ಧ್ರುವ ರಾಠಿ...ಭಾರತದ ದಿಟ್ಟ ನೇರ ಧ್ವನಿ
 

    ಭಾರತದ ಇತಿಹಾಸದಲ್ಲಿ ದೀರ್ಘವಾದ ಚುನಾವಣೆಗೆ ತೆರೆ ಬಿದ್ದಾಗ ಕಂಡ  ಫಲಿತಾಂಶ ಬಹಳ ರೋಚಕಮಯ ."ಆಪ್ ಕಿ ಬಾರ್ 400 ಪಾರ್ "ಎಂಬ ಘೋಷಣೆಯೊಂದಿಗೆ ಭಾರತದ ವಿವಿಧಡೆ ದ್ವೇಷ ಕುಕ್ಕುತ್ತಿದ್ದ ಪ್ರಧಾನಿಗೆ ಪ್ರಜಾತಂತ್ರವು  ನೀಡಿದ ಎಚ್ಚರಿಕೆ ಪ್ರಕಟ ಮತ್ತು ಸೂಕ್ಷ್ಮವಾದದ್ದು .ಹಿಂದುತ್ವವನ್ನು ಧ್ಯೇಯವಾಗಿಸಿ ಅಲ್ಪಸಂಖ್ಯಾತ ಸಮುದಾಯವನ್ನು ಎತ್ತಿ ಕಟ್ಟುವ ಕೀಲು ಮಟ್ಟದ ರಾಜಕಾರಣ ಮಾಡಿ ಜಯಗಳಿಸಲು ನೋಡಿದ "ವಿಶ್ವಗುರು"ಗೆ ಜಯಸಾಧ್ಯವಾಗದ್ದು  ಏಕೆ ? ಲೆಕ್ಕಾಚಾರವೆಲ್ಲ ತಲೆ ಕೀಳಾದದ್ದು ಹೇಗೆ?ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬಲು ಸುಲಭ .ಅದುವೇ ಮಿಸ್ಟರ್ ದ್ರುವರಾಠಿ .....

ಹರಿಯಾಣದಲ್ಲಿ ಒಂದು ಹಿಂದೂ ಜಾತಿ ಕುಟುಂಬದಲ್ಲಿ ಜನಿಸಿದ ಧ್ರುವ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಲಿದರು .ಅಲ್ಲಿಂದ ಸಣ್ಣದಾಗಿ ಟ್ರಾವೆಲ್ ಬ್ಲಾಗ್ ಮಾಡಲು ಪ್ರಾರಂಭಿಸಿದರು. ನಂತರ ಕ್ರಮೇಣ ಭಾರತದ ರಾಜಕಾರಣದ ಸ್ಥಿತಿಗತಿ ಯನ್ನು ತಿಳಿದು ಇನ್ನೂ ಯಾರಾದರೊಬ್ಬ ಎದ್ದೇಳದಿದ್ದರೆ ದೇಶವು ಅದೋಗತಿಗೆ ತಲುಪ ಬಹುದೆಂಬ ಆತಂಕದಿಂದ ಭಾರತದ ರಾಜಕಾರಣದ ಕುರಿತು ವಿಡಿಯೋ ಮಾಡಲು ಆರಂಭಿಸಿದರು .ಭಾರತದಲ್ಲಿ ನಿರಂತರ ನಡೆಯುತ್ತಿದ್ದ ಕೋಮುಗಲಭೆ ಭ್ರಷ್ಟಾಚಾರ ಮತ್ತು ಅಧಿಕಾರಗಳ ಗೊಂಬೆಯಾಟವನ್ನು ಕಂಡು ನೊಂದು ತಮ್ಮಿಂದ ಸಾಧ್ಯವಾದ ಬದಲಾವಣೆಯನ್ನು ತರಲು ಆಲೋಚಿಸಿದರು. the dictater, Hindu katra me?, electoral bond scam ಮುಂತಾದ ಹಲವಾರು ವಿಡಿಯೋಗಳನ್ನು ಮಾಡಿ ಜನರಿಗೆ ಮನವರಿಕೆ ಮಾಡಲು ಯತ್ನಿಸಿದರು. The dictator ಎಂಬ ವಿಡಿಯೋ ತೆರೆಗೆ ಬಂದ ರಾತ್ರೋ ರಾತ್ರಿ ಧ್ರುವ್ ನ ಪ್ರೇಕ್ಷಕರ ಸಂಖ್ಯೆ ಕೋಟಿಯನ್ನು ದಾಟಿತು."mission 100 crore" ಎಂಬ ಧ್ಯೇಯದಿಂದ ತೊಡಗಿದ ಸೋಶಿಯಲ್ ಮೀಡಿಯಾ ಕ್ಯಾಂಪೈನ್ ಜೂನ್ 4ರಂದು ರಾತ್ರಿ"the last message "ನೊಂದಿಗೆ ಮುಕ್ತಾಯಗೊಂಡಿತು.

ಅತೀ ಸರಳ ರೀತಿಯಲ್ಲಿ ವಿಷಯಗಳನ್ನು ವಿಶ್ಲೇಷಿಸುವ ಧ್ರುವ್ ನ ಶಕ್ತಿ ಯುವಕರನ್ನು ಆಕರ್ಷಿತರನ್ನಾಗಿಸಿತು.ಧ್ರುವ್ ನ ವಿಡಿಯೋ ಉತ್ತರ ಭಾರತದ ಹಲವಾರು ಬೀದಿಗಳಲ್ಲಿ ಜನರನ್ನು ಒಗ್ಗೂಡಿಸಿ ಪ್ರೊಜೆಕ್ಟರ್ ನಲ್ಲಿ ಹಾಕಿ ತೋರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದದ್ದು ಎಲ್ಲರಿಗೂ ತಿಳಿದ ವಿಷಯ .ಆದರೆ ಒಬ್ಬ ಚಿಕ್ಕ ಬಾಲಕನಲ್ಲಿ "ನಿನಗೆ ED ಯ ಬಗ್ಗೆ ಹೇಗೆ ಗೊತ್ತು? ಎಂದು ಕೇಳಿದ್ದಕ್ಕೆ"ಧ್ರುವ್ ರಾಠಿ ರವರ ವಿಡಿಯೋ ನೋಡಿ ಗೊತ್ತಾಗುತ್ತೆ"ಎಂದು ಹೇಳಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಿರಾಸೆಯಲ್ಲಿ ಬತ್ತಿಹೋಗಿದ್ದ ಜನತೆಗೆ ಧ್ರುವ್ ರಾಟಿ ವಿಡಿಯೋ ಗಳು ತಣ್ಣೀರೆರಚಿದಂತಾಯಿತು.ಸಧ್ಯಕ್ಕೆ ಧ್ರುವ್ ನ 25.05M ಚಂದಾದಾರರು  ಮತ್ತು 41B ಗಂಟೆಗಳು ವೀಕ್ಷಣೆ  ಇದೆ. ಕೇವಲ ಒಬ್ಬನಿಂದ ಏನು ಸಾಧ್ಯ ?ಎಂಬ ಪ್ರಶ್ನೆ ಬರೀ ಪೊಳ್ಳು ಎಂದು ತೋರಿಸಿಕೊಟ್ಟು ಒಬ್ಬನಿಂದಲೂ ಎಲ್ಲವು ಸಾಧ್ಯ ಎಂದು ತೋರಿಸಿಕೊಟ್ಟು ಭಾರತೀಯರಿಗೆ ಒಂದು ಆಶಾಗೋಪುರವಾಗಿ ಧ್ರುವ್ ರಾಠಿ ಮಾರ್ಪಟ್ಟಿದ್ದಾರೆ. ಎಷ್ಟೇ ಹೀಯಾಳಿಸಿದರು, ನೋಯಿಸಿದರು ,ಬ್ಲಾಕ್ ಮೇಲ್ ಮಾಡಿದರು ತನ್ನನ್ನು ಕೊಂದರೂ ಪರವಾಗಿಲ್ಲ ಎಂಬ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ಮುಂದಿಡುತ್ತಿದ್ದ ಧ್ರುವರಾಠಿ ,ನಿಜಕ್ಕೂ ಓರ್ವ ಅಸಾಮಾನ್ಯ ವ್ಯಕ್ತಿ ಎಂದು ಹೇಳಬಹುದು. ಮುಂದೆಯೂ ಇಂತಹ ಹಲವಾರು ಯುವಕರಿಗೆ ಭಾರತ ಮಾತೆಯು ಜನ್ಮ ನೀಡಲಿ ಎಂದು ಬಯಸುತ್ತೇನೆ

                                                                                                                                                      ಹಾಶೀರ್ ಕಟ್ಟತ್ತಾರ್.

 

Related Posts

Leave A Comment

Voting Poll

Get Newsletter