ಸರ್ವಾಧಿಕಾರ ನಡೆಯುತ್ತಾ?

 ಪ್ರಧಾನಿ ನರೇಂದ್ರ ಮೋದಿ,ಈ ಹೆಸರಿನ ಮುಂಚೆ "ಪ್ರಧಾನಿ" ಎಂಬ ಪದವಿದೆ ಅದರ ಘನತೆಯಾದರೂ ಏನು..? ಪ್ರಜಾಪ್ರಭುತ್ವ ಜಾತ್ಯತೀತ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ದೇಶ.ಅದೂ ಒಂದು ಕಾಲದಲ್ಲಿ ಸರ್ವ ಜನರು ವಿವಿಧ ಭಾಷೆಗಳಿಗೆ ಸಂಸ್ಕೃತಿಗಳಿಗೆ ಅನುಗುಣವಾಗಿ ಜೀವಿಸುತ್ತಿದ್ದಾರೆ.ಎಲ್ಲಾ ಜಾತಿಯವರಿಗೂ ಒಬ್ಬನೇ ಪ್ರಧಾನಿ ಇರುತ್ತಾನೆ ಈ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಆತನ ಹೊಣೆ.ಆದರೆ ಕೇಂದ್ರದ ಆಡಳಿತಾರೂಢ ಪಕ್ಷದ ಪ್ರಧಾನಿ ಕೆಲವು ದಿನಗಳಿಂದ ಕೇವಲ ಒಂದು ಜಾತಿಗೆಮಾತ್ರ ಸೀಮಿತವಾದ ಪ್ರಧಾನಿಯಾಗಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ,10 ವರ್ಷಗಳ ಕಾಲ ಈ ದೇಶವು ಎಷ್ಟು ಬದಲಾವಣೆ ತಂದಿದೆ ಅಂದರೆ ಬದಲಾವಣೆ ಬೇರೆ ಏನು ಅಲ್ಲ ರಾಷ್ಟ್ರಕೇಸರೀಕರಣ ಮಾಡಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೆ ನಾನು ಸೋಲುತ್ತೇನೆ ಎಂಬ ಭಯದಿಂದ ಒಂದು ಪ್ರಧಾನಿ ಸಾರ್ವಜನಿಕ ಸಭೆಗಳಲ್ಲಿ ಸಮಾರಂಭಗಳಲ್ಲಿ ತನ್ನ ಸ್ಥಿಮಿತೆ ಕಳೆದುಕೊಂಡು ಅಲ್ಪಸಂಖ್ಯಾತರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಮುಸಲ್ಮಾನರ ಮೀಸಲಾತಿ ರದ್ದತಿಗೆ ಅಡಿಪಾಯ ಹಾಕಿದ್ದಾರೆ, NDA ಅಧಿಕಾರಕ್ಕೆ ಬಂದರೆ NRC ಜಾರಿ ಮಾಡಲು ಎಲ್ಲಾ ತಯಾರಿಯು ನಡೆದಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ 400 ರಲ್ಲಿ 230 ಸೀಟು ಕೂಡ ಸಂಶಯದ ಹಾದಿ ಹಿಡಿದಿದೆ ಅನ್ನುತ್ತಾರೆ, ಒಬ್ಬ ಪ್ರಧಾನಿಯು ತನ್ನ ಅಭಿವೃದ್ಧಿ ಬಗ್ಗೆ ಹೇಳದೇ ವಿರೋದ ಪಕ್ಷಗಳ ವಿರುದ್ಧ ಹರಿಹಾಯುತ್ತಾ ಅವರ ಮೇಲೆ ಟೀಕಾ ಪ್ರಹಾರ ಮಾಡಿ ಬಾಯಿಗೆ ಬಂದಂತಹ ಮಾತುಗಳನ್ನಾಡಿ ಮಾತಿನ ಲಯ ತಪ್ಪಿದ್ದಾರೆ, ಪ್ರಧಾನಿ ಎಂಬ ದೊಡ್ಡ ಹುದ್ದೆಯ ಘನತೆಗೆ ಧಕ್ಕೆ ತಂದಂತಹ ಓರ್ವ ಪ್ರದಾನಿ ಇದ್ದರೆ ಇವರೇ ಆಗಿರಬಹುದು. ಇನ್ನೊಂದೆಡೆ ಒಂದು ದೇಶ ಒಬ್ಬ ನಾಯಕ ಎಂಬ ಧ್ಯೇಯವನ್ನು ಹೊರಡಿಸಿದ್ದಾರೆ, ಅದರ ಅರ್ಥ ಇನ್ನೊಂದು ಸಲ ನಾನೇ ಪ್ರಧಾನಿ ಆಗುವೆ, ಒಂದೇ ಮತದಾನ ಮಾಡುವೆ ಪ್ರಜಾಪ್ರಭುತ್ವ ದೇಶವನ್ನು ಸರ್ವಾಧಿಕಾರ ಮಾಡುತ್ತೇನೆ ಇವೆಲ್ಲವಾಗಿದೆ.

2019ರಲ್ಲಿ ಪುಲ್ವಾಮಾ ದಾಳಿಯ ಹೆಸರು ಬಳಸಿ ಅಧಿಕಾರಕ್ಕೆ ಬಂತು, ಅಧಿಕಾರಕ್ಕೆ ಬಂದಮೇಲೆ ನಾಟಕೀಯವಾಗಿ ಸರಕಾರವನ್ನು ಮುನ್ನಡೆಸಿದರು, ಕರ್ನಾಟಕದಲ್ಲಿ ಬಿಜೆಪಿ ಇದೇ ರೀತಿ ಮಾಡುತ್ತಿದೆ, ನೇಹ ಹಿರೇಮಠ ಹೆಸರು ಬಳಸಿ ಮತಯಾಚಿಸಿದ ಸಂದರ್ಭ ಬಂದಿದೆ.ನೇಹ ಹಿರೇಮಠಗೆ ಆದಂತಹ ಘಟನೆ ಕೇವಲ ಎಲೆಕ್ಷನ್ ಗೆ ಲಾಭವಾಯಿತು ಎಂಬ ಬೇಜಾರು ಚಿಂತೆಗೀಡು ಮಾಡಿತು. ಇದು ಎಲ್ಲಿಯ ನ್ಯಾಯ, ಕಾಂಗ್ರೆಸ್ ಗ್ಯಾರಂಟಿಗಳನ್ನು ಕದ್ದು ಆಪ್ ಕಿ ಬಾರ್ ಹರ್ ಹರ್ ಮೋದಿ ಎಂಬ ಹೊಸ ಗಾಳವನ್ನು ಸೃಷ್ಟಿ ಮಾಡಿ ಜನರನ್ನು ಮತ್ತೆ ಮೋಸದ ಪ್ರಪಾತಕ್ಕೆ ತಳ್ಳುತ್ತಿದ್ದಾರೆ, ಸಂಸದ ಪ್ರಜ್ವಲ್ ರೇವಣ್ಣರಂತ ಆರೋಪಿಯ ಕೈ ಹಿಡಿದು ಸ್ವತಹ ಪ್ರಧಾನಿಯವರೇ ಖುದ್ದಾಗಿ ಮತಯಾಚಿದರು, ಬೇಟಿ ಬಚಾವೋ ಬೇಟಿ ಪಡಾವೋ ಕೇವಲ ಮರೀಚಿಕೆಯಷ್ಟೇ..

ಮಹಾನ್ ಮಾನವತಾವಾದಿ ಬಸವಣ್ಣ ಹೇಳಿದ ಹಾಗೆ "ನುಡಿದರೆ ಮುತ್ತಿನ ಹಾರದಂತಿರಬೇಕು"ಆದರೆ ಎಲ್ಲಿದೆ ಮುತ್ತು.. ನುಡಿಯುವುದೆಲ್ಲ ಕಪಟ ಸುಳ್ಳಲ್ಲವೇ ಇನ್ನೊಂದೆಡೆ ಮತ ಬ್ಯಾಂಕ್ ಸೆಳೆಯಲು ಹಲವು ವರ್ಷಗಳ ಕನಸು ರಾಮಮಂದಿರವನ್ನು ಕಟ್ಟಿದರು ಆದರೆ ಇದು ಯಾವುದೇ ಪ್ರಭಾವವನ್ನು ಬೀರಲಿಲ್ಲ, ಎನ್ ಡಿ ಎ ಅಧಿಕಾರಕ್ಕೆ ಬಂದರೆ ಇಲ್ಲಿ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ , ಪ್ರತಿಪಕ್ಷದ ನಾಯಕರನ್ನು ಜೈಲುಗಟ್ಟುತ್ತಾರೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದಕ್ಕೆ ಸ್ಪಷ್ಟವಾದ ಉದಾಹರಣೆ, ತಿಹಾರ್ ಜೈಲಿನಿಂದ ಜಾಮೀನು ಪಡೆದು ಹೊರಗೆ ಬಂದ ಅರವಿಂದ ಕೇಜ್ರಿವಾಲ್ ದೇಶ ರಕ್ಷಣೆಯ ಬಗ್ಗೆ ,ಅದೇ ರೀತಿ ಸರ್ವಾಧಿಕಾರ ಬಂದರೆ ಬರುವ ಆಪತ್ತುಗಳನ್ನು ವಿವರಿಸಿದರು NDA ವಿರುದ್ಧ ಕಿಡಿಕಾರಿದರು.

ಗೋದ್ರ ಹತ್ಯಾಕಾಂಡದ ಓರ್ವ ಆರೋಪಿಯನ್ನು ಬಿಜೆಪಿ ಪ್ರಧಾನಿ ಸ್ಥಾನದಲ್ಲಿ ಕುಳ್ಳಿರಿಸಿದೆ. ಹತ್ತು ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡದೇ ಜನರಿಗೆ ಕಂತೆ ಕಂತೆ ಸುಳ್ಳುಗಳನ್ನು ಹೇಳಿ ಯಾಮಾರಿಸಿದ ಮೋದಿ ಮುಂದೆ ಪ್ರಧಾನಿ ಆಗಬಲ್ಲರೆ..? ಅದಕ್ಕೆ ಅವರು ಸಮರ್ಥರೇ..? ಎಂಬ ಪ್ರಶ್ನೆಯು ಗಿರಕಿ ಹೊಡೆಯುತ್ತಿದೆ,ಎಲ್ಲವೂ ಅನಿಶ್ಚಿತ,  ಅವತ್ತು ನಮ್ಮ ಭಾರತದಲ್ಲಿ G20 ಸಭೆ ನಡೆದಾಗ ಮುಂಬೈ ಅಂತಹ ಮಹಾನಗರಗಳಲ್ಲಿ ಇರುವ ಕೊಳಗೇರಿಗಳಿಗೆ ಬಟ್ಟೆಯನ್ನು ಬೇಲಿಗಳನ್ನು ಹಾಕಿ ಮುಚ್ಚಿ ವಿದೇಶ ನಾಯಕರಿಗೆ ತಿಳಿಯಬಾರದೆಂದು ಹರಸಾಹಸ ಪಟ್ಟರು. ಸುಮ್ಮನೆ ಪ್ರತಿಮೆಗಳಿಗೆ ಹಾಕುವ ಸಾವಿರಾರು ಕೋಟಿಗಳನ್ನು ಕೊಳಗೇರಿ ಪ್ರದೇಶದ ಬಡವರಿಗೆ ಹಂಚಿದರೆ ಅಥವಾ ಆ ಪ್ರದೇಶವನ್ನು ಅಭಿವೃದ್ಧಿ ಮಾಡಿದರೆ ಇನ್ನಷ್ಟು ಮೆರುಗು ಕಾಣುತ್ತಿತ್ತು. ಸರ್ವಾಧಿಕಾರಿ ಧೋರಣೆ ಹೇಗಿದೆ ಅಂದರೆ ಹೊಸ ಸಂಸತ್ ಭವನ ಉದ್ಘಾಟನೆ ವೇಳೆಯಲ್ಲಿ ಸೆಂಗೊಳ್ ಪ್ರತಿಸ್ಥಾಪಿಸಿದರು,ಅದೇ ರೀತಿ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಇದು ಸರ್ವಾಧಿಕಾರದ ಮುನ್ಸೂಚನೆ. ಇಂತಹ ಒರಟು ಸರ್ವಾಧಿಕಾರಕ್ಕೆ ಕಡಿವಾಣ ಹಾಕಲೇಬೇಕಾಗಿದೆ, ಛೀ ಮಾರಿ ದಳ್ಳುರಿಗಳ ದಬ್ಬಾಳಿಕೆಗೆ ನಮ್ಮ ದೇಶ ಬಲಿಯಾಗಿದೆ, ಯಾರನ್ನು ಆಯ್ಕೆ ಮಾಡಬೇಕೆಂಬ ನಿರ್ಣಯ ನಾಗರಿಕರಾದ ನಮ್ಮ ಕೈಯಲ್ಲಿದೆ, ಸ್ವತಂತ್ರದಲ್ಲಿ ಹೋರಾಡಿದ ಏಕತೆಯು ಎಲ್ಲಿ ಹೋಗಿದೆ ಇದು ಈಗಿನ ಭಾರತ, ಸರ್ವಾಧಿಕಾರ ಎಂಬ ಪೀಡೆ ಯನ್ನು ಅಟ್ಟಿಸಿ ದೇಶವನ್ನು ಕಾಪಾಡೋಣ.

                                                                                                                                          ಮಿಕ್ ದಾದ್ ಕುಂತೂರು 

Files

Related Posts

Leave A Comment

Voting Poll

Get Newsletter