ಪ್ರೌಢಿಮೆಯ ಪಂಚ ವರ್ಷಗಳ ಹರುಷದಲ್ಲಿ ನೂರುಲ್ ಹುದಾ ಮಾಡನ್ನೂರ್
  ಶೈಕ್ಷಣಿಕ ಭೂಪಟದಲ್ಲಿ ಅಸಾಧ್ಯವಾದ ಗುರುತಿನ ಹೆಜ್ಜೆಹಾಕಿದ ವಿದ್ಯಾಸಂಸ್ಥೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ. ಧಾರ್ಮಿಕ ವಿದ್ಯಾಭ್ಯಾಸ ರಂಗದಲ್ಲಿ ಅನುಪಮವೂ ಅಭಿಮಾನಾರ್ಹವೂ ಆದ ಪರಂಪರೆ ಈ ಮಣ್ಣಿಗಿದೆ. ಪ್ರವಾದಿ ಮಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಕಾಲದಲ್ಲಿಯೇ ಇಸ್ಲಾಮಿ ಸಂದೇಶ ತಲುಪಿದ ಕೇರಳದ ಪೊನ್ನಾನಿಯ ಹಾಗೆ ಪಳ್ಳಿದರ್ಸ್  ಸಂಪ್ರದಾಯ ಜೀವಂತವಾಗಿಸಿದ ಅಲ್ಲಾಹನ ಇಷ್ಟ ದಾಸರು ಅಂತ್ಯ ವಿಶ್ರಾಂತಿ ಹೊಂದಿರುವ ಮಾಡನ್ನೂರ್ ಶತಮಾನಗಳವರೆಗೆ ಈ ವ್ಯವಸ್ಥೆ ಮುಂದುವರಿದಿತ್ತು. ಧಾರ್ಮಿಕ ಶಿಕ್ಷಣಕ್ಕಾಗಿ ಪಳ್ಳಿ ದರ್ಸ್  ಆಶ್ರಯಿಸುತ್ತಿದ್ದ ವಿದ್ಯಾರ್ಥಿಗಳು ಬದಲಿ ಸಂವಿಧಾನ ಹುಡುಕುತ್ತಿದ್ದ ಕಾಲ, ಪಳ್ಳಿ ದರ್ಸಿನ ಪ್ರತಾಪಕ್ಕೆ ಕುಂದುಂಟಾಗಬಹುದೇನೋ   ಎಂಬ ಸಂಶಯ ವಿಶ್ವ ಉಲಮಾ ಒಕ್ಕೂಟ ಸಮಸ್ತದ ಧೀರ ಉಲಮಗಳಿಗೆ ಕಾಡತೊಡಗಿತ್ತು. ವಿಶ್ರಮ ವಿರಾಮವಿಲ್ಲದೆ ಶಿಕ್ಷಣ ಕ್ರಾಂತಿಯ ಹಿಂದೆ ಬಿದ್ದಿದ್ದ ಉಲಮಾಗಳ ಮೆದುಳಿನಾಟದಲ್ಲಿ ಸಮನ್ವಯ ವಿದ್ಯಾಕೇಂದ್ರಗಳು ಉದಯ ಗೊಂಡವು. ಇದರೊಂದಿಗೆ ವಿದ್ಯಾರ್ಥಿಗಳ ಪೋಷಕರ ಆಶ್ರಯತಾಣ ಸಮನ್ವಯ ವಿದ್ಯಾಕೇಂದ್ರಗಳಾದವು.
ಕಾಲಘಟ್ಟಕ್ಕೆ ತಕ್ಕಂತೆ ಸ್ಪಂದಿಸುವ ಬಹುಭಾಷಾ ಪಂಡಿತರಿಗೆ ಜನ್ಮ ನೀಡುವ ಎದುರಾಳಿಗಳಿಗೆ ಆಯಾ ಕಲೆಯನ್ನು ಮುಂದಿಟ್ಟು ಜವಾಬ್ದಾರಿಯುತವಾಗಿ ಎದುರಿಸುವ ಧಾರ್ಮಿಕ ಪಂಡಿತರನ್ನು ಹೊರತರುವ ಉದ್ದೇಶದಿಂದ ಚೆಮ್ಮಾಡ್  ಪಟ್ಟಣದಲ್ಲಿ ಆಯುರ್ವೇದಿಕ್ ಡಾಕ್ಟರ್ ಆಗಿದ್ದ ಉಮಾರಾ  ಶಿರೋಮಣಿ ಜನಮನದಲ್ಲಿ ಶಿಕ್ಷಣ ಸಂಚಲನ ಮೂಡಿಸಿದ ಉಕ್ಕಿನ ಮನುಷ್ಯ ಸಮುದಾಯ ಸ್ನೇಹಿ ಡಾಕ್ಟರ್ ಬಾಪೂಟ್ಟಿ  ಹಾಜಿ ಚೆಮ್ಮಾಡ್ ಕೇಂದ್ರೀಕರಿಸಿ ವಿಶಾಲವಾದ ಜಮೀನು ಖರೀದಿಸಿ ಮಣ್ಣು ಹಾಕಿ ನೀಗಿಸಿ ತನ್ನ ಉದ್ದೇಶ ದತ್ತ ದಾಪುಗಾಲಿಟ್ಟು ಅನಿರೀಕ್ಷಿತ ಯಶಸ್ಸು ಕಂಡ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯ ಇದರ ಅಂಗಸಂಸ್ಥೆಯಾಗಿ ಕರ್ನಾಟಕದ ಮಣ್ಣಿನಲ್ಲಿ ಅವಿಶ್ವಾಸನೀಯ ಶಿಕ್ಷಣ ಕ್ರಾಂತಿಯ ಸಂಚಲನ ಮೂಡಿಸಿದ ನೂರುಲ್ ಹುದಾ  ಇಸ್ಲಾಮಿಕ್ ಅಕಾಡಮಿ ತನ್ನ ಪ್ರೌಢಿಮೆಯ ಐದು ವರ್ಷಗಳನ್ನು ಪೂರೈಸಿದ ಹರುಷದ ಸಂಭ್ರಮದಲ್ಲಿದೆ. 
 
ರೋಮಾಂಚನದ  ಶುಭಮುಂಜಾನೆ
2015 ಆಗೋಸ್ಟ್ 19 ಕೊಡಪ್ಪನಕ್ಕಲ್ ತರವಾಡಿನ ಮುತ್ತು ಅಸ್ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್  ಕಾಲೇಜಿನ ಶಿಲಾ ಸ್ಥಾಪನೆ ಗೈದರು.ಸಮಸ್ತ ಕೇರಳ ಜಂಇಯ್ಯತುಲ್  ಉಲಮಾದ ಅಂದಿನ ಮುಖ್ಯ ಕಾರ್ಯದರ್ಶಿ ಝೆಯ್ನುಲ್ ಉಲಮಾ ಚೆರುಶ್ಶೈರಿ ಉಸ್ತಾದ್ ಹದೀಸ್ ಗ್ರಂಥವಾದ ಅರ್ಬಈನವವಿ ಗ್ರಂಥದ ಹದೀಸ್ ಓದಿಕೊಡುತ್ತಾ ಸಂಸ್ಥೆಯ ಮೊದಲನೇ ತರಗತಿ ಉದ್ಘಾಟಿಸಿದರು. ಇದರೊಂದಿಗೆ ಕರುನಾಡ ಮುಸಲ್ಮಾನರ ಅಭಿಲಾಷೆಯ ಸ್ವಪ್ನ ಸಕ್ಷಾತ್ಕಾರಗೊಂಡಿತ್ತು. ಕರ್ನಾಟಕದ ಶಿಕ್ಷಣ ಪ್ರಿಯರು ಕಾಯುತ್ತಿದ್ದ ಧನ್ಯ ಮಹೋರ್ತ,  ಚಿರಕಾಲ ಅಭಿಲಾಷೆ,  ಸಾಕ್ಷಾತ್ಕಾರಗೊಂಡಿದೆ! ಊರ ಪರವೂರಿನಲ್ಲಿ ಹಬ್ಬದ ವಾತಾವರಣ! ರೋಮಾಂಚನದ ಶುಭಮುಂಜಾನೆ! ಸಂತೃಪ್ತಿಯ ನಿಟ್ಟುಸಿರು!.
 *ಹರಿದುಬಂದ ಸಹಾಯಹಸ್ತ*
 ಸೌಕರ್ಯಗಳಿಲ್ಲದೆ ಪ್ರಾಥಮಿಕ ವ್ಯವಸ್ಥೆ ಗಳಿಲ್ಲದೆ ಪ್ರಾರಂಭದ ಪರದೆ ತೆರೆದಿಟ್ಟ ಸಂಸ್ಥೆಗೆ ಊರ-ಪರವೂರ ಅನಿವಾಸಿಗಳ ಸಹೃದಯಿಗಳ ಸಹಾಯ ಹರಿದುಬಂದವು. ಸ್ವಂತ ಜಮೀನು,ನೂತನ ಶೈಲಿಯ ಸುಸಜ್ಜಿತ ಕೊಠಡಿ, ಭೋಜನ ವ್ಯವಸ್ಥೆ ಆಟದ ಮೈದಾನ ವಿದ್ಯಾರ್ಥಿಗಳ ಸೌಕರ್ಯಕ್ಕೆ ತಕ್ಕ ಪರ್ಯಾಪ್ತ ರೀತಿಯ ಸೌಕರ್ಯಗಳು, 45 ವಿದ್ಯಾರ್ಥಿಗಳಲ್ಲಿ ಪ್ರಾರಂಭಿಸಿದ ಕಾಲೇಜು ಇದೀಗ ಐದನೇ ವರ್ಷ ಪೂರೈಸುವಾಗ 255 ವಿದ್ಯಾರ್ಥಿಗಳು 12 ಅಧ್ಯಾಪಕರು ಇತರ ಸಿಬ್ಬಂದಿಗಳು,  ಸರಿಸುಮಾರು ತಿಂಗಳಿಗೆ 7ಲಕ್ಷ ರೂಪಾಯಿ ವೆಚ್ಚ ತಗಲುತ್ತಿದೆ.
ಮಂಬುರಂ ಮಾಡನ್ನೂರ್
 ದಾರುಲ್ ಹುದಾ ಎಂಬ ವಿಶ್ವೋ ತರ ಸಂಸ್ಥೆಯ ಯಶಸ್ಸು ವರ್ಚಸ್ಸು ಮಂಬುರಂ ಮಕಾಮಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸಯ್ಯದ್ ಅಲವಿ ತಂಗಳ್ (ಖಸಿ)ರಿಂದಾದರೆ ಮಾಡನ್ನೂರಿನಲ್ಲೂ ಶುಹದಕ್ಕಳ  ಆತ್ಮೀಯ ನೇತೃತ್ವದ ನೋಟ, ಕಾಸರಗೋಡು ಕೊಡಗು ಜಿಲ್ಲೆಗೆ ತಾಗಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರವು ಆತ್ಮೀಯ ಸಂತೃಪ್ತಿಯೊಂದಿಗೆ ಸಂಸ್ಥೆಯು ಈ ಗ್ರಾಮೀಣ ಪ್ರದೇಶದಲ್ಲಿ ಕ್ರಿಯಾತ್ಮಕವಾಗಿ ಬೆಳೆದು ಬರುತ್ತಿರುವುದು ಕೂಡ ಪವಾಡವೇ ಸರಿ.
 
ವಿದ್ಯಾರ್ಥಿಗಳ ಸಾಧನೆಗೆ ವ್ಯಾಪಕ ಮೆಚ್ಚುಗೆ
 ಪ್ರತಿವರ್ಷವೂ ಮಿಲಾದ್ ತಿಂಗಳಲ್ಲಿ ನಡೆಯುವ ನೂರ್ ಶೋ ಕಾರ್ಯಕ್ರಮವಾಗಲಿ, ವಿದ್ಯಾರ್ಥಿಗಳು ಬರೋಬರಿ 5ವರ್ಷಗಳಲ್ಲಿ ಕಲಿಕೆಯೊಂದಿಗೆ ವಿವಿಧ ಕಲೆಗಳಲ್ಲಿಯೂ ಮೇಲುಗೈ ಸಾಧಿಸಿದ್ದಾರೆ ಅದಕ್ಕೆ ಅವರೇ ಉದಾಹರಣೆಯಾಗಿದೆ. ದಕ್ಷಿಣಕನ್ನಡ ಚಿಕ್ಕಮಂಗಳೂರು ಹಾಸನ ಕೊಡಗು ಕಾಸರಗೋಡು ಜಿಲ್ಲೆಯ 255 ವಿದ್ಯಾರ್ಥಿಗಳಿಗೆ ಅವರದೇ ಆದ ಪ್ರತ್ಯೇಕತೆಗಳಿವೆ. ಭಾಷಣ ಲೇಖನ ಹಾಗೂ ಇನ್ನಿತರ ಕಲೆಗಳಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆಯುತ್ತಿದ್ದರೂ  ತರಬೇತಿಗೂ ಮೀರಿ  ಪ್ರತಿಭೆಗಳು ಹೊರಬರುತ್ತಿರುವುದು,
ದಾರುಲ್ ಹುದಾ ರಾಷ್ಟ್ರೀಯ ಕಲೋತ್ಸವದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು ವ್ಯಾಪಕ ಮೆಚ್ಚುಗೆ ಪಡೆಯುವಂತಾಗಿದೆ"""""""""""
 ನಿಷ್ಕಲಂಕ ಮಾದರಿ ಚಟುವಟಿಕೆಗಳು ಕಾರ್ಯರೂಪಕ್ಕೆ ತಂದು ಜನಮನ್ನಣೆ ಪಡೆದ ಕಳೆದ 5ವರ್ಷಗಳಲ್ಲಿ ನಿರಂತರ ಸಮಾಜದ ಅಭಿವೃದ್ಧಿ ಸುದ್ರಡ ಕುಟುಂಬ ಕಲ್ಯಾಣ ಯೋಜನೆ ಸಂಘಟನಾತ್ಮಕ ಪ್ರವರ್ತಿ ವಿದ್ಯಾರ್ಥಿ ಬೆಳವಣಿಗೆಗಳಲ್ಲಿ ಸುದಾರ್ಯ ರೀತಿ, ದಅವಾ ರಂಗ, ಆತ್ಮೀಯ ರಂಗ, ಸಂಸ್ಕೃತಿ ಸಮಾಜ ಮೊದಲಾದವುಗಳಿಗೆ ಆದ್ಯತೆ ನೀಡಿ ಸಮುದಾಯದ ದಾನಿಗಳಿಂದ ಶಿಕ್ಷಣ ಪ್ರೇಮಿಗಳಿಂದ ಸಂಗ್ರಹಿಸಿದ ಬಹುಪಾಲು ಮತ್ತು ಕಾರ್ಯೋನ್ಮುಖ ಚಟುವಟಿಕೆಗಳಿಗೂ ಮೀಸಲಿಡಲಾಗಿದೆ. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಆಯೋಜಿಸಿದ 2019ರ ಫ್ಯಾಮಿಲಿ ಮೀಟ್, ಪ್ರತಿ ತಿಂಗಳು ನಡೆಯುವ ಮಜ್ಲಿಸುನ್ನೂರ್ ಮುಂತಾದ ಹಲವಾರು ಕಾರ್ಯಕ್ರಮಗಳು ವೈಶಿಷ್ಟತೆ ಯೊಂದಿಗೆ ಜನ ಮನ್ನಣೆ ಪಡೆಯುತ್ತಿದೆ.
 ಅಡೆತಡೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿಮ್ಮ ಸಹಾಯ ಸಹಕಾರದಿಂದ ಪ್ರೌಢಿಮೆಯ ಪಂಚ ವರ್ಷಗಳು ಕಳೆದುಹೋದವು• ಮುಂದೆಯೂ ನಿಮ್ಮ ಸಹಕಾರದ ನಿರೀಕ್ಷೆ ಇದೆ.
 ಸಂಸ್ಥೆಯ ಯಾನದಲ್ಲಿ ನಮ್ಮೊಂದಿಗೆ ಸಹಕರಿಸಿದ ಹಲವರು ಇಂದು ನಮ್ಮೊಂದಿಗಿಲ್ಲ ಕರ್ನಾಟಕದ ಮಣ್ಣಿನಲ್ಲಿ ಬೃಹತ್ ಸಮನ್ವಯ ಕೇಂದ್ರ ಗುರಿಯತ್ತ ಸಾಗಲು ಸಿದ್ಧವಾಗಿದೆ ಎಂದು ಮನಸಾರೆ ಕಂಡು ಸ್ಪೂರ್ತಿ ತುಂಬಿದ ಮೊದಲನೇ ಬ್ಯಾಚ್ ವಿದ್ಯಾರ್ಥಿಗಳಿಗೆ ತರಗತಿ ಉದ್ಘಾಟನೆ ನಿರ್ವಹಿಸಿದ ಚೆರುಸ್ಶೈರಿ ಉಸ್ತಾದರಿಂದ ಸಮಿತಿಯ ಒಡನಾಟದಲ್ಲಿ ಉತ್ಸುಕನಾಗಿ ಸಹಕರಿಸಿದ ಅಬ್ದುಲ್ ರಜಾಕ್ ಹಾಜಿ ಪಳ್ಳತ್ತೂರು ಹಾಗೂ ಹಲವಾರು ವಿದ್ವಾಂಸರು ಗಣ್ಯರು ದಾನಿಗಳು ಚಿಕ್ಕ ಪುಟ್ಟ ನೆರವನ್ನು ನೀಡಿದ ಅನೇಕರು...... ಬೆಳವಣಿಗೆಯಲ್ಲಿ ಸಂತೋಷ ವ್ಯಕ್ತಪಡಿಸಿದ ಹಲವರು ನಮ್ಮನ್ನಗಲಿ ಇಹಲೋಕ ತ್ಯಜಿಸಿದ್ದಾರೆ ಅವರಿಗೆ ತಕ್ಕ ಪ್ರತಿಫಲ ನೀಡಲಿ ಆಮೀನ್,,,,,,,,,,, 
 `````ಸಂಸ್ಥೆಯ ಒಡನಾಟದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸುವ ಹಲವರಿದ್ದಾರೆ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬುಶ್ರಾ ಹಾಗೂ ಪದಾಧಿಕಾರಿಗಳು ಸದಸ್ಯರು ಮಾಡನ್ನೂರಿನ ಮಹಿಮೆಯು  ಪೂರ್ವೂಪರಿ ಬೆಳೆಯುತ್ತಿರುವ ಕ್ಷಣ ಕ್ಷಣಗಳನ್ನು ಕಂಡು ಸಂತೃಪ್ತಿಯಿಂದ ಸಹಕಾರದ ````ಅಂಸ್ವಾರಿ````ಗಳಾಗಿ  ಮಾರ್ಪಟ್ಟ ಜಮಾಅತ್ತಿನ  ಸರ್ವರೂ, ಯುಎಇ ರಾಷ್ಟ್ರೀಯ ಸಮಿತಿ, ಕತ್ತರ್ ರಾಷ್ಟ್ರೀಯ ಸಮಿತಿ,ಕೆ ಎಸ್ ಎ ವಾಟ್ಸಪ್ ಬಳಗ,  ವಿವಿಧ ಝೋನ್ ಸಮಿತಿಗಳು, ರಕ್ಷಕ-ಶಿಕ್ಷಕ ಸಮಿತಿ,  ಯುವಕ ವೃನ್ದ, ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಹೀಗೆ ಹಲವಾರು ಗಣ್ಯರು.ಕಾರ್ಯಕ್ರಮಗಳಿಗೆ ಬಂದು ಪ್ರಾರ್ಥನೆಗೆ ನೇತೃತ್ವ ನೀಡುತ್ತಿರುವ ಸಾದಾತ್ ಗಳೂ ಉಲಮಾಗಳೂ,  ಪ್ರತ್ಯಕ್ಷ ಪರೋಕ್ಷ ಸಹಕರಿಸುತ್ತಿರುವ ಎಲ್ಲರಿಗೂ ಮನದಾಳದ ಕೃತಜ್ಞತೆಗಳು ಅಲ್ಲಾಹನು ಸ್ವೀಕರಿಸಲಿ ಆಮೀನ್
 ಸ್ಥಾಪಕ ದಿನ
19-8-2015
✍️ ಕೆಯು ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ 
 (ವ್ಯವಸ್ಥಾಪಕರು)

Related Posts

Leave A Comment

Voting Poll

Get Newsletter