ಖಬೀಬ್ ನೂರ್ಮಾಗೊಮೆಡೋವ್;  ಇಸ್ಲಾಮೋಫೋಬಿಯಾ ಜಗತ್ತಿನಲ್ಲಿ ಮುಸ್ಲಿಂ ಚಾಂಪಿಯನ್
            ಯುಎಫ್‌ಸಿ *(ಅಮೇರಿಕನ್ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್)* ಗೆದ್ದ ಮೊದಲ ಮುಸ್ಲಿಂ ಕ್ರೀಡಾಪಟುಯಾಗಿದ್ದಾನೆ ರಷ್ಯಾದ ಖಬೀಬ್ ನೂರ್ಮಾಗೊಮೆಡೋವ್ . ಎರಡು ಬಾರಿ ಕೋಂಬಾಕ್ಟ್ ಸಾಂಬೊ ವಿಶ್ವ ಚಾಂಪಿಯನ್ ಆಗಿರುವ ಖಬೀಬ್ , ಸಾಂಬೊ, ಜೂಡೋ ಮತ್ತು ವ್ರೆಸ್ಲಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ ಇತಿಹಾಸದಲ್ಲಿ ಅತ್ಯಂತ ಗಮನಾರ್ಹ ಕ್ರೀಡಾಪಟುಗಳಲ್ಲಿ ಒಬ್ಬರು.  ಇನ್ಸ್ಟಾಗ್ರಾಮ್ನಲ್ಲಿ ಅತ್ಯಾದಿಕ ಜನರು *ಫೋಲೋ*  ಮಾಡುವ ಒಬ್ಬ ರಷ್ಯಾದ ಕ್ರೀಡಾಪಟುವಾಗಿದ್ದಾನೆ *ಖಬೀಬ್*. 
           *ಜಸ್ಟಿನ್ ಗೈಡೇಜ್* ವಿರುದ್ಧದ ಗೆಲುವಿನ ನಂತರ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ ವಿಶ್ವ *ಲೈಟ್ ವೈಟ್* ಚಾಂಪಿಯನ್ ಖಬೀಬ್ ಸುದ್ದಿಯಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ.  ಅಜೇಯನಾಗಿ 29 ಗೆಲುವುಗಳೊಂದಿಗೆ, ಖಬೀಬ್ ಅಜೇಯರಾಗಿ ಉಳಿದಿರುವು ಸಮಯದಲ್ಲಾಗಿದೆ ಖಬೀಬ್ ನಿಬ್ಬೆರಗಾಗಿಸುವ  ನಿವೃತ್ತಿಯನ್ನು ಘೋಷಿಸಿವುದು.  ಇದಕ್ಕೂ ಮೊದಲು ಅವರ ತಂದೆ *ಅಬ್ದುಲ್ ಮನಫ್ ನೂರ್‌ಗೊಮೆಡೋವ್* ರವರು ಕೋವಿಡ್ ಸಂಬಂಧಿತ ಕಾಯಿಲೆಯಿಂದ ನಿಧನರಾದರು .  ಇದು ಅವರ ತಂದೆಯ ಮರಣದ ನಂತರದ ಮೊದಲ ಮುಖಾಮುಖಿಯಾಗಿತ್ತು. ತನ್ನ ತರಬೇತುದಾರನಾಗಿದ್ದ ತನ್ನ ತಂದೆಯ ನಿಧನದ ನಂತರ, ಖಬೀಬ್ ಭಾವನಾತ್ಮಕವಾಗಿ ತಾನು ಇನ್ನು ಮುಂದೆ ತನ್ನ ತಾಯಿಯನ್ನು ಒಬ್ಬಂಟಿಯಾಗಿ  ಬಿಡುವುದಿಲ್ಲ ಮತ್ತು ಅವನು ತನ್ನ ಕೊನೆಯ ಪಂದ್ಯವನ್ನು ಆಡಿದ್ದೇನೆ ಎಂದು ಕೂಡ ಭಾವನಾತ್ಮಕವಾಗಿ ಖಬೀಬ್ ಘೋಷಿಸಿದರು .  ಇದು  *ಯುಎಫ್‌ಸಿ* ಇತಿಹಾಸದಲ್ಲಿ ಒಂದು ಹೊಸ  ಅಧ್ಯಾಯಕ್ಕೆ  ಕೊನೆಯುಸಿರಿಟ್ಟಿತು.     
          ಖಬೀಬ್ ರವರ ಬಾವಚಿತ್ರಗಳನ್ನು ಇಷ್ಟು ವ್ಯಾಪಕವಾಗಿ ಶೇರ್ ಆಗುತ್ತಿರುವ  ಮತ್ತು ಚರ್ಚಿಸುವುದರ ಹಿಂದೆ ಹಲವಾರು ಕಾರಣಗಳಿವೆ.  ಇಸ್ಲಾಮಿನ ಶತ್ರುಗಳು ಲಭ್ಯವಿರುವ ಪ್ರತಿಯೊಂದು ರಂಧ್ರದ ಮೂಲಕ ಇಸ್ಲಾಮೋಫೋಬಿಯಾವನ್ನು ಹರಡಿಸುತ್ತಿರುವ ಈ ಸನ್ನಿವೇಶದಲ್ಲಿ .  ಕ್ರೀಡಾ ಜಗತ್ತು ಕೂಡ ಇದಕ್ಕೆ ಹೊರತಾಗಿಯೇನು ಇಲ್ಲಾ. ಕ್ರೀಡಾ ಮೈದಾನದ  ಒಳಗೂ ಹೊರಗೂ  *ಇಸ್ಲಾಮೋಫೋಬಿಯಾ*  ಅನೇಕ ರೂಪಗಳಲ್ಲಿಯೂ ಬಾವಗಳಲ್ಲಿಯೂ ನೆರೆದು ತುಂಬಿದೆ. ಈ ಸನ್ನಿವೇಶದಲ್ಲಿ ಆಗಿದೆ  ಒಬ್ಬ ಕ್ರೀಡಾಪಟು ಎಲ್ಲರನ್ನೂ  ನಿಬ್ಬೆರಗಾಗಿಸುವ ರೀತಿಯಲ್ಲಿ ತನ್ನ ಇಸ್ಲಾಂ ಧರ್ಮವನ್ನು ಸಾರ್ವಜನಿಕವಾಗಿ ಗುರುತಿಸುವ ಧೈರ್ಯವನ್ನು ತೋರಿಸುತ್ತಿರುವುದು. ಕೊನೆಯದಾಗಿ, ಖಬೀಬ್ ತನ್ನ ಕುಸ್ತಿ ಮೈದಾನದ ಒಳಗಿಂದಲೇ ತನ್ನ  ಇಲಾಹನಾದ ಸೃಷ್ಟಿಕರ್ತನನ್ನು ಸ್ತುತಿಸಿ ಸಾಷ್ಟಾಂಗ ಮಾಡಿಯಾಗಿತ್ತು ಖಬೀಬ್ ಮೈದಾನದಿಂದ ತೆರಳುವುದು . ಒಂದು ವೇಳೆ ಈ ಕಾಲಘಟ್ಟದಲ್ಲಿ ಈ ರೀತಿಯ ಭಕ್ತಿ ಮತ್ತು ವಿನಯವನ್ನು ತೋರಿಸುವ ಕ್ರೀಡಾಪಟು   *'ದಿ ಈಗಲ್'*  ಎಂಬ ಹೆಸರಿನಲ್ಲಿ ಪ್ರಸಿದ್ಧನಾದ ಖಬೀಬ್ ನಂತಹ ಮತ್ತೊಬ್ಬರು ಇರಲಾರರೂ. 
ಎಲ್ಲಾ ಕಾಲದ ಶತಮಾನಗಳಿಗೂ ಪ್ರತಿ ಪೀಳಿಗೆಗೆ ಹೇಳಲು ಸಾಕಷ್ಟು ಕ್ರೀಡಾ ವೀರರಿದ್ದಾರೆ.  ಅವರಲ್ಲಿ ಕೆಲವರು ತಾವು ಪ್ರತಿನಿಧಿಸುವ ಕ್ರೀಡೆಯನ್ನು ಮೀರಿ ಖ್ಯಾತಿ ಮತ್ತು ವೈಭವವನ್ನು ಸಾಧಿಸಿರಬಹುದು.  *ಖಬೀಬ್ ನೂರ್ಮಾಗೊಮೆಡೋವ್* ಅವರನ್ನು ಅವರೊಂದಿಗೆಯಾಗಿ ಎಣಿಸುವುದು ತಪ್ಪಾಗಲಾರದು, ಖಬೀಬ್ ಅವರು ಸ್ಪರ್ಧಿಸುವ ಕ್ರೀಡೆಯನ್ನು ಮೀರಿ ಬೆಳೆದ ಆಟಗಾರ.  ನಿರ್ದಿಷ್ಟವಾಗಿ ಹೇಳುವುದಾದರೆ, ಅವರು ಜಾಗತಿಕವಾಗಿ ತುಳಿತಕ್ಕೊಳಗಾದ ಸಮಾಜದಿಂದ ಬಂದವರು.  ಮುಸ್ಲಿಂ ಸಮುದಾಯವನ್ನು ಪಶ್ಚಿಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳೆಲ್ಲವೂ ಅಪರಿಚಿತರನ್ನಾಗಿ ಮಾಡುವುದಲ್ಲದೆ ವರ್ಣಭೇದ ತೆಯನ್ನು ನಿರಂತರವಾಗಿ ತೊರ್ಪಡಿಸುತ್ತಿರುವ ಈ  ಸಮಯದಲ್ಲಿ, ತನ್ನ ಧರ್ಮ ವಿಶ್ವಾಸವನ್ನು ಬಹಿರಂಗವಾಗಿ  ಘೋಷಿಸುವ ಮತ್ತು  ಹಂಚಿಕೊಳ್ಳುವ  ದಂತಕಥೆಗಳ ಯಶಸ್ಸಿನಲ್ಲಿ ಮುಸಲ್ಮಾನರು ಸಾಂತ್ವನ ಪಡೆಯುತ್ತಿದ್ದಾರೆ.  ಅವರು ತಮ್ಮ ಅತ್ಯುತ್ತಮ ಎದುರಾಳಿ *ಜಸ್ಟಿನ್ ಗೀತ್ಜೆ* ಅವರನ್ನು ಸೋಲಿಸಿ ತಮ್ಮ ರಿಂಗ್‌ನಲ್ಲಿ ಅತ್ಯಂತ ಶಕ್ತಿಶಾಲಿ ಕುಸ್ತಿಪಟುಗಾರನೆಂದು  ಸಾಬೀತುಪಡಿಸುವ ಮೂಲಕ ತಮ್ಮ ಸ್ಮರಣೀಯ ವೃತ್ತಿಜೀವನವನ್ನು ಕೊನೆಗೊಳಿಸುತ್ತಾರೆ.  ಅವರು ಅಜೇಯ ದಾಖಲೆಯನ್ನು 29-0ಕ್ಕೆ ಕೊಂಡೊಯ್ಯಲು ಜಸ್ಟಿನ್ ಅವರನ್ನು ಸೋಲಿಸಿದರು.
ರಷ್ಯಾದ *ದಾಗೆಸ್ತಾನ್* ಪ್ರಾಂತ್ಯದ ಪರ್ವತ ಪ್ರದೇಶದಲ್ಲಾಗಿದೆ ಖಬೀಬ್ ಜನಿಸಿದ್ದು‌ .  ಚಿಕ್ಕ ವಯಸ್ಸಿನಿಂದಲೂ ಅವರು ಯೋಧರಾಗಿ ಬೆಳೆದರು.  ಅವರ ತಂದೆ ತಮ್ಮ ವೃತ್ತಿಜೀವನದುದ್ದಕ್ಕೂ ಅವರೊಂದಿಗೆ ಇದ್ದರು.  *ಯುನೈಟೆಡ್ ಸ್ಟೇಟ್ಸ್ನಲ್ಲಿ* ತನ್ನ ಮಗನ ಯುಎಫ್ಸಿ ಪಂದ್ಯಗಳನ್ನು ವೀಕ್ಷಿಸಲು ವೀಸಾ ನಿರಾಕರಿಸಲ್ಪಟ್ಟಾಗಲೂ ಖಬೀಬ್ ಗೆಲುವಿನತ್ತ ಕೊಂಡೊಯ್ದದ್ದು ಅವರ ತಂದೆಯ ತರಬೇತಿಯಾಗಿದೆ.  ಅವರ ತಂದೆ *ಅಬ್ದುಲ್ ಮನಾಫ್* ಒಬ್ಬ  ಧರ್ಮನಿಷ್ಠೆಯುಳ್ಳ  ಮುಸಲ್ಮಾನನಾಗಿದ್ದರು.  ಅವರ ಎಲ್ಲಾ ಸಂದರ್ಶನದಲ್ಲಿಯೂ ಅವರ ಇಸ್ಲಾಮೀ ನಂಬಿಕೆ ಮಿಂಚುತ್ತಿತ್ತು . ತನ್ನ ಮಕ್ಕಳು ಅವನನ್ನು ಸಂಪೂರ್ಣವಾಗಿ ಅನುಕರಿಸಬೇಕೆಂದು ಅವರು ಒತ್ತಾಯಿಸಿದರು.  ಮೈದಾನದ ರಿಂಗಿನಲ್ಲಿ  ತರಬೇತಿ ನೀಡುವುದರ ಜೊತೆಗೆ, ತಂದೆ ಧರ್ಮ ನಿಷ್ಠೆಯಿಂದ ಮಗನಿಗೆ ತರಬೇತಿ ನೀಡಿದರು.    ಯಶಸ್ಸಿನ ಹೆಜ್ಜೆಯಾಗಿ ದೃಡವಾದ ನಂಬಿಕೆಯನ್ನು ತಂದೆ ಪರಿಚಯಿಸಿದರು.  ಅವರ ತಂದೆ ಕಳೆದ ಜುಲೈನಲ್ಲಿ ನಿಧನರಾದರು.  ತನ್ನ ತಂದೆಯ ಮರಣದಿಂದ *ಖಬೀಬ್* ತೀವ್ರ ದುಃಖಿತನಾಗಿದ್ದ.
 ಖಬೀಬ್‌ನ ಯಶಸ್ಸಿನ ಕೀಲಿಯು ರಹಸ್ಯವಾಗಿರಲಿಲ್ಲ.  ಅವನ ವಿರುದ್ಧ ಹೋರಾಡಿದ ಪ್ರತಿಯೊಬ್ಬ ಹೋರಾಟಗಾರನು ತಾನು ಏನು ಮಾಡಲಿದ್ದೇನೆಂದು ಮೊದಲೇ ತಿಳಿದಿದ್ದ.  ಆದರೂ, ಕಠಿಣ ಪರಿಶ್ರಮ, ಶಿಸ್ತು, ತಾಂತ್ರಿಕ ಶ್ರೇಷ್ಠತೆ ಮತ್ತು ಆಧ್ಯಾತ್ಮಿಕ ಪ್ರಜ್ಞೆ  ಎಂಬ ಧ್ಯೇಯವಾಕ್ಯವನ್ನು ಅನುಷ್ಠಾನಗೊಳಿಸುವುದರಿಂದ, ಯಾರೂ ಅವನನ್ನು ಯಶಸ್ವಿಯಾಗದಂತೆ ತಡೆಯಲು ಸಾಧ್ಯವಾಗಲಿಲ್ಲ.  ಖಬೀಬ್ ಅವರ ತರಬೇತಿ ವಿಧಾನವು ಪೌರಾಣಿಕವಾಗಿತ್ತು .  *ಕೂಕಸ್ಸಿನ* ಜನರೆಲ್ಲರೂ ಕಠಿಣ ಕೆಲಸಗಾರರಾಗಿದ್ದರು.  ಬಾಲ್ಯದಲ್ಲಿ ಅವರು ಕರಡಿ ಕರಡಿಗಳಿಗೆ ಮತ್ತು ಹಿಮಾವೃತ ನದಿಗಳ ಬಲವಾದ ಪ್ರವಾಹಗಳ ವಿರುದ್ಧ ಹೋರಾಡಲು ಹೆಸರುವಾಸಿಯಾಗಿದ್ದರು.
ಮೈದಾನದ ರಿಂಗಿನ ಹೊರಗೆ,  ತನ್ನ ತಂದೆ, ಹೆಂಡತಿ ಮತ್ತು ಧರ್ಮವನ್ನು ಅವಮಾನಿಸಿದ ಮತ್ತು ಜನಾಂಗೀಯವಾಗಿ ನಿಂದಿಸಿದವರನ್ನು ನಿರ್ದಯವಾಗಿ ಸೋಲಿಸಲು  ಅವರು ಸಮರ್ಥನಾಗಿದ್ದರು  ಖಬೀಬ್ *ಬಾಕ್ಸರ್ ಮುಹಮ್ಮದ್ ಅಲಿಯಂತೆ* ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿರಲಿಲ್ಲಾ.  ಆದಾಗ್ಯೂ,   *ಅಲ್ಹಮ್ದುಲ್ಲಾಹ್ ಮತ್ತು ಇನ್ಶಾ ಅಲ್ಲಾ* ಎಂಬ ಪದಗಳನ್ನುಪಯೋಗಿಸಿ  ಸಾರ್ವಜನಿಕವಾಗಿ ಮಾಡುವ ಭಾಷಣಗಳು ಬಹಳ ಪ್ರಸಿದ್ಧವಾಗಿದೆ , ಇದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿತು.  ಅಲ್ಲದೆ, ವಿಜಯವು ಅಲ್ಲಾಹನಿಂದ ಮಾತ್ರ ಬರುತ್ತದೆ ಎಂದು ಅವರು ಹೇಳುತ್ತಲೇ ಇದ್ದರು.  ಪಾಶ್ಚಿಮಾತ್ಯ ಸಂಸ್ಕೃತಿಯ ಎಲ್ಲಾ ಬಲೆಗಳಿಂದ ಪ್ರಾಬಲ್ಯವಿರುವ ವಾತಾವರಣದಲ್ಲಿ ಮಹಿಳೆಯರಿಂದ ತುಂಬಿದ *ಆಲ್ಕೊಹಾಲ್* ಮತ್ತು *ಸ್ತ್ರೀಯರೊಂದಿಗೂ* ಕೂಡ ಗಟ್ಟಿಯಾಗಿ *ನೋ*  ಎಂದು ಹೇಳಲು  ತಯಾರಾಗಿದ್ದರು.  ತಮ್ಮ ಗುರುತುಗಳನ್ನು ಜೋರಾಗಿ ಘೋಷಿಸಲು ಪ್ರೇರೇಪಿಸಲು ಖಬೀಬ್ *ಚಾಂಪಿಯನ್* ಮತ್ತು *ರೋಲ್ ಮಾಡೆಲ್* .
ಮುಲ : ಲತೀಫ್ ಪಲತುಂಕರ
ಕನ್ನಡಕ್ಕೆ: ಮುಹಮ್ಮದ್ ಶಮಿ ಉಪ್ಪಿನಂಗಡಿ

Related Posts

Leave A Comment

Voting Poll

Get Newsletter