ಕುರಾನ್: ಜ್ಞಾನದ ಇಸ್ಲಾಮಿಕ್ ಮಾರ್ಗ
     " ಇದು ನಿನ್ನ ಪ್ರಭುವಿನೆಡೆಗೆ ಕೊಂಡೊಯ್ಯುವ ಸರಿಯಾದ ಮಾರ್ಗವಾಗಿದೆ ಉಪದೇಶ ಸ್ವೀಕರಿಸುವ ಜನರಿಗೆ ನಾವು ದೃಷ್ಟಾಂತವನ್ನು ವಿವರಿಸಿ ಕೊಟ್ಟಿದ್ದೇವೆ".(6:126)
        "ಮಾತುಗಳನ್ನು ಲಕ್ಷ್ಯಗೊಟ್ಟು ಆಲಿಸಿ ಅದರಲ್ಲಿ ಉತ್ತಮವಾದುದನ್ನು ಅವರು  ಅನುಸರಿಸುವ ವರಾಗಿದ್ದಾರೆ. ಅಲ್ಲಾಹನ ಮಾರ್ಗದರ್ಶನ ಪಡೆದವರು ಅವರೇ ಆಗಿದ್ದಾರೆ.  ಅವರೇ ವಿವೇಕಶಾಲಿ ಗಳು."( ನೀನು ಅವರಿಗೆ ಸಂತೋಷ ವಾರ್ತೆ ತಿಳಿಸು)39:18
          ಸಾಮಾನ್ಯ ಜೀವನದಲ್ಲಿ ಅತ್ಯಲ್ಪ ವಾಗಿರುವುದು ಮತ್ತು ಅಸಾಧಾರಣವಾದ ಕೆಲವು ಕಾರ್ಯಗಳ ಕುರಿತು ಓದುಗರನ್ನು ಚಿಂತನೆಗೆ ಒಳಪಡಿಸುವುದು ಆಗಿದೆ ಈ ಬರಹದ ಮುಖ್ಯ ಉದ್ದೇಶ. ಆದ್ದರಿಂದಲೇ ತಾವು ಇದುವರೆಗೂ ಪರಿಪೂರ್ಣವೆಂದು ಮನವರಿಕೆ ಮಾಡಿದ ಎಲ್ಲಾ ವಸ್ತುಗಳ ಕುರಿತು ಪೂರ್ವಗ್ರಹಗಳನ್ನು ಒಂದು ನಿಮಿಷಕ್ಕೆ ಬದಲಾವಣೆ ಮಾಡಬೇಕಾಗಿದೆ.
          ಏಕೆಂದರೆ ನಾವು ಒಂದು ವಸ್ತುವನ್ನು ಪೂರ್ವಭಾವಿ ಕಲ್ಪನೆಯೊಂದಿಗೆ ಸಂಪರ್ಕಿಸಿದಾಗ ಅದು ಆರೋಗ್ಯಕರ ನಿರ್ಧಾರಕ್ಕೆ ತಲುಪಲು  ಅಸಾಧ್ಯ ಎಂಬುದು ವಾಸ್ತವವಾಗಿದೆ. ಯಾವುದಾದರೂ ಒಂದು ಕಾರ್ಯವನ್ನು ಉತ್ತಮವಾಗಿ ಕಾಣಬೇಕೆಂದು ಬಯಸುವವರಿಗೆ ಅದು ಯಾವಾಗಲೂ ಒಳ್ಳೆಯದಾಗಿರುತ್ತದೆ. ಅದೇ ಸಂದರ್ಭದಲ್ಲಿ, ಯಾರಾದರೊಬ್ಬರು ಒಂದು ವಿಷಯವನ್ನು ಕೆಟ್ಟದಾಗಿ ಕಾಣಲು ಯೋಚಿಸಿದರೆ ಅದು ಅವನಿಗೆ ಯಾವಾಗಲೂ ಕೆಟ್ಟದಾಗಿರುತ್ತದೆ.
          ಪೂರ್ವ ವಿಧಿಗಳು ಮತ್ತು ಪೂರ್ವಗ್ರಹಗಳು ವ್ಯಕ್ತಿಗಳಲ್ಲಿ ವಿರಳವಾಗಿ ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ತನ್ನ ಜೀವನದ ಆರಂಭದಿಂದಲೇ ಅವರು ಸಮಾಜದಿಂದ ಅಸಂಖ್ಯಾತ ಪೂರ್ವಗ್ರಹಗಳಿಗೆ ಒಳಗಾಗಿರುತ್ತಾರೆ. ಕುಟುಂಬ ಮತ್ತು ಆಪ್ತ ಸಂಬಂಧಿಗಳು ಅವರ ಉದ್ದೇಶಗಳನ್ನು ಇಲ್ಲಿ ನಿರ್ಧರಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೆಲವು ವಸ್ತುಗಳ ಮೇಲೆ ಮನುಷ್ಯನ ಸ್ಥಾನವನ್ನು ನಿರ್ಧರಿಸುವಲ್ಲಿ ಮಾಧ್ಯಮಗಳು ದೊಡ್ಡ ಪಾತ್ರವನ್ನು ವಹಿಸಿವೆ. ಪತ್ರಿಕೆಗಳು ಮತ್ತು ದೂರದರ್ಶನಗಳು ಸತ್ಯಕ್ಕಿಂತ ಸುಳ್ಳನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ. ಅಂತಹ ಪೂರ್ವಭಾವಿ ಗಳನ್ನು ಸಮಾಜದಲ್ಲಿ ನುಂಗಿದಾಗ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಹುಪಾಲು ಭಾಗವು ಕಳೆದು ಹೋಗುತ್ತದೆ. ಅವರು ತಮ್ಮ ಸ್ವಂತ ಆಲೋಚನೆಯಲ್ಲಿ ಕೆಲಸ ಮಾಡುವ ಬದಲು ಇತರರನ್ನು ಅವಲಂಬಿಸುತ್ತಾರೆ .ಇಲ್ಲಿ ಇತರರ ಪೂರ್ವಗ್ರಹಗಳು ಅವರ ಸ್ವಂತ ನಡವಳಿಕೆಯನ್ನು ನಿರ್ಧರಿಸುವ ಪರಿಸ್ಥಿತಿ ಬರುತ್ತದೆ. ಅವರು ನಿಜವೆಂದು ಕಾಣುವುದು ಯಾವುದೋ ಅದನ್ನು ಮಾತ್ರ ಸತ್ಯವಾಗಿ ನೋಡಬೇಕಾಗಿದೆ. ಇದಕ್ಕಿಂತ ಹೆಚ್ಚಾಗಿ ,ವಿಭಿನ್ನ ಸಾಂಸ್ಕೃತಿಕ ಪರಂಪರೆಯ ವಿಭಿನ್ನ ಸಮಾಜಗಳ ವಾಸ್ತವಿಕ ವಿಶ್ಲೇಷಣೆಯ ಆಧಾರವನ್ನು ಪರಿಶೀಲಿಸಿದಾಗ ಮೌಲ್ಯಮಾಪನದ ಮಾನದಂಡವನ್ನು ಪ್ರಶ್ನಿಸದೆ ಅನುಸರಿಸಲು ಸಾಧ್ಯವಾಗುವುದಿಲ್ಲ ಎಂಬುದು ಇಲ್ಲಿ ಮನವರಿಕೆಯಾಗುತ್ತದೆ. ಅದೇ ಸಂದರ್ಭದಲ್ಲಿ, ಇಂದು ನಿರಾಕರಣೆ ಎಂದು ನಾವು ನೋಡುವುದನ್ನು ಬಹುಶಹ ನಾಳೆ ಒಳ್ಳೆಯ ಮಾನದಂಡವೇ ಎಂದು ಪರಿಗಣಿಸಲು ಸಾಧ್ಯತೆ ಇದೆ. ನರಭಕ್ಷಕ ರಿಗೆ ಸಂಬಂಧಿಸಿದಂತೆ ಮಾನವ ಮಾಂಸವನ್ನು ತಿನ್ನುವುದು ಅಪ್ರಸ್ತುತವಾದ ಕಾರ್ಯವಾಗಿದೆ. ನಾಸಿ ಜರ್ಮನಿ ಮತ್ತು ಫ್ಯಾಸಿಸ್ಟ್ ಸಮಾಜಗಳಲ್ಲಿ ಅನುಯಾಯಿಗಳು ನಿರ್ಧಯರನ್ನು ಒಪ್ಪಿಕೊಳ್ಳಬೇಕು ಎಂಬುದು ಒಂದು ಸ್ಥಾಪಿತ ಸತ್ಯವಾಗಿದೆ. ಇದು ಕೆಲವು ಉದಾಹರಣೆಗಳು ಮಾತ್ರವಾಗಿದೆ. ಅದೇ ಸಮಯದಲ್ಲಿ, ಚಿಂತಕರ ಮುಖ್ಯ ಸಾಮರ್ಥ್ಯವೆಂದರೆ ಸಮಾಜದ ಸ್ಥಿತಿಗತಿಗಳ ಬಗ್ಗೆ ಮುಕ್ತವಾಗಿ ಯೋಚಿಸಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿಗಳು ಸಮಾಜವು ಪ್ರಸ್ತಾಪಿಸುವ "ಮೌಲ್ಯಗಳ" ಬಗ್ಗೆ ಅವನು ತೀವ್ರವಾಗಿ ತಿಳಿದಿರುತ್ತಾನೆ.
             ವಿಶೇಷವಾಗಿ ಇಂದು ಧರ್ಮವು  ಸಮೂಹಗಳ ಮಧ್ಯೆ ವ್ಯಾಪಕವಾದ ಪೂರ್ವಗ್ರಹಗಳನ್ನು ಹೊಂದಿರುವ ವಿಷಯವಾಗಿದೆ. ಇಷ್ಟೆಲ್ಲಾ ಪೂರ್ವಗ್ರಹಗಳು ವರ್ತಿಸುವುದರ ಕಾರಣ ಮಾಧ್ಯಮಗಳ ಪ್ರಭಾವ ಮಾತ್ರವಾಗಿದೆ.
           ಜನರು ಇಂತಹ ಪೂರ್ವಗ್ರಹಗಳ ಪರಿಣಾಮವಾಗಿ ಧರ್ಮವನ್ನು ಪರಿಗಣಿಸದ ರೀತಿಯಲ್ಲಿ  ಅಪ್ರಸಕ್ತವಾಗಿ   ಜನರ ಡೆಯಲ್ಲಿ ದೂರ ಸರಿದು ನಿಲ್ಲಬೇಕಾದ ಒಂದು ವ್ಯವಸ್ಥೆಯಾಗಿ ಮಾರ್ಪಟ್ಟಿದೆ.( ಬದಲಾವಣೆಗೊಂಡಿದೆ). ಧರ್ಮಕ್ಕೆ ಅಂತಹ ವ್ಯಾಖ್ಯಾನವನ್ನು ನೀಡುವವರು ಅದನ್ನು ಎಂದಿಗೂ  ಪ್ರಾಮಾಣಿಕವಾಗಿ ಆಜ್ಞಾಪಿಸು ವುದಿಲ್ಲ. ಅವರಿಗೆ ಸಂಬಂಧಪಟ್ಟಂತೆ, ಧರ್ಮವು ಅವರೆದೆಯಲ್ಲಿ ಅಪ್ರಸ್ತುತ ವಾಗಲು ಕಾರಣ ಇದರಿಂದ ಯಾವುದೇ ಒಂದು ಪ್ರಯೋಜನವಿಲ್ಲ ಎಂಬುದಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಧರ್ಮವು ಮನುಷ್ಯನಿಗೆ ಅನೇಕ ನಿರ್ಬಂಧಗಳನ್ನು ವಿಧಿಸುತ್ತವೆ. ಆದರೆ ಧರ್ಮವು ಜೀವನದಲ್ಲಿ ಅಪ್ರಸ್ತುತವಾಗಿದೆ ಎಂದು ಹೇಳುವ ಅದೇ ದೃಷ್ಟಿಕೋನವನ್ನು ಹೊಂದಿರುವವರು ತಾನು ಮುಸ್ಲಿಂ ಎಂದು ಹೇಳಿಕೊಳ್ಳುತ್ತಾರೆ.
           ಸತ್ಯವೇನೆಂದರೆ, ಅಂತಹ ಜನರು ತನ್ನ ಜೀವನದಲ್ಲಿ ಎಂದಿಗೂ ಧರ್ಮದ ಕುರಿತು ಆಳವಾಗಿ (ಗಂಭೀರವಾಗಿ) ಯೋಚಿಸಲಿಲ್ಲ ಎಂಬುದಾಗಿದೆ. ಅದೇ ರೀತಿ ಅವರು ಜೀವನದ ಉದ್ದೇಶವೇನು ಎಂಬುದನ್ನು ,ಧರ್ಮದ ಅವಶ್ಯಕತೆ ಏನೆಂಬುದನ್ನು, ತಾನು ಏತಕ್ಕಾಗಿ ಜೀವಿಸುವುದು  ಎಂಬುದನ್ನೂ ಅವರು ಚಿಂತಿಸಿ ರಲಾರರು. ಅವರಿಗೆ ಸಂಬಂಧಪಟ್ಟಂತೆ, ಧರ್ಮವು ವಯಸ್ಸಾದವರಿಗೆ ಮಾತ್ರ ಸಂಬಂಧಪಟ್ಟ ಕೆಲವು ಕಾರ್ಯಗಳಿಗೆ ಹಾಗೂ ಕೆಲವು ನೀರಸ ಆಧ್ಯಾತ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾದದ್ದು ಎಂಬುದಾಗಿದೆ. ರಜಾದಿನಗಳಲ್ಲಿ ರುವ  ಆಚರಣೆಗಳಿಗೂ (ಸಂಭ್ರಮದ ದಿನಗಳಿಗೆ) ಅಲ್ಲದಿದ್ದರೆ ಅವರ ಹತ್ತಿರದ ಸಂಬಂಧಿಗಳು ಮರಣ ಹೊಂದಿದಾಗ ಮಾತ್ರ ಮಸೀದಿಗೆ ಹೋಗಿ  ಅಭ್ಯಾಸವಿರುವ ವರಾಗಿದ್ದಾರೆ, ಅವರು ಹೇಳುವುದು ಕೆಲವೊಂದು ಆರಾಧನೆಗಳು ಅಗತ್ಯವಿರುವಿರುವುದೆಂದೂ, ಮಿಕ್ಕವೆಲ್ಲವೂ  ಸಹ ಪ್ರಾಚೀನವಾಗಿದೆ. ಅವರು ಧರ್ಮವನ್ನು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ, ಆದರೆ ನಾವು ಈಗಾಗಲೇ ಹೇಳಿದಂತೆ ಅವರು ಧರ್ಮದಿಂದ ದೂರವಿರಲು ಪ್ರಯತ್ನಿಸುತ್ತಾರೆ.
          ಧರ್ಮದ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಉದ್ಭವಿಸಲು ಕಾರಣ ಯಾವುದೇ  ತನಿಖೆ ಇಲ್ಲದೆ ಸಮಾಜದಿಂದ ಪೂರ್ವಗ್ರಹಗಳನ್ನು  ಸ್ವೀಕರಿಸಿದ್ದಾಗಿದೆ. ಮನುಷ್ಯನಿಗೆ ಸಂಬಂಧಪಟ್ಟಂತೆ ಜೀವನದ ವಿವಿಧ ಮಜಲುಗಳ ಕುರಿತು ಆಳವಾಗಿ  ಚಿಂತಿಸುವುದು ಆಗಿದೆ.
          ಪರಿಶುದ್ಧ ಕುರಾನ್ ಚಿಂತನೆಯ ಪ್ರಾಧಾನ್ಯತೆಯನ್ನು ಹಲವು ಸ್ಥಳಗಳಲ್ಲಿ ಉಲ್ಲೇಖಿಸಿದೆ. ಅದರಲ್ಲಿ ಕೆಲವು ಸೂಕ್ತಗಳು ಹೀಗಿವೆ: *"(ನೆಬಿಯವರೇ) ಕೇಳಿರಿ: ನಿಮಗೆ ಗೊತ್ತಿದ್ದರೆ( ಹೇಳಿರಿ) ಭೂಮಿ ಮತ್ತು ಅದರಲ್ಲಿರುವುದೆಲ್ಲ ಯಾರದ್ದು? 'ಅಲ್ಲಾಹನದು ' ಎಂದು ಅವರು ಉತ್ತರಿಸುವರು ನೀನು ಹೇಳು: ' ನೀವೇನು ಚಿಂತಿಸುವುದಿಲ್ಲ ವೇ?"*'.(23:84_85)
 *"ದಿಟವಾಗಿಯೂ ನಾವು ಕುರಾನನ್ನು( ಮನವರಿಕೆ ಮಾಡಲಿಕ್ಕೆ)  ನೆನಪಿಟ್ಟುಕೊಳ್ಳಲು ಸುಲಭಗೊಳಿಸಿ ದ್ದೇವೆ ಆದರೆ ಉಪದೇಶವನ್ನು ಗ್ರಾಹ್ಯ ಮಾಡುವ ಯಾವನಾದರೂ ಇದ್ದಾನೆಯೇ?"*(54:17)
 *"ನಿಮ್ಮ ಪ್ರಭುವಾದ ಅಲ್ಲಾಹನು ಅವನೇ ಆಗಿದ್ದಾನೆ. ಅವನನ್ನು ನೀವು ಆರಾಧಿಸಿರಿ ಏನು, ನೀವು ಉಪದೇಶಗಳನ್ನು ಸ್ವೀಕರಿಸುವುದಿಲ್ಲವೇ....?"*(10:3)
  *"ಸೃಷ್ಟಿಸುವವನೂ ಸೃಷ್ಟಿ ಸದವನೂ ಸಮಾನರಾಗುವುದು ಹೇಗೆ? ನೀವು ಮನವರಿಕೆ ಮಾಡುವುದಿಲ್ಲವೇ....?*"(16:17)
          ಸಮಾಜದಲ್ಲಿ ಧರ್ಮದ ಕುರಿತು ಸ್ವತಂತ್ರವಾಗಿ ಚಿಂತಿಸಲು ಸಾಧ್ಯವಾಗದವರಿಗೆ ಎರಡು ದೊಡ್ಡ ತಪ್ಪುಗಳು ಸಂಭವಿಸಿದೆ. ಧರ್ಮದ ನೈಜ ಗುರಿಯನ್ನು ಮನವರಿಕೆ ಮಾಡದೆ ಹೋಗಿದೆ ಎಂಬುದಾಗಿದೆ ಒಂದನೆಯದು, ಮತ್ತು ಅವರು ಧರ್ಮವನ್ನು ಬದಲಾವಣೆ ಮಾಡಲು ಪ್ರಯತ್ನಿಸಿದ ಕಾರಣವಾಗಿ ಅವರಿಗೆ ಅಲ್ಲಾಹನ ಕುರಿತು ತಿಳಿಯದೆ ಹೋಯಿತು.
          ಧರ್ಮವು ಮನುಷ್ಯನನ್ನು ಸಂಘರ್ಷಗಳಿಗೆ ಮತ್ತು ಸಂಬಂಧಗಳಿಗೆ ಹೊಂದಿಕೊಳ್ಳುವ ಹಾಗೂ ಜವಾಬ್ದಾರಿಗಳಲ್ಲಿ ಸಂಕೋಚ ವಾದ ಒಂದು ತಪ್ಪು ತಿಳುವಳಿಕೆಯಾಗಿದೆ ಇದು ಎರಡನೆಯ ತಪ್ಪಾಗಿದೆ.
           ಈ ಒಂದನೇಯ ದೋಷವನ್ನು ಸರಿಪಡಿಸಿ, ಸೃಷ್ಟಿಕರ್ತನನ್ನು ಮತ್ತು ಅವನ ಗುಣವಾಚಕಗಳನ್ನು ತಿಳಿದರೆ ನೈಸರ್ಗಿಕವಾಗಿ ಅವನನ್ನು ಧರ್ಮದಿಂದ ದೂರವಿರಿಸುವ ಮೂಢನಂಬಿಕೆಗಳು ಸ್ಥಳಾಂತರಿಸಲಾಗುತ್ತದೆ.  ಒಂದನೆಯ ದೋಷ ಸರಿಯಾಗು ವಾಗ ನೈಸರ್ಗಿಕವಾಗಿ ಎರಡನೇಯ ದೋಷವನ್ನು ಸರಿಪಡಿಸಲು ಕಾರಣವಾಗುತ್ತದೆ. ಹಾಗೆಯೇ, ಸುಳ್ಳಾದ ಧಾರ್ಮಿಕ ರೂಪದಿಂದ ಸರಿಯಾದ ಧರ್ಮವನ್ನು ಆಯ್ಕೆಮಾಡುವ ಪ್ರತಿಭೆ ಇರುತ್ತದೆ. ಅಂತಿಮವಾಗಿ ಧರ್ಮವು ಸಂತೋಷದಾಯಕ ಮತ್ತು ಆರಾಮದಾಯಕ ಜೀವನ ಆದರ್ಶವೂ ಮತ್ತು ಅಲ್ಲಿ ಯಾಗಿದೆ ಸಂಪೂರ್ಣ ಜೀವನ ಸ್ವಾತಂತ್ರ್ಯವೆಂದು ಅವರು ಮನವರಿಕೆ ಮಾಡುತ್ತಾರೆ.
          ಸಂಕ್ಷಿಪ್ತವಾಗಿ, ನಾವು ಜೀವಿಸುತ್ತಿರುವ ಸಮಾಜದಲ್ಲಿ ಧರ್ಮದ ಕುರಿತು ವ್ಯಾಪಕವಾದ ಪರಿಕಲ್ಪನೆಗಳನ್ನು ಮುಂದುವರಿಸುತ್ತದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ ಧರ್ಮವನ್ನು ಸಮೀಪಿಸುತ್ತಿರುವಾಗ ಜನರ ಭಾಷಣಗಳಿಗಿಂತ ಪರಿಶುದ್ಧ ಕುರಾನ್ಅನ್ನು ಮಾನದಂಡವಾಗಿ ಪರಿಗಣಿಸಬೇಕಾಗಿದೆ .ಈ ಪರಿಶುದ್ಧವಾದ ಸೂಕ್ತದ ಮೂಲಕ  ಕುರಾನ್ ಸೂಚಿಸುವುದು, "ಭೂಮಿಯಲ್ಲಿರುವ ಬಹುಸಂಖ್ಯಾತರ ಪಾದಗಳು" ನಮ್ಮನ್ನು ಎಂದಿಗೂ ಅಲ್ಲಾಹನ ಬಳಿಗೆ ತಲುಪಿಸು ವುದಿಲ್ಲ.
 *"ಭೂಮಿಯಲ್ಲಿರುವ ಬಹುಸಂಖ್ಯಾತರನ್ನು ನೀನು ಅನುಸರಿಸಿದರೆ ಅಲ್ಲಾಹನ ಮಾರ್ಗದಿಂದ ಅವರು ನಿನ್ನನ್ನು ವಿಮುಖಗೊಳಿಸುವರು . ಅವರು ಊಹಾಪೋಹ ಹೊರತು ಬೇರೇನನ್ನೂ ಅನುಸರಿಸುವುದಿಲ್ಲ. ಕಪೋಲಕಲ್ಪಿತ ಮಾತುಗಳನ್ನು ಮಾತ್ರವೇ ಅವರು ಆಡುತ್ತಾರೆ.*"(6:116)
          ಒಬ್ಬನು ಅಂಧಸಮುದಾಯ ಅನುಕರಣೆಯನ್ನು ನಿಲ್ಲಿಸಿ ಅದೇ ವೇಳೆ, ಸ್ವಂತವಾಗಿ ಯೋಚಿಸಿ ಕೆಲಸ ಮಾಡುತ್ತಿದ್ದರೆ ಈ ಸೂಕ್ತದಲ್ಲಿ ಉಲ್ಲೇಖಿಸಲಾದದ್ಧು ಅದು ಖಂಡಿತ ಸತ್ಯವೆಂದು ಮನವರಿಕೆಯಾಗುತ್ತದೆ. ಹಾಗೆ ಅವನು ಸಮಾಜದ ಹೆಚ್ಚುವರಿ ಜನರು ಸಾಲುಗಟ್ಟಿ ನಿಂತ ವೇದಿಕೆಯಿಂದ ಇನ್ನೊಂದಕ್ಕೆ ಬದಲಾಗುತ್ತಾನೆ. ಈ ಹೊಸಹಾದಿ ಕಗ್ಗತ್ತಲೆಯನ್ನು  ಅವನಿಂದ ದೂರವಾಗಿಸುತ್ತದೆ ಮತ್ತು ಧರ್ಮದ ಆಶೀರ್ವಾದ ಪರಿಪೂರ್ಣವಾದ ಚಿಂತನೆಯನ್ನು ಅವನ ಮುಂದೆ  ಕೊಂಡೊಯ್ಯುತ್ತದೆ.
            ಇಲ್ಲಿ ಒಂದು ಕಾರ್ಯವನ್ನು ಗಮನಿಸಬೇಕು. ಧರ್ಮ ಎಂದರೆ ಇಲ್ಲಿ ಅದರ ಅರ್ಥ ಇಸ್ಲಾಂ ಎನ್ನುವುದಾಗಿದೆ. *"ಖಂಡಿತವಾಗಿಯೂ ಅಲ್ಲಾಹನ ಬಳಿ ನಿಜವಾದ ಧರ್ಮವೆಂದರೆ ಅದು ಪರಿಶುದ್ಧವಾದ ಇಸ್ಲಾಂ ಮಾತ್ರವಾಗಿದೆ"* ಎಂದು ವಿಶುದ್ಧ ಕುರಾನಿನಲ್ಲಿ ವ್ಯಕ್ತಪಡಿಸಿ ಹೇಳಲಾಗಿದೆ.(3:19)

Related Posts

Leave A Comment

Voting Poll

Get Newsletter