ಇಐಎ (EIA) ಎಂದರೇನು?
ಪರಿಸರ ಅಧಿಸೂಚನೆ 2020 ಎಂದರೇನು? ಈ ಅಭಿಯಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಗಾಧ ಬೆಂಬಲ ಲಭಿಸಿದೆ.ಪರಿಸರ ಹೆಚ್ಚು ಚರ್ಚೆಯಾಗುತ್ತಿರುವ ಈ ಸಮಯದಲ್ಲಿ ಅಸ್ತಿತ್ವದಲ್ಲಿರುವ ಪರಿಸರ ಕಾನೂನುಗಳನ್ನು ಸರಳೀಕರಿಸಲು ನಮ್ಮ ದೇಶ ಸಿದ್ಧತೆ ನಡೆಸುತ್ತಿದೆ ಎಂದು ಒಂದೇ ವಾಕ್ಯದಲ್ಲಿ ಹೇಳಬಹುದು. ಕೇರಳಿಗರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಜನರ ಅಭಿಪ್ರಾಯವನ್ನು ದಾಖಲಿಸುವ ಸಮಯ ಅಂತಿಮ ವಾಗುತ್ತಿದ್ದಂತೆ ದೊಡ್ಡ ಮಾರ್ಪಡಕ್ಕೆ ಸಾಕ್ಷಿಯಾಗುತ್ತಿದೆ.ಸಾರ್ವಜನಿಕ ಮತ್ತು ರಾಜಕೀಯ ನೇತೃತ್ವವು ಇದರ ವಿರುದ್ಧ ಹೋರಾಡುವ ಸಮಯ ಅಂತಿಮವಾಗಿದೆ.
    
ಪರಿಸರವಾದಿ ಸಿಆರ್ ನೀಲಕಂಠನ್ ಹೇಳುತ್ತಾರೆ:"ಸಮಗ್ರ ಪರಿಸರ ಸಂರಕ್ಷಣಾ ಕಾಯ್ದೆಯನ್ನು  1984 ರಲ್ಲಿ ಪರಿಚಯಿಸಲಾಯಿತು.ಕೈಗಾರಿಕೆಗಳು ಮತ್ತು ಇತರ ಪರಿಸರ ಕಾನೂನುಗಳಿಗೆ ಅನುಸಾರವಾಗಿ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಗುರಿಯಾಗಿತ್ತು.ಪರಿಸರ ಪ್ರಭಾವದ ಮೌಲ್ಯಮಾಪನ ಇಐಎ ವ್ಯವಸ್ಥೆಯನ್ನು 1994ರಲ್ಲಿ ಪರಿಚಯಿಸಲಾಯಿತು. ಪ್ರಸ್ತುತ ಕಾನೂನುಗಳಿಗೆ ಕೆಲವು ಸುಧಾರಣೆಗಳು ಮತ್ತು ಕೆಲವು ರಿಯಾಯಿತಿಗಳೊಂದಿಗೆ 2006 ರಲ್ಲಿ ಜಾರಿಗೆ ತರಲಾಯಿತು.  ಈ ಹಿಂದೆ ಯೋಜನೆಗಳನ್ನು ಅನುಮೋದಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇತ್ತು.  ನಂತರ, ಕೆಲವು ಯೋಜನೆಗಳು ರಾಜ್ಯಗಳಿಗೆ ಅಧಿಕಾರ ನೀಡಲಾಯಿತು.  ಇದನ್ನು ಎ (ಕೇಂದ್ರ) ಮತ್ತು ಬಿ (ರಾಜ್ಯ) ವಿಭಾಗಗಳಾಗಿ ಮರುನಾಮಕರಣ ಮಾಡಲಾಯಿತು.
ಆದರೆ ಈಗ ಇದನ್ನು ಅಲಿಸಲು ಪ್ರಯತ್ನ ಪಡುತ್ತಿದ್ದಾರೆ. ವಿಶ್ವವು ಪರಿಸರ ಪರಿಗಣನೆಗಳೊಂದಿಗೆ ಮುಂದುವರಿಯುತ್ತಿರುವಾಗ,ಇಲ್ಲಿರುವುದನ್ನು ಕೂಡ ನಿರ್ಮೂಲನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ ಅಧಿಸೂಚನೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಮಾತ್ರ. ಸ್ಥಳೀಯ ಭಾಷೆಗಳನ್ನು ತಳ್ಳಿಹಾಕುವುದು ಕಾನೂನುಬಾಹಿರ.
 ಅನೇಕ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ನೀಡಲಾಗಿದ್ದ ರಿಯಾಯಿತಿಗಳನ್ನು ಈಗ ಹೆಚ್ಚಿಸಲಾಗಿದೆ.  ಲೋಹದ ಸಂಸ್ಕರಣಾ ಘಟಕಗಳ ಮಿತಿಯನ್ನು 30,000 ಟನ್‌ಗಳಿಂದ ಒಂದು ಲಕ್ಷ ಟನ್‌ಗೆ ಏರಿಸಲಾಗಿದೆ. ಮತ್ತು ಮೀನುಗಾರಿಕೆ ಬಂದರುಗಳ ಮಿತಿಯನ್ನು ವರ್ಷಕ್ಕೆ 10,000 ಟನ್‌ಗಳಿಗೆ ಮೂರು ಪಟ್ಟು ಹೆಚ್ಚಿಸಲಾಗಿದೆ.  70 ಮೀಟರ್‌ಗಿಂತ ಕಡಿಮೆ ಅಗಲವಿರುವ ಹೆದ್ದಾರಿಗೆ ಅನುಮತಿ ಅಗತ್ಯವಿಲ್ಲ. 2000 ಹೆಕ್ಟೇರ್‌ನಿಂದ 50,000 ಹೆಕ್ಟೇರ್ ವರೆಗೆ ನೀರಾವರಿ ಯೋಜನೆಗಳು ಬಿ ೧ ವಿಭಾಗದಲ್ಲಿದ್ದವು. ಇದನ್ನು 10,000 ದಿಂದ 50,000 ಹೆಕ್ಟೇರ್‌ಗೆ ಹೆಚ್ಚಿಸಲಾಯಿತು.
ಸಾಗರ ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವ ಹಾಗೂ ಪರಿಷ್ಕರಿಸುವ ಯೋಜನೆಗಳು ಈ ಹಿಂದೆ *ಎ* ವಿಭಾಗದಲ್ಲಿ ಒಳಗೊಂಡಿದ್ದವು. ಅದನ್ನು ಈಗ ದ್ವಿಗುಣಗೊಳಿಸಿದರು. ಹೆಚ್ಚು ಪರಿಸರಕ್ಕೆ ಹಾನಿಕಾರಕ ಗಣಿಗಾರಿಕೆಯನ್ನು ಹೊರತುಪಡಿಸಿದ ಅಧ್ಯಾಯನೇತರ *ಬಿ* ವಿಭಾಗಕ್ಕೆ ವಿಂಗಡಿಸಲಾಗಿದೆ.  ಉಷ್ಣ ವಿದ್ಯುತ್ ಸ್ಥಾವರಗಳ ಪರವಾನಗಿಗಳನ್ನು ಸಹ ಸರಳೀಕರಿಸಲಾಗಿದೆ.  ಹಿಂದೆ, 20 ಮೆಗಾವ್ಯಾಟ್ ಮತ್ತು ಅದಕ್ಕಿಂತ ಹೆಚ್ಚಿನವರು ಕೇಂದ್ರ ವರ್ಗದ ಅನುಮೋದನೆ ಅಗತ್ಯವಿತ್ತು. ಈಗ ಅವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ,100 ಮೆಗಾವ್ಯಾಟ್ಗಿಂತ ಹೆಚ್ಚಿನವರಿಗೆ *ಎ* ವಿಭಾಗ, ಹಾಗೂ 15 ರಿಂದ 100 ಮೆಗಾವ್ಯಾಟ್ ನಡುವಿನವರಿಗೆ *ಬಿ* ವಿಭಾಗ. ಇವು ಹೊಸ ನವೀಕರಣಗಳು.
ಹೊಸ ಕ್ರಮವು 1,50,000 ಚದರ ಮೀಟರ್ ವರೆಗಿನ ಕಟ್ಟಡಗಳಿಗೆ ಪರಿಸರ ಪರವಾನಗಿ ಪಡೆಯಲು ಯಾವುದೇ ಅಧ್ಯಯನ ಅಥವಾ ಪುರಾವೆಗಳ ಅಗತ್ಯವಿಲ್ಲ.  ಹಿಂದೆ ಇದು 20,000 ಚದರ ಮೀಟರ್ ಆಗಿತ್ತು.
ಐದು ಎಕರೆ ವರೆಗೆ ಗಣಿಗಾರಿಕೆಗೆ ಅನುಮತಿ ಬೇಡವೆಂದು *ಇಐಎ* ತೀರ್ಮಾನ. ಅರ್ಜಿ ಸಲ್ಲಿಸಿದ ಹದಿನೈದು ದಿನಗಳಲ್ಲಿ ಪರಿಸರ ಪರವಾನ ಉತ್ತರ ನೀಡದಿದ್ದರೆ, ಪರವಾನಗಿ ಉತ್ತರ ಪಡೆಯಲಾಗಿದೆ ಎಂದು ಪರಿಗಣಿಸಲಾಗುತ್ತದೆ.ಯೋಜನೆಗಳ ವರ್ಗೀಕರಣವನ್ನು ಅವುಗಳ ಪರಿಸರ ಪರಿಣಾಮವನ್ನು ವಿಕ್ಷಿಸುವ ಬದಲು ಅದರ ವೆಚ್ಚವನ್ನು ಸಹ ಪರಿಗಣಿಸಬೇಕು. ದಿನಕ್ಕೆ 10,000 ಲೀಟರ್ ಸ್ಥಳೀಯ ಮದ್ಯವನ್ನು ಉತ್ಪಾದಿಸುವ ಘಟಕಗಳನ್ನು ಪರಿಸರ ಪ್ರಭಾವದಿಂದ ಹಾಗೂ ಸಾರ್ವಜನಿಕ ಸಾಕ್ಷ್ಯ ಸಂಗ್ರಹದಿಂದ ಹೊರಗಿಡಲಾಗುತ್ತದೆ.  ಬಂದರುಗಳ ಕಾರ್ಯಾಚರಣೆಗೆ ಭೂಸ್ವಾಧೀನಕ್ಕೆ ಪೂರ್ವ ಅನುಮತಿಯ ಅಗತ್ಯವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
ಎತ್ತರದ ರಸ್ತೆಗಳು ಮತ್ತು ಫ್ಲೈಓವರ್‌ಗಳನ್ನು 150,000 ಚದರ ಮೀಟರ್‌ಗಿಂತ ಕಡಿಮೆಯಾದರೂ ಅದನ್ನು ಬಿ ವಿಭಾಗದಲ್ಲಿ ವರ್ಗೀಕರಿಸಲಾಗಿದೆ. ಸಾರ್ವಜನಿಕ ಸಾಕ್ಷ್ಯಗಳು ಕಡ್ಡಾಯವಾಗಿದೆ ಎಂಬ ಷರತ್ತು ಹೊಂದಿರುವವರಿಗೆ ಹೆಚ್ಚಿನ ವಿನಾಯಿತಿಗಳನ್ನು ನೀಡಲಾಗುತ್ತದೆ. ಪರಿಸರ ವಿಷಯಗಳಲ್ಲಿ ಹೆಚ್ಚು ಸಾರ್ವಜನಿಕ ಭಾಗವಹಿಸುವಿಕೆಯನ್ನು ಜಗತ್ತು ಒತ್ತಾಯಿಸುತ್ತಿರುವ ಸಮಯದಲ್ಲಿ, ಭಾರತ ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸುತ್ತಿದೆ.  ಯೋಜನೆಯ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಾಗಿದ್ದರೆ, ಅವರಿಗೆ 30 ದಿನಗಳಲ್ಲಿ ಅಭಿಪ್ರಾಯ ಹೇಳುವುದನ್ನು  20 ದಿನಗಳಾಗಿ ಮಾರ್ಪಡಿಸಿದರು. ಯೋಜನೆಯ ವಿಸ್ತರಿಸುವ ಸಮಯದಲ್ಲಿ ಶೇಕಡಾ ಐವತ್ತಕ್ಕಿಂತ ಹೆಚ್ಚಿನ ಏರಿಕೆ ಕಂಡುಬರದಿದ್ದರೆ ಸಾರ್ವಜನಿಕ ವಿಚಾರಣೆಯ ಅಗತ್ಯವಿಲ್ಲ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಮಯದ ಮಿತಿಯನ್ನು 45 ದಿನಗಳಿಂದ 40 ದಿನಗಳಿಗೆ ಇಳಿಸಲಾಗಿದೆ.
ದೊಡ್ಡ ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಪೂರ್ವ ಅನುಮೋದನೆಯ ಅಗತ್ಯವಿರುತ್ತದೆ. ಒಂದು ಯೋಜನೆಗೆ ಅನುಮೋದನೆ ಅವಧಿಯನ್ನು  ಐದು ವರ್ಷದಿಂದ ಹತ್ತು ವರ್ಷಗಳವರೆಗೆ ವಿಸ್ತರಿಸಲಾಯಿತು.ಪ್ರಸ್ತುತ ಐದು ವರ್ಷಗಳ ಕಾರ್ಯಾಚರಣೆಯನ್ನು ಮೌಲ್ಯಮಾಪನ ಮಾಡಿದ ನಂತರ ಯಾವುದೇ ಉಲ್ಲಂಘನೆಗಳಿಲ್ಲದಿದ್ದರೆ ಮಾತ್ರ ಈ ಅವಧಿಯನ್ನು ವಿಸ್ತರಿಸುವುದು ಕಾನೂನು. ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರನ್ನು ಗಣಿಗಾರಿಕೆ ಮಾಡುವ ಅವಧಿಯನ್ನು ಮೂವತ್ತು ವರ್ಷದಿಂದ ಐವತ್ತು ವರ್ಷಗಳವರೆಗೆ ಹೆಚ್ಚಿಸಲಾಗುತ್ತದೆ.  ಹೀಗಾಗಿ, ಪರಿಸರ ಅಧಿಸೂಚನೆ 2020 ಮಾನವನ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುವ ಪ್ರಸ್ತಾಪಗಳನ್ನು ಒಳಗೊಂಡಿದೆ.  ಈ ಕೋವಿಡ್ ಸೋಂಕಿನ ಕಾರಣ ಎಲ್ಲಿಯೂ ಯಾವುದೇ ಸಾರ್ವಜನಿಕ ಪ್ರತಿಭಟನೆ ನಡೆಯಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ”ಎಂದು ಸಿಆರ್ ನೀಲಕಂಠನ್ ಹೇಳಿದರು.
                                                                                                                                           -ಮುನವ್ವರ್ ಕೊಡ್ಲಿಪೇಟೆ

Related Posts

Leave A Comment

Voting Poll

Get Newsletter