ಖ್ವಾಜಾ ಬಂದೇ ನವಾಝ್
ಇದು ಕರ್ನಾಟಕ ರಾಜ್ಯದ ಗೊಮ್ಮಟಗಳ ನಗರಿ ಎಂದೇ ಪ್ರಸಿದ್ಧ ಹೊಂದಿರುವ ಜಿಲ್ಲೆಯಾಗಿದೆ. ಈ ಸುಂದರ ನಗರವು ಇಸ್ಲಾಮಿಕ್ ಕಲೆಯ ಪ್ರಭಾವಶಾಲಿ ಪರಂಪರೆಯನ್ನು ಹೊಂದಿದೆ ಮತ್ತು ಇದು ಭಾರತದ ವೈವಿಧ್ಯತೆಯ ಉತ್ತಮ ನಿದರ್ಶನವಾಗಿದೆ. ಗುಲ್ಬರ್ಗಾವು ಬೆಂಗಳೂರಿನಿಂದ ಉತ್ತರಕ್ಕೆ 623 ಕಿ.ಮೀ ಮತ್ತು ಹೈದರಬಾದ್ ನಿಂದ ದಕ್ಷಿಣಕ್ಕೆ 220 ಕಿ.ಮೀ ದೂರದಲ್ಲಿದೆ.
ಗುಲ್ಬರ್ಗಾದ ಇತಿಹಾಸವು 6ನೇ ಶತಮಾನಕ್ಕೆ ಸೇರುತ್ತದೆ. ಗುಲ್ಬರ್ಗಾ ಹೆಚ್ಚಾಗಿ ಚಾಲುಕ್ಯರ ಹಿಡಿತದಲ್ಲಿತ್ತು. ಈ ಪ್ರದೇಶವು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು. ಚಾಲುಕ್ಯರು ಗುಲ್ಬರ್ಗಾವನ್ನು ವಶಪಡಿಸಿದರು. 200 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಅವರ ಉತ್ತರಾಧಿಕಾರಿಯಾಗಿದ್ದ ಕಲ್ಯಾಣಿ ಕಲಚುರಿಗಳು 12ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು. 12ನೇ ಶತಮಾನದ ಅಂತ್ಯದಲ್ಲಿ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಸೇರಿ ಕಲ್ಯಾಣಿ ಚಾಲುಕ್ಯರ ಮತ್ತು ಕಲಚುರಿಗಳ ಪ್ರಾಬಲ್ಯವನ್ನು ನಾಶಪಡಿಸಿದರು.
ದಕ್ಷಿಣಕ್ಕೆ ಸುಫೀಸಮಿನ ಪರಿಚಯ
ಗುಲ್ಬರ್ಗಾವು ಅನೇಕ ರಾಜಮನೆತನಗಳ ಉದಯ ಮತ್ತು ಪತನವನ್ನು ಕಂಡಿದೆ. ಮತ್ತು ಪ್ರತಿಯೊಂದು ನಗರದ ಮೇಲೆ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದೆ. ಪ್ರಸಿದ್ದ ಸೂಫಿ ಸಂತರಾದ ಖ್ವಾಜಾ ಬಂದೇ ನವಾಜ್ (ಖ.ಸಿ)ರವರ ದರ್ಗಾ ಶರೀಫ್ ಇರುವುದು ಇಲ್ಲಿಯೆ. ಈ ಭಾರತ ದೇಶದಲ್ಲೇ ಅತ್ಯಂತ ಪ್ರಸಿದ್ದವಾದ ದರ್ಗಾ ಶರೀಫ್ ಖ್ವಾಜಾ ಬಂದೇ ನವಾಜ್ರವರದ್ದಾಗಿರಬಹುದು. ಇವರು 1321ರಲ್ಲಿ ದೆಹಲಿಯ {ಸಯ್ಯದ್ ವಾಲ್ ಶರೀಫ್} ಮುಹಮ್ಮದ್ ಬಿನ್ ಯೂಸುಫ್ ಅಲ್ ಹುಸೇನಿರವರ ಮಗನಾಗಿ ಜನಿಸಿದರು. ಅವರಿಗೆ ಏಳು ವರ್ಷವಾದಾಗ ವಲಸೆ ಹೊಗ ಬೆಕಾಯಿತು. ಏಕೆಂದರೆ ಆಗಿನ ದೆಹಲಿಯು ಸುಲ್ತಾನರಾದ ಮುಹಮ್ಮದ್ ಬಿನ್ ತುಘ್ಲಕ್ ಅವರು ತಮ್ಮ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ಗೆ ಬದಲಾಯಿಸಿದ್ದರು.೧೪ನೇ ಶತಮಾನದ ಸೂಫಿಯಾದ ಖ್ವಾಜಾ ಬಂದೇ ನವಾಜ್ ದಕ್ಷಿಣಕ್ಕೆ ಸುಫೀಸಂ ಅನ್ನು ಪರಿಚಯಿಸಿದವರು. ಡಿಸೆಂಬರ್ 17,1390ರ ದಿವಸ ಮಧ್ಯ ಏಷ್ಯದಲ್ಲಿ ವಿಜಯಶಾಲಿಯಾಗಿದ್ದ “ತೈಮೂರ್” ದೆಹಲಿಯ ಹೊರಗಿದ್ದ ತುಘ್ಲಕ್ ಸೈನ್ಯವನ್ನು ನಾಶಮಾಡಿಸಿದನು. ಹೌಜ್ ಕೌಸ್ನಲ್ಲಿ ಮೊಕ್ಕಂ ಹೂಡಿದ್ದನು. ತೈಮೂರ್ನ ದ್ರೋಹವನ್ನು ಸಹಿಸಲಾರದೆ ಅಲ್ಲಿದ್ದ ಜನರ ದೊಡ್ಡ ಪರಿವಾರವು ನಗರದಿಂದ ದೂರ ಓಡಿದರು. ಸಾದ್ಯವಾದಷ್ಟು ಜನರು ದಕ್ಷಿಣಕ್ಕೆ ಸಾಗಿದರು.
ಆಡಳಿತಗಾರರ ಅನುಸರಣೆ ಮತ್ತು ಜಿಶ್ತಿ ತ್ವರೀಕತ್
ಓಡಿಸಲ್ಪಟ್ಟ ಸಾವಿರಾರು ಜನರಲ್ಲಿ ಅಧಿಕವು ವಯಸ್ಕರು. ಅವರು ಡೆಕ್ಕನ್ ಬೀದಿಯಲ್ಲಿ ಪರಕೀಯರಾಗಲಿಲ್ಲ. 1320 CE ಯಲ್ಲಿ ಖ್ವಾಜಾ ಬಂದೇ ನವಾಜ್ (ಖ.ಸಿ.) ಒಂದು ಯಾತ್ರೆ ಹೊರಡಲು ಉದ್ದೇಶಿಸಿದರು. ಅದು ನಡೆಯಲಿಲ್ಲ ಆದರೆ 70 ನೇ ವಯಸ್ಸಿನಲ್ಲಿ ಅದೇ ಪ್ರಯಾಣವನ್ನು ಮುಂದುವರಿಸಿ ಇತಿಹಾಸವನ್ನೆ ಸೃಷ್ಟಿಸಿದರು. ಇವರು ಜಿಶ್ತಿ ತ್ವರೀಕತ್ ಕ್ರಮದಲ್ಲಿ ಸಾಗುತ್ತಿದ್ದರು. ಸೂಫೀಸಂನ ಜಿಶ್ತಿ ತ್ವರೀಕತ್ ಅಫ್ಗಾನಿಸ್ತಾನದ ಹೆರಾತ್ ಬಳಿಯ ಪಟ್ಟನವಾದ ಜಿಶ್ತಿನಿಂದ ಹುಟ್ಟಿಕೊಂಡಿದೆ. ಸೂಫಿಸಂ ಇಸ್ಲಾಮಿನ ತತ್ವಗಳನ್ನು ಅನುಸರಿಸಿ, ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯ ನಂಬಿಕೆಯಲ್ಲಿ ಸಾಗುತ್ತದೆ. ಜಿಶ್ತಿ ತ್ವರೀಕತ್ ದಕ್ಷಿನ ಏಶ್ಯದಲ್ಲಿ ಪ್ರಸಿದ್ದರಾದ ಸೂಫಿ ಶೇಖ್ ಮೊಹಿಯುದ್ದೀನ್ ಜಿಶ್ತಿಯವರು ಪರಿಚಯಿಸಿದರು. ಅದಾಗಿದೆ ಅಜ್ಮೀರ್. ತೈಮೂರ್ನ ಆಕ್ರಮಣದ ನಂತರ ಖ್ವಾಜಾ ಮತ್ತು ಅವರ ಅನುಯಾಯಿಗಳು ಗ್ಯಾಲಿಯಾರ್, ಚಂದೇರಿ ಎಂಬ ಊರಿಗೆ ತಮ್ಮ ನಿವಾಸವನ್ನು ಬದಲಾಯಿಸಿದರು. ನಂತರ ಅವರ ತಂದೆಯ ಸಮಾದಿಗೆ ಗೌರವ ಸಲ್ಲಿಸಲು ಬಯಸಿದ್ದರು. ಆದ್ದರಿಂದ ದೌಲತಾಬಾದಿಗೆ ತೆರಳಿದರು. ದೌಲತಾಬಾದ್ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಸುಲ್ತಾನ್ ಫಿರೋಸ್ ಬಹಮನಿಗೆ ಖ್ವಾಜಾ ಬಂದೇ ನವಾಜ್ ಅವರ ರಾಜ್ಯಕ್ಕೆ ಕಾಲಿಟ್ಟರೆಂದು ಸುಲ್ತಾನ್ ಫಿರೋಸ್ಗೆ ತಿಳಿದಾಗ ಅವನು ಅವರನ್ನು ಬೇಟಿಯಾಗಲು ಹೋಗಿದ್ದನು. ಇದರಿಂದ ನಮಗೆ ಸ್ಪಷ್ಟವಾಗುವುದು ಏನೆಂದರೆ ಹಲವಾರು ಸಾಮ್ರಾಜ್ಯದ ಸಾಮ್ರಾಟರೂ ಕೂಡ ಇವರನ್ನು ಅನುಸರಿಸುತ್ತಿದ್ದರು.
ಖ್ವಾಜಾ ಬಂದೇ ನವಾಜ್ ರವರು1422, 101ನೆ ವಯಸ್ಸಿನಲ್ಲಿ ನಿಧನರಾದರು. ಇವರು ಔಲಿಯಾ ಮತ್ತು ಜನಮನಸ್ಸಿನೆಡೆಯಲ್ಲಿ ಉನ್ನತ ಸ್ಥಾನ ಪಡೆದುದರಿಂದ ಇವರಿಗೆ ದೊಡ್ಡ ಸಮಾಧಿಯನ್ನು ಕಟ್ಟಲಾಯಿತು. ಈ ದರ್ಗಾವು ಗುಲ್ಬರ್ಗಾ ದರ್ಗಾ ಎಂದು ಹೆಚ್ಚು ಜನಪ್ರಿಯವಾಗಿದ್ದರಿಂದ ಗುಲ್ಬರ್ಗಾ ದರ್ಗಾ ಎಂಬ ಹೆಸರಲ್ಲಿ ಪ್ರಸಿದ್ದವಾಯಿತು. ಈ ಚರಿತ್ರೆ ಪ್ರಸಿದ್ದವಾದ ಮಣ್ಣಿನಲ್ಲಿ ಹಲವಾರು ಸಾಮ್ರಾಜ್ಯದ ಕಾಲ್ಮೆಟ್ಟುಗಳು ಹಾದು ಹೋಗಿದೆ. ೭ನೇ ವಯಸ್ಸಿನಲ್ಲಿ ದೆಹಲಿಯಿಂದ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಗೆ ವಲಸೆ ಬಂದ ಖ್ವಾಜಾ ಬಂದೇ ನವಾಜ್ ರವರ ಅಪಾರ ಇತಿಹಾಸವೇ ಇಲ್ಲಿನ ಕೊಡುಗೆ.
ಸಫಾದ್ ಉಜಿರೆ