ಭಾರತೀಯ ಮಕ್ಕಳ ದೇಶೀಯ ಗೀತೆ
ಭಾರತೀಯ ಮಕ್ಕಳ ದೇಶೀಯ ಗೀತೆ

ಜಿಸ್ತಿ ತನ್ನ ಸತ್ಯ ಸಂದೇಶವನ್ನು
ಎಲ್ಲಿ ಬಿತ್ತಿಸಿದರೋ,
ನಾನಾಕನು ತನ್ನ ದೈವಿಕ ಐಕ್ಯತೆಯ ಗಾನವನ್ನು
ಎಲ್ಲಿ ಆಲಾಪಿಸಿದರೋ,
ತುರ್ಕರು ಎಲ್ಲಿ ಆವಾಸ ಹೂಡಿದರೋ,
ಅರಬರು ಸ್ವಂತ ನೆಲವನ್ನು ಬಿಟ್ಟು'
ಎಲ್ಲಿ ನೆಲೆಸಿದರೋ
ಅದುವೇ ನನ್ನ ತಾಯಿನಾಡು, ಅದುವೇ ನನ್ನ ತಾಯಿನಾಡು

ವಿವೇಕಿಗಳಾದ ಗ್ರೀಕರನ್ನು ವಿಷ್ಮಯ ಪಡಿಸಿದ ನಾಡು,
ಜಗಕ್ಕೆಲ್ಲ ವಿದ್ಯೆಯನ್ನೂ, ಕಲೆಯನ್ನೂ ಕೊಟ್ಟನಾಡು,
ಫಲ ಭರಿತ ಭೂಮಿಯಿಂದ ಅನುಗ್ರಹೀತವಾದ ನಾಡು,
ಬಂದು ಸೇರಿದ ತುರ್ಕರಿಗೆ ವಜ್ರ ಶಿಲೆಗಳನ್ನು
ಲೋಭವಿಲ್ಲದೆ ನೀಡಿದ ನಾಡು,
ಅದುವೇ ನನ್ನ ತಾಯಿನಾಡು, ಅದುವೇ ನನ್ನ ತಾಯಿನಾಡು

ಪೇರ್ಷಿಯದಿಂದ ಬಂದ ಪ್ರತಿಭಾವಂತರು
ಪ್ರಶಸ್ತರಾದದ್ದು ಈ ನಾಡಲ್ಲಾಗಿದ್ದರು.
ದೈವಿಕ ಐಕ್ಯತೆಯ ಘೋಷವನ್ನು 
ಮೊದಲು ಮೊಳಗಿಸಿದ್ದು ಈ ನಾಡಾಗಿತ್ತು
ಅರೇಬ್ಯದ ಪ್ರವಾದಿಯರಿಗೆ
ಸಾಂತ್ವನವನ್ನು ನೀಡಿದ್ದು ಈ ನಾಡಾಗಿತ್ತು
ಅದುವೇ ನನ್ನ ತಾಯಿನಾಡು, ಅದುವೇ ನನ್ನ ತಾಯಿನಾಡು

 

ಇಲ್ಲಿಯ ಪ್ರತಿಯೊಬ್ಬ ಮನುಷ್ಯನೂ, ಮೂಸಾನಂತೆಯೂ
ಇಲ್ಲಿಯ ಪ್ರತಿಯೊಂದು ಪರ್ವತವೂ
ಸೀನಾಯಿ ಪರ್ವತದಂತೆಯೂ ಆಗಿದೆ
ನೋಹನ ಹಡಗು ತಂಗಿದ್ದು ಇಲ್ಲೇ
ಈ ಪರ್ವತದ ಉನ್ನತ ಶಿಖರವು
ಸ್ವರ್ಗಕ್ಕಿರುವ ಹೆದ್ದಾರಿಯಾಗಿದೆ
ಈ ನಾಡಿನ ನಿವಾಸಿಗಳು ಸ್ವರ್ಗವಾಸಿಗಳೇ ಸರಿ
ಅದುವೇ ನನ್ನ ತಾಯಿನಾಡು, ಅದುವೇ ನನ್ನ ತಾಯಿನಾಡು

Related Posts

Leave A Comment