ಅಮೀರುಲ್ ಉಮ್ಮ ಅಬೂ ಉಬೈದತ್ ಬಿನ್ ಜರ್ರಾಹ್(ರ)
ಸುಂದರವಾದ ಮುಖ,ತೆಳುವಾದ ಶರೀರ,ಉದ್ದವಾದ ದೇಹ ವಿನ್ಯಾಸ,ವಿನಯದ ಮಹಾ ಮನೀಶಿ ಮತ್ತು ಅತೀವ ಲಜ್ಜೆಯಿರುವವರಾಗಿದ್ದರು.
ಅಮಿನುಲ್ ಉಮ್ಮ (ಸಮುದಾಯದ ನೇತಾರ) ಇವರಾಗಿದ್ದರು.ಇವರ ಪೂರ್ಣ ನಾಮ ಆಮಿರ್ ಬಿನ್ ಅಬ್ದುಲ್ಲಾಹಿ ಬಿನ್ ಜರ್ರಾಹ್ ಅಲ್-ಫಿಹರಿಯ್ಯ್ ವಲ್ – ಕುರಶಿಯ್ಯ್ ಎಂದಾಗಿದೆ.
ಉಮರ್(ರ) ಹೇಳುತ್ತಾರೆ: “ಖರೇಶಿ ವಂಶದಿಂದ ಮೂರು ಸ್ವಹಾಬಿಗಳಿದ್ದಾರೆ. ಅವರ ಮುಖ ಪ್ರಕಾಶಿಸುತ್ತದೆ ಮತ್ತು ಒಳ್ಳೆಯ ಸ್ವಭಾವ ಗುಣ ಉಳ್ಳವರಾಗಿದ್ದಾರೆ, ಅತೀವ ಲಜ್ಜೆ ಮತ್ತು ಅವರು ನುಡಿದರೆ ಸುಳ್ಳಾಗದು... ಅವರು ಅಬೂಬಕ್ಕರ್ (ರ),ಉಸ್ಮಾನ್ (ರ) ಮತ್ತು ಅಬೂ ಉಬೈದ (ರ) ರವರಾಗಿದ್ದಾರೆ.
ಇವರು ಇಸ್ಲಾಂ ಸ್ವೀಕರಿಸುವುದರಲ್ಲಿ ಮುನ್ನಡೆಯಲ್ಲಿದ್ದವರು. ಅಬೂಬಕ್ಕರ್ (ರ)ರವರು ಇಸ್ಲಾಂ ಸ್ವೀಕರಿಸಿದ ಮರುದಿನವೇ ಇವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.
****
ಮುಹಮ್ಮದ್ ಬಿನ್ ಜಾಫರ್ (ರ) ಹೇಳುತ್ತಾರೆ ನೆಬಿ(ಸ) ಬಳಿ ನಸ್ರಾನಿಗಳ ಒಂದು ಗುಂಪು ಬಂದು ಕೇಳಿದರು ಪ್ರವಾದಿಯವರೇ ನಮ್ಮ ಸಂಪತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ನಿಮ್ಮಿದೊಂದು ಸ್ವಹಾಬಿಯನ್ನು ನಮ್ಮೊಂದಿಗೆ ಕಳಿಸಿರಿ. ಆಗ ನೆಬಿ [ಸ.ಅ] ಹೇಳಿದರು ನೀವೆಲ್ಲರು ಮಧ್ಯಾನದ ವೇಳೆ ಬನ್ನಿ. ನಾನೊಂದು ಉತ್ತಮರಾದ ಮತ್ತು ಒಳ್ಳೆಯ ನೇತಾರರನ್ನು ಕಳಿಸುತ್ತೇನೆ. ಇದನ್ನು ಕೇಳಿದ ಉಮರ್ [ರ] ಆ ನೇತಾರ ತಾನಾಗಬೇಕೆಂದು ಬಲವಾಗಿ ಆಗ್ರಹಿಸಿದ್ದರು. ಆದುದರಿಂದ ಅವರೆಲ್ಲರೂ ಬೇಗನೇ ಹೊರಟರು ಮತ್ತು ಉಮರ್ [ರ] ಪ್ರವಾದಿಗೆ ಕಾಣಲು ಬೇಕಾಗಿ ಮುಂದೆ ನಿಂತರು. ಆಗ ಪ್ರವಾದಿಗೆ ಅಬೂ ಉಬೈದಲ್ ಜರ್ರಾಹ್ ರವರನ್ನು ನೋಡಿದರು. ಮತ್ತು ನಬಿ (ಸ) ಹೇಳಿದರು ನೀನು ಅವರ ಊರಿಗೆ ಹೋಗಬೇಕು. ಈ ಬಲಿಷ್ಠ ನೇತಾರ ಅವರಾಗಿದ್ದಾರೆ.
****
ಉಹ್ದ್ ಯುದ್ಧದಲ್ಲಿ ಸೋಲನುಭವಿಸಿದಾಗ ಸತ್ಯ ನಿಷೇಧಿಗಳು ಜೋರಾಗಿ ಕೇಳಿದರು. "ಎಲ್ಲಿ ಮುಹಮ್ಮದ್ "? ಈ ವೇಳೆ ಪ್ರವಾದಿಯ ಹತ್ತಿರ ಕೇವಲ ಹತ್ತು ಮಂದಿಯಿದ್ದರು. ಅದರಲ್ಲಿ ಅಬೂ ಉಬೈದವರು ಇದ್ದರು. ಅವರ ಪ್ರವಾದಿಯ ಮುಂದೆ ಬರುವ ಬಾಣಗಳನ್ನು ತನ್ನ ಹೃದಯದಿಂದ ತಡೆದರು. ಪ್ರವಾದಿಯ ಕೆನ್ನೆಯಲ್ಲಿ ಬಾಣವು ಸಿಲುಕಿತು , ಆಗ ಅಬೂಬಕ್ಕರ್ (ರ) ತೆಗೆಯಲು ಮುಂದಾದರು. ತಕ್ಷಣ ಅಬೂ ಉಬೈದ (ರ) ರು ಅಬೂಬಕ್ಕರ್ ಸಿದ್ದೀಕ್ (ರ) ರೊಂದಿಗೆ ತನಗೆ ಬಿಟ್ಟು ಕೊಡಲು ಹೇಳಿದರು. ಅಬೂ ಉಬೈದ (ರ) ರು ಯೋಚಿಸಿದರು ನಾನು ಪ್ರವಾದಿಯ ಬಾಣವನ್ನು ಕೈಯಲ್ಲಿ ತೆಗೆದರೆ ಪ್ರವಾದಿಗೆ ಅತೀವ ಗಾಯಗಳುಂಟಾಗುವ ಸಾಧ್ಯತೆಗಳಿವೆ. ಆದುದರಿಂದಲೇ ತನ್ನ ಹಲ್ಲಿನಿಂದ ತೆಗೆಯುಲು ತೀರ್ಮಾನಿಸಿದರು. ಹೀಗೆ ಬಾಣಗಳನ್ನು ಮುಂಭಾಗದ ಹಲ್ಲಿನಿಂದ ತೆಗೆಯುವಾಗ ಹಲ್ಲುಗಳು ತುಂಡಾದವು.
ಅಬೂಬಕ್ಕರ್ (ರ)ಹೇಳುತ್ತಾರೆ: "ಹಲ್ಲು ತುಂಡಾದವರಲ್ಲಿ ಉತ್ತಮರು ಅಬೂ ಉಬೈದರವರದ್ದಾಗಿದೆ".
ಹಲವಾರು ಯುದ್ಧಗಳಲ್ಲಿ ಇವರು ಪಾಲ್ಗೊಂಡಿದ್ದಾರೆ. ಅಬೂಬಕ್ಕರ್ (ರ) ರವರ ಕಾಲದಲ್ಲಿ ಸತ್ಯ ನಿಷೇಧಿ(ಮುರ್ತದ್) ಗಳೊಂದಿಗೆ ನಡೆಸಿದ ಯುದ್ಧದಲ್ಲಿ ಇವರು ನೇತಾರರಾಗಿದ್ದರು.