ಸಮರ್ಥ ನಾಯಕನ ಜೀವನ…..

ವರ್ಣಭೇದ ನೀತಿ-ವಿರೋಧಿ ನಾಯಕ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಸಾಧನೆಗಳನ್ನು ಸ್ಮರಿಸಲು ವಿಶ್ವಸಂಸ್ಥೆಯು ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನ ಅಥವಾ ಮಂಡೇಲಾ ದಿನವನ್ನು ನವೆಂಬರ್2009 ರಲ್ ಪ್ರತಿ ವರ್ಷ ಜುಲೈ 18ರಂದು ಆಚರಿಸಲು ಅಧಿಕೃತವಾಗಿ ಘೋಷಿಸಿತು.


ಮಂಡೇಲಾ ದಿನವು ಜನಾಂಗೀಯ ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಜಾಗತಿಕನಾಯಕನ 95 ವರ್ಷಗಳ ಸುದೀರ್ಘ ಹೋರಾಟದ ಆಚರಣೆಯಾಗಿದೆ.ಅವರು 1918 ರಲ್ಲಿ ದಕ್ಷಿಣ ಆಫ್ರಿಕಾದ ಪೂರ್ವ ಕೇಪ್‌ನ ಸಣ್ಣ ಹಳ್ಳಿಯಲ್ಲಿ ಷೋಸಾ-ಮಾತನಾಡುವ ಥೆಂಬುಕುಟುಂಬದಲ್ಲಿ ಜನಿಸಿದರು. ಇವರ ನೈಜ ಹೆಸರು ರೋಲಿಹ್ಲಹ್ಲ ಎಂದಾಗಿದೆ. ಆದರೂ ಹೆಚ್ಚಾಗಿ ಅವರನ್ನು “ಮಡಿಬಾ”ಎಂಬ ಕುಲದ ಹೆಸರಿನಿಂದ ಕರೆಯಲಾಗುತ್ತದೆ. ಅವರಿಗೆ ತಮ್ಮ ಶಾಲೆಯ ಶಿಕ್ಷಕರಿಂದ “ನೆಲ್ಸನ್” ಎಂಬ ಇಂಗ್ಲಿಷ್ ಹೆಸರನ್ನು ಹೆಸರಿಸಲಾಗಿದೆ.


1943 ರಲ್ಲಿ, ಅವರು ಮುಖ್ಯವಾಗಿ ಬಿಳಿಯ ವಿಟ್ಸ್‌ವಾಟರ್‌ಮಂಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗಾಗಿ ಸೇರಿಕೊಂಡರು, ಅಲ್ಲಿ ಅವರು ಎಲ್ಲಾ ಜನಾಂಗದ ಜನರನ್ನು ಭೇಟಿಯಾದರು. ಅವರು ಉದಾರವಾದಿ, ಆಮೂಲಾಗ್ರ ಮತ್ತು ಆಫ್ರಿಕನ್ ಚಿಂತನೆಗಳೊಂದಿಗೆ ತೊಡಗಿದರು, ಜೊತೆಗೆ ವರ್ಣಭೇದ ನೀತಿ ಮತ್ತು ತಾರತಮ್ಯ ವಿರೋಧಿಸತೊಡಗಿದರು. ಇದು ಇವರ ರಾಜಕೀಯ ಪ್ರವೇಶಕ್ಕೆ ಉತ್ಸಾಹವನ್ನು ಹೆಚ್ಚಿಸಿತು.ಅದೇ ವರ್ಷ, ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ANC) ಪಕ್ಷಕ್ಕೆ ಸೇರಿದರು. ನಂತರ ಪಕ್ಷದ ಯೂತ್ ಲೀಗ್ ಅನ್ನು ಸಹ-ಸ್ಥಾಪಿಸಿದರು.


1952 ರಲ್ಲಿ, ಮಂಡೇಲಾ ಅವರು ವಕೀಲರಾಗಿ ಅರ್ಹತೆ ಪಡೆದರು. ಜೋಹಾನ್ಸ್‌ಬರ್ಗ್‌ನಲ್ಲಿ ತಮ್ಮ ಸ್ನೇಹಿತ ಆಲಿವರ್ ಟಾಂಬೊ ಅವರೊಂದಿಗೆ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಒಟ್ಟಾಗಿ, ಮಂಡೇಲಾ ಮತ್ತು ಟಾಂಬೊ ವರ್ಣಭೇದ ನೀತಿಯ ವಿರುದ್ಧ ಪ್ರಚಾರ ಮಾಡಿದರು. 1956 ರಲ್ಲಿ, ಮಂಡೇಲಾರಿಗೆ ರಾಜದ್ರೋಹದ ಆರೋಪ ಹೊರಿಸಲಾಯಿತು.

27 ವರ್ಷಗಳ ಕಾಲ ಜೈಲಿನಲ್ಲಿದ್ದರು. 1990 ರಲ್ಲಿ ನಾಲ್ಕು ವರ್ಷಗಳ ನಂತರ ದೇಶದ ಮೊದಲ ಕಪ್ಪು ಅಧ್ಯಕ್ಷರಾಗಿ ಹೊರಹೊಮ್ಮಿದರು. ದೇಶದ ಶಾಂತಿಗಾಗಿ ಪ್ರಯತ್ನಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 1993 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು. ನೆಲ್ಸನ್ ಮಂಡೇಲಾ ಅವರನ್ನು “ಆಫ್ರಿಕನ್ ಗಾಂಧಿ” ಎಂದೂ ಕರೆಯಲ್ಪಡುತ್ತಾರೆ, ಏಕೆಂದರೆ ಅವರು ಮಹಾತ್ಮ ಗಾಂಧಿಯ ಅಹಿಂಸಾ ದಂತಹಾ ಸಿದ್ಧಾಂತಗಳಿಂದ ಸ್ಪೂರ್ತಿಗೊಂಡಿದ್ದರು.


ಇವರ ವಿನಯ, ತಾಳ್ಮೆಯನ್ನು ಎತ್ತಿ ತೋರಿಸುವ ಒಂದು ಕಥೆಯಿದೆ….ಒಂದು ದಿನ ನೆಲ್ಸನ್ ಮಂಡೇಲಾ ಮೊದಲ ಬಾರಿ ರಾಷ್ಟ್ರಪತಿಯಾದ ನಂತರ, ತಮ್ಮ ಅಂಗರಕ್ಷಕರ ಜೊತೆ ಒಂದುಹೊಟೇಲ್‌ನಲ್ಲಿ ಊಟಕ್ಕೆ ಹೋಗಿದ್ದರು. ಜೊತೆಗಿದ್ದವರು ತಮಗೆ ಇಷ್ಟವಾದ ಆಹಾರವನ್ನು ಆರ್ಡರ್ ಮಾಡಿ,ಊಟಕ್ಕಾಗಿ ಕಾಯುತ್ತಿದ್ದರು. ಅದೇ ಸಮಯದಲ್ಲಿ, ಮಂಡೇಲಾ ಅವರು ಕುಳಿತಿದ್ದ ಟೇಬಲ್ ಎದುರಿನ ವ್ಯಕ್ತಿಯು ಕೂಡಾ ಊಟಕ್ಕಾಗಿ ಕಾಯುತ್ತಾ ಕುಳಿತಿದ್ದ. ಮಂಡೇಲಾ ಅವರು ತಮ್ಮ ಅಂಗರಕ್ಷಕರನ್ನು ಆ ವ್ಯಕ್ತಿಯನ್ನು ತಮ್ಮ ಟೇಬಲ್‌ಗೆಆಹ್ವಾನಿಸಲು ಕಳುಹಿಸಿದರು. ಆ ವ್ಯಕ್ತಿ ಮಂಡೇಲಾ ಅವರ ಟೇಬಲ್ ಬಳಿ ಬಂದು ಕುಳಿತ.


ಎಲ್ಲರೂ ಊಟ ಮಾಡುತ್ತಿದ್ದಂತೆ ಆ ವ್ಯಕ್ತಿಯು ಕೂಡಾ ಊಟ ಮಾಡಲು ಪ್ರಾರಂಭಿಸಿದರು, ಆದರೆ ಅವರ ಕೈಗಳು ನಡುಗುತ್ತಿದ್ದವು. ಅವರು ಸಾಧ್ಯವಾದಷ್ಟು ವೇಗವಾಗಿ ಊಟ ಮುಗಿಸಿ, ತಲೆ ತಗ್ಗಿಸಿಕೊಂಡು ಅಲ್ಲಿಂದ ಹೊರಗೆಹೋದರು. ಆ ವ್ಯಕ್ತಿಯು ಹೋದ ನಂತರ, ಮಂಡೇಲಾ ಅವರ ಅಂಗರಕ್ಷಕರಲ್ಲಿ ಒಬ್ಬರು, “ಸರ್, ಅವರಿಗೆ ಜ್ವರ ಬಂದಿರಬಹುದು; ಆದ್ದರಿಂದ ಅವರ ಕೈಗಳು ನಡುಗುತ್ತಿದ್ದವು,” ಎಂದರು.


ಆಗ ಮಂಡೇಲಾ ನಗುತ್ತಾ, “ಅವರು ರೋಗಗ್ರಸ್ತನಲ್ಲ, ಬದಲಿಗೆ ನಾನು ಬಂಧಿಯಾಗಿದ್ದಾಗ ನನ್ನ ಜೈಲಿನ ಜೈಲರ್. ಅಲ್ಲಿ ಅವರು ನನಗೆ ತುಂಬಾ ಹಿಂಸೆ ನೀಡುತ್ತಿದ್ದರು. ನನ್ನನ್ನು ಥಳಿಸಿ, ನಾನು ದಾಹದಿಂದ ಬಳಲುತ್ತಿದ್ದಾಗ, ಅವರು ‘ನಿನಗೆ ನೀರು ಬೇಕೇ? ಕುಡಿ,’ ಎಂದು ನನ್ನ ಮೇಲೆ ಮೂತ್ರ ಮಾಡುತ್ತಿದ್ದರು,” ಎಂದು ಹೇಳಿದರು. “ಈಗ ನಾನು ದೇಶದ ರಾಷ್ಟ್ರಪತಿಯಾಗಿದ್ದರಿಂದ, ಅವರು ಮಾಡಿದ ತಪ್ಪಿಗೆ ಇಂದು ನಾನು ಅವರಿಗೆ ದೊಡ್ಡ ಪ್ರಮಾಣದ ಶಿಕ್ಷೆ ನೀಡಬಹುದೆಂಬ ಭಯದಿಂದ ಅವರ ಕೈಗಳು ನಡುಗುತ್ತಿದ್ದವು. ಆದರೆ, ದ್ವೇಷವನ್ನು ಸಾಧಿಸುವುದು ನನ್ನ ಚರಿತ್ರೆಯಲ್ಲ. ದ್ವೇಷದಿಂದ ಕಾರ್ಯನಿರ್ವಹಿಸಿದರೆ, ಅದು ವಿನಾಶಕ್ಕೆ ದಾರಿ ಮಾಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆಯಿಂದ, ಮನುಷ್ಯನಲ್ಲಿ ಮಾನಸಿಕ ಪರಿಪಕ್ವತೆ ಕಾಣಿಸುತ್ತದೆ,” ಎಂದು ಮಂಡೇಲಾ ಹೇಳಿದರು.

“ನಾವು ಅಧಿಕಾರದಲ್ಲಿಲ್ಲದೆ ಇದ್ದಾಗ ಅನುಭವಿಸಿದ ಕಷ್ಟವನ್ನು, ನಾವು ಅಧಿಕಾರಕ್ಕೆ ಬಂದಾಗ, ಕಷ್ಟ ನೀಡಿದ ವ್ಯಕ್ತಿಯ ಮೇಲೆ ದ್ವೇಷವನ್ನು ತೋರಿಸುವ ಬದಲು, ಅವರನ್ನು ಪ್ರೀತಿಯಿಂದ, ಗೌರವದಿಂದ ನಿರ್ವಹಿಸಿದಾಗ ನಮ್ಮ ಮೌಲ್ಯವೇ ಹೆಚ್ಚುತ್ತದೆ. ದ್ವೇಷವು ಕ್ಷಣಿಕವಾಗಿದ್ದರೆ, ಮಾನವೀಯತೆಯು ಶಾಶ್ವತವಾಗಿರುತ್ತದೆ,” ಎಂದರು.

Related Posts

Leave A Comment

Voting Poll

Get Newsletter