ಉಮ್ರಾ ದ ಕರ್ಮಗಳು ಒಂದೇ ನೋಟದಲ್ಲಿ...

 ಪರಿಶುದ್ಧ ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಐದನೆಯದಗಿದೆ ಹಜ್ಜ್ ಮತ್ತು ಉಮ್ರಾ.ಪೂರ್ಣ ಆರೋಗ್ಯವಂತರಾದ ಮತ್ತು ಔದಾರ್ಯ ಯುತರಾದಂತಹ ಜನರಿಗೆ ಜೀವನ ದಲ್ಲಿ ಓಮ್ಮೆಯಾ ದರೂ ಹಾಜ್ಜ್ ಮತ್ತು ಉಮ್ರಾ ನಿರ್ವಹಿಸುವುದು ಕಡ್ಡಾಯ ವಾಗಿದೆ. 

ಭೌತಿಕ ಸನ್ನಿವೇಶಗಳು ಸರಿಯಾಗಿ ಬಂದರೂ ಅದನ್ನ ನಿರ್ವಹಿಸದೆ ಒಬ್ಬರೂ ಮರಣ ಹೊಂದಿದರೆ ಅವರಿಗೆ ಬೇಕಾಗಿ ಆ ಕರ್ಮವನ್ನು ನಿರ್ವಹಿಸಲು ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಆಗುವಂತಹ ಖರ್ಚು ವೆಚ್ಚಗಳನ್ನು ಒಟ್ಟುಗೂಡಿಸಿದ ನಂತರವೂ ಅವರ ಅನಂತರ ಸ್ವತ್ತನ್ನು ಹಂಚ ಬಹುದೆಂದು ಕರ್ಮ ಶಾಸ್ತ್ರ ನಿಯಮ.ಸುಪ್ರದಾ ನವಾದ ಯಾವುದೇ ಕಾರ್ಯ ವೈಖರಿಗಳಲ್ಲಿ ಉಮ್ರಾ ಯಾತ್ರೆಯಲ್ಲಿ ಕೂಡ ಇಸ್ತಿ ಕಾರತ್ ಮಾಡಿಯಾಗಿದೆ ತೀರ್ಮಾನಿಸುವುದು. ಅರ್ಥಿಕ ವಾಗಿ ಅಥವಾ ಶಾರೀರಿಕವಾಗಿ ಇರುವಂತಹ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ತಿಕಾರಿಸಿ. ಕಾರಣಾತರಗಳಿಂದ ಮುರಿದುಹೋದ ತಮ್ಮ ಕುಟುಂಬಗಳನ್ನು ಒಟ್ಟುಗೂಡಿಸಿ ಅವರೊಂದಿಗೆ ರಾಜಿ ನಡೆಸಿ ಆಗಬೇಕು ಹಜ್ಜ್ ಮತ್ತು ಉಮ್ರಾ ಗೆ ತಯಾರಾ ಗುವುಡು. ಉಮ್ರಾ ದ ಪ್ರದಾನ ಕಾರ್ಯಗಳಿ ಗೊಮ್ಮೆ ಒಮ್ಮೆ ನೋಡಿದರೆ,

 

ಮೊದಲನೆ ಯದಾಗಿ ಇಹ್ರಂ:

ಓ ರ್ವನು ಉಮ್ರಾ ಉದ್ದೇಶಿಸಿ ಮಕ್ಕಾಗೆ ತೆರಳುವವ ನಾದರೆ ಇಹ್ರಂ ನಿರ್ವಹಿಸಿದ ನಂತರವೇ ಮೀಕಾತ್ತನ್ನು ಕಳೆದು ಹೋಗುವುದು.ಇಹ್ರಂ ನಿರ್ವಹಿಸಲು ಬೇಕಾಗಿ ಪ್ರತ್ಯೇಕ ವಾದ ಸ್ನಾನ ಗಳು,ದೇಹದಿಂದ ನೀಗಿಸುವಂತಹ ರೋಮ ಗಳನ್ನು ನೀಗಿಸುವುದು ಕಾಲು ಬೆರಳುಗಳ ಉಗುರನ್ನು ನೀಗಿಸುವುದು ಸುಣ್ಣತ್ತಾದ ಕಾರ್ಯವಾಗಿ ದೆ .ಇಹ್ರಂಗೆ ಬೇಕಾಗಿ ಈ ಸುನ್ನ ತ್ತಾ ದ ಕಾರ್ಯ ನಾನು ನಿರ್ವಹಿಸುತ್ತಿದ್ದೇನೆ ಎಂಬ ಅರಿವು ಆ ಸಮಯಗಳಲ್ಲಿ ಅವನಲ್ಲಿರಾಬೇಕೂ. ನಂತರ ಅವನು ಇಹ್ರಂ ನ ವಸ್ತ್ರಗಳನ್ನು ಧರಿಸಬೇಕು. ಶರೀರ ದಲ್ಲಿ ಸುಗಂಧ ದ್ರವ್ಯಗಳನ್ನು ಸೋಸುವುದು ಸುನ್ನ ತ್ತ ಗಿದೆ.

ನಂತರ ಇಹ್ರಂ ನ ಎರಡು ರಕಅತ್ ಸುನ್ನಾತ್ ನಮಾಝ್ ನಿರ್ವಹಿಸಬೇಕು. ಇಹ್ರಂ ನ ಸುನ್ನಾತ್ತಾ ದ ಎರಡು ರಕಅತ್ ನಾನು ನಮಾಝ್ ಮಾಡುತ್ತೇನೆಂದು ನಿಯತ್ ಹೇಳಬೇಕು. ಮೊದಲ ರಕಅತ್ ನಲ್ಲಿ ಸೂರ ಅಲ್ ಕಾಫಿರೂನ್ ಎರಡನೇ ರಕಾತ್ತಲ್ಲಿ ಸೂರ ಇಕ್ ಲಾಸ್ ಓದ ಲೂ ಪ್ರತ್ಯೇಕ ವಾದ ಸುನ್ನಾತ್ತಾಗಿದೆ. ನಂತರ ಪರಮ ಶಕ್ತ ನಾದ ಅಲ್ಲಾಹನೊಂದಿಗೆ ದುಆ ನಡೆಸಬೇಕು. ತದ ನಂತರ ವಾಗಿದೆ ಇಹ್ರಂ ಮಾಡುವುದು. (ನವೈತುಲ್ ಉಮ್ರತ ವ ಅಹ್ರಂತು ಲಿಲ್ಲಾಹಿ ತಾ ಆಲ)  ನಾನು ಉಮ್ರಾ ಉದ್ದೇಶಿಸಿ ಆ ಉಮ್ರಾದೊಂಡಿಗೆ  ಅಲ್ಲಾಹನಿಗೆ ನಾನು ಇಹರಾಮ್  ಮಾಡುತ್ತೇನೆಂದು ಹೇಳುದಾಗಿದೆ ಸಿಂಧುವಾಗುವುದು. ಇಷ್ಟು ನಡೆದ ಬಳಿಕ  ನಾವು ಮೂಹರಿಮ್ ಆಗುತ್ತೇವೆ.ಎಂದರೆ,ಸುಗಂಧವೋ,ಎಣ್ಣೆಯೊ ಉಪಯೋಗಿಸುವುದು,ಅಥವಾ ಉಗುರು ಕೂದಲುಗಳನ್ನು ನೀಗಿಸುವುದು, ಪುರುಷರಿಗೆ ತಲೆ ಮರೆ ಮಾಚಲು ಮತ್ತು ಹೊಲಿಸಿದ ವಸ್ತ್ರ ಧರಿಸುವುದು ಮುಂತಾದವುಗಳು ಇಹರಾಮಿಗೆ ಕಾರಣ.ನಿಷಿದ್ಧವಾದ ಕಾರ್ಯಗಳೆಲ್ಲವೂ ಹರಾಮ್ ಆಗುತ್ತೆ.

 

ತಲ್ ಬಿಯ್ಯತ್

ಇನ್ನು ನಾವು ಹೇಳುದು ತಲ್ ಬಿಯ್ಯತ್ ನ ಮಂತ್ರಗಳು ಲಬಾಯ್ಕಲ್ಲಾಹುಮ್ಮ ಲಬಾಯ್ಕ್ ಲಬ್ಬಯ್ಕ ಲಾ ಶರೀಕ ಲಕ ಲಬಾಯ್ಕ್ ಇನ್ನಲ್ ಹಂದ ವನ್ನಿ ಅಮತ ಲೆಕ‌‌‌‌ ವಲ್ ಮುಲ್ಕ್ ಲಾ ಶರೀಕ ಲಕ.(ಅಲ್ಲಾಹುವೆ ನಿನ್ನ ಕರೆಯನ್ನು ನಾನು ಸ್ಪಂದಿಸಿದ್ದೇನೆ,ನಿಂಗೆ ಸರಿಸಾಟಿ ಯಾರಿಲ್ಲ.ಸರ್ವ ಸ್ಟುದಿಯು ಸಕಲ ಅನುಗ್ರಹಗಳು ನಿನಗೂ ನಿನ್ನದು ಮಾತ್ರವಾದ ನಿಶ್ಚಯವಾಗಿದೆ.ನಿನಗೆ ಸರುಸಾಟಿ ಇಲ್ಲ.) ಇಹರಾಮ್ ನಿರ್ವಹಿಸಿದ ತಕ್ಷಣವೇ ತಲ್ ಬಿಯ್ಯತ್ ಹೇ ಳುವುದು ಪ್ರತ್ಯೇಕವಾದ ಸುನ್ನತ್ತಾ ಗಿದೆ.ಹೀಗೆ ಮಾಡಿದರೆ ಸಾಲದು ಯಾವಾಗಲೂ ವರ್ಧಿಸಬೇಕು.ಎತ್ತರ ಕೆಳಗೆ ಇರುವಂತಹ ಯಾತ್ರೆಗಳಲ್ಲಿ ಅತ್ಯವಶ್ಯಕ ಸ್ಥಳಗಳಲ್ಲಿ ತಲ್ ಬಿಯ್ಯತ್ ಹೇಳುವುದು ಸುನ್ನತ್ತಾ ಗಿದೆ.

 

ತ್ವವಾಫ್: 

ಇನ್ನು ನಾವು ಹೋಗುವುದು ಪರಿಶುದ್ಧ ಮಕ್ಕಾಗೆ. ಮಸ್ಜಿದುಲ್ ಹರಮ್ ಗೆ ಪ್ರವೇಶಿಸಿ ಬೇಗನೇ ಉಮ್ರಾದ ಕರ್ಮಗಳು ನಿರ್ವಹಿಸಬೇಕು. ಮಸ್ಜಿದುರ್ರಹ್ಮಾನ್ ಪ್ರವೇಶಿಸುವಾಗ ಇಅತಿಕಾಫಿನ ನಿಯ್ಯತ್ ಹೇಳಲು ಮರೆಯದಿರಿ.ಪ್ರಥಮವಾಗಿ ಪರಿಶುದ್ಧ ಕಅಬ ಸಂದರ್ಶಿಸುವುದು ಪವಿತ್ರವಾದದ್ದಾಗಿದೆ. ನಿಮ್ಮ ದುಆಗೆ ಉತ್ತರ ಸಿಗುವ ಸಮಯವಾಗಿದೆ ಅದು. ಮಸ್ಜಿದುಲ್ ಹರಮ್ ಗೆ ಪ್ರವೇಶಿಸಿದರೆ  ತಹಿಯ್ಯತ್ ನಮಾಜ್ ನ ಹೊರತು ತ್ವವಾಫ್ ಮಾಡಬೇಕು.

ಇಹರಾಮಿನಿಂದಲೇ ಒರವೇಶಿಸುವುದಾದರೆ ತಹಿಯ್ಯತ್ ನ ತ್ವವಾಫ್ ನ ಬದಲು ಕಡ್ಡಾಯವಾದ ತ್ವವಾಫ್ ಸಾಕಾಗುತ್ತೆ.ಇಹರಾಮಿನಲ್ಲಿ ಅಲ್ಲದೆ ಮಸ್ಜಿದಲ್ ಹ   ರಾಮಿನಲ್ಲಿ ಪ್ರವೇಶಿಸುವಾಗ ತಹಿಯ್ಯತ್ ನ ತವಾಫ್ ನಿರ್ವಹಿಸುದು ಸುನ್ನತ್ತಾಗಿದೆ.ನಂತರ ಮತ್ವಾಫಿಗೆ ಪ್ರವೇಶಿಸಿ ಉಮ್ರಾದ ಕಡ್ಡಾಯವಾದ ತವಾಫ್ ನಿರ್ವಹಿಸಬೇಕು.ಹಜರುಲ್ ಅಸ್ವದ್ ನ ಮುಂದೆ ನಿಂತು ತವಾಫ್ ಮುಂದುವರಿಸಬೇಕು.ಉಮ್ರಾದ ಕಡ್ಡಾಯವಾದ 7 ತವಾಫು ಗಳು ನಾನು ನಿರ್ವಹಿಸುತ್ತೇನೆ ಎಂದು ನಿಯ್ಯತ್ ಹೇಳಿ ಬಿಸ್ಮಿಲ್ಲಾಹಿ ಅಲ್ಲಾಹು ಅಕ್ಬರ್ ಎಂದು ಹೇಳಿ ಹಜರುಲ್ ಅಸ್ವದನ್ನು ಚುಂಬಿಸಿಯೂ ಅಥವಾ ಅದನ್ನ ಕೈ ಮೂಲಕ ಮುಟ್ಟಿ ನಂತರ ಆ ಕಯ್ಯನ್ನು  ಚುಂಬಿಸಿ ತವಾಫ್ ಮುಂದುವರೆಸಬೇಕು.

ತವಾಫ್ ನಿರ್ವಹಿಸುದು ಕಾಬಾದ ಎಡಬಾಗದಲ್ಲಿ ಬರುವ ತರ ಇರಬೇಕು.ಅದೂ ಅಲ್ಲದೇ ಕ ಅಬಾ ಗೆ ಮುಖಾಮುಖಿಯಾಗಿ ತವಾಫ್ ನಿರ್ವಹಿಸುವುದನ್ನು ಪರಿಗಣಿಸಲ್ಪಡುವುದಿಲ್ಲ.ಹಿಜ್ರ್ಇಸ್ಮಾ ಈಲ್ ಎಂಬ ಬಾಗ ಕಅಬಾ ದ ಭಾಗವಾದ ಕಾರಣ ಅದರೊಳಗೆ ನಿರ್ವಹಿಸುವ ತವಾಫಾನ್ನು ಕೂಡ ಪರಿಗಣಿಸಲ್ಪಡುವುದಿಲ್ಲ.ನಂತರ ಸಅಯ್ ಬರುವ ಎಲ್ಲ ತವಾಫಲ್ಲಿ ಮೇಲ್ವಸ್ತ್ರ ಧರಿಸುವ ತರ ( ಮಧ್ಯಭಾಗ ಬಲಗಡೆಯ ಭುಜಕ್ಕೆ ಕೆಳಭಾಗವಾಗಿ ಬರುವ ವಿಧಾನ) ಮಾಡಬೇಕು.ಮೊದಲ ಮೂರು ತವಾಫ್ ಗಳಲ್ಲಿ ಪುರುಷನು ಅಲ್ಪ ವೇಗವಾಗಿ ಓಡಲು ಸುನ್ನತ್ತಾಗಿದೆ.ರಬ್ಬನಾ ಆತಿನ ಫಿದ್ದುನ್ಯ ಹಸ ನತನ್ ವಫಿಲ್ ಆಖಿರತಿ ಹಸನತಲ್ ವಕಿನಾ ಅಜಾಬನ್ನಾರ್. ಎಂಬ ಪ್ರಾರ್ಥನೆ  ಪ್ರವಾದಿ (ಸ)ರವರು ತವಾಫಿನಲ್ಲಿ ಹೇಳುವುದಾಗಿ ಕಂಡಿದೆ. ಮೊದಲಾದ ದುಆಗಳು,ಧಿಕೃಗಳು, ಸ್ವಲಾತುಗಳು,ಸೂರತುಗಲೆಲ್ಲ ಹೇಳಬಹುದಾಗಿದೆ.ತವಾಫಿ ನಲ್ಲಿ ನಮಾಜ್ ನ ಹಾಗೆ ಶರೀರ ಹಾಗೂ ವಸ್ತ್ರಗಳು ಅಶುದ್ಧಿಯಿಂದಲೂ ನಜಸ್ಸಿನಿಂದಲೂ ಶುದ್ಧಿಯಾಗಬೇಕು ಔರಾತ್ ಪೂರ್ಣವಾಗಿ ಮರೆಮಾಚುವುದು ಕಡ್ಡಾಯವಾಗಿದೆ.ತವಾಫ್ ನಿರ್ವಹಿಸುವ ಮಧ್ಯದಲ್ಲಿ ಅಥವಾ ಉಳೂ ಮುರಿದು ಹೋದರೆ ವುಳೂ ಮಾಡಿ ನಿಂತ ಸ್ಥಳದಿಂದ ತವಾಫ್ ಮುಂದುವರಿಸಬೇಕು.ತವಾಫ್ ನಿರ್ವಹಿಸಿದ ನಂತರ

ತವಾಫ್ ನ ಎರಡು ರಕಾತ್ ನಮಾಜ್ ನಿರ್ವಹಿಸುದು ಪ್ರತ್ಯೇಕ ಸುನ್ನತ್ತಾಗಿದೆ. ಮಖಾಮು ಇಬ್ರಾಹೀಮ್ ನ ಭಾಗದಲ್ಲಿ ಇದನ್ನು ನಿರ್ವಹಿಸುದಾಗಿದೆ ಅತ್ಯಂತ ಉತ್ತಮವಾದುವುದು. ತವಾಫಿ ನ ಎರಡು ರಕಾತ್ ನಮಾಜ್ ನಾನು ನಿರ್ವಹಿಸುತ್ತೇನೆ ಎಂಬ ಉದ್ದೇಶದೊಂದಿಗೆ ಸಾಧಾರಣ ರೂಪದಲ್ಲಿರುವ ಎರಡು ರಕಾತ್ ನಮಾಜಾಗಿದೆ ಇದು. ಮೊದಲ ರಕಾತಲ್ಲಿ ಸೂರತುಳ್ ಕಾಫಿರೋನ್ ಹಾಗೂ ಎರಡನೆ ರಕಾತಲ್ಲಿ ಸೂರತುಲ್ ಇಖ್ಲಾಸ್ ಓದಲು ಪ್ರತ್ಯೇಕ ಸುನ್ನತ್ತಾಗಿದೆ.ನಮಾಜ್ ನಂತರ ಕಅಬ ನೋಡಿ ಎಲ್ಲಾ ಅವಶ್ಯಗಳಿಗೆ ಬೇಕಾಗಿ ದುಆ ನಿರ್ವಹಿಸಬೇಕು. ನಂತರ ಝಮ್ ಝಮ್ ನೀರು ಕುಡಿಯಲು ಸುನ್ನತ್ತಾಗಿದೆ.ಯಾವ ಆವಶ್ಯಕ್ಕೆ ಬೇಕಾಗಿಯೋ ಕುಡಿಯುವುದು ಅದಕ್ಕೆ ಉಲ್ಲದಾಗಿದೆ ಝಮ್ ಝಮ್ ಎಂಬ ಪ್ರವಾದಿ ವಚನ ಇರೋದಕ್ಕೆ ವಿವಿಧ ಆಗ್ರಹಗಳೆಲ್ಲ ಆ ಸಮಯದಲ್ಲಿ  ಸಂಕಲ್ಪಿಸಬೇಕು.


ಸಅಯ್


ನಂತರ ಉಮ್ರಾದ  ಸಅಯ್ ಎಂದು ಮಾಡುವುದು ಸೀದಾ ಮಸ್ಆಯಿಲಗೆ  ತಲುಪಿ ತವಾಫಿನಿಂದ ಸ ಅಯ್ ಮುಂದುವರಿಸಬೇಕು.ಸ್ವಫಾದ ಮೇಲೆ ಅಲ್ಪ ಏರಲು ಪುರುಷನಿಗೆ ಪ್ರತ್ಯೇಕ ಸುನ್ನತ್ತಾಗಿದೆ. ಸ್ವಫಾದಿಂದ ಮರ್ವಾಕೆ ತಲುಪಿದ ಕೂಡಲೇ ಸಅಯ್ ತಿರುಗಿ ಸ್ವಫಾಗೆ ತಲುಪಿದ ಕೂಡಲೇ ಎರಡು ಸಅಯ್ ಪೂರ್ತಿಯಾಗುತ್ತೆ. ಏಳನೇ ಸಅಯ್ ಮರ್ವಾದಲ್ಲಿ  ಅವಸಾನ ವಾದ ಕೂಡಲೇ ಸಅಯ್ ಎಂಬ ಕರ್ಮ ಮುಗಿಯುತ್ತೆ. ಸ ಅಯ್ ನಿರ್ವಹಿಸುವ ಸ್ಥಳದ ಮಧ್ಯಭಾಗವಾಗಿ ಪ್ರತ್ಯೇಕ ವಾಗಿ ಹೇಳಿರುವ ಎರಡು ಭಾಗಗಳೆಡೆಯಲ್ಲಿ ಅಲ್ಪ ವೀಗವಾಗಿ ಓಡುವುದು ಪುರುಷನಿಗೆ ಪ್ರತ್ಯೇಕವಾದ ಸುನ್ನತ್ತ್ತಿದೆ. ನಂತರ ಕಅಬಾಗೆ ತಿರುಗಿ ಸಾಧ್ಯವಾದಷ್ಟು ದುಆ ಮಾಡಿ.


ತಹಲ್ಲುಲ್


ನಂತರ ತಲೆ ಕೂದಲು ತೆಗೆಯುವುದು,ಪೂರ್ತಿಯಾಗಿ ಕೂದಲನ್ನು ನೀಗಿಸುವುದು ಪುರುಷನಿಗೆ ಉತ್ತಮವಾಗಿದೆ. ತಲೆಯಿಂದ ಮೂರು  ಕೂದಲನ್ನಾದರೂ ನೀಗಿಸಿದರೆ ಅದು ತಹಲ್ಲುಲ್ ಆಗುತ್ತೆ. ಸ್ರೀಗಳು ಕೂಡ ಮೂರು ಕೂದಲು ತೆಗೆದರೆ ಅದು ತಹಲ್ಲುಲ್ ಆಗುತ್ತೆ. ಹಾಗೆ ಇದೆಲ್ಲ ಆದ ಮೇಲೆ ಉಮ್ರಾ ಮುಗಿಯುತ್ತದೆ.ಬೆರೆಯವರಿಗೆ ಬೇಕಾಗಿ ಉಮ್ರಾ ಮಾಡುವಾಗ ಬೇರೆ ಯವರಿಗೆ ಬೇಕಾಗಿ ಉಮ್ರಾ ನಿರ್ವಹಿಸಬಹುದು. ಜೀವ ಇರುವವರಿಗೆ ಬೇಕಾಗಿ ಮಾಡುವುದಾದರೆ ಅವರು ಶಾರೀರಿಕವಾಗಿ ಅದು ನಿರ್ವಹಿಸಲು ಅಸಾಧ್ಯವಾದನ್ನು ಸಾಧ್ಯವಾಗುತ್ತೆ ಎಂಬ ನಿರೀಕ್ಷೆ ಇಲ್ಲದವನಾಗಿರಬೇಕು.ಅದರೊಂದಿಗೆ ಅವರಿಗೆ ನಿರ್ವಹಿಸಲು ಬೇಕಾಗಿ ನಿರ್ವಹಿಸಲು ಅವರ ಅನುಮತಿಯು ಬೇಕಾಗಿದೆ. ಮರಣ ಹೊಂದಿದವರಿಗೆ ಬೇಕಾಗಿ ನಿರ್ವಹಿಸುವಾಗ ಅನುಮತಿ ಅವಶ್ಯವಿಲ್ಲ.ಇಹರಾಮ್ ನಿರ್ವಹಿಸುವಾಗ ನಿಯ್ಯತ್ನಲ್ಲಿ ಯಾರಿಗೆ ಬೇಕಾಗಿಯೋ ನಿರ್ವಹಿಸುವುದು ಅವರಿಗೆ  ಬೇಕಾಗಿ  ಎಂದು ಪ್ರತ್ಯೇಕವಾಗಿ ಸಂಕಲ್ಪಿಸಬೇಕು.ಉದಾಹರಣೆಯಾಗಿ ತಾಯಿಗೆ ಬೇಕಾಗಿ ನಿರ್ವಹಿಸುವುದಾದರೆ ನವೈತುಲ್ ಉಮ್ರತಾ ಲಿ ಉಮ್ಮಿ ವ ಅಹ್ರಂತು ಬಿಹಾ ಲಿಲ್ಲಾಹಿ  ತಆಲ.(ನಾನು ನನ್ನ ತಾಯಿಗೆ ಬೇಕಾಗಿ ಉಮ್ರಾವನ್ನು ಸಂಕಲ್ಪಿಸಿ .ಆದ್ದರಿಂದ ನಾನು ಇಹರಾಮ್ ನಿರ್ವಹಿಸುತ್ತೇನೆ) ನಂತರವುಳ್ಳ ಕರ್ಮಗಳೆಲ್ಲವೂ ಮೇಲೆ ಹೇಳಿದ ಹಾಗೆ ಪೂರ್ತಿ ಮಾಡಬೇಕು.

ಪುನಃಉಮ್ರಾ ನಿರ್ವಹಿಸುವಾಗ: ಒಂದು ಉಮ್ರಾ ನಿರ್ವಹಿಸಿದ ನಂತರವೂ ಮಕ್ಕಾದಲ್ಲೇ ಕಳೆಯುವ ದಿವಸಗಳಲ್ಲಿ ಪುನಃಉಮ್ರಾ ನಿರ್ವಹಿಸುವುದಾದರೆ ಅತ್ಯಂತ ಸಮೀಪವಿರುವ ಹರಮ್ ಗಡಿಗೆ ತೆರಳಬೇಕಾಗಿದೆ. ಮಸ್ಜಿದು ಆಯಿಷ(ರ) ಆಗಿದೆ ಅತ್ಯಂತ ಸಮೀಪವಿರುವ ಗಡಿ. ಅಲ್ಲಿಗೆ ತೆರಳಿ ಆಗಲೇ ಹೇಳಿದ ಹಾಗೆ ಇಹರಾಮ್ ನಿರ್ವಹಿಸಿ ತಿರುಗಿ ಮಸ್ಜಿದುಲ್ ಹರಮ್ ಗೆ ತಲುಪಿ ಉಮ್ರಾ ನಿರ್ವಹಿಸುವುದಾಗಿದೆ.ಮೊದಲು ನಿರ್ವಹಿಸುವ ಉಮ್ರಾದಿಂದ ತಹಲ್ಲುಲ್ ಆಗಲು ಕೂದಲೂ ಪೂರ್ಣವಾಗಿ ನೀಗಿಸಿದ್ದರೆ ಎರಡನೇ ಉಮ್ರಾದ ಇಹರಾಮಿನಿಂದ ತಹಲ್ಲುಲ್ ಆಗುವ ಸಮಯದಲ್ಲಿ ಬ್ಲೇಡ್ ಅಥವಾ ಕತ್ತಿಯೋ ತಲೆಯ ಮೇಲೆ ಚಲಿಸಿದರೆ ಸಾಕು. ತಿರುಗಿ ಬರುವಾಗ ಅವಸಾನವಾಗಿ ಮಾಡುವುದಾಗಿದೆ ವಿದಾಯಿನ ತವಾಫ್. ಪರಿಶುದ್ಧ ಕ ಆಬಗೆ ಯಾತ್ರೆ ಹೇಳುವುದಾಗಿದೆ ಅದು. ಆಗಳೇ ಹೇಳಿದ ನಿಬಂಧನೆಗಳೆಲ್ಲವೂ ಅದಕ್ಕೆ ಕೂಡ ಸೇರಿದ್ದಾಗಿದೆ. ವಿದಾಯಿನ ತವಾಫ್ ನಿರ್ವಹಿಸಿದ ನಂತರ ಬೇಗನೇ ಯಾತ್ರೆಯ ತಯಾರಿ ನಡೆಸಿ ಅಲ್ಲಿಂದ ಮರಳಿ ಯಾತ್ರೆಯಾಗಬೇಕು.ಸ್ವೀಕಾರ್ಯವಾದ ಉಮ್ರಾ  ನಡೆಸಲು ದೋಷಗಳೆಲ್ಲವೂ ಮನ್ನಿಸಲ್ಪಟ್ಟು ಅಮ್ಮ ಹೆತ್ತ ಮಗುವಿನ ಹಾಗೆ ನಿಷ್ಕಳಂಕ ವಾದ ಹೃದಯದೊಂದಿಗೆ ಮರಳಿ ಹೋಗಲು ಅಲ್ಲಾಹನು ಅನುಗ್ರಹಿಸಲಿ.

 

Related Posts

Leave A Comment

Voting Poll

Get Newsletter