ಜ್ಞಾನವ್ಯಾಪಿ ಮಸೀದಿಯ ಮೇಲೆ ಬಿದ್ದಿರುವ ಸಂಘ ಪರಿವಾರದ ಕಣ್ಣುಗಳು

  ಅನ್ಯಾಯವಾದ ತೀರ್ಪಿನ ಮೇರೆಗೆ ಬಾಬರಿ ಭೂಮಿಯನ್ನು ಕೈವಶಪಡಿಸಿದ ನಂತರ ಹಿಂದುತ್ವ ತೀವ್ರವಾದಿಗಳ ಉದ್ಘಾರವಾಗಿತ್ತು" ಕಾಶಿ ಮಥುರ ಬಾಕಿ ಹೈ".ಹಲವಾರು ವರ್ಷಗಳಿಂದ ತಮ್ಮ ರಾಜಕೀಯ ಗತಿ ನಿರ್ಣಯಿಸುತ್ತಿದ್ದ ಬಾಬರಿ ಅದ್ಯಾಯಕ್ಕೆ ಮುಕ್ತಿ ಲಭಿಸಿದಾಗ, ದೇಶದಲ್ಲಿ ಅನ್ಯಾಯದ, ಸೇಡಿನ ಹೊಸ ಬಾಗಿಲುಗಳನ್ನು ತೆರೆದಿಡುವ ಮಹಾಪರಿಶ್ರಮದಲ್ಲಿ ಹಿಂದುತ್ವ ತೀವ್ರವಾದಿಗಳು ನಿರತರಾಗಿದ್ದಾರೆ.

 

ಪ್ರಸಿದ್ಧ ಮೊಘಲ್ ಚಕ್ರವರ್ತಿ ಔರಂಗಜೇಬ್ ಉತ್ತರ ಪ್ರದೇಶದ ಕಾಶಿಯಲ್ಲಿ ನಿರ್ಮಿಸಿದ ಜ್ಞಾನವ್ಯಾಪಿ ಮಸೀದಿಯ ಮೇಲಾಗಿದೆ ಸಂಘ ಪರಿವಾರ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಣ್ಣು ಬಿದ್ದಿರುವುದು.2000 ವರ್ಷ ಹಿಂದೆ ರಾಜ ವಿಕ್ರಮಾದಿತ್ಯ ನಿರ್ಮಿಸಿದ ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂಸಗೊಳಿಸಿ ನಿರ್ಮಿಸಿದ ಮಸೀದಿ ಎನ್ನುವುದು ಇವರ ವಾದ.ಮಸೀದಿ ನೆಲೆ ನಿಂತಿರುವುದು ಹಿಂದೂ ಸಮುದಾಯ ವಿಶುದ್ಧತೆಯಿಂದ ಕಾಣುವ ಕಾಶಿ ದೇವಾಲಯದ ಹತ್ತಿರ.

 

ಅಧಿಕಾರವಿಲ್ಲದ ಕಾಲದಲ್ಲೂ ಹಲವಾರು ಕಟ್ಟುಕಥೆಗಳನ್ನು ಪಸರಿಸಿ ತಮ್ಮ ಅವಶ್ಯಕತೆಯನ್ನು ಅಹೋರಾತಿ ಪರಿಶ್ರಮಿಸಿ ತಮ್ಮ ಗುರಿ ಸಾಧಿಸುತ್ತಿದ್ದ ಈ ಹಿಂದುತ್ವವಾದಿಗಳು ಅಧಿಕಾರ ಉಪಯೋಗಿಸಿ ಇದನ್ನು ಹೇಗೆ ನಿಭಾಯಿಸಬಹುದೆಂದು ಚಿಂತನಾತೀತ.

 

ಜ್ಞಾನ ವ್ಯಾಪ್ತಿಯು ಬಾಬರಿಯ ಅದೇ ಗತಿಯಲ್ಲಿ ಸಾಗಿದರೆ, ಭಾರತದ ಮತೇತರ ಆತ್ಮಕ್ಕೆ ಉಂಟಾಗುವ ಆಘಾತ ಭೀತಿದಾಯಕ. ಕಳೆದ ವರ್ಷಗಳಿಂದ ನಾವು ಕೇಳುತ್ತಿರುವುದು ಕೇವಲ ಅರಾಜಕತೆಯ, ವಿವರಗಳಾಗಿವೆ. ಇವೆಲ್ಲವೂ ಕೇಂದ್ರ ಸರಕಾರದ ಅನುಮೋದನೆಯಿಂದ ನಡೆಯುತ್ತಿರುವುದೆಂದು ಚಿಂತಿಸುವಾಗ ಬೆಚ್ಚಿ ಬೀಳಿಸುತ್ತದೆ.

 

 

ವಾರಣಾಸಿ ನ್ಯಾಯಾಲಯದ ವಿಧಿ

ಜ್ಞಾನವ್ಯಾಪಿ ಮಸೀದಿ ವಾರ್ತೆಗಳಲ್ಲಿ ಸದ್ದು ಮಾಡಲಿಕ್ಕಿರುವ ಕಾರಣ ವಕೀಲನಾದ ವಿಜಯಶಂಕರ್ ರಸ್ತೋಗಿ ಮತ್ತು ಬೇರೆ ಮೂವರು ಮಸೀದಿಗೆ ವಿರುದ್ಧವಾಗಿ ನೀಡಿದ ನಿಯಮ ವ್ಯವಹಾರದಲ್ಲಿ ನ್ಯಾಯಾಲಯ ತೆಗೆದ ನಿಲುವು.  1669ರಲ್ಲಿ ಔರಂಗಜೇಬಿನ ಆಜ್ಞೆ ಪ್ರಕಾರ ಶಿವನ ದೇವಾಲಯವನ್ನು ದ್ವಂಸಗೊಳಿಸಿದ ನಂತರವಾಗಿದೆ ಮಸೀದಿ ನಿರ್ಮಿಸಿದ್ದು, ಇಲ್ಲಿ 12 ಜ್ಯೋತಿರ್ಲಿಂಗವಿದೆ. ಆದ್ದರಿಂದ ಭೂಮಿ ಹಿಂದಿರುಗಿಸಬೇಕೆಂಬುವುದು ಇವರ ಅವಶ್ಯಕತೆ.

ಮಸೀದಿಯ ಒಡೆತನವನ್ನು ಅಂಗೀಕರಿಸಲು ಬೇಕಾದ ಪುರಾವೆ(ರೆವೆನ್ಯೂ) ಕಂದಾಯ ರೇಖೆಗಳನ್ನು ಮಸೀದಿ ಕಮಿಟಿ ನ್ಯಾಯಾಲಯಕ್ಕೆ ಸಮರ್ಪಿಸಿದ್ದರೂ, ಈ ಕೇಸಿನಲ್ಲಿ ಪುರಾವೆಯಾಗಿ ಸ್ವೀಕರಿಸಲು ಅಪರ್ಯಾಪ್ತವೆಂದು ತಳ್ಳಿ ಹಾಕಿತು. ಎರಡು ಕಡೆಯಿಂದ ಕ್ಲಪ್ತವಾದ ಪುರಾವೆಗಳನ್ನು ಹಾಜರುಪಡಿಸಲು ಸಾಧ್ಯವಾಗದಿರುವುದರಿಂದ, ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ, ಮಸೀದಿಯಲ್ಲಿ ಯಾವುದಾದರೂ ಆರಾಧ್ಯಲಯದ ಅವಿಶೇಷವಿದೆಯೇ ಎಂದು ಅನ್ವೇಷಿಸಲು ವರಣಾಸಿ ಸಿವಿಲ್ ನ್ಯಾಯಾಲಯ ಆಜ್ಞೆ ನೀಡಿತು. ಸ್ವಾಭಾವಿಕವಾಗಿ ಆಜ್ಞೆ ಪಾಲಿಸಬೇಕಾದದ್ದು ಕೇಂದ್ರದ ಕೆಳಗಿರುವ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆಗಿದೆ. ವಿಶ್ವಾಸ ಯೋಗ್ಯತೆ ನಷ್ಟದೊಂದಿಗೆ ಈ ಸ್ಥಾಪನೆಗೆ ನಿಯಂತ್ರಿತವಾಗಿ ಮಸೀದಿಗೆ ಹೋಗಲು ಸ್ವಾತಂತ್ರ್ಯ ಸಿಕ್ಕಿದ್ದು, ಕಳ್ಳನ ಕೈಗೆ ಕೀಲಿ ಕೊಟ್ಟ ಹಾಗೆಯಾಯಿತು."

 

 

ಪೂಜಾ  ಸ್ಥಳಗಳ ಕಾಯ್ದೆ 1991

ಮಸೀದಿಯಲ್ಲಿ ದೇವಾಲಯದ ಅವಶಿಷ್ಟವಿದೆಯೇ ಎಂದು ಅನ್ವೇಷಿಸಲಿರುವ ವಾರಣಾಸಿ ನ್ಯಾಯಾಲಯದ ವಿಧಿ ಕೇವಲ ವಾಸ್ತವಿಕತೆ ತಿಳಿಯಲು ಎಂದು ಭಾವಿಸುವುದು ಅಸಾಧ್ಯ. ಬಾಬರಿಯ ದಾರಿಗಿರುವ ಶ್ರಮಗಳೆಂದೇ ತಿಳಿಯಲು ಸಾಧ್ಯ. ದೆಹಲಿಯ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಎಂಬುವವರು ಸುಪ್ರೀಂ ಕೋರ್ಟಿನಲ್ಲಿ ಔಚಿತ್ಯವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದಕ್ಕೆ 1991ರ ‘ಪೂಜಾ ಸ್ಥಳಗಳ ಕಾಯ್ದೆ’ ಯ (Place of Worship Act) ಕೋರ್ಟು ನೀಡಿದ ತೀರ್ಪು ವಿರುದ್ಧವಾಗಿದೆ.

 

 ಈ ನಿಯಮ ಪ್ರಕಾರ 1947 ಆಗಸ್ಟ್ 15 ರಂದು ಆರಾಧನಾಲಯಗಳು ಇದ್ದ ಸ್ಥಿತಿಯಿಂದ ಮಾರ್ಪಾಡು ತರಲು ಸಾಧ್ಯವಿಲ್ಲ, ಬಾಬರಿ ಮಸೀದಿ ಪ್ರಸ್ತುತ ನಿಯಮದ ಹೊರಗಿತ್ತು ಎಂಬುವುದು ಶ್ರದ್ಧೆ ನೀಡಬೇಕು. ನಿಯಮ ಹೀಗಿರುವಾಗ ನ್ಯಾಯಾಲಯದ ತೀರ್ಪಿನ ಹಿಂದಿನ ಮರ್ಮವೇನು?ವಿಶ್ವಾಸಿಗಳ ಮನಸ್ಸಿನಲ್ಲಿ ಅವಿಶ್ವಾಸದ ಕರಿನೆರಳನ್ನು ಹಾಕುವ ಇಂತಹ ತೀರ್ಪು ಯಾರ ಆಸಕ್ತಿಯನ್ನು ಸಂರಕ್ಷಿಸಲು? ಎಂಬ ಪ್ರಶ್ನೆಗಳ ಉತ್ತರ ಸುವ್ಯಕ್ತ.

 

                                                                                                                                   ಹಾಶೀರ್ ಕಟ್ಟತ್ತಾರ್

Related Posts

Leave A Comment

Voting Poll

Get Newsletter