ರಬೀಉಲ್ ಆಖರ್ ಮಿನುಗು ತಾರೆಗಳ ತಿಂಗಳು

ಜೀವನದಲ್ಲಿ ಅತ್ಯಮೂಲ್ಯ ವಸ್ತುವಾದ ಸಮಯವು ಎರಡು ರೀತಿಯಲ್ಲಿ ಎಣಿಸಲಾಗುತ್ತದೆ. ಒಂದು ಸೂರ್ಯದ ಚಲನಕ್ಕೆ ಅನುಸಾರವಾಗಿ ಮತ್ತೊಂದು ಮುಸಲ್ಮಾನರಾದ ನಾವುಗಳು ಅವಲಂಬಿಸುವ ಚಂದ್ರನ ಚಲನಗಳಿಗೆ ಅನುಸಾರವಾಗಿ. 12 ತಿಂಗಳುಗಳನ್ನು ಹೊಂದಿರುವ ಚಂದ್ರವು ವರ್ಷವು ಸೂರ್ಯವರ್ಷಕ್ಕಿಂತ ಕಡೆಮೆಯಾಗಿರುತ್ತೆ. ಇವುಗಳಲ್ಲಿ ಪ್ರತಿಯೊಂದು ಮಾಸವೂ ಪ್ರತ್ಯೇಕ ಮಹತ್ವವನ್ನು ಹೊಂದಿಕೊಂಡಿವೆ. ಅವುಗಳಲ್ಲಿ ಮಿನುಗುತಾರೆಗಳ ಮಾಸ ಎಂದು ಖ್ಯಾತ ಪಡೆದ ತಿಂಗಳಾಗಿದೆ ರಬೀಉವ್ ಆಖಿರ್. ಅಲ್ಲಾಹನ ಅದೆಷ್ಟೋ ಇಷ್ಟದಾಸರನ್ನು ಸ್ಮರಿಸುವ ಪುಣ್ಯವುಳ್ಳ ಈ ತಿಂಗಳಲ್ಲಿ ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓ ಗೊಟ್ಟು ಅಗಲಿದ ಮಹಾನ್ ಚೇತನರುಗಳಿದ್ದಾರೆ. ಅವರಲ್ಲಿರುವ ಕೆಲವು ಪ್ರಮುಖ ವ್ಯಕ್ತಿತ್ವಗಳನ್ನು ಸ್ಮರಿಸೋಣ.

ಅಬ್ದುಲ್ ಖಾದಿರ್ ಅಲ್-ಜೀಲಾನೀ (ಖ.ಸಿ) 

 ಹಿ.470 ರಲ್ಲಿ ಪ್ರವಾದಿಯವರ ಪವಿತ್ರ ಕುಲದ ಹಸನ್ ಮತ್ತು ಹುಸೈನ್ ರವರ ಎರಡು  ಪಾವನ ವಂಶ ಪರಂಪರೆಯ ಓರ್ವ ಗಂಡು ಹಾಗೂ ಹೆಣ್ಣು ದಂಪತಿಗಳಿಗೆ ಶೈಖ್ ಅಬ್ದುಲ್ ಖಾದಿರ್ ಅಲ್-ಜೀಲಾನಿ (ಖ.ಸಿ) ಜನಿಸಿದರು. ಅವರಿಗೆ ಮುಹ್ಯುದ್ದೀನ್ ಧರ್ಮ ಸುಧಾರಕ ಹಾಗೂ ಗೌಸುಲ್ ಆಝಂ (ಹಿರಿಯ ಸಹಾಯಿ) ಎಂಬ ಪದವಿಗಳೂ ಇವೆ. ಬಾಲ್ಯದಲ್ಲೇ ತಂದೆಯನ್ನು ಕಳೆಕೊಂಡಿದ್ದ ಅವರು ತಾಯಿ ಉಮ್ಮುಲ್ ಖೈರ್ ಫಾತಿಮಾ ಬೀವಿಯವರ ಪಾಲನೆ ಪೋಷಣೆಯಲ್ಲಿ ಹತ್ತು ವಯಸ್ಸಿನವರೆಗೆ ಕಾಲವನ್ನು ಕಳೆದರು. ನಂತರ ತನ್ನ 18ನೇ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಗ್ದಾದ್ ಗೆ ತೆರಳಿದರು. 51 ನೇ ವಯಸ್ಸಾದಾಗ ಏರಬೇಕಾದ ಆಧ್ಯಾತ್ಮದ ಎಲ್ಲಾ ಮೆಟ್ಟಲುಗಳನ್ನು ಏರಿ ಉನ್ನತ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರು. ಇಷ್ಟೆಲ್ಲಾ ಮಹೋನ್ನತ ಸ್ಥಾನದಲ್ಲಿದ್ದರೂ ವಿನಯದ ವ್ಯಕ್ತಿತ್ವವನ್ನು ಮೈಗೂಡಿಸಿ ತನ್ನ ಬಳಿ ಬರುವ ಸಂದರ್ಶಕರನ್ನು ಗೌರವಿಸುತ್ತಿದ್ದರು. ರಬೀವುಲ್ ಆಖಿರ್ ತಿಂಗಳಿಡೀ ಜೀಲಾನಿ ಸ್ಮರಣೆ ಎಂಬ ಹೆಸರಲ್ಲಿ ದಕ್ಷಿಣ ಭಾರತದಲ್ಲೂ ಗ್ಯಾರವೀ ಎಂಬ ಹೆಸರಲ್ಲಿ ಉತ್ತರ ಭಾರತದಲ್ಲೂ ವಿಶೇಷವಾಗಿ ಶೈಖ್ ರವರು ಸ್ಮರಿಸಲ್ಪಡುತ್ತಿದ್ದಾರೆ. ರಬೀಉಲ್ ಆಖಿರ್ ಹನ್ನೊಂದನೇ ದಿನದಂದು ಅವರು ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ಯಾತ್ರೆಯಾಗುತ್ತಾರೆ.

ಶಂಸುಲ್ ಉಲಮಾ 

ಇ.ಕೆ ಅಬೂಬಕ್ಕರೆ ಮುಸ್ಲಿಯಾರ್ ಹಿಜಿರ 1333 (1914) ರಲ್ಲಿ ಜನಿಸಿದ ಎಝುತ್ತಚ್ಚನ್ ಕಂಡಿ ಮನೆತನದ ಮೊದಲ ಕುಡಿಗೆ ಅಬೂಬಕ್ಕರ್ ಎಂಬ ಪಿತಾಮಹರ ನಾಮವನ್ನು ಇಡಲಾಯಿತು. ಅದೇ ಮಗು ಮುಂದೆ ಇತಿಹಾಸ ಪುರುಷರಾಗಿ ರೂಪೂಗೊಂಡದ್ದು ದಕ್ಷಿಣ ಭಾರತಕ್ಕೆ ಮಹಿಮೆಯನ್ನುಂಟುಮಾಡಿದೆ. ಹಲಗೆಯ ಮೇಲೆ ಬರೆದು ಅರಬಿ ಅಕ್ಷರಭ್ಯಾಸ ಪಡೆದು ಮಗು ಬಹುಬೇಗನೆ ಪವಿತ್ರ ಕುರ್ಆನ್ ಪಾರಾಯಣ ಕಲಿತುಕೊಂಡಿತು. ನಂತರದ ಕಾಲದಲ್ಲಿ ಶಾಲೆಯನ್ನು ಬಿಟ್ಟು ಮಡವೂರ್ ಪಳ್ಳಿ ದರ್ಸ್ ಗೆ ಸೇರಿದರು. 1937 ರ ಸುಮಾರಿಗೆ ಪ್ರಸಿದ್ದ ಬಾಖಿಯಾತ್ ಕಾಲೇಜಿಗೆ ಪದವಿ ಶಿಕ್ಷಣಕ್ಕೆ ಸೇರಿದ ಈ ಯುವ ವಿದ್ವಾಂಸ, ಅಲ್ಲಿನ ಕಲಿಕಾ ಕಾಲವನ್ನು ಕಾಲೇಜ್ ನ ದಾಖಲಾಗಿ ಉಳಿಯುವಂತೆ ಮಾಡಿದರು. ಇತಿಹಾಸದ ಪುಟಗಳಲ್ಲಿ ತಲ್ಲಿಪ್ಪರಂಬಿವಿನಲ್ಲಿ ನಡೆದ ಸುನ್ನೀ ಪ್ರಭಾಷಣ ವೇದಿಕೆಯಲ್ಲಿ ಪ್ರಚಂಡ ಭಾಷಣದ ಮೂಲಕ ಸುನ್ನೀ ಆದರ್ಶ ವೇದಿಕೆಗೆ ಎಂಟ್ರಿ ಪಡೆದ ಉಸ್ತಾದ್, ಚೂಚ್ಚಲ ಭಾಷಣದಲ್ಲೇ ಸುನ್ನೀ ವಿರೋಧಿಗಳನ್ನು ಬೆಕ್ಕಸ ಬೆರಗಾಗುವಂತೆ ಮಾಡಿದರು. (1996) ಹಿ.1417 ರಬೀಉಲ್ ಆಖರ್ 4ರಂದು ಅವರು ಧ್ವನಿಯಲ್ಲಿ ಲಾ ಇಲಾಹ ಇಲ್ಲಲ್ಲಾ ಹ್ ಎಂದು ಹೇಳುತ್ತಾ ಕಣ್ಮರೆಯಾದರು.

ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್

ಕಣ್ಣಿಯತ್ ಅವರಾನ್ ಕುಟ್ಟಿ ಮತ್ತು ಕಣ್ಣಿಯತ್ತ್ ಖದೀಜಾ ಎಂಬ ದಂಪತಿಗಳಿಗೆ 1900 ಜನವರಿ 17ರಂದು ಮಂಜೇರಿಯ ತೋಟಕ್ಕಾಡ್ ಎಂಬ ಸ್ಥಳದಲ್ಲಿ ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್ ಜನಿಸುತ್ತಾರೆ. ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಣ್ಣ ಅಬ್ದುರ್ರಹ್ಮಾನ್ ಮುಸ್ಲಿಯಾರ್ ರವರೇ ಬೆಂಗಾವಲಾಗಿದ್ದರು. ಕಣ್ಣಿಯ್ಯತ್ತ್ ಉಸ್ತಾದ್ ಪ್ರಾಥಮಿಕ ಶಿಕ್ಷಣ ಪಡೆದದ್ದು ಅಣ್ಣನ ಬಳಿಯಾಗಿತ್ತು. ನಂತರ ಪಣಿಕ್ಕಾಪುರ ಎಂಬಲ್ಲಿನ ಪುಟ್ಟ ದರ್ಸಿನಲ್ಲಿ ಹಲವು ಕಿತಾಬ್ ಗಳೂಂದಿಗೆ ಅದೇ ಸಮಯದಲ್ಲಿ ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಾಥಮಿಕ ಜ್ಞಾನವನ್ನು ಕಲಿತುಕೊಂಡರು. 1914 ರಿಂದ 1927 ರವರೆಗೆ ಕಣ್ಣಿಯತ್ತ್ ಉಸ್ತಾದ್ ರವರು ದಾರಲ್ ಉಲೂಂ ನಲ್ಲಿ ದರ್ಸ್ ವ್ಯಾಸಾಂಗ ನಡೆಸಿದರು . ಬಾಲ್ಯಕಾಲದಲ್ಲಿ ಅವರ ಅದ್ಭುತ ಪಾಂಡಿತ್ಯ, ಜ್ಞಾಪಕ ಶಕ್ತಿ ಮತ್ತು ಬುದ್ಧಿ ವೈಭವ ಅರ್ಥಮಾಡಿಕೊಂಡ ಗುರು ಖುತುಬಿ ಮುಹಮ್ಮದ್ ಮುಸ್ಲಿಯಾರ್ ಎರಡು ದರ್ಸ್ಗಳನ್ನು ತಮ್ಮದೇ ಖರ್ಚಿನಲ್ಲಿ ಶಿಷ್ಯನಿಗೆ ಕೊಡುಗೆಯಾಗಿ ನೀಡಿದ್ದರು. 1914 ರ ನಂತರ ಮರದ ವ್ಯಾಪಾರ ಪ್ರಾರಂಭಿಸಿದ ಉಸ್ತಾದರು ಪ್ರಾಮಾಣಿಕತೆಯಿಂದ ಯಾರೊಬ್ಬರನ್ನು ವಂಚಿಸಿದೆ ವ್ಯಾಪಾರಿಗಳಿಗೆ ಮಾದರಿಯಾದರು. ಆದರೆ ಅಲ್ಪಕಾಲದ ಬಳಿಕ ಮತ್ತೆ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಕ್ಕೆ ಮರಳಿದರು. ಕೆಲವು ಸಮಯ ಪೊನ್ನಾಣಿ ದರ್ಸ್ ನಲ್ಲಿ ಉದ್ಯೋಗ ನಡೆಸಿ ಮತ್ತೊಮ್ಮೆ ದಾರುಲ್ ಉಲೂಂ ನಲ್ಲಿ ಸೇವೆಗೆಂದು ಸೇರಿಕೊಂಡರು. ವಿದ್ವತ್ತು ಲೋಕದ ಅದ್ಭುತ ಪ್ರತಿಭೆಯಾಗಿದ್ದ ಕಣ್ಣಿಯತ್ತ್ ಉಸ್ತಾದ್ ರಈಸುಲು ಮುಹಖ್ಖಿಖೀನ್ ಹಾಗೂ ಉಸ್ತಾದುಲ್ ಅಸಾತೀದ್ ಎಂದು ಅಭಿದಾನ ಪಡೆದಿದ್ದರು. 1993 ಸೆಪ್ಟೆಂಬರ್ 19 ಕಣ್ಣಿಯ್ಯತ್ತ್ ಅಹ್ಮದ್ ಮುಸ್ಲಿಯಾರ್  ಅಲ್ಲಾಹನ ಕರೆಗೆ ಓಗೊಟ್ಟು ಪರಲೋಕ ಯಾತ್ರೆಗೈದರು. 

ಬರಹ: ಝೈದ್ ವಿಟ್ಲ

(ವಿದ್ಯಾರ್ಥಿ ದಾರುನ್ನುರ್  ಏಜುಕೇಶನ್ ಸೆಂಟರ್, ಕಾಶಿಪಟ್ನ) 

Related Posts

Leave A Comment

Voting Poll

Get Newsletter