ಅಸ್ತಮಿಸದ ಸೂರ್ಯ ಜ್ಯೋತಿ ಶಂಸುಲ್ ಉಲಮಾ (ರ)
ಶಂಸುಲ್ ಉಲಮಾ ಇ ಕೆ ಅಬೂಬಕ್ಕರ್ ಮುಸ್ಲಿಯಾರ್(ರ) ನಮ್ಮನಗಲಿದ ದಿನ 1996 ಆಗಸ್ಟ್ 19
ಅರ್ಧಶತಮಾನಕ್ಕಿಂತಲೂ ಅಧಿಕ ಕಾಲ ಉಲಮಾ ಪ್ರಪಂಚದಲ್ಲಿ ಅತ್ಯುಜ್ವಲ ಪ್ರಭೆಯಾಗಿ ಪ್ರಜ್ವಲಿಸಿದ "ಪ್ರಭಾ ಸೂರ್ಯ" 'ಸಮಸ್ತ ಕೇರಳ ಜಂಇಯ್ಯತುಲ್ ಉಲಾಮ' ದ ಪ್ರಧಾನ ಕಾರ್ಯದರ್ಶಿಯಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶೈಖುನಾ "ಶಂಸುಲ್ ಉಲಾಮ" ಈ ಕೆ ಅಬುಬಕ್ಕರ್ ಮುಸ್ಲಿಯಾರ್ (ರ)ಇವರ ಮೂಲ ಅರೇಬಿಯಾ ದೇಶದ ಯಮನ್, ವಿದ್ವಾಂಸರೂ,ವಿದ್ಯಾವಂತರೂ ಆಗಿದ್ದ ಮುಹಮ್ಮದ್ ಕೋಯಾ ಎಂಬವರು ಯಮನ್ ನಿಂದ ಕೇರಳಕ್ಕೆ ಬಂದು ನೆಲೆಸಿದ್ದರು.ಅವರ ಪುತ್ರ ಅಬೂಬಕ್ಕರ್ ಮುಸ್ಲಿಯಾರ್ ಪ್ರಸಿದ್ಧ ವಿದ್ವಾಂಸರು ಮತ ಪಂಡಿತರೂ ಆಗಿದ್ದರು. ಇವರ ಪುತ್ರ ಕೋಯಕುಟ್ಟಿ ಮುಸ್ಲಿಯಾರ್ ವಿದ್ವಾಂಸರು,ಸೂಫಿವರ್ಯರೂ,ಖಾದಿರಿಯ್ಯ ತ್ವರೀಕತ್ತಿನ ಶೈಖರೂ ಆಗಿದ್ದರು. ಇವರ ಪ್ರಥಮ ಪುತ್ರರೇ ಶಂಸುಲ್ ಉಲಾಮ ಈ ಕೆ ಅಬೂಬಕ್ಕರ್ ಮುಸ್ಲಿಯಾರ್(ರ).
ಶಂಸುಲ್ ಉಲಾಮ ಈ ಕೆ ಅಬೂಬಕ್ಕರ್ ಮುಸ್ಲಿಯಾರ್(ರ) ಇಪ್ಪತ್ತನೇ ಶತಮಾನದ ವಿಶ್ವದ ಅಗ್ರಗಣ್ಯ 'ಮುಜದ್ದಿದ್' ವಿದ್ವತ್ ಪ್ರತಿಭೆ ಸುನ್ನತ್ ಜಮಾಅತಿನ ಅಗ್ರೇಸರರೂ ಆಗಿದ್ದರು. ಆರೇಳು ದಶಕಗಳ ಕಾಲ ದರ್ಸ್ ಸೇವೆಗೈದ ಅವರು 15,000 ದಷ್ಟು ನೇರ ಶಿಷ್ಯಂದಿರನ್ನು ಹೊಂದಿದ್ದರು.ಪರೋಕ್ಷ ಶಿಷ್ಯಗಣ ಅಸಂಖ್ಯ.! ಕೆ.ಕೆ ಹಝ್ರತ್(ನ) ಸಿ.ಎಂ.ವಲಿಯುಲ್ಲಾಹಿ ಮಡವೂರ್(ನ), ಶೈಖುಲ್ ಜಾಮಿಅಃ ಆಲಿ ಕುಟ್ಟಿ ಉಸ್ತಾದ್ , ಸೈಯದ್ ಹೈದರಲಿ ಶಿಹಾಬ್ ತಂಙಳ್ ಮೊದಲಾದವರು ಶಂಸುಲ್ ಉಲಮಾರ ಶಿಷ್ಯ ಪ್ರಮುಖರು.
ವೈಜ್ಞಾನಿಕ ಸಂಪತ್ತು,ಧರ್ಮದಲ್ಲಿ ಪಾಂಡಿತ್ಯಗಳಿಂದ ಪ್ರಶೋಭಿಸುತ್ತಿದ್ದ ವ್ಯಕ್ತಿ, ಸಹಸ್ರಾರು ಸಂಖ್ಯೆಯ ಬೃಹತ್ ಶಿಷ್ಯವೃಂದದ ಗುರು, ಇಸ್ಲಾಮಿ ವಿದ್ಯೆಗಳ ಸರ್ವ ವಿಭಾಗಗಳಲ್ಲಿಯೂ ಪಾಂಡಿತ್ಯ ಹೊಂದಿದ್ದರು. ಬಹುಭಾಷಾ ಪಂಡಿತರಾಗಿದ್ದ ಅವರು ಅರಬೀ,ಇಂಗ್ಲಿಷ್,ಉರ್ದು,ಸುರಿಯಾನಿ,ತಮಿಳು,ಪಾರ್ಸಿ, ಮಳಯಾಳ ಭಾಷೆಗಳನ್ನು ಬಲ್ಲವರಾಗಿದ್ದರು. ಕ್ರೈಸ್ತ ಹಾಗೂ ಇತರ ಧರ್ಮ ಗ್ರಂಥಗಳನ್ನು ಚನ್ನಾಗಿ ತಿಳಿದಿದ್ದರು.
ಶಂಸುಲ್ ಉಲಾಮರವರ ಮಾತಿಗೆ ಇಡೀ ಮುಸ್ಲಿಂ ಕೇರಳ ಎದ್ದೇಳುವಷ್ಟು ಪ್ರಭಾವ ಹೊಂದಿದ್ದು, ಆ ಮಹಾನುಭಾವರು ಬಾಬರೀ ಮಸ್ಜಿದ್ ಪ್ರಕರಣದ ಸಂದರ್ಭದಲ್ಲಿ ತೋರಿದ ಆತ್ಮ ಸಂಯಮ ಭಾರತದ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಆ ಸಂದರ್ಭದಲ್ಲಿ ಅವರು ಉದ್ರೇಕಕಾರಿಯಾದ ಒಂದು ಅಕ್ಷರ ಹೇಳಿದ್ದರೆ ಇಡೀ ಕೇರಳ ರಾಜ್ಯದ ಪರಿಸ್ಥಿತಿ ಏನಾಗುತ್ತಿತ್ತೆಂಬುದನ್ನು ಹೇಳಲು ಸಾದ್ಯವಾಗದು. ಈ ಪರಿಸ್ಥಿತಿ ಯನ್ನು ಅರಿತುಕೊಂಡು ಅವರು ತನ್ನ ಮನದ ಮೂಲಕ ಕೇರಳವನ್ನು ರಕ್ಷಿಸಿದರು.
ಸಮಸ್ತ 70ನೇ ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಶೈಖುನಾ ಶಂಸುಲ್ ಉಲಾಮ ಈ ಕೆ ಅಬೂಬಕ್ಕರ್ ಮುಸ್ಲಿಯಾರ್. ತನ್ನ ಕೊನೆ ಭಾಷಣದಲ್ಲಿ ಪ್ರಸ್ತಾಪಿಸಿದ್ದೇನೆಂದರೆ ಸುನ್ನಿಗಳು,ನಿದ್ರಿಸದಿರುವಷ್ಷು ಕಾಲ ಅಹ್ಲು ಸುನ್ನತಿವಲ್ ಜಮಾಅತಿನ ಜನರು ಜಾಗ್ರತರಾಗಿರುವಷ್ಟು ಕಾಲ ಇಲ್ಲಿ ಯಾವ ಕಕ್ಷಿಗೂ ಏನನ್ನು ಮಾಡಲು ಸಾಧ್ಯವಿಲ್ಲ. ಸಾಮಾಜಿಕ,ಸೌಹಾರ್ದತೆ,ಮತಮೈತ್ರಿ ನಾಡಿನಲ್ಲಿ ನೆಲೆನಿಲ್ಲ ಬೇಕಾದರೆ ಸುನ್ನತ್ ಜಮಾಅತಿನಿಂದ ಮಾತ್ರ ಸಾಧ್ಯ. ಸುನ್ನತ್ ಜಮಾಅತ್ ಒಂದು ಪಾರ್ಟಿಯಲ್ಲ. ಇಸ್ಲಾಮಿನ ಯಥಾ ರೂಪವಾಗಿದೆ. ಅಹ್ಲು ಸುನ್ನತ್ ವಲ್ ಜಮಾಅತನ್ನು ಒಂದೇ ಮಾತಿನಲ್ಲಿ ಸಮರ್ಥಿಸಲು ಸಾಧ್ಯ ಮುಹಮ್ಮದ್ (ಸ.ಅ)ಖಾತಿಮುನ್ನಬಿಯ್ಯೀನ್ (ಅಂತ್ಯ ಪ್ರವಾದಿ)ಆಗಿದ್ದಾ ರೆಂಬುದೇ ಅದರ ತಳಹದಿ, ಲೋಕಾವಸಾನದವರೆಗಿನ ಸರ್ವ ಜನ ವಿಭಾಗಗಳನ್ನು ಸ್ಪರ್ಶಿಸಿ ಅವರು ನಡೆಸಬೇಕಾದ ಸರ್ವಕ್ರಮಗಳನ್ನು ಶರೀಅತ್ತಿನ ಸರ್ವ ನಿಯಮಗಳನ್ನು ಅಲ್ಲಾಹು ಮುಹಮ್ಮದ್ (ಸ.ಅ)ರವರ ಮೂಲಕ ಅವತೀರ್ಣಗೊಳಿಸಿರುವನು ಎಂದಾಗಿದೆ ಖುರ್ ಆನಿನ ಹೇಳಿಕೆ. ಆ ಶರೀಅತ್ ಖಿಯಾಮತ್ ತನಕ ಸಂರಕ್ಷಿಸಲ್ಪಡುವುದೆಂದೂ ಅಲ್ಲಾಹು ಹೇಳಿದ್ದಾನೆ. ಹಾಗಿರುವಾಗ ಅದರಲ್ಲಿ ನೂತನ ಸಿದ್ದಾಂತ ಗಳನ್ನೂ, ಆಶಯಗಳನ್ನೂ ಸೇರ್ಪಡೆ ಗೊಳಿಸಲು ಅಲ್ಲಾಹು ಅನುಮತಿಸಲಾರ. ಬೇರೊಂದು ಪರಿಶೋಧನೆಯ ಅವಶ್ಯಕತೆ ಯಿಲ್ಲ ಇದಾಗಿದೆ ಸತ್ಯ ವಿಶ್ವಾಸ.
ಆ ದಿವ್ಯ ಹಸ್ತ ದಿಂದ ಉದ್ಘಾಟನೆಗೊಂಡ ಸಮಸ್ತ 70ನೇ ವಾರ್ಷಿಕ ಸಮ್ಮೇಳನವು ಸಾವಿರದ ನಾನೂರು ವರುಷಗಳ ಹಿಂದೆ ನಬಿ(ಸ.ಅ)ರವರ ವಿದಾಯ ಭಾಷಣದ ಅರಫಾ ಮೈದಾನವನ್ನು ನೆನಪಿಸುತ್ತಿತ್ತು.
ಪ್ರವಾದಿವರ್ಯರು ಹಜ್ಜತುಲ್ ವಿದಾಹ್ ಕೊನೆ ಹಜ್ಜನ್ನು ಪೂರೈಸುತ್ತಾ, ಅರಫಾ ಮೈದಾನಿನಲ್ಲಿ ಸೇರಿದ ಸಹಸ್ರ ಜನಸ್ತೋಮವನ್ನುದ್ದೇಶಿಸಿ ತನ್ನ ದೌತ್ಯ ನಿರ್ವಹಣೆ ಮಾಡಿದ ಪ್ರವಾದಿಯ ಅನುಚರರನ್ನು ( ಸುಮಾರು 15 ಲಕ್ಷ ಸುನ್ನಿ ಜನಸ್ತೋಮವನ್ನು) ಸಾಕ್ಷಿಯಾಗಿಸಿ ತನ್ನ ಕಟ್ಟಕಡೆಯ ಡೌತ್ಯವನ್ನು ನಿರ್ವಹಿಸಿದ್ದಾರೆ ಶಂಸುಲ್ ಉಲಾಮ (ರ) ತನ್ನ ಜೀವನದ ಕೊನೆಯ ಭಾಗವನ್ನು ಅಹ್ಲು ಸುನ್ನತ್ತ್ ವಲ್ ಜಮಾಅತಿಗಾಗಿ ಅರ್ಪಿಸಿದರು..
ಹಿಜರಿ1417 ರಬೀವುಲ್ ಆಖಿರ್ 3 (1996 ಆಗಸ್ಟ್ 19) ರ ಭೌತಿಕ ಸೂರ್ಯ ಉದಯವಾದದ್ದು ಒಂದು 'ಜ್ಞಾನ ಸೂರ್ಯ' ಅಸ್ತಮಿಸಿದ ದುಃಖ ವಾರ್ತೆಯೊಂದಿಗೆ, ಅದು ಲೋಕದ ಜನ ಕೋಟಿಗಳ ಹೃದಯದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಪ್ರಶೋಭಿಸುತ್ತಿದ್ದ ಮಹೋನ್ನತರಾದ ಶೈಖುನಾ ಶಂಸುಲ್ ಉಲಾಮ ಈ ಕೆ ಅಬೂಬಕ್ಕರ್ ಮುಸ್ಲಿಯಾರ್ (ರ)ರವರು ಕಲ್ಲಿಕೋಟೆಯ ಫಾತಿಮಾ ಆಸ್ಪತ್ರೆಯಲ್ಲಿ ಹತ್ತಿರದ ಮಸೀದಿಯಿಂದ ಕೇಳಿಸುತ್ತಿದ್ದಸುಬ್ ಹಿ ಬಾಂಗಿಗೆ ಉತ್ತರಿಸುತ್ತಾ ಕೊನೆಯ 'ಲಾ ಇಲಾಹ ಇಲ್ಲಲಾಹ್' ಎಂಬ ವಾಕ್ಯವನ್ನು ಉಚ್ಚರಿಸುತ್ತಾ ಇಹಲೋಕವನ್ನು ತ್ಯಜಿಸಿ ಅಲ್ಲಾಹುವಿನ ಸನ್ನಿಧಿಗೆ ಸೇರಿದ ವಾರ್ತೆಯಾಗಿತ್ತು..
ಅಲ್ಲಾಹನು ಅವರನ್ನು ನಮ್ಮನ್ನೂ ಸ್ವರ್ಗದಲ್ಲಿ ಒಗ್ಗೂಡಿಸಲಿ