ವಿಜ್ಞಾನ ರಂಗದಲ್ಲಿ SKSSF ನ ಕೊಡುಗೆಗಳು
1989 ಫೆಬ್ರವರಿ 19 ನವ ಚರಿತ್ರೆಗೆ ಸಾಕ್ಷಿಯಾಯಿತು. ಆ ಚಾರಿತ್ರಿಕ ದಿನದಲ್ಲಾಗಿತ್ತು SKSSF ಸಮಸ್ತ ಕೇರಳ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಮಹಾತ್ಮರ ಆಶಿರ್ವಾದದಿಂದ ರೂಪತಾಳಿದ್ದು. ಕಳೆದ 34 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅಪ್ರತಿಮ ಸೇವೆಯನ್ನು ಸಲ್ಲಿಸಿದ ಹಿರಿಮೆ ಗಿರಿಮೆ SKSSFಗಿದೆ ಸರ್ವ ಅಡೆತಡೆಗಳನ್ನು ದಾಟಿ ಕಳೆದ ಮೂರು ದಶಕಗಳಲ್ಲಿ ಪರ್ವತದೋತ್ತರ ಬೆಳೆದು ದೇಶ ವಿದೇಶಗಳಲ್ಲಿ ಸೇವಾ ರಂಗದಲ್ಲಿ ಅಗ್ರ ಪಂಕ್ತಿಯಲ್ಲಿದೆ.
ಎಸ್ ಕೆ ಎಸ್ ಎಸ್ ಎಫ್ಫಿನ ಧ್ಯೇಯ ವಾಕ್ಕಯವೇ ಬಹಳ ಅದ್ಭುತ ಜ್ಞಾನ, ವಿನಯ, ಸೇವೆ ಎಂಬ ತ್ರಿ ಧ್ಯೇಯ ವಾಕ್ಯದಡಿ ಚರಿತ್ರೆಯನ್ನೇ ಸೃಷ್ಟಿಸಿದೆ. ಒಂದು ಸಮುದಾಯದ ಅಧಿಪತ್ಯ ಹಾಗೂ ಅಧಿಪತನ ವಿದ್ಯಾಭ್ಯಾಸದ ಮೇಲೆ ನೆಲೆನಿಂತಿದೆ. ಪವಿತ್ರ ಖುರ್ಆನಿನ ಪ್ರಪ್ರಥಮ ಸೂಕ್ತವೇ ಓದುಗಾರಿಕೆಯ ಆಜ್ಞೆಯನ್ನು ಒಳಗೊಂಡಿತು. ವಿಧ್ಯಾಭ್ಯಾಸವಿರುವ ಒಂದು ಸಮುದಾಯ ಬಲಾಢ್ಯರಾಗಿ ಬೆಳೆಯಬಲ್ಲದು. ಶಿಕ್ಷಣದ ಮಹತ್ವದ ವಿಧ್ಯಾಭ್ಯಾಸದ ಮಹಿಮೆ ಪವಿತ್ರ ಇಸ್ಲಾಂ ಸಾರಿ ಹೇಳಿದೆ. ಇಸ್ಲಾಮಿನ ತತ್ವಾದರ್ಶದಡಿಯಲ್ಲಿ ಕಾರ್ಯಚರಿಸುವ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ವಿದ್ಯಾರ್ಥಿ ಒಕ್ಕೂಟ ಸಮುದಾಯದ ಶೈಕ್ಷಣಿಕ ಅಭಿವೃದ್ದಿಗೆ ಹಲವಾರು ಹೊಸ ಪದ್ದತಿಗಳ ಮೂಲಕ ಸೇವೆಗೈಯ್ಯುತ್ತಿದೆ. ಶಿಕ್ಷಣಕ್ಕೆ ಎಷ್ಟರ ಮಟ್ಟಿಗೆ ಮಹತ್ವವನ್ನು ನೀಡುತ್ತೆ ಎಂಬುವುದಕ್ಕೆ ಎಸ್ ಕೆ ಎಸ್ ಎಸ್ ಎಫ್ಫಿನ ಧ್ಯೇಯ ವಾಕ್ಯದ ಪ್ರಥಮ ವಾಕ್ಯವೇ ಉತ್ತರ.
ಶಿಕ್ಷಣ ಎಂಬುವುದು ಎಲ್ಲಾ ನವೇತನ ಕಾಲದ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಸಮಾಜಿಕ ಚಳವಣಿಗೆಯ ಮುಖ್ಯ ಖನಿಜವಾಗಿದೆ ವಿದ್ಯಾಭ್ಯಾಸ ಎಂಬುವುದು. ಇದು ಕಾರ್ಯ ಸಾದುವಾಗಲು ಗುರಿ ಮತ್ತು ಮಾರ್ಗ ಒಂದೇ ವಿಶಯದಲ್ಲಿ ಸಾಗಬೇಕು. ಎಸ್ ಕೆ ಎಸ್ ಎಸ್ ಎಫ್ಫಿನ ಉಪ ಸಮಿತಿಗಳಲ್ಲೊಂದಾದ ಟ್ರೆಂಡ್ ಪ್ರಸ್ತುತ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದ ಹೊಸ ರೂಪವೆಂದೇ ಅರ್ಧೈಸಬಹುದು. ಸ್ಪರ್ಧಾತ್ಮಕ ಆಧುನಿಕ ಜಗತ್ತಿನಲ್ಲಿ ನವ ತಲೆಮಾರಿನ ಅಭಿರುಚಿಗಳನ್ನು ಅರಿತು ಒಂದು ಸಮುದಾಯದ ಸಾಮಾಜಿಕ ಬೆಳೆವಣಿಗೆಗೆ ಮಾರ್ಗದರ್ಶನ ನೀಡಲು ಯೋಗ್ಯವಾದ ಒಂದು ವಿದ್ಯಾಭ್ಯಾಸ ವಿಭಾಗ ರೂಪುಗೊಳ್ಳಬೇಕೆಂಬ ಕಾಲದ ಬೇಡಿಕೆಗೆ ಉತ್ತರವೇ ಟ್ರೆಂಡ್ (Team resource for education and national development)
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ವಿದ್ಯಾರ್ಥಿ ವಿಭಾಗವಾದ ಎಸ್ ಕೆ ಎಸ್ ಎಸ್ ಎಫ್ಪಿನ ವಿದ್ಯಾಭ್ಯಾಸ ಯೋಜನೆಯನ್ನು ಬಲಪಡಿಸಲು ಹಾಗೂ ತರಬೇತಿ ಕಾರ್ಯಗಾರದ ಮೇಲ್ನೋಟವನ್ನು ವಹಿಸಲು ಬೇಕಾಗಿ 2003ರಿಂದ ಕಾರ್ಯಚರಿಸುತ್ತಿರುವ ಉಪಸಮಿತಿಯಾಗಿದೆ ಟ್ರೆಂಡ್.
ಕುಟ್ಟಿಪ್ಪುರದಲ್ಲಿ ನಡೆದ ವಾದಿನ್ನೂರ್ ಸಮ್ಮೇಳನದಲ್ಲಿ SKSSF ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಶೈಕ್ಷಣಿಕ ಕ್ಷೇತ್ರರದಲ್ಲಿ ಹೂಸ ಪದ್ದತಿಗಳನ್ನು ಆವಿಷ್ಕರಿಸಿತು. 2000ದ ಇಸವಿಯಲ್ಲಿ ಆರಂಭಿಸಿದ ಹೈಯರ್ ಎಜುಕೇಷನ್ ವಿದ್ಯಾರ್ಥಿ ವೇತನ ಮುಸ್ಲಿಂ ಸಮುದಾಯವನ್ನು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲೂ ಮೇಲುಗೈ ಸಾದಿಸಲು ಕಾರಣವಾಯಿತು.
ಈ ಪದ್ದತಿಯಿಂದಾಗಿ ಅತ್ಯುತ್ತಮ ಫಲಿತಾಂಶ ಉಂಟಾಗುತ್ತಾ ಮುಂದುವರಿದು 2003ರಲ್ಲಿ ಕೇಂದ್ರ ಸಮಿತಿ ಅಧೀನದಲ್ಲಿ ವಿದ್ಯಾಭ್ಯಾಸ ವಿಂಗ್ ಪ್ರಾರಂಭಿಸಲು ತೀರ್ಮಾನಿಸಿ 2004ರಲ್ಲಿ ಟ್ರೆಂಡ್ ಕಾರ್ಯಚರಿಸಲು ಪ್ರಾರಂಭಿಸಿತು.
ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಟ್ರೆಂಡ್ ವಿವಿಧ ಪದ್ದತಿಗಳನ್ನು ಜಾರಿಗೊಳಿಸಿತು. ಕರಿಯರ್ ಕ್ಲಬ್ ಗಳು ಶೈಕ್ಷಣಿಕ ತರಬೇತುದಾರರು, ಪಿ.ಎಸ್.ಸಿ ಕೋಚಿಂಗ್ ಹೀಗಿ ಮುಂತಾದವುಗಳಾಗಿತ್ತು ಟ್ರೆಂಡಿನ ಪ್ರಾಥಮಿಕ ಪದ್ದತಿಗಳು. ಕಲ್ಲಿಕೋಟೆಯ ಇಸ್ಲಾಮಿಕ್ ಸೆಂಟರ್ ಕೇಂದ್ರವಾಗಿಟ್ಟುಕೊಂಡು ಫ್ಯಾಮಿಲೀ ಕೌನ್ಸಿಲಿಂಗ್ ಕೋರ್ಸ್ ಆರಂಭಿಸಲಾಯಿತು. 2007ರ ನಂತರ ಎಸ್ ಎಕೆ ಎಸ್ ಎಸ್ ಎಫ್ಫಿನ ಜಿಲ್ಲಾ ಸಮಿತಿಯ ಅಧೀನದಲ್ಲಿ ಟ್ರೆಂಡ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬಂತು. ಹಿರಿಯರ ಕ್ಲಿನಿಕ್ ಹಾಗೂ ಬೇಸಿಗೆ ಕಾಲದ ರಜೆಯಲ್ಲಿ ಸಮ್ಮರ್ ಗೈಡ್ ಎಂಬ ಶಿಬಿರ ಅರಂಭಿಸಿತು.
2011ರಿಂದ 2015ರ ವರೆಗೆ ಟ್ರೆಂಡ್ ಕೇಂದ್ರ ಸಮಿತಿಯ ನೇತೃತ್ವದಲ್ಲಿ ನಡೆದ ಸಿವಿಲ್ ಸರ್ವೀಸ್ STEP ನಲ್ಲಿ 300ರಷ್ಟು ವಿದ್ಯಾರ್ಥಿಗಳಿದ್ದರು. ಅದರಲ್ಲಿ ಅಧಿಕ ಜನರು ಇಂದು ಸಮಾಜದ ಬಹು ಮುಖ್ಯ ಉದ್ಯೋಗದಲ್ಲಿ ಸೇವಾ ರಂಗದಲ್ಲಿದ್ದಾರೆ. ಸಿವಿಲ್ ಸರ್ವೀಸ್ ತರಬೇತು ಹೊರತಾಗಿ, ಅಧ್ಯಾಪಕರನ್ನು, ವೈದ್ಯರನ್ನೂ, ಕಂಪೆನಿ ಮ್ಯಾನೆಜರ್, ಚಾರ್ಟಡ್ ಎಕೌಂಟ್ಸ್ ಮುಂತಾದ ಒಂದು ಬಹು ದೊಡ್ಡ ವಿಭಾಗವನ್ನೇ ನಿರ್ಮಾಣ ಮಾಡಲು ಈ ಪದ್ದತಿಯ ಮೂಲಕ ಸಾಧ್ಯವಾಯಿತು.
ಸಮಸ್ತ ಮಹಾ ಸಂಘದೂಳಗೆ ಪ್ರೀ ಸ್ಕೂಲ್ ಎಂಬ ಆಶಯವನ್ನು ಮೊದಲು ತಿಳಿಸಿದ್ದು ಟ್ರೆಂಡಾಗಿತ್ತು. ನೂತನ ಹಾಗೂ ಬಹು ಮುಖ್ಯವಾದ 15ರಷ್ಟು ಯೋಜನೆಗಳನ್ನು ಟ್ರೆಂಡ್ ಕೇಂದ್ರ ಸಮಿತಿಯ ಮೇಲ್ನೋಟದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
Sure shot ಎಂಬ ಹೆಸರಲ್ಲಿ ಪಿ.ಎಸ್.ಸಿ ತರಬೇತಿಯೂ ಮಫಾಸ್ ಎಂಬ ಹೆಸರಲ್ಲಿ ಸಿವಿಲ್ ಸರ್ವೀಸ್ ತರಬೇತಿಯೂ ಟ್ರೆಂಡ್ ನ ನೇತೃತ್ವದಲ್ಲಿ ನಡೆಯುತ್ತಿದೆ. ಟ್ರೆಂಡ್ ಕಮ್ಯೂನಿಟಿ ಡೆವೆಲಪ್ಮೆಂಟ್ ಸೆಂಟರಿನ ಅಧೀನದಲ್ಲಿ ಬೆಂಚ್ ಅಸಿಸ್ಟೆಂಟ್ ಎಂಬ ಹೆಸರಿನಲ್ಲಿ ಜ್ಯೂಡಿಷಿಯಲ್ ಮೆಜಿಸ್ಟ್ರೇಟ್ ಪರೀಕ್ಷೆಗೆ ತರಬೇತಿಯೂ ವಿದ್ಯಾರ್ಥಿ ವೇತನವೂ ನೀಡುತ್ತಾ ಬಂದಿದೆ. ಪ್ರತಿ ವರ್ಷವೂ 10ವಿದ್ಯಾರ್ಥಿಗಳಿಗೆ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಕಲಿಕೆಗೆ ಅವಶ್ಯಕವಾಗುವ ಸಹಾಯಧನ ನೀಡುತ್ತಿದೆ. ಬೇಸಿಗೆ ರಜಾ ಕಾಲದಲ್ಲಿ ಸಮ್ಮರ್ ಗೈಡ್ ಎಂಬ ಹೆಸರಲ್ಲೂ ಅಧ್ಯಾಯನ ವರ್ಷದ ಪ್ರಾರೆಂಭದಲ್ಲಿ START ಎಂಬ ಹೆಸರಿನಲ್ಲಿ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಮಿಷನ್ A+ ಎಂಬ ಹೆಸರಲ್ಲೂ ಪ್ರತೀ ವರ್ಷವೂ ಮೂರು ಕ್ಯಾಂಪೈನ್ ಟ್ರೆಂಡ್ ಅಧೀನದಲ್ಲಿ ನಡೆಸಲ್ಪಡುತ್ತಿದೆ.
ಟ್ರೆಂಡ್ ಎಂಬ ಹೆಸರಿನಲ್ಲಿ ಕೇಂದ್ರದಿಂದ ಹಿಡಿದು ಶಾಖಾ ಮಟ್ಟದ ವರೆಗೆ ಸಂಘಟನೆಯ ಪ್ರಧಾನ ಕಾರ್ಯಕರ್ತರ ತಂಡಗಳು ಕಾರ್ಯಾಚರಿಸುತ್ತಿದೆ.. ಕಾರ್ಯಾ ಚಟುವಚಿಗೆಳ ಅಜಂಡಾಗಳನ್ನು ತೀರ್ಮಾನಿಸಿದ್ದು ಟ್ರೆಂಡ್ ಸಭೆಗಳಲ್ಲಾಗಿದೆ. ಟ್ರೆಂಡ್ ಮೀಟಿಂಗ್ ಎಂಬ ಯೋಜನೆಯಲ್ಲು ಸೋಶಿಯಲ್ ಮೀಡಿಯಾ ನಿಯಂತ್ರಿಸುತ್ತದೆ. M.M.S, L.S.U , USS ಮುಂತಾದ ಸ್ಕಾಲರ್ ಶಿಪ್ ಪರೀಕ್ಷೆಗಳಿಗೆ ತರಬೇತಿ ನೀಡಲು ಸ್ಕಾಲರ್ ಶಿಪ್ ಎಂಬ ಪದ್ದತಿಯೂ ಟ್ರೆಂಡಿನ ಅಧೀನದಲ್ಲಿ ಕಳೆದ ವರ್ಷ 31 ವಿದ್ಯಾರ್ಥಿಗಳಿಗೆ MMS ಸ್ಕಾಲರ್ ಶಿಪ್ ಹಾಗೂ 32ಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ L.S.S ಮತ್ತು USS ಸ್ಕಾಲರ್ ಶಿಪ್ ದೊರಕಲು ಟ್ರೆಂಡ್ ನೀಡಿದ ತರಬೇತು ಸಾಧ್ಯವಾಯಿತು.
ವಿವಿಧ ಸ್ಥಾಪನೆಗಳಿಗೆ ಅಕಾಡೆಮಿಕ್ ಸಹಕಾರ ನೀಡುವ ಮಟ್ಟಿನಲ್ಲಿ ಒಂದು ಅಕಾಡೆಮಿಕ್ ಕೌನ್ಸಿಲ್ ಕನ್ವರ್ಟೆನ್ಸಿ ಪ್ಯಾನಲ್ ಕಾರ್ಯಚರಿಸುತ್ತಿದೆ. ಮಸ್ಕತ್ ಸುನ್ನಿ ಸೆಂಟರ್, ಕುವೈಟ್ ಇಸ್ಲಾಮಿಕ ಕೌನ್ಸಿಲ್, ಯು.ಎ.ಇ ಕತ್ತರಿನ ವಿವಿಧ SKSSF ಸಮಿತಿಗಳು ಈ ಯೋಜನೆಗಳು ಯಶಸ್ವಿಗೊಳಿಸಲು ಟ್ರೆಂಡಿನೊಂದಿಗೆ ಈ ಸಹಕಾರ ನೀಡಿದವರಾಗಿದ್ದಾರೆ. ಸಾವಿರ ಎಜುಕೇಟರ್ ಗಳನ್ನು ಟ್ರೆಂಡ್ ಸಮಾಜಕ್ಕೆ ಸಮರ್ಪಿಸಿದೆ.
ಹತ್ತನೇ ತರಗತಿ ತೇರ್ಗಡೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಉದ್ಯೋಗ ದೊರೆಯುವ ವರೆಗೂ ಅವರಿಗೆ ಮಾರ್ಗದರ್ಶನ ನೀಡಿ ಸಹಾಯ ಮಾಡುವುದಾಗಿದೆ. ಈ ಎಜುಕೇಟರುಗಳ ಪ್ರಥಮ ಗುರಿ ಹೀಗೆ ಹಲವು ರೀತಿಯಲ್ಲಿ ಗ್ರಾಮೀಣ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೆ ಶೈಕ್ಷಣಿಕ ಅಭಿವೃದ್ಧಿಗೆ ಎಸ್ ಕೆ ಎಸ್ ಎಸ್ ಎಫ್ ಹಾಗೂ ಅದರ ಉಪ ಸಮಿತಿಯಾದ ಟ್ರೆಂಡ್ ನಿರಂತರ ಹೊಸ ಹೊಸ ಪದ್ದತಿಗಳನ್ನು ಕಾರ್ಯ ರೂಪಕ್ಕೆ ತಂದು ಕಾರ್ಯಚರಿಸುತ್ತಿದೆ. ಎಸ್ ಕೆ ಎಸ್ ಎಸ್ ಎಫ್ 35ನೇ ವಾರ್ಷಿಕೋತ್ಸವ ಇದೇ ಬರುವ ಫೆಬ್ರವರಿ ತಿಂಗಳಲ್ಲಿ ಕಲ್ಲಿಕೋಟೆಯಲ್ಲಿ ನಡೆಯಲಿದೆ.
ಬರಹ : ಉವೈಸ್ ಮದನಿ ತೋಕೆ