ರಾಮ ಮಂದಿರ: ಧರ್ಮವನ್ನು ಹೇಗೆ ರಾಷ್ಟ್ರೀಯಗೊಳಿಸಬಹುದು.

 ಭಾರತದ ಸೌಹಾರ್ದ ವಾಸಿಗಳ ಹೃದಯದಲ್ಲಿ ಯಾವತ್ತೂ ಮಾಸಿಹೋಗದ ಕ್ರೂರ ಘಟನೆಯಾಗಿವೆ ಬಾಬರಿ ಮಸೀದಿ. 1992 ಡಿಸೆಂಬರ್ 6 ರಂದು ಬಾಬರಿ ಮಸೀದಿಯು ಭಯೋತ್ಪಾದಕರ ಸ್ಪರ್ಶದಿಂದ ಧ್ವಂಸವಾಗಿ, ಭಾರತದ ಚರಿತ್ರೆಯ ಆ ಕತ್ತಲ ರಾತ್ರಿಯನ್ನು ಯಾವೊಬ್ಬ ಧರ್ಮ ವಿಶ್ವಾಸಿಗೆ ವಿಸ್ಮರಿಸಲು ಅಸಾಧ್ಯವಾಗಿದೆ. ಬಿಜೆಪಿಯ ಈ ಕ್ರೂರ ಕೃತ್ಯವು ಇಂದಿಗೂ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜನವರಿ 22 ರಂದು ನಡೆಯಲಿರುವ ರಾಮ ಮಂದಿರದ ಉದ್ಘಾಟನೆಯ ಕುರಿತು ರಾಜಕೀಯವಾಗಿ ಹಲವಾರು ಚರ್ಚೆಗಳು ನಡೆಯುತ್ತಿವೆ. ಒಂದು ರಾಜಕೀಯ ಪಾರ್ಟಿಯು ಒಂದು ಧರ್ಮದವರೊಂದಿಗೆ ಮಾತ್ರ ಪ್ರತ್ಯೇಕವಾದ ಮಮತೆಯನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ಹೇಳುತ್ತಿವೆ. ಇದನ್ನು ಲೆಕ್ಕಿಸದೆ ಪ್ರಧಾನಮಂತ್ರಿ ಹಾಗೂ ಬಿಜೆಪಿಯ ಆರ್ ಎಸ್ ಎಸ್ ನಾಯಕರು ರಾಮಮಂದಿರವನ್ನು ರಾಷ್ಟ್ರೀಕರಣಗೊಳಿಸಲು ಸಜ್ಜರಾಗಿದ್ದಾರೆ.ರಾಮ ಮಂದಿರದ ಭೂಮಿ ಪೂಜೆಗೆ ರಾಜ್ಯದ ಪ್ರಧಾನಮಂತ್ರಿಯ ಭಾಗವಹಿಸುವಿಕೆ ಆ ಧರ್ಮವನ್ನು ತೃಪ್ತಿಕರಿಸುವಾಗ, ಬಾಬರಿಯನ್ನು ನೆನೆಯುತ್ತಾ ಇನ್ನೊಂದು ಧರ್ಮವು ಕಣ್ಣೀರಿಡುತ್ತಿವೆ. ಭಾರತದ ಮಣ್ಣಿನಲ್ಲಿ ನಡೆದು ಮುಗಿಸಿದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಬಿಜೆಪಿಗೆ ಬಹುದೊಡ್ಡ ತಲೆನೋವು ತಂದೊಡ್ಡಿತು.

ಆದರೆ ನರೇಂದ್ರ ಮೋದಿಯವರು ರಾಮ ಮಂದಿರದ ಮೂಲಕ ಇದನ್ನು ಮೊಟಕುಗೊಳಿಸಲು ತಂತ್ರಗಾರಿಕೆ ನಡೆಸಿದ್ದಾರೆ. ಒಂದು ಧರ್ಮದ ಸಮಾರಂಭವನ್ನು ಜಿಲ್ಲೆ ಹಾಗೂ ಕೇಂದ್ರವು ಒಂದೇ ಬಲದಿಂದ ಕಠಿಣ ಶ್ರಮದಿಂದ ನಡೆಯಲು ಮುಂದಾಗಿವೆ ಇದರಿಂದ ಮುಂದಿನ ಚುನಾವಣೆಯನ್ನು ಬಹು ಸಂಖ್ಯಾತರಾದ ಹಿಂದೂ ಸಮುದಾಯದಿಂದ ಧಾರ್ಮಿಕ ನೆಲೆಯಿಂದ ವಂಚಿಸಿ ವೋಟ್ ಬ್ಯಾಂಕನ್ನು ಸುರಕ್ಷಿತವಾಗಿರಿಸಲು ಬಿಜೆಪಿಯ ನಾಯಕರು ಕಾರ್ಯನಿರತರಾಗಿದ್ದಾರೆ 2019 ರಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಫುಲ್ ಚುನಾವಣೆಯ ಪುಲ್ವಾಮದಲ್ಲಿ ರಕ್ತಸಾಕ್ಷಿಗಳಾದ ವೀರಶೈನಿಕರನ್ನು ಬಿಂಬಿಸಿ ವೋಟ್ ಯಾಚನೆಯ ಪ್ರಯುಕ್ತ ವಿಜಯಗೊಂಡ ನರೇಂದ್ರ ಮೋದಿಯವರು 2,204ರಲ್ಲಿ ಆಕಾಂಕ್ಷಿಸುವುದು ರಾಮಮಂದಿರ ಹಾಗೂ ರಾಮನನ್ನಾಗಿದೆ.

ಆದ್ದರಿಂದ ಅಯೋಧ್ಯೆಯಲ್ಲಿ ರಾಜಕೀಯದ ವಿವಿಧ ರೀತಿಯ ಸಮಾರಂಭಗಳು ಪ್ರಚಾರವಾಗುತ್ತಿವೆ. ಹಾಗೂ ರಾಮಮಂದಿರ ಎಂಬ ಧಾರ್ಮಿಕ ಚಿಹ್ನೆಯನ್ನು ಎತ್ತಿಹಿಡಿದು ಭಾರತದ 50 ಶೇಕಡಕ್ಕಿಂತ ಹೆಚ್ಚು ಮತವನ್ನು ಸೆಳೆಯಲು ತಾವು ನಿರಂತರವಾಗಿ ಪರಿಶ್ರಮಿಸಬೇಕೆಂದು ತನ್ನ ಸಹಪಾಠಿಗಳೊಂದಿಗೆ ನರೇಂದ್ರ ಮೋದಿಯ ಪ್ರಕಟಣೆಯು ವಾರ್ತೆಗಳ ಮೂಲಕ ಪ್ರಚಾರವಾಗುತ್ತಿದೆ. 1990 ರಲ್ಲಿ ಅಧಿಕಾರದ ಮೋಹದಿಂದ ಎಲ್ ಕೆ ಅದ್ವಾನಿ ರಥಯಾತ್ರೆ ನಡೆಸಿದರೂ, ಅದೇ ತರಹ ರಾಮ ಮಂದಿರದ ಬೀದಿ ಬೀದಿಗಳಲ್ಲಿ ರೋಡ್ ಶೋ ನಡೆಸಿ ಬಹುಸಂಖ್ಯಾತರಾದ ಸಮೂಹದ ಧಾರ್ಮಿಕ ಆಚರಣೆಯಲ್ಲಿ ತೃಪ್ತಿ ಹೊಂದಲು ಆಚರಣೆಯು ವಿಜ್ರಂಭವಾಗಿ ನಡೆಸಬೇಕೆಂದು ರಾಜಕೀಯ ಶ್ರಮ ಪಡುತ್ತಿವೆ. ಪ್ರಸ್ತುತ ಸರ್ಕಾರದ ವಿರುದ್ಧವಾಗಿ ಪ್ರಚಾರವಾಗುತ್ತಿರುವ ರಾಜಕೀಯ ವಿರುದ್ಧ ಚಟುವಟಿಕೆಗಳನ್ನು ಇಂತಹ ಪ್ರಚಾರಣೆಯ ಮೂಲಕ ಬಗೆಹರಿಸಬಹುದೆಂದು ಬಿಜೆಪಿಯ ವಿಶ್ವಾಸ.

ರಾಮ ಮಂದಿರವನ್ನು ಪ್ರಸಿದ್ಧಿ ಪಡಿಸುವ ಮುಖಾಂತರ ಬಿಜೆಪಿಯು ಎತ್ತಿ ಹಿಡಿಯುವ ವರ್ಗೀಯತೆಯ ರಾಷ್ಟ್ರೀಕರಣದ ಬದಲಾಗಿ, ಭಾರತದ ಭೂಪಟದಲ್ಲಿ ರೂಪಗೊಂಡ 'ಇಂಡಿಯಾ' ಎಂಬ ಮೈತ್ರಿಯನ್ನು ನಾಶಗೊಳಿಸಲು ಬಿಜೆಪಿ ಶ್ರಮಪಡುತ್ತಿದೆ. ಇದರಿಂದ ರಾಮ ಮಂದಿರದ ಟ್ರಸ್ಟ್ ಕಮಿಟಿ ಕಾಂಗ್ರೇಸ್ ಹಾಗೂ ಇತರ ವಿಭಾಗದ ನಾಯಕರನ್ನು ಉದ್ಘಾಟನೆಯ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೇಸ್ ನ ನಿಲುವು ಹೇಗೆ ಎಂದು ಚರ್ಚೆ ನಡೆದರೂ ಕೊನೇಯದಾಗಿ ಸಮಾರಂಭವಿಲ್ಲ ಎಂದು ಒತ್ತಿ ಹೇಳಿದರು. ಈ ಅಭಿಪ್ರಾಯವನ್ನು ಮುಸ್ಲಿಂ ಲೀಗ್ ಹಿಂಬಾಲಿಸಿದೆ. ಸಿಪಿಎಂ, ಸಿಡಿಎ, ಆರ್ ಜೆಡಿ, ಜೆಡಿಯು ಹಾಗೂ ತ್ರಿಣಮೂಲ ಕಾಂಗ್ರೆಸ್ನಂತಹ ಹಲವಾರು ಸಂಘಟನೆಯು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಇಂತಹ ಕಾರ್ಯಕ್ರಮದ ಮೂಲಕ ಬಹುಸಂಖ್ಯಾತರಾದ ಹಿಂದೂ ಸಮೂಹವು ಕಾಂಗ್ರೆಸ್ಸಿಗೆ ಬರಲು ಹಿಂಜರಿಯುತ್ತಿವೆ. ಎಂದು ಆತಂಕ ಕಾಡುತ್ತಿದೆ.ಆದರೂ, ರಾಷ್ಟ್ರೀಯ ಅಭಿವೃದ್ಧಿಗೊಂಡರೂ, ಜಾತ್ಯತೀತ ಸಂಕಲ್ಪದ ಮೂಲಕ ಮೆಟ್ಟಿನಿಂತು ಕಾಂಗ್ರೇಸ್ ಕಾರ್ಯಚರಿಸುತ್ತಿವೆ ಎಂಬುದು ಶುಭೋದಯ.

ತೀವ್ರವಾದ ಹಿಂದುತ್ವವನ್ನು ಮೆಟ್ಟಿನಿಲ್ಲಲು ಸಾಧಾರಣ ಹಿಂದುತ್ವದ ಮೂಲಕ ಸಾಧ್ಯವಾಗದೆಂದು ಮನವರಿಕೆ ಮಾಡಿ, ಇನ್ನು ಮುಂದೆ ಕಾಂಗ್ರೇಸ್ ಒಗ್ಗಟ್ಟಾಗಿ ತಮ್ಮ ನಿಲುವನ್ನು ಗಟ್ಟಿಗೊಳಿಸಬೇಕು. ಇಲ್ಲವಾದರೆ ಈ ಪ್ರಶ್ನೆಗಳನ್ನು. ಆಯುಧವಾಗಿರಿಸಿ ವರ್ಗೀಯತೆಯ ಜನರು ತಮ್ಮ ಆಟವನ್ನು ಮುಂದುವರಿಸುತ್ತಾರೆ. ಇದರ ವಿರುದ್ಧ ಹೋರಾಡಲು ಜಾತ್ಯತೀತ ಪಕ್ಷಗಳು ಹತಾಶರಾಗಿ ಉಳಿಯಬೇಕಾಗುತ್ತದೆ.ಇದಲ್ಲದೆ ಸ್ವಾತಂತ್ರ್ಯದ ಮುಖಾಂತರ ಸಂಪಾದಿಸಿದ ಉನ್ನತಿಯನ್ನು ನಾಶಗೊಳಿಸುವ ಮೂಲಕ ಹಸಿವು, ನಿರುದ್ಯೋಗ ಹೆಚ್ಚುತ್ತಿವೆ. ಹಾಗೂ ಕಳ್ಳತನ ಪೀಡನೆಯು ದೈನಂದಿನ ವಾರ್ತೆಗಳಲ್ಲಿ ಪ್ರಚಾರವಾಗುತ್ತಿರುವಾಗ ಮುಂದಿನ ದಿನಗಳಲ್ಲಿ ರಾಜ್ಯ ಮ ಬಹುದೊಡ್ಡ ದಾರಿದ್ರ್ಯ ಅನುಭವಿಸಬೇಕಾಗುತ್ತದೆ. ಆ ಸಮಯದಲ್ಲಿ ರಾಷ್ಟ್ರೀಯ ಕುರ್ಚಿಯಲ್ಲಿ ಕೂರುವ ಅಧಿಕಾರಿಗಳು ಧರ್ಮದ ಚಿಹ್ನೆಯ ಮೂಲಕ ಸಮೂಹವನ್ನು ಸಹಾಯಿಸಬಹುದು.ಆದರೂ, ಏನು ತಿಳಿಯದ ಬಡಪಾಯಿಗಳು ಇವರನ್ನು ಹಿಂಬಾಲಿಸುತ್ತಾರೆ. 

 

Files

Related Posts

Leave A Comment

Voting Poll

Get Newsletter