ಮಸೀದಿ ಧ್ವಂಸವಾದ ಮಣ್ಣಿನಲ್ಲಿ ರಾಮಮಂದಿರ ಬೆಳೆದಾಗ
ಇತಿಹಾಸದ ಮುಖಪುಟಗಳನ್ನು ಹರಿದಂತಾಗಿದೆ , ಆ ಹರಿದ ಪುಟಗಳ ಬಾಕಿಯು ಇತಿಹಾಸ ಸೃಷ್ಟಿಸಲಿದೆ ಗತಕಾಲದ ಸ್ಮರಣಾರ್ಥಕ ದೈವ ಕೇಂದ್ರವು ನೆಲಕ್ಕುರುಳಿದರೇ ಹೊಸ ಬಂಡವಾಳದ ಹೊಸ ಕಥೆಗಳನ್ನು ಸೃಷ್ಟಿ ಮಾಡುತ್ತಾ ಶ್ರೀರಾಮನ ಭವ್ಯ ರಾಮ ಮಂದಿರ ತಲೆ ಎತ್ತುವ ಶತಮಾನಗಳ ಮಹಾ ಕನಸಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಒಂದೆಡೆ ಮುಸಲ್ಮಾನರ ಬಾಬರಿಯು ನಷ್ಟವಾಯಿತೆಂಬ ಬೇಸರದಲ್ಲಿ ಕಲೆಯುತ್ತಿರುವಾಗ ಮತ್ತೊಂದೆಡೆ ತಮಗೆ ನ್ಯಾಯ ಸಿಗದೆಯೇ ರಾಮಮಂದಿರ ಶಿಲನ್ಯಾಸಗೊಂಡಿತು ಎಂಬ ದುಃಖವೂ ಇದೆ.
ಮರೆಯಲಾಗದ ನೆನಪುಗಳ ದಿನದಲ್ಲಿ ಹಾದುಹೋದ ಬಾಬರಿ ಮಸೀದಿ ಧ್ವಂಸವಾದ ಕರಾಳ ದಿನವು ಕೆಲವರಿಗೆ ಶುಭ ದಿನವಾಯಿತು. ಅಂದಿನಿಂದ ಇಂದಿನವರೆಗೂ ನಡೆಸಿದ ಹೋರಾಟಗಳೆಲ್ಲವೂ ವಿಫಲವಾಯಿತು. ಕೊನೆಗೂ ರಾಜಕಾರಣಿಗಳ ರಾಜಕೀಯ ಬಂಡವಾಳದಿಂದ ತಮಗೆ ಬೇಕಾದಂತೆ ಆಳುವ ನಿರ್ಧರಿಸುವ ಸ್ಥಿತಿಗೆ ನಮ್ಮ ದೇಶವು ಬಲಿಯಾಯಿತು .
ಏಕತೆಯಲ್ಲಿ ಭವ್ಯತೆ ಹೊಂದಿದ ಭಾರತದ ಒಗ್ಗಟ್ಟಿನ ಕಟ್ಟುಗಳೆಲ್ಲವೂ ಒಂದೊಂದಾಗಿ ಮುರಿದು ಹೋಯಿತು. ದೇಶದ ಸ್ವಾತಂತ್ರ್ಯಕ್ಕೆ ಬೇಕಾಗಿ ಹೋರಾಡಿದ ನಾಯಕರು ಕಲಿಸಿಕೊಟ್ಟ ಸೌಹಾರ್ಧತೆಯ ಸಂಕೇತವೂ ಬದಲಾಗುತ್ತಿದೆ. ನಮ್ಮ ದೇಶವನ್ನೇ ಒಂದು ಹಿಂದೂ ರಾಷ್ಟ್ರವನ್ನಾಗಿ ಮಾಡುವ ರೀತಿಯಲ್ಲಿ ಬದಲಾಗುತ್ತಿದೆ. ಒಂದು ಧರ್ಮದ ದೇವಾಲಯವು ಅಡಿಪಾಯವಾಗಿ ಇನ್ನೊಂದು ಧರ್ಮದ ದೇಗುಲಕ್ಕೆ ಎಂಬ ರೀತಿಯಲ್ಲಿ ಮಾರ್ಪಡುತ್ತಿದ್ದರು ಇದರ ಕುರಿತು ಪ್ರಶ್ನಿಸಲು ಯಾರೂ ಇಲ್ಲ ....! ಯಾರೋ ಯಾತಕ್ಕಾಗಿಯೋ ಯಾವುದೋ ಲಾಭದ ಹೆಸರಲ್ಲಿ ನಡೆಸಿದ ದ್ವಂಸದಂತೆ ಇದೆ ಇವುಗಳೆಲ್ಲವೂ...... ಇದೊಂದು ಸುದೀರ್ಘ ಪಯಣದ ಕೊನೆ. ಇದು ಆಲೋಚನೆಗಳ ನಡುವಿನ ಹೋರಾಟವಾಗಿತ್ತು ಜಾತ್ಯಾತೀತತೆಯನ್ನು ಭಾರತದ ಜನರ ಮನಸ್ಸಲ್ಲೇ ಸೋಲಿಸಲಾಯಿತು. ಅಗಸ್ಟ್ 5 ಜಾತ್ಯಾತೀತತೆಯ ಸಮಾಧಿಯ ದಿನ.ಇದು ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಒಂದರ ಭೂಮಿಪೂಜೆ ನಡೆದಿದೆ ಎಂಬ ಕಾರಣಕ್ಕೆ ಅಲ್ಲ ಯಾವುದೇ ದೇವಸ್ಥಾನ ಮಾತ್ರವಲ್ಲ ಗುರುದ್ವಾರ ಚರ್ಚೆ ಅಥವಾ ಮಸೀದಿಯ ನಿರ್ಮಾಣ ಯಾವುದೇ ಜಾತಿ ವ್ಯವಸ್ಥೆಯ ಮರಣ ಕಾರಣವಾಗಬಾರದು ಒಂದು ಭವ್ಯ ಮಂದಿರ ಅದು ಶ್ರೀ ರಾಮನಿಗಾಗಿ ಅದರಲ್ಲೂ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದು ಸಮಾನ್ಯವಾಗಿ ಗುರುನಾನಕರ ಜನ್ಮಸ್ಥಳದಲ್ಲಿ ಯಾತ್ರಿಕರಿಗಾಗಿ ಕಾರಿಡಾರ್ ನಿರ್ಮಾಣ ಮಾಡಿದರೆ ಸಂಭ್ರಮಕ್ಕೆ ಕಾರಣವಾಗಬೇಕು. ಸಮಾರಂಭವನ್ನು ಒಬ್ಬ ರಾಜಕಾರಣಿ ನೆರವೇರಿಸುವುದು ಮಾದರಿ ಅಲ್ಲವಾದರೂ ಭಾರತದಲ್ಲಿ ತೀರಾ ಅಸಾಮಾನ್ಯವೂ ಅಲ್ಲ.
ಜಾತ್ಯಾತೀತತೆಯ ಪ್ರತಿಪಾದಕರು ಜನರ ನಡುವೆ ನಡೆದ ಆಲೋಚನೆಗಳ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ನಿರಾಕರಿಸಿದರು ಜಾತ್ಯಾತೀತತೆ ಸೋಲಲು ಕಾರಣ ಎಂಬುದನ್ನು ನಾವು ಗುರುತಿಸಬೇಕು. ಜಾತ್ಯಾತೀತತೆಯೂ ಉನ್ನತ ವರ್ಗ ಮೇಲಿಂದ ಕೆಳಗೆ ನಿಂತ ಜನರಲ್ಲಿ ಇಂಗ್ಲಿಷ್ನಲ್ಲಿಯೇ ಮಾತಾಡಿತು. ಅದರಿಂದ ಜಾತ್ಯತೀತತೆ ನಮ್ಮ ಭಾಷೆಗಳನ್ನು ಕೈಬಿಟ್ಟಿತು ಸಂಪ್ರದಾಯವಾದ ಯಾವುದೇ ಕಾರ್ಯಗಳಿಗೂ ಬೆಲೆ ಕೊಡಲಿಲ್ಲಾ....
ಇವತ್ತು ಸಾಂಸ್ಕೃತಿಕ ನಿರ್ವಹಣೆಯು ಎಂತಹ ಪರಿಸ್ಥಿತಿ ನಿರ್ಮಿಸಿದೆಯೆಂದರೆ ತ್ರಿಶೂಲ ಇಟ್ಟುಕೊಂಡ ಯಾರೇ ಒಬ್ಬ ಹಿಂದೂಗಳ ನಾಯಕನ ಆಗಬಹುದು ಇದರಿಂದಾಗಿ ಜಾತ್ಯಾತೀತತೆಯನ್ನು ತರಾಕ್ಷಸೀಯವೆಂದು ಹೇಳುವ ಅದರ ಮೇಲೆ ದಾಳಿ ಮಾಡುವ ಒಂದು ವಾತಾವರಣ ನಿರ್ಮಾಣವಾಗಿದೆ.
ಹಾಗಾಗಿ ಇವತ್ತು ನಾವು ಕಳೆದುಕೊಂಡಿರುವ ಧಾರ್ಮಿಕ ಸಹಿಷ್ಣುತೆಯ ಭಾಷೆಯನ್ನು ಮತ್ತೆ ಕಂಡುಕೊಳ್ಳುವ , ಹಿಂದೂ ಧರ್ಮದ ಹೊಸ ವ್ಯಾಖ್ಯೆ ನೀಡುವ ಮತ್ತು ನಮ್ಮ ಪ್ರಜಾಪ್ರಭುತ್ವದ ಭವಿಷ್ಯವನ್ನು ಮತ್ತೆ ಗಳಿಸಲು ಹೋರಾಡುವ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಸರಿಯಾದ ದಿನವಾಗಿದೆ ಇಂದು..