ಗಾಜಾದಿಂದ ಇಸ್ಲಾಂದತ್ತ:  ಕುರ್‌ಆನ್‌ನ ಮಾನವ ಪರಿವರ್ತನಾ ಶಕ್ತಿಯ ಅನ್ವೇಷಣೆ
Inaz Kalanja

ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಮಾನವೀಯ ಸಂಕಷ್ಟದ ಮಧ್ಯೆ ಒಂದು ವಿಶೇಷವಾದ ಬೆಳಕು ಎದ್ದು ಕಾಣಿಸುತ್ತದೆ. ಅದು ಅಲ್ಲಿನ ಜನರ ದೃಢವಾದ ನಂಬಿಕೆ ಮತ್ತು ಧೈರ್ಯ. ಹಲವು ವರ್ಷಗಳಿಂದ ಗಾಜಾ ಪ್ರದೇಶವು ನಿರ್ಬಂಧಗಳು, ಸಂಘರ್ಷಗಳು ಮತ್ತು ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇತ್ತೀಚಿನ ಸಂಘರ್ಷಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ನಿರಪರಾಧಿಗಳು ಅಪಾರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯು ಗಾಜಾದ ಜನರು ತಮ್ಮ ಭರವಸೆ ಮತ್ತು ಮಾನವೀಯ ಮೌಲ್ಯಗಳು ಕಳೆದುಕೊಳ್ಳದೆ ಬದುಕುತ್ತಿದ್ದಾರೆ. ಪ್ರತಿಯೊಂದು ಸವಾಲನ್ನು ಅವರು ಅಪಾರ ಧೈರ್ಯದಿಂದ ಎದುರಿಸುತ್ತಿದ್ದಾರೆ. ಮತ್ತೆ ಎದ್ದು ನಿಲ್ಲುವ ಶಕ್ತಿ ಮತ್ತು ಧೈರ್ಯ ಜಗತ್ತಿನ ಜನರನ್ನು ಆಶ್ಚರ್ಯಗೊಳಿಸುತ್ತಿದೆ. ಅವರ ಈ ಬಲವಾದ ಮನೋಭಾವಕ್ಕೆ ಪ್ರಮುಖ ಕಾರಣ ಅವರ ನಂಬಿಕೆ. ನರಮೇದದ ಈ ಲೋಕದ ನಂತರ ಶಾಂತಿ ಮತ್ತು ನ್ಯಾಯದ ಜೀವನವಿರುವ ಪರಲೋಕದ ಮೇಲೆ ಅವರಿಗೆ ಗಾಢವಾದ ವಿಶ್ವಾಸವಿದೆ.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಗಾಜಾದ ಜನರು ಇಸ್ಲಾಂ ಧರ್ಮದ ಅನೇಕ ಮೌಲ್ಯಗಳನ್ನು ತಮ್ಮ ಜೀವನದ ಮೂಲಕ ಪ್ರದರ್ಶಿಸುತ್ತಿದ್ದಾರೆ. ಅವರ ಬದುಕಿನಲ್ಲಿ ತಾಳ್ಮೆ, ಕೃತಜ್ಞತೆ ಮತ್ತು ಅಲ್ಲಾಹನ ಮೇಲಿನ ಭರವಸೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಪ್ರವಾದಿ ಮಹಮ್ಮದ್ ಮುಸ್ತಫಾ (ಸ) ಹೇಳುವಂತೆ: "ಮುನಿನ ಜೀವನ ಅದ್ಭುತವಾಗಿದೆ; ಅವನಿಗೆ ಒಳ್ಳೆಯದಾದರೆ ಅಲ್ಲಾಹನಿಗೆ ಧನ್ಯವಾದವನ್ನು ಆಶಿಸುತ್ತಾನೆ, ಕಷ್ಟ ಬಂದರೆ ತಾಳ್ಮೆಯನ್ನು ತೋರಿಸುತ್ತಾನೆ. ಎರಡು ಅವನಿಗೆ ಒಳ್ಳೆಯದೇ. ಈ ನಂಬಿಕೆಯ ಪ್ರತಿಫಲವನ್ನು ಗಾಜಾದ ಜನರು ಪ್ರಾರ್ಥನೆಗಳಲ್ಲಿ, ಆರಾಧನೆಗಳಲ್ಲಿ ಮತ್ತು ಅಲ್ಲಾಹನ ಮೇಲಿನ ದೃಢ ವಿಶ್ವಾಸದಲ್ಲಿ ಕಾಣಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಅವರ ಧೈರ್ಯ, ಸಹನೆ ಅನೇಕ ಜನರ ಮನಸ್ಸನ್ನು ಸ್ಪರ್ಶಿಸಿದೆ. ಇದು ಅವರ ದೈಹಿಕ ಮತ್ತು ಮಾನಸಿಕ ಶಕ್ತಿಯ ಜೊತೆಗೆ ಆಳವಾದ ಆಧ್ಯಾತ್ಮಿಕ ಬಲವನ್ನು ಪ್ರತಿಬಿಂಬಿಸುತ್ತದೆ.

ಗಾಜಾದಲ್ಲಿ ಬದುಕು, ನ್ಯಾಯ ಮತ್ತು ಭವಿಷ್ಯದ ಆಶಯಕ್ಕಾಗಿ ನಡೆಯುತ್ತಿರುವ ಹೋರಾಟವು ಜಗತ್ತಿನಾದ್ಯಂತ ಸತ್ಯ ಮತ್ತು ನ್ಯಾಯಕ್ಕಾಗಿ ನಡೆದ ಅನೇಕ ಹೋರಾಟಗಳನ್ನು ನೆನಪಿಸುತ್ತದೆ. ಇತಿಹಾಸಕಾರರು ಮತ್ತು ಪಂಡಿತರು ಹೇಳುವಂತೆ ಸತ್ಯದ ಹೋರಾಟ ಯಾವಾಗಲೂ ಸುಳ್ಳಿನ ಮೇಲೆ ಜಯ ಸಾಧಿಸುತ್ತದೆ. ಇದು ಕುರ್ಆನಿನ "ಖಂಡಿತವಾಗಿಯೂ ಕಷ್ಟದೊಂದಿಗೆ ಸುಖವಿದೆ'' ಎಂಬ ವಚನವನ್ನು ನೆನಪಿಸುತ್ತದೆ. ಗಜಾದ ಜನರ ಜೀವನದಲ್ಲಿ ಕುರಾನ್ಗ ವಿಶೇಷ ಸ್ಥಾನವಿದೆ. ಗಾಜಾದಲ್ಲಿ ಅನೇಕ ಕುಟುಂಬಗಳು ಕುರಾನ್ ಕಂಠಪಾಠಕ್ಕೆ ಮಕ್ಕಳಿಗೆ ಅಧ್ಯಾಯನ ಮಾಡಲು ಮತ್ತು ಪ್ರೋತ್ಸಾಹ ನೀಡುತ್ತಿದೆ. ಅವರ ನಂಬಿಕೆಯ ಪ್ರಕಾರ ಕುರಾನ್ ವ್ಯಕ್ತಿಯ ಜೀವನದಲ್ಲಿ ಧೈರ್ಯ, ತಾಳ್ಮೆ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ವರದಿಗಳ ಪ್ರಕಾರ 2006 ರಿಂದ ಗಾಜಾದ ಇಸ್ಲಾಮಿಕ್ ವಕ್ಸ್ ಸುಮಾರು 40 ಸಾವಿರಕ್ಕೂ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ. ಪ್ರೊಫೆಸರ್ ಜಕಾರಿಯ ಅಲ್ ಜಮಲಿ ಹೇಳುವಂತೆ ಕುರಾನ್ ಕಷ್ಟದ ಸಂದರ್ಭಗಳಲ್ಲಿ ಮನಸ್ಸಿಗೆ ಸಮಾಧಾನ ನೀಡುವುದರ ಜೊತೆಗೆ ತಾಳ್ಮೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ, ಈ ನಂಬಿಕೆಯೇ ಅನೇಕ ಜನರಿಗೆ ಸಂಕಷ್ಟದ ಸಮಯದಲ್ಲಿ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತದೆ.

ಕುರಾನ್ ನ ಮೇಲಿರುವ ಅವರ ಭರವಸೆಯು ಅವರಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲಾಹನು ಕಷ್ಟಗಳ ನಡುವೆ ಸುಖವನ್ನು ನೀಡುತ್ತಾನೆ ಎಂಬ ಅರ್ಥ ನೀಡುವ ""wny Jwall 24 !” ಖಂಡಿತವಾಗಿಯೂ ಕಷ್ಟದೊಂದಿಗೆ ಸಮಾಧಾನವಿದೆ ಎಂಬುದರಿಗೆ ಸೂಚಿಸುತ್ತದೆ. ಅವರ ನಂಬಿಕೆ ಮತ್ತು ಆರಾಧನೆ ಅವರಿಗೆ ಪರಲೋಕದ ಪ್ರತಿಫಲದ ಭರವಸೆಯನ್ನು ನೀಡುತ್ತದೆ. ಕುರ್ಆನಿನಲ್ಲಿ ನಂಬಿಕೆ ಇಟ್ಟು ಕರ್ಮಗಳನ್ನು ಮಾಡುವವರಿಗೆ ಸ್ವರ್ಗವಿದೆ, ಅದರ ಕೆಳಗೆ ನದಿಗಳು ಕೂಡ ಹರಿಯುತ್ತವೆ ಎಂದು ಹೇಳಲಾಗಿದೆ.

ಗಾಜಾದ ಜನರ ದೃಢವಾದ ನಂಬಿಕೆ ಪಾಶ್ಚಾತ್ಯ ರಾಷ್ಟ್ರಗಳ ಜನರಲ್ಲಿ ಕುತೂಹಲವನ್ನು ಮೂಡಿಸಿದೆ. ಅವರ ಆ ಧೈರ್ಯ ಮತ್ತು ಸ್ಥರ್ಯದ ಹಿಂದಿರುವ ಶಕ್ತಿಯ ಮೂಲವನ್ನು ಅರಿಯುವ ಉದ್ದೇಶದಿಂದ ಹಲವರು ಕುರ್ ಆನ್ ಅಧ್ಯಾಯನವನ್ನು ಆರಂಭಿಸಿದ್ದಾರೆ. ಈಗ ಜನರು ಪ್ಯಾಲೆಸ್ಟೀನಿಯನ್ ಮಸ್ಲಿಮರ ಉದಾತ ಗುಣಗಳನ್ನು ಕಂಡು ಇಸ್ಲಾಂ ಧರ್ಮದ ಬಗ್ಗೆ ತಿಳಿಯಲು ಆಸಕ್ತಿ ತೋರಿಸುತ್ತಿದ್ದಾರೆ. ಮೇಘನ್ ರೈಸ್ ಮತ್ತು ನೆಫೆರ್ಟರಿ ಮೂನ್ ಮುಂತಾದವರು ಗಾಜದ ಜನರ ನಂಬಿಕೆ ಮತ್ತು ಜೀವನ ಮೌಲ್ಯಗಳಿಂದ ಪ್ರೇರಿತರಾಗಿ ಇಸ್ಲಾಂ ಧರ್ಮದ ಕಡೆಗೆ ಆಕರ್ಷಿತರಾದವರಾಗಿ ಎಂದು ಉಲ್ಲೇಖಿಸಲ್ಪಡುತ್ತಾರೆ. ಕುರಾನ್ ಓದುವುದರ ಮೂಲಕ ಹೊಸ ಅರಿಯು ಮತ್ತು ಮನಶಾಂತಿ ಪಡೆದಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.

ಇತ್ತೀಚಿಗೆ ಇಸ್ಲಾಂ ಸ್ವೀಕರಿಸಿದ ಕ್ಲರ್ಕ್ ಜೋನ್ಸ್ ಮತ್ತು ಜಮ ರೊಸಾರಿಯೂ ಕೂಡ ಕುರಾನ್ ನಿಂದ ಆಧ್ಯಾತ್ಮಿಕ ತೃಪ್ತಿ ಕಂಡಿದ್ದಾರೆ ಅವರು ಕುರಾನ್ ನಿಂದ ಮನಶಾಂತಿ ಮತ್ತು ಜೀವನದ ಉದ್ದೇಶವನ್ನು ಕಂಡುಕೊಂಡಿದ್ದಾರೆ. ಇದು" ಖಂಡಿತವಾಗಿಯೂ ಅಲ್ಲಾಹನ ಸ್ಮರಣೆಯಲ್ಲಿ ಹೃದಯಗಳು ಶಾಂತಿ ಪಡೆಯುತ್ತವೆ" ಎಂಬ ವಚನವನ್ನು ನೆನಪಿಸುತ್ತದೆ. ಅವರ ಕಥೆಗಳು ಕೇವಲ ಸಹಾನುಭೂತಿಯಲ್ಲ ಆಳವಾದ ಆಧುನಿಕ ಬದಲಾವಣೆಯನ್ನು ತೋರಿಸುತ್ತವೆ.

ಕೆಲವರು ಈ ಮತಾಂತರಗಳ ನಿಜಾಸ್ತಿತ್ವವನ್ನು ಪ್ರಶ್ನಿಸಬಹುದು. ಆದರೆ ಕುರಾನ್ ನಂಬಿಕೆ, ಒಳ್ಳೆಯ ಉದ್ದೇಶ ಮತ್ತು ಅಲ್ಲಾಹನ

ಮುಂದೆ ವೈಯಕ್ತಿಕ ಜವಾಬ್ದಾರಿಯನ್ನು ಮಹತ್ವದಿಂದ ಹೇಳುತ್ತದೆ. ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡುವವರು ಅತ್ಯುತ್ತಮ ಸೃಷ್ಟಿಗಳು ಎಂಬ ಕುರಾನ್ ವಚನವು ನಿಜವಾದ ನಂಬಿಕೆ ಮಹತ್ವವನ್ನು ತಿಳಿಸುತ್ತದತಿಳಿಸುತ್ತಿದೆ. ಕುರಾನ್ ನ ಪ್ರಭಾವವು ಕೇವಲ ವೈಯಕ್ತಿಕ ಬದಲಾವಣೆಗೆ ಸೀಮಿತವಲ್ಲ. ಅದು ಸಮಾಜದ ನಡುವಳಿಕೆ ಮತ್ತು ಚಿಂತನೆಗಳ ಮೇಲು ಪರಿಣಾಮ ಬೀರುತ್ತದೆ. ನ್ಯಾಯ, ನೈತಿಕತೆ ಮತ್ತು ವೈಯಕ್ತಿಕ ಜವಾಬ್ದಾರಿಯನ್ನು ಕಲಿಸುತ್ತದೆ. ನೆಫೆರ್ಟರಿ ಮೂನ್ ಹೇಳುವಂತೆ, ಕುರಾನ್ ಜೀವನದಲ್ಲಿ ಶಾಂತಿ ಮತ್ತು ಸತ್ಯದ ಮಾರ್ಗವನ್ನು ತೋರಿಸುತ್ತದೆ. ಕುರಾನ್ ನಲ್ಲಿ "ಇದು ಯಾವುದೇ ಸಂಶವಿಲ್ಲದ ಪುಸ್ತಕ, ದೇವ ಭಯ ಇರುವವರಿಗೆ ಮಾರ್ಗದರ್ಶನವಾಗಿದೆ" ಎಂದು ಹೇಳಲಾಗಿದೆ.

ಆರಂಭಿಕ ಮುಸಲಿಮರಾದ ಮುಸ್ಆಬ್ ಇಬ್ನು ಉಮೈರ್, ತುಫೈಲ್ ಮತ್ತು ಉಮರ್ ಇಬ್ನು ಅಲ್ ಖತ್ತಾಬ್ ಅವರ ಜೀವನದಲ್ಲಿಯೂ ಕುರಾನ್ ದೊಡ್ಡ ಬದಲಾವಣೆಯನ್ನು ತಂದಿದೆ. ಮುಸ್ಆಬ್ ಇಬ್ನು ಉಮೈರ್ ಅವರು ಸೌಲಭ್ಯಯುತ ಜೀವನವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಸೇವೆ ಮಾಡಿದರು. ತುಫೈಲ್ ಆರಂಭದಲ್ಲಿ ಸಂಶಯ ಹೊಂದಿದ್ದರು ನಂತರ ಇಸ್ಲಾಂ ಪ್ರಚಾರಕರಾದರು. ಉಮರ್ ಇಬ್ ಅಲ್ ಖತ್ತಾಬ್ ಅವರು ವಿರೋಧಿಯಿಂದ ಮಹಾನ್ ಮುಸ್ಲಿಂ ನಾಯಕರಾದರು. ಈ ಎಲ್ಲಾ ಉದಾಹರಣೆಗಳು ಕುರಾನ್ನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಕುರಾನ್ ಕಾಲತೀತವಾದ ದೈವಿಕ ಗ್ರಂಥವಾಗಿದೆ. ಅದು ಮಾನವ ಕುಲಕ್ಕೆ ಸತ್ಯ, ದೈವಿಕ ಮಾರ್ಗದರ್ಶನ ಮತ್ತು ಭರವಸೆಯನ್ನು ನೀಡುತ್ತದೆ. ಗಾಜಾದ ಜನರು ತೋರಿಸುತ್ತಿರುವ ನಂಬಿಕೆ ಮತ್ತು ಧೈರ್ಯವು ಆರಂಭಿಕ ಮುಸ್ಲಿಮರ ಇತಿಹಾಸವನ್ನು ನೆನಪಿಸುತ್ತದೆ. ಕುರ್ ಆನ್ ಮಾನವರಿಗೆ ಸೃಷ್ಟಿಕರ್ತನ ಬಗ್ಗೆ ತಮ್ಮ ಬಗ್ಗೆ ಮತ್ತು ಒಳ್ಳೆಯ ಸಮಾಜದ ಬಗ್ಗೆ ತಿಳಿಸುತ್ತದೆ. ಇಂದಿನ ಕಠಿಣ ಪರಿಸ್ಥಿತಿಗಳ ನಡುವೆ ಪ್ಯಾಲೆಸ್ತೀನಿಯನರ ನಂಬಿಕೆ ಮತ್ತು ಉತ್ತಮ ಗುಣಗಳು ಜಗತ್ತಿನ ಜನರಿಗೆ ಸತ್ಯವನ್ನು ಹುಡುಕಲು ಕುರಾನ್ ಓದಲು ಮತ್ತು ಭರವಸೆ ಹಾಗೂ ಧೈರ್ಯದಿಂದ ಬದುಕಲು ಪ್ರೇರಣೆಯಾಗಿದೆ.

Related Posts

Leave A Comment

Voting Poll

Get Newsletter