ಪವಿತ್ರ ದಿನಗಳು, ಅನಂತ ಪ್ರತಿಫಲಗಳು: ದುಲ್ ಹಿಜ್ಜಾ ತಿಂಗಳ ಪ್ರಥಮ ಹತ್ತು ದಿನಗಳ ಆಧ್ಯಾತ್ಮಿಕ ಪಯಣ
ಇಸ್ಲಾಂ ಧರ್ಮದಲ್ಲಿ ಕೆಲವು ಸಮಯಗಳು ಮತ್ತು ಸ್ಥಳಗಳಿಗೆ ಅತ್ಯಂತ ಪವಿತ್ರ ಸ್ಥಾನಮಾನವನ್ನು ನೀಡಲಾಗಿದೆ. ಇದರ ಉದ್ದೇಶ ಕೇವಲ ಆತ್ಮೀಯತೆಯನ್ನು ಹೆಚ್ಚಿಸುವುದಲ್ಲದೆ, ಶಾಂತಿ ಸೌಹಾರ್ದತೆ ಮತ್ತು ನ್ಯಾಯವನ್ನು ಸಂರಕ್ಷಿಸುವುದಾಗಿದೆ. ಅಲ್ಲಾಹನು ಅತ್ಯಂತ ಪುನೀತವೆಂದು ಘೋಷಿಸಿರುವ ನಾಲ್ಕು ವಿಶೇಷ ತಿಂಗಳುಗಳಿವೆ.ಧುಲ್ ಖಅದಾ, ಧುಲ್ ಹಿಜ್ಜಾ, ಮುಹರ್ರಂ ಮತ್ತು ರಜಬ್. ಈ ತಿಂಗಳುಗಳನ್ನು ಅಲ್ ಅಶ್ಹುರುಲ್ ಹುರುಂ ಎಂದು ಕರೆಯಲಾಗುತ್ತದೆ, ಅಂದರೆ ಪವಿತ್ರ ತಿಂಗಳುಗಳು.
ಈ ಪವಿತ್ರ ತಿಂಗಳುಗಳ ಮಹತ್ವವು ಮುಸ್ಲಿಮರು ತಮ್ಮ ಜೀವನದಲ್ಲಿ ಹೆಚ್ಚಿನ ಆತ್ಮ ಸಂಯಮನವನ್ನು ಪಾಲಿಸಿ ನ್ಯಾಯಸಮ್ಮತ ಕಾರಣಗಳನ್ನು ಹೊರತುಪಡಿಸಿ ಕಲಹ ಮತ್ತು ದ್ವೇಷವನ್ನು ದೂರವಿಡಬೇಕೆಂಬ ಸಂದೇಶವ ಸಾರುತ್ತದೆ. ಈ ಪಾವನತೆ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೆ ಯುದ್ಧ ಸನ್ನಿವೇಶಗಳಲ್ಲಿಯೂ ಸಾಮಾಜಿಕ ವ್ಯವಹಾರಗಳಲ್ಲಿಯೂ ಮತ್ತು ಮಾನವೀಯ ನಡುವಳಿಕೆಯಲ್ಲಿ ಕೂಡ ಆಳವಾದ ಪ್ರಭಾವ ಬೀರುತ್ತದೆ. ಬಹುವೆಡೆ, ರಂಜಾನ್ ತಿಂಗಳನ್ನು ಪವಿತ್ರ ತಿಂಗಳುಗಳಲ್ಲಿ ಒಂದೆಂದು ಭಾವಿಸುವುದು ಸಾಮಾನ್ಯ ತಿಳುವಳಿಕೆಯಾಗಿದೆ. ನಿಜವಾಗಿಯೂ ರಂಜಾನ್ ಅತ್ಯಂತ ಆತ್ಮೀಯ ಮಹತ್ವ ಹೊಂದಿದ ತಿಂಗಳಾದರೂ ಪವಿತ್ರ ತಿಂಗಳುಗಳಲ್ಲಿ ಅದನ್ನು ಪರಿಗಣಿಸಲಿಲ್ಲ. ಈ ಪುನೀತ ತಿಂಗಳುಗಳಿಗೆ ಇಸ್ಲಾಂ ಧರ್ಮವು ಪೂರ್ವಕಾಲದಿಂದಲೇ ವಿಶೇಷ ಗೌರವವಿದ್ದು ಇಸ್ಲಾಂ ಅದನ್ನು ದೈವಿಕ ಮಾನ್ಯತೆಯೊಂದಿಗೆ ಮತ್ತಷ್ಟು ಸ್ಥಿರಪಡಿಸಿತು. ಈ ಅವಧಿಯಲ್ಲಿ ಅರಬಿಗಳು ಯುದ್ಧಗಳನ್ನು ನಿಲ್ಲಿಸಿ ವಿಶೇಷವಾಗಿ ಕಅಬಾಕ್ಕೆ ಪ್ರಯಾಣಿಸುವ ಯಾತ್ರಿಕರಿಗೆ ಸುರಕ್ಷಿತ ಸಂಚಾರ ಮತ್ತಿತರ ಶಾಂತಿಯ ವಾತಾವರಣವನ್ನು ಒದಗಿಸುತ್ತಿದ್ದರು.
ಇಸ್ಲಾಂ ಪೂರ್ವ ಕಾಲದ ಪಂಚಾಂಗ ಕುಶಲತೆ
ಈ ತಿಂಗಳುಗಳನ್ನು ಎಷ್ಟು ಉನ್ನತ ಗೌರವದಿಂದ ಕಾಣಲಾಗುತ್ತಿದೆ ಎಂದರೆ, ಇಸ್ಲಾಂ-ಪೂರ್ವ ಅರಬ್ಬರು ತಮ್ಮ ವಿಗ್ರಹಾರಾಧನೆ ಮತ್ತು ಬುಡಕಟ್ಟು ಕಲಹಗಳ ನಡುವೆಯೂ ಈ ಪವಿತ್ರ ತಿಂಗಳುಗಳ ಮೇಲಿದ್ದ ಗೌರವದಿಂದಾಗಿ ಸಾಮಾನ್ಯವಾಗಿ ಯುದ್ಧಗಳಿಂದ ದೂರವಿರುತ್ತಿದ್ದರು.
ತಮ್ಮ ಐತಿಹಾಸಿಕ ಪವಿತ್ರತೆಯನ್ನು ಮೀರಿಯೂ, ತಿಂಗಳುಗಳು ಅವುಗಳ ಹೆಚ್ಚಿನ ಆಧ್ಯಾತ್ಮಿಕ ಮಹತ್ವದಿಂದಾಗಿ ವಿಶಿಷ್ಟವಾಗಿ ಗುರುತಿಸಲ್ಪಡುತ್ತದೆ. ಈ ಅವಧಿಯಲ್ಲಿ ಮಾಡಿದ ಸತ್ಕರ್ಮಗಳು ಮತ್ತು ದುಷ್ಕರ್ಮಗಳು ಎರಡು ಪುಣ್ಯ ಮತ್ತು ಪಾಪದ ವಿಷಯದಲ್ಲಿ ಹೆಚ್ಚಿನ ತೂಕವ(ಪರಿಣಾಮವ) ಕಾಡುತ್ತದೆ. ಇದನ್ನು ಅಲ್ ಹಾಫಿಲ್ ಬಿನ್ ರಜಬುಲ್ ಹಂಬಲ್ ಅವರು ಅತ್ಯಂತ ಸೂಕ್ತವಾಗಿ ಹೀಗೆ ಎಚ್ಚರಿಸಿದ್ದಾರೆ:
احذروا المعاصي فانها تحرم المغفرة في مواسم الرحمة
ಪ್ರಾರ್ಥನೆಯ ಸಮಯ ಪಾಪ ಮಾಡುವುದು ಸಾಮಾನ್ಯ ಸಂದರ್ಭಗಳಿಂದ ಹೇಗೆ ಹೆಚ್ಚು ಗಂಭೀರವಾದದ್ದೋ, ಹಾಗೆಯೇ ಈ ಪವಿತ್ರ ಕಾಲದಲ್ಲಿ ಮಾಡುವ ಉಲ್ಲಂಘನೆಗಳು (ಪಾಪಗಳು) ಹೆಚ್ಚು ಭೀಕರವಾದ ಪರಿಣಾಮವ ಕಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಈ ತಿಂಗಳುಗಳಲ್ಲಿ ಮಾಡುವ ಸತ್ಕರ್ಮಗಳಿಗೆ ಸಿಗುವ ಪ್ರತಿಫಲವ ಪುಣ್ಯ ಹತ್ತಾರು ಪಟು ಹೆಚ್ಚಾಗಿರುತ್ತದೆ. ಹೀಗಾಗಿ ಈ ಅವಧಿಯ ಆಧ್ಯಾತ್ಮಿಕ ಉನ್ನತಿ ಮತ್ತು ದೈವಿಕ ಸಾಮಿಪ್ಯವನ್ನು (ಸಾನಿಧ್ಯ) ದೊರಕಿಸಲು ಅತ್ಯಂತ ಸೂಕ್ತ ಹಾಗೂ ಶ್ರೇಷ್ಠವಾದ ಅವಕಾಶಗಳನ್ನು ಒದಗಿಸಿಕೊಡುತ್ತದೆ.
ದುಲ್ ಹಿಜ್ಜಾ : ಪವಿತ್ರ ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು
ನಾಲ್ಕು ಪುನೀತ ತಿಂಗಳುಗಳ ಪೈಕಿ, ದುಲ್ ಹಿಜ್ಜಾ ತಿಂಗಳು ವಿಶಿಷ್ಟ ಹಾಗೂ ಅತ್ಯುನ್ನತ ಸ್ಥಾನವನ್ನು ಹೊಂದಿದೆ. ಇದು ಪವಿತ್ರ ಹಜ್ಜ್ ಆಚರಣೆಗಳು ಮತ್ತು ಯವ್ಮುಲ್ ನಹ್ರ್ (ಬಲಿದಾನದ ದಿನ) ಮುಂತಾದ ಶ್ರೇಷ್ಠ ದಿನಗಳನ್ನು ಒಳಗೊಂಡಿರುವುದರಿಂದ ರಂಜಾನ್ ತಿಂಗಳ ಹೊರತಾಗಿ ಆಧ್ಯಾತ್ಮಿಕವಾಗಿ ಅತ್ಯಂತ ತೀವ್ರವಾದ ಹಾಗೂ ಪವಿತ್ರವಾದ ಕಾಲಾವಧಿಯಾಗಿದೆ.
ಅಬೂ ಬಕರ್(ರ.ಅ) ಅವರು ವರದಿಪಡಿಸಿರುವ ಪ್ರಕಾರ ಪ್ರವಾದಿಯವರ (ಸ.ಅ) ಅಂತಿಮ ಯಾತ್ರೆಯ (ಹಜ್ಜತುಲ್ ವಿದಾಅ) ಸಂದರ್ಭದಲ್ಲಿ ಅವರು ಜೀವನ, ಸಮಯ ಮತ್ತು ಸ್ಥಳದ ಪವಿತ್ರತೆಯನ್ನು ನೆನಪಿಸುವಂತಹ ಒಂದು ಗಂಭೀರವಾದ ಭಾಷಣವನ್ನು ತಮ್ಮ ಸಹಚರರನ್ನು (ಸ್ವಹಾಬಿಗಳನ್ನು) ಉದ್ದೇಶಿಸಿ ಮಾಡಿದರು: ಇದು ಯಾವ ದಿನ? ಎಂಬ ಪ್ರವಾದಿಯ (ಸ.ಅ) ಪ್ರಶ್ನೆಗೆ ಪ್ರವಾದಿ ಆ ದಿನಕ್ಕೆ ಬೇರೆ ಯಾವುದಾದರೂ ಹೆಸರಿಡಬಹುದು ಎಂದು ಭಾವಿಸಿ ನಾವು ಮೌನವಾಗುಳಿದೆವು. ಆಗ ಪ್ರವಾದಿಯು (ಸ.ಅ) ಇದು ಬಲಿದಾದ ಬಲಿದಾನದ ದಿನ ಅಲ್ಲವೇ ಎಂದು ಕೇಳಿದರು. ನಾವು ಹೌದು ಎಂದು ಉತ್ತರಿಸಿದವು. ತದನಂತರ ಪ್ರವಾದಿ (ಸ.ಅ) ರವರು ಹೀಗೆ ಘೋಷಿಸಿದರು: ನಿಶ್ಚಿತವಾಗಿಯೂ ನಿಮ್ಮ ರಕ್ತ, ಸಂಪತ್ತು ಮತ್ತು ಗೌರವಗಳು ಪರಸ್ಪರ ಅಷ್ಟೇ ಪವಿತ್ರವಾಗಿವೆ- ಹೇಗೆಂದರೆ ನಿಮ್ಮ ಈ ದಿನ, ಈ ತಿಂಗಳು ಹಾಗೂ ಈ ನಗರವು ಎಷ್ಟು ಪವಿತ್ರವಾಗಿವೆಯೋ ಅಷ್ಟೇ ಪವಿತ್ರವಾಗಿವೆ. ಇಲ್ಲಿ ಉಪಸ್ಥಿತರಿರುವವರು ಈ ಸಂದೇಶವನ್ನು ಇಲ್ಲಿಲ್ಲದವರಿಗೆ ತಲುಪಿಸಲಿ, ಏಕೆಂದರೆ ಈ ಸಂದೇಶ ಸ್ವೀಕರಿಸುವವರು ಅದನ್ನು ನೇರವಾಗಿ ಕೇಳಿದವರಿಗಿಂತಲೂ ಹೆಚ್ಚು ಚೆನ್ನಾಗಿ ಗ್ರಹಿಸಿ ಅರ್ಥಮಾಡಿಕೊಳ್ಳಬಹುದು. (ಸ್ವಹೀಹ್ ಬುಖಾರಿ, ಸ್ವಹೀಹ್ ಮುಸ್ಲಿಂ)
ಈ ಬಲವಂತ ಪ್ರವಚನವು ದುಲ್ ಹಿಜ್ಜಾ ತಿಂಗಳಿಗಿರುವ ಅಪಾರವಾದ ಪವಿತ್ರತೆಯನ್ನು ಒತ್ತಿ ಹೇಳುತ್ತದೆ. ಇದು ಕೇವಲ ಹಜ್ಜ್ ನ ಅತ್ಯಂತ ಪ್ರಮುಖ ಧಾರ್ಮಿಕ ವಿಧಿ ವಿಧಾನಗಳಿಗೆ ವೇದಿಕೆಯಾಗಿದೆ. ನೈತಿಕ ಮತ್ತು ಸಾಮಾಜಿಕ ಮಾರ್ಗದರ್ಶನ ನೀಡುವ ಶ್ರೇಷ್ಠ ಮಾಧ್ಯಮವಾಗಿಯೂ ಕಾರ್ಯ ನಿರ್ವಹಿಸುತ್ತದೆ, ಅಲ್ಲದೇ ಮಾನವ ಜೀವನ, ಘನತೆ ಮತ್ತು ಆಸ್ತಿಪಾಸ್ತಿಗಳ ಉಲ್ಲಂಘಿಸಲಾಗದ ಪವಿತ್ರತೆಯನ್ನು ವಿಶ್ವಾಸಿಗಳಿಗೆ ಸದಾ ನೆನಪಿಸುತ್ತದೆ.
ಫಲವರ್ಧನೆ: ದುಲ್ ಹಿಜ್ಜಾ ತಿಂಗಳ ಪ್ರಥಮ ಹತ್ತರ ದಿವ್ಯ ಅನುಗ್ರಹಗಳು
ಇಸ್ಲಾಮಿಕ್ ಕ್ಯಾಲೆಂಡರ್ನಲ್ಲಿ ದುಲ್ ಹಿಜ್ಜಾ ತಿಂಗಳ ಮೊದಲ 10 ದಿನಗಳು ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ ಅವಧಿಗಳಾಗಿವೆ. ಪ್ರವಾದಿ ಮುಹಮ್ಮದ್(ಸ.ಅ) ರವರು ಈ ದಿನಗಳ ಅಪಾರ ಮೌಲ್ಯವನ್ನು ಒತ್ತಿ ಹೇಳುತ್ತಾ ತನ್ನ ಪ್ರಾಣ ಮತ್ತು ಸಂಪತ್ತು ಎರಡನ್ನೂ ಒದ್ದೆ ಇಟ್ಟು ಹೋರಾಡಿ ಕೊನೆಗೆ ಯಾವುದನ್ನು ಮರಳಿ ಪಡೆಯದೆ ಎಲ್ಲವನ್ನು ಕಳೆದುಕೊಂಡವನನ್ನು ಹೊರತುಪಡಿಸಿದರೆ ಬೇರೆ ಯಾವುದೇ ವ್ಯಕ್ತಿ ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಸಹ ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗೆ ಸರಿಸಾಟಿಯಾಗಲಾರೆಂದು ವರದಿಪಡಿಸಿದ್ದಾರೆ.
ದುಲ್ ಹಿಜ್ಜಾ ತಿಂಗಳ, ಅದರಲ್ಲೂ ವಿಶೇಷವಾಗಿ ಅದರ ಮೊದಲ 10 ದಿನಗಳ ಕುರಿತು ಅತಿ ಹೆಚ್ಚು ಉಲ್ಲೇಖಿಸಲಾಗುವ ಪ್ರಮುಖ ಹದೀಸ್ ಗಳಲ್ಲಿ ಒಂದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಇಬ್ನು ಅಬ್ಬಾಸ್(ರ.ಅ) ರವರು ವರದಿ ಮಾಡಿರುವ ಪ್ರಕಾರ ಪ್ರವಾದಿಯವರು (ಸ.ಅ) ಹೀಗೆ ಆಜ್ಞಾಪಿಸಿದ್ದಾರೆ: ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಂದ ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಹಾಗೂ ಉತ್ತಮವಾದ ಸತ್ಕರ್ಮಗಳು ಬೇರೆ ಯಾವುದೇ ದಿನಗಳಲ್ಲೂ ಇಲ್ಲ.
ಈ ವಿಶೇಷವಾದ ಒತ್ತು, ದೈವಿಕ ಪಾವಿತ್ರತೆಯ ಪ್ರತಿಫಲ ಹಾಗೂ ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ಈ ದಿನಗಳು ಹೊಂದಿರುವ ಸಾಟಿಯಿಲ್ಲದ ಮಹತ್ವ ಮತ್ತು ಶ್ರೇಷ್ಠತೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಈ ಹದೀಸ್ ನ ಸ್ಪಷ್ಟೀಕರಣವ ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ಮುಸ್ಅಬ್ ಬಿನ್ ಉಮೈರ್ (ರ.ಅ) ರವರ ಜೀವನವನ್ನು ನೋಡಬಹುದು. ಅವರು ಇಸ್ಲಾಮಿನ ಧರ್ಮಕ್ಕಾಗಿ ಸೌಕರ್ಯ ಸಂಪತ್ತು ಸ್ಥಾನಮಾನವನ್ನು ತ್ಯಜಿಸಿ ಸಂಪೂರ್ಣ ತ್ಯಾಗವನ್ನು ಮೈಗೂಡಿಸಿಕೊಂಡ ಸಹಚರರಾಗಿದ್ದಾರೆ.
ಮುಸ್ಲಿಮರ ಆರಂಭಿಕ ತಲೆಮಾರುಗಳು ಈ ದಿನಗಳ ಮಹತ್ವವನ್ನು ಆಳವಾಗಿ ಮನದಟ್ಟು ಮಾಡಿಕೊಂಡಿದ್ದರು. ಒಂದು ಮಹತ್ತರವಾದ ಉದಾಹರಣೆ ಎಂದರೆ ಪ್ರಖ್ಯಾತ ತಾಬಿಈ ಪಂಡಿತರಾದ ಸಈದ್ ಬಿನ್ ಜುಬೈರ್ ರವರು ನಿರೂಪಿಸಿದ್ದಾರೆ. ಇಬ್ನು ಅಬ್ಬಾಸ್ (ರ.ಅ), ಈ 10 ದಿನಗಳ ಶ್ರೇಷ್ಠತೆಯ ಕುರಿತಾದ ಹದೀಸನ್ನು ತಲುಪಿಸಿದ ಸ್ವಹಾಬಿಯರು ಈ ಸಮಯದಲ್ಲಿ ಒಬ್ಬಂಟಿಯಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ಇಬಾದತ್ ಗೆ ಮೀಸಲಿಡುತ್ತಿದ್ದರು. ಅವರ ಈ ಸಮರ್ಪಣೆಯು, ಧರ್ಮನಿಷ್ಠೆಯು ಪೂರ್ವಜರು ಈ ಪವಿತ್ರ ಅವಧಿಯ ಬಗ್ಗೆ ಹೊಂದಿದ್ದ ಆಳವಾದ ಗೌರವ ಪ್ರತಿಫಲಿಸುತ್ತದೆ