ನಮ್ಮ ವಿಶ್ವಾಸ ನಮ್ಮನ್ನು ದಬ್ಬಾಳಿಕೆ ಮಾಡುವುದಿಲ್ಲ
     ಬ್ರಿಟೆನ್ ಶಾಲೆಗಳಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಹಿಜಾಬ್  ನಿರೋದಿಸಿದ ಓಫ್ಸ್ಟೆಡ್ ಡಿಪಾರ್ಟಮೆಂಟಿನ ವಿರುದ್ಧವಾಗಿ ನಡೆದ ಶಾಲಾ ಶಿಕ್ಷಕರ ಒಕ್ಕೂಟಕ ಸಮ್ಮೇಳನದಲ್ಲಿ ಆಧಿಶಕ್ತವಾಗಿ ನಿಲವು ವ್ಯಕ್ತಪಡಿಸಿದ ಫಲಸ್ತೀನಿನ ಅಧ್ಯಾಪಕಿ ಲತೀಫ ಅಬೂತಕ್ರರವರ ಪ್ರಭಾಷಣವನ್ನು ಸಾಮಾಜಿಕ ಮಾಧ್ಯಮಗಳು ಕೈಗೆತ್ತಿಕೊಂಡಿದೆ. ಬ್ರಿಟನಿನ ವಿದ್ಯಾಭ್ಯಾಸ ಸ್ಥಾಪನೆಗಳನ್ನು ನಿರೀಕ್ಷಿಸುವ ನಿಲುವುಗಳನ್ನು ಮೇಲ್ವಿಚಾರಣೆ ಮಾಡುವ ದೀಪರ್ಟ್ಮೆಂಟಾಗಿದೆ ಒಫ್ಸ್ಟೆಡ್. ಹಿಜಾಬ್ ನಿರೋಧಿಸಿದ ಒಫ್ಸ್ಟೆಡಿನ ವಿರುದ್ಧವಾಗಿ ಅದಿಶಕ್ತವಾದ ಪ್ರತಿಭಟನೆಗಳು ಬ್ರಿಟನ್ ನಲ್ಲಿ ಉಯರುತ್ತಲೇ ಇದೆ. ಆ ವೇಳೆ ಲತೀಫಾರವರ ಭಾಷಣವೂ ವ್ಯಾಪಕವಾಗುವುದು. ಭಾಷಣದ ಪೂರ್ಣ ರೂಪ:
        ನಾನು ಲತೀಫಾ ಅಬೂತಕ್ರ; ಪ್ರಥಮ ಬಾರಿ ನಾನು ವೇದಿಕೆ ಮೇಲೆ. ಲಂಡನ್ ವಿಭಾಗದ ಅಂಗವಾಗಿ  ಪ್ರತಿನಿಧಿಯಾಗಿ ನಾನು ಬಂದಿರುವುದು.ಅತ್ಯುನ್ನತನಾದ ಇಲಾಹನ ನಾಮದೊಂದಿಗೆ ನನ್ನ ಭಾಷಣ ಪ್ರಾರಂಭಿಸುತ್ತೇನೆ -ಅಸ್ಸಲಾಮು ಅಲೈಕುಂ.
ಕೆಲವು ಪತ್ರಕರ್ತರು ಉಪಯೋಗಿಸುವಂತಹ "ಮಸ್ಕುಲಾರ್ ಲಿಬಾರಲಿಸಮ್" ಎಂಬ ಪದವೂ ಇಸ್ಲಾಮೋಫೋಬಿಯ ಹಾಗೂ ವರ್ಣಭೇದದ ಸಮಾನಾರ್ತಕವಾಗಿದೆ. ಇಸ್ಲಾಮಿನ ಮೇಲಿರುವ ಶತ್ರುತ್ವ‌‌‍‍ ಕಾರಣ ಅವರು ಹಿಜಾಬನ್ನು ಹೆಣ್ಮಕ್ಕಳಿಗೆ ಶಾಲೆಗಳಲ್ಲಿ ನಿರೋಧಿಸುವುದು; ಈ ಹಿಜಾಬ್ ಹೆಣ್ಣು ಮಕ್ಕಳನ್ನು ಲಿಂಗ ಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂಬುವುದೇ ಅವರ ತಿಳುವಳಿಕೆ;ಇಸ್ಲಾಮಿನ ಚಿಹ್ನೆಯಾದ ಹಿಜಾಬನ್ನು ಹೆಣ್ಮಕ್ಕಳಿಗೆ ಧರಿಸಲು ನಿಷೇಧಿಸಿದ ಒಫ್ಸ್ಟೆಡಿಗೆ ನಾಚಿಕೆಯಿಲ್ಲವೇ ಎಂಬುವುದೇ ನನ್ನ ಪ್ರಶ್ನೆ?; ಈ ನಿರ್ಬಂಧವು ಬೇರೆ ಧರ್ಮಚಿಹ್ನೆಗಳ ವಿರುದ್ಧವಿಲ್ಲ; ಹಿಜಾಬ್ ನಿರ್ಬಂಧಕ್ಕೆ ಹಲವು ಆಯಾಮಗಳಿವೆ: "ಬ್ರಿಟೀಶ್ ಜನರು ಹಾಗೂ ಇ. ಡೀ. ಎಸ್. ಬಿ. ಎಂ. ಪಿ.:ಹಾಗೂ ಇತರ ಕೋಮವಾದ ಸಂಘಟನೆಗಳನ್ನು ಕರೆದು ಹೇಳುವುದು ಇಸ್ಲಾಂ ಸ್ತ್ರೀಯರನ್ನು ದಬ್ಬಾಳಿಕೆ ಮಾಡುತ್ತಿದೆ ಮತ್ತು ಸ್ತ್ರೀಯರು ಹಿಜಾಬ್ ಧರಿಸುವುದು ಪುರುಷರ ಅಡಿಯಲ್ಲಾಗಿದೆ ಎಂದು. ಅಂತಹ ಸ್ತ್ರೀಯರನ್ನು ರಕ್ಷಿಸುವ ಜವಾಬ್ದಾರಿ ಬ್ರಿಟೀಷ್ ಸರ್ಕಾರಕ್ಕೆ ಇದೆ ಎಂದು ಅವರು ಹೇಳುತ್ತಾರೆ";
ಇಂತಹ ಕೆಟ್ಟ ತಿಳುವಳಿಕೆಯನ್ನು ನಾವು ಪೂರ್ಣವಾಗಿಯೂ ತಿರಸ್ಕರಿಸುತ್ತೇವೆ.ನಿಮ್ಮೆಲ್ಲರ ಮುಂದೆ ನಾನು ಹೇಳಲು ಬಯಸುವುದೇನೆಂದರೆ"ನಮ್ಮ ವಿಶ್ವಾಸ ನಮ್ಮನ್ನು ದಬ್ಬಾಳಿಕೆ ಮಾಡುವುದಿಲ್ಲ,, ಇಸ್ಲಾಮನ್ನು ಸಂಕುಚಿತವಾಗಿ ಚಿಂತಿಸಬಾರದು;ಮುಸಲ್ಮಾನರೆಡೆಯಲ್ಲಿ ಹಿಜಾಬ್ ಧರಿಸುವವರು ಇರಬಹುದು,ಇಲ್ಲದವರು  ಇರಬಹುದು ;ಅದು  ಅವರ ನಂಬಿಕೆ;   ಇಸ್ಲಾಮಿನ ಪರಿಶುದ್ಧ ಗ್ರಂಥವಾದ ಖುರ್ಆನಿನಲ್ಲಿ ಸ್ಪಷ್ಟವಾಗಿದೆ "ಧರ್ಮದಲ್ಲಿ ಯಾವುದೇ ಬಲತ್ಕಾರವಿಲ್ಲ; 1400 ವರ್ಷಗಳ ಮೊದಲು ಮಾನವ ಹಕ್ಕುಗಳನ್ನು ಘೋಷಿಸುವಾಗ ನಿರ್ಧಾರಗಳನ್ನು ತೆಗೆಯುವ ಅಧಿಕಾರ ನನ್ನ ಧರ್ಮ ನನಗೆ ನೀಡಿದೆ.
ಈ ಸಮ್ಮೇಳನದಲ್ಲಿ ನಾನು ಒಂದು ಸತ್ಯವನ್ನು ಮುನ್ನಿಡಲು ಬಯಸುತ್ತೇನೆ "ನಾನು ಹಿಜಾಬ್ ಧರಿಸಬೇಕೆಂದು ತಂದೆಗೆ ಆಗ್ರಹವಿಲ್ಲ; ಇದು ನನ್ನಿಷ್ಟಪ್ರಕಾರವಾಗಿದೆ. ವಿಶ್ವಾಸಿಗರಿಗೆ ವಿಶ್ವಾಸವನ್ನು ಬಳಸಲು ಚಲಾಯಿಸಲಿಕ್ಕಿರುವ ಸ್ವತಂತ್ರವಿರಬೇಕು. ಸಿಕ್ಹರು ಟರ್ಭನ್ ಧರಿಸುತ್ತಾರೆ,ಯಹೂದಿಗಳು ಕಿಬೆ ಧರಿಸುತ್ತಾರೆ, ಕ್ರಿಶ್ಚನಿಯರು ಕ್ರಿಸ್ತನ ಶಿಲುಬೆಗೇರಿಸುವಿಕೆಯನ್ನು ಧರಿಸುತ್ತಾರೆ; ಹಿಜಾಬ್ ಮೂಲಕ ನನಗೂ ನನ್ನಂತಹ ಮಹಿಳೆಯರಿಗೂ ಸ್ವತಃ ತೀರ್ಮಾನಗಳನ್ನು ನಾವು ನಿರ್ಧರಿಸಬಹುದು ಎಂದು ತಿಳಿಯಲು ಅಧಿಕಾರ ನೀಡುತ್ತದೆ. ಹಾಗೂ ಇದು ಮೂಲಕ ಲೈಂಗಿಕ ಧಾರಣೆಗಳನ್ನು ಮೀರಲು ಇದು ಸಹಾಯಕರವಾಗಿದೆ. ಶಾಲೆಯಲ್ಲಿದ್ದಾಗಲೇ ನನಗೆ ನನ್ನ ಮನಸ್ಸಿನಲ್ಲಿ ಬರುವಂತಹ ಕೆಟ್ಟ ಯೋಚನೆಗಳನ್ನು ನಿಯಂತ್ರಿಸಲು ಇದು ಕಾರಣವಾಗಿತ್ತು. ಪ್ರಪಂಚವನ್ನು ಅತಿ ಸುಂದರವಾಗಿ ಕಾಣಲು ನನಗೆ ಇದು ಮೂಲಕ ಸಾದ್ಯವಾಗಿದೆ. ಗರ್ಭಧಾರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಎನ್.ಯೂ.ಟಿ. ಸ್ತ್ರೀಯರಿಗೆ ಅಧಿಕಾರ ನೀಡುತ್ತಿದೆಯಾದರೂ; ಈ ಸಮ್ಮೇಳನವೂ ಹಿಜಾಬ್ ಧರಿಸುವ ನನ್ನ ಹಕ್ಕನ್ನು ಬೆಂಬಲಿಸಬೇಕೆಂದು ನಾನು ಹೇಳುತ್ತೇನೆ. ನನ್ನ ವಿಶ್ವಾಸದ ಪ್ರಕಾರ ನನ್ನ ಜೀವನದಲ್ಲಿ ಚಲಾಯಿಸಲು ಸಾಧ್ಯವಾಯಿತೆಂದು ಎಲ್ಲರಿಗೂ ತಿಳಿದಿರಬಹುದು. ಮುಸ್ಲಿಂ ಸ್ತ್ರೀಯರ ಮೇಲಿರುವ ಅಕ್ರಮ ಬ್ರಿಟೀಷ್ ಕಾಲದಲ್ಲಿಯೇ ದೊಡ್ಡದಾಗಿತ್ತು, ಏಕೆಂದರೆ ಮಹಿಳೆಯರನ್ನು ಅಕ್ರಮಿಸುವುದು ಬಹಳ ಸುಲಭವಲ್ಲವೇ.
ಓಫ್ಸ್ಟೆಡಿನ  ಈ ಒಂದು ನಿರ್ಧಾರವನ್ನು ನಿಶ್ಚಯವಾಗಿಯೂ ತಿರಸ್ಕರಿಸಬೇಕು. ಅದು ಮುಸಲ್ಮಾನರೆದುರಾಗಿ ನಡೆಸುವ ಅಕ್ರಮವಾಗಿ ವೀಕ್ಷಿಸಬೇಕಾಗಿದೆ; ಕಳೆದ ವರ್ಷ ನಾನು ಹಾಂಪ್ಟನ್ ಕೋರ್ಟಿಗೆ ಪ್ರವಾಸ ಹೋಗಿದ್ದೆ, ಅಲ್ಲಿ ಒಬ್ಬ ವ್ಯಕ್ತಿ ನನ್ನನ್ನು ಯಾವುದೇ ಕಾರಣವಿಲ್ಲದೆ ಭಯೋತ್ಪಾದಕಿ ಎಂದು ಕರೆದನು, ಆಗ ನಾನು ಅದಕ್ಕೆ ಬಲಿಪಶುವಾಗಿರದ ಕಾರಣ ಅವನಲ್ಲಿ ವಾದಿಸಿದೆ.
ಈ ಸಮ್ಮೇಳನದಲ್ಲಿ ನಾವು ಅರ್ಥಮಾಡಬೇಕಾಗಿರುವುದು ಇಸ್ಲಾಮೋಫೋಬಿಯವೆಂಬುವುದು ಮುಸ್ಲಿಮೇತರರಿಗೂ ಶಕ್ತವಾಗಿ ಭಾಧಿಸುವ ಕಾರ್ಯವಾಗಿದೆ; ಅದಕ್ಕಾಗಿ ನಾವು ಇದನ್ನು ವಿರೋಧಿಸದಿದ್ದರೆ ಫ್ರಾನ್ಸ್‌ನ ಜನರಂತೆಯೇ ಆಗಬಹುದು; ಅಲ್ಲಿ ಒಂದು ಸ್ತ್ರೀ ವಿಶ್ವಾಸವವೋ ಶಿಕ್ಷಣವೋ ಆರಿಸಿಕೊಳ್ಳಲು ಒತ್ತಾಯಿಸಲ್ಪಟ್ಟಿದ್ದಾಳೆ,ಒಂದಾದರೆ ತನ್ನ ವಿಶ್ವಾಸ ಅಥವಾ ಸಾರ್ವಜನಿಕವಾಗಿ ಕೆಲಸ ಮಾಡುವುದು,ಇದರಲ್ಲೊಂದನ್ನೇ ಆರಿಸಿಕೊಳ್ಳಲಾಗುವ ತೊಂದರೆಯಲ್ಲಿ ಮುಲುಗುತ್ತಿದ್ದಾರೆ. ಸಮುದ್ರದ ಗಾಳಿಯೂ ಪಡೆಯಲು ವಿಶ್ವಾಸವನ್ನು ದೂರವಿಡಬೇಕಾದ ಸ್ಥಿತಿಗತಿಯಾಗಿದೆ ಅಲ್ಲಿನದ್ದು.
ನನ್ನ ಮಾತನ್ನು  ವಿರಾಮಗೊಳಿಸುತ್ತೇನೆ; ನಾನು ಈ ದೇಶಕ್ಕೆ 8ನೇ ವಯಸ್ಸಿನಲ್ಲಿ ಬಂದಿರುವುದು;1948ರಲ್ಲಿ ಫಲಸ್ತೀನಿನಿಂದ ಓಡಿಸಲ್ಪಟ್ಟವರಲ್ಲಿ ಒಬ್ಬಳು ನಾನು; ಈ ರಾಷ್ಟ್ರದಲ್ಲಿ ನನ್ನಾಗ್ರಹ ಸಲ್ಲಿತು,ಯುನಿವರ್ಸಿಟಿಗಳಲ್ಲಿ ಕಲಿಯಲು ಹಾಗೂ ಬಿರುದುಪಡೆದ ಒಂದು ಶಿಕ್ಷಕಿಯಾಗಳು ಯಾವುದೇ ಕಷ್ಟವಿಲ್ಲದೆ ಸಾಧ್ಯವಾಯಿತು. ಫಲಸ್ತೀನರು ಸೇರಿದಂತೆ‌ ಇತರ ಎಲ್ಲಾ ಸಂಕಷ್ಟದಲ್ಲಿರುವವರಿಗೆ ಶಕ್ತವಾದ ಬೆಂಬಲ ನೀಡಿದ‌ ಈ ಒಕ್ಕೂಟಕ್ಕೆ ನಾನು ಹೃದಯ ತುಂಬವ ಧನ್ಯವಾದ ಹೇಳಿ ಕೊನೆಗೊಳಿಸುತ್ತೇನೆ.

Related Posts

Leave A Comment

Voting Poll

Get Newsletter