ತ್ವಬ್ರೀ : ತಫ್ಸೀರ್ ರಚನೆಗಳ ಮಾರ್ಗದರ್ಶಿ
ಖುರ್ಆನಿನ ವ್ಯಾಖ್ಯಾನ ಗ್ರಂಥಗಳಾಗಿವೆ ತಫ್ಸೀರುಗಳು . ಅವತೀರ್ಣದ ಸಮಯದಲ್ಲಿಯೇ ವಿಶುದ್ಧ ಗ್ರಂಥದ ವ್ಯಾಖ್ಯಾನ ಪ್ರಕ್ರಿಯೆಗೆ ಮುಹಮ್ಮದ್ (ಸ) ರು ಮತ್ತು ಅನುಯಾಯಿಗಳು ಪ್ರಾರಂಭಿಸಿ ಕೊಟ್ಟಿದ್ದರೂ ತಫ್ಸೀರ್ ಗ್ರಂಥಗಳು ಪ್ರಸಿದ್ಧವಾದದ್ದು ಮುಂದಿನ ಕಾಲಘಟ್ಟದಲ್ಲಾಗಿದೆ.ಇಸ್ಲಾಮಿನ ಮೂರನೇ ಶತಕದಲ್ಲಿ ಉತ್ತಮ ಪಂಡಿತನಾದ ಅಬೂ ಜಅಫರ್ ಮುಹಮ್ಮದ್ ಇಬ್ನು ಜರೀರ್ ಅಲ್ ತ್ವಬ್ರೀಯವರ "ತಫ್ಸೀರು ತ್ವಬ್ರೀ ", ಮೊದಲನೇ ಖುರ್ಆನಿಕ ವ್ಯಾಖ್ಯಾನವಾಗಿ ಗಣಿಸಲ್ಪಟ್ಟಿದೆ.
ಖುರ್ಆನ್ ವ್ಯಾಖ್ಯಾನದ ವಿಷಯದಲ್ಲಿ ಮುಂದಿನ ಕಾಲದಲ್ಲಿ ರಚಿಸಲ್ಪಟ್ಟಿರುವ ತಫ್ಸೀರುಗಳೆಲ್ಲವೂ ಹೆಚ್ಚು ಕಡಿಮೆಯಿಂದ ಈ ಗ್ರಂಥಕ್ಕಿಂತ ಉನ್ನತವಾಗಿದೆ ಎಂಬ ಕಾರ್ಯವು ಸಾಕು ತ್ವಬ್ರೀಯವರ ಜ್ಞಾನ ಮಹತ್ವವನ್ನು ಬೆಲೆ ನೀಡಲಿಕ್ಕೆ.839ರಲ್ಲಿ ಪೇರ್ಶಿಯನ್ ಭೂಖಂಡವಾದ ತ್ವಬ್ರಿಸ್ಥಾನಿನಲ್ಲಿ ( ಹಿಜ್ರ :224) ಜನನ.ಅನುಕೂಲವಾದ ಕುಟುಂಬ ರ್ಸಾಹಚರ್ಯಗಳು ತ್ವಬ್ರಿಯ ಪಂಡಿತನನ್ನು ಉನ್ನತನಾಗಿ ಮಾಡಿದವು.ಪವಿತ್ರ ಖುರ್ಆನ್ ಸಂಪೂರ್ಣವಾಗಿ ಕಂಠಪಾಠ ಮಾಡುವಾಗ ಪ್ರಾಯ ಏಳು. ರಯ್ಯ್, ಬಾಗ್ದಾದ್, ಬಸರ, ಖೂಫ, ವಾಸಿತ್ ಎಂಬ ಸ್ಥಳದ ಗುರುವರ್ಯರಿಂದ ವಿವಿಧ ಜ್ಞಾನಶಾಖೆಗಳಲ್ಲಾಗಿದೆ ಪಠಣ.
ಅಬೂ ಅಬ್ದುಲ್ಲಾ ಮಹಮ್ಮದ್ ಬಿನ್ ಹುಮೈದ್ ಅಲ್ ರಾಝಿರವರು ಪ್ರಧಾನ ಗುರುವರ್ಯರು.ರಯ್ಯ್ ನಗರದಲ್ಲಿ ಬಿನ್ ಹುಮೈದಿನ ಜೊತೆ ಕಳೆದು ಕೂಡಿದ ಐದು ವರ್ಷಗಳು ವ್ಯಕ್ತಿತ್ವವನ್ನು ರೂಪೀಕರಿಸುವುದರಲ್ಲಿ ನಿರ್ಣಾಯಕವಾಯಿತು.ಹಂಬಲೀ ಕರ್ಮಶಾಸ್ತ್ರದ ಸಮಸ್ಥಾಪಕನಾದ ಅಹಮದ್ ಇಬ್ನು ಹಂಬಲ್ (780-855 AC),ದಾಹಿರೀ ಸರಣಿಯ ಸಮಸ್ಥಾಪಕನಾದ ದಾವುದ್ ಅಲ್ ದಾಹಿರೀ (815-883 AC) ಮುಂತಾದ ಘಟಕಗಳಲ್ಲಿ ಮುಂಬಂದಿಯಲ್ಲಿ ನಿಂತಿರುವ ಹಲವಾರು ಪಂಡಿತರು, ಮತ, ಸಾಹಿತ್ಯ, ಚರಿತ್ರೆ ಎಂಬಿವುಗಳ ಅದ್ಭುತಕರವಾದ ಮಿಶ್ರಣವಾಗಿದೆ ತ್ವಬ್ರೀರವರ ಜ್ಞಾನಲೋಕ.
ಇಸ್ಲಾಮಿಕ ವಿಜ್ಞಾನಗಳಾದ ಖುರ್ಆನ್,ಹದೀಸ್, ಫಿಕ್ಹ,ಕಲಾಂ ಮುಂತಾದವುಗಳಲ್ಲಿ ಅರಬಿ ಸಾಹಿತ್ಯ ಮತ್ತು ವಿಶ್ವ ಚರಿತ್ರೆಯನ್ನು ಅವರು ಅಧಿಕಾರವಾಗಿ ಬಂಧಿಸಿದರು. ಇಸ್ಲಾಮಿಕ ಜ್ಞಾನ ಚರಿತ್ರೆಯ ಅತ್ಯುಜ್ವಲ ಯುಗಗಳಲ್ಲೊಂದಾಗಿದೆ ತಾನು ಜೀವಿಸಿದ ಮೂರನೇ ದಶಕದ ಯುಗ.ವಿವಿಧ ಜ್ಞಾನಶಕ್ತಿಗಳ ಮೂಲ, ಕರ್ಮ ಶಾಸ್ತ್ರ ಸರಣಿಗಳ ಜನನ, ಹದೀಸ್ ಗ್ರಂಥಗಳ ಸಮಾಹರಣೆ, ವಿವಿಧ ತಫ್ಸೀರ್ ಸಂಕೇತಗಳ ರಚನೆ ಮುಂತಾದವುಗಳು ಇದೇ ಕಾಲಘಟ್ಟದಲ್ಲಾಗಿತ್ತು. ಚರಿತ್ರೆ, ಹದೀಸ್ ಕರ್ಮಶಾಸ್ತ್ರ ಮುಂತಾದ ವಿವಿಧ ವಿಷಯಗಳಲ್ಲಿ ರಚನೆ ಇದ್ದರೂ ಇಸ್ಲಾಮಿಕ ಜ್ಞಾನಕ್ಕಿರುವ ತ್ವಬ್ರಿಯ ಸಂಭಾವನೆಯಾಗಿ "ಜಾಮಿಉಲ್ ಬಯಾನ್ ಅನ್ ತಮ್ವೀಲಿ ಆಯಿಲಿಲ್ ಖುರ್ಆನ್" ಎಂದು ನಿಸ್ಸಂಶಯವಾಗಿ ಹೇಳಬಹುದು.
ರಚನೆಗಾರನಿಗೆ ಸೇರಿಸಿ ತಫ್ಸೀರು ತ್ವಬ್ರೀ ಎಂಬ ಹೆಸರಿನಲ್ಲಿ ಪ್ರಸಿದ್ಧವಾದ ಮಾಸ್ಟರ್ ಪೀಸ್ ಗ್ರಂಥವು ಮೂವತ್ತು ವಾಳ್ಯಗಳಲ್ಲಾಗಿ ವಿಶುದ್ಧ ಖುರ್ಆನ್ ಆಶಯಗಳು ಗಣನೀಯವಾದ ಬಾಗಿಲನ್ನೇ ತೆರೆದಿಟ್ಟಿದೆ. ಉತ್ತಮವಾದ ತಫ್ಸೀರ್ ಗ್ರಂಥ ತ್ವಬ್ರಿಯರಾದಾಗಿದೆ ಎಂದು ಜಲಾಲುದ್ದೀನ್ ಸುಯೂತಿ (849 - 911) ಸಾಕ್ಷ್ಯ ವಹಿಸಿದ್ದಾರೆ.ತ್ವಬ್ರಿಯ ಹಾಗೆ ಮತ್ತೊಂದು ತಫ್ಸೀರ್ ರಚಿಸಲ್ಪಡಲಿಲ್ಲ ಎಂದು ಇಮಾಮ್ ನವವಿ (631 -676) ಹೇಳುತ್ತಾರೆ.ತಫ್ಸೀರ್ ತ್ವಬ್ರಿಯನ್ನು ಸಂಪೂರ್ಣವಾಗಿ ಓದಿದೆ, ಆಕಾಶದ ಕೆಳಗೆ ತ್ವಬ್ರಿಯಿಂದ ಜ್ಞಾನಿಯಾದ ಒಬ್ಬನನ್ನು ನಾನು ನೋಡಲಿಲ್ಲ ಎಂದು ಇಬ್ನು ಖುಸೈಮ (223-311) ರವರ ಸಾಕ್ಷಿ ಪತ್ರ. ಅಬೂ ಹಾಮಿದ್ ಇಸ್ಫರಾಯಿನೀ (344 - 406) , ಇಬ್ನು ತೈಮಿಯ್ಯ ( 661- 728) , ಜರ್ಮನ್ ಓರಿಯೆಂಟಲಿಸ್ಟ್ ಥಿಯೋಡರ್ ನೋಲ್ಡೋಕ್ ( 1836 - 1930) ಮುಂತಾದವರೂ ಕೂಡಾ ಇದೇ ಅಭಿಪ್ರಾಯಗಳನ್ನು ಕೈಗೊಳ್ಳುತ್ತಾರೆ.
ಕಳೆದ ಕಾಲದಲ್ಲಿ ಜ್ಞಾನಲೋಕದಿಂದಲೇ ಹೊರದೂಡಲಾಗಿದೆ ಎಂದು ಅನಿಸಿದ ಅಮೂಲ್ಯ ಗ್ರಂಥದ ಬರಹ ಪುಸ್ತಕವು 19 ನೇಯ ದಶಕದಲ್ಲಿ ಅಲ್ ನಜ್ದ್ ಎಂಬ ಆಡಳಿತಗಾರರಿಂದ ಕಂಡುಹಿಡಿದ ಕಾರಣವಾಗಿದೆ ನಮ್ಮ ಕಾಲಕ್ಕೂ ತಫ್ಸೀರ್ ಓದಲು ಭಾಗ್ಯ ಲಭಿಸಿದ್ದು. ವ್ಯಾಖ್ಯಾನ ಶಾಸ್ತ್ರದ ವಿವಿಧ ಸಮೀಪನಗಳಲ್ಲಿ ತುಂಬಾ ಅಧಿಕಾರತೆಯಿರುವುದಾಗಿದೆ (ತಫ್ಸೀರ್ ಬಿಲ್ ಮಅಸೂರ್).ತಫ್ಸೀರ್ ಬಿಲ್ ಮಅಸೂರಿನ ಪ್ರಮುಖ ರಚನೆಗಾರನಾಗಿ ಗಣಿಸಲ್ಪಡುವ ತ್ವಬ್ರೀ ತಮ್ಮ ರಚನೆಗಳಲ್ಲಿಯೂ ಇದೇ ಸಂಕೇತ ಅವಲಂಬಿಸಿದ್ದಾರೆ. ಖುರ್ಆನ್ ಸೂಕ್ತಗಳಿಗೆ ಬೇರೆ ಖುರ್ಆನಿಕ ಸೂಕ್ತಗಳು, ಪ್ರವಾದಿ ವಚನಗಳು, ಪ್ರವಾದಿ ಅನುಯಾಯಿಗಳ ವೀಕ್ಷಣೆಗಳು ಮುಂತಾದವುಗಳಿಂದ ವ್ಯಾಖ್ಯಾನವನ್ನು ಕಂಡುಹಿಡಿಯುವ ರೂಪವಾಗಿದೆ.
ಚರಿತ್ರೆ, ಭಾಷೆ, ಕರ್ಮಶಾಸ್ತ್ರ ಮುಂತಾದವುಗಳಿಗೆ ಖುರ್ಆನ್ ವ್ಯಾಖ್ಯಾನ ಪ್ರಕ್ರಿಯೆಯಲ್ಲಿ ಅವರು ಮುಂಬಂದಿ ನೀಡಿದರು.ಖುರ್ಆನ್ ವಚನಗಳ ವ್ಯಾಕರಣೆಯಾಗಿ ಬಂದ ವಿಷಯಗಳನ್ನೆಲ್ಲ ವಿಷಯವಾಗಿಯೇ ಉದ್ಧರಿಸುತ್ತಾ ಬೇಕಾದ ಸ್ಥಳಗಳಲ್ಲಿ ಸ್ವಪಕ್ಷವನ್ನು ಬಹಿರಂಗಪಡಿಸುತ್ತಾ ಸವಿಶೇಷವಾದ ರೀತಿ ಆಗಿದೆ ಇವರದ್ದು.ಅದೇ ಸಮಯ ತಫ್ಸೀರ್ ಬಿಲ್ ಮಅಸೂರಿಯ ಪ್ರಧಾನ ಸವಾಲುಗಳೊಂದಾದ ಇಸ್ರಾಯೀಲಿಯ್ಯತಿನಿಂದ ತಫ್ಸೀರ್ ತ್ವಬ್ರೀ ಮುಕ್ತವಲ್ಲ. ಜೂಧ - ಕ್ರೈಸ್ತವ ನಂಬಿಕೆಗಳಿಂದ ಇಸ್ಲಾಮಿಕ್ ಸಮೂಹಕ್ಕೆ ಬಂದ ಕಥೆಗಳಾಗಿವೆ ಇವುಗಳು.ಇಸ್ಲಾಮಿಗೆ ಬಂದ ಇತರ ಮತಸ್ಥರಿಂದವಾಗಿದ್ದು ಈ ತರಹದ ನಿವೇದನೆಗಳು ಇಸ್ಲಾಮಿಗೆ ಬರುವುದು. " ತಫ್ಸೀರ್ ತ್ವಬ್ರೀಯ ಇಸ್ರಾಯೀಲಿಯ್ಯಾತ್ಗಳು " ಎಂಬ ವಿಷಯದಲ್ಲಿ ಆಮಲ್ ಅಬ್ದುಲ್ ರಹಮಾನ್ ರಬೀಹ್ ಕೈರೋ ಯುನಿವರ್ಸಿಟಿಯಲ್ಲಿ ಸಮರ್ಪಿಸಿದ್ದು ಪ್ರಸಕ್ತವಾಗಿದೆ.
ಈ ವಿಷಯವನ್ನು ಪರಂಪರಾ ಸಹಿತ ಉದ್ಧರಿಸಿದ ಕಾರಣದಿಂದ ತಫ್ಸೀರ್ ತ್ವಬ್ರೀಯ ಇಸ್ರಾಯೀಲಿಯ್ಯಾತ್ಗಳನ್ನು ತಿಳಿಯಲು ಸುಲಭವಾಗಿದೆ. ಚರಿತ್ರ ಶಾಖೆಗಿರುವ ತ್ವಬ್ರೀಯ ಭಾರವಾದ ಸಂಭಾವನೆಯಾಗಿದೆ "ತಾರೀಕುಲ್ ಉಮಮಿ ವಲ್ ಮುಲೂಕಿ", "ತಾರೀಕು ರ್ರಸೂಲಿ ಎಲ್ ಮುಲೂಕಿ" ಎಂಬಿವುಗಳು. ತಫ್ಸೀರ್ ಗ್ರಂಥದ ಹಾಗೆ ರಚನೆಗಾರರಿಗೆ ಉಲ್ಲೇಖಿಸಿ, "ತಾರೀಕು ತ್ವಬ್ರೀ" ಹೆಸರಿನಲ್ಲಾಗಿದೆ ಇದು ಪ್ರಸಿದ್ಧವಾದದ್ದು.ಮನುಷ್ಯ ಸೃಷ್ಟಿಯಿಂದ ಹಿಜ್ರಾ 303 ರಲ್ಲಿ ರಚನೆ ಪೂರ್ತಿ ಮಾಡುವವರೆಗಿರುವ ವಿವಿಧ ಕಥೆಗಳು ಸಹಿತ ಈ ಗ್ರಂಥದಲ್ಲಿ ಗುರುತು ಮಾಡಿದ್ದಾರೆ."ಅಧಿಕಾರಿಕ ಚರಿತ್ರಗಾರನು” ಎಂದಾಗಿದೆ ಇಬ್ನು ಖಲ್ದೂನ್ ( 1332 - 1406 ) ತ್ವಬ್ರೀಯನ್ನು ವಿಶೇಷಿಸಿದ್ದು.ಶಿಯಾಗಳ ಗೂಢ ಶ್ರಮಗಳ ಫಲವಾಗಿ ಅನೇಕ ತಿದ್ದುಪಡಿಗಳಿಗೆ ವಿಧೇಯವಾದ ಪ್ರಚಾರದಲ್ಲಿರುವ "ತಾರೀಕು ತ್ವಬ್ರೀ" ಎಂಬ ವಾದವು ಪ್ರಬಲವಾಗಿವೆ.
ಮುಸ್ಲಿಂ ಲೋಕದ ಮತ್ತು ಮಧ್ಯ ಪೌರಸ್ತ ದೇಶಗಳ ಅಧಿಕಾರಿಕ ಚರಿತ್ರೆ ರೇಖೆಯಾಗಿ ಓರಿಯೆಂಟಲಿಸ್ಟುಗಳು ಉಪಯೋಗಿಸಿದಾಗ ಲೋಕದಲ್ಲೆಡೆ ಗ್ರಂಥವು ಪರಿಚಿತವಾಯಿತು.ಚರಿತ್ರೆ ಗ್ರಂಥದ ಇಂಗ್ಲಿಷ್ ಪರಿಭಾಷೆ ನಲವತ್ತು ವಾಳ್ಯಗಳಲ್ಲಾಗಿ ಅಮೇರಿಕಾದಿಂದ ಪ್ರಕಾಶಣೆಗೊಂಡಿದೆ.ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಪ್ರೆಸ್ (1985) ರಲ್ಲಿ ತ್ವಬ್ರೀಯ ಶಿಷ್ಯನಾದ ಅಬ್ದುಲ್ಲಾ ಇಬ್ನು ಅಹಮದ್ ಫರ್ಗಾನಿ ರಚಿಸಿದ ತಾರೀಕು ತ್ವಬ್ರೀ ತುಡರ್ ಗ್ರಂಥವು (ಅಲ್ ಸ್ವಿಲ) ಪ್ರಸಿದ್ಧವಾಗಿದೆ. ಇಸ್ಲಾಮಿಕ ಕರ್ಮಶಾಸ್ತ್ರಗಳಲ್ಲಿಯೂ ತ್ವಬ್ರೀರವರು ವ್ಯಕ್ತಿ ಮುದ್ರೆ ಹಾಕಿದ್ದಾರೆ.ಹಂಬಲಿಗಳೊಡನೆ ನಿರಂತರವಾಗಿ ಸಂವಾದಗಳಲ್ಲಿ ಭಾಗವಹಿಸುತ್ತಿದ್ದರು.ಮೊದಲ ಕಾಲದಲ್ಲಿ ಶಾಫಿಈ ಮಧ್ಹಬ್ ಸರಣಿಯಲ್ಲಿ ಇದ್ದರೂ ಸ್ವಂತವಾಗಿಯೇ ಒಂದು ಮಧ್ಹಬ್ ಕೊನೆಯ ಕಾಲದಲ್ಲಿ ಆತರು ಅಭಿವೃದ್ಧಿಗೊಳಿಸಿದರು.
ಇಬ್ನು ಜರೀರ್ ಎಂಬುವುದಕ್ಕೆ ಸೇರಿಸಿ "ಜರೀರ್ ಮಧ್ಹಬ್ " ಎಂಬ ನಾಮದಲ್ಲಿರುವ ಕರ್ಮ ಶಾಸ್ತ್ರ ಸರಣಿಯು ಆತನ ವಿಯೋಗದ ನಂತರವೂ ಎರಡು ಶತಕಗಳವರೆಗೆ ಸಜೀವವಾಗಿ ಉಳಿದಿತ್ತು.ನಮಾಜುಗಳಲ್ಲಿ ಸ್ತ್ರೀ ನೇತೃತ್ವ , ವನಿತೆ ಆಡಳಿತಕ್ಕೆ ಸೇರುವಿಕೆ ಮುಂತಾದ ವಿಷಯಗಳಲ್ಲಿ ಅಧಿಕವಾಗಿಯೂ ತೆರೆದ ಅಭಿಪ್ರಾಯವಾಗಿತ್ತು ಜರೀರೀ ಸರಣಿಯದ್ದು.ದೌರ್ಭಾಗ್ಯಕರವೇನೆಂದು ಹೇಳಬೇಕೇ , ಅಡಿಸ್ಥಾನ ಪ್ರಮಾಣಗಳ ಕ್ರೋಢೀಕರಣದ ಅಭಾವದಲ್ಲಿ ಕಾಲಕ್ರಮೇಣ ಇಲ್ಲದೆಯಾಗುವುದಾಗಿತ್ತು ಈ ಮಧ್ಹಬಿನ ವಿಧಿ. ಹದೀಸ್ ಜ್ಞಾನಶಾಸ್ತ್ರಕ್ಕಿರುವ ತ್ವಬ್ರೀರವರ ಶ್ರದ್ದೇಯವಾದ ಸಂಭಾವನೆಯಾಗಿದೆ "ತಹ್ಧೀಬುಲ್ ಆಸಾರ್".ಹದೀಸ್ ಗ್ರಂಥಗಳ ಶೈಲಿಯಿಂದ ಬದಲಾಗಿ ನಿವೇದಕ ಪ್ರಧಾನವಾದ ರೀತಿಶಾಸ್ತ್ರವಾಗಿದೆ ಗ್ರಂಥವನ್ನು ಆವಿಷ್ಕರಿಸುವುದು.ಆದರೆ ಗ್ರಂಥ ರಚನೆ ಪೂರ್ತಿ ಮಾಡಲು ಆತರಿಗೆ ವಿಧಿ ಇರಲಿಲ್ಲ.ಸ್ವರ್ಗೀಯರಾದ ಹತ್ತು ಸ್ವಹಾಬಿಗಳು,ಪ್ರವಾದಿ ಕುಟುಂಬಾಂಗಗಳು, ಇಬ್ನು ಅಬ್ಬಾಸ್ ರವರು ವರದಿ ಮಾಡಿದ ಹದೀಸ್ ಮುಕ್ತಾಯಗೊಳ್ಳುವಾಗ ಆತರ ವಿಯೋಗವು ಸಂಭವಿಸಿತು. 89 ನೇ ವಯಸ್ಸಿನಲ್ಲಿ (923 ಫೆಬ್ರವರಿ / ಹಿಜ್ರ 310 ಶಲ್ವಾಲ್ ) ಬಗ್ದಾದಿನಲ್ಲಿ ಆಗಿತ್ತು ಅಂತ್ಯ.ಅಂತ್ಯ ವಿಶ್ರಮವು ಚರಿತ್ರೆ ಭೂಮಿಯಲ್ಲಾಗಿದೆ.
ಅಖ್ದಂ ಶಾಹಿಲ್,ಸುಳ್ಯ