ಲವ್ ಜಿಹಾದ್ ಮಾರಕ,ಆದರೆ ಕೇಸರಿ ಜಿಹಾದ್?
ಪ್ರಕೃತಿ ಸಂಕೇತ ಹುಬ್ಬಳ್ಳಿ,ಇಂದು ಪ್ರೀತಿ ಪ್ರೇಮದ ವಾಟಾರದಲ್ಲಿ ರಕ್ತ ಹರಿಸುವ ರಾಕ್ಷಸರ ಕಾರಣದಿಂದ ಸುದ್ದಿ ಮಾಡುತ್ತಿದೆ. ಅದೃಷ್ಠವಶಾತ್ ಏನೆಂದರೇ ಹತ್ಯ ಮಾಡಿದವನು ಮುಸಲ್ಮಾನನಲ್ಲಾ ಅಷ್ಠೆ, ಮುಸಲ್ಮಾನನಾಗಿದ್ದರೇ ಸಂತ್ರಸ್ತೆಯ ಕುಟುಂಬಸ್ಥರು ಭಯಭೀತರಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ಓಯ್ದಿದ್ದ ಆ ದಿನವೇ ಪೊಲೀಸ್ ಆರೋಪಿಯ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರಲಿಲ್ಲ.ಕಾರಣ ಒಂದೇ ಮುಸ್ಲಿಂ ನಾಮಧಾರಿ, ಅವರನ್ನು ಕಂಡರೆ ಹಾಗಲ್ಲ ಅವರ ಹೆಸರು ಕೇಳಿದರೆ ನಮಗೆ ಸಹಿಸಲ್ಲ,ಮುಸಲ್ಮಾನರು ಯಾರಾದರೂ ಅಪರಾಧ ಮಾಡಿದರಲ್ಲಿ ದೊಡ್ಡ ಪ್ರಕರಣ,ಪೋಕ್ಸೋ ಕಾಯ್ದೆ,ರಾಜದ್ರೋಹಿ,ಲವ್ ಜಿಹಾದ್ ಎಂಬ ಪಟ್ಟ ಹೆಣ್ಣಿನ ಮೇಲೆ ದೌರ್ಜನ್ಯ,ಅತ್ಯಾಚಾರ ಪ್ರಯತ್ನ.
ಹಲವಾರು ಮೀಡಿಯಾಗಳು ಮುಸಲ್ಮಾನರ ಕುರಿತು ಅವಹೇಳನಾಕಾರಿ ಹೇಳಿಕೆ,ಮುಸಲ್ಮಾನರು ಪ್ರೀತಿ ಪ್ರೇಮದ ಹೆಸರಲ್ಲಿ ಹೆಣ್ಣು ಮಕ್ಕಳ ದಾರಿ ತಪ್ಪಿಸುತ್ತಿದ್ದಾರೆ ಎಂದು ದ್ವೇಷ ಭಾಷಣ ಮಾಡುವವರ ನಾಲಿಗೆಯಲ್ಲಿ ಬ್ರೈನ್ ವಾಶ್ ಹೇಳಿಕೆ,ಆರೋಪಿಯನ್ನು ಪ್ರತಿನಿಧಿಸಿ ಇಡೀ ಧರ್ಮವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಹಿಂದೂ-ಮುಸ್ಲಿಂ ಎಡೆಯಲ್ಲಿ ದ್ವೇಷವನ್ನು ಬಿತ್ತುವಿಕೆ,ರಾಜಕೀಯ ನಾಯಕರು ಕೊಲೆಯಾದವರ ಮತ್ತು ಕೊಲೆ ಮಾಡಿದವರ ಜಾತಿ ಮತ ಧಾರ್ಮಿಕ ಹಿನ್ನೆಲೆಯ ಆಧಾರದಲ್ಲಿ ಹೇಳಿಕೆ ನೀಡುವ ಅಪಾಯಕಾರಿ ಮನಸ್ಥಿತಿಯ ಹೇಳಿಕೆ,ಇಂತಹ ಹಲವಾರು ಹೇಳಿಕೆಗಳು ಹೊರಕ್ಕಿಳಿಯುತ್ತಿತ್ತು.ದೂರದ್ವಿಷ್ಠ ವಷಾತ್ ಆ ಜಾಗದಲ್ಲಿ ಇನ್ನೊಬ್ಬ "ವಿಶ್ವ ಅಲಿಯಾಸ್ ಸಾವಂತ್"ಹುಟ್ಟಿಕೊಂಡ. ನೇಹಾಲ ಹತ್ಯಯಲ್ಲಿ ಧರ್ಮವನ್ನು ಗುರುತಿಸಿದ್ದ ಸಂಗ ಪರಿವಾರದ ನಾಯಕರಿಗೆ ರುಕ್ಸಾನ ಕೊಲೆ ಆರೋಪಿಯ ಆಧಾರ ದರ್ಮ ಕಾಣಲೇ ಇಲ್ಲ, ಇವತ್ತು ಅಲಿಯಾಸ್ ಸಾಮಂತ್ನ ಧರ್ಮದ ಗುರುತು ಕೂಡ ಮಾಯವಾಗಿಬಿಟ್ಟಿದೆ. ಇರಲಿ ಇಷ್ಟೆಲ್ಲಾ ಕೊಲೆ ಮಾಡು ವಷ್ಟು ಧೈರ್ಯ "ಸರ್ವ ಜನಾಂಗದ ಶಾಂತಿಯ ತೋಟ"ಎಂದು ರಾಷ್ಟ್ರಕವಿ ಆಲೋಪಿಸಿದ ನಮ್ಮ ಕರ್ನಾಟಕ ರಾಜ್ಯದ ಅಭಿವೃದ್ದಿಯ ಪ್ರಮುಖ ಪಾತ್ರ ವಹಿಸಬೇಕಾದ ಯುವಕರಿಗೆ ಯಾರು ಕೊಟ್ಟರು,ಇದೇ ಮುಂದುವರಿದರೆ ನಮ್ಮ ರಾಜ್ಯದ ಸ್ಥಿತಿ ಏನಾಗಬಹುದು.
ಕೆಲವೇ ದಿನಗಳ ಹಿಂದೆ ಕೊಡಗಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಯುವಕನೊಬ್ಬ ಬರ್ಬರವಾಗಿ ತಲೆ ಕತ್ತರಿಸಿ ಕೊಂದು ಹಾಕಿದ್ದ.ಆಕೆಯನ್ನು ಈತನಿಗೆ ಮದುವೆ ಮಾಡಿಕೊಡಲಿಲ್ಲ ಎನ್ನುವ ಆಕ್ರೋಶವೇ ಇದಕ್ಕೆ ಕಾರಣ. ಸಮಾಜದಲ್ಲಿ ಹೆಣ್ಣಿನ ಕುರಿತಂತೆ ಪುರುಷ ಮನ ಸ್ಥಿತಿ ಹೇಗೆ ತಳಮಟ್ಟವನ್ನು ತಲುಪುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ,ಪ್ರೀತಿಸಿ ಹೆಣ್ಣು ಮಕ್ಕಳಿಗೆ ವಂಚಿಸುವ ನೂರಾರು ಪ್ರಕರಣಗಳು ಪುರುಷರಿಂದ ನಡೆಯುತ್ತಿದೆ,ಪ್ರೀತಿಯ ನೆಪದಲ್ಲಿ ಹೆಣ್ಣನ್ನು ನಂಬಿಸಿ ಸಮಾಜದಲ್ಲಿ ಕೇಸರಿ ಜಿಹಾದ್ ಮಾಡುವ ಪ್ರಯತ್ನ ನಡೆಯುತ್ತಿದೆ,ಸಮಾಜದ ಹಿತಾಸಕ್ತಿ ಕಾಯುವ ಪೋಲಿಸ್ ಅಧಿಕಾರಿಗಳೇ ಕೇಸರಿ ಜಿಹಾದ್ಗೆ ಆದ್ಯತೆ ನೀಡಿದರೆ ಸಮಾಜದ ಹೆಣ್ಣು ಮಕ್ಕಳ ಸ್ಥಿತಿ ಏನಾಗಬಹುದು, ಇಂತಹ ಕೃತ್ಯಗಳನ್ನು ತಡೆಯಲು ಇರುವ ಏಕೈಕ ಮಾರ್ಗ ನಮ್ಮ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಗೃಹ ಸಚಿವರು ಪ್ರತ್ಯೇಕವಾಗಿ ಸಭೆಯೊಂದನ್ನು ನಡೆಸಿ ಪೊಲೀಸರಿಗೆ ನಿರ್ದೇಶನವನ್ನು ನೀಡಬೇಕು ಇಂತಹ ಕೃತ್ಯಗಳಲ್ಲಿ ಜಾತಿ ಧರ್ಮಗಳನ್ನು ಹುಡುಕದೆ ಅವುಗಳನ್ನು ಖಂಡಿಸಬೇಕು. ಇಲ್ಲವಾದರೆ ನಾವೇ ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ಕೇಸರಿ ಜಿಹಾದಿನ ಹೆಬ್ಬುಲಿಯಾ ಬಾಯಿಗೆ ತಲ್ಲಿ ದಂತಾಗಬಹು.
ರಿಝ್ವಾನ್ ಪಡೀಲ್