ಹಝ್ರತ್ ಉಮರ್ ಬಿನ್ ಖತ್ತಾಬ್ (ರ);
ಆನೆ ದಂಗೆಯ ಮೂರನೇ ವರ್ಷದಲ್ಲಿ ಮಕ್ಕಾದ ಪ್ರಮುಖ ಖುರೈಶೀ ಕುಟುಂಬದಲ್ಲಿ ಜನಿಸಿದರು. ಇಸ್ಲಾಂ ಸ್ವೀಕರಿಸುವ ಮೊದಲು ಇಸ್ಲಾಮಿನ ತೀವ್ರ ಎದುರಾಳಿಯೂ, ಪ್ರವಾದಿಯ ತೀವ್ರ ಶತ್ರುವೂ ಆಗಿದ್ದರು. ಮುಹಮ್ಮದ್( ಸ) ಹೊಸ ಧರ್ಮದೊಂದಿಗೆ ಬಂದು ಊರಲ್ಲಿ ಭಿನ್ನಾಭಿಪ್ರಾಯವನ್ನು ಮಾಡುತ್ತಾರೆ ಎಂದು ವಿಶ್ವಸಿ ಸಿದ್ಧ ಉಮರ್ (ರ) ಒಮ್ಮೆ ಪ್ರವಾದಿವರ್ಯರನ್ನು ವಧಿಸಬೇಕೆಂಬ ಉದ್ದೇಶದೊಂದಿಗೆ ಖಡ್ಗ ಹಿಡಿದು
ಹೊರಟರು. ದಾರಿ ಮಧ್ಯೆ ಒಬ್ಬ ವ್ಯಕ್ತಿಯನ್ನು ಕಂಡರು :*"ಹಾಗಾದರೆ ನೀವು ಮೊದಲು ಸರಿಪಡಿಸಬೇಕಾದದ್ದು ನಿಮ್ಮ ಸ್ವಂತ ಸಹೋದರಿಯಾದ ಫಾತಿಮಾರನ್ನಾಗಿದೆ ;ಅವರು ಪ್ರವಾದಿ ಮುಹಮ್ಮದ್ ರವರನ್ನು ವಿಶ್ವಸಿ ಸಿದ್ದಾರೆಂದು ಆ ವ್ಯಕ್ತಿ ಹೇಳಿದರು.ಇದನ್ನು ಕೇಳಿದ ತಕ್ಷಣ ಉಮರ್ ಬಿಸಿ ರಕ್ತದೊಂದಿಗೆ ನೇರವಾಗಿ ತನ್ನ ಸಹೋದರಿಯ ಮನೆಗೆ ಹೋದರು ( ತಲುಪಿದರು). ಆ ಸಂದರ್ಭದಲ್ಲಿ ಅವರು ತನ್ನ ಪತಿಯೊಂದಿಗೆ ಕುರುಆನ್ ಪಠಿಸುತ್ತಿದ್ದರು. ಕುರಾನಿನ ಸೂಕ್ತವನ್ನು ಕೇಳಿದ ಉಮರಿನ ಮನಸ್ಸು ಬದಲಾವಣೆಗೊಂಡು ಇಸ್ಲಾಂ ಮತ ಸ್ವೀಕರಿಸಿದರು.
ನಂತರ ದಾರುಲ್ ಅರ್ಖಂ ನಲ್ಲಿ ಪ್ರವಾದಿಯರ ಬಳಿ ಬಂದು ತನ್ನ ಇಸ್ಲಾಮನ್ನು ಪರಸ್ಯವಾಗಿ ಪ್ರಕಟಿಸಿದರು." *ಎರಡು ಉಮರಿನ ಪೈಕಿ ಒಬ್ಬರಿಂದ ನೀನು ಇಸ್ಲಾಮನ್ನು ಶಕ್ತಿ ಪಡಿಸು ಎಂದು ಪ್ರವಾದಿ (ಸ)ರು ಪ್ರಾರ್ಥನೆ ನಡೆಸಿದ ಸಂದರ್ಭದಲ್ಲಾಗಿತ್ತು ಅದು."* ಆದ್ದರಿಂದಲೇ ಉಮರ್ (ರ) ಇಸ್ಲಾಂ ಸ್ವೀ ಕಾರ್ಯವು ಎಲ್ಲರಿಗೂ ಆನೆ ಬಲವನ್ನು ಕೊಟ್ಟಿತು.( ಧೈರ್ಯ ತುಂಬುವಂತಾಯಿತು). ಪ್ರವಾದಿವರ್ಯರನ್ನೂ, ಅವರ ಅನುಯಾಯಿಗಳನ್ನೂ ಕಅಬಾದ ಸಮೀಪಕ್ಕೆ ಕರೆದುಕೊಂಡು ಹೋಗಿ ಇಸ್ಲಾಮಿನ ಸಂದೇಶವನ್ನು ಅಲ್ಲಿ ಪರಸ್ಯವಾಗಿ ಪ್ರಖ್ಯಾಪಿಸಿದರು. ತದನಂತರ, ಅಲ್ಲಿಯೇ ನಿಂತು ಪ್ರಾರ್ಥನೆ ನಡೆಸಿದರು. ಇದನ್ನು ಕಂಡ ಖುರೈಶೀ ನೇತಾರರು ಅದ್ಭುತ ಪಟ್ಟರು. ಉಮರಿನ ಇಸ್ಲಾಂ ಸ್ವೀಕಾರ್ಯವು ಅವರನ್ನು ಸುಸ್ತಾಗಿಸಿತು .ಅಂದಿನಿಂದ ,ಸತ್ಯ ಮತ್ತು ಅಸತ್ಯದ ನಡುವೆ ಬೇರ್ಪಡಿಸಿದವನು ಎಂಬ ಅರ್ಥದಲ್ಲಿ *"ಅಲ್- ಫಾರೂಖ್"* ಎಂಬ ವಿಶೇಷ ನಾಮದಿಂದ ಉಮರ್ ( ರ)ನ್ನು ಗುರುತಿಸಲ್ಪಟ್ಟರು. ಮಕ್ಕಾದಿಂದ ಮದೀನಾಕ್ಕೆ ಎಲ್ಲರೂ ರಹಸ್ಯವಾಗಿ ಯಾತ್ರೆ ಹೊರಟಾಗ, ಉಮರ್ (ರ) ಎಲ್ಲರಿಗೂ ಪ್ರತ್ಯಕ್ಷವಾಗಿ ಕಾಣುವ ರೀತಿಯಲ್ಲಿ ಸವಾಲು ಹಾಕಿ ಕೊಂಡಾಗಿತ್ತು ಹಿಜಿರಾ ನಡೆಸಿದುದು.ಮದೀನಾಕ್ಕೆ ತಲುಪಿದ ನಂತರ ಪ್ರವಾದಿಯವರೊಂದಿಗೆ ಸರ್ವ ಯುದ್ಧಗಳಲ್ಲಿಯೂ ಭಾಗವಹಿಸಿದರು.ಜೀವನ ಪೂರ್ತಿ ಪ್ರವಾದಿಯವರ ಸಹಾಯಿಯಾಗಿಯೂ ,ಸೇವಕ ನಾಗಿಯೂ ನಿಂತರು.
ಉಮರ್ ( ರ) ಇಸ್ಲಾಮಿನ ಹಾದಿಯಲ್ಲಿ ಧೈರ್ಯಶಾಲಿಯೂ,ಕರ್ಮಕುಶಲನೂ ಆಗಿದ್ದರು.ಇಸ್ಲಾಮಿನ ಸಂದೇಶವನ್ನು ಎಂದಿಗೂ ಪರಸ್ಯವಾಗಿ ಘೋಷಿಸುವುದು ಮತ್ತು ಕಾರ್ಯಗತಗೊಳಿಸಬೇಕೆಂದಾಗಿತ್ತು ಅವರ ನಿಲುವು.ಇಸ್ಲಾಮಿನ ಹಾದಿಯಲ್ಲಿ ಅವರು ಯಾರನ್ನೂ ಹೆದರಿಲ್ಲ.ಆದ್ದರಿಂದಲೇ ಅವರು ಶತ್ರುಗಳ ದುಃಖ ಸ್ವಪ್ನವಾಗಿ ಮಾರ್ಪಟ್ಟರು.ಸರಿಯಾದ ನಿರ್ಧಾರಗಳನ್ನು , ನಿಲುವುಗಳನ್ನು ತೆಗೆದುಕೊಳ್ಳುವುದರಲ್ಲಿ ಅವರು ಪರಿಣಿತರಾಗಿದ್ದರು.ಅನೇಕ ಬಾರಿ ಅವರ ನಿರ್ಧಾರಗಳನ್ನು ಅವಲಂಬಿಸಿ ಪರಿಶುದ್ಧ ಕುರಾನ್ ಅವತರಿಸಿದೆ.ಪ್ರವಾದಿವರ್ಯರೂ,ಒಂದನೇ ಖಲೀಫರೂ, ಉಮರ್ ( ರ) ರವರ ನಿರ್ಧಾರಗಳಿಗೆ ಬೆಲೆ ಕೊಡುತ್ತಿದ್ದರು.
ಅಬೂಬಕ್ಕರ್ ಸಿದ್ದೀಕ್ (ರ) ರ ನಂತರ ಎರಡನೇ ಖಲೀಫರಾಗಿ ಉಮರ್ (ರ) ನ್ನು ಆಯ್ಕೆಮಾಡಲಾಯಿತು. ಧೈರ್ಯಶಾಲಿ ಎಂಬುವ ಹಾಗೆ ನೀತಿವಂತ ಆಡಳಿತಗಾರನೆಂದು ಅವರು ಪವಿತ್ರರಾದರು. ಸತ್ಯದ ಖಡ್ಗವಾಗಿನಿಂತ ಅವರು ತನ್ನ ಪ್ರಜೆಗಳ ವಿಷಯಗಳನ್ನು ವಿಚಾರಿಸುವುದು ಮತ್ತು ಅವರ ತೊಂದರೆಗಳಿಗೆ ಅರ್ಹಿತವಾದ ಪರಿಹಾರಗಳನ್ನು ಮಾಡಿಕೊಡುತ್ತಿದ್ದರು.ರಾತ್ರಿ ಸಮಯದಲ್ಲಿ ಪ್ರಜೆಗಳ ನೋವುಗಳನ್ನು ತಿಳಿಯಲು ತನ್ನ ಆಡಳಿತಪ್ರದೇಶಗಳ ಮೂಲಕ ಸಂಚರಿಸುತ್ತಿದ್ದ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವಿಸುತ್ತಿದ್ದರು. ಸಾರ್ವಜನಿಕ ಖಜಾನೆಯಿಂದ ತನ್ನ ಸ್ವಂತ ಉಪಯೋಗಕ್ಕಾಗಿ ಏನನ್ನೂ ಉಪಯೋಗಿಸಲಿಲ್ಲ, ಅಷ್ಟೂ ಶ್ರದ್ಧೆಯಿಂದ ಕಾರ್ಯಗಳನ್ನು ನಡೆಸುತ್ತಿದ್ದರು. ನಿಖರತೆಯೂ, ನ್ಯಾಯದ ಪ್ರಜ್ಞೆಯೂ,ಧಾರ್ಮಿಕ ಕಾರ್ಯಗಳಲ್ಲಿ ಕಠಿಣ ಮನಸ್ಥಿತಿಯಿಂದಿರುವುದು ಉಮರ್ (ರ) ರಾ ಪ್ರತ್ಯೇಕತೆಯಾಗಿತ್ತು.
ಹತ್ತುವರೆ ವರ್ಷ ಆಡಳಿತ ನಡೆಸಿದ ಅವರು ಇಸ್ಲಾಮಿಕ್ ಆಡಳಿತ ಪ್ರದೇಶಗಳನ್ನು ಅಭಿವೃದ್ದಿ ಪಡಿಸಿದರು.ಇರಾನ್, ಇರಾಖ್ ಸಿರಿಯಾ, ಈಜಿಪ್ಟ್ ಇತ್ಯಾದಿ ಸ್ಥಳಗಳನ್ನು ಇಸ್ಲಾಂ ಅಧೀನದಲ್ಲಿ ತಂದರು.ಅರಮನೆಯೋ, ಅಂಗರಕ್ಷಕರೋ ಇಲ್ಲದೆ ಜೀವಿಸಿದ ಅವರಿಗೆ ಸ್ವಂತವಾಗಿ ವಾಸಿಸಲು ಬೇಕಾದ ಒಂದು ಮನೆ ಕೂಡಾ ಇರಲಿಲ್ಲ.ಎಲ್ಲರಿಗೂ ಮಾದರೀ ಯೋಗ್ಯವಾದ ಜೀವನವನ್ನು ನಡೆಸಿದ ಉಮರ್ (ರ) ಹಲವು ಬಾರಿ ಹರಿದು ಚಾಪೆಯ ಮೇಲಾಗಿತ್ತು ಮಲಗುತ್ತಿದ್ದದ್ದು.
ಹಿಜಿರಾ 23ನೇ ವರ್ಷ ದುಲ್ ಹಿಜ್ಜ: ತಿಂಗಳಲ್ಲಿ ಸುಬುಹಿ ನಮಾಝ್ ನಿರ್ವಹಿಸುತ್ತಿರುವಾಗ ಅಬೂ ಲುಹ್ ಲುಹ್ ಎಂಬ ಯಹೂದಿಯು ತನ್ನ ಖಡ್ಗದ ಮೂಲಕ ಬಡಿದು ಗಾಯಗೊಳಿಸಿದನು.ಅದು ಕಾರಣವಾಗಿ ಉಮರ್ (ರ) ಮರಣ ಹೊಂದಿದರು.ಅಬ್ದುರಹ್ಮಾನುಬ್ನು ಔಫ್ (ರ) ನಮಾಝ್ ಪೂರ್ತೀಕರಿಸಲು ನೇತೃತ್ವ ವಹಿಸಿದರು.ತನ್ನ ನಂತರ ಮುಸ್ಲಿಮರ ನಾಯಕರಾಗಿ ನೇತೃತ್ವ ವಹಿಸಲು ಒಬ್ಬರನ್ನು ಆಯ್ಕೆ ಮಾಡಲುಬೇಕಾಗಿ ಆರು ಜನರನ್ನು ನಿಯೋಗಿಸಿದ ನಂತರ ಉಮರ್ (ರ) ಈ ಲೋಕಕ್ಕೆ ವಿದಾಯ ಹೇಳಿದರು.ನಂತರ ಅಬೂಬಕ್ಕರ್ ಸಿದ್ದೀಕ್ (ರ)ರವರ ಸಮಾಧಿಯ ಬಳಿ ದಫನ ಮಾಡಲಾಯಿತು.