ಏರ್ವಾಡಿ: ನೊಂದವರ ಸ್ವರ್ಗದಲ್ಲಿ

ತ್ತನಂತಿಟ್ಟ ಕ್ಯಾಂಪಿನ ಬಳಿಕ ಮುಂದಿನ ದಾರಿ ಯಾವುದು ಎಂದು ಚಿಂತಿಸುತ್ತಿರುವಾಗ ಊರಿನ ಮಸೀದಿಯ ಇಮಾಮ್ ಮತ್ತು ಅಧ್ಯಾಪಕರಾದ ಶಿಹಾಬುದ್ದೀನ್ ಯಾತ್ರಾ ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಿದರು. ಕುಟುಂಬಿಕರೊಂದಿಗೆ ಸಮಾಲೋಚನೆ ನಡೆಸಿದ ತಕ್ಷಣ ರಿಜಿಸ್ಟರ್ ಮಾಡಿ ಏರ್ವಾಡಿಗೆ ತೆರಳಲು ಉತ್ಸಾಹದಿಂದ ಕಾದು ಕುಳಿತುಕೊಂಡೆ . ನಮ್ಮ ಊರಿನಲ್ಲಿ ಇಂದು ಕೂಡ ತಡೆಯಿಲ್ಲದೆ ಲಭಿಸುವ ಪೆರ್ನಾಲ್ ಹದಿಯ . ಇಂದು ನಮ್ಮ ಚಿಕ್ಕ ಆಗ್ರಹವನ್ನ ನೆರವೇರಿಸುವುದರಲ್ಲಿ ಎಷ್ಟು ಸಹಾಯಕವೆಂದು ಅರಿತುಕೊಂಡದ್ದು ಪ್ರಸ್ತುತದಲ್ಲಾಗಿದೆ. 

       

ಬಕ್ರೀದ್ ಹಬ್ಬದಂದು ನಾವು ಯಾತ್ರೆ ಆರಂಭಿಸಿದೆವು. ಕಾಲೇಜ್ ಜೀವನದಲ್ಲಿ ನಷ್ಟ ಹೊಂದಿದ ಊರು ಮತ್ತು ಊರಿನ ಜನರ ಸಂಬಂಧವನ್ನು ಪುನರ್ ಗೂಡಿಸುವ ಗುರಿಯು ನನಗಿತ್ತು. ನಾಟುಕಲ್ಲು , ಚಡಯಂಗಾಳ್ , ಮನ್ನೆಕುಲ , ನಾಗೂರು ಹಾಗೂ ಮುತ್ತು ಪೇಟೆ ಮುಂತಾದ ಪ್ರದೇಶಗಳಲ್ಲಿ ಕಾಲುತುಳಿದಿದ್ದವು . ಜೀವಿಸುವ ವಿಶ್ವಾಸಿಗಳು ಆತ್ಮ ಶಾಂತಿಯನ್ನು ಹುಡುಕಿ ಬರುವ ಕಿನಾರೆಗಳೆಂದು ಅವುಗಳನ್ನು ಕರೆಯಬಹುದು. ಅಲ್ಲಾಹುವಿನ ಇಷ್ಟದಾಸರು ಜನರನ್ನು ಕಾದು ಚಂದನದ ಸುಗಂಧ ಸೂಸುತ ಗುಂಬಜ್ ಗಳ ಕೆಳಗಡೆ ಅಂತಿಮ ವಿಶ್ರಾಂತಿ ಕೈಗೊಳ್ಳುತ್ತಿದ್ದಾರೆ . 

 

ಮುಸ್ಸಂಜೆಯ ವೇಳೆ ಕತ್ತಲು ಅಂತರಿಕ್ಷವನ್ನು ಆವರಿಸುತ್ತಿದ್ದ ಸಮಯದಲ್ಲಿ ನಾವು ಏರ್ವಾಡಿ ತಲುಪಿದೆವು. ಕಿಕ್ಕೇರಿದ ಜಾಗವಾದರೂ ನಿಶಬ್ದವಾದ ರಸ್ತೆಗಳು. ಇಂಗ್ಲಿಷ್ ಮಲಯಾಳಂ,ತಮಿಳು, ಭಾಷೆಗಳಲ್ಲಿ ತೂಗುತ್ತಿರುವ ಲಾಡ್ಜ್ ಗಳ ಫಲಕಗಳು. ವಿವಿಧ ಪ್ರದೇಶದಿಂದ ಬಸ್ಸಿನಲ್ಲಿ ಬಂದು ಇಳಿಯುತ್ತಿರುವ ಯಾತ್ರಾರ್ಥಿಗಳು. ಮದರಂಗಿ ಹಚ್ಚಿದ ಗಡ್ಡವಿರುವ ಅಮೀರರ ಹಿಂದೆ ಅವರು ಯಾವುದೋ ಮಾಯ ಲೋಕಕ್ಕೆ ಹೋಗುವಂತೆ ನಡೆಯುತ್ತಿದ್ದಾರೆ . ಏರ್ವಾಡಿ ಅದ್ಭುತ ಪ್ರದೇಶವಾಗಿದೆ. ದಕ್ಷಿಣ ಭಾರತದ ಹೃದಯ ಭಾಗದಲ್ಲಿ ವಿಶ್ವಾಸಿಗಳ ಸಮಸ್ಯೆಗಳು ಶಮನವಾಗುವ ಪರಿಹಾರ ಕೇಂದ್ರ . 

 

ರಾತ್ರಿಯ ವಿಶ್ರಾಂತಿ ಗೋಸ್ಕರ ರೂಮ್ ಆರಿಸಿದೆ. ಸಾಮಾಗ್ರಿಗಳನ್ನು ರೂಮಿನಲ್ಲಿಟ್ಟು ವಸ್ತ್ರ ಬದಲಿಸಿ ಹೊರಗೆ ಇಳಿದೆ. ಮದ್ರಸದ ವಿದ್ಯಾರ್ಥಿಗಳೊಂದಿಗೆ ಮಗರಿಬ್ ಮತ್ತು ಇಶಾ ಅನ್ನು ಮುಂದಿಸಿ ಕಸ್ರ್ ಮಾಡಿದೆವು, ಯಾತ್ರಿಕನಿಗೆ ಸೃಷ್ಟಿಕರ್ತ ಕೊಟ್ಟ ಎಲ್ಲ ನೆಪಗಳನ್ನು ಉಪಯೋಗಿಸಿಕೊಂಡು ದರ್ಗಾವನ್ನು ಸುತ್ತಿಕಾಣುವುದು ನಂತರದ ಕೆಲಸ. ನಮ್ಮೆದುರು ಏರ್ವಾಡಿ ದರ್ಗಾ ತಲೆ ಎತ್ತಿ ನಿಂತಿದೆ. ಅದರ ಒಳಗೆ ಬಾದುಷಾ ತಂಗಳ್ ರವರ ಎದುರು ವಿಧಿಯ ಭಾರವನ್ನು ಸಹಿಸಲಾಗದೆ ತಲೆತಗ್ಗಿಸಿ ನಿಂತಿರುವ ದೊಡ್ಡ ಜನಸಂದಣಿ. ಅವರು ಬೇಸರದಿಂದ ಮತ್ತು ದುಃಖದಿಂದ ದರ್ಗಾ ವನ್ನು ಸುತ್ತುತ್ತಿದ್ದಾರೆ . ಅವರಲ್ಲಿ ಅಧಿಕವೂ ರೋಗಿಗಳು. ಸೃಷ್ಟಿಕರ್ತನ ಇಷ್ಟ ದಾಸರಾದ ಇಬ್ರಾಹಿಂ ಬಾದುಷಾ ತಂಗಳ ರವರೆದುರು ಕರುಳೊಡೆದು ಅವರು ಪ್ರಾರ್ಥಿಸುತ್ತಿದ್ದಾರೆ. ಆ ತುಂಬಿದ ಕಣ್ಣುಗಳಲ್ಲಿ ಎಲ್ಲೋ ಪ್ರತೀಕ್ಷೆಯ ಹೊಳಪು ಕಾಣಲು ತೊಡಗಿದೆ. ದರ್ಗಾವನ್ನು ಬಹುದೈವ ಆರಾಧನೆಯ ಕೇಂದ್ರವಾಗಿ ಕಾಣುವವರು ಇದನ್ನೆಲ್ಲ ಕಂಡಿದ್ದರೆ ಎಂದು ನಾನು ಆಗ್ರಹಿಸಿದೆ . 

 

ದರ್ಗಾ ವನ್ನು 7 ಸಲ ಸುತ್ತುವುದು ವಾಡಿಕೆ. ಆಂತರಿಕವಾದ ಎಲ್ಲಾ ಪೈಶಾಚಿಕ ತೊಂದರೆಗಳು ಹೊರಗೆ ಬರುತ್ತವೆ . ಸ್ವಲ್ಪ ಧೈರ್ಯ ಮಾಡಿ ಆ ಗುಂಪಿನಲ್ಲಿ ನಾನೂ ಭಾಗಿಯಾದೆ . 1...2... 3... ಅಲ್ ಹಮ್ದುಲಿಲ್ಲಾ , ಯಾವುದೇ ತೊಂದರೆಯಿಲ್ಲದೆ ಏಳು ಪೂರ್ಣಗೊಂಡಿತು . ನನ್ನೊಂದಿಗೆ ಚಲಿಸುತ್ತಿದ್ದ ಹಲವರು ಸುತ್ತುತ್ತಿರುವ ಮಧ್ಯದಲ್ಲಿ ಮದಿಭ್ರಮೆ ಭಾದಿಸಿದವರ ಹಾಗೆ ಅಟ್ಟಹಾಸಗೆಯ್ಯಲು, ಬೀಳಲು ತೊಡಗಿದ್ದರು. ವಾತವರಣ ಪೂರ್ಣವಾಗಿ ಬದಲಾದ ಹಾಗೆ, ಮನುಷ್ಯನು ಎಷ್ಟೊಂದು ಅಶಕ್ತನು. 

 

ದರ್ಗಾದಿಂದ ನಾವು ಬೀದಿಗಿಳಿದೆವು. ಆಡುಗಳು ಹಸುಗಳು ಮನುಷ್ಯರೆಲ್ಲರೂ ಇಲ್ಲಿ ಬೀದಿಗಳಲ್ಲಿ ಒಂದೇ ತರಹ. ಹಲವು ತಸ್ಬಿ ಮಾಲೆಯನ್ನು ಹಿಡಿದಿರುವ ಕೈಗಳು, ದಿಕೃ ಜಪಿಸಿ ದಣಿದ ತುಟಿಗಳು. ನಮ್ಮ ಲಾಡ್ಜ್ ನ ಹತ್ತಿರವಿರುವ ಗೂಡಂಗಡಿಯಿಂದ ಗೋಳಿ ಸೋಡಾ ಕುಡಿದು ರೂಮ್ ಸೇರಿದೆ. ಚಾಪೆಯಲ್ಲಿ ಹೊರಳಾಡಿ ಕೊನೆಗೂ ಮಲಗಿದೆ .

ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ಸುಬಹೀ ನಮಾಜ್ ನಂತರ ಹೊರಗಿಳಿದಾಗ ಮಳೆ ಬರುತ್ತಿತ್ತು. ಬಿಸಿಲಿನ ಬೇಗೆಗೆ ಒಣಗಿ ಹೋದ ಮನಗಳಿಗೆ ಮುದ ನೀಡಿದ ಶಕ್ತವಾದ ಮಳೆ. ಮಳೆಯ ಜೊತೆಗೆ ಗುಡುಗು ಸಹಿತ ಮಿಂಚು ಇತ್ತು. ಮಳೆ ನಿಂತಾಗ ನಾವು ಬಾದುಷಾ ತಂಗಳ್ರವರನ್ನು ಝಿಯಾರತ್ ಮಾಡಿದೆವು. 

 

ವ್ಯಾಪಾರಿಗಳು ಮಕಾಮಿನ ಹಲವು ಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ. ಆದರೂ ಝಿಯಾರತಿಗೆ ಕನಿಷ್ಠಪಕ್ಷ ಕೂಡ ತೊಂದರೆ ಆಗುತ್ತಿರಲಿಲ್ಲ. ಫಾತಿಹ ಯಾಸೀನ್ ಪಾರಾಯಣ ಮಾಡಿದೆವು. ನಾನು ಸುತ್ತಲೊಮ್ಮೆ ಕಣ್ಣೋಡಿಸಿದೆ . ವಿವಿಧ ರೂಪದಲ್ಲಿ ಓಡಾಡುವ ಜನರು, ಸುತ್ತಮುತ್ತಲಿನ ಕಾರ್ಯಗಳನ್ನು, ತನ್ನ ಪಾಡನ್ನು ಅರಿಯದ ಹಾಗೆ ನಡೆಯುತ್ತಿದ್ದಾರೆ, ಬೊಬ್ಬೆ ಹಾಕುತ್ತಿದ್ದಾರೆ , ಸಂತೋಷಿಸುತ್ತಿದ್ದಾರೆ, ಪ್ರತಿಕ್ಷೆಯಲ್ಲಿ ಕಾಯುತ್ತಿರುವರು, ಅವರ ಜೀವಿತಾವಧಿಯ ಸಮಸ್ಯೆಗಳು ಬಗೆಹರಿಯಬಹುದೆಂಬ ನಿಶ್ಚಯದಲ್ಲಿ ಮರಳಿನ ಮೇಲೆ ಅನಾಮತ್ತಾಗಿ ಮಲಗಿದವರು ಹಾಗೆ ಸುವಿಶಾಲವಾದ ಆ ವೈವಿಧ್ಯತೆ . 

 

ನಾವಲ್ಲಿಂದ ಹೊರಗಿಳಿದೆವು. ಚಹಾ ಕುಡಿದು ಬೀದಿ ಸುತ್ತಿದೆವು. ಇನ್ನು ಸ್ವಲ್ಪ ಮಖಾಮ್ ಗಳನ್ನು ಸಂದರ್ಶಿಸಲು ಬಾಕಿಯಿದೆ . ಕಾಟು ಪಳ್ಳಿ, ಏಳನೋಕಾ, ಮಾಯಂಕುಳ, ಕೀಳಕ್ಕರೆ ಎಂಬ ಪ್ರದೇಶಗಳು ನಮಗೋಸ್ಕರ ಕಾದು ಕುಳಿತಿದೆ. ಮಧುರೆಯ ಹುತಾತ್ಮರಿಗೆ ಆಸರೆಯಾಗಿ ತಲೆಯತ್ತಿ ನಿಂತಿರುವ ಸಿಖಂದರ ಶಿಖರವಿದೆ. ಅದನ್ನು ನೋಡಬೇಕೆಂಬ ಹಂಬಲದಿಂದ , ಬಾದಷಾ ತಂಗಳಿಗೆ ಸಲಾಂ ಹೇಳಿ ಏರ್ವಾಡಿಗೂ ಹುತಾತ್ಮರಿಗೂ ಶುಭವಿದಾಯ ಹೇಳಿದೆವು . 

Related Posts

Leave A Comment

Voting Poll

Get Newsletter