿಸುತ್ತಾ, ಕುರ್ ಆನ್ ಆ್ಯಪ್ ಗಳನ್ನು ಸ್ಪರ್ಶಿಸಲು ವುಝೂವಿನ ಅವಶ್ಯಕತೆಯಿಲ್ಲ ಎಂಬುದಾಗಿದೆ ಮೊದಲ ಉಲಮಾ ಪಕ್ಷ.
ಕುರ್ ಆನ್ ಗೆ ವ್ಯತ್ಯಸ್ತವಾದ ರೂಪಗಳಿವೆ. ಮೊದಲು ಕುರ್ ಆನ್ ಕೈಪತ್ರಗಳಲ್ಲಿ ಬರೆಯಲ್ಪಡುತ್ತಿತ್ತು. ನಂತರ ಕಾಲದ ಬದಲಾವಣೆಯ ಅನುಸಾರವಾಗಿ ಅದನ್ನು ಮುದ್ರಿಸುವ ತೀರ್ಪಿಗೆ ಉಲಮಾಗಳು ಬಂದರು. ಅದನ್ನು ಸ್ವಲ್ಪ ಪಂಡಿತರು ಎದುರಿಸಿದರು. ಕುರ್ ಆನ್ ಕೇವಲ ಪುಟಗಳ ಮುಖಾಂತರ ಓದಬೇಕೆಂದು ಎಲ್ಲಿಯೂ ಷರತ್ತುಗಳಿಲ್ಲ. ಆದ್ದರಿಂದ ಮುದ್ರಿಸಿದ ಕುರ್ ಆನ್ ಗೆ — ಮೂಲ ಕುರ್ ಆ ನಿ ನ ವಿಧಿ ನಿಯಮಗಳು ಅನ್ವಯಿಸಲಾಗುತ್ತವೆ. ಆದುದರಿಂದ ಕುರ್ ಆನ್ ಆ್ಯಪ್ ಗಳಿಗೆ ಅದೇ ವಿಧಿಗಳು, ನಿಯಮಗಳು ಅನ್ವಯಿಸಲ್ಪಡುತ್ತವೆ. ಕುರ್ ಆನ್ ಆ್ಯಪ್ ಸ್ಪರ್ಶಿಸಲು ವುಝೂ ಕಡ್ಡಾಯವಾಗಿದೆ. ಆ್ಯಪ್ ಗಳ ಮುಖಾಂತರ ಓದುವ ಕುರ್ ಆನ್ (ರಸ್ಮುಲ್ ಉಸ್ಮಾನಿ) ಕುರ್ ಆನ್ ರೀತಿಯೆ ಆಗಿದೆ. ಆದುದರಿಂದ ಅದನ್ನು ಸ್ಪರ್ಶಿಸಲು ವುಝೂ ಕಡ್ಡಾಯವಾಗಿದೆ ಎಂಬ ಅಭಿಪ್ರಾಯವಿರುವ ಎರಡನೆಯ ಉಲಮಾ ಪಕ್ಷ.
ಕುರ್ ಆನ್ ಆ್ಯಪ್ ಗಳನ್ನು (ರಸ್ಮುಲ್ ಉಸ್ಮಾನಿ) ಕುರ್ ಆನ್ ನ ವಿಧಿಗಳಿಗೆ ಅನ್ವಯಿಸುವಾಗ ಎರಡು ಪಕ್ಷಗಳಿವೆ. ಒಂದನೆಯ ಪಕ್ಷದ ಪ್ರಕಾರ ಸ್ಪರ್ಶಿಸಲು ವುಝೂ ಕಡ್ಡಾಯವಿಲ್ಲ; ಎರಡನೆಯ ಪ್ರಕಾರ ವುಝೂ ಕಡ್ಡಾಯವಾಗಿದೆ. ಆದ್ದರಿಂದ ಒಂದನೆಯ ಪಕ್ಷದ ಪ್ರಕಾರ (ರಸ್ಸುಲ್ ಉಸ್ಮಾನಿ) ಕುರ್ ಆನ್ ಅನ್ನು ಕೇವಲ ನೋಡಿದರೆ ಸಿಗುವ ಪ್ರತಿಫಲ ನಮಗೆ ಆ್ಯಪ್ ಮುಖಾಂತರ ನೋಡಿದರೆ ಸಿಗುವುದಿಲ್ಲ. ಎರಡನೆಯ ಉಲಮಾ ಪಕ್ಷದ ಪ್ರಕಾರ ಕುರ್ ಆನ್ ನೋಡಿದ ಪ್ರತಿಫಲ ಸಿಗುತ್ತದೆ.
ಆ್ಯಪ್ ಗಳ ಮುಖಾಂತರ ಓದುವ ಕುರ್ ಆನ್ — ಅದು ಮೂಲ ಕುರ್ ಆನ್ ನಂತೆಯೇ. ಆದ್ದರಿಂದ ಅದನ್ನು ಸ್ಪರ್ಶಿಸುವಾಗ ವುಝೂ ಕಡ್ಡಾಯವಾಗಿದೆ ಎಂದು ಹೇಳಿದ ಉಲಮಾ ಪಕ್ಷಗಳ ಹತ್ತಿರ ಮೊಬೈಲ್ ಫೋನನ್ನು ಎತ್ತುವುದರಲ್ಲಿ ಎರಡು ಅಭಿಪ್ರಾಯಗಳಿವೆ. ಕಾರಣ ಈ ಭಿನ್ನಾಭಿಪ್ರಾಯದ ಉದ್ಭವ ಶುರುವಾಗುವುದು ಎಲ್ಲಿಂದ ಎಂದರೆ, (ರಸ್ಮುಲ್ ಉಸ್ಮಾನಿ) ಸ್ಪರ್ಶಿಸಲು ಹಾಗೂ ಎತ್ತಿಕೊಳ್ಳಲು ವುಝೂ ಕಡ್ಡಾಯವಾಗಿದೆ.
ಅದೇ ರೀತಿ ಕುರ್ ಆನ್ ಆ್ಯಪ್ ಸ್ಪರ್ಶಿಸಲು ವುಝೂ ಕಡ್ಡಾಯವಾಗಿದೆ ಎಂದು ಹೇಳಿದ ಉಲಮಾ ಪಕ್ಷಗಳ ಹತ್ತಿರ ಎರಡು ಅಭಿಪ್ರಾಯವಿದೆ.
ಮೊದಲನೆಯದು: ಇಮಾಮ್ ರಮ್ಲೀ(ರ) ಅವರ ಅಭಿಪ್ರಾಯಕ್ಕೆ ಆಧಾರವಾಗಿ: ನಾವು ವಸ್ತುಗಳನ್ನು ಹೊತ್ತುಕೊಂದು ಹೋಗುವಾಗ ಅದರಲ್ಲಿ ಕುರ್ ಆನ್ ಇದ್ದರೆ ಅದರಲ್ಲಿರುವ ಕುರ್ ಆನ್ ನನ್ನು ಹೊತ್ತುಕೊಳ್ಳಲು ವುಝೂಇನ ಅವಶ್ಯಕತೆ ಇಲ್ಲ. ಅವನು ಕೇವಲ ವಸ್ತುಗಳನ್ನು ಹೊತ್ತುವುದೆಂದು ಉದ್ದೇಶವಿರಬೇಕು.
ಎರಡನೆಯ ಅಭಿಪ್ರಾಯ: ಇಬ್ನ್ ಹಜರ್ ಹೈತಮಿ(ರ) ರವರ ಅಭಿಪ್ರಾಯ ಆಧಾರದಲ್ಲಾಗಿದೆ. ನಾವು ಸಾಮಾನು ಎತ್ತುವಾಗ ಅದರಲ್ಲಿ ಕುರ್ ಆನ್ ಇದ್ದರೆ ವುಝೂ ಕಡ್ಡಾಯವಾಗುತ್ತದೆ. ಈ ಎರಡು ಅಭಿಪ್ರಾಯಗಳನ್ನು ಮೊಬೈಲ್ ಆ್ಯಪ್ಗಳಲ್ಲಿರುವ ಕುರ್ ಆನ್ ಗೆ ಅನ್ವಯಿಸಬೇಕು.
ಇಮಾಮ್ ರಮ್ಲೀ(ರ) ರವರ ಅಭಿಪ್ರಾಯದ ಮೇಲೆ, ಮೊಬೈಲ್ ಫೋನನ್ನು ಎತ್ತಿಕೊಳ್ಳಲು ವುಝೂಇನ ಅವಶ್ಯಕತೆಯಿಲ್ಲ. ಕಾರಣ, ಮೊಬೈಲಲ್ಲಿ ಅದರ ಹೊರತಾಗಿ ತುಂಬಾ ಆ್ಯಪ್ಗಳು ಇರುತ್ತವೆ. ಅದನ್ನು ಮೇಲೆ ವಿವರಿಸಿದ ವಸ್ತುಗಳಿಗೆ ಹೋಲಿಸಿದರೆ, ಅನೇಕ ಆ್ಯಪ್ಗಳು ಇರುವಾಗ ಕುರ್ ಆನ್ ನ್ನು ಹೊತ್ತಲು ಅವಶ್ಯಕತೆ ಇಲ್ಲ. ಅದೇ ರೀತಿ ಅವನು ಕುರ್ ಆನ್ ನ್ನು ಮಾತ್ರ ಉದ್ದೇಶಿಸಬಾರದು.
ಇಮಾಮ್ ಇಬ್ನ್ ಹಜರ್ ಹೈತಮಿ ಅವರ ಅಭಿಪ್ರಾಯದಲ್ಲಿ, ಕುರ್ ಆನ್ ಆ್ಯಪ್ ಗಳಿರುವ ಫೋನ್ಗಳನ್ನು ಹೊತ್ತಲು ವುಝೂ ಕಡ್ಡಾಯವಾಗಿದೆ.
ಸಾರಾಂಶ : ಆ್ಯಪ್ ಗಳಲ್ಲಿರುವ ಕುರ್ ಆನ್, ಕುರ್ ಆನ್ (ರಸ್ಮುಲ್ ಉಸ್ಮಾನಿ) ಎಂಬುದರಲ್ಲಿ ಎರಡು ಅಭಿಪ್ರಾಯಗಳಿವೆ:
1. ಅದು ಮೂಲ ಕುರ್ ಆನ್ ಅಲ್ಲ — ಕೇವಲ ಪ್ರತಿಬಿಂಬ ಮಾತ್ರ.
2. ಅದು ಮೂಲ ಕುರ್ ಆನ್ ನ ರೀತಿ. ಆದ್ದರಿಂದ ಅದನ್ನು ಸ್ಪರ್ಶಿಸಲು ವುಝೂ ಕಡ್ಡಾಯವಾಗಿದೆ.
ಮೇಲೆ ವಿವರಿಸಿದ ಎರಡನೆಯ ಅಭಿಪ್ರಾಯದ ಆಧಾರದ ಮೇಲೆ ಎರಡು ಅಭಿಪ್ರಾಯಗಳಿವೆ:
1. ಮೊಬೈಲ್ ಒತ್ತಲು ವುಝೂ ಕಡ್ಡಾಯವಿಲ್ಲ.
2. ವುಝೂ ಕಡ್ಡಾಯವಾಗಿದೆ.
ಎಷ್ಟೇ ಭಿನ್ನಾಭಿಪ್ರಾಯವಿದ್ದರೂ. ಸೂಕ್ಷ್ಮತೆಗಾಗಿ ಕುರ್ ಆನ್ ಆ್ಯಪ್ ಗಳನ್ನು ಸ್ಪರ್ಶಿಸಲು ವುಝೂ ಇರುವುದೇ ಉತ್ತಮ.