ನ್ಯೂ ಇಯರ್ ಸಂಭ್ರಮದೆಡೆಗೂ ಅಬ್ಬರಿಸುತ್ತಿರುವ ಕೋರೋಣ ಅಟ್ಯಾಕ್
ಅನೇಕ ನಗರಪ್ರದೇಶಗಳಲ್ಲಿ ಅತೀವ ವಿಜ್ರಂಭಣೆಯಿಂದ ಡಿಸೆಂಬರ್ 31ರ ಮಧ್ಯರಾತ್ರಿ ಹೊಸವರ್ಷದ ಆಗಮನವನ್ನು
ಸಂಭ್ರಮಿಸಲಾಗುತ್ತದೆ . ಅನೇಕ  ಕ್ಲಬ್ ಗಳಲ್ಲಿ ಜನರು ಒಗ್ಗೂಡಿ ಮೈಮರೆತು ಕುಣಿದಾಡುತ್ತಾರೆ ಆದರೆ ಕರೋನವೈರಸ್ ಪತ್ತೆಯಾಗಿರುವ ಈ ಕಾಲದಲ್ಲಿ ಸ್ವಯಂ ನಿಯಂತ್ರಣ ಅತ್ಯಾವಶ್ಯಕವಾಗಿದೆ. ಪ್ರತ್ಯೇಕವಾಗಿ ಹೊಸ ಸ್ವರೂಪ ಹೊಂದಿರುವ ವೈರಾಣುವಿನ 70 ಶೇಕಡ ಅಧಿಕ ವೇಗವಾಗಿ ಪಸರಿಸುವ ಶಕ್ತಿ ಇದೆ ಆದ್ದರಿಂದ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕಾಗಿದೆ .
ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇಳಿದೆ ಆದರೂ ಸ್ವ ನಿಯಂತ್ರಣ ಅತ್ಯವಶ್ಯಕವಾಗಿದೆ ತನ್ನನ್ನು ಸೋಂಕಿನಿಂದ ದೂರವಿಡುವುದು ದೇಶಕ್ಕೆ ಒದಗಿಸುವ ಅತ್ಯಮೂಲ್ಯ  ಸಹಾಯವಾಗಿದೆ. ಸರಕಾರವು ಇದೀಗ ಡಿಸೆಂಬರ್ 31ರ ಸಂಜೆ 6ರಿಂದ 10ರವರೆಗೆ ಬೆಂಗಳೂರಿನಲ್ಲಿ ನಿಷೇದಾಜ್ಞೆ ವಿಧಿಸಿದೆ ಅದೇ ರೀತಿ ರಸ್ತೆ ಉದ್ಯಾನವನ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ ಹೊರಡಿಸಿದೆ ಕ್ಲಬ್ ಸಂಭ್ರಮಾಚರಣೆ ನಡೆಸುವುದಾದರೆ ಹೊರಗಿನ ಜನರಿಗೆ ಪ್ರವೇಶ ನಿಷೇಧಿಸಬೇಕೆಂದು ಹೇಳಿದೆ.
ಒಂದೆಡೆ ಕರೋನಾ ವೈರಸ್ಸಿನ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಮತ್ತೊಂದೆಡೆ ಬ್ರಿಟನ್ನಲ್ಲಿ ಕಂಡುಬಂದಂತಹ ಹೊಸ ರೂಪಾಂತರ ವೈರಾಣುವಿನ ಅಲೆ ಅಬ್ಬರಿಸುತ್ತಿದೆ ಇದು ತುಂಬಾ ಅಪಾಯಕಾರಿ ಆಗಿದೆ. ಕಾರಣ ಇದು ಅನಿರೀಕ್ಷಿತ ರೀತಿಯಲ್ಲಿ *ಯುಕೆ* (ಯುನೈಟೆಡ್ ಕಿಂಗ್ಡಮ್) ನಲ್ಲಿ ವ್ಯಾಪಿಸುತ್ತಿದೆ. ಅದು ಅಲ್ಲದೆ ಅನೇಕ ದೇಶ-ವಿದೇಶಗಳಿಗೆ ಮುನ್ನುಗ್ಗುತ್ತಿದೆ ಭಾರತದಲ್ಲಿ ಇದರ ಅಂಶ ಪತ್ತೆಯಾಗಿದೆ .ಈ ಸಾಂಕ್ರಾಮಿಕ ವೈರಾಣುವಿನ ವಿರುದ್ಧ ವಿವಿ  ದೇಶಗಳು ಎಚ್ಚರಿಕೆ ವಹಿಸುತ್ತಿದ್ದ ಅವಸ್ಥೆಯಲ್ಲಿ ಸ್ವಯ  ಮುನ್ನೆಚ್ಚರಿಕೆ ಅತ್ಯವಶ್ಯಕವಾಗಿದೆ . ಸರ್ಕಾರದ ನಿಯಮಗಳನ್ನು ಪಾಲಿಸುವುದರೊಂದಿಗೆ ಸ್ವಯಂ ರಕ್ಷಣೆಗೆ ಬೇಕಾದ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. 
ಇತರ ದೇಶಗಳಂತೆ ಭಾರತಕ್ಕೆ 2020ರಲ್ಲಿ ಕೋರೋಣ ತೀವ್ರವಾಗಿ ಬಾಧಿಸಿತ್ತು .  ಈ ಕಾರಣದಿಂದಾಗಿ ದೇಶಕ್ಕೆ ಅಂತರಾಷ್ಟ್ರೀಯ ಸಂಪರ್ಕ ಕಡಿತವಾಗಿದೆ ಶೇರುಪೇಟೆ ಹಾಗೂ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ . ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ ಲಾಕ್ ಡೌನ್  ಸಮಯದಲ್ಲಿ ಅನೇಕ ಸಾವು-ನೋವು ಸಂಭವಿಸಿದ್ದು. ಪ್ರಪ್ರಥಮವಾಗಿ ಜನವರಿ 30ಕ್ಕೆ ಕೇರಳದ ವೈರಾಣು ಪತ್ತೆ ಹಚ್ಚಲಾಯಿತು 22 ರಂದು ಲಾಕ್ ಡೌನ್  ವಿಧಿಸಲಾಯಿತು ರೈಲು ಬಸ್ಸು ಹಾಗೂ ಇನ್ನಿತರ ಸಂಪರ್ಕ ಕಡಿತ ಮಾಡಲಾಯಿತು ಅಲ್ಲದೆ ಜನರು ಮನೆಯಲ್ಲಿ ಭಯಬೀತರಾಗಿ ಕಳೆದರೂ. ಈವರೆಗೂ ದೇಶದಾದ್ಯಂತ ಜನರು ಮನೆಯಲ್ಲಿ ಭಯಬೀತರಾಗಿ ಕಾಲ ಕಳೆದರು ಈವರೆಗೂ 1.2 ಕೋಟಿ ಜನರಲ್ಲಿ ವೈರಾಣು ದೃಢವಾಗಿದೆ. 98 ಲಕ್ಷಕ್ಕೂ ಅಧಿಕ ಗುಣಮುಖರಾಗಿದ್ದಾರೆ ಒಂದು ಲಕ್ಷಕ್ಕಿಂತಲೂ ಅಧಿಕ ಮಂದಿ ಮೃತಪಟ್ಟಿದ್ದಾರೆ .

Related Posts

Leave A Comment

Voting Poll

Get Newsletter