ಉಯೀಗರ್ ಮುಸ್ಲಿಮರ ಮೇಲೆ ನಿಗಾ ಇಡಲು ಚೈನೀಸ್ ಸರ್ಕಾರಕ್ಕೆ ಸಹಾಯ:ವಾವ ಕಂಪನಿಯ ಬ್ರಾಂಡ್ ಅಂಬಾಸಿಡರ್ ಒಪ್ಪಂದವನ್ನು ತಿರಸ್ಕರಿಸಿದ ಫ್ರೆಂಚ್ ಫುಟ್ಬಾಲ್ ತಾರೆ ಅಂಟೋನಿಯೋ ಗ್ರೀಸ್  ಮಾನ್
ಪ್ಯಾರಿಸ್: ಚೀನಾದ ಉಯೀಗರ್ ಮುಸ್ಲಿಮರನ್ನು ಗಮನಿಸಲು ಅವರ ಕುರಿತಿರುವ ವಿವರಗಳನ್ನು ಚೈನಿಸ್ ಆರಕ್ಷಕ ಪಡೆಗಳಿಗೆ ನೀಡುವುದಕ್ಕೋಸ್ಕರ ತಯಾರು ಮಾಡಲ್ಪಟ್ಟ ಪ್ರತ್ಯೇಕ ಆಪ್ ಅನ್ನು ಅಭಿವೃದ್ಧಿಪಡಿಸಿದ ಚೈನೀಸ್ ಕಂಪನಿಯಾದ ವಾವ,ಮನುಷ್ಯತ್ವ ವಿರುದ್ಧ ನಡವಳಿಕೆಯನ್ನು ವಿರೋಧಿಸುವ ಮೂಲಕ ಫ್ರೆಂಚ್ ಫುಟ್ಬಾಲ್ ಆಟಗಾರ ಅಂಟೋನಿಯೋ ಗ್ರೀಸ್ಮಾನ್  ಆ ಕಂಪನಿಯ ಬ್ರಾಂಡ್ ಅಂಬಾಸಿಡರ್ ಒಪ್ಪಂದವನ್ನು ತಿರಸ್ಕರಿಸಿದರು.
    ಉಯೀಗರ್ ಮುಸ್ಲಿಮರನ್ನು  ನಿರೀಕ್ಷಿಸಲ್ಗೋಸ್ಕರ ಕ್ಯಾಮರಾಗಳು ಮತ್ತು ಅವರನ್ನು ಗುರುತಿಸಲ್ಪಟ್ಟ ಸಂದರ್ಭದಲ್ಲಿ ತಕ್ಷಣವೇ ಚೀನಾ ಅರಕ್ಷಕ ಪಡೆಗೆ ತಿಳಿಸಲಿರುವ Alert ಸಂವಿಧಾನವನ್ನು ವಾವ ಕಂಪನಿಯ ಸಹಾಯದೊಂದಿಗೆ ಚೀನಾದಲ್ಲಿ ಸ್ಥಾಪಿಸಲಾಗಿದೆ ಎಂಬ ವಾರ್ತೆಗಳು ಕೆಲದಿನಗಳ ಮುಂಚೆ ಬೆಳಕಿಗೆ ಬಂತು.ಇದರ ವಿರುದ್ಧವಾಗಿ ವಿಶ್ವಾದ್ಯಂತ ವಿರೋಧ ವೆದ್ದಿತು. ಇದರಿಂದಾಗಿ ಈ ಫುಟ್ಬಾಲ್ ಆಟಗಾರನು ಈ ತೀರ್ಮಾನವನ್ನು ಕೈಗೊಂಡರು.
       "ವಾವ ಕಂಪೆನಿಯ ಸಹಕಾರವೂ ಭೀತಿ ಹುಟ್ಟಿಸುದಾಗಿದೆ.ಇದು ತಿಳಿದಾಕ್ಷಣವೇ ಒಪ್ಪಂದವನ್ನ ಕೊನೆಗೊಳಿಸಲು ತೀರ್ಮಾನಿಸಿದ್ದೇನೆ,ನಿಮಗೆದುರಾದ ಆರೋಪವನ್ನು ನೀವು ತಿರಸ್ಕರಿಸುವುದು ಮಾತ್ರವಲ್ಲದೆ ಸಮೂಹದೊಂದಿಗೆ ಇಂತಹ ದಬ್ಬಾಳಿಕೆಗಳನ್ನು ವಿರೋಧಿಸಬೇಕು" ಎಂದು ಅಂಟೋನಿಯೋ ಗ್ರೀಸ್  ಮಾನ್ ಟ್ವೀಟ್ ಮಾಡಿದರು.

Related Posts

Leave A Comment

Voting Poll

Get Newsletter