ಇಮಾಮ್ ಬೈಹಕಿ (ರ) : ಜ್ಞಾನಸೇವೆಯಲ್ಲಿ ಮುಳುಗಿದ ಮಹಾ ನಾಯಕ

  ಹಿಜ್ರಾ ನಾಲ್ಕನೇ ಶತಮಾನದ ಕೊನೆಯಲ್ಲಿ ಜನಿಸಿ ಸುದೀರ್ಘ ಎಪ್ಪತ್ತು ವರ್ಷಗಳ ಕಾಲ ಸೇವೆಮಾಡಿದರು  ಹಿಜ್ರಾ  384ರ ಶ ಆಬಾನ್ ತಿಂಗಳಲ್ಲಿ ನೈಸಾಬೂರಿನ ಬೈಹಕ್ ಎಂಬ ಪ್ರದೇಶದಲ್ಲಾಗಿತು. ಜನನ  ಪೂರ್ಣನಾಮ ಅಬೂಬಕರ್ ಅಹಮದ್ ಅಲ್ ಬೈಹಕ್ ಎಂದಾಗಿದೆ. ಜನಿಸಿದ ಊರಿಗೆ ಸೇರಿಸಿ ಬೈಹಕ್ ಎಂದು ಖ್ಯಾತಿ ಪಡೆದರು ಪ್ರಸಿದ್ಧವಾದ ಹದೀಸ್ ಫಿಕ್ಹ್ ಅಕೀದಾ ಪಂಡಿತರಾಗಿದ್ದರು. ವಿವಿಧ ವಿಷಯಗಳಲ್ಲಿ ಅನೇಕ ಗ್ರಂಥಗಳನ್ನು ಕೊಡುಗೆ ನೀಡಿದರು. ಮಹಾನುಭಾವರ ಜೀವನವು ಜ್ಞಾನ ಬೇಡುವುದರಲ್ಲಿಯೂ ವಿತರಿಸುವುದಲ್ಲಿಯೂ ಧನ್ಯವಾಯಿತು.


ನಾಲ್ಕನೇ ಶತಮಾನವೂ ವೈಜ್ಞಾನಿಕ ಚಲನೆಗಳು ಮತ್ತು ಸೇವನೆಗಳು ಅಧಿಕವಾಗಿದ್ದ ಕಾಲವಾಗಿತ್ತು. ಆದರೆ  ಸಾಮೂಹಿಕವಾಗಿ ಅನೇಕ ಸಮಸ್ಯೆಗಳು ಎದ್ದು ನಿಂತಿದ್ದ ಸಮಯವೂ ಮುಸ್ಲಿಂ ಲೋಕಕ್ಕೆ ಶತ್ರುಗಳ ಅಧಿವೇಶದಿಂದ ರೋಮನ್ ವಂಶಸ್ಥರ ಅಕ್ರಮಣವೂ ಈ ಕಾಲದ ಪ್ರಮುಖ ಘಟನೆಯಾಗಿತ್ತು.ಆದರ್ಶರಂಗದಲ್ಲಿ ನೂತನ ಪ್ರಸ್ತಾನೆಗಳು ಮತ್ತು ವಿವಾದಗಳು ಸಂಕೀರ್ಣವನ್ನು ಸೃಷ್ಟಿಸಿತು ಶಿಯಾಗಲು ಮತ್ತು ರಾಫಿಳಿಗಳು ಅಹ್ಲುಸುನ್ನತಿನ  ವಿಶ್ವಾಸಗಳನ್ನು ನಿರ್ನಾಮವಾಗಿ ಅವರ ಹಾದಿ ತಪ್ಪಿಸುವಂತಹ ಆಶಯಗಳನ್ನು ಪರಿಚಯಿಸಿ ಪ್ರಚಾರ ಮಾಡಿದ ಕಾಲವಾಗಿತ್ತು ಇಮಾಮ್ ಬೈಹಕಿಯಂತಹ ಸುಪ್ರಸಿದ್ಧ ಪಂಡಿತರು ಅನಿವಾರ್ಯತೆಯಾಗಿ ಬೆಳೆಯಬೇಕೆಂಬ ಸಮಯದಲ್ಲಿ ಅವರು ಜನಿಸಿದ್ದು ಎಂದು ನಿಮಗೆ ಕ್ರಮೇಣ ಅರಿತುಕೊಳ್ಳುತ್ತದೆ.

ನೈಸಾಬೂರ್

ಇಮಾಮವರ ಜನ್ಮಸ್ಥಳವಾದ  ಬೈಹಕ್ ಗಳಂತಹ     ಗ್ರಾಮಗಳು ಒಳಗೊಂಡ ನೈಸಾಬೂರ್ ಅಂದಿನ    ವಿಜ್ಞಾನ ಕೇಂದ್ರವಾಗಿತ್ತು ದಾರುಸಲ ಎಂಬ ವಿಶೇಷ ನಾಮಕರಣವು  ನೈಸಾಬೂರ್ ನಗರಕ್ಕೆ ಇತ್ತು ಇಮಾಂಸಖಾವಿ (ರ) ರವರು ಇದರ ಕಾರಣ ಹೇಳುವುದು ಮುಂಚಿನ ಪ್ರಸಿದ್ಧರಾದ ಹದಿಸ್ ಮಹಾನುಭಾವರುಗಳು ನೈಸಾ ಬೂರ್ ಕೇಂದ್ರೀಕರಿಸಿ ಆಗಿತ್ತು ಕರ್ಮ ಶಾಸ್ತ್ರ ಪಂಡಿತರು ಹದೀಸ್ ಪಂಡಿತರು ಮೊದಲಾದ ಹಲವಾರು ವ್ಯತ್ಯಸ್ಥ ವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧಿ ಗರಿಸಿದ 1375 ಚೈತನ್ಯವಾದ ಮಹಾನುಭಾವರವರನ್ನು ಅವರ ಚರಿತ್ರೆಗಳನ್ನು ಇಮಾಮ್ ಹಾಕಿಮ್ ರವರು ತಾರಿಕ್ ನೈಸಾಬೂರ್ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ ಮೂರನೇ ಶತಮಾನದಲ್ಲಿ ಮಾತ್ರ ನೈಸಾಬೂರನ್ನು ವೈಜ್ಞಾನಿಕ ಲೋಕವನ್ನಾಗಿ ಮಾಡಿದ  1135 ಮಹಾನುಭಾವರುಗಳು ಮತ್ತು ಅದರಲ್ಲಿ ಸಾವಿರ ಗುರುಗಳನ್ನು ಅವರು ಪರಿಚಯಿಸಿದರು ಮತ್ತು ಅಬ್ದುಲ್ ಗಫೂರ್ ಅಲ್ ಫಾರಿಸಿ    ಎಂಬವರು ನೈಸಾಬೂರಿನಲ್ಲಿ ಜ್ಞಾನವನ್ನು ಪರಿಚಯಿಸಿದ ಮತ್ತು ಅಧ್ಯಾಪನ ಮಾಡಿದ 1699 ಪಂಡಿತರನ್ನು ಪರಿಚಯಿಸಿದನ್ನು ಕಾಣಬಹುದು. ಇಮಾಮ್ ಬೈಹಕ್(ರ)  ಬೆಳೆದ ನಾಲ್ಕು ಮತ್ತು ಐದು ಶತಮಾನ ನಿಸಾಬರಿನ ಸಂಪನ್ನಾ ಸಮೃದ್ಧಿಯ ಕಾಲವಾಗಿತ್ತು.


ಈ ನಗರ ವೈಜ್ಞಾನಿಕ ಲೋಕದಲ್ಲಿ ಪ್ರಸಿದ್ಧವಾದರಿಂದ ಇಮಾಮ್ ಬೈಹಕ್ (ರ) ಎಂಬ ಮಹಾನುಭಾವರನ್ನು ಉದಯಿಸುವುದರಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದೆ ಮಹಾನುಭಾವರ ಕುಟುಂಬದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕದಿಂದ ಅವರ ಪ್ರಾಥಮಿಕ ವಿದ್ಯೆಯ ಬಗ್ಗೆ ಮಾಹಿತಿ ಚರಿತ್ರೆಯಲ್ಲಿ ಸಿಗುವುದಿಲ್ಲ  15 ನೇ ವಯಸ್ಸಿನಲ್ಲಿಪ್ರಮುಖ ವಿದ್ವಾಂಸರ ಬಳಿ ವಿದ್ಯೆಯನ್ನು ಕಳಿತರೆಂದು ಹಾಫಿಲು ದಹಬಿ ಬೈಹಕ್ ರವರ    ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ.

ಬೈಹಕಿಯ ಜ್ಞಾನ ಅನ್ವೇಷಣವು ಎರಡು ವಿಧವಾಗಿತ್ತು. ಹುಟ್ಟೂರಿನಲ್ಲಿ ವಿದ್ವಾಂಸರಿಂದ ವಿದ್ಯೆ ಕಲಿತರು  ಮತ್ತು ಹೊರಗಿನ ನಗರಗಳಿಗೆ ಪ್ರಯಾಣ ಮಾಡಿ ಅರಿವು ಪಡೆದರು. 15ನೇ ವಯಸ್ಸಿನಲ್ಲಿ ಶೇಕ್ ಅಬುಲ್ ಹಸನ್ ಮುಹಮ್ಮದ್ ಬಿನ್ ಅಲ್ ಅಲವಿ (ರ) ರವರಿಂದ ತೊಡಗಿದ ಹದೀಸ್ ಪಠಣ ತೇಜಸ್ಸಾಗಿ ಅವರ ಜೀವನದಲ್ಲಿ ಹೊರಹೊಮ್ಮಿತು. ಮಹರಿಫತುಸುನನಿ ವಲ್ ಅಸಾರಿಯ ಮತ್ತು ಬಯಾನುಲ್ ತಲ್ಈಮನ್ ಅಖ್ ತ್ವ ಶಾಫಿಈ ಕೊನೆಯಲ್ಲಿ ಮಹಾನರ  ಜ್ಞಾನದ ಕುರಿತು ವಿವರಿಸಿದ್ದಾರೆ.


"ನಾನು ವಿದ್ಯೆ ಗಳಿಕೆಯ ಆರಂಭದಲ್ಲೆ ಪ್ರವಾದಿ ನೆಬಿ(ಸ) ರ ವಚನೆಗಳು, ಘಟನೆಗಳು,  ದೀನಿನ ಚಿಹ್ನೆಗಳಾಗಿರುವ ಸ್ವಹಾಬಿವರರ ವಚನೆಗಳು ಶೇಖರಿಸಲಿಕ್ಕೆ ಶುರು ಮಾಡಿದೆ ಅವರ ಬಗ್ಗೆ ಇರುವ ಪುಸ್ತಕಗಳು ಯಾರ ಬಳಿಯಾಗಿದೆ ಅವರನ್ನು ಹುಡುಕಿ ಕೇಳಿದೆ ಅದರ ವರದಿಗಾರರು ಮತ್ತು ವಾಹಕರ ಬಗ್ಗೆ ಚೆನ್ನಾಗಿ ಅರಿತಿದೆ ಅದರಲ್ಲಿ ಸ್ವಹೀಹ್,ಮಅರೂಫ್ ಮವ್ಕೂಫ್ ಮವ್ಸೂಲ್  ಮುರ್ಸಲ್ ಮುಂತಾದವನ್ನು ತಿಳಿಯಲು ಶ್ರಮಿಸಿದೆ ಮಕ್ಕ ಮದೀನಾ ಪರಿಸರದಲ್ಲಿ ಜ್ಞಾನಕ್ಕಾಗಿ ಪಯಣ ಮಾಡಿದ ಯಾತ್ರೆಗಳು ಮಹಾನುಭಾವರ ಜೀವನವನ್ನು ಉನ್ನತ ಮಾಡಿತು ಹದೀಸ್ ಕರ್ಮಶಾಸ್ತ್ರ  ಆಖೀದದಲ್ಲಿಯೂ  ಖ್ಯಾತಿ ಪಡೆದರು.

ಗುರುವರ್ಯರುಗಳು

ಇಸ್ತರಬಾದ್ ಅಸದಾಬಾದ್ ಇಸ್ಫರಾಈಲ್, ದಾಮಿಗಾನ್,ತಂಬಿರಾನ್, ತೂಸ್,  ಕರ್ಮೀನ್, ಮಹರ್ಜಾನ್,ಬಾಗ್ದಾದ್, ಹಮದಾನ್, ಕೂಫ, ಶತ್ವುಲ್ ಅರಬ್, ಮಕ್ಕ ಮದೀನ ರಯ್ಯ್   ಮುಂತಾದ   ಸ್ಥಳಗಳಲ್ಲಿ ವಿಜ್ಞಾನ ಹಾಗೂ ಗುರುವರ್ಯರನ್ನು ಹುಡುಕಿಕೊಂಡು ಸಂಚರಿಸಿದರು ಹಳವು ವಿಜ್ಞಾನ ಕ್ಷೇತ್ರಗಳಲ್ಲಿರುವ ವಿದ್ವಾಂಸರನ್ನು ಸ್ಪಂದಿಸಲು ಅವರ ಶಿಷ್ಯರಾಗಿ ಕಲಿಯಲು ಭಾಗ್ಯ ಲಭಿಸಿತು ತನ್ನ ಪ್ರಥಮ ಗುರು ಅಬ್ದುಲ್ ಹಸನ್ ಮೊಹಮ್ಮದ್ ಅಲವಿ ಎಂಬವರಾಗಿದ್ದರು ಪ್ರಶಸ್ತ ಮುಹದೀಸ್ ಮತ್ತು ಚರಿತ್ರೆಗಾರ ಮತ್ತು  ಅಲ್ ಮುಸ್ಧದ್ರಿಕ್ ಅಸ್ವಹೀಹೈನ್  ಎಂಬ ಗ್ರಂಥದ ಬರಹಗಾರರಾದ ಮಹಮ್ಮದ್ ಹಾಕಿಮ್ ನೈಸ್ಸಾಬೂರಿ, ಅಬೂಅಬ್ದುರಹ್ಮಾನ್  ಸಲಮಿ,  ಅಬೂಬಕರಿ ಬಿನ್ ಫೌರಕ್,  ಅಬೂಅಲಿಯ್ಯುರುಸ್ಬಾದಿ,ಅಬೂಝಕರಿಯ್ಯಲ್ ಮುಸ್ಕಿ, ಮೊದಲಾದವರು ಮಹಾನರ ಗುರುವರ್ಯರುಗಳಾಗಿದ್ದರು  ಬೈಹಕ್ ಎಂಬ  ಗ್ರಾಮದಿಂದ ನೈಸ್ಸಾಬೂರ್ ಎಂಬ ನಗರದ ಹೃದಯ ಭಾಗದಲ್ಲಿ ವಿಜ್ಞಾನವನ್ನು ಹುಡುಕಿ ಹೋದ ಯಾತ್ರೆಗಳು ದೀರ್ಘವಾಗಿತ್ತು ಇಮಾಮ್ ಹಾಕಿಮ್ ರವರ ಶಿಷ್ಯತ್ವವನ್ನು ಸ್ವೀಕರಿಸಿದು ಇದರಲ್ಲಾಗಿದೆ 405ರಲ್ಲಿ ವಫತಾದ ಇಮಾಮ್ ಹಾಕೀಮ್ (ರ)ಬಳಿ  ಸ್ವಲ್ಪ ಕಾಲ ಹದೀಸ್ ಕಳಿತರು ಇಮಾಂ ಹಾಕಿಮ್ ರವರಿಗೆ 71 ವಯಸ್ಸು ಮತ್ತು ಬೈಹಕಿರವರಿಗೆ 21 ಆಗಿತ್ತು ಈ ಅವಧಿಯಲ್ಲಿ ಹತ್ತು ಸಾವಿರ ಹದೀಸ್ಗಳು ಸ್ವೀಕರಿಸಿದರು ಸುಗರುಲ್ ಕುಬ್ರಾ ಎಂಬ ಹದೀಸ್ ಗ್ರಂಥದಲ್ಲಿ ಹಾಕಿಂ(ರ) 8,491 ಹದೀಸ್ ಗಳು ಉದ್ದರಿಸಲಾಗಿದೆ.


ಅಬೂಸ ಈದುಲ್ ಮಹ್ಜಾನಿ, ಅಬೂಸಹ್ಲುಲ್ಮ ರ್ ವಝಿ, ಅಬೂಮಹಮ್ಮದುಲ್ಇಸ್ ಬಹಾನಿ,  ಅಬೂಅಲಿಯ್ಯುರುಸ್ಬಾದಿ , ಅಬೂಬಕರಿಲ್    ಮೊದಲಾದವರಿಂದ ನೈಸಾಬೂರಿನಲ್ಲಿ ಹದೀಸ್, ಮೊದಲಾದ ಜ್ಞಾನಗಳನ್ನು ಸಂಗ್ರಹಿಸಿದರು ಇದರ ಹಾಗೆ ಬಾಕಿ ನಗರಗಳಿಗೆ ಸಂಚರಿಸಿ ಹಳವು ವಿದ್ವಾಂಸರನ್ನು ಭೇಟಿ ನೀಡಿ ಜ್ಞಾನಪಡೆದರು.ಮಕ್ಕ ಮದೀನ ಮೊದಲದ ಪ್ರಸಿದ್ಧ ನಗರಗಳಲ್ಲಿ ಹಲವಾರು ಮಹಾನುಭಾವರನ್ನು ಸಂಪರ್ಕಿಸಿದರು ಮತ್ತು ಹಜ್ಜ್ ಝಿಯಾರತ್ ಮಾಡಿದರು  ಮಸ್ಜಿದುಲ್  ಹರಾಂನಲ್ಲಿ, ಮಸ್ಜಿದ್ ನಬವಿಯಲ್ಲಿ ಉನ್ನತ ವಿದ್ವಾಂಸರನ್ನು ಭೇಟಿ ನೀಡಿ ಜ್ಞಾನ ಪಡೆದರು ಐದನೇ ಶತಮಾನದ ಮೊದಲ ಹಂತದಲ್ಲಾಗಿತ್ತು ಯಾತ್ರೆಗಳು ಮತ್ತು ವಿದ್ವಾಂಸರನ್ನು ಸಂಪರ್ಕ ಬೆಳೆಸಿದ್ದು,ಹಿಜ್ರಾ 430ರ  ಕೊನೆಯ  ಹಂತದಲ್ಲಿ ಯಾತ್ರೆಗಳನ್ನು ಮುಗಿಸಿದರು ಮತ್ತು ಪುಸ್ತಕಗಳನ್ನು ರಚಿಸಲು ಮಾಡಿದರು.

ರಚನೆಗಳು

ವ್ಯತ್ಯಸ್ತ ವಿಜ್ಞಾನ ಶಾಖೆಗಳಲ್ಲಿ 50 ರಿಂದ ಅಧಿಕ ಪುಸ್ತಕಗಳು ರಚಿಸಿದರು. ಅದರಲ್ಲಿ ಬಹಳ ವಾಲ್ಯಗಳು ಇರುವ ಪುಸ್ತಕಗಳು ಈಗಲೂ ಪ್ರಸಿದ್ಧವಾಗಿದೆ. ಹದೀಸ್,ಫಿಕ್ಹ್,ಅಕೀದಾ,ತಸವ್ವುಫ್,ನಕ್ಬಾ, ಮುಂತಾದ     ಕಡೆಗಳಲ್ಲಿ ಹಲವಾರು ಪ್ರಶಸ್ತ ಪುಸ್ತಕಗಳನ್ನು ರಚಿಸಿದ್ದಾರೆ.ಬೈಹಕ್ ಎಂದು ಕರೆಯುವಾಗ ಮನಸ್ಸಿನಲ್ಲಿ ಬರುವುದು ಸುನನುಲ್ ಬೈಹಕಾಗಿದೆ.ಸುನನುಲ್ ಕುಬ್ರಾದಲ್ಲಿ  ನೆಬಿ(ಸ)ರ ಮಾತುಗಳು, ಪ್ರವರ್ತನೆಗಳು, ಅಂಗೀಕರಣೆಗಳು, ಸ್ವಹಾಬಿಗಳಲ್ಲಿ ಮತ್ತು ತಾಬಿಈಗಳಲ್ಲಿ ತಲುಪಿದ ಹದೀಸ್ಗಳು ಮುಂತಾದವುಗಳನ್ನು ವಿವರಿಸಿದ್ದಾರೆ ಇದೊಂದು ಹದೀಸ್ ಗ್ರಂಥವಾಗಿದೆ ಕಾರಣ ಒಬ್ಬನಿಗೆ ಹದೀಸ್ ಕಳೆಯಲು ಬೇಕಾದ ಎಲ್ಲವನ್ನು ಈ ಗ್ರಂಥದಲ್ಲಿ ವಿವರಿಸಿದ್ದಾರೆ ಸುನನುಗಳನ್ನು ನೋಡುವುದಾದರೆ ಸುನನುಲ್ ಬೈಹಕಿ  ಪ್ರಥಮ ಸ್ಥಾನದಲ್ಲಾದರೂ ಮುಂಚೆ ಬರೆದ ಸುನನುಗಳು ಇದ್ದರಿಂದ ಕರೆಯುವುದಿಲ್ಲ ಎಂದು ಮಾತ್ರ.


ಮಅರಿಫತು ಸುನನಿವಲ್ ಅಸಾಲ್ ಎಂಬ ಗ್ರಂಥ ಅಮೂಲ್ಯವಾದ ರಚನೆ ಹಾಗೂ ಕ್ರೂಢೀಕರಣ ಆಗಿದೆ ಇದರಲ್ಲಿಇಮಾಮ್ ಶಾಫಿಈ(ರ) ರ ಮಝ್ಹಬಿನ ವಿಧಿಗಳು ಹೊಂದಿರುವ ಉನ್ನತ ರಚನೆಯಾಗಿದೆ ಶಾಫೀ(ರ) ಉದ್ದರಿಸಿದ ಹದೀಸ್ಗಳು ಅದರ ಸನದ್ ಹಾಗೂ ನಿವೇದಕರನ್ನು ವಿವರಿಸಲಾಗಿದೆ. ಇಮಾಮ್ ಸುಬ್ಕಿ(ರ) ಹೇಳುತ್ತಾರೆ : ಶಾಫಿಈ ಮಝ್ಹಬಿನ ಕರ್ಮ ಶಾಸ್ತ್ರ ಪಂಡಿತರು ಬೈಹಕಿಯವರ ಮಅರಿಫತು ಸುನನಿವಲ್ ಅಸಾರಿ ಎಂಬ ಗ್ರಂಥ ಓದಲೇಬೇಕೆಂದು ಹೇಳಿದ್ದಾರೆ ಅವರ ತಂದೆಯಾದ ತಕಿಯುದ್ದೀನ್  ಸುಬ್ಕೀ(ರ) ಈ  ಗ್ರಂಥದ ಕುರಿತು ವಿವರಿಸುತ್ತಿದ್ದರು. ಶಾಫಿಯ ಮಝ್ಹಬಿನಲ್ಲಿ ಹದೀಸ್ ಮತ್ತು ಸ್ವಹಾಬಿಗಳ ರಚನೆಗಳನ್ನು ತಿಳಿಯುವುದು ಎಂದು ಮಹಾನವರು ವಿವರಿಸಿದ್ದಾರೆ. ಇಮಾಮ್ ಶಾಫಿಯ ವಾಕ್ಯಗಳು ಮತ್ತು ರಚನೆಗಳನ್ನು ವಿವರಿಸುವ ಉನ್ನತ ಗ್ರಂಥವಾಗಿದೆ ಎಂದು ಸುಬಕ್ಕಿ (ರ)ಹೇಳಿದ್ದಾರೆ.ಈ ವಿಷಯದಲ್ಲಿ ಬೇರೆ ಗ್ರಂಥ ರಚಿಸಲ್ಪಟ್ಟಿಲ್ಲ. ಅಲ್ಅಸ್ಮಾವುವಸ್ಸಿಫಾತ್,ಕಿತಾಬುಲ್ ಈತಿಕಾದ್, ಕಿತಾಬುದ್ದಲಾಯಿಲುನ್ನುಬುವ್ವ, ಕಿತಾಬುಲ್ ಶುಅಬುಲ್ಈಮಾನ್,ಕಿತಾಬುಮನಾಕಿಬುಶ್ಶಾಫೀ(ರ) ಕಿತಾಬುಲ್ ದಾವತುಲ್ ಕಬೀರ್,  ಈ ತರಹದ ಗ್ರಂಥಗಳಿಗೆ ಸಮಾನತೆಯಾಗಿ ಯಾವುದೇ ಗ್ರಂಥವು ರಚಿಸಲ್ಪಟ್ಟಿಲ್ಲ.


ಕಿತಾಬುಲ್ ಕಿಲಾಫಿಯ್ಯತ್ ನಂತಹ ಗ್ರಂಥ ಬೇರೊಂದಿಲ್ಲ . ಮತ್ತು ಹದೀಸ್ ಒಂದೇ ರೀತಿಯಲ್ಲಿ ಮುನ್ನಡೆಸುವರೊಬ್ಬರಿಗೆ ಅಲ್ಲದೆ ಸಾಧ್ಯವಾಗುವ ಹದೀಸ್ ಸರಣಿಗಳಾಗಿದೆ.ಕಿತಾಬು ಮನಾಕಿಬುಲ್ ಇಮಾಂ ಅಹ್ಮದ್, ಕಿತಾಬು ಅಹ್ಕಾಮುಲ್ ಕುರ್ ಆನ್,ಕಿತಾಬು ದಾವಾತುಸಗೀರ್, ಕಿತಾಬುಲ್ ಬಅಸಿ ವನ್ನುಫೂಸ್,ಕಿತಾಬುಝುಹ್ದುಲ್ ಕಬೀರ್, ಕಿತಾಬುಲ್ ಅದಾಬ್, ಕಿತಾಬುಲ್ ಆಸಾರ್,ಕಿತಾಬು ಫಲಾಯಿಲುಲ್ ಅವ್ಕಾತ್, ಕಿತಾಬು ಸುನನಿ ಸ್ಸಗೀರ್, ಕೀತಾಬುಲ್ ಅರ್ಬಈನ್, ಎನ್ನುವ ಗ್ರಂಥಗಳು ರಚಿಸಿದ್ದಾರೆ ಇವುಗಳು ಬಹಳ ಫಲವುಳ್ಳದಾಗಿದೆ. ಇಂತಹ ಗ್ರಂಥಗಳು ಮುಂಚೆ ಯಾರೊಬ್ಬರೂ ರಚಿಸಲಿಲ್ಲ ಎಂದು ಜ್ಞಾನ ವುಳ್ಳವರು ಸಾಕ್ಷಿ ನಿಲ್ಲುತ್ತಾರೆ.ಹಾಫಿಲು ದಹಬಿ  ಇಮಾಮ್ ಬೈಹಕ್(ರ )ಬಗ್ಗೆ ಅವರ ಗ್ರಂಥಗಳು ಓದಿದ ನಂತರ ಹೇಳಿದರು ಬೈಹಕಿಯವರ ರಚನೆ ಗಳೆಲ್ಲವೂ ಮಹತ್ವವಾದ ಸ್ಥಾನವುಳ್ಳದಾಗಿದೆ ನೆಚ್ಚಿನ ಫಲವುಳ್ಳದಾಗಿದೆ ಅವರಂತಹ ವಿದ್ವಾಂಸರನ್ನು ಪರಿಗಣಿಸುವುದು ಪಂಡಿತರಿಗೆ ಅನಿವಾರ್ಯವಾಗಿದೆ.

ಸೇವೆಗಳು 

ಇಮಾಮವರಿಗೆ ಸಮುದಾಯದಲ್ಲಿ ಸಿಕ್ಕಿದ ಸ್ವೀಕಾರ್ಯತೆ ರಚಿಸಿದ ಗ್ರಂಥಗಳು ಅನೇಕ ಮಹೋನ್ನರಾದ ಪಂಡಿತ ಗುರುಗಳು ಮತ್ತು ಜ್ಞಾನಾನ್ವೇಷನ ಯಾತ್ರೆಗಳು ಶಿಷ್ಯರು   ಎಲ್ಲವೂ ಜ್ಞಾನಲೋಕದಲ್ಲಿ ಅಂಗೀಕರಿಸಿತು  ಅವರ ಪಾಂಡಿತ್ಯವನ್ನು ವಿವರಿಸಲಾಗುತ್ತದೆ ಶಾಫಿಈ ಮತ್ತು ಅಶ್ಅರೀಸಂಗೆ  ನೀಡಿದ ಸೇವನೆ ಅನೇಕವಾಗಿದೆ ಅವರ ಶಿಷ್ಯರಾದ ಫಕೀಹ್ ಮುಹಮ್ಮದ್ ಬಿನ್ ಅಹಮದ್ ಎಂಬವರಿಗೆ ಶಾಫಿಈ ಇಮಾಮ್ ಸ್ವಪ್ನದಲ್ಲಿ ದರ್ಶನೆ ಮಾಡಿದರು ಇದು ಮಗನು ಮತ್ತು ವಿಶ್ವವಿಖ್ಯಾತ ಕುಲಾತ್ ಆದ ಅಬೂ ಅಲಿಯ್ಯುಲ್ ಬೈಹಕೀ ಉದ್ಧರಿಸಿದ ಒಂದು ಘಟನೆ: ಹಾಫಿಲುದ್ದಹಬಿ ವಿವರಿಸಿದ್ದು ಹೀಗೆ ಇಮಾಂ ಶಾಫೀ ಕನಸಲ್ಲಿ ಬಂದರು. ಅವರ ಕೈಯಲ್ಲಿ ಮಅರಿಫದ ಏಳು ಭಾಗಗಳು ಇತ್ತು. ಅದರ ಬಗ್ಗೆ ಅವರು ವಿವರಿಸಿದರು ಇದು ನಾನು ಫಕೀಹ್ ಅವರ ಗ್ರಂಥದಿಂದ ಪಡೆದದ್ದಾಗಿದೆ.(ಸಿಯರು ಅಲಾಮುನ್ನುಬಲಾಅ) ಇಮಾಮ್ ಬೈಹಕಿಯವರು ಮಅರಿಫತುಸ್ಸುನನಿ ವಲ್ ಆಸಾರಿನ 20 ಏಳು ಭಾಗಗಳು ಪೂರ್ತಿಕರಿಸಿದ ಸಮಯವಾಗಿದ್ದು. ಇದು ನಮಗೆ ಶಾಫಿ ಇಮಾಮ್ ಬೈಹಕಿಯವರು ರಚಿಸಿದ ಗ್ರಂಥಗಳಿಗೆ ಅನುಕೂಲವಾಗಿ ಪ್ರವರ್ತಿಸಿದ ಅಂಗೀಕಾರವಾಗಿದೆ.


ಶಾಫಿ ರವರ ಮನಾಕಿಬುಲ್ ಇದರಲ್ಲಿ ವಿವರಿಸಿದ ಮನಾಕಿಬು ಶಾಫೀ ಎಂಬ ಗ್ರಂಥ ಇಮಾಮರ ಕುರಿತು ರಚಿಸಿದ ವಿಶಾಲವಾದ ಗ್ರಂಥವಾಗಿದೆ. ಅಶ್ಅರಿಸಮಿಗೆ ಬೇಕಾಗಿ ಮಹಾನರು ಶಕ್ತವಾಗಿ ನಿಂತುಕೊಂಡಿದ್ದರು. ಅಹ್ಲು ಸುನ್ನತ್ ವಲ್ ಜಮಾಅತ್ ಮತ್ತು ಅಶ್ಅರಿಸವನ್ನು ಖಂಡಿಸಿಕೊಂಡಿದ್ದ ಇವರ ಎದುರಾಗಿ ಸಮಸ್ಯೆಗಳು ಮತ್ತು ಪುಸ್ತಕಗಳನ್ನು ಬರೆದುಕೊಳ್ಳುತ್ತಿದ್ದ ಅಬ್ದುಲ್ ಮಲಿಕ್ ಅಲ್ ಕನ್ದರಿ ಎಂಬ ಸರ್ಕಾರಿ ನೌಕರನನ್ನು ಶಕ್ತವಾಗಿ ತಾಕಿತು ನೀಡಿ ಪತ್ರ ಬರೆಯುತ್ತಿದ್ದರು. ಇಮಾಮರು ಅದು ನೌಕರನು ಮನ್ನಿಸಿ  ಅಹ್ಲು ಸುನ್ನತ್ ವಲ್ ಜಮಾಅತ್ ಮೇಲೆ ಅತಿಕ್ರಮಣ ಮಾಡಿದರು. ಅಲಬ್ ಅರ್ಸಲಾನ್ ಆಡಳಿತಕ್ಕೆ  ಬಂದಾಗ ಈ ಪತ್ರವನ್ನು ಸ್ವೀಕರಿಸಿ ಕಂದರಿಯನ್ನು ಊರಿನಿಂದ ಹೊರದಬ್ಬಿದರು. ಮತ್ತು ತಕ್ಕದಾದ ಶಿಕ್ಷೆಯನ್ನು ವಿಧಿಸಿದರು. ಆಗ ನಿಜಾಮುಲ್ ಮುಲ್ಕ್ ನನ್ನು ಮಂತ್ರಿಯಾಗಿ ನೇಮಿಸಿದರು. ನಿಜಾಮರು ಶಾಫಿ ಮಝ್ಹಬಿನ ಬೆಳವಣಿಗೆಗೆ ಬೇಕಾದ ರೀತಿಯ ಸಹಕಾರ ನೀಡಿದರು.

ಜೀವನ

ಇಮಾಮ್ ಸುಬ್ಕೀ ಹೇಳುತ್ತಾರೆ: ಅವರು ಮುಸ್ಲಿಂ ನೇತಾರರಲ್ಲಿಯೂ ಇಮಾಮರಲ್ಲಿಯೂ ಮಹಾನರಾಗಿದ್ದಾರೆ. ವಿಶ್ವಾಸಿಗಳಿಗೆ ಮಾರ್ಗದರ್ಶನ ಕೊಡುವುದರಲ್ಲಿ ಮತ್ತು ಅಲ್ಲಾಹನ ಮಾರ್ಗಕ್ಕೆ ಅದೇ ರೀತಿಯಲ್ಲಿ ಕ್ಷಮಿಸುವ ಮಾರ್ಗದರ್ಶಕರಾಗಿದ್ದರು. ಹಾಫಿಲ್, ಕರ್ಮ ಶಾಸ್ತ್ರ, ನಿಧಾನಶಾಸ್ತ್ರದಲ್ಲಿ ನಿಪುಣರಾದ ಪಂಡಿತರಾಗಿದ್ದರು. ಬೌದ್ಧಿಕ ಪರಿತ್ಯಾಗಿಯೂ ಅಲ್ಲಾಹನಲ್ಲಿ ಭಯ ಭಕ್ತಿಯಿಂದ ಜೀವಿಸುವ ಮಹಾನರಾಗಿದ್ದರು.ಶಾಫೀ ಮಝ್ಹಬಿನಲ್ಲಿ ನಿಧಾನ ವಿಷಯಗಳಲ್ಲೂ ಶಾಖೆ ವಿಷಯಗಳಲ್ಲೂ ಉತ್ತಮ ಸೇವೆ ಮಾಡಿದರು. ಚುರುಕಾಗಿ ಹೇಳುವುದಾದರೆ ಅವರು ಜ್ಞಾನದ ವಿಷಯದಲ್ಲಿ ದೈತ್ಯ ಪರ್ವತವಾಗಿದ್ದರು.


ಇಬ್ನ್ ಅಸಾಕಿರ್ ಹೇಳುತ್ತಾರೆ: ಅವರು ವಿದ್ವಾಂಸರ ರೀತಿಯಲ್ಲಿ ಜೀವನ ನಡೆಸಿದರು. ಐಹಿಕವಾಗಿ ಮೋಹವಿಲ್ಲದಿರುವುದರಿಂದ ಸಂತೃಪ್ತಿಯಾದರು. ಪರಿತ್ಯಾಗ ಸೂಕ್ಷ್ಮತೆ ಹೊಂದಿದ ಜೀವನದಲ್ಲಿ ಸಂತೋಷವಾಗಿದ್ದರು. ಐಹಿಕ ದಿಂದ ತುಂಬಾ ಸ್ವಲ್ಪವಾಗಿತ್ತು ಸ್ವೀಕರಿಸಿದ್ದು ಅಧಿಕವಾಗಿ ಇಬಾದತ್ ತಖ್ವಾದಲ್ಲಿ ಮುಳುಗಿದ ಜೀವನವಾಗಿತ್ತು. ಪಾಂಡಿತ್ಯದ ನೆಚ್ಚಿನ ವೈಜ್ಞಾನಿಕ ಸೇವೆಗಳಲ್ಲಿ ಮಾತ್ರವಾಗಿರಲಿಲ್ಲ ಅದರ ಪ್ರಯೋಗವನ್ನು ಸ್ವಂತ ಜೀವನದಲ್ಲಿ ನಡೆಯಿಸಿ ಜಯ ಹೊಂದಲು ಸಾಧ್ಯವಾಯಿತು.ಶಾಫೀ‌ ಮಝ್ಹಬಿನ ವಿದ್ವಾಂಸ ಮಾತ್ರವಲ್ಲದೆ ಮಝ್ಹಬಿನಲ್ಲಿ ಇಜ್ತಿಹಾದ್ ನಡೆಸಿದ ಪಂಡಿತರು ಮಹಾನರ ಶಿಷ್ಯರಾಗಿದ್ದರು. ಪ್ರಸಿದ್ಧರಾದ ಹದೀಸ್ ಅವರ ಬಳಿ  ಕೇಳಿ ತಿಳಿದು ಶಿಷ್ಯರು ಇಲ್ಮ್ ಅನ್ನು ಪ್ರಚಾರ ಮಾಡಿದರು. ಪುತ್ರನಾದ ಇಮಾಮ್ ಅಲಿಯುಲ್ ಬೈಹಕಿ, ಇಮಾಮ್ ಅಬೂ ನಸ್ರುಲ್ ಕುರೈಶಿ ಮೊದಲಾದ ಶ್ರೇಷ್ಠರಾದ ಪಂಡಿತ ಶಿಷ್ಯರು ಪ್ರಸಿದ್ಧರಾಗಿದ್ದಾರೆ.

ವಫಾತ್

ದಶಕಗಳ ಕಾಲ ದೀನಿ ವಿಜ್ಞಾನಗಳ ಪ್ರಚಾರದಲ್ಲಿ ಪ್ರಚರಣದಲ್ಲಿಯೂ ಸಮರ್ಪಣೆ ನೀಡಿದ ಮಹಾನರ ಅಂತಿಮ ಯಾತ್ರೆ ಎಲ್ಲರನ್ನು ಕಣ್ಣೀರಿನಲ್ಲಿ ಮುಳುಗಿಸಿತು. ಹಿಜರ 45 ಜುಮಾದಿಲ್ ಅವ್ವಲ್ 16 ರಂದು ಆಗಿತ್ತು ಅದು. ಬೈಹಕ್ ಕೇಂದ್ರೀಕರಿಸಿ ವಿಜ್ಞಾನವನ್ನು ಪಡೆಯುತ್ತಿರುವ ಸಮಯ ಬೈಹಕ್ ನ ಸಮಸ್ಯೆಗಳು ಕೊರತೆಗಳು ಮಹಾನರನ್ನು ಕಡ್ಡಾಯವಾಗಿ ಪಾಲಯನ ಮಾಡಲೇಬೇಕೆಂದು ವಿಧಿಯಾಗಿತ್ತು. ಅಂತ್ಯ ನೀಸಾಬೂರಲ್ಲಾಗಿತ್ತು. ಆದರೆ ಜನಾಝವನ್ನು ಬೈಹಕ್ ನಗರಕ್ಕೆ ತಂದು ದಫನ ಮಾಡಲಾಯಿತು.

ಮಹಾನರೊಂದಿಗೆ ಅಲ್ಲಾಹನು ನಮ್ಮನ್ನು ಸ್ವರ್ಗದಲ್ಲಿ ಒಗ್ಗೂಡಿಸಲಿ-ಆಮೀನ್.
                                                       

                                                                                                                                                                         -ಆಬಿದ್ ಸುಳ್ಯ 

 

Files

Related Posts

Leave A Comment

Voting Poll

Get Newsletter