ಅಮವಿ ಆಡಳಿತ

   ಖುಲಫಾಉ ರಾಶಿದೀನ್ಗಳ ಬಳಿಕ ಮುಸ್ಲಿಂ ಜಗತ್ತನ್ನು ಖಿಲಾಫತ್ ನಡೆಸಿದ ಅಧಿಕಾರ ವಂಶವಾಗಿದೆ ಅಮವಿಯ್ಯ . ಸ್ವಹಾಬರಾದ ಮುಆವಿಯ ಬಿನ್ ಅಬೂ ಸುಫಿಯಾನ್ (ರ) ಆಗಿದ್ದಾರೆ ಇದರ ಸ್ಥಾಪಿತ ನಾಯಕ. ದಮಸ್ಕಸ್ ನಗರವಾಗಿತ್ತು ಇವರ ಆಡಳಿತ ಕೇಂದ್ರ. ಹಿಜ್ರ ವರ್ಷ 41 ರಿಂದ ಆರಂಭವಾದ ಈ ಆಳ್ವಿಕೆ ಹಿಜ್ರ132 ರಲ್ಲಿ ಅಂತ್ಯವಾಯಿತು. ಮುಅವಿಯ (ರ) ರವರ ತಂದೆ ಕುಟುಂಬವಾದ ಬನೂ ಉಮಯ್ಯಕ್ಕೆ ಸೇರಿಸಿ ಈ ವಂಶಕ್ಕೆ ಅಮವಿಯ್ಯ ಎಂದು ನಾಮಕರಿಸಲಾಯಿತು. ಹಿಂದೆ ಸಿರಿಯಾದ ಗವರ್ನರ್ ಆಗಿದ್ದ ಮುಆವಿಯಾ (ರ) ರವರ ಹಾಗೂ ಅಲೀ (ರ) ರ  ಕಾಲದಲ್ಲಿನ ರಾಜಕೀಯ ಗೊಂದಲಗಳಿಗೆ ಕೊನೆಗೊಟ್ಟು ಹೊಸ ಖಿಲಾಫತಿಗೆ ಬುನಾದಿ ಹಾಕಿದರು. 92 ವರ್ಷಗಳ ಕಾಲ ಮುಂದುವರೆದ ಆಳ್ವಿಕೆಯಲ್ಲಿ 78 ವರ್ಷ ಮರ್ವಾನ್ ಕುಟುಂಬ ವಂಶವು 14 ವರ್ಷ ಮುಆವಿಯ ಕುಟುಂಬವು ಆಳ್ವಿಕೆ ನಡೆಸಿದರು.

ಮುಆವಿಯ (ಹಿ.41-60), ಯಝೀದ್ I (60-64), ಮರ್ವಾನ್ I (64-65), ಅಬ್ದುಲ್ ಮಾಲಿಕ್ (65 - 86), ವಲೀದ್ I (86-96), ಸುಲೈಮಾನ್ (96-99), ಉಮರ್ ಬಿನ್ ಅಬ್ದುಲ್ ಅಝೀಝ್ (99-101), ಯಝೀದ್ II (101-105), ಹಿಶಾಂ (105-125), ವಲೀದ್ II (125 - (26), ಇಬ್ರಾಹೀಂ (126-127),  ಮಾರ್ವಾನ್ (127-135) ಮುಂತಾದವರಾಗಿದ್ದರು ಅಮವೀ ಖಲೀಫರು .

ಆಳ್ವಿಕೆ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ವೈಜ್ಞಾನಿಕ,ರಾಷ್ಟ್ರೀಯ,ಹಣಕಾಸು, ಹಾಗೂ ವಿದ್ಯಾಭ್ಯಾಸ ಕ್ಷೇತ್ರಗಳ ನೀತಿಯಲ್ಲಿ ಹಿಂದಿನ ಕಾಲಕ್ಕಿಂತ ಮಿಗಿಲಾಗಿ ಮಾರ್ಪಾಡು ಮಾಡಿದ್ದರು. ಮಧ್ಯ ಏಷ್ಯಾ, ಸ್ಪೈನ್, ಕರ್ಬಲ, ಕಾನ್ಸ್ಟಾಂಟಿನೋಪಲ್  ಯುದ್ಧ ಹಾಗೂ ಸಿಂಧ್ ಯುದ್ದ ವಿಜಯಗಳು ಹಾಗೂ ಕೈರುವಾನ್‌ ನಗರ ಸ್ಥಾಪನೆ ಮುಂತಾದ ಸಾಧನೆಗಳು ಇವರ ಇತಿಹಾಸ ಪುಟಗಳಲ್ಲಿ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದೆ.

ವಿಶಾಲವಾದ ಇಸ್ಲಾಂ ಸಾಮ್ರಾಜ್ಯವನ್ನು 9 ಆಳ್ವಿಕೆ ಪ್ರದೇಶವನ್ನಾಗಿ ವಿಂಗಡಿಸಿ ಇವರು ತಮ್ಮ ಆಳ್ವಿಕೆ ನಿರ್ವಹಣೆ ಮಾಡಿದರು. 1. ಸಿರಿಯ ಹಾಗೂ ಫಲಸ್ತೀನ್ ಸೇರಿದ ಪ್ರದೇಶ 2. ಕೂಫ ,ಇರಾಖ್ 3. ಬಸರಾ 4. ಹಿಜಾಝ್ 5. ಕರ್ಮಾನ್ 6.ಅಲ್ಮೆನಿಯ 7. ಈಜಿಪ್ಟ್ 8. ಇಫ್ಕೀರಿಯ 9. ಯಮನ್   ಮುಂತಾದವುಗಳಾಗಿದ್ದು ಆಳ್ವಿಕೆ ಪ್ರದೇಶಗಳು. ಇವೆಲ್ಲ ಪ್ರದೇಶಗಳಿಗೂ ಅಮೀರ್ ಎಂಬ ನಾಮದಿಂದ ಕರೆಯಲ್ಪಡುವ ಗವರ್ನರ್ ಅನ್ನು ನೇಮಿಸಿದರು. ಪ್ರಜೆಗಳ ಹಾಗೂ ಆಳ್ವಿಕೆ ಪ್ರದೇಶದ ಒಂದೊಂದು ಕಾರ್ಯಗಳು ಅಮೀರರ ಮುಖಾಂತರವಾಗಿತ್ತು ಖಾಲಿಫರ ಸನಿಹಕ್ಕೆ ತಲುಪುವುದು. ಹಲವು ಕಾರ್ಯಗಳಲ್ಲಿಯೂ ಸ್ವಯಂ ತೀರ್ಪುತೆಗೆಯಲು ಸ್ವಾತಂತ್ರ್ಯ ಇದ್ದರೂ ಯುದ್ಧ , ಸಂಧಿ ಹಾಗೂ ಅಕ್ರಮ ಇನ್ನಿತರ ಪ್ರಧಾನ ಕಾರ್ಯಗಳಲ್ಲಿ ಖಲೀಫರ ಅಭಿಪ್ರಾಯದ ಬಳಿಕವೇ ತೀರ್ಪನ್ನು ಕೈಗೊಳ್ಳುವುದು.

ಧಾರ್ಮಿಕ ಪರವಾದ ನೇತೃತ್ವ ತೆರಿಗೆ ಸಂಗ್ರಹ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಇನ್ನಿತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಮೂರು ವಿಭಾಗವಾಗಿ ವಿಂಗಡಿಸಿ ಅಮವಿಯರು ಆಳ್ವಿಕೆಯನ್ನು ನಿಯಂತ್ರಿಸಿದರು. ನವೀನವಾಗಿ ಕೈಗೊಳ್ಳಲಾದ ಪ್ರದೇಶದ ತೆರಿಗೆ ಸಂಗ್ರಹವನ್ನು "ಸ್ವಾಹಿಬುಲ್ ಖರಾಜ್" ಎನ್ನುವ ವಿಭಾಗ ನಿರ್ವಹಿಸಿದರು. ಖಾಝಿಯವರಲ್ಲಿ ನೀತಿ ನ್ಯಾಯ ಸಂವಿಧಾನಗಳು, ಧರ್ಮ ಕಾರ್ಯಗಳು  ಸ್ಪಷ್ಟವಾಗಿತ್ತು. ಅಥವಾ ಇತರ ಕಾರ್ಯಗಳ ಸ್ಪಷ್ಟವಾದ ನಿರ್ವಹಣೆಕ್ಕಾಗಿ ಎಲ್ಲಾ ಪ್ರದೇಶಗಳಲ್ಲಿ ಪ್ರತ್ಯೇಕ ಖಾಝಿಯವರನ್ನು ಅಥವಾ ತೀರ್ಪುಗಾರರನ್ನು ನೇಮಕಗೊಳ್ಳಲಾಯಿತು. ಅವರ ಜ್ಞಾನದ ಮುಂಗಾಣಿಕೆಯ ಸಲುವಾಗಿ ಆ ವಿಭಾಗದಲ್ಲಿ ಧರ್ಮ ಕಾರ್ಯಗಳ ಕೊಡುಗೆಯನ್ನು ಪರಿಗಣಿಸಲ್ಪಟ್ಟಿತು. ಸೈನಿಕ ಬಲದಿಂದ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು ಈ ಕಾಲದಲ್ಲಿ ಮುಸಲ್ಮಾನರ ಆಯುಧ ಶಕ್ತಿಗೆ ಬಲವರ್ಧನೆ ಉಂಟಾಯಿತು.

ಪವಿತ್ರವಾದ ಖಿಲಾಫತ್ ಹಾದಿಯಿಂದ ಇಸ್ಲಾಮಿನ ಆಳ್ವಿಕೆಯು ರಾಜಮಾನತನದೆಡೆಗೆ ಬದಲಾಯಿತು ಎಂಬುದಾಗಿದೆ  ಅಮವೀ ಆಳ್ವಿಕೆ ಕ್ರಮದಲ್ಲಿ ಕೈಗೊಂಡ ಬಳು ಸತ್ಯ.ಉಮರ್ ಬಿನ್ ಅಬ್ದುಲ್. ಅಝೀಝ್ (ರ) ರಂತಹ ನೀತಿ ನ್ಯಾಯರಾದ ಆಡಳಿತಗಾರರಿದ್ದರೂ ಚಕ್ರಾಧಿಪತ್ಯ, ಅರಸು ಮನ ತನದವರಾಗಿದ್ದರು ಉಳಿದ ಇನ್ನಿತರು. ಪ್ರಜೆಗಳಿಗೆ ಖಲೀಫರಲ್ಲಿ ಪ್ರಶ್ನೆ ಕೇಳುವ ಅವಕಾಶ ಈ ಕಾಲದಿಂದ ಕಳೆದು ಹೋಯಿತು. ಅರಸರ ಎಲ್ಲಾ ತೀರ್ಪುಗಳು ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುವ ಹವಮಾನ ಹುಟ್ಟಿತು.


ಸಾಹಿತ್ಯ -ವಿದ್ಯಾಭ್ಯಾಸ -ತೀರ್ಪು ನಾಗರಿಕ ವಿಭಾಗದಲ್ಲಿ ಅಮವೀ ಆಳ್ವಿಕೆ ಕಾಲದಲ್ಲಿ ಮುಸಲ್ಮಾನರಿಗೆ ವ್ಯಸ್ತಾಪಿಕ ಅಭಿವೃದ್ಧಿ ಕೈಗೊಂಡಿದ್ದರು. ಕೃಷಿ,ಕೈಕೆಲಸ,ವ್ಯವಸಾಯಗಳ ಕೊಡುಗೆಗಳು ಹಾಗೂ ಸುಂದರವಾದ ಮಸೀದಿಗಳ, ಕುಬ್ಬಗಳ ನಿರ್ಮಾಣವು ಅಭಿವೃದ್ಧಿಗೆ ಒತ್ತು ನೀಡಿದ ಪರಿಣಾಮವಾಗಿ ಅಮವೀ ಖಿಲಾಫತ್ ಕೀರ್ತಿ ಪ್ರಾಪ್ತವಾಯಿತು. ವಿದ್ಯಾಭ್ಯಾಸದಲ್ಲಿ ಮುಂದಕ್ಕೆ ಇಲ್ಲದಿದ್ದರೂ ಕವಿಗಳು, ಸಾಹಿತ್ಯಗಾರರು, ಶಾಸ್ತ್ರಿಯರು ಈ ಕಾಲದಲ್ಲಿ ಹುಟ್ಟಿ ಬೆಳೆದರು.

ಅರಸು ನೇತೃತ್ವಕ್ಕೆ ಬೇಕಾದ ನಾಗರಿಕ ಗಲಭೆಗಳು, ಅಂತರ್- ಉದ್ವಿಗ್ನಗಳು ಅಮವಿಯರ ಶಕ್ತಿ ಕಳೆಯುವುದಕ್ಕೆ ದಾರಿ ಹುಡುಕುವುದಾಗಿತ್ತು. ಇದಕ್ಕೆ ತಕ್ಕ ಸಮಯ ನೋಡಿ ಅಭ್ಯಾಸಿಗಳು ಹಾಗೂ ಶಿಯಾಗಳು ಅಮವಿರ ಒಳ ನುಗ್ಗಿ ಅವರ ಶಕ್ತಿಯನ್ನು ಚೆಲ್ಲಾಪಿಲ್ಲಿ ಮಾಡಿದರು. ಹಿಜ್ರ132 ರಲ್ಲಿ ಅಮವಿಯರ ವಂಶಕೇಂದ್ರವಾದ ಡಮಸ್ಕಸ್ ಅಬ್ಬಸಿಯರ ಸುಪರ್ದಿಗೆ ಬಂತು ಹಾಗೂ ಅಭ್ಯಾಸೀ ಆಡಳಿತಕ್ಕೆ ಜನ್ಮ ತಾಳಿದರು.

Related Posts

Leave A Comment

Voting Poll

Get Newsletter