ಹಜ್ ಕೇವಲ ಕರ್ಮವಲ್ಲ – ಅದು ಜೀವನದ ಸಂದೇಶ ಸಮರ್ಪಣೆ ಮತ್ತು  ಪರಿವರ್ತನೆ.
Haseeb Paimbachal

ಈ ದುಲ್ ಹಿಜ್ಜಾದಲ್ಲಿ “ಅಲ್-ಫತ್ತಾಹ್” ಮತ್ತು “ಅಶ್-ಶಕೂರ್” ನೊಂದಿಗೆ ಆತ್ಮೀಯತೆಯ ಸಂಪರ್ಕ ಬೆಳೆಸೋಣ...

ಅಲ್ಲಾಹು ತಅಲಾ "ಅಲ್-ಫತ್ತಾಹ್" - ಅಂದರೆ ಬಾಗಿಲುಗಳನ್ನು ತೆರೆಯುವವನು, ದಾರಿಗಳನ್ನು ಸುಲಭಗೊಳಿಸುವವನು. ಆತನು ತನ್ನ ದಾಸರಿಗೆ ಪುಣ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ತನ್ನಿಗೆ ಇನ್ನಷ್ಟು ಹತ್ತಿರವಾಗಲು ಅವಕಾಶಗಳನ್ನು ನೀಡುತ್ತಾನೆ. ದುಲ್ ಹಿಜ್ಜಾ ತಿಂಗಳ ಮೊದಲ ಹತ್ತು ದಿನಗಳು ಅಲ್ಲಾಹನ ಈ ಮಹಾ ಕರುಣೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ಈ ದಿನಗಳು ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ದಿನಗಳಾಗಿದ್ದು, ಅಪಾರ ಆತ್ಮೀಯತೆ ಆಶೀರ್ವಾದಗಳಿಂದ ತುಂಬಿವೆ.

ಪ್ರವಾದಿ (ಸ) ಹೇಳಿದರು:

“ಈ ಹತ್ತು ದಿನಗಳಲ್ಲಿ ಮಾಡುವ ಸತ್ಕಾರ್ಯಗಳಿಗಿಂತ ಅಲ್ಲಾಹನಿಗೆ ಹೆಚ್ಚು ಪ್ರೀಯವಾದ ಕಾರ್ಯಗಳು ಬೇರೆ ಯಾವ ದಿನಗಳಲ್ಲೂ ಇಲ್ಲ." (ಸಹೀಹ್ ಅಲ್-ಬುಖಾರಿ)

ಅಲ್ಲಾಹು ತಅಲಾ "ಅಲ್-ಫತ್ತಾಹ್" - ಅಂದರೆ ಕೇವಲ ಬಾಗಿಲುಗಳನ್ನು ತೆರೆಯುವವನು ಮಾತ್ರವಲ್ಲ, ಹೃದಯಗಳನ್ನೂ ಮನಸ್ಸುಗಳನ್ನೂ ತೆರೆಯುವವನು. ಪ್ರಸ್ತುತ ಜಗತ್ತಿನಲ್ಲಿ ಜನರು ಅನೇಕ ವ್ಯತ್ಯಯಗಳು ಮತ್ತು ಅಲಕ್ಷ್ಯದಲ್ಲಿ ಮುಳುಗಿರುವ ಸಂದರ್ಭದಲ್ಲಿ, ದುಲ್ ಹಿಜ್ಜಾ ತಿಂಗಳ ಆಗಮನವು ಎಲ್ಲಾ ವಿಶ್ವಾಸಿಗಳಿಗೆ ಮಹತ್ವದ ನೆನಪುಗಳನ್ನು ನೀಡುತ್ತದೆ. ಅದು ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ: ನಮ್ಮ ಹಿಂದಿನ ತಪ್ಪುಗಳು ಎಷ್ಟೇ ಇದ್ದರೂ, ಮತ್ತು ಜೀವನದ ಗದ್ದಲ ಎಷ್ಟೇ ಹೆಚ್ಚಿದ್ದರೂ, ಅಲ್ಲಾಹನ ಅಪಾರ ದಯೆ ಮತ್ತು ಕ್ಷಮೆಯ ಬಾಗಿಲು ಸದಾ ತೆರೆಯಲ್ಪಟ್ಟೇ ಇರುತ್ತದೆ.

ಈ ಪವಿತ್ರ ದಿನಗಳು ಮತ್ತೊಂದು ಮಹತ್ವದ ವಿಷಯವನ್ನು ಒತ್ತಿ ಹೇಳುತ್ತವೆ: ಮನಸ್ಸಿನಾಳದಿಂದ ಮಾಡುವ ತೌಬಾ (ಪಶ್ಚಾತ್ತಾಪ), ಅಲ್ಲಾಹನ ಸ್ಮರಣೆ, ಅದು ಸಣ್ಣದಾಗಿರಲಿ ದೊಡ್ಡದಾಗಿರಲಿ ಪ್ರತಿಯೊಂದು ಪ್ರಾಮಾಣಿಕ ಆರಾಧನೆ ಯಾವುದೂ ಅಲ್ಲಾಹನ ದೃಷ್ಟಿಯಲ್ಲಿ ಅಲ್ಪವಾಗುವುದಿಲ್ಲ. ಈ ಅಮೂಲ್ಯ ಕಾರ್ಯಗಳು ಅಲ್ಲಾಹನ ಬಳಿಯಲ್ಲಿ ಅತ್ಯಂತ ಮೌಲ್ಯವುಳ್ಳದ್ದಾಗಿದೆ ಮತ್ತು ಅಪಾರ ಪ್ರತಿಫಲವನ್ನು ಹೊಂದಿದೆ. ಇವು ವಿಶ್ವಾಸಿಗಳಿಗೆ ಆತ್ಮೀಯವಾಗಿ ಮೇಲಕ್ಕೆ ಏರಲು ಮತ್ತು ಅಲ್ಲಾಹನೊಂದಿಗೆ ಹೊಸ ಸಂಬಂಧವನ್ನು ಸ್ಥಾಪಿಸಲು ಅಪರೂಪದ ಅವಕಾಶವನ್ನು ನೀಡುತ್ತವೆ.

ಈ ಆಶೀರ್ವಾದಿತ ದಿನಗಳು ಕೇವಲ ಇಸ್ಲಾಮಿಕ್ ಕ್ಯಾಲೆಂಡರಿನ ಪವಿತ್ರ ದಿನಗಳಲ್ಲ. ಅವು ಅಲ್ಲಾಹನ ಅನಂತ ಕರುಣೆಯ ಪ್ರತಿಬಿಂಬವಾಗಿವೆ. ಅಲ್ಲಾಹನ ದಾಸರು ಅವನತ್ತ ಇನ್ನಷ್ಟು ಹತ್ತಿರವಾಗಲು ನೀಡಿರುವ ದೈವಿಕ ಆಹ್ವಾನಗಳಾಗಿವೆ.

ಈ ಪವಿತ್ರ ದಿನಗಳು ಅಲ್ಲಾಹನ "ಅಶ್-ಶಕೂರ್" ಎಂಬ ಹೆಸರನ್ನೂ ತೋರಿಸುತ್ತವೆ - ಅಂದರೆ ಕೃತಜ್ಞತೆ ಸಲ್ಲಿಸುವವನು. ಅಲ್ಲಾಹನು ಸಣ್ಣದಾದ ಪ್ರಾಮಾಣಿಕ ಸತ್ಕಾರ್ಯವನ್ನೂ ಗೌರವಿಸಿ ಅದರ ಪ್ರತಿಫಲವನ್ನು ಲೆಕ್ಕವಿಲ್ಲದಷ್ಟು ಹೆಚ್ಚಿಸುತ್ತಾನೆ. ಜನರಿಗೆ ಅಲ್ಪವಾಗಿ ಕಾಣುವ ಕೆಲಸವೂ ಅಲ್ಲಾಹನ ಬಳಿಯಲ್ಲಿ ಅಲ್ಪವಲ್ಲ. ಶಾಂತವಾಗಿ ಮಾಡಿದ ಒಂದು ದುಆ, ಯಾರಿಗೂ ತಿಳಿಯದ ಆರಾಧನೆ, ಅಥವಾ ಹೃದಯಪೂರ್ವಕ ಪಶ್ಚಾತ್ತಾಪದ ಒಂದು ಕ್ಷಣ ಅವನ ಕರುಣೆ ಮತ್ತು ದಾನಶೀಲತೆಯಿಂದ ಅಪಾರ ಪ್ರತಿಫಲವನ್ನು ಪಡೆಯಬಹುದು.

ಅಲ್ಲಾಹನು ಹೇಳುತ್ತಾನೆ:

مَن جَاءَ بِالْحَسنة فله عشر أمثالها ومن جاء بالسيئة فلا يُجْزَى إِلَّا مِثْلَهَا وَهُمْ لَا يُظْلَمُونَ)

“(ಅಲ್ಲಾಹನ ಬಳಿಗೆ) ಒಂದು ಸತ್ಕರ್ಮವನ್ನು ತಂದಾತನಿಗೆ ಅದರ ಹತ್ತು ಪಟ್ಟು ಪ್ರತಿಫಲ ಸಿಗಲಿದೆ. ಆದರೆ ಒಂದು ಪಾಪಕೃತ್ಯದೊಂದಿಗೆ ಬಂದಾತನಿಗೆ ಅಷ್ಟು ಮಾತ್ರ ಪ್ರತಿಫಲ ಸಿಗಲಿದೆ. ಅವರ ಮೇಲೆ ಖಂಡಿತ ಅನ್ಯಾಯವಾಗದು.” (ಸೂರತುಲ್ ಅನ್‌ಆಮ್ 6:160)

ಹತ್ತು ದಿನಗಳ ಮಹತ್ವ

- ಅಲ್ಲಾಹು ಕುರ್‌ಆನ್‌ನಲ್ಲಿ ಇವುಗಳ ಮೇಲೆ ಪ್ರಮಾಣ ಮಾಡಿದ್ದಾನೆ

ದುಲ್ ಹಿಜ್ಜಾ ತಿಂಗಳ ಮೊದಲ ಹತ್ತು ದಿನಗಳು ಅಪಾರ ಮಹತ್ವ ಮತ್ತು ಪವಿತ್ರತೆಯನ್ನು ಹೊಂದಿವೆ. ಅವುಗಳ ಮಹಿಮೆ ಎಷ್ಟೋ ದೊಡ್ಡದಾಗಿರುವುದರಿಂದ ಅಲ್ಲಾಹನು ಕುರ್‌ಆನ್‌ನಲ್ಲಿ ಅವುಗಳ ಮೇಲೆ ಪ್ರಮಾಣ ಮಾಡುತ್ತಾನೆ:

( والفجر)

وليال عشر)

“ಪ್ರಭಾತದ ಮೇಲೆ ಪ್ರಮಾಣ, ಮತ್ತು ಹತ್ತು ರಾತ್ರಿಗಳ ಮೇಲೆ ಪ್ರಮಾಣ."

(ಸೂರತುಲ್ ಫಜ್ 89:1-2)

ಅನೇಕ ಪಂಡಿತರು ಈ "ಹತ್ತು ರಾತ್ರಿಗಳು" ಎಂದರೆ ದುಲ್ ಹಿಜ್ಜಾದ ಮೊದಲ ಹತ್ತು ದಿನಗಳು ಎಂದು ವಿವರಿಸಿದ್ದಾರೆ. ಇದು ಅವುಗಳ ವಿಶೇಷ ಸ್ಥಾನ ಮತ್ತು ಆತ್ಮಿಕ ಮಹತ್ವವನ್ನು ತೋರಿಸುತ್ತದೆ.

- ಅತ್ಯುತ್ತಮ ಆರಾಧನೆಗಳು ಈ ದಿನಗಳಲ್ಲಿ ಒಂದಾಗುತ್ತವೆ

ದುಲ್ ಹಿಜ್ಜಾದ ಮೊದಲ ಹತ್ತು ದಿನಗಳಲ್ಲಿ ಇಸ್ಲಾಮಿನ ಅತ್ಯಂತ ಮಹತ್ವದ ಆರಾಧನೆಗಳು ಒಂದಾಗಿ ಸೇರುತ್ತವೆ. ಈ ಆಶೀರ್ವಾದಿತ ದಿನಗಳಲ್ಲಿನ ಅತ್ಯಂತ ಮಹತ್ವದ ದಿನವೆಂದರೆ ಅರಫಾ ದಿನ. ಆ ದಿನ ಜನರ ಹೃದಯಗಳು ಪಶ್ಚಾತ್ತಾಪ, ಅಲ್ಲಾಹನ ಕರುಣೆ ಹಾಗೂ ಕ್ಷಮೆಯ ಆಸೆಯಿಂದ ಅವನತ್ತ ತಿರುಗುತ್ತವೆ.

- ಭಕ್ತಿಯ ದಿನಗಳು

ದುಲ್ ಹಿಜ್ಜಾದ ಮೊದಲ ಹತ್ತು ದಿನಗಳು ಪ್ರವಾದಿ ಇಬ್ರಾಹೀಮ್ (ಅ) ಅವರ ವಿಧೇಯತೆ, ಪ್ರಾಮಾಣಿಕತೆ ಮತ್ತು ಅಲ್ಲಾಹನ ಮೇಲಿನ ಸಂಪೂರ್ಣ ನಂಬಿಕೆಯನ್ನು ನೆನಪಿಸುತ್ತವೆ. ಹಜ್ಜಿನ ವಿಧಿಗಳು ಈ ಅರ್ಥಗಳನ್ನು ಪುನರುಜ್ಜಿವನಗೊಳಿಸುತ್ತವೆ ಮತ್ತು ನಿಜವಾದ ಅಲ್ಲಾಹನಿಗೆ ವಿಧೇಯತೆಯ ಮೂಲಕ ತೋರಿಸಲಾಗುತ್ತದೆ ಎಂಬುದನ್ನು ತಿಳಿಸುತ್ತವೆ.

ಲಕ್ಷಾಂತರ ಮುಸ್ಲಿಮರಿಗೆ ಈ ಸಮಯವು ಪವಿತ್ರ ಹಜ್ಜಿನ ಕಾಲವಾಗಿದೆ. ಇದು ವಿನಯ, ಪಾಪಕ್ಷಮೆ ಮತ್ತು ಆತ್ಮಿಕ ಹೊಸ ಆರಂಭದ ಸಂಕೇತವಾಗಿದೆ. ಆದರೆ ಈ ದಿನಗಳ ಕೃಪೆ ಕೇವಲ ಮಕ್ಕಾದಲ್ಲಿರುವವರಿಗೆ ಮಾತ್ರ ಸೀಮಿತವಲ್ಲ. ಅಲ್ಲಾಹನ ಕ್ಷಮೆ, ಆರಾಧನೆ ಮತ್ತು ಅವನ ಹತ್ತಿರವಾಗುವ ದಾರಿಗಳು ಅವನನ್ನು ಪ್ರಾಮಾಣಿಕವಾಗಿ ಹುಡುಕುವ ಪ್ರತಿಯೊಬ್ಬ ವಿಶ್ವಾಸಿಗೆ ತೆರೆಯಲ್ಪಟ್ಟಿವೆ.

ಈ ಪವಿತ್ರ ದಿನಗಳಲ್ಲಿ ಅಲ್ಲಾಹನೊಂದಿಗೆ ಸಂಬಂಧ ಬೆಳೆಸುವುದು.

ಈ ಪವಿತ್ರ ದಿನಗಳು ಪ್ರಾಮಾಣಿಕ ಆರಾಧನೆ ಮತ್ತು ಚಿಂತನೆಯ ಮೂಲಕ ಅಲ್ಲಾಹನ ಕರೆಯನ್ನು ಸ್ವೀಕರಿಸಲು ವಿಶ್ವಾಸಿಗಳನ್ನು ಆಹ್ವಾನಿಸುತ್ತವೆ. ತೌಬಾ (ಪಶ್ಚಾತ್ತಾಪ), ದುಆ, ಝಕ್ (ಅಲ್ಲಾಹನ ಸ್ಮರಣೆ), ಅಥವಾ ಮೌನವಾದ ಆರಾಧನೆಯ ಮೂಲಕ - ಉದ್ದೇಶ ಕೇವಲ ಹೆಚ್ಚು ಕಾರ್ಯ ಮಾಡುವುದು ಅಲ್ಲ; ಬದಲಾಗಿ, ಪ್ರಾಮಾಣಿಕತೆ ಮತ್ತು ವಿನಯದ ಮೂಲಕ ಹೃದಯವನ್ನು ಅಲ್ಲಾಹನೊಂದಿಗೆ ಮರುಸಂಪರ್ಕಿಸುವುದಾಗಿದೆ.

ಅನೇಕ ಜನರು ನೇರವಾಗಿ ಧರ್ಮವನ್ನು ತಿರಸ್ಕರಿಸುವುದರಿಂದ ಅಲ್ಲ, ಆದರೆ ನಿಧಾನವಾದ ವ್ಯತ್ಯಯಗಳಿಂದ ಆತ್ಮಿಕವಾಗಿ ದೂರವಾಗುತ್ತಾರೆ. ದಿನನಿತ್ಯದ ಕೆಲಸಗಳು, ಜವಾಬ್ದಾರಿಗಳು, ಆಯಾಸ ಮತ್ತು ನಿರಂತರ ಗದ್ದಲಗಳಿಂದ ಹೃದಯ ತುಂಬಿ ಹೋಗುತ್ತದೆ. ನಿಧಾನವಾಗಿ ಆತ್ಮಿಕ ದೂರವು ಹೃದಯದಲ್ಲಿ ನೆಲೆಸುತ್ತದೆ. ದುಲ್ ಹಿಜ್ಜಾ ಈ ಕಾರಣಕ್ಕಾಗಿ ಅಲ್ಲಾಹನ ಕರುಣೆಯಾಗಿ ಬರುತ್ತದೆ. ವಿಶ್ವಾಸ ಕೆಲವೊಮ್ಮೆ ಹೆಚ್ಚುತ್ತದೆ, ಕೆಲವೊಮ್ಮೆ ಕಡಿಮೆಯಾಗುತ್ತದೆ. ಪ್ರಾಮಾಣಿಕತೆ ದುರ್ಬಲವಾಗಬಹುದು ಮತ್ತು ಆತ್ಮಿಕ ಆಯಾಸ ಮನಸ್ಸಿನಲ್ಲಿ ನೆಲೆಸಬಹುದು.

ಅಲ್ಲಾಹು “ಅಲ್-ಫತ್ತಾಹ್" ಆಗಿರುವುದರಿಂದ ಮರಳುವ ಬಾಗಿಲುಗಳನ್ನು ತೆರೆಯುತ್ತಾನೆ. ಏಕೆಂದರೆ ಅವನು ತನ್ನ ದಾಸರು ಎಷ್ಟು ಬಾರಿ ತಪ್ಪುತ್ತಾರೆ. ಅಲಕ್ಷ್ಯರಾಗುತ್ತಾರೆ ಮತ್ತು ದೂರವಾಗುತ್ತಾರೆ ಎಂಬುದನ್ನು ಚೆನ್ನಾಗಿ ತಿಳಿದಿದ್ದಾನೆ.

ಈ ಆಶೀರ್ವಾದಿತ ದಿನಗಳು ಮತ್ತೊಂದು ವಿಷಯವನ್ನೂ ನೆನಪಿಸುತ್ತವೆ: ಅಲ್ಲಾಹನ ಸುಂದರ ಮತ್ತು ಮಹಿಮೆಯ ಹೆಸರುಗಳ ಮೂಲಕ ಅವನೊಂದಿಗೆ ಸಂಪರ್ಕ ಬೆಳೆಸುವುದು ಕೇವಲ ಅವನನ್ನು ಕರೆಯುವುದಲ್ಲ. ಆ ಹೆಸರುಗಳ ಅರ್ಥಗಳು ಹೃದಯದಲ್ಲಿ ಆಳವಾಗಿ ನೆಲೆಸುವಂತಾಗಬೇಕು.

"ಅಶ್-ಶಕೂರ್" ಎಂಬ ಹೆಸರು ವಿಶ್ವಾಸಿಗಳಿಗೆ ಲೋಕದ ಮೆಚ್ಚುಗೆ ಮತ್ತು ಪ್ರಶಂಸೆಯ ದಾಸರಾಗಬಾರದು ಎಂದು ಕಲಿಸುತ್ತದೆ. ಜನರು ಪ್ರಾಮಾಣಿಕತೆಯನ್ನು ಗಮನಿಸದೇ ಇರಬಹುದು, ತ್ಯಾಗವನ್ನು ಮರೆತುಬಿಡಬಹುದು ಮತ್ತು ಮೌನವಾಗಿ ಮಾಡಿದ ಒಳ್ಳೆಯ ಕಾರ್ಯಗಳನ್ನು ಗುರುತಿಸದೇ ಇರಬಹುದು. ಆದರೆ ಅಲ್ಲಾಹನಿಗಾಗಿ ಮಾಡಿದ ಯಾವುದೂ ಅವನ ಬಳಿಯಲ್ಲಿ ಕಳೆದುಹೋಗುವುದಿಲ್ಲ. ಜನರಿಗೆ ಕಾಣದದ್ದನ್ನು ಅಲ್ಲಾಹ ಸಂಪೂರ್ಣವಾಗಿ ತಿಳಿದಿದ್ದಾನೆ ಮತ್ತು ಅದರ ಪ್ರತಿಫಲವನ್ನು ಅಪಾರವಾಗಿ ಹೆಚ್ಚಿಸುತ್ತಾನೆ.

ಪ್ರವಾದಿ ಹೇಳಿದರು: "ಯಾರು ಅಲ್ಲಾಹನ ತೊಂಬತ್ತೊಂಬತ್ತು ಹೆಸರುಗಳನ್ನು ಅರಿತು, ಕಾಪಾಡುತ್ತಾರೋ ಅವರು ಸ್ವರ್ಗ ಪ್ರವೇಶಿಸುತ್ತಾರೆ." ಪಂಡಿತರು ವಿವರಿಸಿದಂತೆ, ಇದರ ಅರ್ಥ ಕೇವಲ ಹೆಸರುಗಳನ್ನು ಪಾಠ ಮಾಡುವುದು ಅಲ್ಲ. ಅವುಗಳ ಅರ್ಥಗಳನ್ನು ಚಿಂತಿಸಿ, ಅವುಗಳ ಮೂಲಕ ಅಲ್ಲಾಹನನ್ನು ಕರೆಯುವುದು ಮತ್ತು ಅವುಗಳ ಸತ್ಯತೆಯನ್ನು ಹೃದಯದಲ್ಲಿ ನೆಲೆಸಿಸುವ ಮೂಲಕ ಅಲ್ಲಾಹನನ್ನು ನಿಜವಾಗಿ ಅರಿಯುವುದಾಗಿದೆ.

ಅಲ್ಲಾಹು "ಅಲ್-ಫತ್ತಾಹ್" ಆಗಿರುವುದರಿಂದ, ಯಾವ ವಿಷಯವೂ ಅವನಿಗೆ ತೆರೆಯಲು, ಸುಲಭಗೊಳಿಸಲು ಅಥವಾ ಬದಲಾಯಿಸಲು ಅಸಾಧ್ಯವಲ್ಲ ಎಂದು ವಿಶ್ವಾಸಿಗಳಿಗೆ ನೆನಪಿಸುತ್ತಾನೆ. ಜನರಿಗೆ ಶಾಶ್ವತವಾಗಿ ಮುಚ್ಚಿದಂತೆ ಕಾಣುವ ಬಾಗಿಲುಗಳೂ ಅಲ್ಲಾಹನಿಗೆ ಎಂದಿಗೂ ಮುಚ್ಚಿರುವುದಿಲ್ಲ. ಯಾವ ಹೃದಯವೂ ಅವನ ಮಾರ್ಗದರ್ಶನ ಮತ್ತು ಕರುಣೆಯಿಂದ ದೂರವಲ್ಲ.

ಅದೇ ರೀತಿ, “ಅಶ್-ಶಕೂರ್" ಎಂಬ ಹೆಸರಿನ ಮೂಲಕ ಅಲ್ಲಾಹ ತನ್ನ ದಾಸರ ಮೇಲಿನ ಪ್ರೀತಿ ಮತ್ತು ದಾನಶೀಲತೆಯನ್ನು ತೋರಿಸುತ್ತಾನೆ. ಅವನಿಗಾಗಿ ಪ್ರಾಮಾಣಿಕವಾಗಿ ಮಾಡಿದ ಸಣ್ಣ ಕಾರ್ಯವನ್ನೂ ಆತನು ಗುರುತಿಸಿ, ಮೌಲ್ಯಮಾಡಿ, ಬಹಳ ಹೆಚ್ಚಿಸುತ್ತಾನೆ.

ಒಬ್ಬ ವಿಶ್ವಾಸಿ ಅಲ್ಲಾಹನ ಹೆಸರುಗಳು ಮತ್ತು ಗುಣಗಳ ಮೂಲಕ ಅವನನ್ನು ಹೆಚ್ಚು ಅರಿತುಕೊಳ್ಳುವಷ್ಟೂ, ಅವನ ಹೃದಯ ಅಲ್ಲಾಹನಲ್ಲಿ ಹೆಚ್ಚು ಶಾಂತಿ, ಆಶೆ ಮತ್ತು ಹತ್ತಿರತೆಯನ್ನು ಕಂಡುಕೊಳ್ಳುತ್ತದೆ.

ಅಂತಿಮವಾಗಿ

ದುಲ್ ಹಿಜ್ಜಾದ ಮೊದಲ ಹತ್ತು ದಿನಗಳು ಅಲ್ಲಾಹ ತನ್ನ ದಾಸರಿಗೆ ವರ್ಷದಲ್ಲಿ ನೀಡುವ ಅತ್ಯಂತ ಮಹಾನ್ ಆಶೀರ್ವಾದಗಳಲ್ಲಿ ಒಂದಾಗಿದೆ. ಈ ಪವಿತ್ರ ದಿನಗಳು ಕೇವಲ ಆರಾಧನೆಗಾಗಿ ಮಾತ್ರವಲ್ಲ; ಮರಳುವಿಕೆ, ಹೊಸ ಅಕ ಆರಂಭ ಮತ್ತು ಅಲ್ಲಾಹನ ಹತ್ತಿರವಾಗುವ ಅವಕಾಶಗಳಾಗಿವೆ.

Related Posts

Leave A Comment

Voting Poll

Get Newsletter