ಜಮಲ್ ಯುದ್ಧ: ಚರಿತ್ರೆಯ ಮಜಲುಗಳಲ್ಲಿ

   

    ಉಸ್ಮಾನ್ (ರ) ರವರ ಮರಣದ ನಂತರ ತ್ವಲ್ಹಾ, ಜುಬೇರ್, ಅಲಿ (ರ) ರವರಲ್ಲಿ ಜನರು ಖಲೀಫರಾಗಲು ಮನವಿ ಮಾಡಿದರು. ಖಿಲಾಫತಿಗೆ ಯಾರೂ ತಯಾರಿರಲಿಲ್ಲ. ನಂತರ ಮದೀನಾಗೆ ತೆರಳಿ ಅಲಿ(ರ) ರವರಲ್ಲಿ ಖಿಲಾಫತ್ ಸ್ವೀಕರಿಸಲು ಕೇಳಿಕೊಂಡಾಗ ಕೊನೆಗೂ ಒಪ್ಪಿಕೊಂಡರು. ಮಸ್ಜಿದುನ್ನಬವಿಯಲ್ಲಿ ಎಲ್ಲಾ ವಿಶ್ವಾಸಿಗಳನ್ನು ಆಹ್ವಾನಿಸಿ ಬಹಿರಂಗವಾಗಿ ಅಲಿ (ರ) ರವರ ಖಿಲಾಫತನ್ನು ಪ್ರಖ್ಯಾಪಿಸಲಾಯಿತು. ಕೆಲವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸ್ವಹಾಬಿಗಳು ಅಲಿ(ರ) ರವರನ್ನು ಬೈಅತ್ ಮಾಡಿದರು. ಅಲಿ(ರ)ರವರ ಆಡಳಿತದ ಪ್ರಾರಂಭ ಕಾಲವೂ ಸಮಸ್ಯೆಗಳಿಂದ ತುಂಬಿತ್ತು.

 ಅಲಿ(ರ) ರವರು ಖಲೀಫರಾದಾಗ ಅವರ ಪ್ರಥಮ ಗುರಿಯೂ ಉಸ್ಮಾನ್(ರ) ರವರ ಹಂತಕನನ್ನು ಕಂಡುಹಿಡಿಯುದಾಗಿತ್ತು. ಸಾವಿರದಷ್ಟು ಶತ್ರುಗಳು ಆ ಕಾಲದಲ್ಲಿದ್ದುದ್ದರಿಂದ ನಿಜವಾದ ಕೊಲೆಗಾರನನ್ನು ಕಂಡುಹಿಡಿಯೂದು ಕಷ್ಟವಾಗಿತ್ತು. ಅದು ಮಾತ್ರವಲ್ಲದೆ ಆ ಸಾವಿರ ಜನರ ಹೆಸರು ಅವ್ಯಕ್ತವಾದುದ್ದರಿಂದ ಅಪರಾಧಿಗಳನ್ನು ಕಂಡುಹಿಡಿಯುವುದು ಬಹಳ ಕಷ್ಟವಾಗಿತ್ತು. ಅವರಲ್ಲಿ ಕೆಲವರು ಮದೀನದಲ್ಲೇ ಇದ್ದರು. ಅದು ಮಾತ್ರವಲ್ಲದೆ ಇನ್ನು ಕೆಲವರು ಅಲಿ (ರ) ರವರ ಸೈನ್ಯದಲ್ಲಿ ನುಸುಳಿಕೊಂಡಿದ್ದರು. ಈ ಸಮಸ್ಯೆಗಳ ಕುರಿತು ಅರಿವಿಲ್ಲದೆ ಸ್ವಲ್ಪ ಸ್ವಹಾಬಿಗಳು ಅಲಿ(ರ) ರವರ ವಿರುದ್ಧ ತಿರುಗಿದರು. ಆದಷ್ಟು ಬೇಗನೆ ಉಸ್ಮಾನ್(ರ) ರವರ ಹಂತಕನನ್ನು ಕಂಡುಹಿಡಿದು ಶಿಕ್ಷಿಸಬೇಕೆಂದು ಅಲಿ(ರ) ರವರನ್ನು ಒತ್ತಾಯಿಸಿದರು. ಇವರಲ್ಲಿ ನೆಬಿ(ಸ) ರವರ ಪ್ರಿಯ ಪತ್ನಿ ಆಯಿಷಾ (ರ) ರಂತಹ ಪ್ರಮುಖರಿದ್ದರು.

ಅವರು ಆಯಿಷಾ (ರ) ರವರ ಅಧೀನದಲ್ಲಿ ಒಂದು ಸೈನ್ಯವನ್ನು ರೂಪಿಸಿ ಬಸ್ವರಾ ತಲುಪಿದರು. ತಕ್ಷಣ ಅಲಿ(ರ) ರವರ ಸೈನ್ಯವು ಬಸ್ವರಾಗೆ ತಲುಪಿತು. ಎರಡು ಸೈನ್ಯಗಳೆಡೆಯಲ್ಲಿ ಚರ್ಚೆ ನಡೆಯಿತು. ಆಯಿಷಾ(ರ)ರವರು ಮತ್ತು ಅಲಿ(ರ) ರವರು ತಮ್ಮ ದುಃಖ ದುಮ್ಮಾನವನ್ನು ಪರಸ್ಪರ ಹಂಚಿಕೊಂಡರು. ವಿಷಯವನ್ನು ತಿಳಿದ ಎರಡು ಸೈನ್ಯಗಳು  ಹಿಂತಿರುಗಳು ತೀರ್ಮಾನಿಸಿತು. ಆದರೆ ಗುಂಪಿನಲ್ಲಿದ್ದ ದುಷ್ಕರ್ಮಿಗಳು ಇದರಿಂದ ತೃಪ್ತರಾಗಿರಲಿಲ್ಲ. ದುಷ್ಕರ್ಮಿಗಳು ಎರಡು ಸೈನ್ಯಗಳಲ್ಲಿ ಅಕ್ರಮಣ ನಡೆಸಿದರು. ವಿರುದ್ಧ ಪಕ್ಷದವರು  ಅಕ್ರಮಿಸಿರಬಹುದೆಂಬ ತಪ್ಪು ತಿಳುವಳಿಕೆಯಿಂದ ಆ ಎರಡು ಸೈನ್ಯಗಳೆಡೆಯಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಅಲಿ(ರ) ರವರು ಗೆದ್ದರು. ಸಂಗತಿಯ ನೈಜ್ಯತೆ ಏನೆಂದು ಆಯಿಷಾ(ರ)ರವರಿಗೆ ಮನವರಿಕೆ ಮಾಡಿ ಮದೀನಕ್ಕೆ  ಕಳಿಸಿದರು. ಈ ಯುದ್ಧವನ್ನು ಇತಿಹಾಸದಲ್ಲಿ 'ಜಮಲ್' ಯುದ್ಧವೆಂದು ಕರೆಯಲಾಗುತ್ತದೆ. ಅಲಿ(ರ)ರವರು ಜಮಲ್ ಯುದ್ಧದ ಬಳಿಕ ಮದೀನಾಗೆ ತೆರಳಲಿಲ್ಲ.

ಕೂಫವನ್ನು ಆಡಳಿತ ಕೇಂದ್ರವನ್ನಾಗಿ ಮಾಡಿ ಕೂಫಾಗೆ ಹೊರಟರು. ಆಯಿಷಾ(ರ)ರವರೊಂದಿಗಿರುವ ಸಂಘರ್ಷಕ್ಕೆ ಒಂದು ಅಂತ್ಯ ಕಂಡರೂ ಮುಆವಿಯಾ(ರ) ರವರೊಂದಿಗಿದ್ದ ಸಮಸ್ಯೆಗಳಿಗೆ ಪರಿಹಾರವಾಗಲಿಲ್ಲ. ಅಲಿ(ರ) ರವರು ಮುಆವಿಯಾ(ರ) ರವರನ್ನು ಗವರ್ನರ್ ಸ್ಥಾನದಿಂದ ಸ್ಥಾನ ಭ್ರಷ್ಟ ಮಾಡಿದರು. ಸಿರಿಯ ಗವರ್ನರ್ ಸ್ಥಾನ ವನ್ನು ಬಿಟ್ಟುಕೊಡಲು ಮುಆವಿಯಾ (ರ)ರವರು ತಯಾರಾಗಲಿಲ್ಲ. ಉಸ್ಮಾನ್ (ರ)ರವರ ಹಂತಕನನ್ನು ಕಂಡುಹಿಡಿಯುವ ತನಕ ಅಲಿ(ರ)ರವರನ್ನು ಖಲೀಫರನ್ನಾಗಿ ಬೈಅತ್ ಮಾಡುಲು ನಾನು ತಯಾರಲ್ಲ ಎಂದು ಪ್ರಖ್ಯಾಪಿಸಿದರು. ಇದೇ ಕಾರಣದಿಂದಾಗಿದೆ ಸ್ವಿಫ್ಫೀನ್ ಯುದ್ಧ ನಡೆಯುವುದು. ಅಲಿ(ರ) ರವರು ಹಾಗೂ ಮುಆವಿಯ(ರ)ರವರು ಮುಖಾಮುಖಿಯಾದರು, ಯುದ್ಧ ಶುರುವಾಯಿತು. ಅಲಿ(ರ)ರವರು ಇನ್ನೇನು ಗೆಲ್ಲಬೇಕೆನ್ನುವಷ್ಟರಲ್ಲಿ ಮುಆವಿಯಾ(ರ)ರವರು ಒಂದು ಈಟಿಯ ತುದಿಯಲ್ಲಿ ಕುರ್ಆನನ್ನು ಎತ್ತಿ ಹಿಡಿದು ಯುದ್ಧ ನಿಲ್ಲಿಸುವಂತೆ ಕೇಳಿಕೊಂಡರು. ಅಲಿ (ರ)ರವರ ವಿಭಾಗದಿಂದ ಅಬು ಮೂಸಲ್ ಅಶ್ಅರಿ(ರ) ಮತ್ತು ಮುಆವಿಯಾ(ರ) ರವರ ಭಾಗದಿಂದ ಅಂಬ್ರುಬಿನ್ ಆಸ್(ರ) ರವರನ್ನು ಒಪ್ಪಂದಕಾರರನ್ನಾಗಿ ನೇಮಿಸಲಾಯಿತು. ಅವರು ಯಾವ ತೀರ್ಪನ್ನು ಹೇಳಿದರೂ ಅದನ್ನು ಮುಆವಿಯಾ ಅಲಿ(ರ)ರವರು ಪಾಲಿಸಬೇಕೆಂದಾಗಿತ್ತು ನಿಯಮ. 'ದೌಮತುಲ್ ಜಂದಲ್'ನಲ್ಲಿ ಮುಸಲ್ಮಾನರನ್ನು  ಒಗ್ಗೂಡಿಸಲಾಯಿತು.

ಅಬು ಮೂಸಲ್ ಅಶ್ಹರರಿ(ರ) ನೀಡಿದ ಮಾತನ್ನು ಅಂಬ್ರುಬಿನ್ ಆಸ್(ರ) ಪಾಲಿಸದಿದ್ದಿದ್ದರಿಂದ ಚರ್ಚೆಯು ವಿಫಲವಾಯಿತು. ಮುಸ್ಲಿಮರು ನಿರಾಶರಾದರು. ಆದರೂ ಅಲಿ ಮತ್ತು ಮುಆವಿಯಾ(ರ)ರವರು ಇನ್ನು ತಮ್ಮೆಡೆಯಲ್ಲಿ ಅಕ್ರಮಗಳುಂಟಾಗಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿದರು. ಖವಾರಿಜರು ಪ್ರಸ್ತುತ ಒಪ್ಪಂದವೂ ಮುಸ್ಲಿಮರೆಡೆಯಲ್ಲಿ ಖವಾರಿಜೆಂಬ ಗುಂಪು ರೂಪುಗೊಳ್ಳಲು ಕಾರಣವಾಯಿತು. ಧಾರ್ಮಿಕ ವಿಷಯಗಳಲ್ಲಿ ಮನುಷ್ಯರನ್ನು ತೀರ್ಪುಗಾರರಾಗಿ ನಿಯಮಿಸುವುದು ಸರಿಯಲ್ಲ ಮತ್ತು ಹಾಗೆ ಮಾಡುವುದು ಕುಫ್ರಾಗಿದೆ ಎಂಬುದಾಗಿತ್ತು ಅವರ ವಿಶ್ವಾಸ. ತೀರ್ಪು ನೀಡಲು ಅಲಾಹನಲ್ಲದೆ ಬೇರೆ ಯಾರಿಗೂ ಅರ್ಹತೆ ಇಲ್ಲ ಎಂಬ ವಾದವನ್ನು ಮಂಡಿಸಿ ಇಸ್ಲಾಮಿನ ತತ್ವದಿಂದ ಹೊರನಡೆದವರು ಖವಾರಿಜ್ಗಳು. ಧರ್ಮದಲ್ಲಿ ತೀವ್ರವಾದಿಗಳಾದ ಇವರು ಭಯೋತ್ಪಾದನೆಯನ್ನು ತಮ್ಮ ಮಾರ್ಗವಾಗಿ ಸ್ವೀಕರಿಸಿದರು.

ಮಾತ್ರವಲ್ಲದೆ ಮಧ್ಯದಲ್ಲಿ ಒಂದು ಭಯಾನಕ ಯೋಜನೆಯನ್ನು ಇವರು ಹಮ್ಮಿಕೊಂಡರು. ಮುಸ್ಲಿಮರೆಡೆಯಲ್ಲಿ ಯುದ್ಧ ಉಂಟಾಗಲು ಅಲೀ ಮುಆವಿಯಾ ಅಮ್ರ್ ಬಿನ್ ಆಸ್(ರ) ರವರು ಕಾರಣರಾಗಿದ್ದಾರೆ. ಆದುದರಿಂದ ಇವರನ್ನು ವಧಿಸಲು ಖವಾರಿಜ್ಗಳು ತೀರ್ಪು ಹೊರಡಿಸಿದರು. ಅವರನ್ನು ವಧಿಸಲು ಮೂರು ಜನರು ಸಿದ್ಧರಾದರು. ಮುಆವಿಯ(ರ) ಅಂಬ್ರಬಿನ್ ಆಸ್(ರ) ರವರು ಅವರಿಂದ ಕಾರಣಾಂತರಗಳಿಂದ ಬಚಾವಾದರು, ಸ್ವಬಹ್ ನಮಾಜಿಗೆ ತೆರಳುತ್ತಿದ್ದ ಅಲಿ(ರ)ರವರು ಖವಾರಿಜ್ಗಳ ಸಂಚಿನಿಂದ ಬಲಿಯಾದರು. ಇಬ್ನುಮುಲ್ಜಿಂ ಎಂಬ ಹಂತಕನ  ಕಠಾರೆಗೆ ಬಲಿಯಾಗಿ ಇಸ್ಲಾಮಿನ ನಾಲ್ಕನೇ ಖಲೀಫರಾದ ಅಲಿ (ರ)ರವರು ರಕ್ತ ಸಾಕ್ಷಿಯಾದರು, ಇಸ್ಲಾಮಿನ ಮುವತ್ತು ವರ್ಷದ ಖಿಲಾಫತಿಗೆ ಹಿ ವರ್ಷ 40ಕ್ಕೆ ನಾಂದಿಹಾಡಲಾಯಿತು. ನಾಲ್ಕುವರೆ ವರ್ಷಗಳ ಕಾಲ ಅಲಿ(ರ) ರವರ ಆಳ್ವಿಕೆಯಲ್ಲಿ ಸಿರಿಯ, ಈಜಿಪ್ಟ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳು ಅವರ ಅಧೀನದಲ್ಲಿತ್ತು. ಆದರೆ ಆಂತರಿಕ ಕಲಹಗಳಿಂದಾಗಿ ಹೊಸ ಪ್ರದೇಶಗಳನ್ನು ಕೈವಶ ಮಾಡಲು ಸಾಧ್ಯವಾಗಲಿಲ್ಲ. ಅಲಿ(ರ) ರವರ ಆಡಳಿತ ಸಂವಿಧಾನವು ಉಮರ್(ರ) ರವರ ಆಡಳಿತ ಸಂವಿಧಾನದಂತಿತ್ತು. ಲಲಿತವಾದ ಜೀವನ. ತೀರ್ಮಾನ ಮಾಡುವಾಗ ತನ್ನ ಸಂಬಂಧಿಕ ಅಥವಾ ಉನ್ನತರು ಎಂಬ ಭೇದಭಾವ ಮಾಡುತ್ತಿರಲಿಲ್ಲ. ಇವರನ್ನು ರಾಜ್ಯದ ಸಾಮಾನ್ಯ ಪ್ರಜೆಗಳಂತೆ ಕಾಣುತ್ತಿದ್ದರು. ತನ್ನ ಕಳ್ಳತನವಾದ ಅಂಗಿಯು ಒಬ್ಬ ಯಹೂದನ ಕೈಯಲ್ಲಿದ್ದುದನ್ನು ಕಂಡು ಅಲಿ (ರ)ರವರು ಈ ಕೇಸನ್ನು ನ್ಯಾಯಾಲಯಕ್ಕೆ ದೂರು ಕೊಟ್ಟರು.

ನ್ಯಾಯಾಲಯವು ಅಲಿ(ರ)ರವರಲ್ಲಿ ಸಾಕ್ಷಿಯನ್ನು ತರಲು ಹೇಳಿತು. ಆದರೆ ಅಲಿ(ರ)ರವರಲ್ಲಿ ಯಾವುದೇ ಸಾಕ್ಷಿ ಇಲ್ಲದಿದ್ದರಿಂದ ಅಂಗಿಯು ಯಹೂದನದೆಂದು ನ್ಯಾಯಾಲಯವು ತೀರ್ಪು ನೀಡಿತು. ತನ್ನ ಅಧಿಕಾರವನ್ನು ಉಪಯೋಗಿಸಿ ಅಲಿ(ರ) ರವರಿಗೆ ಆಂಗಿಯನ್ನು ಆ ಯಹೋದನಿಂದ ತೆಗೆದುಕೊಳ್ಳಬಹುದಿತ್ತು. ಇದನ್ನು ಕಂಡ ಯಹೂದಿಯು ನಂತರ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಎಂದಾಗಿದೆ ಚರಿತ್ರೆ. ಅಲಿ(ರ)ರವರು ತನ್ನ ವಾರಿಸುದಾರ ಯಾರಾಗಬೇಕೆಂದು ತೀರ್ಮಾನಿಸಿರಲಿಲ್ಲ. ತಮ್ಮ ನಂತರ ಯಾರಾಗಲಿದ್ದಾರೆ ಇಸ್ಲಾಮಿಕ ಲೋಕದ ಆಡಳಿತಗಾರ ಎಂಬ ಪ್ರಶ್ನೆಗೆ ಅವರು, ನೆಬಿ(ಸ) ಸಮುದಾಯವನ್ನು ಹೇಗೆ ಬಿಟ್ಟು ಹೋದರೊ ಹಾಗೆ ಮರಣಹೊಂದೂದಾಗಿದೆ ನನ್ನ ಉದ್ದೇಶ ಎಂಬುದಾಗಿತ್ತು ಅವರ ಉತ್ತರ. ವ್ಯಕ್ತಿತ್ವ ಪರಿಚಯ ಪ್ರವಾದಿ ವರ್ಯರ ಪ್ರೀಯ ಶಿಷ್ಯರೆಲ್ಲೊರುವರಾದ ಅಲಿ(ರ)ರವರು ಪ್ರವಾದಿಯವರ ಹಿಜಿರಕಿಂತ ಅಂದಾಜು 23 ವರ್ಷಕ್ಕೆ ಮುಂಚೆ ಜನಿಸಿದರು. ಜೀವನ ಕಾಲದಲ್ಲಿ ಸ್ವರ್ಗ ಪ್ರವೇಶದ ಸಂತೋಷ ವಾರ್ತೆ ಲಭಿಸಿದವರಲ್ಲೊಬ್ಬರಾಗಿದ್ದರು. ಅವರ ತಂದೆ ಅಭೂತ್ವಾಲಿಬ್ ಮಕ್ಕಾದ ಉಸ್ತುವಾರಿಗಳಲ್ಲೊಬ್ಬರಾಗಿದ್ದರು.

ಮಕ್ಕ ಕಂಡ ಭೀಕರ ಬರಗಾಲದಲ್ಲಿ ಅಲಿ (ರ)ರವರ ಪೋಷಣೆಯ ಹೊಣೆಯನ್ನು ಪ್ರವಾದಿ(ಸ) ವಹಿಸಿಕೊಂಡಿದ್ದರು. ತನ್ನ ಚಿಕ್ಕಪ್ರಾಯದಿಂದಲೇ ನೆಬಿ(ಸ) ರವರೊಂದಿಗೆ ಅಲಿ(ರ)ರವರು ಇದ್ದರು. ತನ್ನ ಹತ್ತನೇ ಪ್ರಾಯದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಅಲಿ(ರ), ಸಣ್ಣ ಬಾಲಕರ ಪೈಕಿ ಇಸ್ಲಾಂ ಸ್ವೀಕರಿಸಿದವರಲ್ಲಿ ಮೊದಲಿಗರು. ಬದ್ರ್, ಉಹ್ದ್, ಖ್ಯೆಬರ್, ಫತ್ಹ್ ಮಕ್ಕ, ಹುನೈನ್ ಮೊದಲಾದ ಯುದ್ಧಗಳಲ್ಲಿ ಪ್ರವಾದಿಯವರೊಂದಿಗೆ ಪಾಲ್ಗೊಂಡಿದ್ದ ಅಲಿ,  ದೀರೋದಾತ್ತವಾಗಿ ಹೋರಾಡಿದರು. ಅಲಿ(ರ) ರವರ ಶೌರ್ಯವನ್ನು ಕಂಡ ಪ್ರವಾದಿ(ಸ) 'ಹೈದರ್' ಎಂಬ ಅಪರನಾಮಮವನ್ನು ಸನ್ಮಾನಿಸಿದರು.

'ದುಲ್ ಫಿಖಾರ್' ಎಂಬ ಖಡ್ಗವನ್ನು ಅಲಿ(ರ)ರವರಿಗೆ ಕೊಡುಗೆಯಾಗಿ ನೀಡಿದರು. ಅಬೂಬಕ್ಕರ್, ಉಮರ್, ಉಸ್ಮಾನ್ (ರ)ರವರು ಆಡಳಿತ ಸಂಬಂಧಿತ ವಿಷಯಗಳಲ್ಲಿ ಅಲಿ(ರ)ರವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. 'ಮುರ್ತಲಾ' ಎಂಬ ಹೆಸರು ಅಲಿ(ರ)ರವರಿಗಿತ್ತು. ಪ್ರವಾದಿ (ಸ) ಹಿಜ್ರಕ್ಕೆ ತೆರಳಿದಾಗ ಮಕ್ಕಾದಲ್ಲಿ ತನ್ನ ಪ್ರತಿನಿಧಿಯಾಗಿ ಅಲಿ(ರ)ರವರನ್ನು ನಿಯೋಗಿಸಿದ್ದರು. ಅವರು ಪ್ರವಾದಿಯವರಿಂದ ತುಂಬಾ ಹದೀಸ್ಗಳನ್ನು ರಿಪೋರ್ಟ್ ಮಾಡಿದ್ದಾರೆ. ನೆಬಿ (ಸ) ರವರ ಪ್ರೀಯ ಪುತ್ರಿ ಫಾತಿಮಾ (ರ)ರವರನ್ನು ಅಲಿ(ರ) ವಿವಾಹವಾಗಿದ್ದರು. ಉಸ್ಮಾನ್(ರ) ರವರ ಕೊಲೆಯ ಐದು ದಿವಸಗಳ ನಂತರ ಬ್ಯೆಅತ್  ಸ್ವೀಕರಿಸಿ ಖಲೀಫರಾಗಿ ಅಧಿಕಾರ ವಹಿಸಿದರು. ನಾಲ್ಕುವರೆ ವರ್ಷ ಆಡಳಿತ ನಡೆಸಿದ ಅಲಿ(ರ)ಮರಣ ಹೊಂದಿದ್ದು ಹಿಜಿರ 40ಕ್ಕೆ.

                                                                                                                                 ಇರ್ಫಾನ್. ಕೆ

Related Posts

Leave A Comment

Voting Poll

Get Newsletter