ಮಿಲ್ಕ್ ಬ್ಯಾಂಕ್ : ಒಂದು ಕರ್ಮಶಾಸ್ತ್ರೀಯ ವಿಶ್ಲೇಷಣೆ

Bilal Kuddupadavu

ಪ್ರಪಂಚದಲ್ಲಿ ಒಂದು ಮಗುವಿಗೆ ಅಲ್ಲಾಹನು ನೀಡಿದಂತಹ ಅಮೂಲ್ಯವಾದ ಅನುಗ್ರಹವಾಗಿದೆ ತಾಯಿಯ ಹಾಲು, ಆದರೆ ಈ ಅನುಗ್ರಹವನ್ನು ಎಲ್ಲರಿಗೂ ಪಡೆಯಲು ಸಾಧ್ಯವಾಗಿಲ್ಲ, ಕಾರಣ ಅಲ್ಲಾಹನ ಅನುಗ್ರಹ ಅವನು ಇಚ್ಛಿಸುವವನಿಗೆ ಮಾತ್ರ ನೀಡುತ್ತಾನೆ. ಹಲವು ರೀತಿಯಲ್ಲಿ ತಾಯಿಯ ಹಾಲು ಸಿಗದ ಮಕ್ಕಳ ಮುಂದೆ ಇಂದು ಬೆಳೆದು ಬರುತ್ತಿರುವ ಒಂದು ಪರಿಹಾರ ಮಾರ್ಗವಾಗಿದೆ ಮಿಲ್ಕ್ ಬ್ಯಾಂಕ್.
 ಮಗು ಜನಿಸಿದಾಗ ತಾಯಿ ತೀರಿ ಹೋಗೋದು,ಜನನ ದಿನದ ಮುಂಚೆಯೇ ತಾಯಿ ಮಗುವಿಗೆ ಜನ್ಮ ನೀಡುವುದು, ತಾಯಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇರುವುದು ಇಂತಹ ಹಲವಾರು ರೀತಿಯ ಕಾರಣಗಳಿಂದ ಮಕ್ಕಳು ಮಿಲ್ಕ್ ಬ್ಯಾಂಕ್ ಅನ್ನು ಆಶ್ರಯಿಸಬೇಕಾಗುತ್ತದೆ. ಭಾರತದಲ್ಲಿ ಇದಕ್ಕೆ ಅಷ್ಟೇನು ಪ್ರಚಾರ ಸಿಗದಿದ್ದರೂ ಯುರೋಪಿನಲ್ಲಿ 20ನೆಯ ಶತಮಾನದಿಂದಲೇ ಮಿಲ್ಕ್ ಬ್ಯಾಂಕ್ ಚಾಲನೆಯಲ್ಲಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿ ಅಮೃತಧಾರೆ ಎಂಬ ಹೆಸರಿನೊಂದಿಗೆ ಮಿಲ್ಕ್ ಬ್ಯಾಂಕ್ ಚಾಲನೆಯಲ್ಲಿದೆ. 

ಮಿಲ್ಕ್  ಬ್ಯಾಂಕಿನ ಕರ್ಮ ಶಾಸ್ತ್ರ


ಕರ್ಮ ಶಾಸ್ತ್ರದಲ್ಲಿ ನಾಲ್ಕು ಮದ್ಹಬ್‌ಗಳ ಪ್ರಕಾರ  ಎರಡು ವರ್ಷದ ಒಳಗಿರುವ ಒಂದು ಮಗುವಿಗೆ 5 ಸಂದರ್ಭ ತಾಯಿಯ ಹಾಲು ಲಭಿಸಿದರೆ ಆ ಮಹಿಳೆಯು ಆ ಮಗುವಿಗೆ ರಝಅತ್  ಸಂಬಂಧದ ಮುಖಾಂತರ ತಾಯಿಯಾಗಿ ಸ್ಥಿರವಾಗುತ್ತದೆ. ಮಗು ತಾಯಿಯ ಹಾಲನ್ನು ನೇರವಾಗಿ ಅಥವಾ ಪಾತ್ರದಲ್ಲಿ ಕುಡಿದರು ಅಥವಾ ನೀರು ಹಾಗೂ ಪ್ರಿಸರ್ವೇಟಿವ್ಸ್ ಮಿಶ್ರಣ ಮಾಡಿ ಕುಡಿದರೂ ರಝಅತ್ ಸಂಬಂಧ ಸ್ಥಿರವಾಗುತ್ತದೆ. 
ಹಾಲುಣಿಸುವಿಕೆ ಮುಖಾಂತರ ಒಬ್ಬ ಮಹಿಳೆ ತಾಯಿಯಾದರೆ ಜನ್ಮ ನೀಡಿದ ತಾಯಿಯ  ವಿಧಿಗಳು ಅನ್ವಯವಾಗುತ್ತದೆ. ಮದುವೆ ವಿಷಯದಲ್ಲಿ ಜನ್ಮ ನೀಡಿದಂತಹ ತಾಯಿಯನ್ನು ಹಾಗೂ ಅವಳ ರಕ್ತ ಸಂಬಂಧಿಗಳನ್ನು  ವಿವಾಹವಾಗುವುದು ನಿಷಿದ್ಧವಾದ  ರೀತಿಯಲ್ಲಿಯೇ ಹಾಲುಣಿಸುವಿಕೆ ಮುಖಾಂತರ ಸ್ಥಿರವಾದ ತಾಯಿಯಲ್ಲಿಯೂ ಅನ್ವಯವಾಗುತ್ತದೆ. ತದನಂತರ ಈ ತಾಯಿಯ ಮಕ್ಕಳು ಈ ಮಗುವಿನ ರಝುಅತ್ ಸಂಬಂಧ ಮುಖಾಂತರವಾದ ಸಹೋದರರಾಗುತ್ತಾರೆ. ಗಂಡನು ಮಗುವಿನ ತಂದೆಯಾಗಿ ಮಾರ್ಪಡುತ್ತಾನೆ.

ಮಾತ್ರವಲ್ಲ ಈ ತಾಯಿಯಿಂದ ಹಾಲು ಕುಡಿದ ಉಳಿದೆಲ್ಲಾ ಮಕ್ಕಳು ಈ ಮಗುವಿನ ರಝಅತ್ ಸಂಬಂಧದ ಮುಖಾಂತರವಾದ ಸಹೋದರರಾಗಿ ಮಾರ್ಪಡುತ್ತಾರೆ.
ಅಂದರೆ ಇವರೆಲ್ಲರಿಗೂ ಈ ಮಗುವಿನ ಜೊತೆ, ನಿಕಾಹ್ ಸಂಬಂಧ ನಿಷಿದ್ಧವಾಗಿರುತ್ತದೆ.

ಜನ್ಮ ಸಂಬಂಧದ ಮುಖಾಂತರ ನಿಕಾಹ್ ನಿಷಿದ್ಧ ಆದವರಿಗೆಲ್ಲ ರಝಾಅತ್ ಸಂಬಂಧ ಮುಖಾಂತರವೂ ನಿಕಾಹ್ ಹರಾಮ್ ಆಗುತ್ತದೆ. (ಬುಖಾರಿ)

ನಿಮಗೆ ಹಾಲುಣಿಸಿದ ತಾಯಂದಿರು ಹಾಗೂ ಹಾಲುನಿಸುವ ಮೂಲಕ ಉಂಟಾದ ಸಹೋದರರು ನಿಮಗೆ ಮಹ್ರಮ್‌ಗಳಾಗಿದ್ದಾರೆ ಎಂದು ಕುರ್ ಆನ್ ಸ್ಪಷ್ಟವಾಗಿ ವಿವರಿಸುತ್ತದೆ ( ಸೂರ ನಿಸಾಅ 23)

ಒಂದು ತಾಯಿ ಒಂದು ಮಗುವಿಗೆ ಜನ್ಮ ನೀಡುವಾಗ ಆ ಮಗುವಿನ ಶರೀರದ ಭಾಗಗಳು ರೂಪುಗೊಂಡದ್ದು ಹಾಗೂ ಬೆಳೆದದ್ದು ತಾಯಿಯ ಶರೀರದ ಭಾಗವಾದ ರೀತಿ, ಒಂದು ತಾಯಿ ಒಂದು ಮಗುವಿಗೆ ಐದು ಸಂದರ್ಭದಲ್ಲಿ ಹಾಲುನಿಸುವಾಗ ಹಾಲಿನ ಮುಖಾಂತರ ರೂಪಗೊಳ್ಳುವ ಹಾಗೂ ಬೆಳೆಯುವ ಮಗುವಿನ ಶರೀರದ ಭಾಗಗಳು ಮಹಿಳೆಯ ಶರೀರದ ಭಾಗವಾಗುವಾಗ, ಆ ಮಹಿಳೆ ಜನ್ಮ ನೀಡಿದಂತಹ ತಾಯಿಯ ರೀತಿ ಅವಳನ್ನು ಹಾಗೂ ಅವಳ ಮಕ್ಕಳನ್ನು ನಿಕಾಹ್ ಮಾಡಲು ನಿಷಿದ್ಧವಾಗುತ್ತದೆ

ಮಿಲ್ಕ್ ಬ್ಯಾಂಕಿನಿಂದ ಹಾಲು ಖರೀದಿಸಿ ಮಗುವಿಗೆ ನೀಡುವಾಗ ಮಾತೃ - ಪಿತೃ  ಸಹೋದರ ಸಂಬಂಧ ಉಂಟಾಗುವುದರಿಂದ ಈ ಕೆಳಗಿನ ಕಾರ್ಯಗಳನ್ನು ಗಮನಿಸಬೇಕಾಗುತ್ತದೆ.

1) ಮಿಲ್ಕ್ ಬ್ಯಾಂಕಿನಿಂದ ಮಗುವಿಗೆ ಹಾಲು ಖರೀದಿಸುವಾಗ ಅದು ಯಾರದ್ದು ಎಂದು ಖಚಿತಪಡಿಸಿಕೊಳ್ಳಬೇಕು
2) ಆ ಮಹಿಳೆ ಮಿಲ್ಕ್ ಬ್ಯಾಂಕ್ ಗೆ ನೀಡಿದ ಹಾಲನ್ನು ಯಾರಿಗೆಲ್ಲ ವಿತರಿಸಲಾಗಿದೆ ಎಂಬ ದತ್ತಾಂಶವನ್ನು ಸಂಗ್ರಹಿಸಿಕೊಳ್ಳಬೇಕು
3) ಆ ಮಹಿಳೆಗೆ ಸಂಬಂದ ಹೊಂದಿರುವಂತಹ ಅವಳ ಗಂಡ, ಮಕ್ಕಳ ಹಾಗೂ ಸಹೋದರರ ಬಗ್ಗೆ ತಿಳಿದಿರಬೇಕು.
4) ಭವಿಷ್ಯದಲ್ಲಿ ಯಾರಿಗಾದರೂ ಆ ಮಹಿಳೆಯ ಹಾಲನ್ನು ಮಿಲ್ಕ್ ಬ್ಯಾಂಕಿನಿಂದ ವಿತರಣೆ ಮಾಡಲು ಸಾಧ್ಯತೆ ಇದ್ದರೆ ಅವರ ವಿವರವನ್ನು ಸಮಯಕ್ಕೆ ಸರಿಯಾಗಿ ದಾಖಲಿಸಿರಬೇಕು
5) ಆ ಮಹಿಳೆ ಬೇರೆ ಯಾವುದಾದರೂ ಮಿಲ್ಕ್ ಬ್ಯಾಂಕ್ ಗೆ ಹಾಲನ್ನು  ವಿತರಿಸಿದರೆ ಅದರ ವಿವರವನ್ನು ಸಂಗ್ರಹಿಸಬೇಕು.

ಈ ರೀತಿ ಮಾಡದಿದ್ದರೆ ಭವಿಷ್ಯದಲ್ಲಿ ಆ ಮಗುವಿನ ಅಥವಾ ಆ ಮಗುವಿನ ಮಕ್ಕಳ ವಿವಾಹದ ಸಂದರ್ಭ ಹಾಲುನಿಸಿದ ಸಂಬಂಧದ ಮುಖಾಂತರ ಸ್ಥಿರವಾದ ತಾಯಿಯು ಅಥವಾ ಅವಳ ಸಹೋದರಿಯರನ್ನು ತಿಳಿಯದೆ ವಿವಾಹವಾಗುವ ಸಾಧ್ಯತೆ ಇದೆ. ಆ ರೀತಿಯ ಯಾವುದೇ ಸಂಬಂಧ ಹೊಂದಿಲ್ಲವೆಂದು ಮೊದಲೇ ಖಚಿತಪಡಿಸುವುದು ಕಡ್ಡಾಯವಾಗಿದೆ

ಈ ವಿಷಯದ ಗಾಂಭೀರ್ಯತೆ ವ್ಯಕ್ತಪಡಿಸುವ ಒಂದು ಹದೀಸನ್ನು ಉಕ್ಬಾ (ರ) ವರದಿ ಮಾಡಿದ್ದಾರೆ ಉಕ್ಬಾ (ರ) ಹೇಳುತ್ತಾರೆ: ನಾನು ನನ್ನ ಮದುವೆ ನಡೆದ ಸಂದರ್ಭದಲ್ಲಿ  ಒಬ್ಬಳು  ಮಹಿಳೆ ಬಂದು "ನಾನು ನೀಮ್ಮಿಬ್ಬರಿಗೂ ಹಾಲುನಿಸಿದ್ದೇನೆ" ಎಂದು ಹೇಳುತ್ತಾಳೆ, ಕೂಡಲೆ ನಾನು ಪ್ರವಾದಿ (ಸ) ಬಳಿ  ಹೋಗಿ ಹೇಳಿದೆ "ಪ್ರವಾದಿಯರೇ ನಾನೊಬ್ಬರ ಮಗಳನ್ನು ನಿಕಾಹ್ ಮಾಡಿದಾಗ ಒಬ್ಬಳು  ಮಹಿಳೆ ಬಂದು ನಾನು ನಿಮ್ಮಿಬ್ಬರಿಗೂ ಹಾಲುಣಿಸಿದ್ದೇನೆ ಎಂದು ಸುಳ್ಳು ಹೇಳಿದರು" ಅದು ಕೇಳಿದಾಗಲೇ ಪ್ರವಾದಿ (ಸ) ತಿರುಗಿ ನಿಂತರು. ಆಗ ನಾನು ಪ್ರವಾದಿಯ ಮುಂದೆ ಹೋಗಿ ಕೇಳಿದೆ ಅವಳು ಸುಳ್ಳು ಹೇಳುತ್ತಿದ್ದಾಳೆ. ಆ ಸಂದರ್ಭ ಪ್ರವಾದಿ (ಸ) ಹೇಳುತ್ತಾರೆ: ಅದು ಹೇಗೆ ನಿಮಗೆ ಇಬ್ಬರಿಗೂ ಹಾಲುಣಿಸಿದ್ದೇನೆ ಎಂದು ಆ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ ಆದ್ದರಿಂದ ನೀನು ಅವಳನ್ನು  (ಹೆಂಡತಿಯನ್ನು) ವಿಚ್ಛೇದಿಸು (ಸ್ವಹೀಹುಲ್ ಬುಖಾರಿ)

ಆಯಿಶಾ (ರ) ಹಾಲು ಸಂಬಂಧದ ಮುಖಾಂತರ ಪಿತೃ ಸಹೋದರನಾದ ಮುಫ್ಲಿಹಿನಿಗೆ ಮನೆಗೆ ಪ್ರವೇಶವನ್ನು ತಡೆದಾಗ ಅವರು ಮಹ್ರಮ್ ಆಗಿದ್ದರಿಂದ ಅವರಿಗೆ ಪ್ರವಾದಿ ಪ್ರವೇಶಕ್ಕೆ ಅನುಮತಿ ನೀಡಳು ಕಲ್ಪಿಸುತ್ತಾರೆ (ಸ್ವಹೀಹುಲ್ ಬುಖಾರಿ)
ಆದ್ದರಿಂದ ಮೇಲೆ ಸೂಚಿಸಿದಂತಹ ನಿಬಂಧನೆಗಳನ್ನು ಸ್ಪಷ್ಟವಾಗಿ ಪಾಲಿಸಲು ಸುಲಭವಲ್ಲದ ವಿಷಯವಾಗಿದ್ದರಿಂದ ಮಿಲ್ಕ್ ಬ್ಯಾಂಕಿನಿಂದ ಹಾಲು ಖರೀದಿಸಿ ಮಕ್ಕಳಿಗೆ ನೀಡುವುದು ಪ್ರೋತ್ಸಾಹಿಸಲ್ಪಟ್ಟದಲ್ಲ. ಇಸ್ಲಾಮಿಕ್ ರಾಜ್ಯಗಳು ಮಿಲ್ಕ್ ಬ್ಯಾಂಕ್ ಜಾರಿಗೆಗೊಳಿಸದಿರಲು ಕಾರಣವೂ ಇದಾಗಿದೆ.

ಮಿಲ್ಕ್ ಬ್ಯಾಂಕ್ ವಿಧಾನ  ಜಾರಿಗೆ ಬಂದಾಗ ಈ ವಿಷಯವನ್ನು ಚರ್ಚೆ ಮಾಡಿದ  ಪಂಡಿತ ಸಭೆಗಳ ಒಮ್ಮತವಾದ ಅಭಿಪ್ರಾಯದ ಪ್ರಕಾರ ಮಿಲ್ಕ್ ಬ್ಯಾಂಕ್ ಅನುವದನೀಯವಲ್ಲ ಎಂದಾಗಿದೆ. ಕಾರಣ ಈ ಮೇಲೆ ಸೂಚಿಸಿದಂತೆ  ಜನ್ಮ ನೀಡಿದ ತಾಯಿ ಮಹ್ರಮಾದ ರೀತಿಯಲ್ಲಿ ಹಾಲುಣಿಸಿದ ತಾಯಿಯು  ಮಹ್ರಮಾಗುತ್ತಾರೆ ಎಂದು ಹದೀಸಿನಿಂದ ವ್ಯಕ್ತವಾಗುತ್ತದೆ. (ಬುಖಾರಿ, ಮುಸ್ಲಿಂ) ಈ ವಿಷಯ ಮುಸ್ಲಿಂ ಲೋಕದ ಇಜ್ಮಾ ಕೂಡ ಆಗಿದೆ  (ಶರ್ಹುಲ್ ಮುಹಝಬ್).
ಆದ್ದರಿಂದ ಈ ಎರಡು ಸಂಬಂಧಗಳನ್ನು ಬಹಳ ಗೌರವದಿಂದ ಕಾಣಬೇಕು. ಮಿಲ್ಕ್ ಬ್ಯಾಂಕ್ ವಿಧಾನ ಈ ವಿಷಯವನ್ನು ಗೊಂದಲಗಳಿಗೆ ಹಾಗೂ ಹಾಲುಣಿಸುವಿಕೆ ಮುಖಾಂತರ ಉಂಟಾದ ಸಂಬಂಧವನ್ನು ಕೆಲವೊಮ್ಮೆ ಸ್ಪಷ್ಟವಾಗಿ ತಿಳಿಯದೆಯೋ, ಆ ಸಂಬಂಧವನ್ನು ಅರಿಯದೆಯೋ, ಆ ಸಂಬಂಧದ ಅನುಸಾರವಾಗಿ ನಿಶಿದ್ಧವಾದ ವಿಷಯಗಳಲ್ಲಿ ಜಾಗೃತ ಪಾಲಿಸಲು ಸಾಧ್ಯವಾಗದ ಸನ್ನಿವೇಶ ಎದುರಾಗಬಹುದು.

ಮುಂದೆ ಯಾವುದಾದರೂ ಮಗುವಿಗೆ ಹಾಲು ಕೂಡಲೇ ಬೇಕೆಂಬ ಅನಿವಾರ್ಯ ಸಂದರ್ಭ ಉಂಟಾದರೆ, ಹಾಲು ಲಭಿಸಲು ಯಾವ ಮಾರ್ಗವೂ ಇಲ್ಲ, ಅದು ಲಭಿಸದಿದ್ದರೆ ಮಗುವಿನ ಜೀವಕ್ಕೆ ಅಪಾಯ ಉಂಟಾಗಬಹುದು, ತಾಯಿಯ ಹಾಲಲ್ಲದೆ  ಬೇರೆಯಾವುದರಿಂದಲೂ  ಮಗುವಿನ ಜೀವ ಉಳಿಸಲು ಸಾಧ್ಯವಿಲ್ಲ ಎಂಬ ಅನಿವಾರ್ಯ ಪರಿಸ್ಥಿತಿ ಬಂದರೆ ಇಂತಹ ವಿರಳವಾದ ಸಂದರ್ಭದಲ್ಲಿ ಜೀವವನ್ನು ಉಳಿಸಲು ಹರಾಮ್ ಆದದ್ದು ತಿನ್ನಲು ಅನಿವಾರ್ಯವಾದ ರೀತಿಯಲ್ಲಿ ಇಂತಹ ಸನ್ನಿವೇಶದಲ್ಲಿ  ಮಿಲ್ಕ್ ಬ್ಯಾಂಕನ್ನು ಆಶ್ರಯಿಸಬಹುದಾಗಿದೆ.

 ಇಂದಿನ ಸಾಮಾಜಿಕ ಸುವ್ಯವಸ್ಥೆಯಲ್ಲಿ ಮಕ್ಕಳಿಗೆ ಹಾಲುನಿಸಲು ಇಂತಹ ಒಂದು ಮಿಲ್ಕ್ ಬ್ಯಾಂಕಿನ ಅವಶ್ಯಕತೆ ಇಲ್ಲ, ಇನ್ನು  ಅದನ್ನು ಜಾರಿಗೊಳಿಸಲು ಶರಈಯ್ಯಾದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಶ್ರಮಿಸಿದರೂ ಮಿಲ್ಕ್ ಬ್ಯಾಂಕಿನಿಂದ ಹಾಲನ್ನು  ಖರೀದಿಸಿದವರು ಹಾಲನಿಸುವಿಕೆ ಸಂಬಂಧದ ಪ್ರಾಮುಖ್ಯತೆಯನ್ನು ಅದೇ ರೀತಿ ಅರ್ಥಮಾಡಿ ಪ್ರಾಯೋಗಿಕವಾಗಿ ಜಾರಿಗೆ ತರುವ ವಿಷಯದಲ್ಲಿ ಯಾವುದೇ ಖಚಿತತೆ ಇಲ್ಲದೇ ಇರುವುದರಿಂದ ಈ ಒಂದು ಆಧುನಿಕ ಕಾಲದಲ್ಲಿ ಮಿಲ್ಕ್ ಬ್ಯಾಂಕ್ ವ್ಯವಸ್ಥೆ ನಾಲ್ಕು ಮದ್ಹಬ್‌ಗಳ ಪ್ರಕಾರವೂ ಅನುವದನೀಯವಲ್ಲ,  ಎಂದಾಗಿದೆ ಸಮಕಾಲಿಕ ಪಂಡಿತರ ಅಭಿಪ್ರಾಯ.

Related Posts

Leave A Comment

Voting Poll

Get Newsletter